ನೆರೆದ ಆಟಗಾರರೆಲ್ಲರೂ ಒಬ್ಬ ಹಿರಿಯ ಆಟಗಾರನ ಎದುರಿಗೆ ನಿಲ್ಲುತ್ತಾರೆ. ಹಿರಿಯ ಆಟಗಾರನು ಕೇಳಿದ ಪ್ರಶ್ನೆಗೆ ಉಳಿದವರು ಉತ್ತರ ಕೊಡುತ್ತಾರೆ.

ಪ್ರಶ್ನೆ ಉತ್ತರ
ಬಟ್ಟಾ ಬಟ್ಟಾ ಎಲ್ಲೀಗ್ಹೋಗಿದ್ದೆ? ಚಂದಾವರಕ್ಹೋಗಿದ್ದೆ
ಚಂದಾವರಕ್ಹೋಗೇನ್ ತಂದೆ? ಎತ್ ತಂದೆ
ಎತ್ ಎಂತಾ ಕೊಟ್ಟು? ಸಗ್ಣಿ ಕೊಟ್ತು
ಸಗಣಿ ಎಂತಾ ಮಾಡ್ದೆ? ತೊಂಡೆ ಬಳ್ಳೀಗ್ ಹಾಕ್ದೆ
ತೊಂಡೆ ಬಳ್ಳಿ ಎಂತಾ ಕೊಟ್ತು? ತೊಂಡೆಕಾಯ್ ಕೊಟ್ತು
ತೊಂಡೆಕಾಯ್ ಯಾರ್ಗ್ ಕೊಟ್ಟೆ? ಒಬ್ಬಂಗ ಕೊಟ್ಟೆ (ಬಟ್ಟಂಗೆ)
ಒಬ್ಬ ಏನ್ ಕೊಟ್ಟಾ? ತೊಟ್ಳಾ ಕೊಟ್ಟಾ
ತೊಟ್ಳಲ್ ಏನಿತ್ತು? ತಟ್ಟಿತ್ತು
ತಟ್ಟೀಲ್ ಏನಿತ್ತು? ಹಾಲಿತ್ತು
ಹಾಲ್ ನಲ್ ಏನಿತ್ತು? ನೊಣಾ ಇತ್ತು
ನೊಣಾ ಯಾರ್ ತಿಂದ್ರು? ………………..

ನೊಣಾ ಯಾರ್ ತಿಂದ್ರು – ಎಂಬ ಪ್ರಶ್ನೆ ಬಂದೊಡನೆ ಎಲ್ಲರೂ ಮೌನವಾಗಿ ಬಿಡುವರು. ಕೆಲವು ಕ್ಷಣ ಎಲ್ಲರೂ ಉಸಿರು ಬಿಡದೆ ಕಾಯುತ್ತಿರುವವರು. ಈ ನಡುವೆ ತಿಂದವನನ್ನು ಗೇಲಿ ಮಾಡಿ ಕುಣಿಕುಣಿದು ನಗುವರು: ಗೇಲಿಮಾಡಿಸಿಕೊಳ್ಳುವವನೂ ನಗುವನು.