ಹುಕ್ಕೇರಿ

ಜಿಲ್ಲಾ ಕೇಂದ್ರದಿಂದ – ೫೦ ಕಿ.ಮೀ.

ಹುಕ್ಕೇರಿ ಗುಮ್ಮಟಗಳು

ಕ್ರಿ.ಶ. ೧೫೦೨ ರಿಂದ ೧೫೪೦ ರ ಅವಧಿಯಲ್ಲಿ ಬಿಜಾಪುರದ ಆದಿಲ್‌ಶಾಹಿ ವಂಶದ ಐನುಲ್‌ ಮುಲ್ಕಿ ನಿರ್ಮಿಸಿದ ಇವುಗಳನ್ನು ಐನುಬ್‌ ಗುಮ್ಮಟ ಎಂದೇ ಕರೆಯುವರು. ನಂತರ ಪತೇ ಉಲ್ಮಲ್‌ ೧೫೭-೧೫೬೮ರಲ್ಲಿ, ರುಕ್ತುಮ ಝಮಾನ ೧೭ನೇ ಶತಮಾನದಲ್ಲಿ ಕಟ್ಟಿದ ಮೂರು ಗುಮ್ಮಟಗಳಿವೆ. ಒಂದೇ ಸಾಲಿನಲ್ಲಿದ್ದರೂ ಒಂದರ ನೆರಳು ಇನ್ನೊಂದರ ಮೇಲೆ ಬೀಳುವುದಿಲ್ಲ. ೫೦೦ ವರ್ಷಗಳಷ್ಟು ಹಳೆಯದಾದರೂ ಉತ್ತಮ ಸ್ಥಿತಿಯಲ್ಲಿ ಇಲ್ಲಿನ ಕಾರಂಜಿ ಕೊಳಗಳು ಇತಿಹಾಸ ದಾಖಲೆಗಳಾಗಿವೆ.

ಜಿಲ್ಲಾ ಕೇಂದ್ರದಿಂದ ದೂರ: ೫೫ ಕಿ.ಮೀ.
ತಾಲೂಕಾ ಕೇಂದ್ರದಿಂದ ದೂರ: ೧೦ ಕಿ.ಮೀ.

ಅಮ್ಮಣಗಿ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎರಡನೆಯದಾದ ಶ್ರೀಶೈಲದ ಮಲ್ಲಿಕಾರ್ಜುನ ಕ್ಷೇತ್ರದ ಪ್ರತಿಕೃತಿಯಂತಿರುವ ಈ ಕ್ಷೇತ್ರ ಕರ್ನಾಟಕ, ಮಹಾರಾಷ್ಟ್ರದಲ್ಲಿ ಅಪಾರ ಭಕ್ತರನ್ನು ಹೊಂದಿದೆ. ಮಕರ ಸಂಕ್ರಾಂತಿಯಂದು ಪ್ರಾರಂಭವಾಗಿ ೫ ದಿನಗಳ ಕಾಲ ವಿಜೃಂಭಣೆಯಿಂದ ಜಾತ್ರೆಯಾಗುತ್ತದೆ. ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಕೊಂಡಿಯಾಗಿದೆ. ಅಮ್ಮಣಗಿಯ ಮಲ್ಲಿಕಾರ್ಜುನ ದೇವರ ಜಾತ್ರೆ.

ಜಿಲ್ಲಾ ಕೇಂದ್ರದಿಂದ – ೫೫ ಕಿ.ಮೀ.
ತಾಲೂಕಾ ಕೇಂದ್ರದಿಂದ – ೧೦ ಕಿ.ಮೀ.

ಕ್ರಿ.ಶ. ೧೨೫೭ ರ ಕಾಲದ ತೃಟಿತವಾದ ದಾನ ಶಾಸನವನ್ನು ಹೊಂದಿರುವ ಬಸದಿಯ ಖಡ್ಗಾಸನದ ಪಾರ್ಶ್ವನಾಥ ಮೂರ್ತಿಯನ್ನು ಹೊಂದಿದೆ. ದಕ್ಷಿಣಾಭಿಮುಖವಾಗಿರುವ ಈ ಬಸದಿಯು ಆಕರ್ಷಕ ಜಿನ ಸಂಸ್ಕೃತಿಯ ಚಿತ್ರಗಳನ್ನು ಹೊಂದಿದೆ. ನಾಲ್ಕು ಅಂಕಗಳಿಂದಾದ ಬಸದಿಯು ಪ್ರತಿ ಅಂಕಣದಲ್ಲಿಯ ಕೆತ್ತನೆಗಳು ವಿಶೆಷವಾಗಿವೆ. ಅಮ್ಮಣಗಿಯು ಜೈನ ಇತಿಹಾಸಕ್ಕೆ ಇನ್ನೂ ಪುರಾವೆಗಳನ್ನು ಒದಗಿಸುವಂತಿದೆ. ಸಂಶೋಧನೆ ನಡೆಸಿದರೆ ೯ನೇ ಶತಮಾನದ ಹಲವು ರಚನೆಗಳು ಸಿಗಬಹುದು.

ಜಿಲ್ಲಾ ಕೇಂದ್ರದಿಂದ – ೫೦ ಕಿ.ಮೀ.
ತಾಲೂಕಾ ಕೇಂದ್ರದಿಂದ – ೨೫ ಕಿ.ಮೀ.

ನಿಡಸೋಸಿ ಮಠ

೨೬-೦೮-೧೭೬೫ ರಂದು ನಿಜಲಿಂಗಪ್ಪ – ಬಾಳಮ್ಮ ದಂಪತಿಗಳಿಂದ ಸ್ಥಾಪಿತವಾದ ಈ ಗದ್ದುಗೆ ದುರುದುಂಡೇಶ್ವರರ ಭಸ್ಮ, ರುದ್ರಾಕ್ಷಿ, ಬಿಲ್ವದಳ, ಉತ್ತತ್ತಿಗಳ ಕುರುಹು ಆಗಿದೆ. ಇಂದು ಮಠ ಸಂಸ್ಕೃತಿಯ ಸಂಕೇತವಾದ ಇದು ಕಾಯಕ, ದಾಸೋಹ, ಸಮಾನತೆ, ಸಂಸ್ಕೃತಿ, ಜ್ಞಾನ, ಮಾನವಿಕ, ಧಾರ್ಮಿಕ ನೆಲೆಯಾಗಿದೆ. ಇಲ್ಲಿಯವರೆಗೆ ೯ ಜನ ಪೀಠಾಧಿಪತಿಗಳನ್ನು ಹೊಂದಿರುವ ಮಠ ಪ್ರಗತಿಯ ಹೆಜ್ಜೆಯೊಂದಿಗೆ ಹೆಜ್ಜೆ ಸೇರಿಸಿ ಶಿಕ್ಷಣ ಪ್ರಸಾರ, ಧರ್ಮ, ಜಾಗೃತಿ, ಮೂಡನಂಬಿಕೆಗಳನ್ನು ದೂರ ಮಾಡುವ ವಿಶಾಲ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಕಾರ‍್ಯತತ್ಪರವಾಗಿದೆ.

 

ದೇವಗಾಂವ

ಕಮಲನಾರಾಯಣ ಬಸದಿ

ಬೈಲಹೊಂಗಲದಿಂದ ೨೬ ಕಿ.ಮೀ. ಹಾಗೂ ರಾಷ್ಟ್ರೀಯ ಹೆದ್ದಾರಿ ಇರುವ ಕಿತ್ತೂರಿನಿಂದ ೫ ಕಿ.ಮೀ. ದೂರದಲ್ಲಿ ದೇವಗಾಂವ ಇದೆ. ಇಲ್ಲಿಯ ಕಮಲನಾರಾಯಣ ಬಸದಿ ಅತ್ಯಂತ ಸುಂದರವಾದುದು. ೧೨ ನೇ ಶತಮಾನದ ಚಾಲುಕ್ಯ ಶೈಲಿಯ ಕಮಲನಾರಾಯಣ ಬಸದಿಯನ್ನು ಗೋವೆಯ ಕದಂಬರು ಕಟ್ಟಿಸಿದರು. ಇದು ಸೂಕ್ಷ್ಮ ಕಲೆಗಾರಿಕೆಯಿಂದ ಕೂಡಿದ ಪ್ರಸಿದ್ಧ ಸ್ಮಾರಕವಾಗಿದೆ.

 

ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು

1)     ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ, ಖಾನಾಪೂರ.

2)    ದೂದಗಂಗಾ ಕೃಷ್ಣಾ ಎಸ್‌.ಎಸ್‌.ಕೆ.ಲಿ., ಚಿಕ್ಕೋಡಿ.

3)    ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಗೋಕಾಕ.

4)   ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ, ನಿಪ್ಪಾಣಿ.

5)    ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಸಂಕೇಶ್ವರ.

6)   ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಎಂ.ಕೆ. ಹುಬ್ಬಳ್ಳಿ.

7)    ರಾಯಬಾಗ ಸಹಕಾರಿ ಸಕ್ಕರೆ ಕಾರ್ಖಾನೆ, ರಾಯಬಾಗ.

8)    ರೇಣುಕಾ ಶುಗರ‍್ಸ್‌ ಲಿ., ಮುನವಳ್ಳಿ

9)   ವೆಂಕಟೇಶ ಪವರ್‌ ಪ್ರೊಜೆಕ್ಟ್‌, ಬೆಡಕಿಹಾಳ.

10)  ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಅಥಣಿ.

11)   ಅಥಣಿ ಫಾರ್ಮರ್ಸ ಕೋ-ಆಪ್‌. ಸಕ್ಕರೆ ಕಾರ್ಖಾನೆ, ಅಥಣಿ.

12)  ಉಗಾರ ಶುಗರ‍್ಸ್‌, ಉಗಾರಖುರ್ದ.

13)  ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ, ಸಿದ್ದಸಮುದ್ರ.

14)  ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ, ರಾಮದುರ್ಗ.

15)  ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆ, ಕಾಕತಿ.

16)  ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ, ಹಿಡಕಲ್‌ ಡ್ಯಾಂ.

17)   ವಿಶ್ವನಾಥ ಶುಗರ‍್ಸ್‌, ಬೆಲ್ಲದ ಬಾಗೇವಾಡಿ.

18)  ಸತೀಶ ಶುಗರ್ಸ, ಹುಣಿಶ್ಯಾಳ, ಗೋಕಾಕ.

 

ಭೌಗೋಳಿಕವಾಗಿ ನಮ್ಮ ಬೆಳಗಾವಿ

ಬೆಳಗಾವಿ ಒಂದು ಸುಂದರ ಜಿಲ್ಲೆ. ಪಶ್ಚಿಮದಲ್ಲಿ ಹಸಿರು ಕಂಗೊಳಿಸುವ ಮಲೆನಾಡು ಮತ್ತು ಕೃಷ್ಣಾ ಮಲಪ್ರಭಾ, ಘಟಪ್ರಭಾ ನದಿಗಳ ಹರವಿನ ೩ ಪ್ರದೇಶಗಳು ಎಂದು ಸ್ಥೂಲವಾಗಿ ೪ ಭಾಗಗಳನ್ನು ಮಾಡಬಹುದಾದ ಬೆಳಗಾವಿ ೧೫’೨೩’ ರಿಂದ ೧೬’೫೮’ ಉತ್ತರ ಅಕ್ಷಾಂಶ ಮತ್ತು ೭೪’೫’ ನಿಂದ ೭೫’೨೮’ ಪೂರ್ವ ರೇಖಾಂಶಗಳ ನಡುವೆ ಹಬ್ಬಿನಿಂತ ನಾಡು, ೧೩,೩೭೯ ಚ.ಕಿ.ಮೀ. ವಿಸ್ತೀರ್ಣದ ಬೆಳಗಾವಿ ಜಿಲ್ಲೆ. ಪ್ರಕೃತಿ ಸೌಂದರ್ಯದ, ಪ್ರಾಚೀನ, ಪುರಾಣ, ಇತಿಹಾಸಗಳ, ಆಧುನಿಕ ನಾಗರೀಕತೆಯ, ಶಿಲ್ಪಸೌಂದರ್ಯ, ಸಾಂಸ್ಕೃತಿಕ ಹಿನ್ನೆಲೆಯ ಕೌತುಕಮಯ ನಾಡು. ತಂಬಾಕು ಬೆಳೆಯ ತವರಾದ ಬೆಳಗಾವಿ ಜಿಲ್ಲೆ, ಖನಿಜ ಸಂಪತ್ತು ತುಂಬಿದ ಶ್ರೀಮಂತ ಜಿಲ್ಲೆ. ಅಪೂರ್ವವಾದ ಕಣ್ಮನ ಸೆಳೆವ ಪ್ರಕೃತಿ ರಮ್ಯತಾಣಗಳು, ಅನೇಕ ತೀರ್ಥಕ್ಷೇತ್ರಗಳು, ಪ್ರವಾಸೀ ಧಾಮಗಳನ್ನು ಹೊಂದಿದ ಬೆಳಗಾವಿ ತನ್ನೊಡಲ ಸಿರಿ ಸವಿಯಲೆಂದು ಆಸಕ್ತರನ್ನು ಕೈಬೀಸಿ ಕರೆಯುತ್ತದೆ.

ಜಿಲ್ಲೆಯ ಜನ ಗಡಸು ಮಾತಿನವರಾದರೂ ಬೆಣ್ಣೆ ಹೃದಯಿಗಳು. ಕಷ್ಟಪಟ್ಟು ಮುಂದೆ ಬರುವ ಛಲವುಳ್ಳವರು. ನಾಡಿನ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ವಾತಂತ್ರ‍್ಯ ಹೋರಾಟದ ಕರ್ನಾಟಕದಲ್ಲಿನ ಪಾತ್ರದಲ್ಲಿ ಕಾಣಸಿಗುವ ಬಹುತೇಕ ಹೋರಾಟಗಾರರ ನೆಲೆವೀಡು ಬೆಳಗಾವಿ. ಜಾನಪದ ಕಲೆ, ಜಾನಪದ ರಂಗಭೂಮಿ ಈ ನೆಲದಲ್ಲಿ ಬೀಡು ಬೀಸಾಗಿ ಹರಡಿಕೊಂಡಿದೆ. ದೇಸೂರು ಗೋಕಾಕಗಳಲ್ಲಿನ ಬಿದರಿ ಕಲೆಯನ್ನು ಜಗವೇ ನಿಬ್ಬೆರಗಾಗಿ ನೋಡಿದೆ. ಅಂತೆಯೇ ಬೆಳಗಾವಿಯ ಕುಂದಾದ, ಗೋಕಾಕದ ಕರದಂಟಿನ ಸವಿರುಚಿಗೆ, ಇಡೀ ಜಗತ್ತು ಮನ್ನಣೆ ನೀಡಿದೆ. ಸಾಹಸ ಕ್ರೀಡೆಗಳಾದ ಚಾರಣ, ಬೆಟ್ಟ ಹತ್ತುವುದು, ನದಿ ದಾಡುವುದು ಮೊದಲಾದವುಗಳಿಗೆ ಬೆಳಗಾವಿ ಜಿಲ್ಲೆ ಹೇಳಿ ಮಾಡಿಸಿದ ಸ್ಥಳ.

ಬೆಳಗಾವಿ ಬಡವನಿಂದ ಬಲ್ಲಿದನವರೆಗೆ ಎಲ್ಲರನ್ನೂ ತನ್ನ ತೆಕ್ಕೆಗೆ ತಂದುಕೊಂಡ ಭೂತಳ ಸ್ವರ್ಗ ಸೀಮೆ.
ಬನ್ನಿ ಬೆಳಗಾವಿಗೆ, ಬೆಳವಲದ ಸೊಗಸು ನೋಡಲಿಕ್ಕೆ.