ಮನೆಯ ಹಿರಿಯರೊಬ್ಬರು ತಮ್ಮ ಮುಂದೆ ಕುಳಿತ ಮಗುವಿನ ಕೈ ಹಿಡಿದು ಕಿರಿ ಬೆರಳನ್ನು ಮಡಚುತ್ತಾ-
“ಇದು ಅಕ್ನ ಕರ್ಕಾ ಬಪ್ಪೊ ಅಂಬು” ಎನ್ನುತ್ತಾ ಬೆರಳಿನ ಕುಟುಂಬದ ಕತೆಯನ್ನೇ ಈ ಆಟದಲ್ಲಿ ಹುದುಗಿಸಿ ಆಟವಾಗಿ ತೋರಿಸುವರು. ಮುಂದಿನ ಬೆರಳುಗಳನ್ನು ಮಡಚುತ್ತಾ ಪ್ರತಿ ಬೆರಳಿಗೂ, ಒಂದೊಂದು ಮಾತು ಹೇಳುವರು. ಬೆರಳುಗಳ ಸಂಭಾಷಣೆ ಹೀಗೆ ಮುಂದುವರಿಯುತ್ತದೆ.
“ಇದು ಅಕ್ನ ಕರ್ಕಾಬಂದ್ರೆ ಅಕ್ಕೆಲ್ಲಿದ್ದು-ಕೆಳ್ತು”
“ಇದು ಅಕ್ಕಿಲ್ಲೇಗಿದ್ರೆ ಸಾಲಾ ಮಾಡಾರಿ ತಪ್ಪೊ-ಅಂಬು”
“ಇದು ಸಾಲಾತಂದ್ರೆ ತೀರ್ಸ್ವರೆರು-ಕೇಳ್ತು”
“ನಾ ಇದ್ದೆ, ನಾ ಇದ್ದೆ ಹೆಬ್ಲೆ ಹೆರಿಯಣ್ಣಾ ಅಂಬು”
ಎನ್ನುತ್ತಾ ಹೆಬ್ಬೆರಳನ್ನು ತೋರಿಸುವರು.
Leave A Comment