ಮಹಾಭಾರತದಲ್ಲಿ ಏಕಲವ್ಯನ ಕಥೆ:
ದ್ರೋಣನ ಕೀರ್ತಿಯನ್ನು ಕೇಳಿ ಅವನಿಗೆ ಶಿಷ್ಯರಾಗಿ ಬಂದವರಲ್ಲಿ ಏಕಲವ್ಯನೂ ಒಬ್ಬ. ಅವನು ವ್ಯಾಧನ ಮಗ. ಆ ಕಾರಣದಿಂದ ದ್ರೋಣನು ಅವನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಲಿಲ್ಲ. ಆದರೆ ಏಕಲವ್ಯ ಅಷ್ಟರಿಂದ ನಿರಾಶನಾಗಲಿಲ್ಲ. ಕಾಡಿಗೆ ಹೋಗಿ ಮಣ್ಣಿನಿಂದ ದ್ರೋಣನ ವಿಗ್ರಹವನ್ನು ನಿರ್ಮಿಸಿಕೊಂಡು, ಆ ವಿಗ್ರಹದಲ್ಲಿ ದ್ರೋಣನ ಪ್ರತಿಬಿಂಬವನ್ನು ಕಂಡು ಅದಕ್ಕೆ ಗುರುಸೇವೆ ಸಲ್ಲಿಸುತ್ತ ಶಸ್ತ್ರಾಭ್ಯಾಸಕ್ಕೆ ತೊಡಗಿದನು. ಕೆಲವು ದಿನಗಳಲ್ಲಿಯೆ ಅವನು ಬಾಣಪ್ರಯೋಗದಲ್ಲಿ ಪಾರಂಗತನಾದನು.
ಒಮ್ಮೆ ಕೌರವರೂ ಪಾಂಡವರೂ ಬೇಟೆಗಾಗಿ ಕಾಡಿಗೆ ಹೋದರು. ಒಬ್ಬ ಆಳು ಒಂದು ನಾಯಿಯನ್ನು ಹಿಡಿದುಕೊಂಡು ಅವರ ಹಿಂದೆ ಹೋದನು. ಆ ನಾಯಿ ಏಕಲವ್ಯನನ್ನು ಕಂಡು ಬೊಗಳಿತು. ಅವನು ಆ ನಾಯಿಯ ಬಾಯೊಳಕ್ಕೆ ಒಟ್ಟಿಗೆ ಬಾಣಗಳನ್ನು ಹೊಡೆದನು. ನಾಯಿ ಪಾಂಡವರ ಹತ್ತಿರ ಓಡಿಹೋಯಿತು. ಅದರ ಬಾಯೊಳಗೆ ಇದ್ದ ಬಾಣಗಳನ್ನು ಕಂಡು ಅವರಿಗೆ ಆಶ್ಚರ್ಯವಾಯಿತು. ಅಂಥ ಕೈಚಳಕವುಳ್ಳವನು ಯಾರಿರಬಹುದೆಂದು ಹುಡುಕುತ್ತ ಬಂದು ಏಕಲ್ವಯನನ್ನು ಕಂಡರು. ಅವರು ಅವನನ್ನು ಪ್ರಶ್ನಿಸಿ ಅವನು ನಿಷಾದರಾಜನಾದ ಹಿರಣ್ಯಧನುಷನ ಮಗನೆಂದೂ, ದ್ರೋಣಾಚಾರ್ಯರ ಶಿಷ್ಯನೆಂದೂ ಅರಿತರು. ಧನುರ್ವಿದ್ಯೆಯಲ್ಲಿ ತನ್ನನ್ನು ಮೀರಿಸಿದ ಬೇರೊಬ್ಬ ವ್ಯಕ್ತಿಯಿದ್ದುದನ್ನು ನೋಡಿ ಅರ್ಜುನನು ವ್ಯಾಕುಲಭರಿತನಾದನು. ಊರಿಗೆ ಹೋದ ಕೂಡಲೆ ರಹಸ್ಯವಾಗಿ ದ್ರೋಣರ ಬಳಿಗೆ ಹೋಗಿ “ಗುರುವೆ, ಧನುರ್ವಿದ್ಯೆಯಲ್ಲಿ ನನ್ನನ್ನು ಬೇರೆ ಯಾವ ಶಿಷ್ಯನೂ ಮೀರಿಸಲಾರನು ಎಂದು ವಚನಕೊಟ್ಟಿದ್ದಿರಿ. ಆದರೆ ಕಾಡಿನಲ್ಲಿ ನಿಮ್ಮ ಶಿಷ್ಯ ಒಬ್ಬ ಇದ್ದಾನೆ. ಅವನು ವ್ಯಾಧ.” ಎಂದನು. ದ್ರೋಣ ಮರುಮಾತಾಡದೆ ಅರ್ಜುನನನ್ನು ಕೂಡಿಕೊಂಡು ಅರಣ್ಯಕ್ಕೆ ಹೋದನು. ಗುರುವನ್ನು ಕಂಡೊಡನೆಯೆ ಏಕಲವ್ಯ ನಮಸ್ಕಾರಮಾಡಿ ಅವರ ನಾಮಸ್ಮರಣೆಯ ಮಹಿಮೆಯಿಂದಲೆ ತಾನು ಅಸ್ತ್ರವಿದ್ಯೆಯಲ್ಲಿ ಪಾರಂಗತನಾದೆನೆಂದು ಹೇಳಿಕೊಂಡನು. “ನೀನು ನನ್ನ ಶಿಷ್ಯನಾದರೆ ಗುರುದಕ್ಷಿಣೆಯೆಲ್ಲಿ?” ಎಂದು ಗುರು ಕೇಳಿದನು. “ನನ್ನದು ಯಾವುದೂ ಇಲ್ಲ. ಸಮಸ್ತವೂ ತಮ್ಮದೆ. ತಾವು ಏನು ಕೊಡಬೇಕೆಂದು ಆಜ್ಞಾಪಿಸುವಿರೋ ಅದನ್ನು ಕೊಡುತ್ತೇನೆ” ಎಂದು ಏಕಲವ್ಯನು ಉತ್ತರಿಸಿದನು. “ಹಾಗಾದರೆ ನಿನ್ನ ಬಲಗೈಯ ಹೆಬ್ಬೆರಳನ್ನು ಕೊಡು” ಎಂದನು ದ್ರೋಣ ಏಕಲವ್ಯ ಹಿಂದುಮುಂದು ಆಲೋಚಿಸಲಿಲ್ಲ, ವ್ಯಾಕುಲಗೊಳ್ಳಲಿಲ್ಲ. ಕೂಡಲೆ ತನ್ನ ಬೆರಳನ್ನು ಕತ್ತರಿಸಿಕೊಟ್ಟನು. ಇದರಿಂದ ಅರ್ಜುನನಿಗೆ ಸಂತೋಷವಾಯಿತು. ದ್ರೋಣನು ಕೊಟ್ಟ ಮಾತೂ ಉಳಿಯಿತು.
ಬೆರಳ್ ಗೆ ಕೊರಳ್ ನಾಟಕ:
ಮಹಾಬಾರತದ ಮಹಾಸಾಗರದಲ್ಲೊಂದು ಹನಿಯಾಗಿ, ಅಲ್ಲಿಯ ಕೋಲಾಹಲದ ನಡುವೆ ಸುಳಿದು ಮರೆಯಾಗುವ ಏಕಲವ್ಯನ ಉಪಾಖ್ಯಾನ ಇಲ್ಲಿ ದಾರ್ಶನಿಕ ನಾಟಕವಾಗಿ ಪರಿಣಮಿಸಿದೆ. ಅಲ್ಲಿ ಇಂಗಿತವಾಗಿ ಅಪ್ರಕಟರೂಪದಲ್ಲಿ ಇರುವ ಮಹತ್ತು ಇಲ್ಲಿ ಸುಪ್ರಕಟವಾಗಿ ತನ್ನ ಪರಿಣತಾವಸ್ಥೆಯಲ್ಲಿ ಗೋಚರವಾಗುತ್ತದೆ. ಗುರುಶಿಷ್ಯ ಸಂಬಂಧವಾದ ತತ್ತ್ವ, ಕರ್ಮತತ್ತ್ವ, ಮತ್ತು ಸಮರ್ಪಣ ರೂಪವಾದ ಯಜ್ಞತತ್ತ್ವಗಳು ಇಲ್ಲಿ ಪ್ರತಿಮಾವಿಧಾನದಿಂದ ಧ್ವನಿತವಾಗಿವೆ. ಆ ತತ್ತ್ವಗಳು ಏಕಲವ್ಯ ದ್ರೋಣರ ಮುಖಾಂತರ ಮೈದೋರಿದ್ದರೂ ಅವು ವ್ಯಕ್ತಿತ್ವಕ್ಕೆ ಅತೀತವಾಗಿ ನಿತ್ಯವಾದುವು. ಅವರು ಆ ತತ್ತ್ವಗಳನ್ನು ಪ್ರಕಟಿಸುವುದರಲ್ಲಿ ವಿಶಿಷ್ಟ ಪಾತ್ರಗಳು ಮಾತ್ರ. ಅ ಮೂರು ತತ್ತ್ವಗಳ ಸ್ವರೂಪದ ರೂಪರೇಖೆಯನ್ನು ಈ ಕೆಳಗೆ ಕಾಣಿಸಿದೆ.
ಗುರುತತ್ತ್ವ: ಶಿಷ್ಯನ ಶ್ರದ್ಧೆ ಹೆಚ್ಚಿದಂತೆಲ್ಲ ಅವನ ಅವಿದ್ಯೆ ಕ್ಷೀಣತರವಾಗಿ ನರದೇಹಿಯಾದ ಗುರುವಿನಲ್ಲಿ ಪರಾತ್ಪರ ವಸ್ತುವನ್ನೆ ಕಾಣುತ್ತಾನೆ. ಆಗ ಆ ಗುರುವಿನ ಪಾರ್ಥಿವ ದೇಹ ಅವನ ಕಣ್ ಮುಂದೆಯೆ ಇರಬೇಕಾಗಿಲ್ಲ. ಅವನು ಎಲ್ಲಿ ಹೋದರೂ ಎಲ್ಲಿದ್ದರೂ ಗುರುಕೃಪೆ ಕೆಲಸಮಾಡುತ್ತದೆ. ಜಾಗ್ರದವಸ್ಥೆಯಲ್ಲಿ ಮಾತ್ರವಲ್ಲ ಸ್ವಪ್ನಾವಸ್ಥೆಯಲ್ಲಿಯೂ ಆ ಶಕ್ತಿಮಹಿಮೆ ಗೋಚರಿಸುತ್ತದೆ. ಅವನ ಪ್ರತಿಯೊಂದು ಕರ್ಮವೂ ಶಕ್ತಿಯ ಉಪಾಸನೆಯಾಗುತ್ತದೆ. ಅವನ ಭೋಗ ಗುರುವಿಗೆ ಅರ್ಪಿಸುವ ನೈವೇದ್ಯವಾಗುತ್ತದೆ. ಅವನ ನಿದ್ರಾವಸ್ಥೆ ಸಮಾಧಿಯಾಗುತ್ತದೆ. ಅವನು ಆಡುವ ಮಾತು ಪ್ರಾರ್ಥನೆಯಾಗುತ್ತದೆ.* ಹೀಗೆ ಶಿಷ್ಯನ ಹೃದಯ ಗುರುವಿನ ಕಡೆ ಬಾಗಿ ಸಾಧನೆ ಮುಂಬರಿದಾಗ ಗುರುವಿನ ಸಂಪೂರ್ಣ ಕೃಪೆ ಶಿಷ್ಯನ ಕಡೆ ಹರಿಯುತ್ತದೆ. ಪರಬ್ರಹ್ಮಸ್ವರೂಪಿಯಾದ ಗುರುಶಕ್ತಿ ಕೇವಲ ನರರೂಪದಲ್ಲಿಯೆ ಗೋಚರಿಸಬೇಕೆಂಬ ನಿಯಮವಿಲ್ಲ. ಅದು ಬೆಟ್ಟದಿಂದ ದುಮುಕುವ ಅಬ್ಬಿಯಾಗಿ, ಅಭ್ರಚುಂಬಿಯಾದ ವೃಕ್ಷವಾಗಿ, ಗಗನದಲ್ಲಿ ಮಿನುಗುವ ನಕ್ಷತ್ರವಾಗಿ, ಬೇಸಗೆಯ ಆಕಾಶದಲ್ಲಿ ಚಲಿಸುವ ತುಂಡುಮೋಡವಾಗಿ, ಜಡತನವನ್ನು ಪ್ರತಿಬಿಂಬಿಸುವ ಮೌನಶಿಲೆಯಾಗಿ, ಸರ್ಯೋದಯಾಸ್ತಾಗಳಾಗಿ — ನಾನಾ ರೂಪಗಳಲ್ಲಿ ಕಾಣಿಸಿಕೊಂಡು ಮಾನವನ್ನು ಉದ್ಧರಿಸಬಹುದು; ಅವನ ಸ್ವಸ್ವರೂಪವನ್ನು ಆವರಿಸಿರುವ ಅವಿದ್ಯಾಯವನಿಕೆಯನ್ನು ಹೋಗಲಾಡಿಸಬಹುದು. ಯಾವ ರೂಪದಲ್ಲಿ ಶ್ರದ್ಧೆಯಿಂದ ಪೂಜಿಸಿದರೂ ಅದಕ್ಕೆ ತಕ್ಕ ಸಿದ್ಧಿ ಲಭಿಸುತ್ತದೆ.[2] ಶ್ರೀರಾಮಕೃಷ್ಣ ಪರಮಹಂಸರು ಹೇಳುವಂತೆ ಗುರುಕೃಪೆ ಬೀಸುವ ಗಾಳಿಯದ್ದಂತೆ, ಮಾನವರ ಹೃದಯಗಳು ಗಾಳಿಪಟಗಳಿದ್ದಂತೆ. ಯಾವಾಗ ಯಾರು ಬೇಕಾದರೂ ಗಾಳಿಪಟಗಳನ್ನು ಬಿಚ್ಚಿದರೆ ಅದರ ಫಲ ದೊರೆಯುತ್ತದೆ. “ನಮ್ಮ ಭಕ್ತಿಗೆ ಮೆಚ್ಚುವಾ ಸಚ್ಛಿದಾನಂದಮೆ ಕರ್ಮ ತತ್ತ್ವ: ಕರ್ಮ, ವಿಧಿ, ಈಶ್ವರೇಚ್ಛೆ — ಈ ಮೂರೂ ಅಭಿನ್ನ; ಒಂದೇ ತತ್ತ್ವದ ಮೂರು ಮುಖಗಳು. ಕರ್ಮಫಲಸ್ವರೂಪಿಯಾದ ಈಶ್ವರೇಚ್ಛೆಯ ಮುಂದೆ ಮನುಷ್ಯೇಚ್ಛೆ ಪ್ರತಿಭಟಿಸಿ ಗೆಲ್ಲಲಾರದು. ಗೆದ್ದರೂ ಅದರ ಅನುಮತಿಯಿಂದಲ್ಲದೆ ಅನ್ಯರೀತಿಯಿಂದಲ್ಲ. ಅದರ ಗತಿಯ ಮರ್ಮ ಮಾನವನ ಅಪೂರ್ಣದೃಷ್ಟಿಗೆ ನಿಲುಕದು. “ಜೀವಿಗಳ ಕರ್ಮ ಜಟಿಲತೆ,[3] ಏಕಲವ್ಯ, ಈ ಎನ್ನುವ ದ್ರೋಣನ ಮಾತಿನಲ್ಲಿ ಕರ್ಮಯೋಗತತ್ತ್ವವೂ ಅಡಕವಾಗಿವೆ. ಯಜ್ಞ ತತ್ತ್ವ: ಯಜ್ಞ ಸೃಷ್ಟಿಗೂ ಮೂಲವೆಂದು ವೇದ ಸಾರುತಿದೆ. ದೇವತೆಗಳು ನಡೆಸಿದ ಪುರಷಯಜ್ಞದಿಂದ ಈ ವಿಶ್ವ ಸೃಷ್ಟಿಯಾಯಿತೆಂದು ಋಗ್ವೇದದ ಪುರಷಸೂಕ್ತ ಹೇಳುತ್ತದೆ.* ಯಜ್ಞವೇ ಸೃಷ್ಟಿನಿಯತಿರೂಪದ ಋತಕ್ಕೂ ಮೂಲ. ಮಾನವ ತನ್ನದೆಂದು ಹೇಳಿಕೊಳ್ಳುವ ವಸ್ತು ಪ್ರಪಂಚದಲ್ಲಿ ಯಾವುದೂ ಇಲ್ಲ. ಅವನು ಸ್ವಾರ್ಥಕ್ಕಾಗಿ ಸಂಪಾದಿಸಿದ ಹಣ ಮೊದಲುಗೊಂಡು ಮುಕ್ತಿಗಾಗಿ ಮಾಡುವ ತಪಸ್ಸಿನ ತನಕ ಎಲ್ಲಕ್ಕೂ ಯಜ್ಞವೆ ಮೂಲ; ಕೊನೆಗೆ ಎಲ್ಲವೂ ಅದರಲ್ಲಿಯೆ ಲಯಹೊಂದಬೇಕು. ಒಟ್ಟಿನಲ್ಲಿ ಮಾನವನ ಸರ್ವಸಿದ್ಧಿ ಆ ಯಜ್ಞದಿಂದಲೆ ಲಭಿಸಬೇಕು.[4] ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಯಜ್ಞದಿಂದ ಬಂದುದನ್ನು ಮತ್ತೆ ಯಜ್ಞರೂಪದಿಂದ ನಿವೇದಿಸದಿದ್ದರೆ ಮಾನವ ವಂಚಕನಾಗುತ್ತಾನೆ.[5] ಅವನಿಗೆ ತನ್ನ ಸಾಧನೆಯ ಪರಮಪ್ರಯೋಜನ ಸಿದ್ಧಿಸುವುದಿಲ್ಲ. ಒಟ್ಟಿನಲ್ಲಿ ನಿಷ್ಕಾಮವಾದ ಸ್ವಾರ್ಪಣವೆ ಯಜ್ಞವೆಂದು ಹೇಳಬಹುದು. “ಭಗವದರ್ಪಿತಮಾಗೆ, ಸಾವುದುಂ ಬರ್ದುಕುವೋಲ್ ನಾಟಕದಲ್ಲಿ ಈ ತತ್ವಗಳು ಮೈದೋರಿರುವ ಬಗೆ: ಮೇಲೆ ನಿರೂಪಿತವಾಗಿರುವ ಗುರು, ಕರ್ಮ ಮತ್ತು ಯಜ್ಞ ತತ್ತ್ವಗಳು ಈ ನಾಟಕದಲ್ಲಿ ಹೇಗೆ ಮೈದೋರಿವೆಯೆನ್ನವುದನ್ನು ನೋಡಬಹುದು. ಏಕಲವ್ಯ ವ್ಯಾಧಪುತ್ರ. ದ್ರೋಣಮಹಿಮೆಯನ್ನು ಕೇಳಿ ಆತನಿಂದ ಬಿಲ್ ಬಿಜ್ಜೆಯನ್ನು ಕಲಿತು ಬರುವುದಾಗಿ ತಂದೆಯನ್ನು ಬೇಡುತ್ತಾನೆ. ” ………… ಅವರ್ ಪಾರ್ವರ್. ಎಂದು ತಂದೆ ಹೇಳುತ್ತಾನೆ. ಮಗ ತಂದೆಯ ಕಾಲು ಹಿಡಿದು ಎಂತಾದರೂ ಗುರುವನ್ನು ಒಪ್ಪಿಸಿ ಕಲಿತು ಬರುವೆನೆಂದು ದೈನ್ಯದಿಂದ ಬೇಡುತ್ತಾನೆ. ತಂದೆ ಕನಿಕರಿಸಿ ಹರಸಿ ಕಳುಹಿಸಿಕೊಡುತ್ತಾನೆ. ಅರಸರೂರಿನಲ್ಲಿ ಆ ಕಾಡನಿಗೆ ಕಣ್ ಕಟ್ಟಿದಂತಾಗುತ್ತದೆ. ಅವನ ಓರಗೆಯವನಾದ ಅಶ್ವತ್ಥಾಮನ ಸ್ನೇಹ ಅವನಿಗೆ ಪುಣ್ಯದಂತೆ ದೊರಕುತ್ತದೆ. ಅವನ ಮೂಲಕ ಗುರು ದ್ರೋಣನ ಪರಿಚಯವಾಗುತ್ತದೆ. ಅವನು ಶೂದ್ರನೆಂದು ದ್ರೋಣ ಅವನನ್ನು ತಿರಸ್ಕರಿಸಲಿಲ್ಲ. “ಅಶ್ಥತ್ಥಾಮ, ನಮ್ಮ ಚಟ್ಟರೊಳಿವನುಮೊರ್ವನ್ ಎಂದು ಗುರು ಮಗನಿಗೆ ಹೇಳುವನು. ಆದರೆ ತಾನು ‘ಅಸಾಮಾನ್ಯ’ನೆಂದು ಭಾವಿಸಿಕೊಂಡಿರುವ ಅರ್ಜುನನಿಗೆ ಆ ಸಾಮಾನ್ಯನ ಸಂಪರ್ಕ ಸಹ್ಯವೆನಿಸುವುದಿಲ್ಲ. ಏಕಲವ್ಯನು ವಿದ್ಯೆಯನ್ನು ಕಲಿತ ಮೇಲೆ ಪಾಂಡವರ ಸೇವೆಗೇ ನಿಲ್ಲುವನೆಂದು ಗುರು ಹೇಳಿದರೂ ಅರ್ಜುನನ ಅಸೂಯೆ ತಣಿಗೊಳಲಿಲ್ಲ. ಅದ್ದರಿಂದ ದ್ರೋಣನು ಏಕಲವ್ಯನನ್ನು ತನ್ನ ಮನೆಯಲ್ಲಿಯೆ ಇಟ್ಟುಕೊಂಡು ವಿದ್ಯೆ ಕಲಿಸುತ್ತಾನೆ. ವಿದ್ಯೆ ಸಾಗುತ್ತಿರುವಾಗಲೆ ತಂದೆಯ ದುರ್ಮರಣ ವಾರ್ತೆಯನ್ನು ಕೇಳಿ ಏಕಲವ್ಯನು ಗುರುವಿನ ಹರಕೆಯನ್ನು ಹೊತ್ತು ಮನೆಗೆ ಮರಳಬೇಕಾಗುತ್ತದೆ. ಆದರೇನು? ದ್ರೋಣನ ಪಾರ್ಥಿವ ಶರೀರ ಹಿಂದೆ ನಿಂತರೂ ದ್ರೋಣಗುರು ಏಕಲವ್ಯನಲ್ಲಿ ಉದ್ಭವಿಸುತ್ತಾನೆ. ದಿನದಿನಕ್ಕೂ ಅವನ ಶ್ರದ್ಧಾಭಕ್ತಿಗಳು ವರ್ಧಿಸುತ್ತವೆ. ಆ ಶ್ರದ್ಧಾಭಕ್ತಿಗಳೆ ಅವನಿಗೆ ವಿದ್ಯಾಗವಾಕ್ಷವಾಗುತ್ತವೆ. ತಾನು ನಿಂತೆಡೆ ಕುಳಿತೆಡೆ ತನ್ನ ಸುತ್ತಮುತ್ತ ಆ ಗುರುಪ್ರತೀಕವನ್ನೆ ಕೊರೆದು ಸಾಧನೆಯಲ್ಲಿ ತೊಡುಗುತ್ತಾನೆ. ಕ್ರಮೇಣ ಧನುರ್ವಿದ್ಯೆಯೆಲ್ಲ ವಶವಾಗುತ್ತದೆ. ಹೀಗಿರುವಾಗ ಒಮ್ಮೆ ಅವನ ಅರಣ್ಯ ರಾಜ್ಯಕ್ಕೆ ಬಂದ ಅರ್ಜುನ ಏಕಲವ್ಯನ ಶಬ್ದವೇಧಿವಿದ್ಯೆಯನ್ನು ಕಂಡು ವಿಸ್ಮಯಗೊಂಡು ಬಿಲ್ವಿದ್ಯೆಯಲ್ಲಿ ತನ್ನನ್ನು ಮೀರಿಸಿದವನು ಮತ್ತೊಬ್ಬನಿದ್ದುದಕ್ಕೆ ಅಸೂಯೆಯಿಂದ ಖೇದಗೊಳ್ಳುತ್ತಾನೆ. ತಾನು ಅದ್ವಿತೀಯ, ನಾಗರಿಕ, ಸದ್ವಂಶಜ ಎಂದುಕೊಂಡಿದ್ದ ‘ಬಿಂಕಗುಳಿ’ ಅರ್ಜುನನ ಅಟ್ಟಹಾಸದ ಮಾತುಗಳಿಗೆ ಏಕಲವ್ಯ ವಿನೀತನಾಗಿ ಅಹಂಕಾರ ವರ್ಜ್ಯನಾಗಿ ಉತ್ತರ ಕೊಡುತ್ತಾನೆ. ಕಾಡನ ಮೇಲೆ ಕೈಮಾಡುವುದು ಅವಮಾನವೆಂದು ತಿಳಿದ ಆ ಅರ್ಜುನನ ಮಾತ್ಸರ್ಯ ಗುರುವನ್ನೆ ಕಾಡಿಗೆ ಎಳೆತರುತ್ತದೆ. ತನ್ನ ಗುರು, ಆತ್ಮಗುರು, ಲೋಕಗುರು ಬರುವನೆಂಬ ಹಿಗ್ಗು ಏಕಲವ್ಯನಿಗೆ. ಆ ಘಟನೆ, ಏಕಲವ್ಯನ ಬಳಿಗೆ ದ್ರೋಣ ದೈಹಿಕವಾಗಿ ಆಗಮಿಸುತ್ತಾನೆ ಎಂಬರ್ಥದಲ್ಲಿ ಮಾತ್ರವೆ ಅಲ್ಲ, ಅದೊಂದು ಪೂರ್ಣಪ್ರತಿಮೆಯಾಗಿ ಜಗದ್ಗುರುವಿನ ಆವಿರ್ಭಾವವನ್ನು ಸೂಚಿಸುತ್ತದೆ. ಗುರು ಬರುವ ದಿನ ಜಗತ್ತು ಎಚ್ಚರುವ ಮುನ್ನವೆ ಏಕಲವ್ಯ ಎದ್ದು ವ್ರತನಿಷ್ಠನಾಗಿ ಗುರುಪೂಜೆಗೆ ತೊಡಗಿದ್ದಾನೆ. ಪ್ರಶಾಂತ ಪ್ರಾತಃಕಾಲದ ‘ಕತ್ತಲೆ ಬಸಿರ ಅಂತರಾಳ’ದಿಂದ ಅಬ್ಬಿಯ ಒಂಕಾರಶೃತಿಯೊಡನೆ ಮಿಲನಗೊಂಡು ನಿರ್ಜನವನಪ್ರದೇಶದಲ್ಲಿ ಮಧುರತೆಯನ್ನೂ ಭಕ್ತಿಭಾವವನ್ನು ಉಕ್ಕಿಸುತ್ತಿರುವ ಗುರುಸ್ತೋತ್ರ ಕೇಳಬರುತ್ತದೆ. “ಇಂದು ಗುರುವೈತಪ್ಪನೆನ್ನೀ ವನಸ್ಥಲಕೆ! ಎಂಬ ಬಾವವೊಂದೆ ಅವನ ಹೃದಯವನ್ನು ಆವರಿಸುತ್ತದೆ. ನಿಸರ್ಗವ್ಯಾಪಾರದಲ್ಲಿಯೂ ಅದೇ ಭಾವ ಪ್ರತಿಫಲಿತವಾಗಿರುವಂತೆ ಅವನಿಗೆ ಕಾಣುತ್ತದೆ: “ಕಂದರದೊಳಲೆಯುತಿಹ ಮಂಜು ಮೋಡಂ, ನೋಡ, ಅವನು ಹೀಗೆ ಭಕ್ತಿಸಮಾಧಿಯಲ್ಲಿ ತಲ್ಲೀನನಾಗಿರುವಾಗ ಬೆನ್ನ ಹಿಂದೆ ದುಮುಕುತ್ತಿರುವ ಅಬ್ಬಿ ಹಿಂದಿನ ರಾತ್ರಿಯ ಕನಸನ್ನು ಕೆರಳಿಸಿ ಮುಂಬರಲಿರುವ ದುರ್ಘಟನೆಯನ್ನು ಅವನ ಅಂತರಾತ್ಮಕ್ಕೆ ಅಸ್ಪಷ್ಟವಾಗಿ ಸೂಚಿಸುತ್ತದೆ: “ಓ ಲಾಸ್ಯಮಯಿ, ನಿರ್ಝರಿಣಿ, ನಿನಗಿದೊ ನಮಸ್ಕಾರ! ಈ ಶಕುನದ ಮುನ್ಸೂಚನೆಗೆ ತುಸು ಹೊತ್ತು ಚಿಂತಾಮಗ್ನನಾದವನು ಕೂಡಲೆ ಎಚ್ಚತ್ತು, ಗುರು ಬರುವ ದಿನ ಚಿಂತೆ ಸಲ್ಲದು. “ದುಃಸ್ವಪ್ನ ಮಾದೊಡಂ ದಿವ್ಯ ದಿಟಂ! ಇಂತಪ್ಪ ಶುಭದಿನಕೆ ಅದೆಂತಪ್ಪ ನಾಂದಿಯೊ!” ಎಂದು ಮರುಕೊಳಿಸಿದ ಉತ್ಸಾಹದಿಂದ, ಭಕ್ತಿಭಾವದ ಆವೇಶದಿಂದ ತನ್ನನ್ನು ಮರೆಯುತ್ತಾನೆ. ಮುಪ್ಪಿನ ತಾಯಿಯ ಅಕ್ಕರೆಯ ಕೂಗು ಕೇಳಿದಾಗಲೆ ಅವನಿಗೆ ಎಚ್ಚರ. ಆ ಏಕಮಾತ್ರ ಪುತ್ರನೆ ಅವಳ ಕಣ್ನೆಲೆ, ಬಾಳ್ನೆಲೆ, ಅವನೇ ಅವಳ ಉಸಿರು. ಬೆಳಗಿನಿಂದ ಮಗನಿಗೆ ಊಟವಿಲ್ಲವೆಂಬ ಸಂಟಕದಿಂದ ತಾನೇ ಹಣ್ಣು ಜೇನುಗಳನ್ನು ಹೊತ್ತು ತಂದಿದ್ದಾಳೆ. ಆದರೆ ಬೇಂಟೆದೇವರನ್ನು ಬಿಟ್ಟು ಬೇರೆ ದೇವರನ್ನು ಕಾಣದ ಕೇಳದ ತಾಯಿಯ ಅಕ್ಕರೆಯ ಸವಿಮಾತುಗಳಲ್ಲಿ ಮಗ ತಲ್ಲೀನನಾಗುತ್ತಾನೆ. ತಾಯಿಗೆ ತಿಳಿಯುವಂತೆ ತನ್ನ ಬಿಲ್ವಿದ್ಯಗೆ ಕಾರಣನಾದ ಗುರುವಿನ ವಿಚಾರವನ್ನು ವಿವರಿಸುತ್ತಾನೆ. ಇವರ ಹಾಸ್ಯಮಯ ಸಂಭಾಷಣೆಯ ನಡುವೆ ಏಕಲವ್ಯನ ಮುದ್ದಿನ ಜಿಂಕೆ ಹಣ್ಜೇನ್ಗಳನ್ನು ಕಬಳಿಸುತ್ತದೆ. ತಾಯಿ ಛೀಗುಟ್ಟಿದ ಆ ‘ಕಳ್ಳಮರಿ’ಯನ್ನು ಏಕಲವ್ಯ ಮುದ್ದಿಸುತ್ತಾನೆ. ಅಷ್ಟರಲ್ಲಿ ಆಚಾರ್ಯಾಗಮನವನ್ನು ಪ್ರಕಟಗೊಳಿಸುವ ಕಾವಲ್ ಕಹಳೆಯ ಘೋಷಣೆಯನ್ನು ಕೇಳಿ ಪಾರ್ವರುಣಿಸನ್ನು ಅಣಿಗೊಳಿಸುವಂತೆ ತಾಯಿಗೆ ಹೇಳಿಕಳುಹಿಸಿ, ಗುರುಸ್ತೋತ್ರದಲ್ಲಿ ತಲ್ಲೀನನಾಗಿ ದ್ರೋಣಪ್ರತೀಕಕ್ಕೆ ದೀರ್ಘದಂಡ ಪ್ರಣಾಮಮಾಡುತ್ತಾನೆ. ಕರ್ಮಫಲರೂಪಿಯಾದ ವಿಧಿಯ ಕಠೋರ ನಿಯತಿಯ ವಜ್ರ ಪಂಜರದಲ್ಲಿ ಸಿಕ್ಕಿ “ಕೌರವರ ಪಾಂಡವರ “ನನ್ನಹಂಕಾರದಾ[6] ಛಲಮೆ ಮರಿಯಿಕ್ಕಿದುದು ಒಬ್ಬನ ಅಹಂಕಾರವೆ ಮತ್ತೊಬ್ಬನ ಅಹಂಕಾರಕ್ಕೆ ಕಾರಣವಾಗಿ ಕರ್ಮ ಪರಂಪರೆ ಜನ್ಮ ಜನ್ಮಾಂತರಗಳ ಬೆನ್ನು ಹತ್ತುತ್ತದೆ. ಅವನಿಗೆ ಮುಂದಾಗುವುದೆಲ್ಲ ಹೇಗೆ ಅರಿವಾಗಬೇಕು? ಅವನು ಎಲ್ಲರಂತೆ ವಿಧಿಯ ಕೈಯ ಕೂಸು. ಸಾಧನೆಯ ಫಲವಾಗಿ ಅವನು ಗುರುಪಟ್ಟಕ್ಕೆ ಯೋಗ್ಯನಾಗಿದ್ದರೂ ಅವನಿಗೆ ಪೂರ್ಣವಿದ್ಯಾಶಕ್ತಿಯ ಕೃಪೆ ಒದಗಿಲ್ಲ. ಬಾಳು ಸಾಗಿದಂತೆಲ್ಲ ಅದು ಅವನಿಗೆ ಅರ್ಥವಾಗುತ್ತದೆ: “ಬಿಂಕಕ್ಕೆ ಡೊಳ್ಳೀವುದದು ವಿದ್ಯೆಯೆ? ಅವಿದ್ಯೆ! ತಾನು ದಾರಿತಪ್ಪಿ ನಡೆಯುತ್ತಿರುವುದು ಅವನಿಗೆ ಅರಿವಾಗುತ್ತದೆ. ಕಾಡಿನಲ್ಲಿ ಹೋಗುತ್ತಿರುವಾಗ ಏಕಲವ್ಯನ ಪರಮ ಮಿತ್ರನೂ ತನ್ನ ಏಕಮಾತ್ರ ಪುತ್ರನೂ ಆದ ಅಶ್ವತ್ಥಾಮನನ್ನು ಕುರಿತು ಹೇಳುವ “ಬಟ್ಟೆಯಿರದೆಡೆ ಬಟ್ಟೆಯರುಸುತಿರ್ಪಯ್, ವತ್ಸ! ಎನ್ನುವ ಈ ಮಾತು ಅದೆಷ್ಟು ಧ್ವನಿಪೂರ್ಣವಾಗಿದೆ? ಅವನ ಬಾಳಿನ ಕರುಣಾಜನಕವಾದ ಕತೆಯನ್ನು ಅರಿತವರಿಗೆ ಈ ಮಾತು ಚೆನ್ನಾಗಿ ಅರ್ಥವಾಗುತ್ತದೆ. ತನ್ನ ಅಹಂಕಾರವೆ ಕಾರಣವಾಗಿ ಅರ್ಜುನನಿಗೆ ಹಂಗಿಗನಾದುದನ್ನೂ, ಆ ಅರ್ಜುನನನ್ನು ಪೀಡಿಸುತ್ತಿರುವ ‘ಕೀರ್ತಿಶನಿ’ ‘ಪೆಸರ ಬಿಂಕ’ಗಳನ್ನು ನೆನೆದಾಗ ಅವನ ಹೃದಯ ಸಂಕಟದಿಂದ ಕುದಿಯುತ್ತದೆ. ಅಪರಾಧ ತನ್ನದಾದರೂ ಅದು ತನ್ನ ಕೈಮೀರಿದೆ: “ಕೂಳ್ಮಿಣಿಯ ಪಿಡಿದಿರ್ಪುದಾ ಬಿದಿಯ ಕಯ್ ! ರಂಗಕ್ಕೆ ದುಮುಕಿ ಆಗಿದೆ. ಸೋಲೊ ಗೆಲೆವೊ ಸೆಣಬೇಕಾಗಿದೆ. ಅರ್ಜುನನಿಗೆ ತಾನು ಕೊಟ್ಟ ವಚನಕ್ಕೆ ಭಂಗ ಬರದಂತೆ, ಏಕಲವ್ಯನಿಗೆ ‘ಆವುದುಂ ಪೆರ್ ಕೇಡು’ ಒದಗದಂತೆ ‘ಆ ದೈವಮಂ ನಿಮ್ಮಿ ಕೆಲಸಮಾಳ್ಪೆನ್’ ಎಂದುಕೊಳ್ಳುತ್ತಾನೆ. ಅರ್ಜುನನ ಮತ್ಸರಾಗ್ನಿಯನ್ನು ನಂದಿಸುವುದಕ್ಕಾಗಿ ಏಕಲವ್ಯನ ಹೆಬ್ಬೆರಳನ್ನು ಆಹುತಿಯಾಗಿ ತೆಗೆದುಕೊಂಡ ಚಿತ್ರ ಕೊನೆಯ ‘ಯಜ್ಞ’ ದೃಶ್ಯದಲ್ಲಿ ಮೂಡಿದೆ. ಏಕಲವ್ಯ ದ್ರೋಣನನ್ನು ಗುರುವೆಂದೊಲಿದು, ಲೋಕ ಗುರುವೆಂದು ಶ್ರದ್ಧಾಭಕ್ತಿಗಳಿಂದ ಪೂಜಿಸಿದುದಕ್ಕೆ ಕೊಡುವ ಕಾಣಿಕೆ ಇದು! ಗುರುಕಾಣಿಕೆಯನ್ನು ಸಲ್ಲಿಸುವುದರಲ್ಲಿ ಅವನು ತನ್ನ ಸಾಧನೆಗೆ ಸಾರ್ಥಕತೆಯನ್ನು ಕಾಣುತ್ತಾನೆ. ಏಕಲವ್ಯನ ಹೆಬ್ಬೆರಳನ್ನು ಆಹುತಿ ತೆಗೆದುಕೊಳ್ಳದೆಯೆ ಅವನ ಮಹಿಮಾಶಕ್ತಿಯನ್ನು ಕ್ಷಯಿಸುವುದು ಸಾಧ್ಯವೆ ಎಂದು ನಿರ್ಣಯಿಸಿ, ಪರೀಕ್ಷೆ ಮಾಡುವ ನೆವದಿಂದ ಗಗನಪಕ್ಷಿಯೊಂದನ್ನು ಗುರಿಯಿಟ್ಟು ಕೆಡುವುವಂತೆ ದ್ರೋಣ ಶಿಷ್ಯನಿಗೆ ಆಜ್ಞೆಮಾಡುತ್ತಾನೆ. ಮುಗೀಲಾಚೆ ಇದ್ದ ಪಕ್ಷಿಯ ಕೊರಳುಲಿ ಸಂಯಮಿಯೂ ಸರ್ವಭೂತಹಿತರತನೂ ಆದ ಏಕಲವ್ಯನಿಗೆ ಕೇಳಿಸುತ್ತದೆ. ಆದರೆ ಪಾಪದ ಲೇಪವಿಲ್ಲದ ಪಕ್ಷಿಯನ್ನು ಕೊಂದು ತನ್ನ ವಿದ್ಯೆಗೆ ಪಾಪವನ್ನು ಲೇಪಿಸಿಕೊಳ್ಳುವುದು ಅವನಿಗೆ ಇಷ್ಟವಿಲ್ಲ. “ಅಪರಾಧಮಿಲ್ಲದಾ ಸಾಧುವಂ ಕೊಲಲ್ಕಲ್ತು, ಮಂತ್ರಘೋಷೋಪಮವಾದ ಶಿಷ್ಯನ ಈ ಮಾತುಗಳಿಂದ ಗುರು ಮರು ಹುಟ್ಟು ಪಡೆದಂತಾಗುತ್ತಾನೆ. ಕೂಡಲೆ ಸಗದ್ಗದನಾಗಿ ಶಿಷ್ಯನ್ನು ಆಲಿಂಗಿಸಿಕೊಂಡು “ಪುಣ್ಯವಂತನ್ ನೀನ್, ಏಕಲವ್ಯ! ಎಂದು ಹೇಳಿ ನಿಡುಸಯ್ಯುತ್ತಾನೆ. ಅವನ ನಿಟ್ಟುಸಿರು ಶಿಷ್ಯನ ಹೃದಯವನ್ನು ಕಲಕುತ್ತದೆ. ಗುರು ಘೋರಸಂಕಟಕ್ಕೆ ಈಡಾಗಿರುವುದು ಅವನಿಗೆ ಅರಿವಾಗುತ್ತದೆ. ತಾನೇ ಮುಂದೆ ಬಂದು “ಅದಕೆ ಪರಿಹಾರಮೆನ್ನಧೀನಮಿರ್ಪೊಡೆ ಎಂದು ನಿಶ್ಚಲಮನಸ್ಸಿನಿಂದ ಉಸುರುತ್ತಾನೆ. “. . . ಇತ್ತ ಗುರುವಿಂಗೀವುದೇನ್ ವೇದೋಪನಿಷತ್ತಿನ ಸಾರಸರ್ವಸ್ವವಾದ ಈ ಆಧ್ಯಾತ್ಮತತ್ತ್ವ, ಸೃಷ್ಟಿಯ, ಜೊತೆಗೆ ಮಾನವನ ಬಾಳಿನ ಈ ಹಿರಿಯ ತತ್ತ್ವ, ಈ ಸರಳಮಂತ್ರದಲ್ಲಿ ಮೈಗೂಡಿದೆ. ಹಿಂದಿನ ರಾತ್ರಿ ತನಗಾದ ಕನಸಿನ ಅನುಭವವನ್ನು ನೆನೆದುಕೊಳ್ಳುತ್ತಾನೆ. ಕನಸಿನಲ್ಲಿ ಅವನ ಭವಿಷ್ಯದ ಸೂಚನೆಯ ಅರಿವಾಗಿದೆ.* ಹಿರಿಯ ಚೇತನಗಳು ಕಾಣುವ ಕನಸೂ ನನಸೇ! ಗುರು ‘ಬಿಲ್ಬಿಜ್ಜೆ ಗುಸಿರಪ್ಪ ಆ ಪೆರ್ ಬೆರಳ್’ ಅನ್ನು ಕೊಡೆಂದಾಗ ಶಿಷ್ಯ “. . . ಸರ್ವಮಂ ನಿನಗಾಂ ಸಮರ್ಪಿಸಲ್ ಎಂದು ಸಂತೃಪ್ತನಾಗಿ ನುಡಿಯುತ್ತಾನೆ. ಗುರು ಅತಿದುಃಖದಿಂದ ದೈನ್ಯದಿಂದ ಕೇಳಿದ ಬಲಗೈ ಹೆಬ್ಬೆರಳನ್ನು ಶಿಷ್ಯ ಕೋಡದೆ ಕೊಂಕದೆ ಕುಸಿಯದೆ ಸಮ್ಮಾನದಿಂದ “ಕೊಳ್ ದಕ್ಷಿಣೆಯನ್ ಇದನ್! ಗೆಲ್ಗೆ ಧರ್ಮಂ! ಎಂದು ದ್ರೋಣಪ್ರತೀಕದ ಮುಂದಣ ಹಾಸುಬಂಡೆಯ ಮೇಲೆ ಇಟ್ಟು ಎಡಗೈಯ ಬಾಣದಿಂದ ಕತ್ತರಿಸಿ, ಆ ಬೆರಳ ರೂಪದಲ್ಲಿ ತನ್ನ ಸರ್ವಸ್ವವನ್ನು ನರರೂಪ ನಿಮಿತ್ತನಾದ ಲೋಕಗುರುವಿಗೆ ಸಮರ್ಪಿಸುತ್ತಾನೆ; ತನ್ನ ಬಾಳನ್ನು ಸಾರ್ಥಕಗೊಳಿಸುತ್ತಾನೆ; ಆತ್ಮ ತೃಪ್ತಿಯನ್ನು ಸವಿದು ಸುಖಿಸುತ್ತಾನೆ. ರಕ್ತ ಸೋರುವ ಗಾಯಕ್ಕೆ ಮದ್ದಿಕ್ಕಲೆಂದು ಏಕಲವ್ಯ ಮರೆಯಾದ ಮೇಲೆ ದ್ರೋಣ ಮಡುಗಟ್ಟಿ ನಿಂತಿದ್ದ ರಕ್ತವನ್ನು ಬಾಗಿನೋಡುತ್ತಾನೆ. ಆ ರಕ್ತದಲ್ಲಿ ವಿಕೃತವಾದ ತನ್ನ ಮುಖ ಕಾಣಿಸುತ್ತದೆ. ಕೂಡಲೆ “ಖಡ್ಗ ಮುಷ್ಟಿಯ ಭೀಮ ಹಸ್ತವೊಂದೊಯ್ಕನೆರಗಿ ಕಳ್ತರಿಸಿತಾ ನನ್ನ ಪಡಿನೆಳಲ ಕೊರಳಂ! ಕೆಡೆದುರಳ್ದುದು ಮಂಡೆ.” ಆಗತಾನೆ ಬಂದ ಏಕಲವ್ಯನೊಡನೆ, “. . . . ನಿನ್ನೀ ಬೆರಳ್ಗೆ ಬಲಿಯಾಗುವದೆಂಬ ಭವಿಷ್ಯದ್ಘಟನೆ ಆ ಪ್ರತಿಬಿಂಬದಲ್ಲಿ ಸೂಚಿತವಾಯಿತೆಂದು ಆಶಂಕಿಸಿ ಹೇಳುತ್ತಾನೆ. ದ್ರೋಣ ಶಿಷ್ಯನನ್ನು ಹರಸಿ ಆತನಿಂದ ಬೀಳ್ಕೊಂಡು ಆ ಕಡೆ ತೆರಳಿದ ಮೇಲೆ ಈ ಕಡೆ ತಾಯಿ ಬಂದು ತನ್ನ ಮಗನಿಗೆ ಒದಗಿದ ದುರವಸ್ಥೆಯನ್ನು ಕಂಡು ಕರುಳಿರಿಯುವ ಸಂಕಟದಿಂದ ಕುಪಿತಳಾಗಿ “ಆರ್ಗೊ ಬಲಿ ನನ್ನ ಕಂದನ ಬೆರಳ್ ಎಂದು ಶಪಿಸುತ್ತಾಳೆ.[8] ಆ ಮಾತೃಶಾಪದ ಭೀಷಣ ಪರಿಣಾಮಕ್ಕೆ ಬೆದರಿದ ಏಕಲವ್ಯ, “ಆಗಬಾರದುದಾಯ್ತೆ? ಎಂದು ಸುಯ್ದು ಕ್ಷೇಮಕಾತರನಾಗಿ ಪ್ರಾರ್ಥಿಸುತ್ತಾನೆ: “ಅಂತರತಮ ನೀ ಗುರು, * ಶ್ರದ್ಧಾವನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ [1] ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ * ಆತ್ಮಾ ತ್ವಂ ಗಿರಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ [2] ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ [3] ಇದರ ವಿವರಣೆಯನ್ನು ಮುಂದೆ ಕಾಣಬಹುದು. * ಭಗವದ್ಗೀತೆಯ ಈ ಶ್ಲೋಕಗಳಲ್ಲಿಯೂ ಇದೇ ತಾತ್ಪರ್ಯ ಧ್ವನಿತವಾಗುತ್ತದೆ. [4] ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ [5] ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಾಭಾವಿತಾಃ [6] ದ್ರೋಣನಿಗೆ ದ್ರುಪದನಿಂದ ಆದ ಅವಮಾನವನ್ನು, ಅದಕ್ಕೆ ಪ್ರತೀಕಾರವಾಗಿ ಅವನು ಅರ್ಜುನನಿಂದ ದ್ರುಪದನಿಗೆ ಉಂಟುಮಾಡಿದ ಅವಮಾನವನ್ನೂ ಇಲ್ಲಿ ನೆನೆಯಬಹುದು. [7] ಬಹುಶಃ ದ್ರೋಣ ಹೇಳಿಕೊಂಡ ಈ ಮಾತು ನಮ್ಮ ಈಗಿನ ವಿದ್ಯಾಭ್ಯಾಸ ಕ್ರಮವನ್ನು ಪೋಷಿಸುತ್ತಿರುವ ಅಧ್ಯಾಪಕರೂ ಹೇಳಿಕೊಳ್ಳಬಹುದಲ್ಲವೆ? * ಆ ಸುಂದರ ಸ್ವಪ್ನಪ್ರತಿಮೆಯಲ್ಲಿ ಏಕಲವ್ಯ ಮುಂದೆ ಕೃಷ್ಣನಿಂದ ತನಗೊದುಗುವ, ಕೃಷ್ಣನಿಗೆ ಸರ್ವಸ್ವವನ್ನು ಸಮರ್ಪಿಸಿಕೊಳ್ಳುವ ಗತಿಯನ್ನೂ ಸ್ಥಿತಿಯನ್ನೂ ಮುಂಗಂಡಂತಿದೆ. “ನಿಂದನೊರ್ವನ್ ನೀಲದೇಹಿ. ಕುಣಿದುದು ನವಿಲ್ ಕನಸಿನಲ್ಲಿ ಕಂಡವನು ಶ್ರೀ ಕೃಷ್ಣನೆಂಬುದು ಈ ವರ್ಣನೆಯಿಂದ ಸೂಚಿತವಾಗುತ್ತದೆ. * ಮುಂದೆ ಧೃಷ್ಟದ್ಯಮ್ನ ದ್ರೋಣನನ್ನು ಕೊರಳು ಕತ್ತರಿಸಿ ಕೊಲ್ಲುವುದೂ, ಧೃಷ್ಟದ್ಯಮ್ನನನ್ನು ಅಶ್ವತ್ತಾಮ ಕತ್ತುಹಿಸುಕಿ ಕೊಲ್ಲುವುದೂ, ಕೊನೆಗೆ ಅಶ್ವತ್ತಾಮನು ಕೃಷ್ನನಿಂದ ಶಾಪ ಪಡೆದು ತನ್ನ ಶಿರೋರತ್ನವನ್ನು ಕಳೆದುಕೊಂಡು ಮೂರು ಸಾವಿರ ವರ್ಷಗಳು ಕಾಡುಮೇಡುಗಲ್ಲಿ ಯಾರೊಡನೆಯೂ ಮಾತಿಲ್ಲದೆ ಯಾರ ಕಣ್ಣಿಗೂ ಬೀಳಲಾರದೆ ಅಲೆದುದೂ ಈ ಕರ್ಮಪರಂಪರೆ. [8] ಮಾತೃಶಾಪದ ಸಂದರ್ಭದಲ್ಲಿ ‘ತಪೋನಂದನ’ ದ ‘ಕಾವ್ಯವಿಮರ್ಶೆಯಲ್ಲಿ ಪೂರ್ಣದೃಷ್ಟಿ’ ಎಂಬ ಪ್ರಬಂಧದಲ್ಲಿ ಬರುವ ದುರ್ವಾಸ ಶಾಪ ವೃತ್ತಾಂತದ ವಿಷಯವನ್ನು ನೋಡಿ.
ಗುರುಶಿಷ್ಯರಿಬ್ಬರೂ ಪರಸ್ಪರ ಪೂರಕವಾದವರು. ಗುರು ವಿದ್ಯಾಶಕ್ತಿ ಹರಿಯುವ ಪಾತ್ರ; ಶಿಷ್ಯ ವಿದ್ಯಾಶಕ್ತಿಯನ್ನು ಸ್ವೀಕರಿಸುವ ಅವಿದ್ಯೆಯ ಪಾತ್ರ. ನರರೂಪದ ವ್ಯಕ್ತಿಯನ್ನು ಗುರುವನ್ನಾಗಿ ಸ್ವೀಕರಿಸಿದ ಮೇಲೆ ಶಿಷ್ಯನು ಸದಾ ಅವನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಬೇಕು.* ಗುರುವಿನ ಅರ್ಹತೆ ಎಂತಹುದೆ ಆಗಿರಲಿ ಶಿಷ್ಯನು ಆತನಲ್ಲಿ ಸರ್ವಪರಿಪೂರ್ಣನಾದ ಜಗದ್ಗುರುವನ್ನೆ ಕಾಣುತ್ತಾನೆ. ನರಗುರು ನಿಮಿತ್ತಮಾತ್ರ. ಅ ನರಗುರುವಿನ ವ್ಯಕ್ತಿತ್ವದಲ್ಲಿ ಇರಬಹುದಾದ ಇತಿಮಿತಗಳ ಕಡೆಗೆ ಅವನ ಗಮನ ಹರಿಯಬೇಕಾದುದು ಅಗತ್ಯವಲ್ಲ. ಅವನ ಗುರಿ ಶ್ರದ್ಧೆಯಿಂದಲ್ಲದೆ ಕೈಗೂಡುವುದಿಲ್ಲ.
ಜಗದ್ಗುರು, ಏಕಲವ್ಯ, ಬೇರೆ ಗುರುವುಂಟೆ?
ನರಗುರು ನಿಮಿತ್ತಮಾತ್ರನ್.”
ಕುಟಿಲ ಕಾರ್ಯಂಗಳಿಗೆ ನಮ್ಮನ್ ನಿಯೋಜಿಪುದು,
ದೇವನಿಚ್ಛೆಯ ದಿವ್ಯಲೀಲಾಪ್ರಯೋಜನಕೆ.”
ಶ್ರೇಯಸ್ಕರಂ.”
ಬಿಯದರ್ಗೆ ಒವಜುಗೆಯ್ಯಲ್ಕೆ ಒಪ್ಪರ್.
ನಿನ್ನನ್ ಗಹಗಹಿಸಿ ನಕ್ಕು ನೂಂಕುವರ್.”
ನಿನ್ನ ನೇರ್ಗಿರಿಯನೆಂದೀತನನ್ ಕಾಣ್.”
ಪವಿತ್ರತರಮಪ್ಪುದೀ ಕಾಡುಮಲೆ ದಲ್ ದಿಟಂ,
ಪೂಜ್ಯ ಗುರುಪದ ಧೂಳಿಯಿಂ!”
ಗುರುವುಟ್ಟು ಧವಳೋತ್ತರೀಯದಂಚಲಮೆನಲ್
ಸಂಚಲಿಸುತಿಪ್ಪುದು ಕೆರಳ್ಚುತಾಕಾಂಕ್ಷೆಯಂ.
ಅಃ ಆಲಿಸಾ ಅಲೆಯುತಿಹ ಪರಪುಟ್ಟನಿಂಚರಂ
ಬೆಳ್ಳಂಗೆಡೆಯುವೀ ಅರ್ಬ್ಬಿಯೋಂಕಾರಮಂ ಮೀರ್ದು
ಸಾರುತಿಹುದಿಂಗಿತದಿ ಗುರುದೇವನಾಗಮನಮಂ!”
. . . . . . . . . . . . . . . . . . . .
ನನ್ನ ಕಿವಿಗಿಂದಾವ ಮಂತ್ರವನಿಂತು ಘೋಷಿಸುವೆ?
ಕಾಲ ಗಹ್ವರ ಗುಹ್ಯ ಗರ್ಭದೊಳ್
ಸುರುಳಿ ಸುತ್ತಿರುವಾವ ವಿಧಿಯಂ ಮೊರೆದು ಕರೆದು
ಜಾಗ್ರತಂಗೊಳಿಸುತಿಹೆ? ಪುಟ್ಟಿದಂದಿಂ ತೊಟ್ಟು
ನಿನ್ನ ಜೋಗುಳವೆನ್ನ ತೊಟ್ಟಿಲಂ ತೂಗಿರ್ಪುದಾದೊಡಂ
ನಿನ್ನ ನೀರ್ಗೋರಳಿಂದು ಬೇರೆಯೇಂಬಂದದಿಂ
ಹೃದಯಮಸ್ಥಿರಮಾಗೆ ಸಾರುತಿಹುದಾದೇಶಮಂ.”
ದಾಯಾದಿ ಮಚ್ಚರದ ಬೇಗೆಯೊಳ್ ಬೆಂದು” ಸೋತಿರುವ ದ್ರೋಣನು ತನ್ನ ವಚನರಕ್ಷಣಾರ್ಥವಾಗಿ ಶಿಷ್ಯನೆಡೆಗೆ ಬರುತ್ತಾನೆ. ಅವನ ಹೃದಯ ಉಭಯಸಂಕಟಗಳ ಇಕ್ಕುಳದಲ್ಲಿ ಸಿಕ್ಕಿ ನರಳುತ್ತಿದೆ. ಒಂದು ಕಡೆ ‘ಬಿಂಕಗುಳಿ’ ಅರ್ಜುನನಿಗೆ ಕೊಟ್ಟಿರುವ ವಚನ, ಮತ್ತೊಂದು ಕಡೆ ಆ ವಾಗ್ದಾನದ ಫಲವಾಗಿ ಮುಗ್ಧನೂ ನಿಷ್ಕಲ್ಮಷನೂ ಆದ ಶಿಷ್ಯನಿಗೆ ಒದಗಲಿರುವ ಕೇಡು; ವಚನಭಂಗ ಇಲ್ಲವೆ ಪಾಪರಕವಾದ ಹೇಯಕಾರ್ಯ — ಈ ನಡುವೆ ಮನಸ್ಸು ಇಬ್ಬಗಿದಂತಾಗುತ್ತದೆ. ಇಷ್ಟೆಲ್ಲ ಕೇಡಿಗೆ ಮೂಲಕಾರಣ ತನ್ನ ಅಹಂಕಾರವೆಂಬುದನ್ನು ಅರಿತು ತನ್ನನ್ನು ತಾನೆ ನಿಂದಿಸಿಕೊಳ್ಳುತ್ತಾನೆ.
ಪಾರ್ಥನ ಅಹಂಕಾರದೀ ಕ್ರೂರ ಈಷ್ಯೇಯಂ.”
ತವಿಪುದಾವುದೊ ಅಹಂಕಾರಮಂ ಅದು ವಿದ್ಯೆ;
ಮಿಕ್ಕುದೆಲ್ಲಂ ಅವಿದ್ಯೆ!
ವಿದ್ಯೆಯೆಂಬಾ ಪೆಸರ ಮರೆಯೊಳಾನ್
ಅವಿದ್ಯೆಯಂ ಪೋಷಿಸುವ ಗುರುವಾದೆನಲ್ತೆ![7]
ಪುಟ್ಟುಗುಣಮದು ನಿನಗೆ……”
ನೂಂಕುತಿಹುದನಿಬರಂ ತನ್ನ ಲೀಲಾರ್ಥಂ.
ಅಂತಲ್ಲದಿರೆ, ನಮ್ಮನೆತ್ತಣಿಂದಲೊ ಕರೆದು
ಒಯ್ದು ತಂದೀ ನೃಪಾಲರೂಳಿಗಕೆ ತಳ್ಳುತಿರ್ದುದೆ
ಈಶ್ವರೇಚ್ಛಾರೂಪದೆಮ್ಮ ಕರ್ಮಪಾಶಂ?”
ಆಚಾರ್ಯ, ಆ ವಿದ್ಯೆಯಂ ನೀನಿತ್ತುದೆನಗೆ.
ಮುನಿಗುಂ ಮಂತ್ರಾಧಿದೇವತೆ; ಮೇಣ್,
ದಿವ್ಯ ವಿದ್ಯಾ ಬಲದಿ ಪಾಪಕಾರ್ಯವನೆಸಗೆ
ಧರ್ಮಂ ಋತುಚ್ಯುತನೆನಗೆ ತಾನಗ್ರಮಕ್ಕುಂ; ಮೇಣ್,
ವಿದ್ಯಾಶಕ್ತಿ ತಾನೊಡನೆ ತಿರೋಹಿತಮಕ್ಕುಂ; ಮೇಣ್,
ಆತ್ಮ ಹಾನಿಯಿಂ ಸರ್ವನಾಶಮಕ್ಕುಂ. — ”
ಬರ್ದುಕಿದಿಯ್,
ನೀನ್ ಬರ್ದುಕಿ ನನ್ನಮಂ ಬರ್ದುಕಿಸಿದಯ್! —
ನಿನಗಲ್ತಿದು ಪರೀಕ್ಷೆ, ನನಗುಂ ಕಣಾ!”
ಸಮರ್ಪಿಸುವೆನೆನ್ನ ಸರ್ವಸ್ವಮಂ ನಿನ್ನಡಿಗೆ,
ಗುರುದೇವ. . . .”
ತ್ಯಾಗಮೆ? ಪರಮ ಸಂಪದಮದುವೆ ಪುರುಷಾರ್ಥ
ಸಾಧನಂ! ನಿನ್ನಿಂದೆ ಕಲ್ತೆನಧ್ಯಾತ್ಮಮಂ.
ಪಡೆವುದೆಲ್ಲಂ ಕೊಡುವುದಕ್ಕಲ್ತೆ, ಆರ್ಯ? ಮೇಣ್,
ಪೂರ್ಣಮಂ ಕೊಡದೆ ಪಡೆದಪೆವೆಂತು ಪೂರ್ಣಮಂ?”
ಮನದಂದೆನೀ ಬೆರಳ್ ಅದೇನ್ ಪಿರಿದಲ್ತು,
ಪೆರ್ಬೆರಳ್ ತಾನಾದೊಡಂ! — ”
ಗೆಲ್ಗೆ ದೈವೇಚ್ಛೆ! ನಿಮ್ಮ ವಚನಂ ನಿಲ್ಗೆ!”
ಕೊಳ್ವುದೆಂದೇ ತೋರ್ಪುದಾ ಬಿದಿ
ನನ್ನ ಕೊರಳಂ!
. . . . . . . . . .
ಅಂತೆ ಕರ್ಮದ ಪಾಂಗು*: ಮರಿಗೆ ಮರಿ: ಮರಿಗೆ ಮರಿ:
ಬೆರಳ್ ಗೆ ಕೊರಳ್!”
ಬಲಿಯಕ್ಕೆ ಆ ಪಾಪಿಯ ಕೊರಳ್!”
ಅಯ್ಯೊ, ನನ್ನ ತ್ಯಾಗಂ ವ್ಯರ್ಥಮಾಯ್ತೆ?”
“ದುಡುಕಿದವ್, ಅಬ್ಬೆ,
ನನ್ನನುಂ ಕೊಳ್ಳದೆಯೆ ಬಿಡದು ನಿನ್ನೀ ಶಾಪಂ! ”
ಹೇ ಆತ್ಮತಮೋಹಾರಿ!….”
ಜ್ಞಾನಂ ಲಬ್ದ್ವಾ ಪರಾಂ ಶಾಂತಿಮಚಿರೇಣಾಧಿಗಚ್ಚತಿ
(ಗೀತಾ. ೪ – ೩೯)
ನಾಯಂ ಲೋಕೋsಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ
(ಗೀತಾ. ೪.೪೦)
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಃ |
ಸಂಚಾರಃ ಪಸಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||
— ಶ್ರೀ ಶಂಕರಾಚಾರ್ಯರ ಶಿವಮಾನಸಪೂಜಾ
ತಸ್ಯ ತಸ್ಯಾಚಲಾಂ ಶ್ರದ್ದಾಂ ತಾಮೇವ ವಿದಧಾಮ್ಯಹಮ್
(ಗೀತಾ. ೭ – ೨೧)
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ
ಕರ್ಮ ಬ್ರಹ್ಮೋದ್ಭವಂ ವಿದ್ಧ ಬ್ರಹ್ಮಾಕ್ಷರ ಸಮುದ್ಭವಮ್
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್.
೩=೧೪ – ೧೫
ಅನೇನ ಪ್ರಸವಿಷ್ಯಧ್ವಮೇಷವೋsಸ್ತ್ವಷ್ಟಕಾಮಧುಕ್
೩ – ೧೦
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ
೩ – ೧೨
ತಲೆಯ ಮೇಲೆ. ಹೆಡೆಯೆತ್ತಿದುರಗಗಳ್ ತೋಳ್ಗಳೊಲ್
ತೂಗಿದುವು, ಭುಜದೇಶದಿಂ ಪೊಣ್ಮಿ.”
Leave A Comment