ಒಬ್ಬನು ತೋಳ, ಉಳಿದ ಆಟಗಾರರು ಕುರಿಗಳು. ಒಂದು ಕುರಿ ಬಂದು ತೋಳನ ಹತ್ತರ ಎಷ್ಟು ಹೊತ್ತಾಯಿತು-ಎಂದು ಕೇಳುತ್ತದೆ. ಆಗ ತೋಳ ಬೆಳಗಾಯಿತು.-ಎಂದು ಹೇಳುತ್ತದೆ. ಎರಡನೆ ಕುರಿ ಬಂದು ಕೇಳಿದಾಗ ಒಂದು ತಾಸು ಹೊತ್ತು ಬಂದಿತು.-ಎನ್ನುತ್ತದೆ. ಹೀಗೆ ಎಲ್ಲ ಕುರಿಗಳು ಕೇಳಿತ್ತಿದ್ದಂತೆ ಹೆಚ್ಚು ಹೆಚ್ಚು ಹೊತ್ತನ್ನು ಹೇಳುತ್ತ ಕೊನೆಯ ಕುರಿ ಕೇಳಿದಾಗ, ಊಟದ ಹೊತ್ತಾಯಿತು ಎನ್ನುತ್ತದೆ. ಹಾಗೂ ಆ ಕುರಿಯನ್ನು ಹಿಡಿಯಲು ತೋಳ ಓಡುತ್ತದೆ. ಎಲ್ಲ ಕುರಿಗಳೂ ಓಡುತ್ತವೆ. ತೋಳ ಒಂದೊಂದೆ ಕುರಿಯನ್ನು ತಿನ್ನುತ್ತ (ಮುಟ್ಟುತ್ತ) ಎಲ್ಲ ಕುರಿಗಳನ್ನೂ ತಿಂದಾದ ಮೇಲೆ, ಕೊನೆಯಲ್ಲಿ ಉಳಿದ ಕುರಿಯನ್ನು ಬಿಡುತ್ತದೆ. ಕೊನೆಗೆ ಉಳಿದ ಕುರಿಯೇ ಮುಂದಿನ ಆಟಕ್ಕೆ ತೋಳ. ಕೆಲವರು ಮೊದಲು ಮುಟ್ಟಿಸಿಕೊಂಡ ಕುರಿಯೇ ಮುಂದಿನ ಆಟಕ್ಕೆ ತೋಳ. ಕೆಲವರು ಮೊದಲು ಮುಟ್ಟಿಸಿಕೊಂಡ ಕುರಿಯೇ ಮುಂದಿನ ಆಡಕ್ಕೆ ತೋಳ ಎಂದೂ ನಿರ್ಣಯಿಸುತ್ತಾರೆ.