ಒಬ್ಬಳು ಅಜ್ಜಿ. ಉಳಿದವರು ಬೆಕ್ಕುಗಳು; ಅಜ್ಜಿಯಾದವಳು ಒಂದು ಕಂಬ ಮರ, ಅಥವಾ ಗೋಡೆ ಹತ್ತರ ನಿಂತುಕೊಂಡು ಮೊಸರು ಗರಡಿದಂತೆ ನಟಿಸುವಳು. ಬೆಣ್ಣೆ ತೆಗೆದು ಒಂದು ಪಾತ್ರ (ಎಲೆ) ಯಲ್ಲಿಟ್ಟು ಕಂಬದ ಬುಡದಲ್ಲಿಟ್ಟು ಸೊಪ್ಪಿಗೋ ಸೌದೆಗೋ ಹೋಗುವಳು. ಅಜ್ಜಿ ಬರುವದರೊಳಗೆ ಬೆಕ್ಕುಗಳು ಬೆಣ್ಣೆ ತಿಂದು ಮುಗಿಸುವವು. ಅಜ್ಜಿ ಬಂದು ಬೆಣ್ಣೆ ಇಲ್ಲದುದನ್ನು ಕಂಡು ಹಳಹಳಿಸುವಳು. ಮತ್ತೆ ಮೊಸರು ಗರಡಿ ಬೆಣ್ಣೆ ತೆಗೆದಿಟ್ಟು ಸೌದೆಗೋ ಸೊಪ್ಪಿಗೋ ಬೆಟ್ಟಕ್ಕೆ ಹೋಗುವಳು. ಅಜ್ಜಿ ಬರುವುದರೊಳಗಾಗಿ ಬೆಕ್ಕುಗಳು ಬೆಣ್ಣೆ ತಿಂದಿಡುವವು. ಹೀಗೆ ಮೂರನೆಯ ಬಾರಿ ಅಜ್ಜಿ ಬೆಕ್ಕುಗಳನ್ನು ಕಂಡು ಅವನ್ನು ಓಡಿಸಿಕೊಂಡು ಹೋಗುವಳು. ಅಜ್ಜಿಯ ಕೈಗೆ ಮೊದಲು ಸಿಕ್ಕಿ ಬಿದ್ದವರು ಅಜ್ಜಿಯಾಗಿ ಮತ್ತೆ ಆಟ ಮುಂದುವರಿಸುತ್ತಾರೆ.