ಆಡಲು ಬಂದ ಮಕ್ಕಳು ತಮ್ಮ ತಮ್ಮ ಎರಡೂ ಕೈಬೆರಳುಗಳನ್ನು ಮುಂದೆ ಮಾಡುತ್ತಾರೆ. ಒಬ್ಬರು ಬೆರಳುಗಳನ್ನು ಒಂದೊಂದಾಗಿ ಎಣಿಸುತ್ತ “ಹರಗೀ ಸೊಪ್ಪು ಮುರಗೀ ಸೊಪ್ಪು ಜಾಜೀಕಾಯಿ ಚಂಬುಳಿ, ಕಡ್ಡೇಬಿಟ್ಟೆ” ಎನ್ನುತ್ತಾ ಯಾವ ಬೆರಳನ್ನು ಎಣಿಸುವಾಗ ಕಡ್ಡೇಬಿಟ್ಟೆ” ಎಂದು ಹೇಳಬೇಕಾಗುತ್ತದೆಯೋ ಆ ಬೆರಳನ್ನು ಮಡಚಿಕೊಳ್ಳಬೇಕು. ಮುಂದಿನ ಬೆರಳಿನಿಂದ ಮತ್ತೆ ಹಾಗೆಯೇ ಎಣಿಸಬೇಕು. ಎಲ್ಲರ ಎಲ್ಲ ಬೆರಳುಗಳನ್ನು ಮಡಚಿ ಆದ ಮೇಲೆ ಆ ಮಕ್ಕಳು ತಮ್ಮ ಎರಡೂ ಕೈಗಳನ್ನು ಹಿಂದೆ ಕಟ್ಟಿಕೊಳ್ಳುತ್ತಾರೆ. ಅನಂತರ ಎಣಿಸಿದವರಿಗೂ, ಇತರ ಆಟಗಾರರಿಗೂ ಕೆಳಗಿನಂತೆ ಸಂವಾದವಾಗುತ್ತದೆ.

ಪ್ರಶ್ನೆ ಉತ್ತರ
ಮಕ್ಳೀರಾ ಮಕ್ಳೀರಾ ನಿಮ್ ನಿಮ್ ಕಯ್ ಎಲ್ಕೋಯ್ತು? ಕೊಕ್ಕೀ ತಕ್ಕಂಡಿ ಬಿಕ್ ಹಣ್ ಕೊವ್ವೂಕೆ
ಬಿಕ್ ಹಣ್ ಏನ್ ಮಾಡ್ದೆ ಕದುಗ್ ಕೊಟ್ಟೆ
ಕದು ಏನ್ ಕೊಟ್ತು ಚಕ್ಕೆ ಕೊಟ್ತು
ಚಕ್ಕೆ ಏನ್ ಮಾಡ್ದೆ ಒಲೆಗ್ ಹಾಕ್ದೆ
ಒಲಿ ಏನ್ ಕೊಟ್ತು ಬೂದಿ ಕೊಟ್ತು
ಬೂದಿ ಏನ್ ಮಾಡ್ದೆ ತೊಂಡಿಬಳ್ಳಿಗ್ ಹಾಕ್ದೆ
ತೊಂಡಿಬಳ್ಳಿ ಏನ್ ಕೊಡ್ತು ತೊಂಡಿಕಾಯ್ ಕೊಡ್ತು
ತೊಂಡೀಕಾಯ್ ಏನ್ ಮಾಡ್ದೆ ಬಟ್ಟಗ್ ಕೊಟ್ಟೆ
ಬಟ್ಟೇನ್ ಕೊಟ್ಟಾ ಸಂಕ್ಸಿ ಕೊಟ್ಟಾ
ಸಂಕ್ಸಿಲೇನಿತ್ತು ತಟ್ಟಿತ್ತು.
ತಟ್ಟೀಲ್ ಏನಿತ್ತು ಹಾಲಿತ್ತು
ಹಾಲಾಗ್ ಏನಿತ್ತು ನೆಳು ಇತ್ತು.

ಇಲ್ಲಿಗೇ ಆಟ ಮುಗಿಯಿತು.