ಬೀchi ಕಾವ್ಯನಾಮದ ಬೀಮಸೇನರಾಯ ಹುಟ್ಟಿದ್ದು ೧೯೧೩ ರಲ್ಲಿ. ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ಓದಿದ್ದು ಎಸ್.ಎಸ್.ಎಲ್.ಸಿ ವರೆಗೆ ಮಾತ್ರ. ಸರಕಾರೀ ಅಟೆಂಡರ್ ಕೆಲಸವೊಂದರಿಂದ ಆರಂಬಿಸಿ, ಸಿ.ಐ.ಡಿ ಸ್ಪೆಷಲ್ ಬ್ರಾಂಚ್ ನ ಸೂಪರಿಂಟೆಂಡೆಂಟ್ ಆಗಿ ನಿವೃತ್ತಿ ಹೊಂದಿದರು. ೧೯೮೦ ರಲ್ಲಿ ನಿಧನರಾದರು. ಬೀchi ಕನ್ನಡದಲ್ಲಿ ಹಾಸ್ಯ, ವಿಡಂಬನೆಯ ಸಾಹಿತ್ಯಕ್ಕೆ ಹೆಸರಾದವರು. ವೈಚಾರಿಕತೆಯನ್ನು ಹಾಸ್ಯದ ಮೂಲಕ ಕೊಟ್ಟ ಶಕ್ತ ಲೇಖನಿ ಇವರದು. ಕನ್ನಡದಲ್ಲಿ ಓದುವ, ಬರೆಯುವ ಹವ್ಯಾಸವಿಲ್ಲದ ಬೀchi ಗೆ ಕನ್ನಡ ಸಾಹಿತ್ಯ ಒಂದು ಕಾಲಕ್ಕೆ ಅಪರಿಚಿತ ಪ್ರಪಂಚವಾಗಿತ್ತು. ಇವರನ್ನು ಕನ್ನಡದ ಕಡೆ ಸೆಳೆದದ್ದು ಅ.ನ.ಕೃ ಅವರ ಸಂಧ್ಯಾರಾಗ ಕಾದಂಬರಿ.

ಅನಂತರ ಬೀchi ಕನ್ನಡವನ್ನು ಅಬಿವ್ಯಕ್ತಿಯ ಮಾಧ್ಯಮವಾಗಿಸಿಕೊಂಡು ರೈತವಾಣಿ, ವಾರಪತ್ರಿಕೆಯಲ್ಲಿ ಬೇವಿನಕಟ್ಟೆ ತಿಂಮ ಎಂಬ ಶೀರ್ಷಿಕೆಯಡಿಯಲ್ಲಿ ಮತ್ತು ವಿಶಾಲ ಕರ್ನಾಟಕ ದಿನ ಪತ್ರಿಕೆಯಲ್ಲಿ ಕೆನೆ ಮೊಸರು ಎಂಬ ಶೀರ್ಷಿಕೆಯಡಿಯಲ್ಲಿ ಹರಟೆಗಳನ್ನು ಬರೆದರು. ಬಹುತೇಕ ಹಾಸ್ಯ ಬರಹಗಳನ್ನು ಬರೆದ ಇವರು ೬೦ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

೧೯೪೬ ರಲ್ಲಿ ಪ್ರಕಟವಾದ ರೇಡಿಯೋ ನಾಟಕಗಳು ಇವರ ಪ್ರಥಮ ಕೃತಿಗಳು. ಇವರ ದಾಸಕೂಟ ಕನ್ನಡದಲ್ಲಿಯೇ ಮೊತ್ತಮೊದಲ ಹಾಸ್ಯ ಪ್ರಧಾನ ಕಾದಂಬರಿ. ಸತೀಸೂಳೆ, ಸರಸ್ವತಿಸಂಹಾರ, ಖಾದಿಸೀರೆ, ಬೆಂಗಳೂರು ಬಸ್ಸು, ದೇವನ ಹೆಂಡ, ಏರದ ಬಳೆ, ಮೇಡಮ್ಮನ ಗಂಡ, ಟೆಂಟ್ ಸಿನಿಮಾ, ಆರಿದ ಚಹಾ, ಬಿತ್ತಿದ್ದೇ ಬೇವು-ಇವರ ಪ್ರಮುಖ ಕಾದಂಬರಿಗಳು. ಸತ್ತವನು ಎದ್ದು ಬಂದಾಗ-ಕಾಲ್ಪನಿಕವಾದ ಅಸಂಬದ್ಧ ಪತ್ತೇದಾರಿ ಕಾದಂಬರಿ. ಅ.ನ.ಕೃ ಅವರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಬೀchi ವಿಶಿಷ್ಠ ವ್ಯಂಗ್ಯ ಶೈಲಿಯನ್ನು ಮಾತ್ರ ಉಳಿಸಿಕೊಂಡು ಜನಪ್ರಿಯತೆ, ರೋಚಕತೆ, ರೋಮಾಂಚನಗಳ ವೈಭವದ ಜಾಡಿನಲ್ಲಿ ಬರೆಯತೊಡಗಿದರು. ಹನ್ನೊಂದನೆಯ ಅವತಾರ, ರೇಡಿಯೋನಾಟಕಗಳು- ಇವರಿಗೆ ತುಂಬ ಕೀರ್ತಿ ತಂದು ಕೊಟ್ಟ ಕೃತಿಗಳು ತಮ್ಮನ್ನೇ ತಿಂಮ ನೆಂದು ಕರೆದುಕೊಂಡು, ಈ ಪಾತ್ರವನ್ನು ಮುಂದಿಟ್ಟು ಕೊಂಡು ಬರೆದ ತಿಂಮನ ತಲೆ, ಅಂದನಾ ತಿಂಮ, ತಿಂಮಿಕ್ಷನರಿ, ಬೆಳ್ಳಿ ತಿಮ್ಮ ೧೦೮ ಹೇಳಿದ, ಅಮ್ಮಾವ್ರ ಕಾಲ್ಗುಣ, ಚಿನ್ನದ ಕಸ, ಹುಚ್ಚು ಹುರುಳು, ಉತ್ತರ ಭೂತ, ದಂತ ನಗೆ ಹನಿಗಳ ಸಂಕಲನಗಳು ಪ್ರಸಿದ್ಧವಾಗಿವೆ. ಇವರ ಮೊದಲ ನಾಟಕ ಯದ್ವಾತದ್ವಾ ಅಥವಾ ದೇವರ ಆತ್ಮಹತ್ಯೆ, ನನ್ನ ಭಯಾಗ್ರಪಿ, ಆತ್ಮಕಥನ, ತಿಂಮಾಯಣ, ಅಬಿನಂದನ ಗ್ರಂಥ.

ಕಥೆ ಬರೆಯಲಿ, ಹರಟೆಬರೆಯಲಿ, ನಾಟಕ, ಕಾದಂಬರಿಯನ್ನೇ ಬರೆಯಲಿ ಬೀchi ಯವರ ಮೊದಲ ಗಮನ ಮಾತಿನ ಕಡೆಗೆ. ಹೀಗಾಗಿ ಅವರ ವಿಚಾರಗಳ ಸಂಚಾರದ ವೇಗ ಕಡಿಮೆ. ಮಾತಿನ ಪ್ರವಾಹದಲ್ಲಿ ಸೆಳೆತ ಹೆಚ್ಚು.ಬೀchi ಯವರ ತಿಂಮನ ತಲೆ, ಕೃತಿಗೆ ಮದ್ರಾಸ್ ಸರ್ಕಾರದ ಪ್ರಥಮ ಬಹುಮಾನ ದೊರೆತಿದೆ. ದೆಹಲಿಯಲ್ಲಿ ೧೯೫೯ ರಲ್ಲಿ ನಡೆದ ಆಕಾಶವಾಣಿ ಸಮಾರೋಪದಲ್ಲಿ ಕನ್ನಡದಲ್ಲಿ ಸಣ್ಣಕಥೆ ಬರೆದು ಓದಿ ಮೆಚ್ಚುಗೆ ಪಡೆದರು. ಐದನೆಯ ಆಫ್ರೋ-ಏಷ್ಯನ್ ಬರಹಗಾರರ ಸಮ್ಮೇಳನವು(೧೯೭೩) ಸೋವಿಯತ್ ರಷ್ಯಾದಲ್ಲಿ ನಡೆದಾಗ ಭಾರತವನ್ನು ಪ್ರತಿನಿದಿಸಿದ್ದರು. (ದೇವರಿಲ್ಲದ ಗುಡಿ, ಇವರ ರಷ್ಯಾ ಪ್ರವಾಸದ ಕಥನ, ಹಿಂದಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದವಾಗಿದೆ.)

ತಾಷ್ಕೆಂಟಿನಲ್ಲಿ ನಡೆದ ಪ್ರಗತಿಶೀಲ ಬರಹಗಾರರ ಸಮ್ಮೇಳನದಲ್ಲಿ¹àchi ಭಾಗವಹಿಸಿ, ಪ್ರಬಂಧವನ್ನು ಮಂಡಿಸಿದರು.