ಒಬ್ಬನಿಗೆ ಹೊಲೆ. ಆತನು ಉಳಿದವರನ್ನು ಮುಟ್ಟಲು ಬರುತ್ತಾನೆ. ಎಲ್ಲರೂ ಒಂದೊಂದು ಕೋಲು ಹಿಡಿದಿರುತ್ತಾರೆ. ಹೊಲೆ ಆದವನು ತನ್ನ ಕೋಲಿನಿಂದ ಇತರರ ಕೋಲನ್ನು ಮುಟ್ಟಬೇಕು. ಆಟಗಾರರು ತಮ್ಮ ಕೋಲನ್ನು ಮುಟ್ಟುವವನ ಮುಂದೆ ಹಿಡಿದು ಮುಟ್ಟು ಮುಟ್ಟು ಎನ್ನುತ್ತಾರೆ. ಮುಟ್ಟಲು ಬಂದ ತಕ್ಷಣ ಕೋಲನ್ನು ನೆಲಕ್ಕೆ ಊರುತ್ತಾರೆ. ಮುಟ್ಟುವವ ಕೋಲೂರುವ ಮೊದಲೇ ಮುಟ್ಟಿದರೆ ಗೆದ್ದಂತೆ. ಮುಟ್ಟಿಸಿಕೊಂಡವರು ನಂತರ ಮುಟ್ಟಲು ಬರುತ್ತಾರೆ.