ಮಗನ ಜೊತೆಗೆ ವಸ್ತು ಸಂಗ್ರಹಾಲಯಗಳಿಗೆ ಹೋದಾಗಲೆಲ್ಲ ನನಗೊಂದು ಕಸಿವಿಸಿಯ ಸಮಸ್ಯೆ ಎದುರಾಗುತ್ತದೆ. ತನಗೆ ಇಷ್ಟವೆನ್ನಿಸಿದ್ದನ್ನೆಲ್ಲ ಮುಟ್ಟುವ ಆಸೆ ನನ್ನ ಮಗನಿಗೆ. ಸಂಗ್ರಹಾಲಯಗಳಲ್ಲಿ ಕದಯವಿಟ್ಟು ಮುಟ್ಟಬೇಡಿಕಿ ಅನ್ನುವ ಫಲಕಗಳು ಹೆಜ್ಜೆ, ಹೆಜ್ಜೆಗೂ ಇರುತ್ತವಲ್ಲ. ಅಲ್ಲೆಲ್ಲ ನಾನು ಕಮುಟ್ಟಬೇಡ, ಬರೇ ನೋಡುಕಿ ಅಂತ ಹೇಳಿದ್ದೇ ಬಂತು. ನನ್ನ ಕಣ್ಣು ತಪ್ಪಿಸಿಯಾದರೂ ಅದನ್ನು ಮುಟ್ಟಿಯೇ ಬಿಡುತ್ತಾನೆ. ಹೀಗೇ ಒಮ್ಮೆ ಆಗ ತಾನೆ ಬಣ್ಣ ಹಚ್ಚಿದ ಬೆಂಚನ್ನು ಮುಟ್ಟಿ ಎಲ್ಲೆಡೆ ಹೋಲಿ ಮಾಡಿದ್ದ. ಫಲಿತಾಂಶವಾಗಿ, ಸಂಗ್ರಹಾಲಯವನ್ನು ಪೂರ್ತಿ ನೋಡದೆ ವಾಪಸು ಬರಬೇಕಾಗಿತ್ತು. ನೋಡಿದರೆ ಸಾಲದೆ? ಮುಟ್ಟಿಯೇ ಅನುಭವಿಸಬೇಕೆ? ಎಂದು ಅವನ ಮೇಲೆ ರೇಗಿದ್ದೇನೆ. ಬಹುಶಃ ನನ್ನ ಸಂಪಾದಕರಿಗೂ ಇದೇ ಪ್ರಶ್ನೆ ಎದುರಾಗಿರಬೇಕು. ನಾನು ಕಳಿಸಿದ ಲೇಖನಗಳಲ್ಲಿ ಕಮುಟ್ಟಿನೋಡುಕಿ ಎನ್ನುವ ಪದ ಕಂಡ ಕೂಡಲೆ ಸಂಪಾದಕರು ಕೇಳುವ ಪ್ರಶ್ನೆ: ಖಅಲ್ಲ, ಮುಟ್ಟಿ ನೋಡುವುದಕ್ಕೆ ಬೆರಳಲ್ಲೇನು ಕಣ್ಣಿದೆಯೇ? ಮುಟ್ಟು ಎಂದರೆ ಸಾಲದೆ?ಖ ಎಂದು ತಿದ್ದಿ ಕಳಿಸುತ್ತಾರೆ.

ಇದೇ ವಾರ ಕರೆಂಟ್ ಬಯಾಲಜಿ ಪತ್ರಿಕೆಯಲ್ಲಿ ಪ್ರಕಟಣೆಗೆ ಸಿದ್ಧವಾಗಿರುವ ಎರಡು ಸಂಶೋಧನಾ ಪ್ರಬಂಧಗಳನ್ನು ಕಂಡಾಗ ಇವೆಲ್ಲ ನೆನಪಾದುವು.  ನನಗೂ, ನನ್ನ ಸಂಪಾದಕರಿಗೂ ಇರುವ ಸಮಸ್ಯೆ ವಿಜ್ಞಾನಿಗಳನ್ನೂ ಕಾಡಿದೆಯಂತೆ. ಸ್ಪರ್ಶ ಹಾಗೂ ದೃಷ್ಟಿ ಸಂವೇದನೆಗಳ ನಡುವೆ ಸಂಬಂಧವಿದೆಯೇ? ಎಂದು ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಕಣ್ಣಿಗೆ ಕಾಣುವ ದೃಶ್ಯಗಳ ಮೇಲೆ ಬೆರಳ ತುದಿಯ ಸ್ಪರ್ಶವೂ ಪರಿಣಾಮ ಬೀರಬಹುದು ಎಂಬ ಕೌತುಕಮಯ ವಿಷಯವನ್ನು ಈ ಸಂಶೋಧನಾ ಪ್ರಬಂಧಗಳು ಎದುರಿಟ್ಟಿವೆ.

ಪಂಚೇಂದ್ರಿಯಗಳು ಒಂದೊಂದೂ ಪ್ರತ್ಯೇಕ ಸಂವೇದನೆ ಎನ್ನುವುದು ಸಾಮಾನ್ಯ ನಂಬಿಕೆ. ಕಿವಿಯಾರೆ ಕೇಳಿದ್ದನ್ನು ಕಣ್ಣಾರೆ ನೋಡಿ ಪರಾಮರ್ಶಿಸು ಎನ್ನುತ್ತಾರಲ್ಲ. ಒಂದು ಇಂದ್ರಿಯದ ಸಂವೇದನೆಗೂ ಮತ್ತೊಂದರದಕ್ಕೂ ಸಂಬಂಧವಿಲ್ಲ ಎನ್ನುವ ನಂಬಿಕೆಯ ನುಡಿ ಇದು. ವಿಜ್ಞಾನಿಗಳೂ ಇದನ್ನು ನಂಬಿದ್ದರು. ಏಕೆಂದರೆ, ಕಿವಿ ಕಿವುಡಾದರೂ, ಕಣ್ಣು ತನ್ನ ಚುರುಕು ಕಳೆದುಕೊಳ್ಳುವುದಿಲ್ಲ. ಇನ್ನು ಕಣ್ಣು ನೋಡುವ ಸಾಮಥ್ರ್ಯ ಕಳೆದುಕೊಂಡರೂ, ನಾಲಗೆಯ ರುಚಿ ಕೆಡುವುದಿಲ್ಲ. ಅಂದ ಮೇಲೆ ಒಂದೊಂದು ಇಂದ್ರಿಯವೂ ಪ್ರತ್ಯೇಕವಲ್ಲವೇ? ಒಂದು ವೇಳೆ ವಿಭಿನ್ನ ಇಂದ್ರಿಯಗಳ ನಡುವೆ ಸಂಬಂಧ ಇರುವುದಾದರೆ, ಸಂವೇದನೆಗಳು ಗೋಜಲಾಗುವುದಿಲ್ಲವೆ? ಎಂದಿರಾ.

ವಿಜ್ಞಾನಿಗಳಿಗೂ ಇದೇ ಅನುಮಾನ ಇತ್ತು. ಆದರೆ ಕಳೆದ ಎರಡು ದಶಕಗಳಲ್ಲಿ ಮಿದುಳಿನ ಬಗ್ಗೆ ನಡೆದ ಸಂಶೋಧನೆಗಳು ಸಂವೇನದಗಳಷ್ಟೆ ಅಲ್ಲ, ಪ್ರಜ್ಞೆ, ಸೌಂದರ್ಯೋಪಾಸನೆ, ಕಲಾತ್ಮಕತೆ ಮುಂತಾದ ಅಮೂರ್ತ ಭಾವಗಳಿಗೂ ಮಿದುಳಿನ ಚಟುವಟಿಕೆಗಳಿಗೂ ಇರುವ ಏನಕೇನ ಸಂಬಂಧವನ್ನು ವಿಶ್ಲೇಷಿಸುತ್ತಿವೆ. ಪರಿಣಾಮವಾಗಿ ಹಲವು ಕೌತುಕಮಯ ಸಂಗತಿಗಳು ಬಯಲಾಗಿವೆ. ಉದಾಹರಣೆಗೆ, ಕಪ್ಪು ಬಣ್ಣದ ಕೆಲವು ಅಂಕೆಗಳು ಕೆಲವರಿಗೆ ಬಣ್ಣದ ಅಂಕೆಗಳಾಗಿ ಕಾಣುತ್ತವಂತೆ. ಕೆಲವರಿಗೆ 5 ಎನ್ನುವುದು ಹಸಿರಾಗಿಯೂ, 2 ಎನ್ನುವುದು ಕೆಂಪಾಗಿಯೂ ಕಾಣುತ್ತದಂತೆ. ಸಂಗೀತದ ಕೆಲವು ಸ್ವರಗಳನ್ನು ಕೇಳಿದಾಗ ಇನ್ನು ಕೆಲವರಿಗೆ ಬಣ್ಣಗಳನ್ನು ನೋಡಿದ ಅನುಭವವಾಗುತ್ತದೆಯಂತೆ. ಕಣ್ಣು ಬಣ್ಣವನ್ನು ನೋಡದಿದ್ದರೂ, ಮಿದುಳು ಹಾಗೆ ಭಾವಿಸುತ್ತದೆ. ಇಂತಹ ವಿಚಿತ್ರ ಸಂವೇದನೆಗಳನ್ನು ಕಅಡ್ಡಸಂವೇದನೆಕಿ (ಸೈನೆಸ್ಥೀಸಿಯ) ಎಂದು ಕರೆದಿದ್ದಾರೆ.  ಮಿದುಳು ಮತ್ತು ಮನಸ್ಸಿನ ನಡುವಣ ಸಂಬಂಧಗಳನ್ನು ಅನ್ವೇಷಿಸುತ್ತಿರುವ ಅಮೆರಿಕೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ನರವಿಜ್ಞಾನಿ ವಿ. ರಾಮಚಂದ್ರನ್ರವರ ಪ್ರಕಾರ, ಇಂತಹ ಅಡ್ಡ ಸಂವೇದನೆಗಳು ಮಿದುಳಿನಲ್ಲಿ ಅಕ್ಕಪಕ್ಕದಲ್ಲಿರುವ ಭಾಗಗಳ ನಡುವೆ ನಡೆಯುವ ಕಅಡ್ಡಸಂಭಾಷಣೆಕಿ (cross talk)ಯ ಫಲ. ಅಂಕೆಗಳನ್ನು ಗ್ರಹಿಸುವ ಮಿದುಳಿನ ಭಾಗದ ಪಕ್ಕದಲ್ಲಿಯೇ ಬಣ್ಣಗಳನ್ನು ವಿಶ್ಲೇಷಿಸುವ ನರಸಮೂಹ ಇದೆ. ಕಣ್ಣಿನಿಂದ ಅಂಕಗ್ರಹಣೆಯ ಭಾಗಕ್ಕೆ ಹೋಗಬೇಕಾದ ಸಂದೇಶಗಳು ಹಾದಿ ತಪ್ಪಿ ಬಣ್ಣಗ್ರಹಣೆಯ ಭಾಗ ತಲುಪಿದಾಗ ಇಂತಹ ಅಡ್ಡ ಸಂವೇದನೆಗಳು ಆಗುತ್ತವೆ.

ಸ್ಪರ್ಶ ಅಂದರೆ ಬೆರಳಿನ ಸಂವೇದನೆಗಳನ್ನು ಗ್ರಹಿಸುವ ಮಿದುಳಿನ ಭಾಗ, ದೃಷ್ಟಿಯನ್ನು ಗ್ರಹಿಸುವ ಮಿದುಳಿನ ಭಾಗಕ್ಕೆ ಅಂಟಿಕೊಂಡಂತೆ ಇರುವುದರಿಂದ ಈ ಎರಡೂ ಸಂವೇದನೆಗಳ ನಡುವೆ ಅಡ್ಡಸಂಭಾಷಣೆ ಆಗುತ್ತಿರಬಹುದೆನ್ನುವ ಅನುಮಾನ ಇತ್ತು. ಏಕೆಂದರೆ, ಮಿದುಳಿನ ಈ ಭಾಗಕ್ಕೆ ಪೆಟ್ಟಾದದ್ದರಿಂದ ದೃಷ್ಟಿ ಕಳೆದುಕೊಂಡವರು ಬೆರಳುಗಳು ಮೊದಲಿಗಿಂತಲೂ ಚುರುಕಾಗಿರುತ್ತಿದ್ದವು. ಎರಡು ವರ್ಷಗಳ ಹಿಂದೆ ಇಂತಹ ವ್ಯಕ್ತಿ ಏನನ್ನಾದರೂ ಮುಟ್ಟಿದಾಗ ಅವನ ಮಿದುಳಿನ ಸ್ಪರ್ಶಗ್ರಹಣ ಭಾಗವಷ್ಟೆ ಅಲ್ಲದೆ ಚಲನೆ  ಗ್ರಹಿಸುವ ಭಾಗವೂ ಚುರುಕಾಗುತ್ತಿದ್ದುದು ಕಂಡು ಬಂತು. ಹಾಗಿದ್ದರೆ, ಸ್ಪರ್ಶಕ್ಕೂ ದೃಷ್ಟಿಗೂ ಸಂಬಂಧವಿರಬಹುದೆ ಎನ್ನುವ ಪ್ರಶ್ನೆ ಮರುಕಳಿಸಿತು.

ಕರೆಂಟ್ ಬಯಾಲಜಿಯಲ್ಲಿ ಪ್ರಕಟವಾಗಿರುವ ಸಂಶೋಧನೆಗಳು ಈ ಅನುಮಾನವನ್ನು ನಿಜವಾಗಿಸಿವೆ.  ಉಬ್ಬು ಅಕ್ಷರಗಳನ್ನು ಮುಟ್ಟಿ ಓದುವ ಬ್ರೈಲ್ ವಿಧಾನ ಹಾಗೂ ಇನ್ನಿತರೆ ಸ್ಪರ್ಶ ಸಂವೇದನೆಗಳು ದೃಷ್ಟಿಹೀನರಲ್ಲಿಯೂ, ದೃಷ್ಟಿಯಿರುವವರಲ್ಲಿಯೂ ಮಿದುಳಿನ ದೃಷ್ಟಿಭಾಗವನ್ನು ಚುರುಕಾಗಿಸುತ್ತವೆ ಎಂದು ಚೀನಾದ ಹಾಂಗ್ಕಾಂಗ್ ವಿವಿಯ ಸಿನ್ ವಾಂಗ್ ಚಿಯೂಂಗ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ಹುಟ್ಟುವಾಗ ದೃಷ್ಟಿ ಸಾಮಥ್ರ್ಯ ಇದ್ದರೂ, ಕಾಲಾಂತರದಲ್ಲಿ ಕಣ್ಣಲ್ಲಿ ಪೊರೆ ಬಂದು ದೃಷ್ಟಿ ಕಳೆದುಕೊಂಡ ಕಎಸ್ಕಿ ಎಂಬ ವ್ಯಕ್ತಿ ಹಾಗೂ ದೃಷ್ಟಿ ಚುರುಕಾಗಿರುವ ನಾಲ್ವರನ್ನು ಪರೀಕ್ಷಿಸಿ ಚಿಯೂಂಗ್ ಈ ತೀರ್ಮಾನಕ್ಕೆ  ಬಂದಿದ್ದಾರೆ. ಕಎಸ್ಕಿ ಎಂಬಾತ ಬ್ರೈಲ್ ಓದುವಾಗಲೂ ಅವನ ಮಿದುಳಿನಲ್ಲಿ ದೃಷ್ಟಿ ಇರುವವರಲ್ಲಿ ಚುರುಕಾಗುವ ಭಾಗಗಳು ಚಟುವಟಿಕೆಯಿಂದಿದ್ದುವು. ವಾಸ್ತವವಾಗಿ ಆತ ಮುಟ್ಟಿ ತಿಳಿದುಕೊಳ್ಳುವುದರ ಜೊತೆಗೇ ಆ ಹಿಂದಕಿ ತಾನು ಕಂಡಿದ್ದ ಆಕೃತಿಗಳನ್ನೂ ಕಾಣುತ್ತಿದ್ದ. ಅಂದರೆ, ಆತ  ಕಮುಟ್ಟಿನೋಡುಕಿತ್ತಿದ್ದ.

ಮತ್ತೊಂದೆಡೆ ಅಮೆರಿಕೆಯ ಮಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿ ಕ್ರಿಸ್ಟಫರ್ ಮೂರ್ ಮತ್ತು ಸಂಗಡಿಗರು ಸ್ಪರ್ಶದಿಂದ ತಿಳಿಯುವ ಚಲನೆಯ ಸಂವೇದನೆ, ಕಣ್ಣಿಗೆ ಗೋಚರಿಸುವ ಚಲನೆಯ ಗ್ರಹಣದ ಮೇಲೆ ಪ್ರಭಾವ ಬೀರುತ್ತದೆಂದು ನಿರೂಪಿಸಿದ್ದಾರೆ. ಒಂದು ಸೆಂಟಿಮೀಟರು ಅಗಲದ ಪುಟ್ಟ, ಇಲೆಕ್ಟ್ರಾನಿಕ್ ಮುಳ್ಳುಹಾಸನ್ನು ಇವರು ರೂಪಿಸಿದರು. ಹಾಸಿನ ಮುಳ್ಳುಗಳನ್ನು ಬೇಕೆಂದ ದಿಕ್ಕಿಗೆ ಅಲೆಯಲೆಯಾಗಿ ಚಲಿಸಬಹುದಿತ್ತು. ಇದನ್ನು ಮುಟ್ಟುವಾಗಲೇ ಎದುರಿಗೆ ಅಲೆಯಲೆಯಾಗಿ ಬಣ್ಣಗಳು ಚಲಿಸುವ ದೃಶ್ಯವನ್ನು ಪ್ರದರ್ಶಿಸಿದರು. ನೋಡುವ ಅಲೆಗಳು ಮೇಲ್ಮುಖನಾಗಿ ಚಲಿಸುವಾಗ, ಬೆರಳಿಗೆ ತಾಗಿದ ಹಾಸಿನ ಮುಳ್ಳುಗಳು ಕೆಳಮುಖವಾಗಿ ಚಲಿಸುವಂತೆ ಭಾಸವಾಗುತ್ತಿತ್ತು. ನೋಡುವ ಅಲೆಗಳು ಸ್ಥಿರವಾಗಿದ್ದಾಗ್ಯೂ, ಮುಳ್ಳಿನ ಹಾಸು ಚಲಿಸುತ್ತಿದ್ದರೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಅಲೆಗಳು ಹರಿದಂತೆ ಕಾಣುತ್ತಿದ್ದುವು. ಅರ್ಥಾತ್, ಕಣ್ಣಿಗೆ ಕಾಣಿಸುವ ಅಲೆಗಳ ದಿಕ್ಕಿಗೂ, ಬೆರಳಿಗೆ ಗೋಚರಿಸುವ ಅಲೆಗಳ ಚಲನೆಯ ದಿಕ್ಕಿಗೂ ಸಂಬಂಧವಿತ್ತು. ಅಲೆಗಳು ಚಲಿಸದಿದ್ದಾಗಲೂ ಮುಳ್ಳುಹಾಸಿನ ಚಲನೆ ಅಂತಹ ದೃಶ್ಯ ಕಂಡಂತೆ ಭಾವನೆಯನ್ನುಂಟು ಮಾಡಿತ್ತು.

1 Sing-Hang Cheung, Fang Fang, Sheng He and Gordon E. Legge, Retinotopically Specific Reorgnization of Visual Cortex for Tactile Pattern Recognition,  Current Biology, Vol. 19,  (published online 9.4.2009)

 

2. Talia Konkle, Qi Wang, Vincent Hayward and Christopher I. Moore, Motion Aftereffects Transfer Between Touch and Vision,  Current Biology, Vol. 19,  (published online 9.4.2009)