ಮಾನವನ ವಿಕಾಸದ ಇತಿಹಾಸದುದ್ದಕ್ಕೂ ಸಾಮಾಜಿಕ ಸಮಸ್ಯೆಗಳು ಆಯಾ ಸಮುದಾಯಗಳ ಮೇಲೆ ಗುರುತರವಾದ ಪರಿಣಾಮಗಳನ್ನು ಬೀರುವುದು ಎಷ್ಟು ಸತ್ಯವೋ ಸಮಸ್ಯೆಗಳನ್ನು ಬಿಡಿಸುತ್ತಾ ಮಾನವ ಸಮಾಜ ಸಾಮಾಜೀಕರಣಗೊಂಡಿರುವುದು ಅಷ್ಟೇ ಸತ್ಯ. ಮಾನವ ಬೇಟೆಯನ್ನೇ ಅರಸಿ ಬದುಕಿದವ ಆತ ಬೇಟೆಯಲ್ಲಿನ ಸಮಸ್ಯೆಗಳನ್ನು ಪಶುಪಾಲನೆಯಲ್ಲಿ ಪರಿಹರಿಸಿಕೊಂಡ ಸಮಸ್ಯೆಗಳಿಗೆ ಕೃಷಿಯಲ್ಲಿ ಪರಿಹರಿಸಿಕೊಂಡ. ಹೀಗೆ ಸಮಸ್ಯೆಗಳು ಹಾಗೂ ಆಯಾ ಸಮಸ್ಯೆಗಳಿಗೆ ತಕ್ಕ ಪರಿಹಾರಗಳು ಪರ್ಯಾಯ ವ್ಯವಸ್ಥೆಗಳನ್ನು ಹುಟ್ಟುಹಾಕಿ ಧನಾತ್ಮಕ ಪ್ರಗತಿಯತ್ತ ಕೊಂಡೊಯ್ಯುವವು. ಜನಪರ ಕಾಳಜಿ ಇಲ್ಲದ ಸರ್ಕಾರಗಳು ತೆಗೆದುಕೊಳ್ಳುವ ನೀತಿ ನಿಯಮಗಳು ಹಾಗೆ ಕಾರ್ಯಯೋಜನೆಗಳಿಂದ ಯಾವ ಆಶಾದಾಯಕ ಸೌಲತ್ತುಗಳು, ತಕ್ಷಣವೇ ಸಿಗುವುದು ದುರ್ಲಭ. ಹೀಗಾಗಿ ಕೃಷಿ ಕೂಲಿಯನ್ನೆ ಹೆಚ್ಚಾಗಿ ನಂಬಿರುವ ಇವರೆಲ್ಲರ ಬದುಕು ಸದಾ ಅಸ್ಥಿರತೆಯಲ್ಲಿರುತ್ತದೆ.

ಖಾಸಗೀಕರಣ ಹಾಗೂ ಜಾಗತೀಕರಣದ ಅವಘಡಗಳು ಸಮುದಾಯವನ್ನು ಪೀಡಿಸದೇ ಇಲ್ಲದಿಲ್ಲ. ಹಾಗೂ ಇಂದು ಸ್ಪರ್ಧಾತ್ಮಕ ಈ ಜಗತ್ತಿನಲ್ಲಿ ಹೊಂದಿಕೊಳ್ಳುವ ಅನಿವಾರ್ಯ ತೆಗೆ ಬೇಕಾದ ಮಾರ್ಗೋಪಾಯಗಳನ್ನು ತಿಳಿಹೇಳುವ ಯಾವೊಂದು ಜವಬ್ದಾರಿಗಳನ್ನು ಸ್ವಯಂ ಸಮಾಜದ ಮುಂದಾಳುಗಳು ಹಾಗೂ ಸರ್ಕಾಗಳು ಕೈಗೊಳ್ಳದೇ ಇರುವುದು ಇನ್ನೂ ದುಸ್ಥಿತಿಗೆ ದೂಡುವಂತೆ ಮಾಡಿದೆ. ಕಾಂಪಿಟೆಂಟ್ ಅಥವಾ ಕಾನ್ಪಿಡೆನ್ಸ್‌ನ ಅವಶ್ಯಕತೆ ಇರುವ ಈ ದಿನಗಳಲ್ಲಿ ಇದನ್ನು ಪಡೆದುಕೊಳ್ಳುವ ನೀಲಿನಕ್ಷೆಯನ್ನು ರೂಪಿಸುವ ಚಾಕಚಕ್ಯತೆ ನಮ್ಮ ಸಮುದಾಯದ ಪ್ರಜ್ಞಾವಂತರಲ್ಲಿ ಇಲ್ಲ. ಬೇಡ ಸಮುದಾಯವನ್ನು ಬಲಯುತ ಹಾಗೂ ಸಾಂಸ್ಕೃತಿಕವಾಗಿ ಉನ್ನತಿಗೊಳಿಸಿಕೊಳ್ಳಲು ಸಮುದಾಯದ ಬುದ್ದಿಜೀವಿಗಳು ಬೇಕಾಗಿರುವ ಮಾನದಂಡಗಳನ್ನು ರೂಪಿಸಿಬೇಕಾರುವ ಜರೂರುಗಳಿವೆ. ನಿಜವಾದ ಸಂಗತಿಗಳನ್ನು ವಸ್ತುನಿಷ್ಠ ವಾಗಿ ಹಾಗೂ ವೈಜ್ಞಾನಿಕವಾಗಿ ವಿಮರ್ಶೆಗೊಳಪಡಿಸುವ ಅವಶ್ಯಕತೆ ಇದೆ.

ನಾವು ರೂಪಿಸುವ ಮಾನದಂಡಗಳನ್ನು ಜಾರಿಗೆ ತರುವಂತೆ ಸಂಬಂಧಪಟ್ಟವರನ್ನು ನಮ್ಮ ಹೋರಾಟಗಳಿಂದ ಎಚ್ಚರಿಸಬೇಕಾಗಿದೆ. ಬೇಡ ಸಮುದಾಯದಲ್ಲಿರುವ ಮೂಢನಂಬಿಕೆಗಳನ್ನು ಹಾಗೂ ಅವುಗಳನ್ನು ಬೆಂಬಲಿಸುವ ಸಂಶೋಧನಾ ಪ್ರಯತ್ನಕಾರ್ಯಗಳಿಗೆ ಅಡ್ಡಿ ಒಡ್ಡುವುದು ಕಂಡುಬರುತ್ತದೆ.

ಸಮಾಜ ಮುಖಿಯಾದ ಚರ್ಚೆ ಹಾಗೂ ಆರೋಗ್ಯಕರವಾದ ಸಂವಾದಗಳನ್ನು ನಮ್ಮ ಹೆಚ್ಚಿನ ಬರಹಗಾರರು ಕೈಗೊಂಡು ಮುಖ್ಯವಾಹಿನಿಯಲ್ಲಿ ಬೇಡರನ್ನು ಗುರುತಿಸಬೇಕಾಗಿದೆ. ಪ್ರಸ್ತುತ ಸಮಾಜದಲ್ಲಿ ನಾಯಕ ಸಮುದಾಯವು ಅಸ್ಪೃಶ್ಯತೆಯ ಸೋಂಕಿನಿಂದ ಸ್ವಲ್ಪಮಟ್ಟಿಗೆ ದೂರವಿದ್ದರೂ ಈ ವರ್ಗವೇನು ಶೋಷಣೆಯಿಂದ ಮುಕ್ತವಾದದ್ದಲ್ಲ. ಆದರೂ ಇಂಥ ಗಂಭೀರ ಸಮಸ್ಯೆಗಳನ್ನು ಮರೆತು, ಬಹುಸಂಖ್ಯಾತ ಸಮುದಾಯಗಳಲ್ಲಿ ಶೂದ್ರ ಕಲ್ಪನೆಗಳು ಮಾಯವಾಗಿ ದಬ್ಬಾಳಿಕೆಯ ಕೃತ್ಯಗಳು ಮೊಳಕೆಯೊಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇಂದಿನ ದಿನಮಾನಗಳಲ್ಲಿ ನಾಯಕ ಸಮುದಾಯದ ಸ್ಥಿತಿ-ಗತಿ, ಸ್ಥಾನಮಾನ ಬದುಕಿನ ನಿರ್ವಹಣೆಯ ಮಾನದಂಡಗಳ ಮೂಲಕ ಹೇಳುವುದಾದರೆ ಈ ಸಮುದಾಯದ ಜೀವನ ಸ್ಥಿತಿ ತುಂಬಾ ಶೋಚನೀಯ ಸ್ಥಿತಿಯಲ್ಲಿದೆ. ಸುಮಾರು ವರ್ಷಗಳಿಂದ ಈ ಸಮುದಾಯದ ಪರಂಪರೆ ಅಸ್ತಿತ್ವದಲ್ಲಿದ್ದರೂ ಹಲವಾರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದೆ. ಆದ್ದರಿಂದ ಇವತ್ತಿನ ಸಂದರ್ಭದಲ್ಲಿ ಇಂತಹ ಸಮಸ್ಯೆಗಳು ಸಮಸ್ಯೆಗಳಾಗಿಯೇ? ಉಳಿದಿವೆ. ಯಾವುದೇ ಸಭೆ- ಸಮಾರಂಭಗಳಲ್ಲಿಯೂ ಕೇವಲ ಹೊಗಳಿಕೆಯ ಮಾತುಗಳು ಹೊರತು ಸಮಸ್ಯೆಗಳಿಗೆ ಪರಿಹಾರವಿಲ್ಲ.

ಇವತ್ತಿನ ಸಂದರ್ಭದಲ್ಲಿ ಹಸಿವು, ಬಡತನ, ನಿರುದ್ಯೋಗ ಸಮಸ್ಯೆಯು ಹೆಚ್ಚಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಬಹುಮುಖ್ಯವಾದ ಕಾರಣ ಆರ್ಥಿಕತೆ, ಆದ್ದರಿಂದ ಇಂತಹ ಒಂದು ಪರಿಸ್ಥಿತಿಯಲ್ಲಿ ರಾಜಕೀಯ ಮುಖಂಡರು ಬುದ್ದಿಜೀವಿಗಳು ಹಾಗೂ ಸಂಘ ಸಂಸ್ಥೆಗಳು ಹೋರಾಟಕ್ಕಿಳಿದು ಸರ್ಕಾರಕ್ಕೆ ಬೇಡಿಕೆ ಇಟ್ಟರೆ ಮಾತ್ರ ಸಾಧ್ಯ.

ಬದಲಾಗುತ್ತಿರುವ ಮಾನವನ ಜೀವನ ವಿಧಾನದಲ್ಲಿ ಆರ್ಥಿಕ ವ್ಯವಸ್ಥೆ ಬಹುಮುಖ್ಯ ವಾದದ್ದು ಪ್ರತಿಯೊಂದು ಸಮುದಾಯಕ್ಕೆ ಸಹ ಆರ್ಥಿಕತೆ ಆತ್ಯಂತ ಮಹತ್ವ ಪಾತ್ರವಹಿ ಸುತ್ತದೆ. ಹಾಗೆ ಮ್ಯಾಸಬೇಡರ ಮೂಲವೃತ್ತಿ ಬೇಟೆ. ಬೇಟೆಯು ಒಂದು ಕಾಲಕ್ಕೆ ಈ ಸಮುದಾಯದವರಿಗೆ ವರದಾನವಾಗಿತ್ತು. ಅದನ್ನೇ ಅವಲಂಭಿಸಿ ತಮ್ಮ ಜೀವನವನ್ನು ನಡೆಸು ತ್ತಿದ್ದರು. ಆದರೆ ಇಂದು ಹಲವಾರು ಕಾಯ್ದೆ-ಕಾನೂನುಗಳು ಜಾರಿಗೆ  ಬಂದಿರುವುದರಿಂದ ಬೇಟೆಯು ನಿಷೇಧವಾಗಿ ವರವಾಗಿದ್ದುದು ಶಾಪವಾಗಿದೆ. ಪ್ರಸ್ತುತ ಶೇ.೫೦ರಷ್ಟು ಜನ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಕೃಷಿಯನ್ನು ಕೂಡ ಮಳೆಯನ್ನೇ ಅವಲಂಬಿಸಿ ಮಾಡುತ್ತಿದ್ದಾರೆ. ಮಳೆಯು ಎಲ್ಲಾ ಕಡೆ ಸಮನಾಗಿ ಆಗುವುದಿಲ್ಲ. ಪ್ರದೇಶಕ್ಕನುಗುಣವಾಗಿ ಹೆಚ್ಚು ಕಡಿಮೆಯಾಗಬಹುದು. ಆದ್ದರಿಂದ ಮಳೆಯನ್ನು ಅವಲಂಬಿಸಿ ಜೀವಿಸುತ್ತಿರುವ ಈ ಸಮುದಾಯವು ಸಾಕಷ್ಟು ತೊಂದರೆಯನ್ನು ಎದುರಿಸುತ್ತಿದೆ. ತಮ್ಮ ಉಪಜೀವನಕ್ಕಾಗಿ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಊಟಕ್ಕೆ ಮುದ್ದೆ ಚಟ್ನಿ ಸಿಕ್ಕರೆ ಸಾಕು ಅದರಲ್ಲೇ ತೃಪ್ತಿಪಡುತ್ತಾರೆ. ಒಂದು ಕಾಲಕ್ಕೆ ಅಲೆಮಾರಿ ಜೀವಿಗಳಾಗಿ ಕಾಡು ಮೇಡುಗಳಲ್ಲಿ ಸಿಗುವ ಮೊಲಗಳನ್ನು ತಿಂದು ಸ್ವಾವಲಂಬಿಗಳಾಗಿ ಬದುಕಿದ್ದರೂ ಈ ಸಮಾಜ ಪ್ರಸ್ತುತ ಒಪ್ಪೊತ್ತಿನ ಊಟಕ್ಕೆ ಯೋಚಿಸುವಂತಾಗಿದೆ. ಜೀವನ ತುಂಬಾ ಕಷ್ಟವೆನಿಸಿದಾಗ ಇತರ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಕೈಗಾರಿಕೆ, ಹತ್ತಿಮಿಲ್ ಮತ್ತು ರೈಸ್‌ಮಿಲ್, ಮುಂತಾದವುಗಳಲ್ಲಿ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಬಹುಪಾಲು ಹಮಾಲರಾಗಿ ಕೆಲಸವನ್ನು ಕೈಗೊಳ್ಳುವವರು ಸಹ ಸಾಕಷ್ಟು ಮಂದಿ ಸಿಗುವರು.

ವರ್ಷದಲ್ಲಿ ಆರು ತಿಂಗಳು ವಲಸೆ ಹೋಗಿದುಡಿದರೆ ಮತ್ತೇ ಆರು ತಿಂಗಳು ತಮ್ಮ ಊರಿನಲ್ಲೇ ಕಾಲ ಕಳೆಯುವರು. ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಬಾಲಕಾರ್ಮಿಕರ ಪದ್ದತಿ ಇದೆ. ಚಿಕ್ಕಮಕ್ಕಳನ್ನು ತಾಯಾಂದಿರು ತಮ್ಮ ಜೊತೆಯಲ್ಲಿ ಕೂಲಿ ಕೆಲಸಕ್ಕಾಗಿ ಕರೆದೊಯ್ಯು ತ್ತಾರೆ. ದನ ಕುರಿ ಕಾಯಲು ಚಿಕ್ಕಮಕ್ಕಳನ್ನೇ ಕಳಿಸುವರು. ನಗರ ಪ್ರದೇಶಗಳಿಗೆ ಹತ್ತಿರ ಇರುವವರು ಹಾಲು ತುಪ್ಪಮಾರಿ ತಮ್ಮ ಜೀವನವನ್ನು ನಡೆಸುವ ಸ್ಥಿತಿ ಇಂದು ಜಾರಿಯಲ್ಲಿದೆ. ಆಯಾ ಪ್ರದೇಶಕ್ಕನುಗುಣವಾಗಿ ತಮ್ಮ ವೃತ್ತಿಗಳಲ್ಲಿ ತೊಡಗಿಸಿಕೊಂಡು ಜೀವನವನ್ನು ನಡೆಸುತ್ತಾರೆ. ಅಂದಿನ ಕೂಲಿ ಅಂದಿನ ದಿನಕ್ಕೆ ಸರಿ ಹೊಂದುವ ಪದ್ದತಿ ನಿರ್ಮಾಣವಾಗಿದೆ.

ಇಂದು ಈ ಸಮುದಾಯವು ನಾಗರಿಕ ಕುಟುಂಬಗಳೊಂದಿಗೆ ನೆಲೆ ನಿಂತುಕೊಂಡು ತನ್ನ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಇದು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಈ ಸಮುದಾಯದ ಪೂರ್ವಜರು ಅಲೆಮಾರಿ ಅರಣ್ಯವಾಸಿಗಳಾಗಿದ್ದರಿಂದ ಅಂದಿನ ಆಸ್ತಿಪಾಸ್ತಿಗಳು, ನಿವೇಶನ, ವಸತಿ, ಭೂಮಿಯನ್ನು ಹೊಂದಿರುವುದು ಕಡಿಮೆ, ಇದರಿಂದಾಗಿ ವರ್ತಮಾನದಲ್ಲಿ ಈ ಸಮುದಾಯವು ಮೂಲಭೂತ ಸೌಲಭ್ಯಗಳಿಂದ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಸರ್ಕಾರದಿಂದ ಬರುವ ಸೌಲಭ್ಯಗಳಂತೂ ತೀರ ಕಡಿಮೆ ಅಲ್ಪಸ್ವಲ್ಪ ಬಂದರೂ ಸಹ ಮಧ್ಯವರ್ತಿಗಳ ಪಾಲಾಗುತ್ತಿವೆ. ನಾನು ಗಮನಿಸಿದ ಹಾಗೆ ಸುಮಾರು ಹಳ್ಳಿಗಳು ಈ ಪರಿಸ್ಥಿತಿಯನ್ನೇ ಎದುರಿಸುತ್ತಿವೆ. ಕೆಲವರಿಗೆ ಇನ್ನೂ ಸರಿಯಾಗಿ ವಾಸಮಾಡಲಿಕ್ಕೆ ಮನೆಗಳೇ ಇಲ್ಲ. ಹುಲ್ಲಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಮಳೆ ಬಂದರೆ ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಾರೆ. ನಿರಂತರ ನಾಗರೀಕತೆಯಿಂದ ದೂರ ಉಳಿದ ಈ ಸಮುದಾಯವು ಇಂದು ಶೈಕ್ಷಣಿಕವಾಗಿ ಸಮಸ್ಯೆಯನ್ನೇ ಎದುರಿಸುತ್ತಿದೆ. ಕೆಲವು ಅನಿವಾರ್ಯ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗಿರುವುದನ್ನು ಕಾಣಬಹುದು.

೧. ನಿರಂತರ ಅರಣ್ಯವಾಸಿಗಳು ಅಲೆಮಾರಿಗಳು ಇದಕ್ಕೆ ಬಡತನ ಕಾರಣ.

೨. ಕೇವಲ ಮೇಲ್ವರ್ಗದವರಿಗೆ ಹಾಗೂ ಆರ್ಥಿಕವಾಗಿ ಮುಂದುವರೆದವರಿಗೆ ಮಾತ್ರ ಶಿಕ್ಷಣ ನಮ್ಮಂತವರಿಗೆ ಅಸಾಧ್ಯ ಎಂಬ ಪೂರ್ವಗ್ರಹಕ್ಕೆ ಪೀಡಿತರಾಗಿದ್ದಾರೆ.

೩. ಕೆಲವರು ನೆಲೆನಿಂತರು ಮಕ್ಕಳನ್ನು ಶಾಲೆಗೆ ಕಳಿಸದೇ ಇರುವುದು.

೪. ನಿಶ್ಚಿತ ಆದಾಯ ಮೂಲವಿಲ್ಲದೆ ನೆಲೆ ನಿಲ್ಲಲಾಗದೆ ಅನಿವಾರ್ಯವಾಗಿದೆ.

೫. ಶಿಕ್ಷಣ ಪಡೆದರೂ ಉದ್ಯೋಗವಿಲ್ಲ ಎಂಬ ಕೊರಗು.

೬. ಸರ್ಕಾರದ ಪ್ರೋಕಡಿಮೆಯಾಗುತ್ತಿರುವುದು ಇನ್ನೂ ಮುಂತಾದ ಕಾರಣಗಳು.

ಸಮಾಜದಲ್ಲಿ ಸಮಾನತೆ ಹಾಗೂ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶೋಷಿತ ವರ್ಗಕ್ಕೆ ಸಂವಿಧಾನ ದತ್ತವಾದ ಮೀಸಲಾತಿ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಇಂತಹ ವಿಶೇಷ ಸೌಲತ್ತುಗಳು ಕಳೆದ ಎರಡು ದಶಕಗಳಿಂದ ನಮ್ಮ ಸಮುದಾಯಕ್ಕೆ ಸಿಗುತ್ತಿದ್ದು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ತೀವ್ರತರ ಬದಲಾವಣೆಗಳಿಗೆ ಕಾರಣವಾಗಿದೆ. ಆದರೆ ಇದೊಂದು ದೇಶಕ್ಕಿರುವ ಗಂಡಾಂತರವೆಂದು ಅಪ ಪ್ರಚಾರ ಮಾಡುವುದರ ಮೂಲಕ ನಮ್ಮ ಅನ್ನದ ಬದುಕಿನ ಮೂಲಸೆಲೆಯನ್ನು ಶಾಶ್ವತವಾಗಿ ಬತ್ತಿಸುವ ಹುನ್ನಾರುಗಳು ಕಾಲ ಕಾಲಕ್ಕೆ ನಡೆಯುತ್ತಲೇ ಇವೆ. ಹಾಗೆ ಮೆರಿಟ್ ಎಂಬ ಭೂತವನ್ನು ಸೃಷ್ಟಿಸುವ ನಮ್ಮ ಬದುಕನ್ನು ಬುಡಮೇಲು ಮಾಡುವ ಪ್ರಯತ್ನಗಳು ಪಿತೂರಿಗಳು ವ್ಯವಸ್ಥಿತ ವಾಗಿ ಪ್ರಚಾರದಲ್ಲಿವೆ. ಇಂತಹ ವಿಕೃತಿಗಳಿಗೆಲ್ಲ ನಾವೆಲ್ಲರೂ ಸೇರಿ ಉತ್ತರಿಸುವ ಅನಿವಾರ್ಯತೆ ಇದೆ.

ಕೇಂದ್ರ ಸಾರ್ಕರವು ನಮಗೆ ಕೊಡುವ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರವು ಪಾಲಿಸುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಪಾಲಿಸಬೇಕಾದ ಜರೂರಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಂತೆ ಶೇ. ೭ರಷ್ಟು ಮೀಸಲಾತಿಯನ್ನು ಪಾಲಿಸಿದರೆ ನಿರುದ್ಯೋಗ ಪ್ರಮಾಣ ಸುಧಾರಿಸುವ ಸಾಧ್ಯತೆ ಇದೆ. ಅನುಸೂಚಿತ ವರ್ಗಗಳಲ್ಲಿ ದಿನೇ ದಿನೇ ಒಂದಿಲ್ಲ ಒಂದು ಕೆಳಸಮುದಾಯಗಳನ್ನು ಸರ್ಕಾರಗಳು ಒತ್ತಾಯ ಪೂರ್ವಕವಾಗಿ ಸೇರಿಸುತ್ತಿದ್ದರೂ ಅವರ ಕೊಡುವ ಸೌಲತ್ತಿನ ಪ್ರಮಾಣದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿಲ್ಲ. ನಮಗೆ ಕೊಟ್ಟಿರುವ ಮೀಸಲಾತಿಯನ್ನು ಹೆಚ್ಚಿಸುವ ಒಂದು ಮಾತನ್ನು ಜವಬ್ದಾರಿಯುತ ಸರ್ಕಾರವಾಗಲಿ ಅಥವಾ ನಮ್ಮ ನಾಯಕರುಗಳಾಗಲಿ, ಬೇರೆ ರಾಜಕಾರಣಿಗಳಾಲಿ, ಬದ್ದಿಜೀವಿಗಳಾಗಲಿ ಪ್ರಸ್ತಾಪಿಸದೇ ಇರುವ ದುಃಖದ ಸಂಗತಿಯಾಗಿದೆ. ಅಲ್ಲದೆ, ಮೇಲಿನ ಸಮಸ್ಯೆಗಳನ್ನು ಹೊರತುಪಡಿಸಿ ಇನ್ನೂ ಕೆಲವಾರು ಸಮಸ್ಯೆಗಳನ್ನು ಈ ಸಮುದಾಯ ಎದುರಿಸುತ್ತಿದೆ. ಅವುಗಳೆಂದರೆ

೧. ವಸತಿ, ಭೂಮಿ, ಪಡಿತರ  ಚೀಟಿ, ರೋಜಗಾರಯೋಜನೆ, ಗಂಗಕಲ್ಯಾಣ, ಬ್ಯಾಂಕ್ ಸಾಲ  ಮುಂತಾದ ಅಭಿವೃದ್ದಿಯೋಜನೆಗಳು ಈ ಸಮುದಾಯಕ್ಕೆ ನಿಲುಕದಿರುವುದು.

೨. ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿದೆ.

೩. ಸಾಮಾಜಿಕವಾಗಿ ಕೀಳರಿಮೆ ಅಂಜಿಕೆ ಇನ್ನೂ ಇದೆ.

೪. ಮೀಸಲಾತಿ ಪ್ರಮಾಣ ಕಡಿಮೆ ಇರುವುದರಿಂದ ಇತರ ಸಮುದಾಯಗಳೊಡನೆ ಪೈಪೋಟಿ ನಡೆಸಲು ಅಸಾಧ್ಯ.

೫. ಈ ಸಮುದಾಯದ ಮೇಲೆ ಮೇಲ್ವರ್ಗದ ಸಮುದಾಯಗಳ ದೌರ್ಜನ್ಯ ಮಾಡುತ್ತಿರುವುದು.

೬. ವಿದ್ಯುತ್ ಸೌಕರ್ಯದ ಕೊರತೆ.

೭. ಸಾರಿಗೆ ಸೌಲಭ್ಯದ ಕೊರತೆ.

೮. ಕುಡಿಯುವ ನೀರಿನ ಕೊರತೆ.

೯. ಆರೋಗ್ಯ ಕೇಂದ್ರದ ಕೊರತೆ.

೧೦. ಇತ್ತೀಚಿನ ದಿನಮಾನಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಬೇರೆ ಬೇರೆ ಸಮುದಾಯದವರನ್ನು ಸೇರ್ಪಡೆ ಮಾಡುತ್ತಿರುವುದು.

ಇನ್ನೂ ಮುಂತಾದವುಗಳು

ಈ ಮೇಲಿನ ಸಮಸ್ಯೆಗಳಿಗೆ ಪರಿಹಾರಗಳು

ಬೇಡರು ವಾಸಿಸುವ ಪ್ರದೇಶಗಳಲ್ಲಿ ಸರ್ಕಾರ ಹಟ್ಟಿಗಳನ್ನು ಕಡ್ಡಾಯವಾಗಿ ಗ್ರಾಮಗಳ ನ್ನಾಗಿ ಮಾಡಿ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಪ್ರತಿಯೊಂದು ಹಳ್ಳಿಗೆ ಕನಿಷ್ಟ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳನ್ನಾದರೂ ಸ್ಥಾಪಿಸಿ ಅದರಲ್ಲೇ ಅಂಗನವಾಡಿ ಕೇಂದ್ರಗಳನ್ನು ತೆರೆದು ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಟ್ಟು ಪ್ರೋಬೇಕು. ವಯಸ್ಕರ ಶಿಕ್ಷಣ ಪದ್ಧತಿ ಜಾರಿಗೆ ತರಬೇಕು. ಹಳೆ ಸಂಪ್ರದಾಯಗಳನ್ನು ಆಚಾರ ವಿಚಾರಗಳನ್ನು ಬಾಲಕಾರ್ಮಿಕರ ಪದ್ಧತಿ, ಬಾಲ್ಯವಿವಾಹ ಪದ್ಧತಿ, ಅಸ್ಪೃಶ್ಯತೆ ಹೆಣ್ಣು ಮತ್ತು ಗಂಡುಗಳ ನಡುವಿನ ಅಂತರ ಮುಂತಾದವು. ಈ ಎಲ್ಲಾ ಸಮಸ್ಯೆಗಳು ಸರ್ಕಾರ  ಪರಿಹಾರ ಒದುಗಿಸಬೇಕಾಗುತ್ತದೆ. ಇದರಿಂದ ಸಮಸ್ಯೆಗಳು ಪರಿಹಾರವಾಗಿ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಬುಡಕಟ್ಟು ಜನರ ಆರೋಗ್ಯ ಮತ್ತು ನೈರ್ಮಲ್ಯ ದೃಷಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ. ಇವರು ವಾಸಿಸುವ ಪ್ರದೇಶಗಳಲ್ಲಿ ಆಸ್ಪತ್ರೆ ಇಲ್ಲವೆ ಸಂಚಾರಿ ಆಸ್ಪತ್ರೆ ತೆರೆಯಲಾಗಿದೆ. ಇವರ ವೈದ್ಯಕೀಯ ತಪಾಸಣೆಯನ್ನು ತಡೆಯಲು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ. ಆಧುನಿಕ ವೈದ್ಯಕೀಯ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅವರನ್ನು ಪ್ರೋ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೇ ಬುಡಕಟ್ಟು ವರ್ಗಗಳಿಗೆ ಅಭಿವೃದ್ದಿಯ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಈ ಕಾರ್ಯಕ್ರಮ ಅನುಷ್ಠಾನ ಉಸ್ತುವರಿ ನೋಡಿಕೊಳ್ಳಲು ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಇಲಾಖೆ ನಿರ್ದೇಶನಾಲಯವನ್ನು ಪ್ರತ್ಯೇಕವಾಗಿ ಪ್ರಾರಂಭಿಸ ಲಾಗಿದೆ. ಆಯಾ ಜಿಲ್ಲೆಯಲ್ಲಿ ಪ್ರತ್ಯೇಕ ಕೇಂದ್ರಗಳಿವೆ. ಶೈಕ್ಷಣಿಕ ಕಾರ್ಯಕ್ರಮಗಳು, ನರ್ಸರಿ ಮತ್ತು ಮಹಿಳಾ ಕಲ್ಯಾಣ ಕೇಂದ್ರಗಳು, ಆಶ್ರಮಶಾಲೆ, ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಗಳು, ಅನುದಾನಿತ ವಿದ್ಯಾರ್ಥಿನಿಲಯಗಳಿಗೆ ಧನ ಸಹಾಯ, ವಿದ್ಯಾರ್ಥಿವೇತನ, ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಗ್ರಾಮೀಣ ಸಣ್ಣ ಕೈಗಾರಿಕೆಗಳು, ಉದ್ಯೋಗ ಮತ್ತು ತರಬೇತಿ ಇನ್ನೂ ಮುಂತಾದ ಸೌಕರ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಇದರಿಂದ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.