ಯುಗ ಯುಗಾಂತರದಿಂದ ಬೆಳಕಿನ ಮೇಲೆ
ಬೆಳಕನ್ನು ತೊಡಿಸಿದರೂ
ಕಡೆಗೆ ಬರೀ ಕತ್ತಲೆ.
ಬಟ್ಟೆಯ ಮೇಲೆ ಬಟ್ಟೆಯನ್ನುಟ್ಟು ಹರಿದರೂ
ಮುಚ್ಚಲಾರದ ಬೆತ್ತಲೆ.
ಈ ಕತ್ತಲೆಯ ಬತ್ತಲೆಗೆ ಯಾರು ತಾನೇ
ಬೆಳಕಿನ ಬಟ್ಟೆ ತೊಡಿಸಿ ಮುಗಿಸುತ್ತಾರೆ !

ಶತಮಾನದಿಂದಲೂ ನನ್ನೊಳಗಿಂದ ಹೊರಬಂದು
ನಿಂತ ಬೆತ್ತಲೆಗಳಿಗೆ
ಮಾತಿನ ಅಂಗಿ ತೊಡಿಸಿದ್ದೇನೆ,
ಒಂದೊಂದು ಅಂಗಿ ತೊಡಿಸಿದಾಗಲೂ ಅವೆಲ್ಲ
ಒಂದೊಂದು ಥರ ಕಾಣುತ್ತವೆ.
ಆದರೂ ಮತ್ತೆ ಮತ್ತೆ ಬಂದು ನಿಲ್ಲುವೀ ಬೆತ್ತಲೆಗಳಿಗೆ
ಯಾರುತಾನೆ ಮಾತಿನ ಅಂಗಿ ತೊಡಿಸಿ ಮುಗಿಸುತ್ತಾರೆ !