ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ
ಎಲೆಮೂಢ ಮನುಜ ದೊರೆಯದಣ್ಣ ಮುಕ್ತಿ || ಪ ||

ಆರು ಶಾಸ್ತ್ರಂಗಳ ಓದಿದರಿಲ್ಲ ಹದಿನೆಂಟು ಪುರಾಣ
ಕೇಳಿದರಿಲ್ಲ | ಮುರನೈಯನ ಕಂಡೆ ತಿಳಿದರು ಇಲ್ಲ
ದೀರನಾಗಿ ತಾ ತಿರುಸಿದರಿಲ್ಲ || ಪ ||

ಕೊರಳೊಳು ಮಾಲೆಯ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಾಗಿ ತನ್ನ ಶರೀರಕ್ಕೆ ಬೂದಿಯ
ಮೂಷಿಕೊಂಡು ತಾತಿರುಗಿದರಿಲ್ಲ || ಪ ||

ನಾರಿಯ ಭೋಗವ ಧರಿಸಿದರಿಲ್ಲ | ತೀರ್ಥ
ಕ್ಷೇತ್ರಂಗಳ ತಿರುಗಿದರಿಲ್ಲ | ನಾರದ ವರದ
ಶ್ರೀಪುರಂದರ ವಿಠಲನ ಸೇರಿಕೊಂಡು ತಾ
ಪಡೆಯುವ ತನಕ || ಗುರುವಿನ ಗುಲಾಮನಾಗುವತನಕ
ದೊರೆಯದಣ್ಣ ಮುಕ್ತಿ ||