ಆಟಗಾರರೆಲ್ಲ ಕೈಹಿಡಿದುಕೊಂಡು ವರ್ತುಳಾಕಾರವಾಗಿ ನಿಂತುಕೊಳ್ಳುವರು. ವರ್ತುಳದ ಹೊರಗೊಬ್ಬಳು ಒಳಗೊಬ್ಬಳು ನಿಂತಿದ್ದು ಅವರು ತಮ್ಮ ಒಂದೊಂದು ಕೈಯನ್ನು ಜೋಡಿಸಿ ತೋರಣದಂತೆ ಎತ್ತಿ ಹಿಡಿದಿರುವರು. ಆಗ ಹೊರಗಿದ್ದವಳು ತನ್ನ ಬಲಗೈಯಿಂದ ಅಲ್ಲಿ ನಿಂತ ಪ್ರತಿಯೊಬ್ಬರ ತಲೆಯ ಮೇಲೆಯೂ, ಹಾಡಿನ ಪ್ರತಿ ಶಬ್ದಕ್ಕೆ ಒಂದು ಬಡಿತದಂತೆ ಬಡಿಯುತ್ತಾ, ಮುಂದೆ ಸಾಗುವಳು.

“ಕೊಪ್ಪರ, ಗಡಿಗೆ ಮಡಿಚಲಾರೆ
ನಾಯಿಗೆ, ಅನ್ನಾ, ಹಾಕಲಾರ
ಗಿಣಿಗೆ ನುಚ್ಚು ಹಾಕಲಾರೆ”

ಎಂದು ಹೇಳುವಾಗ “ಹಾಕಲಾರೆ” ಶಬ್ದ ಬಂದಾಗ ಯಾರ ತಲೆಯ ಮೇಲೆ ಬಡಿಯಲಾಗುತ್ತದೆಯೋ ಅವರು ಸಾಲಿನಿಂದ ಹೊರಗೆ ಹೋಗುವರು. ಅದೇ ರೀತಿ ಹಾಡುತ್ತ ತಲೆಯ ಮೇಲೆ ಬಡಿಯುತ್ತ ಪುನಃ ಆಟ ಪ್ರಾರಂಭಿಸುವರು. ಹೀಗೆ ಎಲ್ಲರೂ ಗುಂಪಿನಿಂದ ಬಿಟ್ಟು ಹೋದ ಮೇಲೆ, ಕೊನೆಗೆ ಉಳಿದವರೇ ಕಳ್ಳರು. ಕಳ್ಳನಾದವರು ಆಡಿದ ಎಲ್ಲರನ್ನೂ ಅಟ್ಟಿಕೊಂಡು ಹೋಗುವರು. ಅವರಲ್ಲಿ ಮೊದಲು ಸಿಕ್ಕು ಬಿದ್ದವನು ಇನ್ನೊಬ್ಬ ಕಳ್ಳ. ಈಗ ಈ ಇಬ್ಬರು ಕಳ್ಳಂದಿರು ಹಾಡುತ್ತ ತಲೆಯ ಮೇಲೆ ಬಡಿಯುತ್ತ ಮರು ಆಟ ಪ್ರಾರಂಭಿಸುವರು.