ಒಬ್ಬರು ಹೆಸರು ಹೇಳುವವರಿರುತ್ತಾರೆ. ಉಳಿದವರು ಒಟ್ಟಾಗಿ ಒಂದೆಡೆ ನಿಂತು ತಮ್ಮಲ್ಲಿಯೇ ನಿರ್ಧರಿಸಿ ಒಂದು ಹಣ್ಣು, ಹೂ, ಅಥವಾ ಕಾಯಿಯ ಹೆಸರನ್ನು ಹೇಳುವುದೆಂದು ನಿರ್ಧರಿಸಿಕೊಂಡು ಬರುತ್ತಾರೆ. ಎಲ್ಲರೂ ಬಣ್ಣ ಬಣ್ಣ ಯಾವ ಬಣ್ಣ?

“ಹೆಸರು ಹೆಸರು ಯಾವ ಹೆಸರು” ಎಂದು ಕೇಳುತ್ತಾರೆ. ಹೆಸರು ಕಂಡು ಹಿಡಿಯುವವರು ಬಯಸಿದರೆ ತಾವು ನಿರ್ಧರಿಸಿಕೊಂಡಿದ್ದರ ಬಣ್ಣವನ್ನಾಗಲೀ ಜಾತಿ (ಹೂವಿನ ಜಾತಿ, ಹಣ್ಣಿನ ಜಾತಿ ಇ) ಯನ್ನಾಗಲೀ ಸೂಚಿಸಬಹುದು. ಐದು ಅವಕಾಶಕೊಟ್ಟರೂ ಆತನು ಹೆಸರು ಹೇಳಲು ಅಶಕ್ಯನಾದರೆ ಮತ್ತೊಮ್ಮೆ ಹೆಸರು ಹಾಕಿಕೊಂಡು ಬರುತ್ತಾರೆ. ಹೆಸರನ್ನು ಸರಿಯಾಗಿ ಕಂಡುಹಿಡಿದು ಹೇಳಿದರೆ ಆ ಹೆಸರುಳ್ಳ ಪಕ್ಷದ ಎಲ್ಲರೂ ಓಡುವರು. ಹೆಸರು ಹೇಳುವವನು ಅವರನ್ನು ಬೆನ್ನಟ್ಟುವನು. ಮೊದಲು ಮುಟ್ಟಿಸಿಕೊಂಡವರು ಎರಡನೆಯ ಆಡದಲ್ಲಿ ಹೆಸರು ಹೇಳುವವರಾಗುತ್ತಾರೆ. ಹಲವರನ್ನು ಮುಟ್ಟಿದ್ದರೆ ಹೆಸರಿಟ್ಟು ಆ ನಂತರ ಒಬ್ಬನನ್ನು ಆರಿಸುವರು