ತಾನೇ ಬರೀತಾನೋ ತನ್ನಾತ್ಮ:

ರೀತಿಲೇ ನಡಿಬೇಕೂ ತಮ್ಮ
ತಾನೇ ಬರಿತಾನೋ ತನ್ನಾತ್ಮ      ಪ

ಕಾಮ ಕ್ರೋಧ ಮದ ಮತ್ಸರ
ಡಂಬಚಾರಿ ಅಳಿಬೇಕೋ
ಗುರುವಿಗಿ ನೆನೆಬೇಕೋ ತಮ್ಮಾ
ತಾನೇ ಬರಿತಾನೋ ತನ್ನಾತ್ಮ     ೧

ಸಂಸಾರ ಮಾಡಬೇಕೋ
ಕೆಸರಿನೊಳು ಬೀಳಬೇಕೊ
ಕಂಬಾರ ಹುಳದಾಂಗ
ಬಯಲಿ ಬೀಳಬೇಕೊ ತಮ್ಮ
ತಾನೇ ಬರಿತಾನೋ ತನ್ನಾತ್ಮ      ೨

ಹುಮನಾಬಾದಿಗಿ ಹೋಗಬೇಕೋ
ದೇವಿ ದಾಪನ ಗುಡಿಯೊಳಗ
ತಾನೇ ಬರಿತಾನೋ ತನ್ನಾತ್ಮ      ೩

ಏಸು ದಿನ ಬಾಡಿಗೆ ಇದ್ದೆಣ್ಣ:

ಈ ದ್ಯಾಹದೊಳಿಂದು ಏಸುದಿನ ಬಾಡಿಗಿ ಇದ್ದೆಣ್ಣ
ಏಸೋದಿನ ಬಾಡಿಗಿದ್ದಿ ತಾಸೆ ಬಡದಾಂಗೆ
ತಾಳೋ ಜನ್ಮ   ||ಪಲ್ಲವಿ||

ಇದೇ ಜನುಮಕ ದುಡಿದು ದುಡಿದು
ಮನಿಯ ಬಿಟ್ಟು ನಡದಿಯಣ್ಣ         ೧

ಆರು ಮಂದಿ ಮಕ್ಕಳಿವರಣ್ಣ
ಬಲು ಸೊಕ್ಕಿನವರು ಉಕ್ಕುತ್ತ
ಹೊರಹೊರಗ ತಿರುಗಿಹರು
ಠಕ್ಕ ಮೂರ್ಖರು ಕದನಗಡಿಕಿಯರು
ಫಕ್ಕನೆ ಇರುವಂತಾದಣ್ಣ               ೨

ಎಷ್ಟು ನೆರೆಹೊರೆ ಬಂಧುಬಳಗಣ್ಣ
ಎಲ್ಲಬಿಟ್ಟು ನಡೆದಿಯಣ್ಣ
ಉಟ್ಟ ದೋತರ ಕಳೆದು ಬಂದರಣ್ಣ
ತೊಂಬತ್ತಾರು ಮನಿಯ ಬಾಗಿಲ
ಗಂಭಾವಿ ಚಿಲಕ ಗಂಭೀರಾದ
ಮನಿಯ ಹೇರ‍್ಯಾರ
ಜಂಬದ್ದೀಪಹಚ್ಚಿ
ಅಷ್ಟಾಂಗ ಗಳಿಯಣ್ಣ
ಏಸುದಿನ ಬಾಡಿಗಿದ್ಯೆಣ್ಣ
ಈ ದೆಹ್ಯಾದೊಳಿಂದು                  ೩

ಬೂದಿ:

ಈ ಬೂದಿ ಧರಿಸಿದರ
ಹೋಗ್ಯಾತ ಈ ರೋಗ     ಪ

ಬೂದಿಕಿಂತ ಚೆನ್ನ
ಯಾವೂದ!
ಗಂಗಾಳ ತಂಬಿಗೆ ಚರಗರ ತಾಂಬರ ಕೊಡ
ಝಳ ಝಳ ಅನಿಸೀತೇ ಬೂದಿ
ಅಟ್ಟದಾ ಗಡಿಗೀಗಿ ಪಟ್ಟಿಯ ಬರದಾದ
ಅಮೃತ ಅನಿಸಿತು ಈ ಬೂದಿ
ಪಾರ್ವತಿ ಪರಮೇಶ್ವರ ನಡುವಿನ
ನಂದೀಶ್ವರ ತ್ರಿಶೂಲ ಅನಿಸಿತಾ ಬೂದಿ.

ಹಾವು ಕಚ್ಚಿತು :

ಹಾವು ಕಚ್ಚಿ ಗುರು ಕರುಣದಿಂದ ಉಳಿದೆ
ಅನುಭವದಿಂದ ನಾ ತಿಳಿದೆ || ಪ ||
ಹೊತ್ತಿಗೆ ಓದಲಾಕ ಹೊಸಹಳ್ಳಿಗೆ ಹೋಗುತ್ತಿದ್ದೆ
ಎಚ್ಚರ ತಪ್ಪಿದ ಜೊತೆಯಲಿಬ್ಬರು
ಜೋರಾಗಿ ಬರುತ್ತಿದ್ದೆ
ಚಿತ್ತಶೇಖರನ ಹೊತ್ತಿಗೆ ಹಿಡಿದು
ಸತ್ತೆ ಹೋಗುತ್ತಿದ್ದೆ.
ಹೂವಿನಹಳ್ಳಿ ಮುಂದಿನಹಳ್ಳ
ಇಳಿಯುತ್ತಿದ್ದೆ.
ತುಸು ನಸುಕಾಗಿತ್ತು
ನಸುಕಿನೊಳಗ ಕೊನಿ ನಸುಕಾಗಿತ್ತು
ಆಸಲಿಯಾಗಿತ್ತು.
ಉಸಕೀನ ಮ್ಯಾಲ
ಬುಸು ಬುಸು ಬರುತ್ತಿತ್ತು
ತುಸು ಕೆಂಪಿನ ಮ್ಯಾಲ
ವಿಷವ ಕಾರುತ್ತಿತ್ತು,
ತುಸು ಚೂರಿ ಹೋಯಿತು
ಮಾತನಾಡುತ ಮನಿಯ ದಾರಿ ಹಿಡಿದೆ
ಏನಿಲ್ಲ ಏಳೆಂದ ತುಸು ಕಣ್ಣಿಗಿ
ಜೋರ ಬಂದಿತೆಂದ
ಬಡೆಯ ಸೋಮಲಿಂಗ
ಗಡಿಯ ಬಸವಲಿಂಗ
ಕಡಿಗಿ ಮಾಡಿತಂದ’

ಬುಡಕಿಯವರೊಡನೆ ಸಂದರ್ಶನ:

ಕರ್ನಾಟಕದ ಎಲ್ಲ ಕಡೆಗಳಲ್ಲಿ ವಾಸಿಸುತ್ತಿರುವ ಈ ಬುಡಬುಡಕಿಯರು ವಿಶೇಷವಾಗಿ ವಿಜಾಪುರ, ಗುಲಬರ್ಗ, ಬೀದರ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ನಾನು ವಿಜಾಪುರ, ಬೀದರ, ಗುಲಬರ್ಗ ಜಿಲ್ಲೆಯಲ್ಲಿರುವ ’ಬುಡಬುಡಕಿ’ ಜನಾಂಗಕ್ಕೆ ಭೇಟಿ ನೀಡಿ ಅವರ ಇಂದಿನ ಸ್ಥಿತಿ-ಗತಿಗಳನ್ನು ಅರಿತು ಇಲ್ಲಿ ವಿವರಿಸಲಾಗಿದೆ. ಮುಖ್ಯವಾಗಿ ಉಡಚಣ ತಾಲೂಕು ಅಫಜಲಪುರ ಜಿಲ್ಲಾ ಗುಲಬರ್ಗದಲ್ಲಿ ಹೆಚ್ಚಾಗಿ ಈ ಜನರು ವಾಸಿಸುತ್ತಾರೆ. ಅದರಲ್ಲಿ ಓರ್ವ ವಿದ್ಯಾವಂತ ತರುಣ ಬುಡಬುಡಕಿ ಜಾತಿಯ ವ್ಯಕ್ತಿಗೆ ಭೇಟಿಯಾಗಿ ವಿವರಣೆ ಸಂಗ್ರಹಿಸಲಾಗಿದೆ.

೧)       ಶ್ರೀ ಚಂದ್ರಕಾಂತ ಮಾರುತಿ ವಾಘ್ಮರೆ, ಬಿ.ಎ., ಬಿಇಡಿ                            (೪೦ ವರ್ಷ)
ಶಿಕ್ಷಕರು, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ
ಕರಜಗಿ, ತಾಲೂಕು ಅಫಜಲಪುರ, ಜಿಲ್ಲಾ ಗುಲಬರ್ಗ

೨)       ತುಕಾರಾಮ ಮಾರುತಿ ವಾಘ್ಮರೆ, ಬುಡಬುಡಕಿ                                   ೫೯ ವರ್ಷ
ಗಂಗಾಬಾಯಿ ವಾಘ್ಮರೆ                                                          ೮೦ ವರ್ಷ
ಶಿವಬಾಯಿ                                                                      ೭೫ ವರ್ಷ
ಶಾಂತಾಬಾಯಿ ಮೌಲತಾಯಿ                                                  ೬೦ ವರ್ಷ
ಸುಗಂದಭಾಯಿ                                                                  ೬೫ ವರ್ಷ
ಇವರೆಲ್ಲರೂ ತುಂಬಾ ಹಿರಿಯರು, ಉಡಚಣ ತಾಲೂಕು ಅಫಜಲಪುರದಲ್ಲಿ ವಾಸಿಸುತ್ತಾರೆ.

೩)       ಸುಗಲಾ ಬಾಯಿ ಮಾರುತಿ ಕಾಂವಳೆ                                            ೬೦ ವರ್ಷ

೪)       ಗಂಗಾಬಾಯಿ ಏತಾಳಜಿ                                                         ೪೦ ವರ್ಷ
ನಾದ, ತಾಲೂಕು ಸಿಂದಗಿ, ಜಿ: ವಿಜಾಪುರ

೫)       ದಶರಥ ದೊಂಡಿಬಾ ಬಿಸೆ                                                        ೭೫ ವರ್ಷ

೬)       ಕಮಲಾಬಾಯಿ                                                                   ೬೫ ವರ್ಷ

೭)       ಭೀಮರಾವ್ ವಾಸ್ಟರ್                                                            ೬೦ ವರ್ಷ

೮)       ಠಕ್ಕಪ್ಪ ಕಾಂಬಳೆ, ಮಂಗಳೂರು                                                 ೫೫ ವರ್ಷ

೯)       ಭೀಮರಾವ್ ಕಾಂಬಳೆ,ಶಹಾಪುರ                                                ೭೦ ವರ್ಷ

೧೦)     ಯಲ್ಲಪ್ಪ ಹೊಗಾಡೆ, ಹಿರೇಬೆನ್ನೂರು                                              ೩೫ ವರ್ಷ

೧೧)     ಎನ್.ಸಿ. ಸಾಗರೆ ಬೋಸಗಾ, ಡಯಾಟ್                                         ೫೭ ವರ್ಷ

೧೨)     ತುಕಾರಾಮ ಮಾರುತಿ ವಾಘ್ಮರೆ                                                 ೫೮ ವರ್ಷ

೧೩)     ಶಾಂತಾಬಾಯಿ ಲಚ್ಯಾಣ                                                        ೫೦ ವರ್ಷ

೧೪)     ಬಸವಂತ ಕಾಶಿನಾಥ                                                            ೩೦ ವರ್ಷ

೧೫)     ಜ್ಞಾನೇಶ್ವರ ಕಾಶಿನಾಥ                                                           ೩೫ ವರ್ಷ

೧೬)     ಗೋಪಾಲ ತಿಪ್ಪಣನನ್ನವರೆ                                                       ೩೫ ವರ್ಷ

೧೭)     ಪದ್ಮಾವತಿ ತಿಪ್ಪಣ್ಣನನ್ನವರೆ                                                      ೩೦ ವರ್ಷ

೧೮)     ಸಿದ್ರಾಮ ಬಸಂತ ಸಿಂಧೆ                                                         ೫೫ ವರ್ಷ

೧೯)     ಗಂಗಾಬಾಯಿ ಸಿದ್ರಾಮ ಸಿಂಧೆ                                                  ೫೦ ವರ್ಷ

೨೦)     ಚಂದ್ರಕಾಂತ ಶಿವಪ್ಪ ವಾಸ್ಟರ್                                                   ೩೮ ವರ್ಷ

೨೧)     ತುಳಜಾಬಾಯಿ ಚಂದ್ರಕಾಂತ                                                    ೩೦ ವರ್ಷ

೨೨)     ಮಾತಾರಿ ಶಿವಪ್ಪ ವಾಸ್ಟರ್                                                      ೪೫ ವರ್ಷ

೨೩)     ಬಾಳು ಪರಶುರಾಮ ವನ್ನವರೆ                                                   ೪೫ ವರ್ಷ

೨೪)     ದತ್ತೋ ಸಿದ್ರಾಮ ವನ್ನವರೆ

೨೫)     ಭೀಮರಾವ ಕೊಂಡಿಬಾ ವನ್ನವರೆ                                                ೪೫ ವರ್ಷ

೨೬)     ಸುಖಬಾಯಿ ಭೀಮರಾವ ವನ್ನವರೆ                                               ೪೦ ವರ್ಷ

೨೭)     ತಿಪ್ಪಣ್ಣ ಶಂಕರ ವಾಸ್ಟರ್                                                         ೪೫ ವರ್ಷ

೨೮)     ಸಾವಿತ್ರಿ ತಿಪ್ಪಣ್ಣ ವಾಸ್ಟರ್                                                        ೩೮ ವರ್ಷ

೨೯)     ಭೀಮರಾವ ಸಿದ್ರಾಮ ವಾಘ್ಮರೆ                                                  ೫೨ ವರ್ಷ

೩೦)     ಸುಮಿತ್ರಾ ಭೀಮರಾವ ವಾಘ್ಮರೆ                                                 ೪೮ ವರ್ಷ

೩೧)     ತಿಪ್ಪಣ್ಣ ಶಂಕರ ವಾಸ್ಟರ್                                                         ೬೦ ವರ್ಷ

೩೨)     ಸಾವಿತ್ರಿ ಉಡಚಣ                                                               ೩೮ ವರ್ಷ

೩೩)      ಹುಸೇನಿ ಸಿದ್ರಾಮ ವಾಘ್ಮರೆ

೩೪)     ಹುಸೇನಿ ಮೊಕ್ಕಾಂ ಮಾಶ್ಯಾಳ                                                ೩೦ ವರ್ಷ

೩೫)     ನನ್ನವರೆ

೩೬)     ವಿಠಲ ನನ್ನವರೆ

೩೭)     ಅರ್ಜುನ ಬಿಸೆ ಮಣ್ಣೂರು

೩೮)     ಲಕ್ಷ್ಮಣ ಗೌರಪ್ಪ ವಾಘ್ಮರೆ                                                        ೪೮ ವರ್ಷ
ಕಕ್ಕಳ ಮೇಲಿ, ತಾ : ಸಿಂದಗಿ

೩೯)      ಪುತಳಾಬಾಯಿ ಲಕ್ಷ್ಮಣ ವಾಘ್ಮರೆ                                                ೪೨ ವರ್ಷ

೪೦)     ನಾಮದೇವ ಗೌರಪ್ಪ ನನ್ನವರೆ                                                   ೫೮ ವರ್ಷ

೪೧)     ಯಮುನಾಬಾಯಿ ನನ್ನವರೆ                                                      ೫೨ ವರ್ಷ

೪೨)     ಅಂಬಾಜಿ ಮಾರುತಿ ನನ್ನವರೆ                                                    ೩೫ ವರ್ಷ

೪೩)     ಶೀಲಬಾಯಿ ನನ್ನವರೆ                                                            ೩೨ ವರ್ಷ

೪೪)    ಶಿವಾಜಿ ಮಹದೇವ ನನ್ನವರೆ                                                     ೩೫ ವರ್ಷ

೪೫)    ತುಳಸಾಬಾಯಿ ಶಿವಾಜಿ ನನ್ನವರೆ                                               ೩೦ ವರ್ಷ

೪೬)     ಯಶವಂತ ಅರ್ಜುನ ನನ್ನವರೆ                                                   ೩೮ ವರ್ಷ

೪೭)     ಶರಣುಬಾಯಿ ಯಶವಂತ                                                        ೩೨ ವರ್ಷ

೪೮)     ಶಿವಾಜಿ ವಿಠ್ಠಲ ನನ್ನವರೆ

೪೯)     ಮಲ್ಲಿಕಾರ್ಜುನ ಮುಕುಂದ ವಾಘ್ಮರೆ                                             ೪೭ ವರ್ಷ

೫೦)     ಸಂಗೀತ ಮಲ್ಲಿಕಾರ್ಜುನ                                                         ೪೩ ವರ್ಷ

೫೧)     ಅಂಬಾಜಿ ಅರ್ಜುನ ನನ್ನವರೆ                                                     ೫೫ ವರ್ಷ

೫೨)     ರುಕ್ಮವ್ವ ಅಂಬಾಳಿ ನನ್ನವರೆ

೫೩)     ಕೃಷ್ಣಾಬಾಯಿ ಕಾಶೀನಾಥ ವಾಘ್ಮರೆ                                              ೭೦ ವರ್ಷ

೫೪)    ಸುಗಂಧಾಬಾಯಿ ತಿಪ್ಪಣ್ಣ ನನ್ನವರ                                               ೬೫ ವರ್ಷ

೫೫)    ಗಂಗಮ್ಮ ಮಾರುತಿ ವಾಘ್ಮರೆ                                                    ೮೦ ವರ್ಷ

೫೬)     ಶಾಂತಾಬಾಯಿ ತುಕಾರಾಮ ವಾಘ್ಮರೆ                                          ೬೫ ವರ್ಷ

೫೭)     ಯಮುನಾಬಾಯಿ ಮಹಾದೇವ ವಾಘ್ಮರೆ                                        ೭೦ ವರ್ಷ

೫೮)     ಶಿವಬಾಯಿ ನಾಮದೇವ ವಾಘ್ಮರೆ                                               ೬೦ ವರ್ಷ

ಇವರೆಲ್ಲರೂ ಹಿರಿಯ ಬುಡಬುಡಕಿ ಜನಾಂಗದ ಆಧಾರ ಸ್ಥಂಭದಂತೆ ಇದ್ದಾರೆ. ಇವರ ಅನುಭವ ಹೀಗೆ ಇದೆ.

’ನಮ್ಮ ಜನಾಂಗ ಭವಿಷ್ಯ’ ಹೇಳುವ ಕಾಯಕವನ್ನು ಬಲವಾಗಿ ನಂಬಿಕೊಂಡು ಬಂದವರು’ ಹಕ್ಕಿಶಕುನ’ ಹೇಳಲು ಇಡೀ ರಾತ್ರಿಯಲ್ಲಿ ಜಾಗೃತರಾಗಿದ್ದು ಹಕ್ಕಿ ನುಡಿದುದನ್ನು ಆಲಿಸಿ ತಿಳಿದುಕೊಂಡು ಬರುವ ಕಂಟಕವನ್ನೂ ನಿವಾರಿಸುತ್ತಾ ಬಂದರು. ತಾವು ಹೇಳುವ ಮಾತು ಖರೇ ಬಂದರೆ ಅದೇ ಅವರಿಗೆ ಖುಷಿ ಕೊಟ್ಟಿತು. ಈ ಖುಷಿಯಲ್ಲಿ ಅವರ ಇಡೀ ಜೀವನ ಕಳದುಹೋಯಿತು. ಅವರು ಎಂದೂ ಹೊಲ-ಮನೆ, ದನ-ಕರು ಇತ್ಯಾದಿ ಕಡೆಗೆ ಲಕ್ಷ್ಯಗೊಡಲಿಲ್ಲ. ಹೊಟ್ಟೆಗೆ, ಬಟ್ಟೆಗೆ ಹವಾರಾದರೆ ಸಾಕು ಎನ್ನುವ ಜನಾಂಗದವರು. ಹೀಗಾಗಿ ಅವರು ಸ್ಥಿರ ಆಸ್ತಿ ಮಾಡಲಿಲ್ಲ. ತಮ್ಮ ಮಕ್ಕಳಿಗೂ ಶಿಕ್ಷಣ ಕೊಡಿಸಲಿಲ್ಲ. ಅದಕ್ಕಾಗಿ ಅವರು ನೌಕರಿ-ಚಾಕರಿಯಿಂದ ದೂರೇ ಉಳಿದರು. ಕೆಲವರು ದೊಡ್ಡ ಊರುಗಳಲ್ಲಿ ಇದ್ದವರು ತಮ್ಮ ಮಕ್ಕಳಿಗೆ ಶಾಲೆ ಕಲಿಸಿದರು. ನೌಕರು ಮಾಡುವ ಮಂದಿ ತಮ್ಮ ಕಾಯಕ ಬಿಟ್ಟಿದ್ದಾರೆ ಎಂದು ಶಿವಬಾಯಿ ನಾಮದೇವ ವಾಘ್ಮರೆ ಎಂಬ ಎಪ್ಪತ್ತು ವರ್ಷದ ಮುದುಕಿ ತನ್ನ ಅನುಭವ ಹೇಳಿದಳು.

ಬುಡಬುಡಕಿಯರು ಅಂದು-ಇಂದು :

ಅಂದು ಅಜ್ಞಾನ, ಅನಕ್ಷರತೆ, ಮೂಢನಂಬಿಕೆ, ಗೊಡ್ಡು ಆಚರಣೆಗಳ ಗೊಂದಲದಲ್ಲಿ ಮನುಷ್ಯ ಮಂಕನಾಗುತ್ತಿದ್ದ. ಅವನಿಗೆ ಸರಿ-ತಪ್ಪುಗಳ ಕಲ್ಪನೆಯೇ ಆಗುತ್ತಿರಲಿಲ್ಲ. ಯಾರು ಏನು ಹೇಳುತ್ತಿದ್ದರೋ ಅವರಂತೆ ತಲೆ ಹಾಕುತ್ತಿದ್ದ. ಬಹುದೇವತೋಪಾಸನೆಯಲ್ಲಿ ಕಂಡ ಕಂಡ ದೇವರಿಗೆ ಕೈ ಮುಗಿದರೂ ಏನನ್ನೂ ಕಾಣದೆ ಕಂಗಲಾಗಿ ಮುಂದೆ ಹೇಗೆ ಎಂದು ಕನವರಿಸುತ್ತಿರುವಾಗ ’ಜಯವದ ಜಯವದ ’ ’ಬಲಾಬರತೈತಿ, ಬಲಾಬರತೈತ” ಎಂದು ಹೇಳುತ್ತ ಬರುತ್ತಿದ್ದ. ಈ ’ಬುಡಬುಡಕಿ’ ಯ ಮಾತು ಅವನಿಗೆ ಆಹ್ಲಾದವೆನಿಸಿರಬಹುದು. ಆ ಕಾಲದಲ್ಲಿ ಇವನ ಕಸುಬು ತುಸು ಫಲವತ್ತಾಗಿದ್ದು ಕುಟುಂಬ ಪೋಷಣೆಗೆ ದಾರಿ ಆಗಿತ್ತು. ಹಕ್ಕಿ ಪಣ ಕಟ್ಟುವುದು ಜಿದ್ದಾಜಿದ್ದಿನಿಂದ ಭವಿಷ್ಯ ಹೇಳುವುದು. ಜನರು ಇವರ ಮಾತು ನಂಬಿ ಭವಿಷ್ಯ ಕೇಳುವುದೂ ರಂಜನೀಯವಾಗಿ ನಡೆದು ಬಂದಿತು. ಬರುಬರುತ್ತಾ ಕಾಲ ಬದಲಾಯಿತು. ವೈಚಾರಿಕತೆಯತ್ತ ಮನುಷ್ಯ ಮುಖಮಾಡಿದ, ವೈಜ್ಞಾನಿಕ ಮನೋಭಾವನೆಯೂ ಬೆಳೆಯಿತು. ಇಂತಹ ಭವಿಷ್ಯ ಶಕುನ ಹೇಳುವ, ಕೇಳುವ ಕಾಲ ಹಿಂದೆ ಸರಿಯಿತು. ವೈಚಾರಿಕ ಮನೊಭಾವನೆ ವೈಜ್ಞಾನಿಕ ದೃಷ್ಟಿಯುಳ್ಳ ಈ ಜನರು ಬುಡಬುಡಕಿಯರ ಮಾತು ಬುಡತನಕ್ಕೆ ಸುಳ್ಳು’ ಎಂದು ಅಭಿಪ್ರಾಯ ಪಡಹತ್ತಿದರು. ಆದರೂ ಈ ಬುಡಬುಡಕಿಯರು ತಮ್ಮ ಕಸುಬು ಬಿಡಲಿಲ್ಲ. ಭವಿಷ್ಯ ಹೇಳುವುದನ್ನೂ ನಿಲ್ಲಿಸಲಿಲ್ಲ. ಹಾಗೇ ಮುಂದುವರೆಸಿಕೊಂಡು ಬಂದರು. ಅವನ ಈ ಕಸುಬು ತೀರಾ ಹಳೆಯದೆಂದು ಅವನು ತೊಟ್ಟಿರುವ ಕೋಟು, ಕಟ್ಟಿರುವ ಪೇಟಾ ಸಾಕ್ಷಿ ಎಂದು ಬೇರೆ ಹೇಳಬೇಕಾಗಿಲ್ಲ.

ಇಂದು ಬುಡಬುಡಕಿಯರು ಜಾಗೃತವಾಗುತ್ತಲಿರುವ ಈ ಕಾಲದಲ್ಲಿ ತುಂಬಾ ಸಂಕಟದಲ್ಲಿದ್ದಾರೆ. ಹಳೆಯದನ್ನು ಬಿಡಲಿಲ್ಲ. ಹೊಸದನ್ನು ಅಳವಡಿಸಿಕೊಳ್ಳಲಿಲ್ಲ. ಅವನ ಹಳೆಯ ವೇಷ-ಭೂಷಣಕ್ಕೆ ಅವನ ಡಮರುಗದ ನಾದಕ್ಕೆ ಇಂದು ಮರುಳಾಗುವ ಜನರು ಇಲ್ಲ. ಅದರಂತೆ ಅವನ ಭವಿಷ್ಯ ಕೇಳುವ ಜನರೂ ಇಲ್ಲವೆಂದು ಹೇಳಬಹುದು.

ಮೊದಲೇ ಬಡವರು, ಹೊಲ-ಮನೆ, ಆಸ್ತಿ-ಪಾಸ್ತಿಗಳನ್ನೂ ಹೊಂದದ ಈ ಜನರು ಈ ಕಸುಬನ್ನು ನಂಬಿ ನಿಜವಾಗಿ ಕಂಗಾಲಾಗಿದ್ದಾರೆ. ಅಂದು ಅದು  ಕಸುಬು. ಅವರ ಜನಮೆಚ್ಚುಗೆಯಿಂದ ಕಾಯಕವಾಗಿ ಪರಿಣಮಿಸಿತ್ತು. ತಕ್ಕ ಪ್ರತಿಫಲವೂ ಪ್ರಾಪ್ತಿಯಾಗುತ್ತಿತ್ತು.

’ಕಸುಬು ಕಾಯಕಕ್ಕೆ ’ ಪ್ರತಿಯಾಗಿ ಕಾಣಿಕೆ ಬರುತ್ತಿತ್ತು. ಈ ಜನರು ನೆಮ್ಮದಿಯಾಗಿ ಬಾಳಿದರು. ಬಾಳುತ್ತ ಬಂದರು.

ಇಂದು ಬಡತನ, ಅನಕ್ಷರತೆ, ಅಜ್ಞಾನದಲ್ಲಿದ್ದ ಈ ಬುಡಬಡುಕಿಯರು ಭವಿಷ್ಯ ಹೇಳುತ್ತ ಭಿಕ್ಷೆ ಬೇಡುತ್ತಿದ್ದಾರೆ. ಹಳ್ಳಿಯಲ್ಲಿ ಭವಿಷ್ಯ ಕೇಳುವವರು ಇಲ್ಲದ್ದಕ್ಕೆ ಇವರಿಗೆ ಬೆಲೆಯೂ ಇಲ್ಲ. ಕೆಲವರು ವೇಷ ಬದಲಿಸಿ ಬುಡಬುಡಕಿಯರು ಎಂಬ ಶಬ್ದ ಬಿಟ್ಟುಕೊಟ್ಟು ಭವಿಷ್ಯ ಹೇಳುವವರು ಎಂದು ಅಲ್ಲಲ್ಲಿ ಸಂಚರಿಸಿ ಭವಿಷ್ಯ ಹೇಳುತ್ತಿದ್ದಾರೆ. ಇನ್ನು ಕೆಲವರು ಶಿಕ್ಷಣ ಪಡೆದು ಅಲ್ಲಲ್ಲಿ ಶಿಕ್ಷಕರಾಗಿ, ಪೊಲೀಸರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ವ್ಯಾಪಾರ, ಉದ್ಯೋಗದಲ್ಲಿ ತೊಡಗಿದ್ದಾರೆ. ಬುಡಬುಡಕಿ ಎಂದು ಹೇಳಿಕೊಳ್ಳುವವರು ತಳ ಬುಡವರಲ್ಲದೆ ಬದುಕುತ್ತಿದ್ದಾರೆ, ಇದು ಅತ್ಯಂತ ಶೋಚನೀಯ ಸಂಗತಿ. ಒಂದು ಕಡೆ ನಿಂತೇನೆ ಎಂದರೆ ನೆಲೆ ಇಲ್ಲ. ಭವಿಷ್ಯ ಹೇಳೇನೇ ಎಂದರೆ ಬೆಲೆ ಇಲ್ಲ. ಹೀಗೆ ನೆಲೆ ಬೆಲೆಗಳನಜ್ನು ಕಳೆದುಕೊಂಡ ಈ ಬುಡಬುಡಕಿಯರು ಭವಿಷ್ಯ ಹೇಳುತ್ತ ಭಿಕ್ಷೆ ಬೇಡುತ್ತಿದ್ದಾರೆ ಇದು ಶೋಚನೀಯ ಸಂಗತಿ.

ಸಾರಾಂಶ :

ಹಿಂದಿನ ಕಾಲದಲ್ಲಿ ಜನರಲ್ಲಿ ಘನತೆ ಇತ್ತು. ಜನ ಮೌಲ್ಯಗಳನ್ನು ಎತ್ತಿಹಿಡಿದು ಬದುಕಿದ. ಅವರ ಬದುಕೂ ಪವಿತ್ರವಾಗಿತ್ತು. ಬದುಕು ಪವಿತ್ರವಾಗಿರ ಬೇಕಾದರೆ ಇರ್ದಿಷ್ಟವಾದ ಕಾರ್ಯಕಲಾಪಗಳಿರಲೇ ಬೇಕು. ಜೀವನದ ಮೌಲ್ಯಕ್ಕೆ ಕುಲಕುಸುಬುಗಳೇ ಕೊಂಡಿಯಾಗಿದ್ದವು. ಆದರಿಂದಲೇ ಕುಲ-ಛಲಗಳು ಮೆರೆದವು, ಕಸುಬುಗಳು ಕಂಗೊಳಿಸಿದವು. ಈ ಹಿನ್ನೆಲೆಯಲ್ಲಿ ಬುಡಬುಡಕಿ ಒಂದು ಕಸುಬು ಎಂದು ಹೇಳಬಹುದು. ಭೂತ-ಭವಿಷ್ಯತೆ, ವರ್ತಮಾನಗಳನ್ನು ಅರಿತು ಬಾಳುವ ಮಾನವನಿಗೆ ಭವಿಷ್ಯತ್ ಶಕುನ ಅವಶ್ಯ  ಎನಿಸಿತು. ಅಂತೆಯೇ ಬುಡಬುಡಕಿ ಹುಟ್ಟಿ ಬಂದರು. ಬಹುಕಾಲದಿಂದಲೂ ಈ ಕಸುಬನ್ನು ನಂಬಿ ಬಾಳಿದರು.

ಮಹಾರಾಷ್ಟ್ರ ಮೂಲದಿಂದ ಬಂದ ಈ ಜನರು ಕನ್ನಡ ನಾಡಿನಲ್ಲಿ ಅಲ್ಲಲ್ಲಿ ನೆಲೆಸಿದ್ದರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಇದ್ದುದು ಕಂಡು ಬರುತ್ತದೆ. ಸುಮಾರು ಸಾವಿರ ಕುಟುಂಬಕ್ಕೂ ಹೆಚ್ಚು ಇದ್ದ ಈ ಜನ ಈಗ ವೃತ್ತಿಯಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಮುಂದೆ ಬರಲು ಪ್ರಯತ್ನಿಸುತ್ತಿದ್ದರೂ ಬಡತನ ಅವರಿಗೆ ಅಡ್ಡಗಟ್ಟಿ ನಿಂತಿದೆ. ಅನಿವಾರ್ಯವಾಗಿ ಯಾರೂ ಕೇಳದಿದ್ದರೂ ’ಡಮರುಗ’ ನುಡಿಸುತ್ತಿದ್ದಾರೆ. ಸಂಕೀರ್ಣವಾದ ಈ ಜಗತ್ತಿನಲ್ಲಿ ಅತ್ಯಂತ ಚಿಕ್ಕದಾದ ವಾದ್ಯ ನಾದ ಇಂದು ಕೇಳದಾಗಿದೆ.

ಬುಡಬುಡಕಿ ಹೆಣ್ಣುಮಕ್ಕಳು ತಮ್ಮಗಂಡ ಅಥವಾ ಮಕ್ಕಳು ’ಕೌದಿ’ ಹೊಲೆಯುವ ಕೆಲಸ ಮಾಡುತ್ತಿದ್ದರು. ಇನ್ನು ಕೆಲವರು ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡಿಕೊಂಡು ಕೌಟುಂಬಿಕ ಜೀವನಕ್ಕೆ ನೆರವಾಗುತ್ತಿದ್ದರು. ಅಂತಹ ಸಣ್ಣ-ಪುಟ್ಟ ವ್ಯಾಪಾರ  ಉದ್ಯೋಗ ಇಂದು ನಡೆಯುವುದಿಲ್ಲ. ಕೌದಿಯನ್ನು ಏಕೆ ಅಪೇಕ್ಷಿಸುತ್ತಾರೆ ಬುಡಬುಡಕಿಯ ಭವಿಷ್ಯದೊಡನೆ ಅವರ ಭವಿಷ್ಯವೂ ನಿಂತುಹೋಗಿದೆ.

ಇಂದು ಓಣಿ -ಓಣಿಗಳಲ್ಲಿ ಬೀದಿ-ಬೀದಿಗಳಲ್ಲಿ ಅವರನ್ನು ಹುಡುಕುತ್ತ ಅಡ್ಡಾಡಿದರೆ ಅವರ ನಮ್ಮ ಕಣ್ಣಿಗೆ ಬಿದ್ದರೆ ಬುಡಬುಡಕಿಯರಂತೆ ಕಾಣುವುದಿಲ್ಲ. ಭಿಕ್ಷುಕರಂತೆ ಕಾಣುತ್ತಾರೆ. ಅವರ ಹೆಂಡಂದಿರು ಮಕ್ಕಳು ಅಷ್ಟೇ ನಿಸ್ತೇಜರಾಗಿ ಕಾಣುತ್ತಾರೆ. ಆಗ ನಮ್ಮ ಮನ ಅಯ್ಯೋ! ಎಂದು ಗೋಗರೆಯುತ್ತದೆ.

ಹೀಗೆ ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕುಲಕಸುಬುಗಳು ಇಂದು ಕಾಲದ ಮಡಿಲಲ್ಲಿ ಸಿಕ್ಕಿ ಮಾಯವಾಗುತ್ತಲಿವೆ ಎಂದು ಮನಮರುಗುತ್ತದೆ. ಅದರೆ ಜಗತ್ತಿನಲ್ಲಿ ಯಾವುದೂ ಸ್ಥಿರವಿಲ್ಲವೆಂದು ಭಾವಿಸಿ ಜಗತ್ತಿನ ರೂಪಾಂತರದ ಕಡೆಗೆ ಲಕ್ಷ್ಯಕೊಟ್ಟು ಮುನ್ನಡೆದು ಈ ಕಲೆ, ಅಥವಾ ಕಸುಬು ಉಳಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಹೇಳುತ್ತ ನನ್ನ ಲೇಖನ ಮುಗಿಸುವೆ.

ಗ್ರಂಥಋಣ:

೧)       ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು
ಸಂಗ್ರಹ : ಡಾ. ನೀಲಾಂಬಿಕಾ ಪೊಲೀಸ ಪಾಟೀಲ
ಗೋದುತಾಯಿನಗರ, ಗುಲಬರ್ಗ

೨)       ಜಾನಪದ, ಸಂಪಾದಕ : ಜಿ.ಎಸ್. ಭಟ್ಟ
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ನೃಪತುಂಗ ರಸ್ತೆ, ಬೆಂಗಳೂರು -೨.

೩)       ಕರ್ನಾಟಕ ಸಂಸ್ಕೃತಿ ಸಮೀಕ್ಷೆ
ಡಾ. ತಿಪ್ಪೇರುದ್ರಸ್ವಾಮಿ
ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ – ಡಿಸೆಂಬರ್ ೧೯೮೫

೪)       ಕರ್ನಾಟಕ ಜನಜೀವನ – ಬೆಟಗೇರಿ ಕೃಷ್ಣಶರ್ಮ

೫)       ಗುಲಬರ್ಗ ಜಿಲ್ಲೆಯ ಸಂಪ್ರದಾಯದ ಹಾಡುಗಳು – ಡಾ. ಯಶೋಧರಾ ಶಾಸ್ತ್ರಿ
ಜ್ಯೋತಿರ್ಮಯ ಪ್ರಕಾಶನ, ಮಾತಾ ಮಾಣಿಕೇಶ್ವರನಗರ
ಗುಲಬರ್ಗಾ: ೫೮೫೧೦೩

೬)       ಉತ್ತರ ಕರ್ನಾಟಕದ ಜಾನಪದ ಗೀತೆ ಮೇಳಗಳು
ಒಂದು ಸಾಂಸ್ಕೃತಿಕ ಅಧ್ಯಯನ – ಡಾ. ವೀರೇಶ ಬಡಿಗೇರ, ವಿಮೋಚನಾ ಪ್ರಕಾಶನ ವಿಮೋಚನಾ ದೇವದಾಸಿ ಪುರ್ವಸತಿ ಸಂಘ, ಅಥಣಿ, ೫೯೧೩೦೪ ಜಿಲ್ಲೆ ಬೆಳಗಾವಿ.

೭)       ಜಾನಪದ ವೈಭವ
ಸಂಶೋಧನ ಲೇಖಣಗಳು, ಪೂರ್ಣೀಮಾ ಪ್ರಕಾಶನ, ಗೋಕಾಕ ೫೯೧೩೦೭
ಜಿಲ್ಲೆ ಬೆಳಗವಾಗಿ

೮)       ಸಂಶೋಧನಾ ಲೇಖನಗಳು ; ಡಾ. ವ್ಹಿ.ಜಿ. ಪೂಜಾರ
ಪ್ರಸಾರಾಂಗ, ಗುಲಬರ್ಗ ವಿಶ್ವವಿದ್ಯಾಲಯ, ಗುಲಬರ್ಗಾ

೯)       ಸವದತ್ತಿ ಯಲ್ಲಮ್ಮ ಹಾಗೂ ದೇವದಾಸಿ ಪದ್ಧತಿ
(ಒಂದು ಸಾಂಸ್ಕೃತಿಕ ಅಧ್ಯಯನ) ಡಾ. ಕಮಲಾ ಹೆಮ್ಮಿಗೆ
ವಿಮೋಚನಾ ಪ್ರಕಾಶನ, ವಿಮೋಚನಾ ದೇವದಾಸಿ ಪುನರ್ವ್‌ಸತಿ ಸಂಘ ಅಥಣಿ, ಜಿಲ್ಲೆ ಬೆಳಗಾವಿ

೧೦)    ಕಸವ ಹೊಡೆದ ಕೈ ಕಸ್ತೂರಿ ನಾತಾವ
ಸಂಪಾದಕರು : ಎ.ಕೆ. ರಾಮೇಶ್ವರ, ಬಸವಂತಪ್ಪ ಪಟ್ಟಣ
ಕವಿರಾಜಮಾರ್ಗ ಪ್ರಕಾಶನ, ಮಾತೋರ್ಶರೀ ಗೋದತಾಯಿ ನಗರ, ಗುಲಬರ್ಗ

೧೧)    ಗೆಜ್ಜೆ ನುಡಿದಾವ ಗಿಲಿಗಿಲಿ
ಸಂಪಾದಕರು: ಎ.ಕೆ. ರಾಮೇಶ್ವರ, ಎಚ್.ಕೆ. ಶೇಖರಪ್ಪ
ಜೇವರ್ಗಿ ತಾಲ್ಲೂಕ ಮಟ್ಟದ ಜಾನಪದ ಕಲಾಮೇಳ ಸ್ವಾಗತ ಸಮಿತಿ,
ಜೇವರ್ಗಿ, ಜಿಲ್ಲೆ : ಗುಲಬರ್ಗ

೧೨)       ಜಾನಪದ ಜಯಂತಿ : ಡಾ. ನಿಂಗಣ್ಣ ಸಣ್ಣಕ್ಕಿ

೧೩)       ಜಾನಪದ ಮಂಟಪ – ಕಾಲಗತಿ ಪ್ರಕಾಶನ, ರಾಯಭಾಗ, ಜಿಲ್ಲೆ : ಬೆಳಗಾವಿ ೫೭೧೩೧೭

೧೪)       ಜಾನಪದ ಸಾಹಿತ್ಯ ದರ್ಶನ – ಕನ್ನಡ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೫)       ಬುಡಬುಡಕಿಯರು – ಶ್ರೀ ವಿ.ಸಿ. ಪೈ. ೧೬೩ ಪುಟ, ಡಾ. ಎಂ.ಎಂ. ಕಲಬುರ್ಗಿ

೧೬)      ಸಾಹಿತ್ಯ ನಿಹಾರ – ಡಾ. ಬೆಟಗೇರಿ ಕೃಷ್ಣಶರ್ಮ