ಆಟಗಾರರೆಲ್ಲ ಒಂದೆಡೆ ನಿಂತುಕೊಳ್ಳುತ್ತಾರೆ. ಅನಂತರ ಒಬ್ಬೊಬ್ಬರಾಗಿ ತಮ್ಮ ತಮ್ಮ ಹೆಬ್ಬೆರಳು ತೋರಬೆರಳುಗಳ ತುದಿಯನ್ನು ಜೋಡಿಸಿ ಉಂಟಾದ ಸ್ಥಳಾವಕಾಶದಲ್ಲಿ ಎಂಜಲವನ್ನು ತೂಕು (ಉಗುಳು)ವರು. ಹೀಗೆ ತೂಕುವಾಗ ಯಾರ ಎಂಜಲು ಕೈಗೆತಾಗುತ್ತದೆಯೋ ಅವರೇ ಕಳ್ಳರು. ಒಬ್ಬರಿಗಿಂತ ಹೆಚ್ಚು ಜನರಿಗೆ ಎಂಜಲು ತಾಗಿದರೆ ಪಕ್ಷ ಆರಿಸುವಾಗ ಅನುಸರಿಸುವ ವಿಧಾನದಿಂದ ಕಳ್ಳರನ್ನು ಆರಿಸುವರು. ಯಾರೊಬ್ಬ ಆಟಗಾರರೂ ಅಜ್ಜಿಯಾಗಬಹುದು.

ಕಳ್ಳನು ತನ್ನ ಹಸ್ತವನ್ನು ಒಡ್ಡಿ ನಿಲ್ಲುತ್ತಾನೆ. ಉಳಿದ ಆಟಗಾರರು ಒಬ್ಬೊಬ್ಬರಾಗಿ ಒಡ್ಡಿದ ಕೈಮೇಲೆ ಆಟ್ ಪಾಟ್ ಮುಗಿಲ್ ಪಾಟ್ ಎನ್ನುತ್ತ ತಮ್ಮ ಕೈಯಿಂದ ಬಡಿದು ಮುಂದೆ ಓಡುವರು. ಕೊನೆಯವರು ಹೆಚ್ಚು ಜಾಗರೂಕರಾಗಿರಬೇಕು. ಆಟ್ ಪಾಟ್ ಮುಗಿಲ್ ಪಾಟ್ ಹೇಳಿದ ತಕ್ಷಣ ಓಡಬೇಕು. ಏಕೆಂದರೆ ಎಲ್ಲ ಆಟಗಾರರು ಹೇಳುವದು ಮುಗಿದ ಕೂಡಲೆ, ಕಳ್ಳ ಉಳಿದವರನ್ನು ಮುಟ್ಟಲು ಬರುತ್ತಾನೆ. ಮೊದಲು ಕಳ್ಳನ ಕೈಗೆ ಸಿಕ್ಕವನೇ ಮುಂದಿನ ಆಟಕ್ಕೆ ಕಳ್ಳ. ಹೆಚ್ಚು ಜನರು ಮುಟ್ಟಿಸಿಕೊಂಡರೆ ಪಕ್ಷಗಾರನ ಆಯ್ಕೆಯ ವಿಧಾನದಿಂದ ಕಳ್ಳರನ್ನು ಆರಿಸುವರು.