ಆಟಗಾರರಲ್ಲಿ ಒಬ್ಬಳು ಅಜ್ಜಿ. ಅವಳು ಒಂದು ನಿರ್ದಿಷ್ಟ ಸ್ಥಳದಲ್ಲಿ ಬಾಗಿ ನಿಂತು ನೆಲದ ಮೇಲೆ ಬಿದ್ದ ಸೂಜಿಯನ್ನು ಹುಡುಕಿದಂತೆ ನಟಿಸುತ್ತಾಳೆ. ಉಳಿದ ಆಟಗಾರರು ಅಜ್ಜಿಯ ಎದುರಿಗೆ ನಿಂತುಕೊಂಡು ಒಂದೊಂದಾಗಿ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಅಜ್ಜಿ ಸೂಜಿ ಹುಡುಕುತ್ತ ಉತ್ರ ಕೊಡುತ್ತಾಳೆ.

ಪ್ರಶ್ನೆ   ಉತ್ತರ

ಅಜ್ಜಿ ಅಜ್ಜಿ ಎಂತಾ ಮಾಡ್ತೆ? ಸೂಜಿ ಹುಡ್ಕ್ತೆ
ಸೂಜೆಂತಕ್ಕೆ ಚಂಚಿ ಹೊಲೊಕೆ
ಚಂಚಿ ಎಂತಕ್ಕೆ ದುಡ್ ತುಂಬೂಕೆ
ದುಡ್ ಎಂತಕ್ಕೆ ಕತ್ತೀ ಮಾಡ್ಸೊಕೆ.
ಕತ್ತಿ ಎಂತಕ್ಕೆ ನಿಮ್ಮೆಲ್ಲಾ ಹಿಡ್ದ್ ಕಡೊಕೆ.

ಅಜ್ಜಿ ಕೊನೆಯ ಮಾತನ್ನು ಹೇಳುತ್ತ ಎದ್ದು ನಿಲ್ಲುತ್ತಾಳೆ. ಎಲ್ಲರೂ ಓಡಿ ಹೋಗುತ್ತಾರೆ. ಅಜ್ಜಿಯಿಂದ ತಪ್ಪಿಸಿಕೊಂಡು, ಅಜ್ಜಿ ಸೂಜಿ ಹುಡುಕುತ್ತಿದ್ದ ಸ್ಥಳವನ್ನು ಓಡಿದವರು ಬಂದು ಮುಟ್ಟುತ್ತಾರೆ. ನೆಲಮುಟ್ಟುವ ಮೊದಲೇ ಅಜ್ಜಿ ಯಾರನ್ನಾದರೂ ಮುಟ್ಟಿ ಬಿಟ್ಟರೆ ಅವರೇ ಮರು ಆಟಕ್ಕೆ “ಅಜ್ಜಿ” ಯಾಗುವರು. ಅಜ್ಜಿ ಒಬ್ಬರಿಗಿಂತ ಹೆಚ್ಚು ಜನರನ್ನು ಮುಟ್ಟಿದ್ದರೆ “ಗಡಿ ಆರಿಸುವ ವಿಧಾನದಿಂದ” ಅಜ್ಜಿಯನ್ನು ಆರಿಸುವರು.