ರಿಗಣ್ಣಿಗೆ ಗೋಚರವಾಗುವ ಗ್ರಹಗಳ ಪೈಕಿ ಬಹುಬೇಗ ನಮ್ಮ ದೃಷ್ಟಿಯಿಂದ ಜರಿಕೊಳ್ಳುವ ಗ್ರಹವೆಂದರೆ ಬುಧ. ಇದಕ್ಕೆ ಕಾರಣವೂ ಇದೆ. ಇದು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿದ್ದು, ಬಹುತೇಕವಾಗಿ ಸೂರ್ಯೋದಯ ಅಥವಾ ಸೂರ್ಯಾಸ್ತಮಾನದ ಪ್ರಕಾಶತೆಯಲ್ಲಿ ಅಡಗಿರುತ್ತದೆ. ಶುಕ್ರನ ಕಕ್ಷೆ ಮತ್ತು ಸೂರ್ಯನ ಮಧ್ಯೆ ಇರುವ ಕಕ್ಷೆಯಲ್ಲಿ ಇದು ಚಲಿಸುತ್ತದೆ.  ಭೂಮಿಯಿಂದ ನೋಡುವಾಗ ಸೂರ್ಯನಾಚೆಗೆ ಇರುವಾಗ ಉಚ್ಚಯುತಿಯಲ್ಲಿ ಗೋಚರಿಸುತ್ತದೆ

ಇದು ಗೋಚರಿಸುವ ಸಮಯವಾದರೂ ಎಂಥದ್ದು! ಸೂರ್ಯಮುಳುಗಿದ ಸ್ವಲ್ಪ ಕಾಲದಲ್ಲಿ ಪಶ್ಚಿಮ ದಿಗಂತದಲ್ಲೂ, ಸೂರ್ಯ ಉದಯಕ್ಕೆ ಸ್ವಲ್ಪ ಕಾಲ ಮುಂಚೆ ಪೂರ್ವ ದಿಗಂತದ ಬಳಿಯೂ ಬುಧಗ್ರಹ ಕಾಣ ಸಿಗುತ್ತದೆ. ಆ ವೇಳೆಗಳಲ್ಲಿ ವಾತಾವರಣದ ಧೂಳು ಹಾಗೂ ಮಂಜು ಮುಸುಕಿದ್ದರೆ, ನೋಟ ಅಸ್ಪಷ್ಟವಾಗುತ್ತದೆ. ಹೀಗಾಗಿ ಈ ಗ್ರಹ ಮಂಕಾಗಿ ಗೋಚರಿಸುತ್ತದೆ. ಈ ಕಾರಣಗಳಿಂದಾಗಿ, ಭೂಮಿಯಿಂದ ದೂರದರ್ಶಕದ ಮೂಲಕ ವಿಜ್ಞಾನಿಗಳಿಗೆ ದೊರೆತ ಮಾಹಿತಿ ತುಂಬಾ ಕಡಿಮೆ. ಅಷ್ಟೇ ಅಲ್ಲದೆ, 1970ರಲ್ಲಿ ಇದರ ಸಮೀಪ ಹಾರಾಟ ನಡೆಸಿದ ವ್ರೋಇದರ ಮೇಲ್ಮೈ ಲಕ್ಷಣಗಳ ಅಲ್ಪ ಮಾಹಿತಿ ಲಭ್ಯವಾಗಿದೆಯಷ್ಟೆ.

ಈಗ ಇತಿಹಾಸದಲ್ಲಿ ಪ್ರಪ್ರಥಮವಾಗಿ ವ್ರೋಬುಧನ ಸುತ್ತ ಕಕ್ಷೆಯನ್ನು ಮಾಡಿಕೊಂಡು, ಪರಿಭ್ರಮಿಸಲು ಪ್ರಾರಂಭಿಸಿದೆ. ಆ ವ್ರೋಅಮೆರಿಕದ ‘ನಾಸಾ’ ಸಂಸ್ಥೆಯ ‘ಮೆಸೆಂಜರ್’. ಮೆಸೆಂಜರ್ ನೌಕೆಯು ಭೂಮಿಯಿಂದ ಸರಿಸುಮಾರು 7 ವರ್ಷ ಕಾಲ ಪ್ರಯಾಣ ಮಾಡಿ, 2011ರ ಮಾರ್ಚ್ ತಿಂಗಳ 18ನೇ ತಾರೀಖಿನಂದು ಉದ್ದೇಶಿತ ಕಕ್ಷೆಯನ್ನು ತಲುಪಿತು.

‘ಮೆಸೆಂಜರ್’ ಎಂಬ ಹೆಸರು ಹಲವು ಪದಪುಂಜಗಳಿಂದ ಪಡೆದ ಹ್ರಸ್ವರೂಪವಾಗಿದೆ. ಅದರ ಪೂರ್ಣರೂಪ ಹೀಗಿದೆ. ಮರ್ಕ್ಯೂರಿ ಸರ್ಫೇಸ್ ಸ್ಪೇಸ್ ಎನ್‌ವಿರಾನ್‌ಮೆಂಟ್ ಜಿಯೋಕೆಮಿಸ್ಟ್ರಿ ಅಂಡ್ ರೇಂಜಿಂಗ್ (Messenger –  Mercury Surface-Space Environment Geo chemistry and Ranging; ಬುಧ ಮೇಲ್ಮೈ ವ್ರೋಭೂರಸಾಯನ ವಿಜ್ಞಾನ ಮತ್ತು ವ್ಯಾಪ್ತಿ) ಎಂದಾಗಿದೆ. ಈ ನೌಕೆಯು 2004ರ ಆಗಸ್ಟ್‌ನಲ್ಲಿ ಉಡಾವಣೆಯಾಗಿ ಸುಮಾರು 8 ಬಿಲಿಯನ್ ಕಿ.ಮೀ.ಗಳಷ್ಟು ಕ್ರಮಿಸಿದೆ. ನಿರ್ದಿಷ್ಟ ಕಕ್ಷೆಯನ್ನು ತಲುಪುವ ಮೊದಲು 2008ರ ಜನವರಿ ಹಾಗೂ ಅಕ್ಟೋಬರ್ ಮತ್ತು 2009ರ ಸೆಪ್ಟೆಂಬರ್‌ನಲ್ಲಿ –  ಒಟ್ಟು ಮೂರು ಬಾರಿ – ಬುಧ ಗ್ರಹದ ಸಮೀಪ ಇದು ಹಾರಾಟ ನಡೆಸಿತು. ಈ ನೌಕೆಗೆ ದೊಡ್ಡದಾದ ಎಲಿಪ್ಸೀಯ (ಎಲಿಪ್ಸ್ ಆಕಾರದ)  ಕಕ್ಷೆ ಇದೆ. ಇದು ಬುಧ ಮೇಲ್ಮೈನಿಂದ ಕನಿಷ್ಠ 200 ಕಿ.ಮೀ. ಮತ್ತು ಗರಿಷ್ಠ 15,193 ಕಿ.ಮೀ. ದೂರದಷ್ಟಿರುವ ದೀರ್ಘವೃತ್ತ (ಎಲಿಪ್ಸ್) ಕಕ್ಷೆಯಲ್ಲಿ ಸುತ್ತುತ್ತಿದೆ.

ಚಿತ್ರ-1: ಕಲಾವಿದನ ಕಲ್ಪನೆಯಲ್ಲಿ ಬುಧಗ್ರಹವನ್ನು ಪರಿಭ್ರಮಿಸುತ್ತಿರುವ ಮೆಸೆಂಜರ್. ಎಡಭಾಗದಲ್ಲಿ ಸೂರ್ಯ-ಛಾಯೆ (sun shade) ಸಾಧನವನ್ನು ಕಾಣಬಹುದು.

ಮೆಸೆಂಜರ್‌ಗಿಂತಲೂ ಮಂಚೆ ‘ಮಾರಿನರ್-10’ ಎಂಬ ನೌಕೆಯು ಬುಧಗ್ರಹಕ್ಕೆ ಭೇಟಿಕೊಟ್ಟಿತ್ತು. ಮಾರಿನರ್-10ನೌಕೆಗೆ ಬುಧಗ್ರಹದ ಸುತ್ತ ಯಾವುದೇ ಕಕ್ಷೆ ಇರಲಿಲ್ಲ. 29 ಮಾರ್ಚ್ 1974, 21 ಸೆಪ್ಟೆಂಬರ್ 1974, ಮತ್ತು 16 ಮಾರ್ಚ್ 1975 – ಈ ದಿನಗಳಂದು  ಮಾರಿನರ್ 10 ನೌಕೆಯು ಬುಧಗ್ರಹದ ಸಮೀಪ ಯಶಸ್ವೀ ಹಾರಾಟ ನಡೆಸಿತ್ತು.  ಬುಧಗ್ರಹದ ಒಟ್ಟು 3500 ಬಿಂಬಗಳನ್ನು ಇದು ಪಡೆದಿತ್ತು.  ಆದರೆ ದುರದೃಷ್ಟವಶಾತ್, ಪ್ರತಿ ಸಂದರ್ಭದಲ್ಲಿ ನೌಕೆ ತೆಗೆದ ಚಿತ್ರಗಳು ಬುಧಗ್ರಹದ ಒಂದೇ ಬದಿಯದಾಗಿತ್ತು.

ಚಿತ್ರ-2: ಬುಧಗ್ರಹದ ಸುತ್ತಲೂ ಮೆಸೆಂಜರ್ ಕಕ್ಷೆ – ಕಲಾವಿದನ ಕಲ್ಪನೆಯಲ್ಲಿ

ಇದುವರೆವಿಗೆ ನೋಡಲಾಗದ ಬುಧಗ್ರಹದ ಮತ್ತೊಂದು ಬದಿಯ ವಿಶೇಷತೆಗಳನ್ನು, ಲಕ್ಷಣಗಳನ್ನು ಬಹಿರಂಗ ಪಡಿಸಲೆಂದೇ ಮೆಸೆಂಜರ್ ಅನ್ನೂ ವಿನ್ಯಾಸಗೊಳಿಸಲಾಗಿದೆ. ತನ್ನ ಒಂದು ವರ್ಷದ ಪ್ರಾಥಮಿಕ ವಿಜ್ಞಾನ ಕಾರ್ಯ ಯೋಜನೆಯಲ್ಲಿ ಬುಧಗ್ರಹದ ಸಂಪೂರ್ಣ ಮೇಲ್ಮೈನ ಸ್ಥಳ ವರ್ಣನೆ, ಗ್ರಹೀಯ ಸಂರಚನೆ, ಕಾಂತಕ್ಷೇತ್ರ ಅಲ್ಲದೆ ಜಲಾಮುಖಿ ಪರಿಣಾಮಗಳನ್ನು ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸುವ ಗುರಿ ಮೆಸೆಂಜರ್ ನೌಕೆಗಿದೆ.

ಮೆಸೆಂಜರ್ ನೌಕೆಯ ಕಕ್ಷಾ ಅವಧಿ ಒಂದು ವರ್ಷ ಕಾಲ. ಈ ಅವಧಿಯಲ್ಲಿ ಆರು ಪ್ರಮುಖ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವ ನಿರೀಕ್ಷೆಯಿದೆ. ಆ ಪ್ರಶ್ನೆಗಳೆಂದರೆ:

1. ಬುಧ ಏಕೆ ಅಷ್ಟೊಂದು ಸಾಂದ್ರ?

2. ಬುಧ ಗ್ರಹದ ಸಂರಚನೆ ಹೇಗಾಗಿದೆ?

3. ಬುಧ ಗ್ರಹದ ಕಾಂತಕ್ಷೇತ್ರದ ಸ್ವರೂಪವೇನು?

4. ಬುಧ ಗ್ರಹದ ಗರ್ಭದ (core) ರಚನೆ ಹೇಗಿದೆ?

5. ಬುಧ ಧ್ರುವಗಳ ಬಿಳಿಯ ಅಸಾಮಾನ್ಯ ವಸ್ತುಗಳಾವುವು?

6. ಬುಧಗ್ರಹದಲ್ಲಿ ಆವಿಯಾಗುವ ಪ್ರಧಾನ ವಸ್ತುಗಳಾವುವು?

ಬುಧಗ್ರಹದ ಉತ್ತರ ದಕ್ಷಿಣ ಧ್ರುವಗಳ ಬಳಿ ಇರುವ ಶಾಶ್ವತ ಕತ್ತಲೆಯಲ್ಲಿನ ಕುಳಿ, ಕಂದಕಗಳಲ್ಲಿ ಮಂಜು ಇರುವ ಬಗ್ಗೆ ದೊರತಿರುವ ರೇಡಾರ್ ಅಧ್ಯಯನದ ಸುಳಿವುಗಳನ್ನು ದೃಢೀಕರಿಸುವ ನಿಟ್ಟಿನಲ್ಲಿ ಈ ನೌಕೆ ಕೆಲಸ ಮಾಡಲಿದೆ.

ರೇಡಿಯೋ ವಿಜ್ಞಾನ ಪ್ರಯೋಗದೊಂದಿಗೆ ಏಳು ಭಿನ್ನ ವಿಜ್ಞಾನ ಉಪಕರಣಗಳು ಇದರಲ್ಲಿವೆ. ಕ್ಯಾಮೆರಾಗಳು, ಒಂದು ಲೇಸರ್ ಔನ್ನತ್ಯ ಮಾಪಕ, ಒಂದು ಕಾಂತ ವಿದ್ಯುತ್ ಮಾಪಕ ಮತ್ತು ವಿಶೇಷ ರೋಹಿತದರ್ಶಕಗಳು ಮೆಸೆಂಜರ್ ನೌಕೆಯಲ್ಲಿವೆ. ಇವುಗಳ ಸಹಾಯದಿಂದ ಗ್ರಹದ ಸಂಪೂರ್ಣ ಮೇಲ್ಮೈ ನಕ್ಷೆ, ರಚನೆ – ಅದರ ವಿವರಣೆ, ಒಳಗರ್ಭದ ಸಂಯೋಜನೆಯ ದತ್ತಾಂಶ ಸಂಗ್ರಹಣೆ, ಕಾಂತಕ್ಷೇತ್ರದ ಲಕ್ಷಣ, ತೆಳುವಾದ ವಾತಾವರಣಗಳ ಬಗೆಗೆ ಸಂಶೋಧನೆಗಳನ್ನು ನಡೆಸಬಹುದಾಗಿದೆ.

ಚಿತ್ರ-3: ಮೆಸೆಂಜರ್ ನೌಕೆ ಬುಧಗ್ರಹದ ಕಕ್ಷೆಯಿಂದ ತೆಗೆದ ಮೊತ್ತ ಮೊದಲ ಚಿತ್ರ. 29.03.11ರಂದು ತೆಗೆದಿದ್ದು. (ಕೃಪೆ ನಾಸಾ/ಜನ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಆನ್ವಯಿಕ ಭೌತ ವಿಜ್ಞಾನ ಪ್ರಯೋಗಾಲಯ, ಕಾರ್ನೇಜಿಯೇ ಸಂಸ್ಥೆ, ವಾಷಿಂಗ್‌ಟನ್)

ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪವಿದೆಯಷ್ಟೆ? ಆದ್ದರಿಂದ ಅದನ್ನು ಪರಿಭ್ರಮಿಸುವ ವ್ರೋತೀವ್ರ ಉಷ್ಣತೆ, ಸೌರವಿಕಿರಣ ಪ್ರಭಾವಗಳನ್ನು ತಡೆದು ಕೊಳ್ಳುವಂತಿರಬೇಕು. ಸೂರ್ಯನ ತೀವ್ರ ಉಷ್ಣತೆಯಿಂದ ರಕ್ಷಿಸಲು ಮೆಸೆಂಜರ್ ನೌಕೆಗೆ ‘ಸೌರ-ಛಾಯಾ ಸಾಧನ’ ಎನ್ನುವ (Sun-shade) ವಿಶೇಷ ಉಪಕರಣವನ್ನು ಅಳವಡಿಸಲಾಗಿದೆ. ಉಷ್ಣ ನಿರೋಧಕ ಹಾಗೂ ಉಚ್ಚ ಪ್ರತಿಫಲನ ಗುಣದ ವಸ್ತುವಿನಿಂದ ಇದನ್ನು ತಯಾರಿಸಿದ್ದಾರೆ, ಅದನ್ನು ಟೈಟೇನಿಯಮ್ ಚೌಕಟ್ಟಿನಲ್ಲಿಟ್ಟು, ನೌಕೆಯ ಮುಂಭಾಗದಲ್ಲಿ ಜೋಡಿಸಲಾಗಿದೆ.

 

ಚಿತ್ರ-4: ಮೆಸೆಂಜರ್ ನೌಕೆ ಕಳಿಸಿರುವ ಬುಧಗ್ರಹದ ಚಿತ್ರಗಳು

ಮೆಸೆಂಜರ್ ನೌಕೆಯ ಕಾರ್ಯಾವಧಿ ಕೇವಲ ಎರಡು ಬುಧ ದಿನಗಳಿಗೆ ಕೊನೆಗೊಳ್ಳಲಿದೆ! ಇದಕ್ಕೆ ಕಾರಣ ಬುಧಗ್ರಹವು ತನ್ನ ಅಕ್ಷದ ಸುತ್ತಲೂ ಅತ್ಯಂತ ನಿಧಾನಗತಿಯಲ್ಲಿ ಭ್ರಮಣೆ ಹೊಂದುವುದೇ ಆಗಿದೆ. ಒಂದು ಬುಧ ದಿನವು 176 ಭೂದಿನಗಳಿಗೆ ಸಮ. ಸೂರ್ಯನ ಸುತ್ತಲೂ ಬುಧ ವೇಗವಾಗಿ ಸುತ್ತುತ್ತದೆ. ಅದರ ಭ್ರಮಣೆಯ ವೇಗಕ್ಕಿಂತ ಪರಿಭ್ರಮಣೆಯ ವೇಗ ಹೆಚ್ಚು. ಬುಧ ಕೇವಲ 88 ಭೂದಿನಗಳಿಗೆ ಒಮ್ಮೆ ಸೂರ್ಯನನ್ನು ಸುತ್ತುಹಾಕುತ್ತದೆ.  ಒಂದು ಬುಧವರ್ಷವು 88 ಭೂದಿನಗಳಿಗೆ ಸಮ. ಆದ್ದರಿಂದ ತನ್ನ 12 ಭೂತಿಂಗಳ ಕಕ್ಷೀಯ ವೀಕ್ಷಣೆಯಲ್ಲಿ, ಮೆಸೆಂಜರ್ ನೌಕೆಯು ಕೇವಲ 2 ಬುಧದಿನಗಳ ಅನುಭವವನ್ನು ಮಾತ್ರ ಪಡೆಯುತ್ತದೆ. ಆದರೆ ಇದು ನಾಲ್ಕು ಬುಧವರ್ಷಗಳಿಗಿಂತಲೂ ಅಧಿಕವಾಗಿರುತ್ತದೆ.

 

ಚಿತ್ರ-5: ಮೆಸೆಂಜರ್ ವ್ರೋಕಳುಹಿಸಿರುವ ಬುಧಗ್ರಹದ ವಿಶೇಷ ಭಾಗಗಳ ಚಿತ್ರಗಳು

1) ದೀರ್ಘ ನೆರಳಿನ ಕುಳಿ: ಅಬೆಡಿನ್ಸ್ ಎಜೆಕ್ಟಾ

2) ಬುಧ ಗ್ರಹದ ಒಂದು ಭಾಗ. ಬಿತೋವನ್ ಬೇಸಿನ್ ಕುಳಿಯು ಚಿತ್ರದ ಮಧ್ಯಭಾಗದಲ್ಲಿ ಕಂಡುಬರುತ್ತದೆ.

3) ಸಂಕೀರ್ಣ ಕುಳಿ ಬಾರ್‌ಟಾಕ್ 25.04.11ರಂದು ತೆಗೆದಿದ್ದು.

4) ನೋಕ್ ವಾನ್ ಕೇಂದ್ರ ಕುಳಿ

5) ಡ್ಯೂರರ್‌ನ ಅತ್ಯಂತ ಸಮೀಪ ನೋಟ

6) X ಗುರುತಿನ ಸ್ಥಳ

7) ಮಿಕ್ಕಿವಿಜ್‌ನ ಬೆಳಗುವ ಶಿಖರಗಳು

8) ನಗು ಸೂಸುತ್ತಿರುವ ಕುಳಿ (ಚಿತ್ರದ ಮೇಲಿನ ಭಾಗದ್ದು) ಇರಾನಿನ ಲೇಖಕ ಬಾದಿಯಲ್ – ಜಮಾನ್ – ಅಲ್ – ಹಮಧಾನಿರವರ ನೆನಪಿಗಾಗಿ ಈ ಕುಳಿಗೆ ‘ಅಲ್-ಹಮಧಾನಿ’ ಎಂದು ಹೆಸರಿಸಲಾಗಿದೆ.