ಆಡಲು ಬಂದವರಲ್ಲಿ ಒಬ್ಬರು ಅಜ್ಜಿ. ಅಜ್ಜಿಯ ಮುಂದೆ ಉಳಿದವರು ಸಾಲಾಗಿ ಕುಳಿತು ತಮ್ಮ ಬಲಗೈ ಬೆರಳುಗಳನ್ನು ಪಸರಿಸಿ, ಅಂಗೈ ನೆಲಕ್ಕೂರುವರು. ಅಜ್ಜಿ ಬೆರಳ ಸಂದಿಗಳನ್ನು ಒಲೆಗಳು ಎಂದು ತಿಳಿದು ಎಲ್ಲರ ಒಲೆಯಿಂದಲೂ “ಬೂದಿ ತೆಗೆದಾಯ್ತು ಬೂದಿ ತೆಗೆದಾಯ್ತು ಎನ್ನುವಳು. ತನ್ನ ಕೈಯಿಂದ ಸಗಣಿ ಬಳೆದಂತೆ ಮಾಡಿ ಸಗಣಿ ಬಳೆದಾಯ್ತು ಎನ್ನುವಳು. ಹತ್ತಾರು ಮಡಕೆ ಚೂರು, ಒಂದು ಗೆರಟಿ, ಒಂದು ಇಂಚು ಪಟ್ಟಿಯಂತಹ ಕೋಲು, ಒಂದಿ ಚಿಪ್ಪಿ (ಸಿಂಪೆ) ಮುಂತಾದ ವಸ್ತುಗಳನ್ನು ಆಟಗಾರರೆಲ್ಲ ಕೂಡಿ ಆಡುವ ಮೊದಲೇ ಮನೆಯ ಸುತ್ತ ಆಚೆ ಈಚೆ ಹುಡುಕಿ ತಂದಿಟ್ಟುಕೊಂಡಿರುವರು. ಇವೆಲ್ಲ ಅಜ್ಜಿಗೆ ದೋಸೆ ಮಾಡಲು ಬೇಕಾಗುವ ಸಲಕರಣೆಗಳು. ಹಂಚುಗಳನ್ನು ಪ್ರತಿ ಒಲೆಯ ಮೇಲೆ ಇಟ್ಟು ಬೆಂಕಿ ಮಾಡುವಳು. ಮಣ್ಣು ನೀರು ಕೂಡಿಸಿ ಗರಟೆಯಲ್ಲಿ ಹಿಟ್ಟು ತಯಾರಿಸಿ ಚಿಪ್ಪಿಯಿಂದ ದೋಸೆ ಹೊಯ್ದು, ಅಗಲ ಕೋಲಿನಿಂದ ದೋಸೆ ತೆಗೆದು, ಒಂದೆಡೆ ಒಟ್ಟು ಮಾಡಿ ಇಟ್ಟು, ಅಜ್ಜಿ ಮೊಮ್ಮಕ್ಕಳನ್ನು ದೋಸೆ ಕಾಯಲು ಇಟ್ಟು (ಒಲೆಯಾದವರೇ ಮೊಮ್ಮಕ್ಕಳಾಗುವರು) ತಾನು ನೀರಿಗೆ ಹೋಗುವಳು. ಅಜ್ಜಿ ಪ್ರತಿಯೊಂದು ಕೆಲಸ ಮಾಡುವಾಗಲೂ ಅದನ್ನು ಬಾಯಿಂದ ಆಡಿ ತೋರಿಸುವಳು. ಅಜ್ಜಿ ನೀರಿಗೆ ಹೋಗಿ ಬರುವುದರೊಳಗೆ ಮೊಮ್ಮಕ್ಕಳು ರೊಟ್ಟಿ ತಿಂದು ಮುಗಿಸುವರು. “ಅಜ್ಜಿ ಮನೆಗೆ ಒಂದು “ಬುಟ್ಟಿಯಲ್ಲಿಯ ರೊಟ್ಟಿ ಎಲ್ಲಿಗೆ ಹೋಯಿತು?” ಎನ್ನುವಳು. ಆಗ ಮೊಮ್ಮಕ್ಕಳು “ಅಜ್ಜಿ ಅಜ್ಜಿ ನಿನ್ನ ನಾಯಿ ತಿಂದಿತು” ಎನ್ನುವರು. ನನ್ನ ನಾಯಿ ನನ್ನ ಜೊತೆಗೇ ಬಂದಿತ್ತು. ಬುಟ್ಟಿಯಲ್ಲಿಯ ರೊಟ್ಟಿ ಎಲ್ಲಿಗೆ ಹೋಯಿತು)?” ಅಜ್ಜಿ ಅಜ್ಜಿ ನಿನ್ನ ಬೆಕ್ಕು ತಿಂದಿತು. “ನನ್ನ ಬೆಕ್ಕು ನನ್ನ ಜೊತೆಗೇ ಬುಟ್ಟೀಲದ್. ರೊಟ್ಟಿ ಎಲ್ಗೋಯ್ತು. “ಸುಳ್ ಹೇಳ್ ಬೇಡಿ,” ಎಂದು ಅನ್ನವಳು ಅಜ್ಜಿ. ಆಗ ಮೊಮ್ಮಕ್ಕಳು ಅಜ್ಜಿ ಅಜ್ಜಿ ನಾವು ಸುಳ್ಳು ಹೇಳುವದಿಲ್ಲ. ನಾವೇ ರೊಟ್ಟಿ ದಂದವ್ರು ಎನ್ನುತ್ತಾರೆ. ಅಜ್ಜಿ ಮೊಮ್ಮಕ್ಕಳನ್ನು ಓಡಿಸಿಕೊಂಡು ಹೋಗುತ್ತಾಳೆ.