೧೯೪೯ ರಲ್ಲಿ ಜನ್ಮ ತಾಳಿದ ಬೆಂಗಳೂರು ಸಂಗೀತ ಸಭಾ ಚಿನ್ನದ ಹಬ್ಬವನ್ನು ಆಚರಿಸಿ ಅರವತ್ತರತ್ತ ಸರಿಯುತ್ತಿದೆ.

ಸುಮಾರು ಹತ್ತು ಮಂದಿ ಅಂತರ ರಾಷ್ಟ್ರೀಯ ಖ್ಯಾತಿಯುಳ್ಳ ಸಂಗೀತಗಾರರನ್ನು ವರ್ಷ ವರ್ಷವೂ ಬೆಂಗಳೂರಿಗೆ ಬರಮಾಡಿಕೊಂಡು ಅವರ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಭಾರತದ ಹಲವಾರು ಹೆಸರಾಂತ ಕಲಾವಿದರು ಈ ಸಭೆಯಲ್ಲಿ ತಮ್ಮ ಕಚೇರಿ ನಡೆಸಿರುತ್ತಾರೆ. ಜೊತೆಗೆ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೂ ತನ್ನ ಉತ್ಸವಗಳಲ್ಲಿ ಅವಕಾಶ ಕಲ್ಪಿಸುತ್ತಿದೆ.

ಸೆಮಿನಾರ್‌ಗಳು ‘ಕಾರ್ಯಾಗಾರಗಳು’ ಸ್ಪರ್ಧೆಗಳು ಈ ಸಭೆಯ ಆಶ್ರಯದಲ್ಲಿ ನಡೆಯುತ್ತಿರುತ್ತವೆ. ಈ ಎಲ್ಲ ಚಟುವಟಿಕೆಗಳಲ್ಲಿ ಬಹು ಉತ್ಸಾಹದಿಂದ ಕಲಾವಿದರು ಭಾಗವಹಿಸುತ್ತಾರೆನ್ನುವುದೇ ಈ ಸಂಸ್ಥೆಯ ಖ್ಯಾತಿ.

ಕೇಂದ್ರ ಮತ್ತು ಸ್ಥಳೀಯ ಸಂಗೀತ ನಾಟಕ ಅಕಾಡೆಮಿಗಳ ಮಾನ್ಯತೆ ಪಡೆದಿರುವ ಈ ಸಂಸ್ಥೆಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೯-೨೦೦೦ ರ ಸಾಲಿನಲ್ಲಿ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ನೀಡಿ ಸನ್ಮಾನಿಸಿದೆ.