ನಾಯಕ ಸಮುದಾಯದ ಉದ್ಧಾರ ಆಗಬೇಕು. ಆದರೆ ಯಾಕೆ ಆಗಬೇಕು? ಇದೊಳ್ಳೆಯ ಪ್ರಶ್ನೆ ಅನ್ನಬಹುದು, ಅಲ್ಲವೇ? ಉದ್ಧಾರ ಯಾರಿಗೆ ಬೇಡ? ಉದ್ಧಾರದಲ್ಲಿ ಸುಧಾರಣೆ ಇದೆ, ಹೆಚ್ಚಳ  (ಅಭಿವೃದ್ದಿ ) ಇದೆ ಸುಖ ಇದೆ, ಸ್ವಾಭಿಮಾನ ಇದೆ, ಸ್ಥಾನಮಾನ ಇದೆ, ಶಾಂತಿಯೂ ಇದೆ, ಆದರೆ ಉದ್ಧಾರವನ್ನು ಬಯಸದವರಿಗೆ ಅದು ಹೇಗೆ ಸಾಧ್ಯ!ಬಯಸಿದರೂ ಕೂಡ ಕೈಗೂಡಲು ಅದೇನು ಹಗಲುಗನಸೆ? !ಅದರ ಸಾಧನೆಗೆ ಬೇಕು ಜ್ಞಾನ, ದೃಡನಿರ್ಧಾರ, ಸಾಹಸ, ಹೋರಾಟ, ಒಕ್ಕಟ್ಟು ಹಾಗೆ ನೋಡಿದರೆ ಈ ಜಾತಿ ಎಂದೋ ಉದ್ಧಾರ ಆಗಬೇಕಾಗಿತ್ತು. ಯಾಕೆಂದರೆ : ಮೊದಲನೆಯದಾಗಿ ಸ್ಫೂರ್ತಿ ನೀಡಲು ದೊಡ್ಡ ಇತಿಹಾಸದ ಪರಂಪರೆ ಇದೆ. ನಾಡನ್ನು ಕಟ್ಟಿ ಬೆಳೆಸಿದ ವೀರಾಧಿವೀರರ ಸಾಲೇ ಇದೆ. ಅವರ ತ್ಯಾಗ, ಬಲಿದಾನ, ಆದರ್ಶಗಳು ನಮ್ಮ ಮುಂದಿವೆ. ಹಲವಾರು ಕವಿಪುಂಗವರು ಸಾಧು ಸಜ್ಜನರು ಬೆಳಗಿ ಹೋಗಿದ್ದಾರೆ. ಈ ಜನರು ನಾಡಿಗಾಗಿ ದುಡಿದು ಸಣ್ಣಾಗಿದ್ದಾರೆ. ಬಡವರಾಗಿದ್ದಾರೆ. ಇದನ್ನು ತಿಳಿದುಕೊಂಡು ಬೇರೆಯವರು ಇವರನ್ನು ಪ್ರೋಈ ಜನರಾದರೂ ತಮ್ಮ ಪೂರ್ವಜರ ಕ್ರಾಂತಿಯ ಕಿರಣಗಳಿಂದ ತಮ್ಮ ಬುದ್ದಿಯನ್ನು ಪ್ರಜ್ವಲಗೊಳಿಸಿಕೊಳ್ಳಬೇಕಾಗಿತ್ತು. ಹಾಗೆ ಮಾಡದಿದ್ದುದೇ ಇಂದು ಸಮಾಜ ತೀವ್ರ ಹಿಂದುಳಿಯಲು ಕಾರಣವಾಗಿದೆ. ಇವರು ತ್ಯಾಗ, ಆದರ್ಶಗಳಿಗೆ ಬೆಲೆಕೊಟ್ಟರು. ಆದರೆ ಮುಂಧೋರಣೆ ವ್ಯಾವಹಾರಿಕತೆಗಳನ್ನು ಇಟ್ಟುಕೊಂಡು ಬಾಳ್ವೆಮಾಡಲಿಲ್ಲ. ಈಗಲೂ ಅಷ್ಟೇ. ಇದು ದಡ್ಡತನವಲ್ಲವೆ?  ಬೇರೆ ಕೆಲವು ಸಮಾಜಗಳ ಬಾಂಧವರು ಬದುಕುವ ಕಲೆಯನ್ನು ಸಾಧಿಸಿಕೊಂಡು ಈಗ ಸುಖಪಡುತ್ತಿದ್ದಾರೆ, ಮೆರೆಯುತ್ತಿದ್ದಾರೆ. ಎರಡನೆಯದಾಗಿ ಈ ಜನರು ದಡ್ಡರಲ್ಲ. ಸಾಕಷ್ಟು ಬುದ್ದಿವಂತರು. ಆದರೆ ಶಿಕ್ಷಣ, ತರಬೇತಿ, ಮಾರ್ಗದರ್ಶನ ಇಲ್ಲದು ದಕ್ಕೆ ದಡ್ಡರಂತೆ ಕಾಣುತ್ತಾರೆ. ದಡ್ಡರಾಗಿದ್ದಾರೆ. ಮೂರನೆಯದಾಗಿ ಈ ಜನ ಧೈರ್ಯವಂತರು. ಆದರೆ ಆ ಧೈರ್ಯ ಸದ್ವಿನಿಯೋಗವಾಗದ ಹುಂಬತನ, ಒರಟುತನ, ಅವಿವೇಕಗಳಾಗಿ ಮಾರ್ಪಟ್ಟಿದೆ. ಮಾರ್ಗದರ್ಶನವಿಲ್ಲದ್ದಕ್ಕೆ ಅದು ಆಗಾಗ ಅಡ್ಡ ದಾರಿಯನ್ನೂ ಹಿಡಿದಿದೆ. ಈಗಲೂ ಈ ಜನರು ಶೂರತನದ ಲಕ್ಷಣ ಉಳಿಸಿಕೊಂಡಿದ್ದಾರೆ. ನಾಲ್ಕನೆಯದಾಗಿ ಈ ಸಮುದಾಯದ ಜನಸಂಖ್ಯೆಯೂ ಅಪಾರವಾಗಿದೆ. ೬೫ ಲಕ್ಷ ಎಂಬ ಅಂದಾಜು ಇದ್ದು, ಇದು ರಾಜ್ಯದಲ್ಲಿ ನಾಲ್ಕು ಅಥವಾ ಐದನೆಯ ದೊಡ್ಡ ಸಮುದಾಯವಾಗಿದೆ. (ಹಲವಾರು ಕಾಲಕಾಲಕ್ಕೆ ಮತಾಂತರವಾಗಿ ಬೇರೆ ಧರ್ಮ, ಜಾತಿಗಳನ್ನು ಶ್ರೀಮಂತಗೊಳಿಸಿದ್ದಾರೆ) ದಕ್ಷಿಣ ಭಾರತದಲ್ಲೂಈ ದೊಡ್ಡಸ್ಥಾನ ಇದೆ. ಐದನೆಯದಾಗಿ ದೊಡ್ಡ ಆಸ್ತಿವಂತರು, ಶ್ರೀಮಂತರು, ಉದ್ಯಮಪತಿಗಳು ಇಲ್ಲದಿದ್ದರೂ, ಶೇ. ೫೦ರಷ್ಟು ಜನರು ತಕ್ಕಮಟ್ಟಿಗೆ ಹೊಲಮನೆ ಹೊಂದಿದವರಾಗಿದ್ದಾರೆ. ಆದರೆ ದುಶ್ಚಟ, ಬಾಳ್ವೇಗೇಡಿತನ, ದುಂದುಗಾರಿಕೆಗಳಿಂದ ಆಸ್ತಿ ಕಳೆದುಕೊಳ್ಳುತ್ತಲೇ ಬಂದಿದ್ದಾರೆ. ಆರನೇಯದಾಗಿ ಹಲವಾರು ಊರುಗಳಲ್ಲಿ, ಕೆಲವು ಕಡೆ ಜಹಗೀರದಾರರು, ದೊರೆಗಳ ವಂಶಜರು ಜಮೀನುದಾರರೂ ಇದ್ದಾರೆ. ಅಲ್ಲಲ್ಲಿ ರಾಜಕೀಯ ಮುಖಂಡರು ಬೆಳೆದಿದ್ದಾರೆ. ಏಳನೇಯದಾಗಿ ಸಾಮಾಜಿಕ ಜೀವನದಲ್ಲಿ ಎಲ್ಲ ಜಾತಿಯವ ರೊಡನೆ ಬೆರೆತು ಬಾಳಲು ಅವಕಾಶವಿದೆ. ಇತ್ತೀಚೆಗೆ ಧರ್ಮಗುರುಗಳೂ ದೊರೆತಿದ್ದಾರೆ. ಇಷ್ಟೆಲ್ಲ ಇದ್ದರೂ ಅವರ ಉದ್ಧಾರವಾಗಿಲ್ಲ. ಈ ಸಮುದಾಯಕ್ಕಿಂತ ಚಿಕ್ಕಪುಟ್ಟ ಸಮುದಾಯ ಗಳು ತಮ್ಮ ಮುತ್ಸದ್ದಿತನ, ಜಿಗುಟುಗಾರಿಕೆ, ಒಕ್ಕಟ್ಟುಗಳಿಂದ ಮುಂದುವರಿದಿದ್ದು ರಾಜ್ಯದ ರಾಜಕೀಯ, ಕೈಗಾರಿಕೆ, ವ್ಯಾಪಾರೋದ್ಯಮಗಳಲ್ಲಿ ನಾಯಕ ಸಮುದಾಯದವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ, ಬಲಿಷ್ಠರಾಗಿದ್ದಾರೆ.

ಈ ಜನ ಬಾಳೆವಂತರಲ್ಲ, ಚೆನ್ನಾಗಿ ದುಡಿದು ಗಳಿಸುವುದಿಲ್ಲ. ಗಳಿಸಿದರೂ ಉಳಿಸುವು ದಿಲ್ಲ. ತಳವಾರನ ತಟ್ಟೆಯಲ್ಲಿ ರೊಟ್ಟಿ ಇರದಿದ್ದರೂ ಹೊಟ್ಟೆಯಲ್ಲಿ ಸಿಟ್ಟು ಬಹಳ. ಹಿಂದುಮುಂದಿನ ವಿಚಾರವಿಲ್ಲ. ಕೊಡಲಿತಾ ಕಡೀತೀನಿ, ಕುಡುಗೋಲುತಾ ಕೊಯ್ಯತೀನಿ ಅಂತಾರೆ. ಇತ್ಯಾದಿ ಮಾತುಗಳು ಈ ಸಮಾಜದ ಬಗ್ಗೆ ಕೇಳಿಬರುತ್ತವೆ. ಇವುಗಳನ್ನು ಆಡುವ ಹಿರಿಯರಲ್ಲಿ ನಾಯಕರೂ ಇದ್ದಾರೆ. ಬೆಳವನಿಗೆ ಬಚ್ಚು ಮಾಡಲು ಬರಲಿಲ್ಲ. ಬೇಡನಿಗೆ ಬಾಳೆ ಮಾಡಲು ಬರಲಿಲ್ಲ ಎಂಬ ಗಾದೆ ಇದೆ. ಬೆಳವ ಪಾರಿವಾಳದಂತಹ ಒಂದು ಮುದ್ದಾದ ಪಕ್ಷಿ ಬಚ್ಚು ಎಂದರೆ ಗೂಡು. ಇತರ ಎಲ್ಲ ಪಕ್ಷಿಗಳೂ ಹೆಚ್ಚು ಕಡ್ಡಿ ಕಸ ತಂದು ಬಚ್ಚನ್ನು ಭದ್ರವಾಗಿ ಕಟ್ಟುತ್ತುವೆ. ಆದರೆ ಬೆಳವ ಬೇಜವಾಬ್ದಾರಿ ಪಕ್ಷಿ, ಗೂಡಿನಲ್ಲಿ ಇಟ್ಚತತ್ತಿಗಳೆಲ್ಲ ಕೆಳಗೆ ಬಿದ್ದು ಹೋಗಿ ಕೇವಲ ೧-೨ ಉಳಿಯುತ್ತವೆ. ಅಷ್ಟೇ ಮರಿ ಆಗುತ್ತವೆ. ತನ್ನ ಸಂತತಿ ರಕ್ಷಣೆಯಂಥ ಮಹತ್ವದ ಕಾರ್ಯದಲ್ಲಿ ಕೂಡ ಬೆಳವ ಹೊಣೆಗೋಡಿ. ಬಾಳ್ವೆಗೇಡಿ, ಬೇಡನು ಸಹ ಇಂಥ ಹೊಣೆಗೇಡಿಯೇ ಎಂದು ಅರ್ಥ. ಇದು ಎಂಥ ಅರ್ಥಪೂರ್ಣ ಅನುಭವಜನ್ಯ ಮಾತಾಗಿದೆಯಲ್ಲವೆ! ರೀತಿನೀತಿಗಳಿಗಿಂತ ಬಿರುಸುತನ, ಒಣಪ್ರತಿಷ್ಠೆ, ಮೂಢನಂಬಿಕೆಗಳೇ ನಾಯಕರಲ್ಲಿ ಜಾಸ್ತಿ, ಸೊಸೆಯನ್ನು ಹೇಗೆ ನಡೆಸಿಕೊಳ್ಳಬೇಕು, ಮಗಳನ್ನು ಹೇಗೆ ನಡೆಸಬೇಕು ಎಂಬುದೂ ಗೊತ್ತಿಲ್ಲದ ಅನೇಕ ದಾಂಪತ್ಯಗಳನ್ನು ನರಕದಂಮಾಡುತ್ತಾರೆ. ಮನೆ ಮುಂದೆ ಶಾಲೆ ಇದ್ದರೂ ಮಕ್ಕಳನ್ನು ಅಲ್ಲಿಗೆ ಕಳಿಸುವುದಿಲ್ಲ, ಪಕ್ಕದಲ್ಲಿ ಹಳ್ಳ ಹರಿದಿದ್ದರೂ ದಿನಾಲು ಸ್ನಾನ ಮಾಡುವುದಿಲ್ಲ (ಕೆಲವು ಸುಧಾರಿಸಿದ ಪ್ರದೇಶಗಳ ನಾಯಕರಿಗೆ ಈ ಮಾತುಗಳು ಅನ್ವಯಿಸಲಿಕ್ಕಿಲ್ಲ. ಸಾರಾಸಗಟವಾಗಿ ಎಲ್ಲರಿಗೂ ಇವು ಅನ್ವಯಿಸುವುದಿಲ್ಲ).

ಉದ್ಧಾರವೇನೋ ಆಗಬೇಕು. ಆದರೆ ಹೇಗೆ ಎಂಬುದೇ ಪ್ರಶ್ನೆ ನಾವು ವಿಫಲರಾದದ್ದು ಇಲ್ಲಿಯೇ. ಎಲ್ಲರೂ ಹಿಂದಿನ ನಮ್ಮ ಹಿರಿಯರ ಪೌರುಷ ಕೊಚ್ಟಿಕೊಳ್ಳುತ್ತ ಕಂಬಳಿ ಹೊದ್ದು ಕೊಂಡು ಮಲಗಿಬಿಡುತ್ತೇವೆ; ಆಲಸ್ಯ ನಮಗೆ ಶಾಪವಾಗಿದೆ. ಉದ್ಧಾರದ ಕನಸನ್ನು ಕಾಣುತ್ತಿ ದ್ದೇವೆ; ಪ್ರಯತ್ನ ಮಾತ್ರ ಬೇಕಾಗಿಲ್ಲ. ಹಣೆಬರಹ, ನಶೀಬ, ದೈವಬಲ, ದೇವರಾಟ ಅನ್ನುತ್ತ ಕುಳಿತರೆ, ಅವೇ ನಮ್ಮ ವೈರಿಗಳಾಗುತ್ತವೆ. ಉಪಾಯ, ಪ್ರಯತ್ನಗಳಿಲ್ಲದೆ ವನರಾಜನೆನೆಸಿ ಕೊಂಡ ಸಿಂಹದ ಬಾಯಿಗೆ ಯಾವ ದುರ್ಬಲ ಮೊಲವೂ ಬಂದು ಬೀಳುವುದಿಲ್ಲ. ಭೂಮಿ ಯಲ್ಲಿ ಧಾನ್ಯ ಬೆಳೆಯಲು ಸಾಕಷ್ಟು ದಿನ ಕಷ್ಟಪಡಬೇಕು. ಧಾನ್ಯಗಳಿಂದ ಅಡಿಗೆ ತಯಾರಿಸಲು ಹಲವಾರು ಕ್ರಮ ಅನುಸರಿಸಬೇಕು. ಆದರೂ ಅಡಿಗೆ ತಾನೇ ಬಾಯಿಗೆ ಬರುವುದಿಲ್ಲ. ತುತ್ತು ತುತ್ತುಗಿ ಬಾಯಿಗಿರಿಸಿಕೊಂಡು ಚೆನ್ನಾಗಿ ನುರಿಸಿ ನುಂಗಬೇಕಾಗುತ್ತದೆ. ಗಡಿಗೆಯೋಳ್ ಮಾಡಿಟ್ಟಡಿಗೆಯು ಗಡಗಡನೆ ಬಂದು ಬೀಳ್ಪುದೆ ಬಾಯೋಳ್? ಎಂಬ ಮಾತಿದೆ. ಎಲ್ಲದಕ್ಕೂ ಕ್ರಿಯೆಬೇಕು, ಕ್ರಿಯಾಶೀಲನ ಆರೋಗ್ಯವು ಚನ್ನಾಗಿರುತ್ತದೆ. ಮನಸ್ಸೂ ತೃಪ್ತವಾಗಿರುತ್ತದೆ. ಶ್ರೀಮಂತನಾದರೂ ಕೆಲಸ ಮಾಡದೆ ಉಣ್ಣಲು ಅಧಿಕಾರವಿಲ್ಲ ಎಂಬುದು ಇಂಗ್ಲಿಷ್‌ನಲ್ಲಿಯ ಬುದ್ದಿ ಮಾತು. ಜ್ಞಾನಪ್ರಾಪ್ತಿಯ ನಂತರವೂ ಅದನ್ನು ಉಳಿಸಿಕೊಳ್ಳಲು ಜ್ಞಾನಿಗಳು ಕರ್ಮ (ಉದ್ಯೋಗ) ಮಾಡುತ್ತಿರಬೇಕು ಎಂದು ಭಗವದ್ಗೀತೆ ಹೇಳುತ್ತದೆ.

ನಮ್ಮ ಅವಗುಣಗಳು ನಮ್ಮನ್ನು ಮುಂದೆ ಹೋಗಲು ಬಿಡುತ್ತಿಲ್ಲ. ಎಲ್ಲೋ ಒಬ್ಬ ಮುಂದೆ ಹೋದರೆ, ಅವನನ್ನು ನಾವು ಸಹಿಸುವುದಿಲ್ಲ. ಹೊಟ್ಟೆ ಕಿಚ್ಚು ಯಾರನ್ನು ಉದ್ಧಾರ ಮಾಡಿತು! ದೇಶಸೇವೆ ಮಾಡಿ ತ್ಯಾಗಿಗಳೆಂದು ಹೆಸರಾದ ಈ ಜನರಲ್ಲಿ ಎಂಥ ಸಂಕುಚಿತ ಮತ್ತು ಅಪಾಯಕಾರಿ ಗುಣ ಹೇಗೆ ಬಂತು? ವಿಶಾಲ ಗುಣ (ಉದಾರತೆ ಮತ್ತು ಇತರರ ಕುಲಬಾಂಧವರ ಏಳಿಗೆ ಕಂಡು ಪ್ರೋ) ಪ್ರಯತ್ನ (ಸಾಹ), ಸಾಮಾನ್ಯ ಶಿಕ್ಷಣ-ತಂತ್ರಜ್ಞಾನಗಳಿಂದ ಮಾತ್ರ ಮುಂದುವರಿಯಲು ಸಾಧ್ಯ. ಈ ಮೂರು ಅಂಶಗಳನ್ನು ಇವರಲ್ಲಿ ಬೆಳೆಸುವುದು ಹೇಗೆ ? ಈ ಕುರಿತೇ ನಾವು ಬಹಳ ತಲೆ ಕೆಡಿಸಿಕೊಳ್ಳಬೇಕು. ವ್ಯಾವಹಾರಿಕವಾಗಿ ಚಿಂತನೆ ಮಾಡಬೇಕು. ಸಭೆಗಳಲ್ಲಿ ಆವೇಶದಿಂದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಮುಖಂಡರಿಂದ ಅಂಥ ಪ್ರಯೋಜನವಾಗುವುದಿಲ್ಲ. ಪ್ರಸಂಗ ಬಂದಾಗ ಇಂಥವರು ಸಾಮಾನ್ಯರನ್ನು ಶೋಷಿಸಲೂ ಹಿಂಜರಿಯುವುದಿಲ್ಲ. ನಿಜವಾದ ಕಳಕಳಿಯ ಮುಖಂಡರಿಂದ ದೊಡ್ಡ ಕೆಲಸಗಳನ್ನು ಮಾಡಿಸಿಕೊಳ್ಳಬಹುದು.ಒಟ್ಟಿನಲ್ಲಿ ದೊಡ್ಡ ಮುಖಂಡರಿಂದ ತಳಮಟ್ಟದ ಸುಧಾರಣೆ ಸಾಧ್ಯವಾಗುವುದಿಲ್ಲ. ಹೆಚ್ಚು ಪ್ರಚಾರ ಬಯಸದೆ, ಸ್ವಾರ್ಥಕ್ಕೂ ಬೀಳದೆ ಜನರನ್ನು ಸಮೀಪದಿಂದ ಕಂಡು ಅಲ್ಲಲ್ಲಿ ಚಿಕ್ಕ ಸಭೆ ನಡೆಸಿ ಸಂಘ – ಸಂಸ್ಥೆ ಕಟ್ಟುವ ಮತ್ತು ಜನರಿಗೆ ಮಾರ್ಗದರ್ಶನ ಮಾಡುವ ಸಮಾಜ ಸೇವಕರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಸೇವೆ ಮಾಡಲು ಸಮಾಜ ಬಾಂಧವರು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು. ಇಂತವರನ್ನು ಸಮಾಜದ ಸದಸ್ಯರು ಹೆಚ್ಚಾಗಿ ಪ್ರೋಸಬೇಕು, ಸಹಕರಿಸಬೇಕು. ಇವರು ನಾಳೆ ಅಕಸ್ಮತ್ತಾಗಿ ದೊಡ್ಡ ಮುಖಂಡರಾಗಿ ಏನಾದರೂ ಸ್ಥಾನಮಾನ ಪಡೆದರೆ ಒಳ್ಳೆಯದೆ. ಆಗಲೂ ಇವರು ಸ್ವಾರ್ಥಿಗಳೂ, ಶೋಷಕರೂ ಆಗದಿದ್ದರೆ ಸಮಾಜಕ್ಕೆ ಕ್ಷೇಮ. ಇಂಥ ಗುಣ ಇರುವವರನ್ನು ಸಮಾಜ ಸೇವಕರನ್ನು ಹುಡುಕುವುದೂ, ಸೇವಾಕಾರ್ಯದಲ್ಲಿ ತೊಡಗಿಸುವುದೂ ಸಮಾಜದ ಕರ್ತವ್ಯವಾಗಿದೆ. ಈ ಕ್ರಮದಿಂದ ಮಾತ್ರ ಸಂಘಟನೆ ಸಾಧ್ಯ. ಬುದ್ದಿವಂತ ಸ್ವಾರ್ಥಿಗಳಿಗಿಂತ ದಡ್ಡರಾದರೂ ಪ್ರಮಾಣಿಕರಾದ ಸಮಾಜ ಸೇವಕರು ನಮಗಿಂದು ಬೇಕಾಗಿದ್ದಾರೆ. ಪ್ರಮಾಣಿಕತೆ, ಕಳಕಳಿಯೊಡನೆ ಬುದ್ದಿವಂತಿಕೆಯೂ ಇದ್ದರೆ ಬಂಗಾರಕ್ಕೆ ಸುವಾಸನೆ ಸೇರಿದಂತಾಗುತ್ತದೆ. ಇತರ ಸಮುದಾಯಗಳ ಜೀವನ, ಸಂಘಟನೆಯಿಂದಲೂ ಕಲಿತುಕೊಳ್ಳುವುದು ಸಾಕಷ್ಟಿವೆ.

ವ್ಯಕ್ತಿ (ಕುಟುಂಬ) ಮಟ್ಟದ ಸುಧಾರಣೆ ಆತ್ಯಾವಶ್ಯಕವಾಗಿದೆ. ದುಡಿಯದೆ, ಹಣ ಸಂಪಾದಿಸದೆ ಇದ್ದುದನ್ನು ಹಾಳು ಮಾಡುತ್ತ ಮದ್ಯಪಾನ ಇತ್ಯಾದಿಗಳ ದಾಸರಾಗಿ ತಾವೂ ಹಾಳಾಗಿ ಏನೂ ಅರಿಯದೆ ಚಿಕ್ಕ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡುವುದು ಸಮಾಜದ ಅವನತಿಯ ಮೊದಲ ಹಂತವಾಗಿದೆ. ಮತ್ತು ಈ ಮೌನ ಕ್ರಮ ಅಪಾಯಕಾರಿಯಾಗಿದೆ. ನಾಶದ ಮುಂದಿನ ಹಂತಗಳಿಗೆ ತಳಪಾಯವಾಗಿದೆ. ಈ ಮೊದಲ ಹಂತದ ಅವನತಿಯನ್ನು ತಡೆ ಹಿಡಿದು ಸುಧಾರಣೆಗೆ ದಾರಿ ಮಾಡಬೇಕಾದುದು ಅಗತ್ಯ. ಪ್ರಾಥಮಿಕ ಶಿಕ್ಷಣವಾದರೂ ಇಲ್ಲದೆ, ಹೊಟ್ಟೆಗೆ ಹಿಟ್ಟು ತಲೆ ಮೇಲಿನ ಸೂರಿಗಾಗಿ ಪರದಾಡುವವರಿಂದ ಬಲಿಷ್ಠ ಸಮಾಜ (ದೇಶ) ಕಟ್ಟಲು ಹೇಗೆ ಸಾಧ್ಯ? ಎಲ್ಲ ವಿಷಯಗಳಲ್ಲಿ ದಾರಿ ತೋರಿಸಲು ಸಮಾಜದ ಹಿರಿಯರು, ವಿದ್ಯಾವಂತರು, ಹಳ್ಳಿ ಮಟ್ಟದ ಸಂಘಗಳು ಮುಂದಾಗಬೇಕು. ಸಮಾಜದ ಋಣ ತೀರಿಸುವದೆಂದರೆ ಇದೇ ಆಗಿದೆ.