ಕಾಲ ಕೆಳಗಿನ ಗಟ್ಟಿ ನೆಲದಲ್ಲಿ ಬೇರೂರಿ ಅರಳಿಕೊಂಡು ಸೂರ್ಯನ ಕಡೆ ಮುಖ ಮಾಡಿಕೊಂಡ ಕವಿತೆಗೆ ಪ್ರಾಪ್ತವಾಗುವ ಆರೋಗ್ಯದ ಲಕ್ಷಣಗಳು ಈ ಸಂಗ್ರಹದಲ್ಲಿ ಸಮೃದ್ಧವಾಗಿವೆ.

ಸಮಕಾಲೀನತೆಯ ಪದಧ್ವನಿಗಳ ನಡುವೆ ಕಳೆದುಹೋಗದೆ, ಪರಂಪರೆಯ ಜೀವಜಲವನ್ನು ಹಾಯಿಸಿ, ಸ್ವಂತದ್ದನ್ನು ಬೆಳೆದುಕೊಳ್ಳಬೇಕೆಂಬ ಕಾಯಕ ಈ ಕವಿತೆಗಳ ಹಿಂದೆ ಕ್ರಿಯಾಶೀಲವಾಗಿದೆ.

ಯಾವುದೇ ಬಗೆಯ ಸೀಮಿತಗಳಲ್ಲಿ ಕಟ್ಟುಗೊಳ್ಳದೆ, ಒಟ್ಟು ಬದುಕಿಗೆ ನೇರವಾಗಿ ಮುಖಾಮುಖಿಯಾಗುತ್ತ, ಸ್ಪಂದಿಸುವ ಹಾಗೂ ತನ್ನದೇ ನುಡಿಗಟ್ಟುಗಳಲ್ಲಿ ಅನುಭವಗಳನ್ನು ಹಿಡಿದಿಡುವ, ಆತ್ಮಪ್ರತ್ಯಯಮೂಲವಾದ ದನಿಯೊಂದನ್ನು ಶ್ರೀ ಬಸವರಾಜ ವಕ್ಕುಂದ ಅವರ ಕವಿತೆಗಳಲ್ಲಿ ಯಾರಾದರೂ ಗುರುತಿಸಬಹುದು.

ಜೀವಝಲ್ಲರಿ : ಬಸವರಾಜ ವಕ್ಕುಂದ, ೧೯೯೧