ಈ ಆಟಕ್ಕೆ ೫ ಜನರು ಬೇಕು. ಸಾದು, ಗೋದು, ಪಿರಗಿ ಚಾರಿ. ಕೋಣಾ ಎಮ್ಬ ೫ ಹೆಸರುಗಳಲ್ಲಿ ಒಂದೊಂದನ್ನು ಒಬ್ಬೊಬ್ಬರು ಇಟ್ಟುಕೊಳ್ಳುವರು. ಇವರಲ್ಲಿಯೇ ಒಬ್ಬರು ನಿರ್ದೇಶಕರು. ಅವರು “ಗಿಲಿಗಿಲಿಗಿಲಿ” ಎಂದಾಗಲೀ “ಹುಳಸೇಬಟ್ಟಾ” ಎಂದಾಗಲಿ ಹೇಳುತ್ತಾ ಕಿವಿಯ ಹತ್ತರ ಮುಷ್ಟಿ ಕಟ್ಟಿ ಡಮರು ಬಾರಿಸಿದಂತೆ ಕೈ ಮಾಡುತ್ತಿರುತ್ತಾರೆ. ಇತರರೂ ಹಾಗೆಯೇ ಮಾಡುತ್ತಾರೆ. ಹೀಗೆ “ಗಿಲಿಗಿಲಿ” ಮಾಡುತ್ತಿರುವಾಗಲೇ ನಿರ್ದೇಶಕನು ಒಮ್ಮಿಂದೊಮ್ಮೇಲೆ ತಾನು ಇಷ್ಟಪಟ್ಟಷ್ಟು ಬೆರಳುಗಳನ್ನು ನೆಲದ ಮೇಲೆ ನೀಡುತ್ತಾನೆ. ಹೀಗೆ ನೀಡಿದ ಪ್ರತಿ ಬೆರಳುಗಳನ್ನೂ ನಿರ್ದೇಶಕನು ಯಾವುದಾದರೊಂದು ನಿಟ್ಟಿನಿಂದ ಸಾದು, ಗೋದು ಎಂದು ಎಣಿಸುತ್ತಾ ಹೋಗುವನು. ಹೀಗೆ ಎಣಿಸುವಾಗ ಕೊನೆಯ ಎಣಿಕೆ ಯಾವ ಹೆಸರಿನದಿರುತ್ತದೋಈ ಆ ಹೆಸರಿನವರು ಆಟ ಬಿಡಬೇಕು. ಆಟ ಬಿಟ್ಟವರು ತುಸು ಹಿಂದೆ ಸರಿದು ಕುಳಿತು ಕೊಳ್ಳುವರು. ಮತ್ತೊಂದು ಬಾರಿ ಹಿಂದೆ ಕುಳಿತವರನ್ನು ಚಿವುಟಿ ಹೋಗುವರು. ಆಗ ಅವರು, “ಉಳ್ಳಚಿಟ್” ಎಂದು ಚಿವುಟುವರು. ಇದೇ ರೀತಿ ಆಡುತ್ತಾ ಎಲ್ಲ ಆಟಗಾರರು ಹಿಂದೆ ಸರಿದು ಒಬ್ಬರೇ ಉಳಿದರೆ ಅವರು ತಮ್ಮ ಕೈ ಜೋಡಿಸಿ ಕೈ ಮುಂದೆ ನೀಡುವರು. ಆ ಕೈಗೆ ಒಬ್ಬರು ಹೊಡೆಯುವರು. ಹೊಡೆತದಿಂದ ಒಮ್ಮೆ ತಪ್ಪಿಸಿಕೊಳ್ಳುವವರೆಗೂ ಅವನ ಕೈಗೆ ಹೊಡೆಯುವರು. ಅನಂತರ ಇನ್ನೊಬ್ಬರು ಹೊಡೆಯುವರು. ಇದೇ ರೀತಿ ಎಲ್ಲರಿಂದಲೂ ಹೊಡೆಯಿಸಿಕೊಂಡು ತಪ್ಪಿಸಿಕೊಂಡ ಮೇಲೆ ಆಟ ಮುಗಿಯುತ್ತದೆ.