Categories
ವೈಯಕ್ತಿಕ ಬ್ಲಾಗ್

ಬೆಳೆಯುತ್ತಿದೆ ಕಣಜ ಬಳಗ!

“ಒಳ್ಳೆಯ ವಿಚಾರಗಳು ಎಲ್ಲ ದಿಕ್ಕುಗಳಿಂದಲೂ ನಮ್ಮತ್ತ ಬರಲಿ” ಎಂದಿದ್ದರು ಹಿರಿಯರು. ಈಗಿನ ಕಾಲದಲ್ಲಿ, ಒಳ್ಳೆಯವೋ ಕೆಟ್ಟವೋ, ನೂರೆಂಟು ವಿಚಾರಗಳಂತೂ ನಮ್ಮತ್ತ ಬರುತ್ತಲೇ ಇರುತ್ತವೆ. ಈ ಪೈಕಿ ಕೊಂಚವಾದರೂ ಒಳ್ಳೆಯ ವಿಚಾರಗಳಿರುವಂತೆ [fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”][ಜ್ಞಾನಜಗತ್ತಿನ ಕಿಟಕಿಗಳು] ನೋಡಿಕೊಳ್ಳುತ್ತವೆ ಎನ್ನುವುದೇ ಸಮಾಧಾನದ ಸಂಗತಿ.

ಒಳ್ಳೆಯ ವಿಚಾರಗಳನ್ನು ನಮ್ಮತ್ತ ತರಲು ಪ್ರಯತ್ನಿಸುವ ಇಂತಹ ಕಿಟಕಿಗಳು ಎಷ್ಟಿದ್ದರೂ ಸಾಕಾಗುವುದಿಲ್ಲ. ಕಿಟಕಿಗಳಷ್ಟೇ ಅಲ್ಲ, ಅವುಗಳ ಮೂಲಕ ಹೊಸ ಮಾಹಿತಿಯ ಬೆಳಕು ನಮ್ಮನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪುವಂತೆ ಮಾಡಲು ನೆರವಾಗುವವರೂ ಬೇಕಿದ್ದಾರೆ.

IMG_4066

೨೦೧೬ ಆಗಸ್ಟ್ ತಿಂಗಳ ಮೊದಲ ವಾರಾಂತ್ಯದಲ್ಲಿ ನಡೆದ ಕಣಜ ಬರಹಗಾರರ ಕಮ್ಮಟ ಆಯೋಜನೆಯ ಹಿಂದೆ ಇದ್ದದ್ದು ಇಂತಹುದೇ ಒಂದು ಯೋಚನೆ. ಅಂತರಜಾಲ ಕನ್ನಡ ಜ್ಞಾನಕೋಶ ‘ಕಣಜ’ ಇನ್ನಷ್ಟು ವಿಸ್ತಾರವಾಗಿ ಬೆಳೆದು ಹೆಚ್ಚು ಓದುಗರನ್ನು ತಲುಪಬೇಕಾದರೆ ನಮ್ಮ ಬರಹಗಾರರ ಬಳಗ ಮೊದಲು ಬೆಳೆಯಬೇಕು ಎನ್ನುವ ಉದ್ದೇಶದಿಂದ ಎರಡು ದಿನಗಳ ಈ ಕಮ್ಮಟವನ್ನು ಆಯೋಜಿಸಲಾಗಿತ್ತು.

IMG_3548

ಬೆಂಗಳೂರಿನ ಗದ್ದಲದಿಂದ ದೂರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬರವಣಿಗೆಯಲ್ಲಿ ಆಸಕ್ತಿಯಿರುವ ಎಲ್ಲರಿಗೂ ಮುಕ್ತ ಪ್ರವೇಶವಿತ್ತು. ತಮ್ಮ ಬರವಣಿಗೆಯ ಮಾದರಿಯೊಂದನ್ನು ಮುಂಚಿತವಾಗಿಯೇ ಕಳುಹಿಸಿಕೊಡಬೇಕು ಎನ್ನುವುದೊಂದೇ ಅಭ್ಯರ್ಥಿಗಳಿಗೆ ವಿಧಿಸಲಾಗಿದ್ದ ಷರತ್ತು.

ಕಣಜದ ಆನ್‌ಲೈನ್ ಸ್ವರೂಪಕ್ಕೆ ಹೊಂದಿಕೊಳ್ಳುವಂತೆ ಅರ್ಜಿ ಸಲ್ಲಿಕೆ ಹಾಗೂ ಅಭ್ಯರ್ಥಿಗಳೊಡನೆ ಸಂವಹನದ ಪೂರ್ಣ ಪ್ರಕ್ರಿಯೆ ಇಮೇಲ್ ಮೂಲಕವೇ ನಡೆದಿದ್ದು ವಿಶೇಷ – ಇದರಿಂದಾಗಿ ಶಿಬಿರಕ್ಕೆ ಇನ್ನೇನು ಎರಡೇ ದಿನ ಇದೆ ಎನ್ನುವಾಗಲೂ ಹೊಸ ಬರಹಗಾರರೊಡನೆ ವಿಚಾರವಿನಿಮಯ ನಡೆಸುವುದು ನಮಗೆ ಸಾಧ್ಯವಾಗಿತ್ತು.

ಇಷ್ಟೆಲ್ಲ ತಯಾರಿಯ ನಂತರ ಆಗಸ್ಟ್ ಐದರ ಶುಕ್ರವಾರ ಸಂಜೆ ಬೆಂಗಳೂರಿನ ಕನ್ನಡ ಭವನದಿಂದ ಕೈವಾರದತ್ತ ನಮ್ಮ ಪ್ರಯಾಣ ಪ್ರಾರಂಭವಾಯಿತು. ಈ ಪ್ರಯಾಣದಲ್ಲಿ ನಮ್ಮ ಭಾವೀ ಬರಹಗಾರರಿಗೆ ಜೊತೆಯಾದವರು ಕಣಜ ನಿರ್ವಹಣಾ ತಂಡದ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇ-ಕನ್ನಡ ವಿಭಾಗದ ಸಿಬ್ಬಂದಿವರ್ಗ ಹಾಗೂ ಕಮ್ಮಟದ ಮುಖ್ಯ ಸಂಪನ್ಮೂಲ ವ್ಯಕ್ತಿ, ‘ಕಣಜ’ ಸಲಹಾ ಸಮಿತಿ ಸದಸ್ಯ ಶ್ರೀ ನಾಗೇಶ ಹೆಗಡೆ.

IMG_3640

ಎರಡು ದಿನಗಳ ಈ ಕಮ್ಮಟದಲ್ಲಿ ಈಗಷ್ಟೇ ಬರವಣಿಗೆ ಪ್ರಾರಂಭಿಸುತ್ತಿರುವವರಿಂದ ಪರಿಣತ ಬರಹಗಾರರವರೆಗೆ ಹಲವು ಹಿನ್ನೆಲೆಗಳಿಂದ ಬಂದ ಅಭ್ಯರ್ಥಿಗಳು ಭಾಗವಹಿಸಿದ್ದು ವಿಶೇಷ. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಂಸ್ಕೃತಿ, ಕೃಷಿ, ವ್ಯಂಗ್ಯಚಿತ್ರಕಲೆ, ಶಿಕ್ಷಣ – ಹೀಗೆ ಅಭ್ಯರ್ಥಿಗಳ ಆಸಕ್ತಿಯ ಕ್ಷೇತ್ರಗಳೂ ವೈವಿಧ್ಯಮಯವಾಗಿದ್ದವು.

ಕಮ್ಮಟವೆಂದರೆ ಅದು ಬರಿಯ ಭಾಷಣಗಳ ಸರಮಾಲೆಯಷ್ಟೇ ಆಗಬೇಕಿಲ್ಲವಲ್ಲ, ಹಾಗಾಗಿ ಕಣಜ ಕಮ್ಮಟದಲ್ಲಿ ಭಾಷಣ, ಸಂವಾದ, ಪ್ರಾತ್ಯಕ್ಷಿಕೆ ಹಾಗೂ ಬರವಣಿಗೆಯ ಚಟುವಟಿಕೆಗಳೆಲ್ಲವೂ ಇದ್ದವು. ಶನಿವಾರ (ಆ. ೬) ಬೆಳಿಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಬಲವಂತರಾವ್ ಪಾಟೀಲರಿಂದ ಉದ್ಘಾಟನೆಯಾದ ಶಿಬಿರ ನಾಗೇಶ ಹೆಗಡೆಯವರ ಆಶಯಭಾಷಣದೊಡನೆ ಮುಂದುವರೆಯಿತು. ವಿಷಯದ ಆಯ್ಕೆ, ಮಾಹಿತಿ ಸಂಗ್ರಹಣೆ, ಲೇಖನ ರಚನೆ, ನಿರೂಪಣೆ ಮತ್ತು ಶೈಲಿ, ಭಾಷೆಯ ಬಳಕೆ, ಸಾಮಾನ್ಯ ತಪ್ಪುಗಳು, ತಂತ್ರಜ್ಞಾನದಿಂದ ನೆರವು ಪಡೆಯುವ ವಿಧಾನಗಳು – ಹೀಗೆ ಶಿಬಿರದುದ್ದಕ್ಕೂ ಹಲವು ವಿಷಯಗಳ ಕುರಿತ ಸಂವಾದ ಜಾರಿಯಲ್ಲಿತ್ತು.

ಭಾಷಣ, ಸಂವಾದಗಳಷ್ಟೇ ಆಗಿ ಚರ್ಚಿಸಿದ ವಿಷಯಗಳನ್ನು ತಕ್ಷಣವೇ ಬರಹದಲ್ಲಿ ಅಳವಡಿಸುವ ಅವಕಾಶವಿಲ್ಲದಿದ್ದರೆ ಇಂತಹ ಕಮ್ಮಟಗಳ ಉದ್ದೇಶ ಸಫಲವಾಗುವುದು ಕಷ್ಟ. ಹಾಗಾಗಿ ಕಣಜ ಕಮ್ಮಟದಲ್ಲಿ ಅನೇಕ ಚಟುವಟಿಕೆಗಳನ್ನೂ ಆಯೋಜಿಸಲಾಗಿತ್ತು.

IMG_3916

ತಮ್ಮ ಆಯ್ಕೆಯ ಅಥವಾ ಆಯೋಜಕರು ಸೂಚಿಸಿದ ವಿಷಯದ ಬಗ್ಗೆ ನಿರ್ದಿಷ್ಟ ಅವಧಿಯಲ್ಲಿ ಸೂಚಿತ ಪದಮಿತಿಯ ಲೇಖನವೊಂದನ್ನು ಬರೆಯುವುದು ಈ ಪೈಕಿ ಮೊದಲ ಚಟುವಟಿಕೆಯಾಗಿತ್ತು. ಲೇಖನವೊಂದನ್ನು ಬರೆದಿಟ್ಟುಕೊಂಡು ಆನಂತರ ಕಮ್ಮಟದಲ್ಲಿ ಕಲಿತದ್ದನ್ನು ಅದಕ್ಕೆ ಅನ್ವಯಿಸುವ, ಲೇಖನವನ್ನು ಇನ್ನಷ್ಟು ಸುಧಾರಿಸುವ ಅವಕಾಶ ಈ ಮೂಲಕ ಅಭ್ಯರ್ಥಿಗಳಿಗೆ ಸಿಗಲಿ ಎನ್ನುವುದು ಈ ಚಟುವಟಿಕೆಯ ಹಿಂದೆ ಇದ್ದ ಉದ್ದೇಶ. ಈ ಚಟುವಟಿಕೆಯ ಮೂಲಕ ಕೆಲವು ಉತ್ತಮ ಬರಹಗಳನ್ನು ಪಡೆಯುವ ಅವಕಾಶವೂ ಕಣಜ ತಂಡಕ್ಕೆ ದೊರಕಿತು. ಅಂತಹ ಬರಹಗಳಿಗೊಂದು ಉದಾಹರಣೆ ಇಲ್ಲಿದೆ: [ಡಾಟಾ ಸೈನ್ಸ್ – ಒಂದು ಕಿರು ಪರಿಚಯ]

ಬರವಣಿಗೆ ಎಂದಮಾತ್ರಕ್ಕೆ ಅದು ಯಾವಾಗಲೂ ಪುಸ್ತಕಗಳನ್ನೋ ಜಾಲತಾಣಗಳನ್ನೋ ಆಧರಿಸಿ ನಡೆಯುವ ಚಟುವಟಿಕೆಯೇ ಆಗಿರಬೇಕಿಲ್ಲ. ನಮ್ಮ ಎರಡನೆಯ ಚಟುವಟಿಕೆಯ ಅಂಗವಾಗಿ ಕೋಲಾರದ ಶ್ರೀ ವಿ. ಎಸ್. ಎಸ್. ಶಾಸ್ತ್ರಿಗಳಿಂದ ಒರಿಗಾಮಿ ಕಲೆಯ ಪ್ರಾತ್ಯಕ್ಷಿಕೆ ಏರ್ಪಡಿಸುವುದರ ಹಿಂದೆ ಇದ್ದದ್ದು ಇದೇ ಚಿಂತನೆ. ನಿರ್ದಿಷ್ಟ ಅವಧಿಯೊಳಗೆ ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಂಡು ಲೇಖನ ರೂಪಿಸುವ ಸವಾಲನ್ನು ನಮ್ಮ ಲೇಖಕರು ಚೆನ್ನಾಗಿಯೇ ನಿರ್ವಹಿಸಿದರು ಎನ್ನಬೇಕು. ಅಂದು ಸಿದ್ಧವಾದ ಬರಹವೊಂದರ ಮೂಲಕವೇ ನೀವು ಆ ಪ್ರಾತ್ಯಕ್ಷಿಕೆಯ ವಿವರಗಳನ್ನು ಅರಿತುಕೊಳ್ಳಬಹುದು: [ಒರಿಗಾಮಿಯಲ್ಲರಳಿದ ಸಾಧಕ]

ಪಠ್ಯದ ಜೊತೆಗೆ ಬಹುಮಾಧ್ಯಮವನ್ನೂ (ಮಲ್ಟಿಮೀಡಿಯಾ) ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ವಿಶ್ವವ್ಯಾಪಿ ಜಾಲದ ಹೆಚ್ಚುಗಾರಿಕೆ. ಹಾಗಾಗಿ ಇಂದಿನ ಬರಹಗಾರರಿಗೆ ವೀಡಿಯೋಗಳೂ ಮಾಹಿತಿಯ ಉತ್ತಮ ಆಕರಗಳೇ. ಈ ಹಿನ್ನೆಲೆಯಲ್ಲಿ ಒಂದು ಪುಟ್ಟ ಚಲನಚಿತ್ರವನ್ನು ವೀಕ್ಷಿಸಿ ಆ ಕುರಿತ ಬರಹ ಸಿದ್ಧಪಡಿಸುವ ಚಟುವಟಿಕೆಯೊಂದನ್ನೂ ಕಣಜ ಕಮ್ಮಟದಲ್ಲಿ ಏರ್ಪಡಿಸಲಾಗಿತ್ತು. ಬರಹವಷ್ಟೇ ಏಕೆ, ಈ ಚಟುವಟಿಕೆಯ ಫಲಿತಾಂಶವಾಗಿ ಒಂದು ಚಿತ್ರವೂ ನಮ್ಮನ್ನು ತಲುಪಿತು! [ಹೊಸಬೆಟ್ಟು ವ್ಯಂಗ್ಯಚಿತ್ರ ಹಾಗೂ ಬರಹ]

ಒಟ್ಟಾರೆಯಾಗಿ ಎರಡು ದಿನಗಳ ಈ ಅನುಭವ ಬರಹಗಾರರಿಗೆ ಒಂದಷ್ಟು ಮಾಹಿತಿ ನೀಡಿದ್ದಷ್ಟೇ ಅಲ್ಲ, ನಮ್ಮ ಬಳಗವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕಣಜ ತಂಡಕ್ಕೂ ಸಾಕಷ್ಟು ಹೊಸ ಸಾಧ್ಯತೆಗಳನ್ನು ಪರಿಚಯಿಸಿತು; ಕಣಜದ ಓದುಗರಿಗೆ ಏನೆಲ್ಲ ಹೊಸ ಮಾಹಿತಿ ನೀಡಬಹುದು ಎನ್ನುವ ಕುರಿತೂ ಹೊಸ ಹೊಳಹುಗಳನ್ನು ನೀಡಿತು.

IMG_3823

ಕಣಜ ಆಯೋಜಿಸಿದ ಮೊತ್ತಮೊದಲ ಬರಹಗಾರರ ಕಮ್ಮಟ ಇಂತಹವೇ ನಮಗೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಹುಮ್ಮಸ್ಸನ್ನು ತಂದುಕೊಟ್ಟಿದೆ. ಆ ಮೂಲಕ ಕಣಜ ಬರಹಗಾರರ ಬಳಗ ಇನ್ನಷ್ಟು ದೊಡ್ಡದಾಗಿ ಬೆಳೆಯಲಿ, ಜ್ಞಾನಜಗತ್ತಿನ ಈ ಕಿಟಕಿ ಮಾಹಿತಿಯ ಬೆಳಕನ್ನು ನಿಮ್ಮತ್ತ ಸದಾ ಹರಿಸುತ್ತಲಿರಲಿ ಎನ್ನುವುದು ನಮ್ಮ ಆಶಯ. ಈ ಪ್ರಯತ್ನದಲ್ಲಿ ನಿಮ್ಮ ಪ್ರೋತ್ಸಾಹ ನಮ್ಮ ಜೊತೆಗಿರಲಿ!

P_20160807_151602_BF

[/fusion_builder_column][/fusion_builder_row][/fusion_builder_container]