ಜನನ : ೩೦-೧೦-೧೯೫೨ – ಸಕಲೇಶಪುರದಲ್ಲಿ.

ಮನೆತನ : ಸಂಗೀತಗಾರರ ಮನೆತನ. ತಂದೆ ಬಿ.ವೆಂಕಟಸುಬ್ಬಯ್ಯ, ತಾಯಿ ಕಮಲಮ್ಮ, ಗಾಯಕರು. ಹಾರ್ಮೋನಿಯಂ ವಾದಕರು. ಅಜ್ಜ ಚಿತ್ರದುರ್ಗದ ವೀಣೆ ವೆಂಕಟೇಶಶಾಸ್ತ್ರಿಗಳು.

ಗುರುಪರಂಪರೆ : ಪ್ರಾರಂಭಿಕ ಶಿಕ್ಷಣ ವಿ. ನಾಗೇಶರಾವ್ ಹಾಗೂ ಬಿ. ಎಂ. ಮುನಿವೆಂಕಟಪ್ಪನವರಲ್ಲಿ. ಅನಂತರ ಹಿಂದೂಸ್ಥಾನಿ ಸಂಗೀತ ಕಡೆ ಒಲವು ಹರಿಸಿ ಪಂ. ಶೇಷಾದ್ರಿ ಗವಾಯಿಗಳಲ್ಲಿ ಸಂಗೀತ ಶಿಕ್ಷಣ. ಗಂಧರ್ವ ವಿದ್ಯಾಲಯದ ವಿದ್ವತ್ ಹಾಗೂ ಸಂಗೀತ ವಿಶಾರದ ಪದವಿ ಗಳಿಸಿರುತ್ತಾರೆ. ಪಿ. ಕಾಳಿಂಗರಾವ್, ಬಾಳಪ್ಪ, ಹುಕ್ಕೇರಿ., ಮೈಸೂರು ಅನಂತಸ್ವಾಮಿ ಅವರ ಗಾಯನದಿಂದ ಸ್ಫೂರ್ತಿಗೊಂಡು ಸುಗಮ ಸಂಗೀತದ ಕಡೆ ಒಲವು.

ಸಾಧನೆ : ಕನ್ನಡ ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಸಾಹಿತ್ಯ ಅಕಾಡೆಮಿಗಳ ಅಧಿಕೃತ ಕಲಾವಿದರಾಗಿ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ತಮ್ಮದೇ ಆದ ತರಂಗಿಣಿ ವಾದ್ಯವನ್ನು ಆವಿಷ್ಕಾರಗೊಳಿಸಿ ನುಡಿಸುತ್ತಿದ್ದಾರೆ. ಅಲ್ಲದೆ ಹಾರ್ಮೋನಿಯಂ, ತಬಲಾವಾದನದಲ್ಲೂ ಪರಿಶ್ರಮ ಹೊಂದಿ ಲಘು ಸಂಗೀತ ಕಾರ್ಯಕ್ರಮದಲ್ಲಿ ಪಕ್ಕ ವಾದ್ಯ ಸಹ ನುಡಿಸಿರುತ್ತಾರೆ. ಪಿ.ಟಿ.ಎ. ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ, ಆಕಾಶವಾಣಿ ’ಬಿ’ ಹೈ ಶ್ರೇಣಿಯ ಕಲಾವಿದರು.

ಪ್ರಶಸ್ತಿ – ಸನ್ಮಾನ : ಅನೇಕ ಸಂಘ ಸಂಸ್ಥೆಗಳಿಂದ ಗೌರವಿಸಿ ಸನ್ಮಾನಿಸಲ್ಪಟ್ಟಿದ್ದಾರೆ. ೧೯೯೬-೯೭ರ ಸಾಲನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ. ೨೦೦೪ ರಲ್ಲಿ ಕಲಾ ಕೋವಿದ ಪ್ರಶಸ್ತಿ. ೨೦೦೫ ರಲ್ಲಿ ಕಾಳಿಂಗರಾವ್ ಪ್ರಶಸ್ತಿ ಇವರಿಗೆ ಲಭಿಸಿದೆ.