ಒಬ್ಬನು ನೂರರವರೆಗೆ ಎಣಿಸುತ್ತ ಗೋಡೆಯ ಬದಿಗೆ ಮುಖ ಮಾಡಿ ನಿಲ್ಲುವನು. ಅಷ್ಟರಲ್ಲಿ ಉಳಿದವರು ಅಡಗಿಕೊಳ್ಳುವರು. ನೂರು ಹೇಳಿ ಮುಗಿಸಿದವನು ಅಡಗಿದವರಲ್ಲಿ ಒಬ್ಬನನ್ನು ಮುಟ್ಟಿ ಬಂದು ಮೊದಲಿನ ಸ್ಥಳದಲ್ಲಿಯೇ ನಿಂತುಕೊಳ್ಳುವನು. ಮುಟ್ಟಿಸಿಕೊಂಡವನು ಕಳ್ಳ. ಆತನೇ ಉಳಿದವರನ್ನು ಮುಟ್ಟಲು ಹೋಗುವನು. ಕಳ್ಳನಿಂದ ತಪ್ಪಿಸಿಕೊಂಡು ಅಡಗಿದವರು ಬಂದು ಗೋಡೆಯ ಹತ್ತರ ನಿಂತವನನ್ನು ಮುಟ್ಟಬೇಕು. ಯಾರೂ ಕಳ್ಳನ ಕೈಗೆ ಸಿಕ್ಕದಿದ್ದರೆ ಆತನೇ ಮತ್ತೆ ಕಳ್ಳ. ಇಲ್ಲವಾದರೆ, ಸಿಕ್ಕಬಿದ್ದವರು ಕಳ್ಳ. ಎರಡನೆಯ ಆಟಕ್ಕೆ ಇವನೇ ನೂರು ಎಣಿಸುವವನು.