ಆಟ ಕೊಪ್ಪರ ಗಡಿಗೆಯಂತೆ ಇರುವದು. ಹಾಡು ಮಾತ್ರ ಕೆಳಗಿನಂತೆ

ರತ್ತೋ ರತ್ತೋ ರಾಯನ ಮಗಳೋ
ಬಿತ್ತೋ ಬಿತ್ತೋ ಭೀಮನ ಮಗಳೋ
ಕಾಸಲಾರೆ ಭೈಠ ಗುಬ್ಬಿ ಬಾಳೆಕಂಬ
ನೀನೇ ಸೀತಾದೇವಿ

“ನೀನೇ ಸೀತಾದೇವಿ” ಎಂದಾಗ ಕುಳಿತುಕೊಳ್ಳಬೇಕು, ಕೊನೆಯಲ್ಲಿ ಉಳಿದವರಿಗೆ ಈ ಹಾಡನ್ನೇ ತಲೆಯ ಮೇಲೊಮ್ಮೆ, ಎದೆಯ ಮೇಲೊಮ್ಮೆ ಬಡಿಯುತ್ತಾರೆ. “ನೀನೇ ಸೀತಾದೇವಿ” ಎಂದಾಗ ಅವಳೂ ಕುಳಿತುಕೊಳ್ಳಬೇಕು. ಕೊನೆಗೆ ಉಳಿದವರನ್ನು ಕಣ್ಣು ಕಟ್ಟಿ ಇಬ್ಬರೂ ಎತ್ತಿಕೊಂಡು ದೂರ ಸುತ್ತಿ ಸುತ್ತಿ ಕೆಳಗಿಡುವರು. ಕಿವಿ ಹಿಂಡಿ, “ಗೋಕರ್ಣ ಯಾವ ದಿಕ್ಕಿಗೆ” ಎನ್ನುವರು. ಓಡಿಬರುವರು. ಅವಳು ಬೆನ್ನಟ್ಟುವಳು, ಮುಟ್ಟಿಸಿಕೊಂಡ ಇಬ್ಬರು ಮುಂದಿನ ಆಟಕ್ಕೆ ಹಾಡುವವರು.