ಆಟಗಾರರು ವರ್ತುಳಾಕಾರವಾಗಿ ಕುಳಿತುಕೊಳ್ಳುವರು. ಎಲ್ಲರೂ ತಮ್ಮ ಬಲಗೈಯನ್ನು ಕುತ್ತಿಗೆಯ ಹತ್ತಿರ ಎತ್ತಿಕೊಂಡಿರುವರು. ಆಟಗಾರರಲ್ಲಿ ಒಬ್ಬರು “ಒನ್-ಟು-ತ್ರಿ” ಎಂದ ಕೂಡಲೇ ತಮತಮಗೆ ಇಷ್ಟ ಬಂದಷ್ಟು ಬೆರಳುಗಳನಗನು ನೆಲದ ಮೇಲೆ ಅಂಗೈ ಊರಿ ಬೆರಳುಗಳನ್ನು ನೀಟಾತಿ ಇಡುವರು. ಆ ಬೆರಳುಗಳನ್ನು “ಅಪ್ಪೆನ್, ತುಪ್ಪೆನ್, ತುಪ್, ತುಸ್, ಎನ್, ಜಾಗೆನ್, ಬೋಗೆನ್, ಇಂಗ್ಲಿಷ್, ಟೆನ್ ಎನ್ನುತ್ತಾ ಎಣಿಸುವರು. ಎಣಿಸುತ್ತಾ ಎಣಿಕೆಯ ಕೊನೆಯಲ್ಲಿ “ಟೆನ್ ಬಂದರೆ ಹಿಂದೆ ಸರಿಯಬೇಕು. ಕೊನೆಯ ಬೆರಳಿಗೆ ಟೆನ್ ಬಿಟ್ಟು ಬೇರೆ ಶಬ್ದ ಬಂದರೆ ಮತ್ತೆ ಹೊಸದಾಗಿ ಆಡುವರು. ಹೀಗೆ ಎಲ್ಲರಿಗೂ ಟೆನ್ ಬಂದು ಕೊನೆಯಲ್ಲಿ ಉಳಿದವರು ಎಲ್ಲರನ್ನೂ ಅಟ್ಟಿಕೊಂಡು ಹೋಗಿ ಮೊದಲು ಮುಟ್ಟಿಸಿಕೊಂಡವರು ಕಳ್ಳ – ನಿರ್ದೇಶಕನಾಗುನಾಗುವರು.