ಜನನ : ೧೨-೧೨-೧೯೩೫

ಮನೆತನ : ಸಂಗೀತಗಾರರ ಮನೆತನ.

ಸಾಧನೆ :  ಹಾರ್ಮೋನಿಯಂ ವಾದಕರಾಗಿ, ಸಂಗೀತ ನಿರ್ದೇಶಕರಾಗಿ, ಸಂಘಟನಕಾರರಾಗಿ ಕಳೆದ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಹರಿಕಥೆ, ನಾಟಕ ಹಾಗೂ ವಾದ್ಯ ವೃಂದಗಳಲ್ಲಿ ಹಾರ್ಮೋನಿಯಂ ವಾದಕರಾಗಿ ಹೆಸರು ಗಳಿಸಿದವರು. ಮುಂದೆ ರಾಗ ಸಂಯೋಜನೆಯನ್ನು ಮಾಡುತ್ತ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ.

ತಮ್ಮದೇ ಆದ ’ಪದ್ಮಶ್ರೀ ಕಲಾ ಮಂದಿರ’ದ ಮೂಲಕ ಅನೇಕ ಯುವ ಪ್ರತಿಭೆಗಳನ್ನು ಕ್ಷೇತ್ರಕ್ಕೆ ಪರಿಚಯಿಸಿರುತ್ತಾರೆ. ಸುಬ್ಬಯ್ಯನಾಯ್ಡು ಗುಬ್ಬಿವೀರಣ್ಣ ಪಂಢರಿಬಾಯಿ, ಕಲ್ಪನಾರವರ ನಾಟಕ ಕಂಪೆನಿಗಳಲ್ಲಿ ಮೊದಮೊದಲಿಗೆ ಹಾರ್ಮೋನಿಯಂ ವಾದಕರಾಗಿ ಅನಂತರ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಪಿ. ಕಾಳಿಂಗರಾಯರಿಂದ ಹಿಡಿದು ಇತ್ತೀಚಿನ ಅನೇಕ ಗಾಯಕರ ಕಾರ್ಯಕ್ರಮಗಳಿಗೆ ವಾದ್ಯ ಸಹಕಾರ ನೀಡಿರುವುದೆ ಅಲ್ಲದೆ ರಾಗ ಸಂಯೋಜನೆ ಸಹ ಮಾಡಿರುತ್ತಾರೆ. ಆಕಾಶವಾಣಿಯ ’ಎ’ ಶ್ರೇಣಿಯ ಸಂಗೀತ ಸಂಯೋಜಕರು. ಅನೇಕ ಧ್ವನಿ ಸುರಳಿಗಳಿಗೂ ರಾಗ ಸಂಯೋಜನೆ ಮಾಡಿರುತ್ತಾರೆ.

ಪ್ರಶಸ್ತಿ – ಸನ್ಮಾನ : ಇವರ ಅಭಿಮಾನಿಗಳ ಕೂಟದಿಂದ ಸಂಗೀತ ಸಾಮ್ರಾಟ ಪ್ರಶಸ್ತಿ, ೧೯೯೭-೯೮ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೯ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೨೦೦೫ ರಲ್ಲಿ ಅನನ್ಯ ಕಲಾಭಿಜ್ಞ ಪ್ರಶಸ್ತಿ ಇವರಿಗೆ ಸಂದಿದೆ.