ಆಟಗಾರರು ನೆಲದ ಮೇಲೆ ಸುತ್ತಲೂ ಕುಳಿತುಕೊಂಡು ತಮ್ಮ ಬಲಗೈ ಮೇಲಕ್ಕೆತ್ತಿ, ಎಲ್ಲರೂ ತಮ್ಮ ಕೈಗಳನ್ನು ನೆಲಕ್ಕಿಡುತ್ತಾರೆ. ಕೆಳಗಿಡುವಾಗ ತಮಗೆ ಇಷ್ಟಬಂದಂತೆ ಕೆಲವು ಬೆರಳುಗಳನ್ನು ಮಡಚಿ ಕೆಲಸವನ್ನು ನೀಡಿ ವರಲ್ಲೊಬ್ಬನು ನೀಡಿದ ಬೆರಳುಗಳನ್ನು ಮಾತ್ರ “ಸಾದುಗೋದು ಪಿರಂಗಿ ಚಾರಿ ಕೋಣ” ಎಂದು ಎಣಿಸುತ್ತಾನೆ. “ಕೊಣ” ಎಂದು ಎಣಿಕೆಗೊಂಡವರು ಕೂಡಲೇ “ಹುಚೋಟ್ ಎನ್ನಬೇಕು. ಎಣಿಸುತ್ತಿರುವಾಗ ಆತನ ಲಕ್ಷ್ಯ ಬೇರೆಡೆ ಇದ್ದರೆ “ಹುಚೋಟ್ ಎನ್ನಲು ಮರೆಯುತ್ತಾನೆ. ಆಗ ಅವನ ಸಮೀಪದ ಆಟಗಾರರು ಅವನನ್ನು ಚಿವುಟುತ್ತಾರೆ. ಆತನು “ಹುಚೋಟ್ ಎಂದಕೂಡಲೇ ಚಿವುಟುವುದನ್ನು ಬಿಡಬೇಕು. “ಹುಚೋಟ್” ಎಂದವನು ಮತ್ತೆ ಆಟದಲ್ಲಿ ಸೇರಿಕೊಳ್ಳಬಹುದು. ಸಾದುಗೋದು ಎಣಿಕೆಯನ್ನು ಮಾತ್ರ ಅವನ ಬದಿಗೆ ಕುಳಿತವನಿಂದ ಪ್ರಾರಂಭಿಸಬೇಕು.

ಈ ಆಟದ ಪ್ರಾರಂಭ ಮೇಲಿನಂತೆಯೇ. ಆದರೆ ಬೆರಳನ್ನು ಎಣಿಸುವಾಗ ಸಾದು ಗೋದು ಪಿರಂಗಿ ಚಾರ ಕೋಣಾ ಅಟ್ಟಲ್ ಬಿಟ್ಟಲ್ ಚಳ್ ಎಂದು ಮೂರು ಶಬ್ದ ಹೆಚ್ಚಿಗೆ ಹೇಳಬೇಕು. “ಚಳ್” ಬಂದ ಬೆರಳನ್ನು ಮಡಚಿಕೊಳ್ಳಬೇಕು. ಕೊನೆಯ ಬೆರಳು ಉಳಿದವನೇ ಕಳ್ಳ. ಆತನ ಹತ್ತರ ನಲಕ್ಕೆ ಬೇಕೋ ಭುಜಕ್ಕೆ ಬೇಕೋ ಎಂದು ಕೇಳುವರು. ಅವನು ಹೇಳಿದ ಶಬ್ದಕ್ಕೂ ಬೆರಳಿಗೂ ಸಾದುಗೋದು ಎಂದು ಎಣಿಸುವರು: ಬೆರಳಿಗೆ ಚಳ್ ಬಂದರೆ ಆಟ ಮುಗಿಯಿತು. ಆದರೆ ಕಳ್ಳ ಹೇಳಿದ ಶಬ್ದಕ್ಕೆ ಚಳ್ ಬಂದರೆ ಅವನೇ ಮತ್ತೊಮ್ಮೆ ಕಳ್ಳ. (ಬೆರಳಿನಿಂದಲೇ ಸಾದುಗೋದು ಎಣಿಕೆ ಪ್ರಾರಂಭಿಸಿದರೆ ತಾನೂ ಕಳ್ಳನಾಗುತ್ತೇನೆ ಎಂಬುದನ್ನು ಲೆಕ್ಕ ಹಾಕುದಿರುವುದರಿಂದ ಹೀಗಾಗುತ್ತದೆ.) ಆಗ ಕಳ್ಳನ ಹತ್ತರ ಕಲ್ಲಲ್ಲಿ ಹೋಗ್ತೀಯೋ ಮುಳ್ಳಲ್ಲೋ” ಎಂದು ಕೇಳುವರು. ಅವನು ಕಲ್ಲಲ್ಲಿ ಎಂದರೆ ಅಂಗಳದಲ್ಲಿ, ಮುಳ್ಳಲ್ಲಿ-ಎಂದರೆ ಬೇಲಿಯ ಬದಿಯಲ್ಲಿ ಓಡಬೇಕು. ಅವನನ್ನು ಮುಟ್ಟಲು ಒಬ್ಬೊಬ್ಬರೇ ಹೋಗಬೇಕು. ಒಬ್ಬ ದಣಿದರೆ ಇನ್ನೊಬ್ಬ ಹೋಗಬಹುದು. ಕಳ್ಳನು “ಮುಳ್ಳಲ್ಲಿ” ಎಂದಿದ್ದು ಅಂಗಳಕ್ಕೆ ಬಂದರೆ ಅಥವಾ ಕಲ್ಲಲ್ಲಿ ಎಂದಿದ್ದು ಬೇಲಿಯ ಎದುರಿಗೆ ಹೋದರೆ ಮತ್ತೆ ಕಳ್ಳನಾಗುತ್ತಾಣೆ. ಮುಟ್ಟಿಸಿಕೊಂಡರೂ ಕಳ್ಳ. ಅಲ್ಲಿಗೆ ಆಟ ಮುಗಿದುಹೋಗುವುದು.