– ಬಿ.ವಿ.ಕಾರಂತ

ನಾನು ಉಡುಪಿಗೆ ಹೊಸಬನಲ್ಲ. ಎರಡು ದೃಷ್ಟಿಯಿಂದ. ಹೊರಗಿಂದ ಬಂದು ಮತ್ತಿಲ್ಲಿ ಇದ್ದು — ಎರಡು ತರದಲ್ಲಿ ಕೆಲಸ ಮಾಡಿದ್ದೀನಿ, ಆಬಾಲ ವೃದ್ಧರಾದಿಯಾಗಿ. ಯಾಕೆಂದರೆ ಇಲ್ಲಿ ಬಾಲಕರ ಜೊತೆಗೂ ಕೆಲಸ ಮಾಡಿದೆ; ಇಲ್ಲಿ ವೃದ್ಧರ ಜೊತೆಗೂ ಕೆಲಸ ಮಾಡಿದ್ದೇನೆ. ಆಮೇಲೆ, ಇಷ್ಟೇ ಅಲ್ಲ, ನಮ್ಮ ‘ಏವಂ ಇಂದ್ರಜಿತ್’ ನಾಟಕಕ್ಕೆ ಮೊದಲು ಕರೆದು ನನ್ನ ತಂದೆ ತಾಯಿಗಳೂ ನೋಡಿದ ಹಾಗೆ ಮಾಡಿದ್ದು. ಇಲ್ಲಿ. ಎಂ.ಜಿ.ಎಮ್. ಕಾಲೇಜಿನಲ್ಲಿ. ಆಮೇಲೆ ಬೆಂಗಳೂರಲ್ಲಿ ನೆಲಸಿ ಆದ್ಮೇಲೆ ಎಷ್ಟೋ ನಾಟಕಗಳಲ್ಲಿ ಇಲ್ಲಿ ತಂದ್ವು. ಇತ್ತೀಚೆಗೆ ನಮ್ಮ ಭೋಪಾಲ್ನಿಂದ ರೆಪರ್ಟ್ರಿನೂ ಬಂತು. ರೆಪರ್ಟ್ರಿಯಿಂದ ನಾಟಕ ಆಡಿಸಿದ್ದರು. ಈಗ ಇವತ್ತಿನ ವಿಷಯ; ಇಷ್ಟೆಲ್ಲಾ ಹೇಳಿದ್ಮೇಲೆ (Professional Theatre) ನಾನು ಯಾಕೆ ತಕಂಡೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.

ಒಂದು ನಾವು ಏನು ಪ್ರೊಫೆಶನಲ್ ಥಿಯೇಟರ್ ಅಂತ ತಿಳ್ಕೊಂಡಿದ್ದೇವೋ ಅದು ತಪ್ಪು ಶಬ್ದ ಅಂತ. ಯಾಕೆಂದರೆ ಇಲ್ಲಿ ಪ್ರೊಫೇಶನಲ್ ಎಂಬುದಕ್ಕೆ “ವೃತ್ತಿ” ಅಂತ ಹಾಕ್ತೀವಿ — ಹಿಂದಿಯಲ್ಲಿ ‘ವ್ಯಾವಸಾಯಿಕ’ ಅಂತ ಹೇಳ್ತಾರೆ. ಎರಡೂ ಶಬ್ದ ಕನ್‌ಫ್ಯೂಶನ್‌. ವ್ಯಾವಸಾಯಿಕ ಅಂದರೆ ಒಂದು ರೀತಿಯಲ್ಲಿ ಕಮರ್ಶಿಯಲ್ ಅಂದ ಹಾಗಾಗುತ್ತೆ. ವೃತ್ತಿ ಅಂದ್ಬಿಟ್ರೆ ಅದು ಹೊಟ್ಟೆಪಾಡಿಗೋಸ್ಕರ ಅಂತ ಆಗುತ್ತೆ. ಆ ದೃಷ್ಟಿಯಲ್ಲಿ ಪ್ರೊಫೇಶನಲ್ ಥಿಯೇಟರ್ ಎಂಬ ಶಬ್ದಕ್ಕೇನೇ ಸರಿಯಾದೆ ಅರ್ಥವೇ ಇಲ್ಲ. ಯಾಕೆ ಸರಿಯಾದ ಅರ್ಥ ಇಲ್ಲ ಅಂತ ಹೇಳಿದ್ರೆ; ಏನು ಶಬ್ದ ಹಾಕ್ತೀರಾ ಪ್ರೊಫೆಶನ್‌ಗೆ? ವೃತ್ತಿ ಎಂದು ಹಾಕಿದ ತಕ್ಷಣ ಇದು ವೃತ್ತಿಪರ ವ್ಯಕ್ತಿ ಅಂತ ಬರುತ್ತೆ. ವಿಶೇಷವಾಗಿ ನಮ್ಮ ಕರ್ನಾಟಕದಲ್ಲಿ ವೃತ್ತಿ ಕಂಪೆನಿಗಳು ಅಂತ ಅಂದಾಗ ನಮಗೆ ಅದರ ಬಗ್ಗೆ ಯಾವ ಗೌರವ ಅಷ್ಟೇನೂ ಬರುವುದಿಲ್ಲ. ಅದರ ಹಿರಿಮೆಯ ಬಗ್ಗೆ ಹಿಂದಿನ ವೈಭವದ ಬಗ್ಗೆಯೇನೋ ಅನ್ಬಹುದು. ಬಟ್, ಇವತ್ತು ಒಂದು ತುಣುಕಾದ್ರೂ ನಮ್ಮ ರಂಗ ಚಟುವಟಿಕೆಯಲ್ಲಿ ಅಥವಾ ನಮ್ಮ ರಂಗ ಚಳವಳಿಯಲ್ಲಿ ಅವರ ಯಾವ ಒಂದು ಕೊಡುಗೆಯೂ ಇಲ್ಲ. ಆದರೂ ಅಲ್ಲಿರೋದು ಕೂಡ ಮನುಷ್ಯರಾದ್ದರಿಂದ ಅದನ್ನೂ ಸಂಪೂರ್ಣ ಮರೆಯೋಕಾಗೋಗಿದಿಲ್ಲ. ಅಲ್ಲಿಂದ ಕಲಿಯುವ ವಿಷಯಗಳೂ ಕೆಲವು ಇರಬಹುದು. ಇವೆ. ಯಾಕೆಂದರೆ ಎರಡು ಎರಡೂವರೆ ಸಾವಿರ ಜನ ಈಗಲೂ ಕಂಪೆನಿಗಳಲ್ಲಿ ಕೆಲಸ  ಮಡ್ತಾ ಇದ್ದಾರೆ. ಹತ್ತು, ಹದಿಮೂರು ಕಂಪೆನಿಗಳಿವೆ. ಅಲ್ಲದೆ, ಈ ಕಂಪೆನಿಗಳೂ ಆಡುವ ನಾಟಕಗಳಲ್ಲಿ ವೈವಿಧ್ಯವಿದೆ. ಆದರೆ ದೊಡ್ಡ ಸಮಸ್ಯೆ ಏನಂತಂದ್ರೆ ವೃತ್ತಿ ಅಂತ ಅಂದ ಕೂಡ್ಲೇ, ನಾನು ಹೇಳಿದ ಹಾಗೆ ಅದರ — ನಾನಾ ಯಾವ ನಾನಾ ಅರ್ಥದಲ್ಲಿ professional theatre ಅಂತ ಹೇಳ್ಬೇಕು ಅಂತಿದ್ನೋ — ಆ ದೃಷ್ಟಿಯಿಂದ ಬಹಳ ದೂರವಾಗೋದ ಹಿಂದಿಯಲ್ಲಂತೂ professional ‘ಪೇಶಾ’ ಅಂತ ಹೇಳ್ತಾರೆ. ಪೇಶಾ ಅಂತ ಹೇಳೋದು ಒಂದು ರೀತಿಯಲ್ಲಿ ಬೈಗುಳ ಕೂಡ. ಬಾಪ್ ಬೇಟೇಸೆ ಪೇಶ್ ಕರ್‌ತಾ ಹೈ ಅಂತ. ವೇಶ್ಯಾವೃತ್ತಿಯವರೆಗೂ ಆ ಶಬ್ದವನ್ನ use ಮಾಡ್ತಾರೆ. ವೇಶ್ಯಾದಲ್ಲಿ ಕೂಡಾ ಪೇಶಾ ಶಬ್ದವಿದೆ. ಅದಕ್ಕೇ ಹೇಳಿದ್ದು ‘ವೃತ್ತಿ’ ಶಬ್ದನೇ ಸರಿಯಾಗಿಲ್ಲ. ಇನ್ನು ಯಾವುದು ಸರಿಯಾದ ಶಬ್ದ ಅಂತ ಕೇಳಿದ್ರೆ ನೂರಾರು ಹೇಳ್ಬೋದು. ಸಿದ್ದಹಸ್ತರಂತಲೋ — professional actor ಅಥವಾ professional stage ಅಂತಂದ್ರೆ ಸಿದ್ದಹಸ್ತ. ಪ್ರವೀಣ, ಪರಿಣತ ಇಂತಹ ಶಬ್ದಗಳನ್ನು ಹಾಕಬಹುದು. ಆದ್ರೆ ಸರಿಯಾದ ಶಬ್ದ ಸಿಕ್ಕಲ್ಲ. ಮೊದಲನೇ ಪ್ರಶ್ನೆ ಇಲ್ಲಿ ಇದೇ ಬರುತ್ತೆ. professional ಅಂದ್ರೆ ನನ್ನ ದೃಷ್ಟಿಯಲ್ಲಿ ನಮ್ಮ ದೇಶದಲ್ಲಿ ಈಗಿರುವುದು professional ಅಲ್ಲ. ಹಾಗೆ professional ವ್ಯಾವಸಾಯಿಕ ಎಂಬರ್ಥದಲ್ಲಿ ಇರುವುದು commercial theatreಗಳು.

commercial theatre ಅಂದ್ರೆ ಅದು ದುಡ್ಡಿಗೋಸ್ಕರನೇ ಮಾಡೋದು. ಯಾವ ನಾಟಕ ದುಡ್ಡು ಕೊಡುತ್ತೋ ಆ ನಾಟಕವನ್ನು ನಡೆಸ್ತಾರೆ. ದುಡ್ಡು ಕೊಡ್ದೆ ಹೋದ್ರೆ ನಾಟಕ ನಿಲ್ಲಿಸ್ತಾರೆ. ನಮ್ಗೆ ಗೊತ್ತಿರೋ ಹಂಗೆ ವೃತ್ತಿರಂಗದಲ್ಲಿರೋ ಕೆಲ್ಸ ಮಾಡೋರು ಬಹಳ ದುಸ್ಥಿತಿಯಲ್ಲಿದ್ದಾರೆ. ಅವ್ರಿಗೆ ಯಾವ ರತದ ಬೋನಸ್ ಇಲ್ಲ. ಯಾವ ಗ್ರಾಚ್ಯುವಿಟಿಯಲ್ಲಿ, ಪೆನ್ಶನ್ ಇಲ್ಲ. ಹಾಗೆ ಗವರ್ನ್‌‌ಮೆಂಟ್‌ನವ್ರು ಕೆಲಸದ ರೂಲ್ಸ್ ಮಾಡಿದ್ದಾರೆ. ಗುಬ್ಬಿ ಕಂಪೆನಿ ಅಂತ ಎಪ್ಪತ್ತೈದು – ಎಂಭತ್ತು ಜನ ಇರುವಲ್ಲಿ ಬಹುಃಶ ಹತ್ತು ಜನರಿಗೆ ಮಾತ್ರ ವ್ಯವಸ್ಥೆ ಮಾಡಿದ್ದಾರೆ. ಉಳಿದವರಿಗೆಲ್ಲಾ ಒಂಭತ್ತು ತಿಂಗಳಿಗೆ ಸರ್ವಿಸ್ ಮುಗಿಸಿ ಮತ್ತೆ ಹೊಸ ಸರ್ವಿಸ್ ಕೊಡಿಸ್ತಾರೆ. ಇವೆಲ್ಲಾ ಒಂದು ರೀತಿಯಲ್ಲಿ ಶೋಷಣೆಯ ಅಂಶಗಳು. ಆದರೆ ನಾನಿಲ್ಲಿ ಹೇಳ್ತಿರೋವಾಗ ಆ ವೃತ್ತಿರಂಗವನ್ನು ದೃಷ್ಟಿಯಲ್ಲಿ ಇಟ್ಕೊಂಡು ಹೇಳ್ತಾ ಇಲ್ಲ.

ಇದೇ ರೀತಿಯ professional theatre ಮರಾಠಿಯಲ್ಲೂ ಇದೆ. ತೆಲುಗಿನಲ್ಲೂ ಇದೆ. ಒರಿಸ್ಸಾದಲ್ಲೂ ಇದೆ. ಬಂಗಾಳದಲ್ಲೂ ಇದೆ. ಬಂಗಾಳ ಅಂದ್ರೆ ಪ್ರತಿಯೊಂದು ಇರೋದು ಕೋಲ್ಕತ್ತಾದಲ್ಲಿ. ಫೋಕ್ ಥಿಯೇಟರ್ ಕೂಡ ಕೋಲ್ಕತ್ತದಲ್ಲೇ ಹುಟ್ಟೋದು. ಯಾಕಂದ್ರೆ ಉತ್ಪಲ್ ದತ್ತರಂಥವರು ಹವ್ಯಾಸ ರಂಗಭೂಮಿಯವರಿಗೂ ಕೂಡ ನಾಟಕ ನಿರ್ದೇಶನ ಕೊಡ್ತಾರೆ. ಅದೇ ರೀತಿಯಲ್ಲಿ ‘ಜಾತ್ರಾ’ಕ್ಕೂ ಕೊಡ್ತಾರೆ. ‘ಜಾತ್ರಾ’ ಅಲ್ಲಿಯ ಫೋಕ್ ಥಿಯೇಟರ್‌. ಆದ್ರೆ ಜಾತ್ರಾದಲ್ಲಿ ಸಂಪೂರ್ಣವಾಗಿ ಬದಲಾವಣೆ ಆಗಿಹೋಗಿದೆ.

ಬಹುಶಃ ಯಕ್ಷಗಾನ ಅಷ್ಟು ಬದಲಾವಣೆ ಆಗಿಲ್ಲ ಅಂತ ನಂಗನ್ಸುತ್ತೆ. ವಿಶೇಷವಾಗಿ ಶಿವರಾಮ ಕಾರಂತರು ಮತ್ತೆ ಬಂದು, ಮತ್ತೆ ಅದರ ಬಣ್ಣಗಳ ಬಗ್ಗೆ, ವೇಷಗಳ ಬಗ್ಗೆ ಸುಧಾರಣೆ ಮಾಡಿದ್ದರಿಂದ ಅಪೂರ್ವವಾದದ್ದೊಂದು ಉಳೀತು. ಯಾಕಂದ್ರೆ ನನ್ನ ಬಾಲ್ಯದಲ್ಲೇ ನಂಗೊತ್ತಿರೋ ಹಾಗೆ ತೆಂಕುತ್ತಿಟ್ಟಿನಲ್ಲಿ ಕುಣಿಯುವವಂತ  ಅಗತ್ಯವಿಲ್ಲ. ಬರೀ ಮಾತುಗಾರಿಕೆ ಸಾಕು ಎನ್ನುವ ಒಂದು ಮತ ಬಂದಿತ್ತು. ಶಂಕರಭಟ್ಟ ಅಂತ ಯಾರೋ ಒಬ್ಬರು ಇದ್ರು. ಅವ್ರು ಕುಣೀತಿರಲಿಲ್ಲ. ಅಸ್ಸಾಮ್‌ನಲ್ಲಿ ಕೂಡ ವೃತ್ತಿ ರಂಗಭೂಮಿ ಇದೆ. ಬಹಳ ಚೆನ್ನಾಗೂ ಇದೆ. ಇರ್ಲಿ ಇದನ್ನು ಹೊಟ್ಟೆಪಾಡು ಅಂತ ತಗೊಂಡ್ರೆ ಅಂಥಾದ್ದು ನಮ್ಮ ದೇಶದಲ್ಲಿ ಬೇಕಾದಷ್ಟು ಇದೆ. ಒಂದು ವಿಚಿತ್ರವಾದ ಸ್ಥಿತಿ ಅದರದ್ದು. ಅಲ್ಲಿಯ ಹವ್ಯಾಸಿ ರಂಗಭೂಮಿ ಅಥವ ಜಾನಪದ ರಂಗಭೂಮಿ ಕೂಡ ಅಂತಹ ಪುಷ್ಟವಾಗಿಲ್ಲ. ಹವ್ಯಾಸಿ ರಂಗಭೂಮಿಯಂತೂ ಏನೇನೂ ಇಲ್ಲ. ಅವ್ರಿಗೆ ಹೇಳಿದ್ರೆ ಬಂದೀತು. ಅದ್ರೆ ಅಲ್ಲೊಂದು ವೃತ್ತಿ ರಂಗಭೂಮಿ ಇದೆ. ಅದೇ professional Theatre ಅದು ಎಲ್ಲದಕ್ಕಿಂತನೂ ಭಿನ್ನವಾದ್ದು. ಆ ವಿಷಯವನ್ನ ಹೇಳಿ ಬಿಟ್ಟು ಮತ್ತೆ ನಾನು ಮುಖ್ಯ ವಿಷಯಕ್ಕೆ ಬರ್ತೀನಿ.

‘ಸುರಭಿ’ ಅನ್ನೋದು ಅವ್ರ ಗ್ರೂಪಿನ ಹೆಸ್ರು. ಅದಕ್ಕೂ ಗುಬ್ಬಿ ಕಂಪೆನಿಗೂ ಒಂದು ವರ್ಷದ ವ್ಯತ್ಯಾಸ. ಗುಬ್ಬಿ ಕಂಪೆನಿ ನೂರಾ ಒಂದು ವರ್ಷವಾಯ್ತು. ‘ಸುರಭಿ’ಗೆ ನೂರು ವರ್ಷ ಆಯ್ತು. ‘ಸುರಭಿ’ಯವರು ಕೂಡ ಕಲ್ತಿದ್ದೆಲ್ಲ ಕನ್ನಡದ ಥಿಯೇಟರ್ – ನೋಡಿಯಂತೆ. ಅದು ಹೇಗೆ ಅಂದ್ರೆ, ಬೆಸಿಕಲೀ ‘ಸುರಭಿ’ ಸ್ಟಾರ್ಟ್‌ಮಾಡಿದವರು ಶಿವಾಜಿಯ ಕಾಲದಲ್ಲಿದ್ದ ಉಗ್ರಗಾಮಿಗಳಂತೆ. ಶಿವಾಜಿ ಇಟ್ಕೊಂಡಿದ್ನಂತೆ ಅವ್ರನ್ನ. ಆಮೇಲೆ ಶಿವಾಜಿಯ ರಾಜ್ಯಭಾರ ಮುಗಿದ್ಮೇಲೆ ಇಂಗ್ಲೀಷರು ಗಡೀ ಪ್ರಾಂತ್ಯದಲ್ಲಿ ಇವರನ್ನು ಉಪಯೋಗಿಸ್ತಾ ಇದ್ರಂತೆ. ಅವ್ರಲ್ಲೇ ಕೆಲವರಿಗೆ ತೊಗಲು ಗೊಂಬೆಯಾಟ ಬರ್ತಿತ್ತು. ಅದರಲ್ಲಿ ಒಂದು ಭಾಗ ‘ಸುರಭಿ’ ಆಯ್ತು. ನಾಟಕ ಕಂಪೆನಿ ಆಯ್ತು. ಇನ್ನೊಂದು ಭಾಗ ಬಳ್ಳಾರಿಯಲ್ಲಿ ಲೆದರ್ ಪಪೆಟ್ರಿ ಗ್ರೂಪ್ ಆಯ್ತು — ಅಂತ ಇತಿಹಾಸ. ಅಂದ್ರೆ ಮೂಲತಃ ಅದು ಮಹಾರಾಷ್ಟ್ರದವರದ್ದು. ಈ ಕಂಪೆನಿಯಲ್ಲಿ ಎರಡು ಸಾವಿರ ಜನ ಇದ್ದಾರೆ. ‘ಸುರಭಿ’ ಮಂಡಲಕ್ಕೆ ಅಥವಾ ಫ್ಯಾಮಿಲಿಗೆ ಸೇರಿದವರು ಮೂರು ಸಾವಿರ ಜನರಿದ್ದಾರೆ. ಅಲ್ಲೂ ಬಹಳ ಕೆಟ್ಟ, ಹೀನ ಸ್ಥಿತಿ ಇದೆ. ದಿವ್ಸಕ್ಕೆ ಒಂದು ನೂರು ನೂರೈವತ್ತು ರೂಪಾಯಿ ಬಂದ್ರೆ ಸಾಯಂಕಾಲ  ಒಟ್ಟು ಸೇರಿ ಹಂಚ್ತಾ ಇರ್ತಾರೆ. ಒಬ್ಬೊಬ್ರಿಗೆ ಒಂದೂವರೆ ರೂಪಾಯಿನೋ ಎರಡು ರೂಪಾಯಿನೋ ಸಿಗತ್ತೆ. ಈ ಸಂದರ್ಭದಲ್ಲಿ ೧೯೪೮ರಲ್ಲೋ ಏನೋ, ವೀರಣ್ಣನವರು ಹೋಗಿದ್ರಂತೆ ವಾರಂಗಲ್‌ಗೋ ಅಥವಾ ನಾರ್ಥ್‌ಆಂಧ್ರಕ್ಕೋ; ಈ ಸರುಭಿ ಕಂಪೆನಿಯ ಮಾಲೀಕರಾದ ಗೋವಿಂದ ವನಾರಸ ಅಂತ್ಹೇಳಿ ಅವ್ರ ಮೂರ್ತಿಯನ್ನು ಅವ್ರು ಬದ್ಕಿದಾಗ್ಲೇನೇ ಸ್ಥಾಪಿಸೋಕೆ. ಆಗ ವೀರಣ್ಣನವರು ಹೇಳಿದ್ರಂತೆ “ನಾನು commercial ನೀವು professional ಅಂತ್ಹೇಳಿ. ವೀರಣ್ಣನವರು ಹೇಳಿದ್ದರ ಅರ್ಥವೇನು ಅಂದ್ರೆ, “ನಾನು ದುಡ್ಡಿಗೋಸ್ಕರ ಮಾಡ್ತೀನಿ. ನಿಮ್ಮಲ್ಲಿ whole familyನೆ ಮಾಡ್ತಾ ಇದೆ” ಅಂತ. ಈ ಕಥೆ ಬಹಳ ವಿಚಿತ್ರ ಕಥೆ, ಈಗಲೂ ಇದೇ ನಿಜ. ಇಪ್ಪತ್ತೈದು ನಾಟಕಗಳು ಆ ಕಂಪೆನಿ ಹತ್ರ ಇವೆ. ಎಲ್ಲಾ ಒಂದೆ ಕೇಳಿದ್ರೆ ಅಥವಾ ಹಿಂದಿದು ಕೂಡ ‘ಬಾಲನಾಗಮ್ಮ’, ಆಮೇಲೆ ಗೋಪಿ ಬಗ್ಗೆ ಏನೊ ಒಂದಿತ್ತು. ‘ಪಾತಾಳ ಭೈರವಿ’, ‘ಮಾಯಾ ಬಜಾರ್’, ಇವೆಲ್ಲಾ ಆ ಕಂಪೆನಿ ನಾಟಕಗಳೇ. ಮೊದಲನೇ ನಾಟಕ ‘ಕೀಚಕ ವಧಾ’ ಅಂತ್ಹೇಳಿ. ಆ ವನಾರಸ ಅನ್ನೋನಿಗೆ ಹತ್ತು ಹೆಣ್ಣು ಮಕ್ಕಳಂತೆ. ಆ ಹತ್ತು ಹೆಣ್ಣು ಮಕ್ಕಳಿಗೆ ಮದುವೆಯಾಗಿ ಅಳಿಯಂದಿರು ಬಂದಾಗ ಇಪ್ಪತ್ತು ಜನ ಆಗ್ಬಿಟ್ರು! ಆ ರೀತಿಯಲ್ಲಿ ಒಂದೇ  family ಅದು.

ಆದ್ರೆ ಪೂರ ಫ್ಯಾಮಿಲಿ ಮಗುವಿನಿಂದ ಮೊದಲುಗೊಂಡು ಮುದ್ರುಕ್ರು ಆಗುವವರೆಗೂ — ಪಾರ್ಟ್ ಮಾಡ್ತಾರೆ. ಎಲ್ಲಾ ತರಹದ ಪಾರ್ಟ್‌ಮಾಡಲೇ ಬೇಕು. ಹೆಂಗಸ್ರು ಕೂಡ, ಪರದೆ ಎಳೆಯೋದು, ಬಣ್ಣ ಹಾಕೋದು — ಇವೆಲ್ಲಾ ಕೆಲ್ಸ ಮಾಡ್ಬೇಕು. ಅವ್ರೇ ಕಂಪೆನಿ ಎತ್ಬೇಕು, ಅವ್ರೇ ಕಂಪೆನಿ ಎತ್ಬೇಕು, ಅವ್ರೆ ಹೊಂಡ ಕೂಡ ಬೇರೆ ಕಡೆ ಹೋದರೆ ಕುರ್ಚಿ — (chair pit) ಅಂತ ಅನ್ನೋದನ್ನು  ಕೂಡ, ಅವ್ರೇ ಅಗೀತಾರೆ. ಅದ್ರಲ್ಲಿ ಗಂಡ್ರು ಹೆಂಗಸ್ರು ಎಲ್ಲಾ ಸೇರ್ಕೊಂಡಿರ್ತಾರೆ. ಅವ್ರಲ್ಲಿ stage presense ಅಥವಾ ಆ ವೃತ್ತಿಯಲ್ಲಿ ಬೆಳದಂಥಾ ಒಂದು ಕಾಮನ್‌ಸೆನ್ಸ್ ಅಥವಾ ಇಂಟಲಿಜೆನ್ಸ್ ಅಂತ ಹೇಳ್ಬೋದು ಅದು ಅದ್ಭುತವಾಗಿದೆ. ಗುಬ್ಬಿ ಕಂಪೆನಿಯಲ್ಲಿ ಹೀಗೆಲ್ಲ ಇಲ್ಲ. ನಂಗೆ ಆಶ್ಚರ್ಯ ಆಯ್ತು – ನಮ್ಮ ಹಿಂದುಸ್ಥಾನದಲ್ಲಿ ಇಂಥಾದೊಂದು ಥಿಯೇಟರ್ ಇರೋದು ನಮ್ಗೇ ಗೊತ್ತಿಲ್ಲ ಅಂತ!

೧೯೭೫ ವಿಶ್ವ ತೆಲುಗು ಸಮ್ಮೇಳನ ಮಾಡ್ದಾಗ ಒಂದು ಸಣ್ಣ ಪುಸ್ತಕ ತಂದ್ರಷ್ಟೆ. ಅದ್ರಲ್ಲಿ ಅವರ ಲೈಫ್ ಬಗ್ಗೆ ಕೆಲವು ವಿಚಿತ್ರ ಘಟನೆಗಳಿದ್ದು. ಗೋವಿಂದ ವನಾರಸ ಅವ್ರು ತಮ್ಮ ಅಳಿಯಂದಿರಿಗೆ ಕೊಟ್ಟ ವರದಕ್ಷಿಣೆ ಎಲ್ಲಾ — ಪರದೆ, ಬಣ್ಣ, ಮೇಕಪ್ ಮೆಟೀರಿಯಲ್ಲಾ, ಕಾಸ್ಟ್ಯೂಮ್‌ಗಳಂತೆ. ಅಂದರೆ ಥಿಯೇಟರೇ ಮಾಡ್ಬೇಕು. ಇನ್ನೇನೂ ಬೇರೆ ಮಾಡಕ್ಕಾಗೋಲ್ಲ — ಹಾಗೆ. ಅವ್ರು ಭಾಷೆ ಕಲಿಯೋದು ಕೂಡ ಹಾಗೆ ಅಂತೆ. ಬೆಳಿಗ್ಗೆ ಚಿಕ್ಕ ಚಿಕ್ಕ ಹುಡುಗ್ರನ್ನ ಭಿಕ್ಷೆ ಬೇಡ್ಲಿಕ್ಕೆ ಕಳಿಸ್ತ ಇದ್ರಂತೆ. ಭಾಷೆ ಕಲೀಲಿ ಅಂತ್ಹೇಳಿ. ಅವ್ರು ಬೈಗಳನ್ನೂ ಕಲೀಲಿ ಬೇಕಾದ್ರೆ ಬೆಳಿಗ್ಗೆ ಎದ್ದು ಹೋಗ್ತಾ ಹೋಗ್ತಾ ಅಲ್ಲಿಂದ ಭಿಕ್ಷಾನ್ನ ತೆಗೊಂಡು ಬರ್ತಾ ಅವ್ರಿಗೆ ಎಷ್ಟೋ ಭಾಷೆ ಶಬ್ದಗಳು ಬರ್ತಾ ಇದ್ದವಂತೆ. ಇವತ್ತೂ ಕೂಡ ಅವ್ರ ತೆಲಗು ಶುದ್ದ ಸಂಸ್ಕೃತ ನಿಷ್ಠವಾದ ತೆಲಗು. ಹಾಗೆ ಇತ್ತಿಚೆಗೆ ಅವರ ಒಂದು ಕಂಪೆನಿಯವ್ರು ‘ಭದ್ರಾಚಲದ ರಾಮದಾಸ’ ಅಂತ, ಒಂದು ನಾಟಕ ಮಾಡ್ತಾರೆ. ಅವ್ರು ಮಾತ್ರ ತೆಲಂಗಾಣದ ಡಯಲೆಕ್ಟ್ ಯೂಸ್ ಮಾಡ್ತಾ ಇದ್ದಾರೆ. ಅವ್ರ ಕಂಪೆನಿ ಬಹಳ ಸಕ್ಸೆಸ್‌ಫುಲ್ ಆಗಿದೆಯಂತೆ. ಅವ್ರೇ ಹೇಳಿದ್ರು ಕೂಡ. ನೂರಿಪ್ಪತ್ತು ಶೋ ಮೇಲೆ ಆಗಿದೆ ಅದು. ಯಾಕಂದರೆ ತೆಲಂಗಾಣ ಭಾಷೇನ ಉಪಯೋಗಿಸ್ತಾರೆ ಅಂತ. ಪ್ರೊಫೆಶನ್ ಅಂತ ಹೇಳೋವಾಗ ಇವೆಲ್ಲಾ ಪಾಯಿಂಟ್‌ಗಳು; ಅದಕ್ಕೋಸ್ಕರ ಇವೆಲ್ಲಾ ಉದಾಹರಣೆಗಳನ್ನು ಕೊಡ್ತಾ ಇದ್ದೀನಿ.

ಅಷ್ಟೇ ಅಲ್ಲ ಅವ್ರಲ್ಲಿ ಒಂದು ಕ್ಯಾಂಪ್‌ನಿಂದ ಇನ್ನೊಂದು ಕ್ಯಾಂಪ್‌ಗೆ ಹೋಗ್ಬೇಕಾದ್ರೆ ಪೂರಾ ಸಾಮಾನುಗಳು ಹೊರಟುಹೋಗತ್ತೆ. ಜೊತೇಲಿ ಬೆಕ್ಕು, ನಾಯಿ, ಹಸು ಇದ್ರೆ ಹಸು, ಕೋಳಿಗಳು ಎಲ್ಲಾ ಜೊತೇಲಿ ಹೊರಟು ಹೋಗ್ತವೆ; ಕಾಯಿಲೆ ಇದ್ದ ತಾಯಿ ಇದ್ರೆ ತಾಯಿನ್ನೂ ಹೊತ್ಕೊಂಡು ಹೋಗ್ಬೇಕಾಗತ್ತೆ. ಥಿಯೇಟರ್‌ಪಕ್ಕದಲ್ಲೇ ಅವ್ರು ಒಂದು ಶೀತನ್ನ ಹಾಕಿ, ಅಲ್ಲೇ ಇರ್ತಾರೆ, ಬೇರೆ ಕಂಪೆನಿ ಮನೆಯಂತೆ ಇಲ್ಲ. ಗುಬ್ಬಿಕಂಪೆನಿಯೋರಿಗೆ ‘ಕಂಪೆನಿ ಮನೆ’ ಅಂತ ಬೇರೆ ಇರ್ತಾ ಇತ್ತು. ಆದ್ರೆ ಇಲ್ಲಿ ಕಂಪೆನಿ ಮನೆ ಬೇರೆ ಇರ್ತಾ ಇರಲಿಲ್ಲ. ನಾನು ನೋಡಿದ್ದೀನಿ, ಸ್ಟೇಜ್ ಪಕ್ಕದಲ್ಲೇ ಶೀಟ್‌ಗಳನ್ನ ಕೊಟ್ಟಿದ್ದಾರೆ. ಮೂರು ವರ್ಷದ ಹಿಂದೆ ಆಂಧ್ರ ಸರಕಾರ ಪ್ರತಿಯೊಂದು ಫೆಮಿಲಿಗೆ ಇಪ್ಪತ್ತೆರಡು ಇಪ್ಪತ್ತೆರಡು ಶೀಟ್ಸ್ ಕೊಟ್ರಂತೆ. ಜಿಂಕ್ ಶೀಟ್ಸ್. ಅದೇ ದೊಡ್ಡು, ಆಂಧ್ರ ಸರಕಾರ ಮಾಡಿದ್ದು ಅವರಿಗೆ. ಅವ್ರ ಪ್ರಚಾರ — ಪ್ರಪಗಾಂಡಾ ಹೇಗೆ ಮಾಡ್ತಾರೆ. ಅವ್ರೇ ಒಂದು ಸೈಕಲ್ ಕಟ್ಕೊಂಡು ಸೈಕಲ್‌ಗೆ ಸ್ಪಿಕರ್ ಹಾಕಿ, ಅದ್ರಲ್ಲಿ ಒಂದೊಂದು ನೋಟೀಸ್ ಬೋರ್ಡ್‌‌ನ್ನ ಹಾಕಿ, ಕಿರಿಚಿಟ್ಟು, ಊರೆಲ್ಲಾ ತಿರುಗಾಡ್ಕೊಂಡು ಹೇಳ್ಕೊಂಡು ಬರ್ತಾರೆ. ಅವ್ರು ಕಂಪೆನಿ ಹಾಕೋವಾಗ ಯಾವಾಗ್ಲೂ — ಎರಡು ಅನುಕೂಲ ನೋಡ್ತಾರೆ — ಒಂದು ಆ ಕಾಡು ಅಥವಾ ಪೊದೆಗಳಿರಬೇಕು. ಈಗಲೂ ಕೂಡ ಅವ್ರು ಹಾಗೇ ಇದ್ದಾರೆ. ಬೇರೇನು ಮಾಡೋಕೆ ಸಾಧ್ಯವಿಲ್ಲ. ಥಿಯೇಟರ್ ಬಿಟ್ಟು ಇನ್ನೇನೂ ಮಾಡೋಕೆ ಆಗೋಲ್ಲ ಅವ್ರ ಕೈಯಲ್ಲಿ ಇದೂ ಒಂದು ತರಹದಲ್ಲಿ ಲಾಚಾರಿ ಅಥವಾ ವಿವಶತೆ ಆಬ್ಗಿಡತ್ತೆ.

ಇನ್ನು ಅಸ್ಸಾಂನಲ್ಲೊಂದು professional ಥಿಯೇಟರ್‌ಇದೆ. ಅಲ್ಲಿ ನಮ್ಮ ಕನ್ನಡದಲ್ಲಿ ಇದ್ದ ಹಾಗೇನೇ ಆರು ತಿಂಗಳು ಆಡ್ತಾರೆ. ಆರು ತಿಂಗಳು ಮಾತ್ರ ರಜಾ ಆಗ್ಬಿಡತ್ತೆ, ಮಳೆ ಇರೋದ್ರಿಂದಾಗಿ ನಮ್ಮ ಡ್ರಾಮಾ ಸ್ಕೂಲಿನ ಒಬ್ಬ ಸ್ಟುಡೆಂಟ್, ಮೂರು ವರ್ಷ ಮುಗಿಸ್ಟಿಟ್ಟು ಅಲ್ಲಿ ಹೋದ, ಹೋಗ್ಬಿಟ್ಟು ಒಂದು ವರ್ಷನೋ ಏನೋ ಅಲ್ಲಿದ್ದ ಅಷ್ಟೆ. ಯಾಕೇಂದ್ರೆ ಅಲ್ಲಿ ಅವ್ನಿಗೆ ಹಿಡಿಸ್ಲಿಲ್ಲ. ಅವ್ನಿಗೆ ಒಂದು ವರ್ಷಕ್ಕೆ ಅರವತ್ತು ಸಾವಿರ ಕೊಡ್ತಿದ್ರಂತೆ. ಅರವತ್ತು ಸಾವಿರ ಕೊಟ್ಟು ಅದ್ರ ಮೇಲಿಂದ ಅವ್ನಿಗೆ ಇರೋದಕ್ಕೆ ಜಾಗ, ಒಂದು ಕಾರು ಇಷ್ಟೆಲ್ಲಾ ಕೊಡ್ತಿದ್ರಂತೆ.

ಜಾತ್ರಾದಲ್ಲಿ ಕೂಡ ಹಾಗೇನೇ. ಪ್ರತಿಯೊಂದು ಕಡೇಲೂ ದೊಡ್ಡ ಹೋಟ್ಲಲ್ಲಿ ಇಳಿಸ್ತಾರೆ. ಅವ್ನನ್ನ. ಒಂದು ಮಟ್ಟದಲ್ಲಿ ಈ ವೃತ್ತಿಯಲ್ಲೂ ಬಹಳ ಚೆನ್ನಾಗಿ ಸಂಪಾದನೆ ಮಾಡ್ತಾ ಇದ್ದಾರೆ. ಅದೇ ತರಹದಲ್ಲಿ ನಮ್ಮ ಗುಬ್ಬಿ ಕಂಪೆನಿಯಲ್ಲಿ ನಾವೆಲ್ಲಾ ಇದ್ದು ರಜವಾಡೆ ಅಂಗ್ಹೇಳಿ. ರಜುವಾಡೆ ಅಂತ್ಹೇಳಿದ್ರೆ ಯಾವ್ದೋ ಪತಾಕಿ ಹಿಡ್ಕೊಳ್ಳೋದು ಅಥವಾ ಚಾಮರ ಬೀಸೋದು ಇಂಥಾದ್ದು ಕೆಲ್ಸ. ನನ್ನ ಕಾಲದಲ್ಲಿ ನಮ್ಗೆ ಸಂಬ್ಳ ಸಿಕ್ತಾ ಇದ್ದಿದ್ದು ಕೂಡ ಹಾಗೇನೇ. ಎಂಟು ರೂಪಾಯಿ — ಹತ್ತು ರೂಪಾಯಿ ಹೀಗೆ ಸಂಬ್ಳ ಇದ್ವು. ಸ್ಟೇಜ್‌ನಲ್ಲಿ ಕೂಡ ಹಾಗೇನೇ ಎಂಟು, ಹತ್ತು, ಹನ್ನೆರಡು ಹೀಗೆ ಸಂಬ್ಳ ಇದ್ವು. ಸ್ಟೇಜ್‌ನಲ್ಲಿ ಕೂಡ ಹಾಗೇನೇ ಎಂಟು, ಹತ್ತು, ಹನ್ನೆರಡು ಹೀಗೆ ಇರ್ತಾ ಇದ್ವು. ಸಂಬ್ಳೆಷ್ಟು ಅಂತ ಕೇಳಿದ್ರೆ ಒಬ್ಬ ಎಂಟನೂರು ಅಂತ ಹೇಳ್ತಾ ಇದ್ದ ಇನ್ನೊಬ್ಬ ಸಾವಿರದ ಇನ್ನೂರು ಅಂತ ಹೇಳ್ತಾ ಇದ್ದ. ಅರ್ಥ ನಮಗೆ ಗೊತ್ತಾಗ್ತಾ ಇತ್ತು. ಎಂಟುನೂರು ಅಂದ್ರೆ ಎಂಟು, ಸಾವಿರದಿನ್ನೂರು ಅಂದ್ರೆ ಹನ್ನೆರಡು ರೂಪಾಯಿ ಅಂತ್ಹೇಳಿ.ಅಷ್ಟೇ ಅಲ್ಲ, ವೃತ್ತಿ ರಂಗದಲ್ಲಿ ಅದಕ್ಕೆ ಯಾವ ತರಹದ ಟ್ರೇನಿಂಗ್ ಇರ್ತಿರಲಿಲ್ಲ. ಎಲ್ಲಾ ನೋಡಿ ನೋಡಿನೇ ಕಲೀತಾ ಇದ್ದಿದ್ದು. ಆದ್ರಿಂದ ಪ್ರೊಫೆಶನಲ್ ಥಿಯೇಟರ್ ಅಂತ ಹೇಳೋದಕ್ಕೆ ಕಷ್ಟ ಆಗತ್ತೆ ಯಾಕೇಂದ್ರೆ ಯಾವ ರೀತಿಯ ಎಕ್ವಿಪ್‌ಮೆಂಟ್ ಇರ್ಲಿಲ್ಲ. only talent ಅಷ್ಟೇ ಇದ್ದಿದ್ದು. ಅಲ್ಲೇ ಕಂಪೇನೀಲಿ ಇದ್ದು, ಒಬ್ಬನ್ನ ಗುರು ಅಂತ ತಿಳ್ಕೊಂಡ್ರೆ; ಅವ್ನ ಪಾದ ಸೇವೆ ಮಾಡ್ತ ಇದ್ರೆ, ಚರಣ ಸೇವೆ ಮಾಡ್ತಾ ಇದ್ರೆ, ಮಾಡ್ತಾ ಮಡ್ತಾ ಕೊನೆಗೊಂದು ದಿವ್ಸ ಅವ್ನ ಗುರುವಿನಿಂದ ಚಾನ್ಸ್‌ಸಿಗುತ್ತೆ ಅಥವಾ ಯಾವನೋ ಒಬ್ಬ ಆಕ್ಟರ್ ಹೊರಟು ಹೋಗ್ಬೇಕು ಆವಾಗ ಚಾನ್ಸ್‌ಸಿಗತ್ತೆ. ಇದೊಂದು ಉದಾಹರಣೆ ನಿಮ್ಗೆ ಹೇಳ್ಬಿಟ್ಟು ಮುಖ್ಯ ವಿಷಯಕ್ಕೆ ಬರ್ತೀನಿ.

‘ಸಾಹುಕಾರ’ ಹುಬ್ಬಳ್ಳಿಯಲ್ಲಿ ಆಡ್ತಾ ಇದ್ರಂತೆ. ಮೈನ್ ರೋಲ್ ಮಾಡ್ತಾ ಇದ್ದಿದ್ದು ಜಿ.ವಿ. ಅಯ್ಯರ್ ಅವರು. ಬಹಳ ಪಾಪ್ಯುಲರ್ ಆಗಿದ್ರು ಅವ್ರು. ಒಂದಿವ್ಸ ಸಂಡೆ ಎರಡು ಶೋ ಹಾಕಿದ್ರಂತೆ. ಆವಾಗ ಸಿಟ್ಟು ಬಂತು ಅಯ್ಯರ್‌ಗೆ. ನಮ್ಮನ್ನ ಕೇಳ್ದೆ ಹೇಗೆ ಹಾಕಿದ್ರು ಎರಡು ಶೋ ಅಂತ್ಹೇಳಿ. ಅದಕ್ಕೋಸ್ಕರ ಪಾರ್ಟಮಾಡಲ್ಲ ಅಂತ್ಹೇಳಿ ಹೊರಟು ಹೋದ್ರು ನಿಜವಾಗಿಯೂ ಎದ್ದು ಹೊರಟು ಹೋದ್ರು. ಆಗ ಆ ಪಾರ್ಟ್ ಮಾಡಿದ್ದು ಯಾರೂ   ಅಂತಂದ್ರೆ ಒಬ್ರು ಗುಂಡೂರಾಯರು ಅಂತ್ಹೇಳಿ ಕಂಪೆನಿ ಪಕ್ಕದಲ್ಲಿ ಬೀಡಿ ಸಿಗರೇಟಿನ ಅಂಗಡಿ ಕಟ್ಟಿಕೊಂಡು ಬಂದವ್ರು. ಅವ್ರು ಯಾವಾಗ್ಲೂ ಇವ್ರು ಪಾರ್ಟ್‌ಮಾಡೋದನ್ನು ನೋಡಿ ನೋಡಿ ಕಲ್ತಿದ್ದ ಅವ್ರು! ಆದ್ರೆ ಇಲ್ಲಿ ಇನ್ನೊಂದು ವಿಷಯ ಇದೆ. ಆಮೇಲೆ ಯಾವ್ದೋ ಒಂದು ಹೊಸ ನಾಟಕದಲ್ಲಿ ಪಾರ್ಟ್‌ಕೊಟ್ಟಿದ್ರೆ ಅವ್ರಿಗೆ ಮಾಡೋಕೆ ಆಗ್ಲಿಲ್ಲ. ಯಾಕೇಂದ್ರೆ ಅವ್ನಿಗೆ ನಕಲ್ ಮಾಡೀನೇ ಗೊತ್ತು ತಿಳ್ಕೊಂಡು ಮಾಡ್ಲಿಕ್ಕೆ ಗೊತ್ತಿಲ್ಲ. ನಾನು ಪ್ರೊಫೆಶನಲ್ ಅಂದಾಗ ಇದೆಲ್ಲಾ ಮಾತು ಬರತ್ತೆ.

ಆಕ್ಟರ್ ಅಂದಾಗ, ಮೊದ್ಲು ಥಿಯೇಟರ್ ಯಾಕೆ ಮಾಡ್ತೀ ಅಂತ ಯಾರಾದರು ಕೇಳಿದ್ರೆ ಏನು ಹೇಳ್ಬೇಕು? ಒಳ್ಳೆ ಅಡಿಗೆ ಭಟ್ಟನ್ನು ಕರೆಸ್ಬಿಟ್ಟು ಅಡಿಗೆ ಯಾಕೆ ಮಾಡ್ತೀ ಅಂತ ಕೇಳಿದ್ರೆ? “ಒಳ್ಳೇ ಪಂಚಾಯತಿ ಆಯ್ತು ಮಾರಾಯ್ರೆ” ಅಂತ ಅವ್ನು ಹೇಳ್ತಾನೆ ಅಷ್ಟೆ. ಥಿಯೇಟರ್ ಯಾಕೆ ಮಾಡ್ತೀ ಅಂತ ಹೇಳೋವಾಗ, ಈ ಪ್ರಶ್ನೆ ಯಾವಾಗಲೂ ಇರತ್ತೆ. ಪ್ರಶ್ನೆ ಆನಾದಿ ಇದು. ಆದ್ರೆ ಉತ್ತರ, ಬದಲಯಿಸ್ತಾ ಹೋಗತ್ತೆ. ಅದು ಯಾವುದೇ ಜೀವಂತ ಕಲೆ ಇರಲಿ ಅದರ ಪರಿಭಾಷೆ ಬದಲಾಯಿಸ್ತ ಇರ್ಬೇಕು. ಆ ದೃಷ್ಟಿಯಲ್ಲಿ ನಾವು ಇವತ್ತು ಪ್ರೊಫೆಶನಲ್ ಥಿಯೇಟರ್ ಯಾಕೆ ಬೇಕು ಅಂದಾಗ ಅದು ಮೊದ್ಲು ಪ್ರೊಫೆಶನಲ್ ಏನು ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ನನ್ನದೃಷ್ಟಿಯಲ್ಲಿ ಪ್ರೊಫೆಶನಲ್ ಅಂದ್ರೆ ಫ್ರೊಫಿಶಿಯನ್ಸಿ ಇನ್ ದಟ್ ಮಿಡಿಯಂ ಅಂತ. ಮಾಧ್ಯಮದಲ್ಲಿ ಪೂರ್ಣ ಪರಿಣತಿ ಇರ್ಬೇಕು ಅಂತ್ಹೇಳಿ. ನಮ್ಮಕಂಪೆನಿಯೋರಿಗೆ ನಿಜವಾಗಿಯೂ ಪೂರ್ಣ ಪರಿಣತಿ ಹೇಗೆ ಬರ್ಬೇಕು ಅಂತಂದಾಗ, ಒಬ್ಬ ನಟನಿಗೆ  ಇರೋ ಮಾದ್ಯಮಗಳೇನು, ಒಬ್ಬ ಸಂಗೀತಗಾರನಿಗೆ… ಒಬ್ಬ ಪ್ಲೂಟ್ ಬಾರಿಸೋನಿಗೆ ಫ್ಲೂಟ್ ಇದೆ, ವೀಣೆ ಬಾರಿಸೋನಿಗೆ ವೀಣೆ ಇದೆ. ನಟನಿಗೆ ಯಾರೂ ಇಲ್ಲ ಅವ್ನೇ. ಅವ್ನ ಮುಂದೆ ಅವ್ನೇ ಮಾಧ್ಯಮ ಅವ್ನು ತನ್ನನ್ನೇ ಮಾಧ್ಯಮದಲ್ಲಿ ಉಪಯೋಗಿಸಿಕೊಳ್ಳಬೇಕು. ಇದು ಒಂದು ಮಾಡಿದ್ರೂ ಕೂಡ ನಾನು ಬದಲಾಯಿಸಿಕೊಳ್ಳಬಲ್ಲೇ? ನನ್ನ ಧ್ವನಿ ಅದೇ, ನನ್ನ ನಿಲುವು ಅದೇ. ನನ್ನ ಮೈಕಟ್ಟು ಅದೇ. ಎಷ್ಟು ಬದಲಾಯಿಸಲು ಸಾಧ್ಯವಿದೆ? ಒಂದು ರೀತಿ ಶಕ್ತಿ ಕೂಡ ಯಾಕೇಂದ್ರೆ ಚ್ಯಾಲೆಂಜ್ ಕೊಡತ್ತೆ ಅದು. ನಾನು ಎಷ್ಟು ಚೇಂಜ್ ಆಗ್ಬಲ್ಲೆ ಅಂತ್ಹೇಳಿ.

ಸರ್ ಲಾರೆನ್ಸ್ ಆಲಿವರ್ ತನ್ನ ಬಯೋಗ್ರಫೀಲಿ ಹೇಳ್ಕೊಂಡಿದ್ದಾನೆ. ತನ್ನ ದೊಡ್ಡ ಮಹಾತ್ವಾಕಾಂಕ್ಷೆ ಏನೂಂತಂದ್ರೆ — ತನ್ನನ್ನ ಬಿಟ್ಟು ಉಳಿದೆಲ್ಲಾ ಪಾತ್ರಗಳನ್ನೂ ಮಾಡ್ಬೇಕು ಅನ್ನೋದು. ಅಂದ್ರೆ ಜಗತ್ತಿನ ಎಲ್ಲರನ್ನೂ ನಾನು ಮಾಡ್ಬೇಕು, ಎಲ್ಲರ ಅಭಿನಯವನ್ನೂ. ನಾನು ಯಾಕೇಂದ್ರೆ ನಾನು ಯಾವುದು ಅಲ್ವೋ ಅದನ್ನ ನಾನು ಮಾಡ್ಬೇಕು ಅನ್ನೋದು. ಒಂದು ರೀತಿಯಲ್ಲಿ ನಾಟಕ ಎಲ್ಲರೂ ಏನು ಮಾಡ್ತಿದ್ದಾರೋ ಅದನ್ನೇ ಮಾಡ್ತಿದೆ. ಅದೂ ಒಂದು ಸಮೂಹ ರೂಪದಲ್ಲಿ ಎಲ್ಲರೂ ಏನು ಮಾಡ್ತಾರೋ ಅದನ್ನ ನಾವು ಮಾಡ್ಬೇಕಾಗಿದೆ. ಎಲ್ಲರೂ ಹೇಗೆ ಮಾತಾಡ್ತಾರೋ, ಎಲ್ಲರೂ ಹೇಗೆ ಯೋಚಿಸ್ತಾರೋ, ಥಿಯೇಟರ್‌ನಲ್ಲೂ ಹಾಗೇ ಮಾಡ್ಬೇಕಾಗತ್ತೆ. ಆದ್ರೆ “ನಟನೆ” ಬಂದಾಗ ಎಲ್ಲರೂ ಮಾಡಿದ್ದನ್ನ ಮಾಡೋದು ಅಲ್ಲ. ಅಥವಾ ತಾನು ಮಾಡಿದ್ದನ್ನ ಮಾಡೋದು ಅಲ್ಲ. ಅದು ಒಂದು creativity ಆಗುತ್ತೆ. ಈಗ ಅಭಿನಯಕ್ಕೆ ತುಂಬಾ ಪರಿಭಾಷೆಗಳು ಬಂದು ಬಿಟ್ಟಿವೆ. ಅಭಿನಯ ಅಂದ್ರೆ ಏನು? ಕೊನೆಗೆ — ನಕಲ್ ಮಾಡೋದೆ ಅಭಿನಯವೋ? ಅನುಕರಣೆ ಮಾಡೋದು ಅಥವಾ ಇಮಿಟೇಟ್ ಮಾಡೋದೆ ಅಭಿನಯವೋ ಅಥವಾ ಅದನ್ನ ಫೀಲ್ ಮಾಡೋದು ಅದನ್ನ ರಿಲೀವ್ ಮಾಡೋದು, ಬಿಲೀವ್ ಮಾಡೋದು, ಪ್ರೆಸಂಟಿಂಗ್, ರಿಪ್ರೆಸಂಟಿಂಗ್ — ತುಂಬಾ ಡೆಫಿನಿಶನ್ಸ್ ಇವೆ. ನಿಜವಾಗಿಯೂ ನೋಡಿದ್ರೆ ಒಬ್ಬ ಪರಿಣತ ಕಲಾವಿದನಿಗೆ ಎಲ್ಲವೋ ಗೊತ್ತಿರಬೇಕು. ಮೊದಲು ಇಮಿಟೇಟ್ ಮಾಡ್ಲಿಕ್ಕೆ ಗೊತ್ತಿರ್ಲೇಬೇಕು. ಅದೇ ಪ್ರಾರಂಭ. ಒಬ್ಬ ಮಾತಾಡಿದ ತಕ್ಷಣ, ಅವ್ನು ಮರಾಠಿ ಮಾತಾಡಿಲಿ, ತಮಿಳು ಮಾತಾಡಿರ್ಲಿ ತಕ್ಷಣ ಅವ್ನ ಪ್ಯಾಟರ್ನ್‌ ನಮ್ಗೆ ಜ್ಞಾಪಕಕ್ಕೆ ಬರ್ಬೇಕು. ಆ ದೃಷ್ಟಿಯಲ್ಲಿ ಅವ್ನು ನಿಜವಾಗಿಯೂ ನಕಲ್ ಮಾಡ್ಬೇಕು. ಬಟ್ ನಕಲ್ ಮಾಡೋದ್ರಲ್ಲೇ ಇರೋದಿಲ್ಲ — ಮುಂದೆ ಹೋಗ್ತಾನೆ. ಮುಂದೆ ಬೆಳೀಬೇಕಾಗತ್ತೆ. ಆ ಮುಂದೆ ಬೆಳೆಯೋದು ಏನೋ ಅದೆ ಪ್ರೊಫಿಶಿಯನ್ಸಿ. ಅಂದ್ರೆ full command ಇರ್ಬೇಕು. ಫುಲ್ ಕಮಾಂಡ್ ಯಾವುದರ ಮೇಲೆ? — ಒಂದು ಅವ್ನ ಮಾಧ್ಯಮದ ಮೇಲೆ ನಾನ್ಹೇಳಿದ ಹಾಗೆ ಆ ಮಾಧ್ಯಮಗಳು ಮೂರು — ಒಂದು ಅವ್ನ ಧ್ವನಿ ಇನ್ನೊಂದು ಅವ್ನ ಶರೀರ, ಅಥವಾ ಶಾರೀರ ಮತ್ತು ಅವ್ನ ಸೆನ್ಸಿಟಿಲಿಟಿ. ಇವು ಮೂರು ಅವ್ನ ಮಾಧ್ಯಮಗಳು.

ಇವು ಮೂರು ಮಾಧ್ಯಮಗಳನ್ನು ಅವ್ನು ಬೆಳೆಸ್ಬೇಕಾದ್ರೆ ನಮ್ಮಲ್ಲಿ ಇವತ್ತಿನ ಸ್ಥಿತಿಯಲ್ಲಿ ಯಾವ ಅನುಕೂಲಗಳಿವೆ? ಒಂದೆ ಒಂದು ಡ್ರಾಮಾ ಸ್ಕೂಲಿದೆ. ಡ್ರಾಮಾ ಸ್ಕೂಲಿನಲ್ಲಿ ಕೂಡ ಪೂರ ಆಕ್ಟಿಂಗ್ ಹೇಳಿ ಕೊಡೋದಿಲ್ಲ. ಕಾರಣ ಅಂತಂದ್ರೆ ಬೇರೆ ಬೇರೆ ಭಾಷೆಗಳಿಂದ ಬಂದಂತವ್ರು. ಡೆಲ್ಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾಗೆ ಹೋದ ಕೂಡ್ಲೆ ಮೊದಲ್ನೇ ಟ್ರಾಜೆಡಿ ಅಂತಂದ್ರೆ ಅವ್ನು ತನ್ನ ಭಾಷೆಯಿಂದ ಕಟ್ ಆಗ್ತಾನೆ. ಭಾಷೆಯಿಂದ ಕಂಪ್ಲೀಟ್ಲಿ ಔಟ್ ಆಗಿ ಬಿಡ್ತಾನೆ. ಭಾಷೆಯಲ್ಲಿ ಯಾವುದನ್ನ ಎಕ್ಸ್‌ಪ್ಲೈನ್ ಮಾಡ್ಲಿಕ್ಕೆ ಬರೋದಿಲ್ವೋ ಅಭಿನಯ ಅಲ್ಲೇ ಸತ್ತು ಹೋಗ್ಬಿಡತ್ತೆ. ಒಂದು ರೀತಿಯಲ್ಲಿ ಥಿಯೇಟರ್‌ಗೂ ಭಾಷೆಗೂ ಬಹಳ ಹತ್ರದ ಸಂಬಂಧವಿದೆ. ಇದು ಭಾಷಾ ವ್ಯಾಮೋಹವಲ್ಲ. ಇದಕ್ಕೆ ಕನ್ನಡ ಚಳವಳಿ ಮಾಡ್ಬೇಕಾಗಿಲ್ಲ. ಇದು ಭಾಷೆಯ ಅನಿವಾರ್ಯತೆ. ಅಂದ್ರೆ ಅರ್ಥ ನಾನು ನಿಮ್ಮ ಮುಂದೆ ನಾಟಕ ಆಡ್ಬೇಕಾದ್ರೆ, ನಾನು ಕನ್ನಡದ್ದೇ ನಾಟಕ ಆಗ್ಬೇಕು ಅನ್ನೋದಕ್ಕಿಂತ ಹೆಚ್ಚು ಕನ್ನಡದಲ್ಲೇ ಆಡ್ಬೇಕು ಅನ್ನೋದು ಹೆಚ್ಚು ಮುಖ್ಯ ಆಗಿರುತ್ತೆ. ಆಗ್ಲೇನೆ ನಿಜವಾದ ಅರ್ಥದಲ್ಲಿ ನಾವು ಥಿಯೇಟರ್‌ನಲ್ಲಿ ಕೆಲ್ಸ ಮಾಡೋದಕ್ಕೆ ಸಾಧ್ಯವಿದೆ. ಭಾಷೆ ಅಂತಂದ್ಮೇಲೆ ಅದ್ರ ಡಯಲೆಕ್ಟ್ ಕೂಡ ಅಥವಾ ‘ಬೋಲಿ’ಅಂತ ನಾವು ಹಿಂದಿಯಲ್ಲಿ ಹೇಳ್ತೀವಿ ಅಥವಾ ಉಪಭಾಷೆಗಳು — ವಿಭಾಷೆಗಳು ಮಂಗಳೂರು ಕನ್ನಡ ಅಂತಾನೇ ಇಟ್ಕೋಳ್ಳೋಣ ಅಥವಾ slang ಅಂತ ಇಟ್ಕೊಳ್ಳೋಣ. ಇದನ್ನ ವಿಭಾಷೆ ಅಂತ ಅನ್ನೋದು ತಪ್ಪಾಗತ್ತೆ. ಮಂಗಳೂರು ಸ್ಲಾಂಗ್, ಧಾರವಾಡ ಸ್ಲಾಂಗ್, ಹಳೇ ಮೈಸೂರ್ ಸ್ಲಾಂಗ್ — ಇವು ಮೂರು ಸ್ಲಾಂಗ್ ನಮ್ಮಲ್ಲಿ ಇವೆ. ಇವು ಮೂರು ಸ್ಲಾಂಗನ್ನ ಉಳಿಸಿಕೊಂಡಾಗ, ಉಳಿಸ್ಕೋಬೇಕಾದ್ರೆ ಹೇಗೆ ಉಳಿಸ್ಕೋಬೇಕು ಮತ್ತೆ ಇದು ಥಿಯೇಟರ್‌ನಲ್ಲೇ ಸಾಧ್ಯವಿದೆ. ಇದಕ್ಕೂ ಪ್ರೊಫೆಶನಲ್ ಆದ್ರೇನೇ ಸಾಧ್ಯ. ಅಂದ್ರೆ ಪೂರ ಫುಲ್ ಕಮಾಂಡ್ ಇದ್ರೇನೇ ಸಾಧ್ಯ. ತನ್ನ ಬಾಡಿ ಮೇಲೆ, ತನ್ನ ವಾಯ್ಸ್ ಮೇಲೆ, ಸೆನ್ಸಿಬಿಲಿಟಿ ಇವು ಮೂರು ಅಂಗದ ಮೇಲೆ ಫುಲ್‌ಕಮಾಂಡ್, ಮೊದ್ಲು ಗುಬ್ಬಿ ಕಂಪೆನಿಯಲಿ ಟೆಸ್ಟ್ ಮಾಡ್ಬೇಕಾದ್ರೆ ಕೇಳ್ತಿದ್ರು — ಅವ್ನಿಗೆ ಮೂರು ಅಗತ್ಯಗಳಿವೆ ಅಂತ್ಹೇಳಿ — ಪೈಪು, ಪೋಸು, ‘ಫಿಗರ್’. ಪೈಪ್ ಅಂದ್ರ ಅಂರ್ಥ ಒಳ್ಳೆ ವಾಯ್ಸ್ ಇರ್ಬೇಕು. ಪೋಸು ಅಂದ್ರೆ ಚೆನ್ನಾಗಿ ಭಂಗಿಗಳನ್ನ ಕೊಡ್ಬೇಕು. ಅದು ನಮ್ಮ ಯಕ್ಷಗಾನದಲ್ಲಿ ಕೂಡ ಇದೆ. ಸ್ಟೇಜಿಗೆ ಬಂದು ಒಳ್ಳೆ ರಾಜನ ಹಾಗೆ ಭಂಗಿಯನ್ನ ಕೊಟ್ಟು ಬಿಟ್ರೆ — ಆಂ.. ಪರ್ವಾಗಿಲ್ಲ. ಒಳ್ಳೆ ‘ಫಿಗರ್’. ಒಟ್ಟು ಇವು ಮೂರು ಇದ್ರೆ ಆಗ್ತಿತ್ತು ಅಂತ. ಈಗ ಹಾಗಲ್ಲ. ಈಗ ನಿತ್ಯ ಬೆಳೀಬೇಕಾಗುತ್ತೆ.

ಪ್ರೊಫೆಶನಲ್ ಆಕ್ಟರ್ ಆಗ್ಬೇಕು ಅಂತಿದ್ರೆ, ಹೆಚ್ಚು ಮುಖ್ಯವಾಗಿ ಬೇಕಾದ್ದು ಮೊದ್ಲು ಟ್ರೇನಿಂಗ್. ನಮ್ಮಲ್ಲಿ ಟ್ರೇನಿಂಗೇ ಬೇಡ ಅಂತ ಹೇಳ್ತಿದ್ರು. ಈಗ ಯಾರೂ ಹಾಗೆ ಹೇಳೋಲ್ಲ. ಒಂದು ಇಪ್ಪತ್ತು ಮೂವತ್ತು ವರ್ಷದ ಹಿಂದೆ, “ಕಲಾವಿದ ಅಂದ್ರೆ ಹುಟ್ಟಾ ಕಲಾವಿದ ಆಗಿರ್ತಾನೆ; ಅದೇನು ಆಕ್ಟಿಂಗ್ ಕಲ್ಸಕಾಗತ್ತಾ?” ಅಂತಿದ್ರು ಕಲೆ ಅಂದ್ಮೇಲೆ ಕಲ್ಸೋಕೆ ಆಗತ್ತೆ ಅಂತ್ಲೇನೇ ಅರ್ಥ. ಇಲ್ದಿದ್ರೆ ಕಲೆ ಆಗ್ತಿರಲಿಲ್ಲ. ನ್ಯಾಚುರಲ್ ಆಗಿ ಬರೋದು ಕಲೆ ಅಲ್ಲ. ಹಕ್ಕಿ ಹಾಡಿದ್ರೆ ಅದನ್ನ ಕಲೆ ಅಂತ ಹೇಳೋಲ್ಲ. ಯಾಕೇಂದ್ರೆ ಅದು ಸಹಜ, ಅದ್ರ ಸ್ವಭಾವ, ಸ್ವಾಭಾವಿಕ.  ಆದ್ರೆ ಹಕ್ಕಿಯ ಹಾಗೆ ನಾನುಹಾಡಿದ್ರೆ ನಾನು ಕಲಾವಿದ ಆಗ್ತೇನೆ. ಯಾಕಂದ್ರೆ ನಾನು ಅದ್ನ ಅನುಕರಿಸಿ ಬೇರೆ ರೀತಿಯಲ್ಲಿ ಕ್ರಿಯೇಟ್‌ಮಾಡ್ತೀನಿ, ಅದ್ಕೇ ಒಂದು ಅರ್ಥ ಕೊಡ್ತೀನಿ, ಅದ್ನ ಉಪಯೋಗ ಮಾಡ್ತೀನಿ. ಆ ದೃಷ್ಟಿಯಲ್ಲಿ ಮೊದ್ಲು ಬೇಕಾದ್ದು ವಾಯ್ಸ. ನಮ್ಮ ವಾಯ್ಸ್‌ನ ರೇಂಜೇ ನಮ್ಮ ಆಕ್ಟರ್‌ಗಳಿಗೆ ಇನ್ನೂ ಗೊತ್ತಿಲ್ಲ. ಕಾರಣ ಇಷ್ಟೇ. ನೂರಾರು ಸೌಂಡ್‌ಗಳು ಬಂದದ್ರಿಂದ ನಾವು visually ಎಷ್ಟು ಸೆನ್ಸಿಟಿವ್ ಆಗಿದ್ದೀವೋ ಅಷ್ಟು ಕಿವಿಯಿಂದ ಸೆನ್ಸಿಟಿವ್ ಆಗಿಲ್ಲ. ಯಾಕೇಂದ್ರೆ ಎಲ್ಲಾ ಸೌಂಡ್‌ಗಳನ್ನ ಕೇಳ್ತೀವಿ. ಕಣ್ಣು ಮುಚ್ಚಿದ ಹಾಗೆ ಕಿವಿ ಮುಚ್ಚೋಕೆ ಆಗೋದೂ ಇಲ್ಲ. ಅದು ಒಂದು ದೊಡ್ಡ ಪ್ರಾಬ್ಲೆಮ್. ಮೂಗ್ ಮುಚ್ಕೋತೀವಿ ಆದ್ರೆ ಕಿವಿ ಎಂದುಮುಚ್ಚೋಲ್ಲ, ಕಿವಿ ಓಪನ್. ಹಾಗಾಗಿ ಎಲ್ಲಾ ಸೌಂಡ್‌ಗಳೂ ಬರುತ್ವೆ ನಮ್ಮ ಸ್ಕೂಲ್‌ಗಳಲ್ಲಿ ಈಗಲೂ ಕೂಡ ನಾವು ಆ ತರಹದಲ್ಲಿ ಎಲ್ಲಿ ಟ್ರೇನಿಂಗ್ ಕೊಡ್ತೀವಿ? — ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ, ಅವ್ನಿಗೆ ಒಬ್ಬ ರಾಣಿ ಇದ್ದಳು ಅಂತ ರಾಗವಾಗಿ ಹೇಳ್ಬಿಟ್ಟು — ಅಂದ್ರೆ ಮೊದ್ಲು ಸ್ಕೂಲಿಗೆ ಬಂದ ಕೂಡ್ಲೆ, ಅಲ್ಲೇ ನಮ್ಮ ಭಾಷೆನ್ನ ಸಾಯಿಸ್ತೀವಿ. ಸರಿಯಾಗಿ ದಿನನಿತ್ಯದ ಭಾಷೆಯ ಬಳಕೆಯ ತರಹದಲ್ಲಿ ಏರಿಳಿತ ಕೊಟ್ಟು ಅದಕ್ಕೆ ನಿಜವಾದ ಎಂಫೆಸಿಸ್ ಅಥವಾ ಗತ್ತು ಅಥವಾ ವಾಲ್ಯೂಮ್, ಪಿಚ್ ಅಷ್ಟೇ ಅಲ್ಲ ಈವನ್ pause ಕೂಡ ಕೊಟ್ರೆ ಆಗ ನಿಜವಾದ ಭಾಷೆ ಆಗತ್ತೆ.

ನಾನು ಭಾಷೆ ಬಗ್ಗೆ ಬಹಳ ಸೆನ್ಸಿಟಿವ್ ಆಗಿದ್ದೀನಿ. ಅದಕ್ಕೋಸ್ಕರನೇ ಹೇಳ್ತಿರೋದು. ಭಾಷೆ ಅಂದ ಕೂಡ್ಲೆ ಅದು ಲಿಖಿತ ಭಾಷೆ ಮಾತ್ರ ಅಲ್ಲ. ಅದು ಸಂಪೂರ್ಣ ಮನುಷ್ಯನ ವ್ಯವಹಾರ. ಹ್ಯೂಮನ್ ಬಿಹೇವಿಯರ್ ಅಂತ. ಮನುಷ್ಯನ ವ್ಯವಹಾರ ಅಂದ ಕೂಡ್ಲೆ, ಅವ್ನು ಹೇಗೆ ಹುಬ್ಬು ಹಾರಿಸ್ತಾನೆ, ಅವ್ನು ಹೇಗೆ ನಡೀತಾನೆ ಅಷ್ಟೇ ಅಲ್ಲ ಒಂದು ಮಗೂಗೆ ಹಾಲು ಕುಡೀಲಿಕ್ಕೆ ಇಷ್ಟ ಇಲ್ಲಿದಿದ್ರೆ ಅದು ಹೇಗೆ ‘ಬೇಡಾ’ ಅಂತ ಕಿರ್ಚತ್ತೆ ಅಲ್ವಾ. ಅದು ಕಿರಿಚುವಾಗ ಅದ್ರ ಪೂರ ಬಾಡಿ ಒಳಗಿಂದ, ಅದಕ್ಕೆ ಎನರ್ಜಿ ಹೇಗೆ, ಎಲ್ಲಿಂದ ಬರತ್ತೆ? ಹೊಕ್ಕಳಿಂದ ಬಂದು ಅದು ಕೈಯನ್ನ ಫುಲ್ ಯೂಸ್ ಮಾಡತ್ತೆ. ಅದ್ರಲ್ಲಿ ಯಾವ ಜಿಪುಣತನನೂ ಇಲ್ಲ. ಆದ್ರೆ ನಮ್ಮಲ್ಲಿ ಹೆಚ್ಚು ಅಲ್ಲಾಡಿಸಿದ್ರೆ ತಪ್ಪಾಗುತ್ತೆ; ಅದು ಓವರ್ ಆಕ್ಟಿಂಗ್ ಆಗಿ ಕಾಣತ್ತೆ. ಯಾಕೆ? ಯಾಕೇಂದ್ರೆ ನಾವು ಪೂರ ಎನರ್ಜಿಯನ್ನ ಯೂಸ್ ಮಾಡಲ್ಲ.

ಪ್ರೊಫೆಶನಲ್ ಅಂದಾಗ ಆಲ್ ಥ್ರೀ ಸೈಡ್ಸ್‌ನಲ್ಲಿ – ಅಂದ್ರೆ ಭಾವನೆ ದೃಷ್ಟಿಯಿಂದ, ನಿಮ್ಮ ಥಿಂಕಿಂಗ್ ದೃಷ್ಟಿಯಿಂದ, ನಿಮ್ಮ ವಿಚಾರ ಸ್ಪಷ್ಟವಾಗಿರಬೇಕು ಅಷ್ಟೇ ಅಲ್ಲ ನಿಮ್ಮ ಗೆಸ್ಚರ್ಸ್ — ಕರೆಕ್ಟಾಗಿ ಇರ್ಬೇಕು. ಅದೇ ಹ್ಯೂಮನ್ ಲಾಂಗ್ವೇಜ್‌. ಆಗ ನಿಮ್ಗೆ ಗೊತ್ತಾಗತ್ತೆ, ಮಂಗಳೂರಿಗೂ, ಬೆಂಗಳೂರಿಗೂ, ಮೈಸೂರಿಗೂ, ಧಾರವಾಡಕ್ಕೂ ಏನು ವ್ಯತ್ಯಾಸ, ಎಷ್ಟೋ ವ್ಯತ್ಯಾಸ ಇದೆ. ಮೈಸೂರಿನಲ್ಲಿ ಬಹಳ ಸಿಂಪಲ್ ಆಗಿ ಬಹಳ ಶ್ರೀಮದ್ ಗಾಂಭೀರ್ಯದಿಂದ  ‘ಛೆ’ ‘ಛೆ’ ಅಂದ್ಬಿಡ್ತಾರೆ. ಅದೇ ನಾವು ಮಂಗಳೂರು ಆದ್ರೆ ‘ಛೈ’ ಅಂದ್ಬಿಡ್ತೇವೆ. ನಮ್ಮ ಭಾಷೆಯಲ್ಲಿ ಕೂಡ ಡಿಫರೆನ್ಸ್ ಇದೆ. ಹಾಗೆ ನಮ್ಮ ಗೆಸ್ಚರ್‌ನಲ್ಲೂ ಡಿಫರೆನ್ಸ್ ಇದೆ. ಏನಿಲ್ಲ, ಗೆಸ್ಟರ್ ಅಂದ್ರೆ ಇಷ್ಟೆ. ನಾವಾದ್ರೆ ‘ಬನ್ನಿ ಬನ್ನಿ ಬನ್ನಿ’ ಅಂತ ಕರೀತೇವೆ. ಆದ್ರೆ ಇಂಗ್ಲೀಷ್‌ ಆದ್ರೆ ‘ಕಮಾನ್, ಕಮಾನ್…’ ಏಕ್‌ದಮ್ ಆಗಿ ಕೈ ಹೀಗೆ ಇದ್ದಿದ್ದು ಹೀಗೆ ಆಗ್ಬಿಡತ್ತೆ. ಅಷ್ಟು ಗೆಸ್ಚರಲ್ಲಿ ಚೇಂಜ್ ಇದೆ. ಆ ಗೆಸ್ಟರ್ ಹೇಗೆಲ್ಲ ಚೇಂಜ್ ಆಗತ್ತೆ. ಅಂತಂದ್ರೆ ನಮ್ಮ ಪಾಸ್ಚರ್ ಚೇಂಜ್ ಆಗತ್ತೆ, ನಾವು ನಡೆಯೋದು ಚೇಂಜ್ ಆಗತ್ತೆ. ಅದೆಷ್ಟೇ ಬೇಕಾದ್ರೂ ಬಾಟಾ ಶೂ ಬರಲಿ. ನಮ್ಮಲ್ಲರ ಕಾಲೂ ಒಂದಕ್ಕೇ ಹಾಕ್ಬೇಕಾಗತ್ತೆ. ನಿಜ. ಎಲ್ಲಾ chair ಗಳನ್ನೂ ನಾವು ಅಡ್ಜಸ್ಟ್ ಮಾಡ್ಕೋಬೇಕಾಗ್ತೆ. ನಿಜ, ಇಂಡಸ್ಟ್ರೀಯಲೈಸೇಶನ್‌ನಿಂದಾಗಿ, monotony ಖಂಡಿತ ಬರತ್ತೆ. ನಿಜ. ಆದ್ರೆ ಪ್ರೊಫೆಶನಲ್ ಥಿಯೇಟರ್‌ ಆದಾಗ ಆ ನಟ ವೈವಿದ್ಯವನ್ನು ಮತ್ತೆ ಉಳಿಸಿಕೊಳ್ಳುತ್ತಾನೆ.

ಅವ್ನಿಗೆ ಐತಿಹಾಸಿಕ ನಾಟಕ ಆಡ್ಬೇಕು ಅಂತಿದ್ರೆ, ಸಂಸರ ನಾಟಕ ಆಡ್ಬೇಕು ಅಂತಿದ್ರೆ ಅದು ಇವತ್ತಿನ ಭಾಷೆಯಲ್ಲಿ ಮಾತಾಡ್ಲಿಕ್ಕೆ ಸಾಧ್ಯವೇ ಇಲ್ಲ. ಆಗ ಅವ್ನಿಗೆ ಐತಿಹಾಸಿಕ ಪರಿಜ್ಞಾನ ಇರ್ಬೇಕಾಗತ್ತೆ. ಕೃತ್ರಿಮತೆ. ದಟ್ ಈಸ್ ದ ಕ್ರಿಯೇಟಿವಿಟಿ. ಪಾರ್ಟ್‌ಆಫ್ ಕ್ರಿಯೇಟಿವಿಟಿ ಅದು ಆರ್ಟಿಫಿಶಿಯಲ್ ಅಲ್ಲ, ಆ ದೃಷ್ಟಿಯಲ್ಲಿ. ಆರ್ಟಿಫಿಶಿಯಲ್, ಯಾವಾಗ ಆಗತ್ತೆ ಅಂತ್ಹೇಳಿದ್ರೆ ಅದ್ರಲ್ಲಿ ಅವ್ನಿಗೆ ಫಿಲಾಸಫಿ ಇಲ್ದೆ ಹೋದ್ರೆ ಆದ್ರಿಂದ ಪ್ರೊಫೆಶನಲ್ ಅಂತಂದ ಕೂಡ್ಲೇ ಅದು ಕೇವಲ ಒಂದು ಹ್ಯಾಬಿಟ್ ಅಲ್ಲ. ಕೇವಲ ಒಂದು ಡಿಸಿಪ್ಲೀನ್ ಅಲ್ಲ, ಅಥವಾ ಕೇವಲ ಕಲ್ತಿದ್ದು ಮಾತ್ರವಲ್ಲ ಟ್ರೇನಿಂಗ್‌ನಿಂದಾನೇ ಅದು ಬೆಳೀಬೇಕಾಗತ್ತೆ.

ನಿಜವಾಗಿಯೂ ನೀವು ಗಂಭೀರವಾಗಿ ಯೋಚ್ನೆ ಮಾಡಿದ್ರೆ ಎಲ್ಲಾ ಮಾಧ್ಯಮಕ್ಕಿಂತ ನಮ್ಮ ಮಾಧ್ಯಮ ಬೇರೆ ಅಂತ ತಿಳ್ಕೊಂಡ್ರೆ ಮಾತ್ರ ನಮ್ಮ ಮಾಧ್ಯಮಕ್ಕೆ ಸಹಾಯ ಮಾಡ್ಲಿಕ್ಕೆ ಸಾಧ್ಯ. ಇದು ಟಿವ ಅಲ್ಲ, ಇದು ಚಿತ್ರಕಲೆ ಅಲ್ಲ, ಇದು ಸಂಗೀತ ಕಲೆ ಅಲ್ಲ, ಇದು ವಿಡಿಯೋನೂ ಅಲ್ಲ. ಇದು ಸಿನೆಮಾನೂ ಅಲ್ಲ, ಇದು ನಾಟಕ ಅದು ಹಾಗೆ ಸುಲಭವಾಗಿ ಹೊತ್ತಾಗೋದು ಅಂದ್ರೆ ನಮ್ಮ ಧ್ವನಿಯಲ್ಲಿ.

ನಾವು ಗಂಭೀರವಾಗಿ ಅದನ್ನ ಪ್ರೊಫಿಶಿಯನ್ಸಿ ಅಂತ ತಗೊಂಡಾಗ, ಥಿಯೇಟರ್‌ನಲ್ಲಿ, ವಾಯ್ಸ್‌ ಸರಿಯಾದ ಜಾಗದಿಂದ, ಸರಿಯಾದ ಸ್ಥಳದಿಂದ, ಸರಿಯಾದ ಕೇಂದ್ರದಿಂದ ಸರಿಯಾದ ಮೂಲೆಯಿಂದ ಬರಲು ಸಾಧ್ಯ. ಇನ್ನು ಯಾವ ಮಿಡಿಯಮ್‌ನಲ್ಲೂ ಸಾಧ್ಯವಿಲ್ಲ. ಆದ್ರಿಂದ ನಮ್ಮ ಥಿಯೇಟರ್‌ನಲ್ಲಿ ಇವತ್ತು ಈ ಸ್ಟೇಜ್ ಆಕ್ಟರ್, ಸ್ಟ್ರೀಟ್ ಆಕ್ಟರ್, ಫೋಕ್ ಆಕ್ಟರ್ ಅಂದಾಗ ಒಂದನ್ನು ನಾವು ಮರ್ತು ಬಿಡ್ತೇವೆ ಅದು ಏನು ಅಂತಂದ್ರೆ ಧ್ವನಿ ಹತ್ತೂ ದಿಕ್ಕುಗಳಿಂದ ಬರ್ಬೋದು. ಒಂದು ರೀತಿಯಲ್ಲಿ ನಿಜವಾಗಿಯೂ ಅದು ದಶರಥ ಮತ್ತು ಕಡೆಯಿಂದ ರಥ ಓಡಿಸಿದ ಹಾಗೆ. ಹಿಂದುಗಡೆ ಧ್ವನಿ ಬರ್ಬೋದು, ಎಡಗಡೆಯಿಂದ ಬರ್ಬೋದು, ಬಲಗಡೆಯಿಂದ ಬರ್ಬೋದು, ಯಾವ ದಿಕ್ಕಿನಿಂದಲೂ ಬರ್ಬೋದು. ಧ್ವನಿಯ ಬಗ್ಗೆ ವಿಚಾರ ಮಾಡ್ಲಿಕ್ಕೆ ಹೋದಾಗ ಏನು ತಿಳಿಯುತ್ತೆ ಅಂತಂದ್ರೆ — ನಮ್ಗೆ ಭಾಷೆ ಎಂಬುದು ಕೇವಲ ಲಿಖಿತವಲ್ಲ. ಲಿಖಿತ ಅಂತ ಅಂದ್ರೆ ಅದು ಲಿಮಿಟೆಡ್ ಆಗತ್ತೆ. ಥಿಯೇಟರ್‌ನಲ್ಲಿ ಮಾತ್ರ ಭಾಷೇನ ಉಳಿಸಿಕೊಳ್ಲಿಕ್ಕೆ ಸಾಧ್ಯ.’

ಈಗ, ಕಡುಬು ಅಂತ ಇದೆ. ಅದನ್ನು ಮಂಗಳೂರಿನವರು ಬಹಳ ಬೇಗ ಇಡ್ಲಿ ಅಂತ ಅನ್ನೋದಕ್ಕೆ ಶುರುಮಾಡಿದ್ದಾರೆ! ಇಡ್ಲಿ ಅಲ್ಲ ಅದು ಕಡುಬೇ. ಅದು ಕಡುಬಿನ ಆಕಾರದಲ್ಲಿದ್ರೆ ಅದನ್ನ ಇಡ್ಲಿ ಅಂತ ಯಾಕೆ ಹೇಳ್ತಾರೆ? ಆ ರೀತಿಯಲ್ಲಿ ಭಾಷೆ ಸತ್ತು ಹೋಗ್ತಾ ಇದೆ. ಅಂದ್ರೆ ಕಡುಬು ಸಾಯ್ತಾ ಇದೆ. ಪಾಪ! ಅದನ್ನ ಉಳಿಸ್ಬೇಕಾದ್ರೆ ನಮ್ಗೆ ನಾಟಕದಲ್ಲೇ ಸಾಧ್ಯ. ಅದಕ್ಕೆ ಆಗ ಡಯಲೆಕ್ಟ್ ಬೇಕಾಗುತ್ತೆ. ಡಯಲೆಕ್ಟ್ ಅಂದ್ರೆ ಮೊದಲೆ ಹೇಳಿದ ಹಾಗೆ ಆ ಏರಿಳಿತಗಳು ಇಂಥವನ್ನೆಲ್ಲಾ ಮತ್ತೆ ನಾವು ಕಲೀಬೇಕಾಗುತ್ತೆ. ಆ ದೃಷ್ಟಿಯಿಂದ, ಭಾಷೆಯನ್ನು ಪ್ರಿಸರ್ವ್‌ ಮಾಡೋ ಲೈವ್ ಮ್ಯೂಸಿಯಂ ಅಂತಂದ್ರೆ ಥಿಯೇಟರ್‌. ಯಾರು ಲೈವ್ ಅಂತಂದ್ರೆ ಆಕ್ಟರ್ ಲೈವ್. ಆತ ಧ್ವನಿಯ ಬಗ್ಗೆ ಎಷ್ಟು ಕಾಳಜಿ ವಹಿಸಿಕೊಳ್ತಾನೋ ಅಷ್ಟು ಅಷ್ಟು ಧ್ವನಿಯ ಬಗ್ಗೆ ಹೆಚ್ಚಿನ ಶಕ್ತಿಪಡ್ಕೊಳ್ತಾನೆ.

ನಾಟಕದಲ್ಲಿ — “ಅವ್ನು ಒಳ್ಳೆ ಹುಡುಗ” ಅಂತ ಬರ್ದಿರ್ತಾರೆ ಅಂತಿಟ್ಕೊಳ್ಳೋಣ. ಅಕ್ಟರ್‌ನ ಇಂಟರ್‌ಪ್ರಿಟ್‌ನಲ್ಲಿ ಆತ “ಒಳ್ಳ್‌ಳ್‌ಳ್ಳೆ ಹುಡುಗ”. ಅವ್ನು ಒಳ್ಳೆ ಹುಡುಗ, ಆ! ಒಳ್ಳೆ ಹುಡುಗ. ಒಳ್ಳೆ ಅನ್ನೋದು ಮೂರು ನಾಲ್ಕು ಬಂದ್ಬಿಡ್ತು. ಇದು ನಾಟಕದಲ್ಲಿ ಧ್ವನಿ ಆಗ್ಲಿಕ್ಕೆ ಸಾಧ್ಯವಿದೆ. ಅಷ್ಟೇ ಅಲ್ಲ ಆಮೇಲೆ ‘ಛಿ’, ‘ಹೆ! ಹೆ’ ‘ಓಹೋ ಹೋ’ ಅಂತಾದ್ದು ಇನ್ನೇಲ್ಲಿ ಸಾಧ್ಯವಿದೆ?

ಒಂದು ನಗೋದನ್ನೇ ಭರತಮುನಿ ಆರು ತರಹ ನಗಬೇಕು ಅಂದಿದ್ದಾನೆ. ಹಸಿತ, ಅರ್ಧಹಸಿತ, ಉಪ ಹಸಿತ, ಅಟ್ಟ ಹಸಿತ, ಅತಿ ಹಸಿತ, ಅಪ ಹಸಿತ. ಈಗಲೂ ಕೂಡ ಎಷ್ಟು ತರಹ ನಗ್ತೀವಿ. ನಗೋದು ಅಥವಾ ಕೆಮ್ಮೋದು ಈಗಲೂ ಕೂಡ ನಮ್ಮ ಭಾಷೆಯ ಅಂಗವಾಗಿದೆ. ಇದನ್ನೆಲ್ಲ ನಾವು ಸ್ಕೂಲಲ್ಲಿ ಕಲಿಸೋಕೆ ಸಾಧ್ಯವೂ ಇಲ್ಲ. ಅಂದ್ರೆ ಆಕ್ಟರ್‌ಗೆ ಈಗಲೂ ಎಷ್ಟು ತರಹ ಬೇಕು! ಒಬ್ಬ ಬಾಸ್ ಹತ್ರ ಹೋಗ್ಬೇಕಾದ್ರೆ, ಬಾಸ್ ಇನ್ನೂ ಫೈಲ್ ಓದ್ತಿರಬೇಕಾದ್ರೆ, ಬಾಸ್‌ನ್ನ ಎಬ್ಬಿಸ್ಬೇಕಾದ್ರೆ ಹೇಗೆ ‘ಹುಂ ಹುಂ ಹುಂ’ (ಗಂಟಲು ಸರಿಮಾಡಿಕೊಂಡು) ಹೇಳ್ಬೇಕಾಗತ್ತೆ. ಭೂಮಿಕೆ ಹಾಕ್ಬೇಕಾದ್ರೂ. ಮೊದ್ಲು ಕೆಮ್ಮಬೇಕಾಗತ್ತೆ. ಹೊಸ ಹೊಸತಾಗಿ ಭಾಷಣ ಮಾಡ್ಬೇಕಾದ್ರೆ ಮೊದ್ಲು ಕೆಮ್ಮಬೇಕಾಗತ್ತೆ ಅಥವಾ ಬಸ್‌ಸ್ಟಾಂಡ್‌ನಲ್ಲಿ ನಿಂತಾಗ ಅಲ್ಲಿ ಒಬ್ಬ ಹುಡ್ಗಿ ಇದ್ಬಿಟ್ರೆ ಅಲ್ಲಿ ಕೂಡ ಕೆಮ್ಮಬೇಕಾಗುತ್ತೆ. ಆ ಕೆಮ್ಮುಗಳಿಗೆ ಎಷ್ಟು ಅರ್ಥಗಳಿವೆ. ಎಷ್ಟು ವೈವಿಧ್ಯಗಳಿವೆ. ಇದನ್ನ ಮತ್ತೆ ಕಲೀಬೇಕಾದ್ರೆ ಮತ್ತೆ ಅದಕ್ಕೆ ಟ್ರೇನಿಂಗ್ ಬೇಕಾಗುತ್ತೆ. ನಮ್ಮ ಉದ್ಗಾರಗಳು — ‘ಅಯ್ಯೋ’ ಅನ್ನೋದು ‘ಹಯ್ಯೋ’ ಅನ್ನೋದು ಆಗಲಿ ಅದಕ್ಕೆ ಎಷ್ಟು ಅರ್ಥಗಳು ಬರ್ತವೆ. ಏನಿಲ್ಲ ಒಂದು (pause) ಬದಲಾಯಸಿಬಿಟ್ರೆ ಎಷ್ಟು ಅರ್ಥ ಚೇಂಜ್ ಆಗತ್ತೆ! ನಾನು ನಿಮ್ಮ ಮನೆಗೆ ಬರ್ಬೇಕು ಅಂತಿದ್ದೆ’, ನಾನು ‘ನಿನ್ನೆಯೇ” ನಿಮ್ಮನೆಗೆ ಬರ್ಬೇಕು ಅಂತಿದ್ದೆ. ನಾನು ನಿನ್ನೆ ನಿಮ್ಮನೆಗೆ ಬರ್ಬೇಕು ಅಂತಿದ್ದೆ. ನಾನು ನಿನ್ನೆ ನಿಮ್ಮ ‘ಮನೆಗೇ’ ಬರ್ಬೇಕು ಅಂತಿದ್ದೆ. ಆಫೀಸಿಗಲ್ಲ. ನಾನು ನಿನ್ನೆ ನಿಮ್ಮನೆಗೆ ‘ಬಬೇಕು’ ಅಂತಿದ್ದೆ, ‘ಇದ್ದೆ’ ಅನ್ನೋದ್ರಲ್ಲೂ ವ್ಯತ್ಯಾಸ ಆಗತ್ತೆ. ಅಂದ್ರೆ ಇಷ್ಟೆಲ್ಲಾ ಮಾಡ್ಬೇಕಾದ್ರೆ. ಒಂದು ಭಾಷೆ ಬಗ್ಗೆ ಕಲೀಬೇಕಾದ್ರೆ, ಒಂದು ವರ್ಷವಲ್ಲ, ಎಷ್ಟು ವರ್ಷದಿಂದ ಕಲೀಬೇಕು. ಇದು ಭಾಷೆಯ ವೈವಿಧ್ಯವಾಯ್ತು.

ಇನ್ನು ಧ್ವನಿಯಲ್ಲಿ. ಧ್ವನಿಯಲ್ಲಿ ರೇಂಜ್, ರೇಂಜೇ ಇಲ್ಲ ಈಗಿನ ಆಕ್ಟರ್. ಅದಕ್ಕೇ ಮೈಕ್ ಯೂಸ್ ಮಾಡ್ತೀವಿ. ಕೈಲಾಸಂ ಹೇಳಿದ್ದಾರೆ ‘ಮೈಕಾಸುರ’ ಅಂತ. ನಿಜವಾಗಿಯೂ ಮೈಕ್ ಒಂದು ರಾಕ್ಷಸನೆ. ಯಾಕೆಂದರೆ ಸ್ಟೇಜೇ ಜಗತ್ತು ಅಂತ ಶೇಕ್ಸ್‌ಪಿಯರ್ ಹೇಳಿದ್ಮೇಲೂ ಕೂಡ ಆ ಜಗತ್ತಿನಲ್ಲೂ ಕೂಡ ಮೈಕ್ ಮುಂದೆ ಬಂದ್ಬಿಟ್ಟು, ನಮ್ಮ ಜಗತ್ತನ್ನು ಒಂದು ಅಡಿ ಒಳಗೆ ನಿಲ್ಲಿಸಿ ಬಿಡ್ತೀವಿ. ಒಂದು ಇಪ್ಪತ್ತು ಅಡೀನೂ ಸರಿಯಾಗಿ ಯೂಸ್ ಮಾಡಲ್ಲ. ನಿಜ ನೋಡಿದ್ರೆ ಇಪ್ಪತ್ತು ಅಡಿಯ ಸ್ಟೇಜನ್ನ ಹೇಗೆ ಉಪಯೋಗಿಸ್ತಿವಿ, ಪಿಚ್ (pitch) ಇವೆಲ್ಲಾ ಉದಾರಣೆಗೆ ಒಬ್ಬ ಅಂಗಡಿಯವನು ವ್ಯಾಪಾರ ಮಾಡ್ತಾ ಇದ್ದಾನೆ. ಅಲ್ಲಿಗೆ ಒಬ್ಬ ಫ್ರೆಂಡ್ ಬಂದಿದ್ದಾನೆ. ಈ ಮೂರು ಜನರ ಹತ್ರ ಹೇಗೆ ಮಾತಾಡೋದು? ‘ಹಾಂ, ಬನ್ನಿ ಸ್ವಾಮಿ. ಬನ್ನಿ ಬನ್ನಿ ಸ್ವಾಮಿ. ಅ..ಅ.. ಕುರ್ಚಿ ಕೊಡ್ತೀನಿ ಸ್ವಾಮಿ ಒಂದ್ನಿಮಿಷ. ಏ ಹೋಗೋಹೋಗೋ ಯಾವಾಗಲೂ ನಿಂದು ಇದ್ದಿದ್ದೇ’. ಈ ರೀತಿ ಮೂರು ಪಿಚ್‌ನಲ್ಲಿ ಮಾತಾಡ್ಬೇಕಾಗತ್ತೆ. ಆಯಾಯ ಪಿಚ್‌ನಲ್ಲಿ ಭಾಷೆ ಚೇಂಜ್ ಆಗ್ಬಿಡತ್ತೆ. ಅದಕ್ಕೆ ಯಾವ ತರಹದ ವ್ಯಾಕರಣ ಇಲ್ಲ.

ಭರತ ಮುನಿ ಹೇಳಿದ್ದಾನೆ: ಆಕ್ಟರ್ ಬಹಳ ಚತುರನಾಗಿರಬೇಕು. ಅಂದ್ರೆ ಇಂಟಲಿಜೆಂಟ್ ಆಗಿರ್ಬೇಕು ಅಂತರ್ಥ. ಅಂದ್ರೆ ಯಾವಾಗಲೂ ಫ್ರೆಶ್ ಆಗಿ ವರ್ತಮಾನ ಕಾಲದಲ್ಲಿ ಇರಬೇಕು; ಆಮೇಲೆ ಆತನಿಗೆ ಛಂದೋಗತಿ ವಿಧಾನಗಳೆಲ್ಲಾ ಗೊತ್ತಿರಬೇಕು, ಛಂದಸ್ಸು ಕೂಡ ಗೊತ್ತಿರಬೇಕು. ಛಂದಸ್ಸು ಗೊತ್ತಿದ್ರೆ ತಾಳ ಗೊತ್ತಾಗತ್ತೆ, ಲಯ ಗೊತ್ತಾಗುತ್ತೆ. ನಮ್ಮಲ್ಲಿ ತಾಳ ಅಂದ್ಬಿಟ್ರೆ (ಕೈಯಲ್ಲಿ ತಾಳ ಹಾಕಿ) ಹೀಗೆ ಆಗ್ಬಿಟ್ಟಿದೆ. ಬಟ್ ಅದು. ಇಲ್ದೇನೇ ಲಯ ಅಂದಾಗ ಅದು ಅರ್ಥವಾಗುತ್ತೆ; ಆಗ ನಿಜವಾಗಿಯೂ ಅವ್ನಿಗೆ ಕವಿತೆ ಗೊತ್ತಿರಬೇಕಾಗತ್ತೆ. ಬೇರೆ ಸಾಹಿತ್ಯ ಪ್ರಕಾರಗಳು ಗೊತ್ತಿರಬೇಕಾಗತ್ತೆ. ಇವತ್ತು ನಮ್ಮ ನಾಟಕದಲ್ಲಿ ಆಕ್ಟ್ ಮಾಡೋರಿಗೆ, ಅದು ಹವ್ಯಾಸಿ ರಂಗಭೂಮಿಯಲ್ಲಂತೂ ಒಳ್ಳೆ ನಾಟಕ ಇದ್ರೆ ಮಾತ್ರ ಅವ್ನು ಆಕ್ಟರ್ ಆಗಬಲ್ಲ. ಇಲ್ಲಂದ್ರೆ ಸಾಧ್ಯವಿಲ್ಲ. ಯಾಕೇಂದ್ರೆ ಆಕ್ಟರ್‌ನ ಸ್ವಂತ ಕಾಂಟ್ರಿಬ್ಯೂಶನ್ನೇ ಇಲ್ಲ. ಗಿರೀಶರ ‘ತುಘಲಕ್’ ಸಿಕ್ಕಿದ್ರೆ ನಾನು ಒಳ್ಳೆ ಆಕ್ಟರ್ ಆಗ್ತೀನಿ. ಗಿರೀಶ್ ಅಲ್ಲದೆ ಇನ್ಯಾವನೋ ಒಬ್ಬ ‘ವಿಭೀಷಣ’ ಅಂತ ಬರೆದ್ರೆ, ಅವ್ನ ನಾಟಕದಲ್ಲಿ ಚಾನ್ಸೇ ಇಲ್ಲ. ಅದರಲ್ಲಿ ಅವಕಾಶವೇ ಇಲ್ಲ. ಪಾಸಿಬಿಲಿಟಿನೇ ಇಲ್ಲ ಅಂತದ್ಬಿಟ್ಟು ತೆಗೆದು ಹಾಕ್ತೀನಿ. ಆದ್ರೆ ನಮ್ಮ ಟ್ರೆಡಿಷನಲ್ ಥಿಯೇಟರ್‌ತಗೊಳ್ಳಿ. ಒಂದು ಸಣ್ಣ ವಿಷಯವನ್ನ ತಗೊಂಡು ಎಷ್ಟು ಚೆನ್ನಾಗಿ ಮಾತಾಡ್ತಾರೆ. ನಮ್ಮ ಯಕ್ಷಗಾನದಲ್ಲಿ ಅಥವಾ ಕಥಕ್ಕಳಿಯಲ್ಲಿ ಆಗ್ಲಿ ಅಭಿನಯ ಮಾಡ್ತಾರೆ. ಒಂದು ಸಣ್ಣ ವಿಷಯ. ಶಿವನ ತಪಸ್ಸು ಮಾಡಿ ಎಲ್ಲಾ ಸಿದ್ದಿಗಳನ್ನು ಪಡ್ಕೊಂಡು ಬಂದ್ಬಿಟ್ಟು ರಾವಣ. ಬಂದ್ಮೇಲೆ ಒಂದ್ಸಲ ಶಿವನಿಗೇ ಒಂದು ಪಾಠ ಕಲಿಸಿಬಿಡೋಣ ಅಂತ ಕಾಣತ್ತೆ ಅವ್ನಿಗೆ. ಇದು ನಾಟಕದಲ್ಲೇ ಸಾಧ್ಯ — ಗುರುವಿಗೇ ತಿರುಮಂತ್ರ ಹಾಕೋದು. ಎಲ್ಲವನ್ನೂ ಕಲಿತು ಕೊನೆಗೆ ಗುರುವಿಗೇ ತಿರುಮಂತ್ರ ಹಾಕಿದ್ರೆ, ನಿಜವಾಗಿಯೂ ಅದೊಂದು ಮೂವತ್ತಾರನೇ ವಿದ್ಯೆ ಇದ್ದ ಹಾಗೆ. ಒಂದು ಹೊಸ ವಿದ್ಯೆ ಕಲಿತ ಹಾಗೆ. ಅದು ಗುರುವಿಗೆ ವಿದ್ರೋಹ ಅಲ್ಲ; ದಟ್ ಈಸ್ ದ ರಿಯಲ್ ಕ್ವಾಲಿಟಿ. ಚೈನದ್ದೋ ಜಪಾನದ್ದೋ ಒಂದು ಫಿಲ್ಮ್ ಬಂದಿತ್ತು, ನೀವು ನೋಡಿರಬಹುದು, ಥರ್ಟಿಸಿಕ್ಸ್ ಆಂಗಲ್ಸ್ ಅಂತ ಥರ್ಟಿಸಿಕ್ಸ್‌ನಲ್ಲಿ ಥರ್ಟಿಫೈವ್ ಮಾತ್ರ ಹೇಳಿಕೊಡೋದು. ಥರ್ಟಿಸಿಕ್ಸ್ತನ್ನ ಹೇಳಿಕೊಡೋಲ್ಲ. ಯಾಕೇಂದ್ರೆ ಅವ್ನೇ ಹುಡುಕ್ಬೇಕು ಅಂತ್ಹೇಳಿ. ಆ ರೀತಿಯಲ್ಲಿ ಥರ್ಟಿಸಿಕ್ಸ್ ಅವ್ನ ಕಾಂಟ್ರಿಬ್ಯೂಶನ್. ಥಿಯೇಟರ್‌ ಕೂಡ ಹಾಗೇನೇ. ಭಾಷೆಯ ತಾಪ ಬೆಳೀಬೇಕಾದ್ರೆ, ಭಾಷೆ ಬೆಳಿಬೇಕಾದ್ರೆ, ಥಿಯೇಟರ್‌ನಿಂದ ಮಾತ್ರ ಸಾಧ್ಯ. ಅದೂ ಪ್ರೊಫೆಶನಲ್‌ನಿಂದ. ನಿಮ್ಮಲ್ಲಿ ಮೂರು ರಂಗಭೂಮಿ. ಮೂರು ಇದ್ರೂ ಕೂಡ, ನಾವು ಭಾಷೆ ಬಗ್ಗೆ ಎಷ್ಟು ಕಾನ್ಶಿಯಸ್ ಆಗಿದ್ದೀವಿ? ಭಾಷೆ ನಿಜವಾಗಿಯೂ ಬೆಳೆಯೋದು ಪರಸ್ಪರ ಸಂಬಂಧದಲ್ಲಿ. ಆಡಿಯನ್ಸ್ ಮುಂದೆ ಇದ್ದಾಗ ನಾನು ಮಾತಾಡ್ತಾ ಇದ್ರೆ ನನ್ನ ಒಂದೊಂದು ಮಾತಿಗೂ ಅರ್ಥ ಮುಟ್ಟಿದಾಗ, ರೀತಿಯಲ್ಲಿ ಉಷ್ಮಾ — ಉಷ್ಮತೆ — ಉಷ್ಮತೆ — ತಾಪ ಬೆಳೆಯತ್ತೆ. ಆ ತಾಪ ಟಿವಿಯಲ್ಲಿ ಸಾಧ್ಯವಿಲ್ಲ. ಫಿಲ್ಮ್‌ನಲ್ಲಿ ಸಾಧ್ಯವಿಲ್ಲ. ಇನ್ನು ಯಾವ ಮಿಡಿಯಂನಲ್ಲೂ ಸಾಧ್ಯವಿಲ್ಲ. ಆ ಭಾಷೆ ಬೆಳೆಯೋದು ಅಂದ್ರೆ ಅರ್ಥ, ಕೊನೆಗೆ ಅದೊಂದು ಈಡಿಯಮ್ ಆಗೋದು. ಅದಕ್ಕೇ ಶೇಕ್ಸ್‌ಪಿಯರ್‌ನ ಒಂದೊಂದು ಶಬ್ದಗಳೂ ಈಡಿಯಮ್ ಆಗ್ಬಿಟ್ಟು. ಡೇ ಟುಡೇ ಲೈಫ್‌ನಲ್ಲಿ ಬಂದ್ಬಿಟ್ಟವು. ನಾವು ಕನ್ನಡದಲ್ಲಿ ಕೂಡ ಯೂಸ್ ಮಾಡ್ತೀವಿ. ಶೇಕ್ಸ್‌ಪಿಯರ್‌ನ ಈಡಿಯಮ್‌ನ. ಟಿಟ್ ಫಾರ್ ಟ್ಯಾಟ್ ಮುಂತಾದೆಲ್ಲ. ಹಾಗೇ ಕನ್ನಡದಲ್ಲಿ ನಮ್ಮ ರಾಮಾಯಣ, ಮಹಾಭಾರತದ್ದೇ ಯೂಸ್ ಮಾಡ್ತೀವೇ ಹೊರ್ತು ನಮ್ಮ ನಾಟಕರಂಗ ಅದನ್ನ ಕೊಟ್ಟಿಲ್ಲ. ಆ ದೃಷ್ಟಿಯಲ್ಲಿ ನಾನು ಹೇಳಿದ್ದು — ನಾವು ಪ್ರೊಫೆಶನಲ್ ಆಗಿಲ್ಲ ಅಂತ.

ಪ್ರೊಫೆಶನಲ್ ಆಗೋದಕ್ಕಿಂತ ಮೊದ್ಲು ಧ್ವನಿ ಆಮೇಲೆ ಬಾಡಿ ಬಗ್ಗೆ ಯೋಚ್ನೆ ಮಾಡ್ಬೇಕಾಗತ್ತೆ. ನಿಜವಾಗಿಯೂ ನೋಡಿದ್ರೆ ಧ್ವನಿ ಬೆಳೆಸ್ಬೇಕಾದ್ರೆ ಆರ್ನೇ ವರ್ಷದಿಂದಲೇ ಬೆಳೆಸ್ಬೇಕು. ಅದಕ್ಕೆ ಭರತಮುನಿ ಹದಿನೈದು ವರ್ಷ ಕಲೀಬೇಕು ಅಂತಾನೆ. ಅಂದ್ರೆ ಹದಿನೇಳನೇ ವಯಸ್ಸಿಗೆ ಬರೋ ಹೊತ್ತಿಗೆ ಅವ್ನಿಗೆ ವಾಯ್ಸ್ ಮೇಲೆ ಕಂಪ್ಲೀಟ್ ಕಮಾಂಡ್ ಬರತ್ತೆ. ಆಗ ಎಷ್ಟು ತರಹ ಮಾತಾಡ್ತಾನೆ! ಪಕ್ಷಿಗಳನ್ನ ಅನುಕರಿಸ್ತಾನೆ. ನಾಯಿಗಳನ್ನೂ ಅನುಕರಿಸ್ತಾನೆ. ಮನುಷ್ಯರನ್ನೂ ಅನುಕರಿಸ್ತಾನೆ. ಅವ್ನು ಎಷ್ಟು ತರಹ ಮಾತಾಡ್ಲಿಕ್ಕೆ ಸಾಧ್ಯವಿದೆ. ಆದ್ರೆ ಇವತ್ತು ಅದು ಆಗ್ತಾ ಇಲ್ಲ. ಈ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ.

ಇನ್ನು ಎರಡನೆಯದಾಗಿ ನಮ್ಮ ಬಾಡಿ. ನಮ್ಮ ಬಾಡಿ ಮೇಲೆ ನಮ್ಗಿನ್ನೂ ಕಂಟ್ರೋ ಇಲ್ಲ. ಕಂಟ್ರೋಲ್ ಅಂದ್ರೆ ಅರ್ಥ ಬಾಡಿನ್ನ ನಿಜವಾಗ್ಲೂ ಅಕ್ರೋಬೇಟಿಕ್ಸ್ ಮಾಡ್ಲಿಕ್ಕೆ ಕಲೀಬೇಕು. ಆಕ್ರೋಬೇಟಿಕ್ಸ್ ಮಾಡೋದೇ ಕೆಟ್ಟದು ಅಂತ ತಿಳ್ಕೊಂಡು ಬಿಟ್ಟಿದ್ದಾರೆ. ಬಾಡಿ ಕಂಪ್ಲೀಟ್ಲಿ ಒಂದು ಹಗ್ಗದ ಹಾಗೆ ಆಗ್ದೇ ಹೋದ್ರೆ ಅವ್ನು ಏನು ಕ್ಯಾರೆಕ್ಟರ್ ಬದಲಾಯಿಸಬಲ್ಲ?

ನಾನು ನೋಡಿದ ಒಂದು ನಾಟಕದಲ್ಲಿ ಮೈಮ್‌ನಲ್ಲಿ ಒಂದು ಕಪ್ಪೆ ಹಾರಿದ ಹಾಗೆ ಮುಂದೆ ಹೋತಾನೆ; ಹರ‍್ಕೊಂಡು ಹೋಗ್ತಾನೆ. ಆಮೇಲೆ ಒಬ್ಬ ಮೈಮ್‌ನಲ್ಲಿ ಹಗ್ಗನ್ನ ಎಳೀತಾನೆ, ನಿಜವಾಗ್ಲೂ ಜಾರ‍್ಕೊಂಡು ಜಾರ‍್ಕೊಂಡ್ ಎಳ್ಕೊಂಡು. ಬರ್ತಾನೆ. ಅದು ಸುಲಭವಾ ಅಂತ ಗೊತಾಗ್ಬೇಕಾದ್ರೆ ಆಕ್ಟರ್ಸ್‌ ಮನೆಗೆ ಹೋಗಿ ಟ್ರೈ ಮಾಡ್ಲಿ. ಸಾಧ್ಯವೇ ಇಲ್ಲ; ಯಾಕೇಂದ್ರೆ ಅದಕ್ಕೆ ಟ್ರೇನಿಂಗ್ ಬೇಕಾಗತ್ತೆ. ಅಂದ್ರೆ ಬಾಡಿ ಕಂಟ್ರೋಲ್ ಬೇಕಾಗತ್ತೆ. ಬಾಡಿಗೆ ಹಿಂದೆ ಎಳೆದಾಗ ಬಲ ಮೊಣಗಾಲ ಮೇಲೆ ಬೀಳತ್ತೋ, ಕಾಲ್ಮೇಲೆ ಬೀಳತ್ತೋ ಹೊಟ್ಟೆ ಮೇಲೆ ಬೀಳತ್ತೋ, ಎಲ್ಲಿ ಬೀಳತ್ತೆ ಹೇಗೆ ಗೊತ್ತು. ಒಂದು ರೀತಿಯಲ್ಲಿ ನಾವು ಅದ್ನ ರೆಸಿಸ್ಟ್ ಮಾಡ್ಬೇಕು. ಅದ್ರ ಜೊತೇಲಿ ಹಿಂದಿಂದೆ ಹೋಗ್ಬೇಕು. ನಮ್ಮಲ್ಲಿ ಬಾಡಿ ಬಗ್ಗೆ ಕಾನ್ಶಿಯಸ್‌ನೆಸ್ ಬೆಳೀದೇ ಇರೋದ್ರಿಂದ್ಲೇ ಒಂದೊಂದು ಸಲ “ಫಿಸಿಕಲ್ ಆಕ್ಟಿವಿಟಿ” ಅನ್ನೋದನ್ನ ಒಂದು ಜಂಪ್ ಮಾಡೋದೋ, ಅಥವಾ ಸುತ್ತ ಹಾಕೋದೋ, ಇಷ್ಟ್ರರಲ್ಲೇ ಮುಗಿಸ್ಬಿಟ್ಟಿದ್ದೀವಿ. ಆದ್ರೆ ಮೆಹರಿಂಗ್ ಅಂತ ಒಬ್ಬ ಜರ್ಮನ್ ಆಕ್ಟರ್ – ಡೈರಕ್ಟರ್ ಹೇಳ್ತಿದ್ದ. ನಾನು ಶೇಕ್ಸ್‌ಪಿಯರ್‌ನ ಒಂದೂವರೆ ಪೇಜಿನ ಭಾಷಣವನ್ನ ನಾನು ನನ್ನ ಬಾಡಿಯ ಗೆಸ್ಟ್‌ರ್‌ನಿಂದ ಒಂದು ನಿಮಿಷದಲ್ಲೇ ತೋರಿಸ್ತೀನಿ, ಎಕ್ಸ್‌ಪ್ರೆಸ್ ಮಾಡ್ತೀನಿ ಅಂತ. ಇದು ಸ್ವಲ್ಪ ಅತಿಶಯೋಕ್ತಿ ಇರ್ಬೋದು ನಿಜ. ಇದು ಯಾಕೆ ಹೇಳೋದು ಅಂದ್ರೆ ಬಾಡಿ ಮೇಲೆ ಎಷ್ಟು ಕಂಟ್ರೋಲ್ ಇರ್ಬೇಕು ಅನ್ನೋದಕ್ಕೆ, ಬಾಡೀಲಿ ಕಂಟ್ರೋಲ್ ಇರೋದಕ್ಕೆ ನಮ್ಗೆ ಎಷ್ಟು ತರಹದ ಅಭ್ಯಾಸಗಳು ಬೇಕು!

ಭರತ ಮುನಿ ದೃಷ್ಟಿ ಬಗ್ಗೆನೇ ಅರವತ್ತ ನಾಲ್ಕು ವಿಧಗಳನ್ನು ಹೇಳಿದ್ದಾನೆ. ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ದುಂಡಗೆ ಹಾಕೋದು ಹೇಗೆ, ಆಮೇಲೆ ಅದ್ನನ್ನೇ ದೊಡ್ಡ ಹೇಗೆ ಮಾಡೋದು, ಸಂಕುಚಿತ ಹೇಗೆ ಮಾಡೋದು — ಹೀಗೆ ಅರವತ್ತ ನಾಲ್ಕು ಭೇದಗಳನ್ನು ಅವ್ನೇ ಹೇಳಿದ್ದಾನೆ. ನಮ್ಮಲ್ಲಿ ಇವನ್ನೆಲ್ಲಾ ಯಾವ ತರಹದಲ್ಲೂ ಡೆವಲೆಪ್ ಮಾಡಿಲ್ಲ. ಹಾಗೇನೇ ಬಾಡಿ ಬಗ್ಗೇನೂ ಗ್ರೋಟೋವ್‌ಸ್ಕಿಯಿಂದಲೋ ಎಲ್ಲಿಂದಲೋ ಅಲ್ಲಿಂದ ಇಲ್ಲಿಂದ ಒಂದ್ಸಲ ಕೇಳ್ಕೊಂಡು ಬರ್ತೀವಿ. ಆಮೇಲೆ ಇಲ್ಲೂ ಮಾಡ್ಲಿಕ್ಕೆ ಶುರುಮಾಡ್ತೀವಿ. ಆದ್ರೆ ನಾನಿಲ್ಲಿ ಹೇಳೋದು ಮುಖ್ಯವಾಗಿ ಏನೂಂತಂದ್ರೆ — – ಚಾವ್ ಡ್ಯಾನ್ಸರ್ ಹೇಗೆ ಹಗ್ಗದ ಹಾಗೆ ಬಾಡಿ ಬಗ್ಗಿಸ್ತಾನೆ ಅನ್ನೋದನ್ನ. ಆಗ ಅವ್ನು ಎಲ್ಲಾ ತರಹದಲ್ಲೂ ಡೆಡ್ ಬಾಡಿ ಆಗಬಹುದು. ಅಥವಾ ಸ್ಟೇಜ್ ಮೇಲೆ ಈಜಬಹುದು. ಅಥವಾ ಅವ್ನು ಕಂಪ್ಲಿಟ್ಲೀ ಹಗ್ಗವೇ ಆಗ್ಬೋದು. ಒಂದು ರೇಂಜ್ ಆಗ್ಬೋಗು. ಹೀಗೆ ಆಗ್ಬೇಕಾದ್ರೆ ಆಕ್ಟರ್‌ಗೆ ಬಾಡಿ ಮೇಲೆ ಎಷ್ಟು ಕಮಾಂಡ್ ಬೇಕು, ಅದಕ್ಕೆ ಎಷ್ಟು ಟ್ರೇನಿಂಗ್ ಬೇಕು! ಟ್ರೇನಿಂಗ್ ಆಕ್ಟರ್‌ಗೆ ಮುಖ್ಯ ಆದಾಗ ಪ್ರೊಫೆಶನಲ್ ಎಂಬುದು ನಿಜವಾಗಿ ಅರ್ಥ ಆಗತ್ತೆ.

ಆಮೇಲೆ ಸೆನ್ಸಿಬಿಲಿಟಿ. ಸೆನ್ಸ್ ಹೇಗೆ ಬೆಳೆಸೋದು? ಸೆನ್ಸ್ ಬೆಳೆಸೋದು ಮುಖ್ಯವಾಗಿ ಆಬ್ಸರ್ವೇಶನ್‌ನಿಂದ. ಯಾಕೇಂದ್ರೆ ಯಾವಾಗ್ಲೂ ಇನ್ನೊಬ್ರನ್ನ (observe) ಮಾಡ್ಬೇಕಾಗತ್ತೆ. ನಮ್ಗೆ ಆಬ್ಸರ್ವ್‌ಮಾಡ್ಲಿಕ್ಕೆ, ಒಳ್ಳೊಳ್ಳೆ ಕಾಲೇಜ್ ಅಥವಾ ಸ್ಕೂಲುಗಳು ಅಂತಂದ್ರೆ — ಬಸ್ ಸ್ಟಾಂಡ್, ರೇಲ್ವೇ, ಸ್ಟೇಶನ್ ಏರ್ ಪೋರ್ಟ್‌, ಮಾರ್ಕೆಟ್ – ನಿಮ್ಗಲ್ಲಿ ಗೊತ್ತಾಗತ್ತೆ ಯಾವ ರೀತಿ ಅವ್ರು ಶಬ್ದಗಳನ್ನ ಯೂಸ್ ಮಾಡ್ತಾರೆ. ಅಂತ. ರೇಲ್ವೇ ಸ್ಟೇಶನ್‌ನಲ್ಲಿ ಟೀ ಮಾರೋನು ‘ಗರಮ್ ಚಾಯ್, ಗರಮ್ ಚಾಯ್’ (ಒಳ ದಪ್ಪ ಸ್ವರದಲ್ಲಿ) ಅಂತ ಯಾಕೆ ಹಾಗೆ ಹೇಳ್ತಾನೆ? ಈಸಿಯಾಗಿ ಗರಮ್ ಚಾಯ್ ಅಂತ ಯಾಕೆ ಹೇಳ್ಬಾರ್ದು? ಯಾಕೆ ಅಂದ್ರೆ ಅವ್ನಿಗೆ ಗೊತ್ತು ತಾನು ಸೇಲ್ ಮಾಡ್ಬೇಕು. ಗರಮ್ ಚಾಯ್ ಅಂತ ದಪ್ಪ ಸ್ವರದಲ್ಲಿ ಹೇಳಿದ್ರೆ ಎಲ್ಲರ ಸ್ವರಗಳು ಮಧ್ಯದಲ್ಲೇ ಅದು ಕೇಳ್ಸತ್ತೆ. ಸೇಲ್ ಮಾಡುವ ಒಂದು ಕ್ರಿಯೆಟಿವಿಟಿ ನೋಡಿ! ಅದ್ನ ಥಿಯೇಟರ್‌ನಲ್ಲಿ ಹೇಗೆ ತರ್ಬೇಕು? ಆ ಸೆನ್ಸಿಬಿಲಿಟಿ ಬೆಳೀಬೇಕಾದ್ರೆ ನಾವು ಆಬ್ಸರ್ವೇಶನ್ ಮಾಡ್ಬೇಕಾಗತ್ತೆ. ಆ ದೃಷ್ಟಿಯಿಂದ ಆಬ್ಸರ್ವೇಶನ್‌ಗೆ ನಿಜವಾಗಲೂ ಈ ಸೆಂಟರ್ಸ್, ಛಜಣ ಛಿಜಟಿ – ಣಡಿಝ ಆಮೇಲೆ ಕ್ಲಾಸ್‌ನಲ್ಲಿ ಕೂತ್ರೆ ನಮ್ಮ್ ಕ್ಲಾಸ್‌ಮೇಟ್ಸ್ ಹೇಗೆ ಕುತ್ಕೋತಾರೆ ಅನ್ನೋದು ಬಹಳ ಇಂಟರೆಸ್ಟಿಂಗ್ ಆಗತ್ತೆ. ಒಂದು ಸ್ವಲ್ಪ ಟೈಮ್ ಟೀಚರ್ ಇಲ್ದೆ ಇದ್ರೆ ನಾವು ಇದ್ದಕ್ಕಿದ್ದ ಹಾಗೆ ಟೇಬಲ್ನ ತಿರುಗ್ಸಿ, ಒಬ್ರನ್ನೊಬ್ರು ಮುಖ ತಿರುಗಿಸಿಕೊಂಡು, ಹೇಗೆ ಮಾತಾಡ್ತೀವಿ, ಗಲಾಟೆ ಮಾಡ್ತೀವಿ ಅಂತ ಆಬ್ಸರ್ವ್ ಮಾಡಿದ್ರೆ. ಕ್ರಿಯೇಟ್ ಮಾಡಿದ್ರೆ ಅದು ನಾಟಕ ಆಗ್ಬಿಡತ್ತೆ.

ಅಂದ್ರೆ only observation ಬಟ್ ಒಬ್ಸವೇಶನ್ ಆದ್ಮೇಲೆ ಕೂಡ ಅದು ಅಲ್ಲಿಗೇ ನಿಲ್ಲೋದಿಲ್ಲ Daily ಶ್ರಮ ಮಾಡ್ಬೇಕಾಗತ್ತೆ. ಅದ್ಕೋಸ್ಕರ ಒಂದು equipment ಬೇಕಾಗುತ್ತೆ. ಬಾಡಿ ಸೆನ್ಸಿಬಲ್ ಎಕ್ವಿಪ್‌ಮೆಂಟ್. ಇದಕ್ಕೆ ನಿಜವಾಗ್ಲೂ ಓದ್ಬೇಕಾಗತ್ತೆ. ಓದೋದು ಅಂದ್ರೆ ಏನರ್ಥ? ಆಕ್ಟಿಂಗ್ ಬಗ್ಗೆ ಓದೋದು ಅಲ್ಲ. ಜನರ‍ಲ್ ಆಗಿ ಎಲ್ಲಾ ಓದ್ಬೇಕು. ರಾಮಾಯಣ, ಮಹಾಭಾರತ ಓದದೇ ಹೋದ್ರೆ ನೀನು ಏನು ಕ್ರಿಯೇಟ್ ಮಾಡ್ತ್ಯಾ? ಅದ್ರಂತೆ ಕವಿತೆ ಓದದೇ ನೀನೇನು ಕ್ರಿಯೇಟ್ ಮಾಡ್ತಿಯಾ? ಕವಿತೆಗೂ ನಾಟಕಕ್ಕೂ ಬಹಳ ಹತ್ರದ ಸಂಬಂಧ. ದೃಶ್ಯ ಅಂತ ಮೊದ್ಲಿಂದ ಹೇಳ್ತಿದ್ದೀನಿ. ಯಾಕೇಂದ್ರೆ ಹೇಗೆ ಕವಿತೇಲಿ ಇಮೇಜ್‌ಗಳು ಬರತ್ತೋ ಅದೇ ರೀತಿ ಇಮೇಜನ್ನ ನಾವು ಸ್ಟೇಜ್ ಮೇಲೆ ಕ್ರಿಯೇಟ್ ಮಾಡ್ಬೇಕು.