ಇದು ಮೇಲಿನ ಆಟದಂತೆಯೇ ಇರುತ್ತದೆ. ಆದರೆ ಹಾಡುವಾಗ ಬೆರಳು ಮಡಚುವುದಿಲ್ಲ. ಮಗುವಿನ ಅಂಗೈ ಮೇಲೆ ತಮ್ಮ ಕೈಯಿಂದ ಮೆಲ್ಲಗೆ ತಟ್ಟುತ್ತ ಕೆಳಗಿನಂತೆ ಹೇಳುವರು.  ಹಕ್ ಬಂತ್, ಮೊಟ್ಟೀ ಹಾಕ್ತ್, ಕಾವೀಗ್ ಕೊತ್, ಮರೀ ಉಡೀತ್ ಮಕ್ಳೀಗ್ ಮೀಯ್ಸ್ತು, ಗಂಡ್ಗ್ ಮೀಯ್ಸ್ತು, ತಾ ಮೆಂತ್, ಅಡ್ಗೀ ಮಾಡ್ತ್, ಮಕ್ಳೀಗ್ ಬಡಸ್ತ್, ಗಂಡ್ಗ್ ಬಡ್ಸ್ತ್, ತಾ ಒಂಡ್ತ್; ಎಂಜ್ಲಾ ತಿಗೀತ್, ಮಕ್ಳೀಗ್ ಅಂಗೀ ಹಾಕ್ತ್, ಕಪ್ಪಾ ಒಡ್ತ ಮೊಟ್ಟಿ ಕಟ್ತ್” ಎಂದು ಹೇಳಿ ಮುಗಿಸಿ “ಅಜ್ಜೀ ಮನೀಗ್ ಹೋಗೊ ಹಾದೇವ್ದ್” ಎನ್ನುತ್ತ ತಮ್ಮ ಬೆರಳುಗಳನ್ನು ಮಗುವಿನ ಕಂಕುಳವರೆಗೂ ನಡೆಸುತ್ತಾ ಕಂಕುಳಲ್ಲಿ ಕೈ ಹಾಕಿ ನಗಿಸುವರು.