ಹುಲಿಕವ್ಲೆ ಆಟದಂತೆಯೇ ಆಟಗಾರರು ಕೈಗಿಂಚು ಹಾಕಿ ನಿಲ್ಲುವರು. ವರ್ತುಳದ ಒಳಗೆ “ಕವ್ಲೆಯ” ಬದಲಿಗೆ “ಮೊಮ್ಮಗಳು” ಇರುತ್ತಾಳೆ. ಹೊರಗೆ “ಅಜ್ಜಿ” ಇದ್ದು ಅವಳು “ನನ್ ಮೊಮ್ಮಗಳು ಬಂದಿದೆಯಾ” ಎನ್ನುವಳು. ಆಗ ಎಲ್ಲ ಆಟಗಾರರೂ “ಇಲ್ಲ ಇಲ್ಲ” ಎನ್ನುವರು. ಆಗ ಅಜ್ಜಿ “ಒಳಂಗೇ ಇದ್ದು ನಾಹೊಡಿತೆ ನಿಂಗೊ ಬಿಡಗದ್ರೆ ನೋಡಕ್ಕಿ” ಎನ್ನುವಳು. ಆಗ ಎಲ್ಲರೂ ಹೆದರೆ ಮೊಮ್ಮಗಳನ್ನು ಬಿಟ್ಟು ಓಡುವರು. ಆಗ ಅಜ್ಜಿ ಮೊಮ್ಮಗಳನ್ನು ಹೊಡೆಯುವಳು. ಇಲ್ಲಿಗೆ ಒಂದು ಆಟ ಮುಗಿಯಿತು.