ಈ ಆಟಕ್ಕೆ ಹಲವಾರು ಜನ ಆಟಗಾರರೂ ದೊಡ್ಡ ಅಂಗಳವೂ ಬೇಕು. ಮೊಟ್ಟಮೊದಲು ಒಬ್ಬರು ಒಂದೆಡೆ ನಿಂತು ಉಳಿದವರನ್ನು ಮುಟ್ಟಲು ಬರುವರು. ಉಳಿದವರು ಓಡುವರು. ಮುಟ್ಟಿಸಿಕೊಂಡವರು ಮುಟ್ಟಿದವರ ಕೈಗಿಂಚು ಹಾಕಿಕೊಂಡು ಎಲ್ಲರೂ ಕೂಡಿ ಉಳಿದವರನ್ನು ಮುಟ್ಟಲು ಓಡುವರು. ಹೀಗೆಯೇ ಮುಟ್ಟಿಸಿಕೊಂಡವರು ಪ್ರತಿಸಾರೆಯೂ ಮುಟ್ಟುವ ಗುಂಪಿಗೆ ಸೇರೆ ಕೈಗಿಂಚು ಹಾಕಿಕೊಳ್ಳುವರು. ಹೀಗೆಯೇ ಈ ಗುಂಪು ಉದ್ದವಾಗಿ ಬೆಳೆಯುತ್ತಾ ಹೋಗುತ್ತದೆ. ಹಿಡಿಯಲು ಹೋಗುವಾಗ ಗಿಂಚು ಹಾಕಿಕೊಂಡವರು ತಪ್ಪಿಸಿಕೊಳ್ಳಬಾರದು. ಸಾಮೂಹಿಕವಾಗಿಯೇ ಹಿಡಿಯಬೇಕು. ಹೀಗೆ ಎಲ್ಲರನ್ನೂ ಹಿಡಿದು ಮುಗಿಸಿದ ಮೇಲೆ ಆಟ ಮುಗಿಯುತ್ತದೆ.