ಬೇಡರ ಸಾಂಸ್ಕೃತಿಕ ನಾಯಕರು ಎಂದು ಮಾತನಾಡುವಾಗ ಡಾ. ವಿರೂಪಾಕ್ಷಿ ಪೂಜಾರಹಳ್ಳಿಯ ‘ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು’ ಕೃತಿಯನ್ನು ಉಲ್ಲೇಖಿಸ ಬಹುದು. ಪ್ರಸ್ತುತ ಪ್ರಬಂಧದ ಚರ್ಚೆಯನ್ನು ಅವರ ಪ್ರಸ್ತಾವನೆಯ ಭಾಗದ ಉಲ್ಲೇಖ ದಿಂದಲೇ ಪ್ರಾರಂಭಿಸುತ್ತೇನೆ. ಆಧುನಿಕ ಸಂಸ್ಕೃತಿಯಿಂದ ನಮ್ಮ ಪ್ರಾಚೀನ ಸಂಸ್ಕೃತಿ ನೆಲಕಚ್ಚು ವಂತಾಗಿದೆ. ಬುಡಕಟ್ಟು ವೀರರನ್ನು ಆರಾಧಿಸುವ ಬೇಡರು ಇತರರ ಪ್ರಭಾವಕ್ಕೆ ಒಳಗಾಗಿ ಶ್ಯುತಿ ಪಡೆದ ದೇವರನ್ನು ಪೂಜಿಸುತ್ತಾಅನುಯಾಯಿಗಳಾಗುತ್ತಾರೆ. ಜೊತೆಗೆ ತಮ್ಮ ವಂಶದ ಅಥವಾ ಪರಂಪರೆಯ ಪೂರ್ವಿಕ ವ್ಯಕ್ತಿಯನ್ನು ಆರಾಧಿಸುವುದುಂಟು. ಮ್ಯಾಸಬೇಡರ ವಿಶೇಷತೆಯೆಂದರೆ ಎಂಥ ಜಗದ್ವಿಖ್ಯಾತ ದೇವರಗಳಿದ್ದರೂ ತಮ್ಮ ಮಾತೃ ದೇವತೆಗಳಿಗೆ ಮೊದಲ ಆಧ್ಯತೆ ಕೊಡುವರು. ಆದುದರಿಂದ ಇಂಥಾ ವೀರರ ಸಾಂಸ್ಕೃತಿ ಬದುಕು ಅಜ್ಞಾತವಾಗಿದ್ದನ್ನು ತೆರೆದು ತೋರಿಸಬೇಕಾಗಿದೆ (ಪುಟ ೭).

ಈ ಉಲ್ಲೇಖವನ್ನು ಗಮನಿಸಿದರೆ ಕೆಲವು ಅಪಸ್ವಷ್ಯವಾಗುತ್ತದೆ. ಸಮುದಾಯಗಳನ್ನು ಅಧ್ಯಯನ ಮಾಡುವ, ದುಂಡು ಹೇಳಿಕೆಗಳನ್ನು ಸಾರಾಸಗಾಟಾಗಿ ನೀಡುವ, ಸಾಮಾನ್ನೀಕರಣದ ವ್ಯಾಖ್ಯಾನ ಜನಪ್ರಿಯ ಮಾದರಿ. ಈ ಮಾದರಿ ಒಂದು ಸಮುದಾಯದ ಅಂತಸತ್ವದ ಸೂಕ್ಷ್ಮ ಒಳನೋಟಗಳನ್ನು ಬಿಟ್ಟುಕೊಂಡುತ್ತದೆ. ಅಂತೆಯೇ ಒಂದು ಸಿದ್ಧಮಾರಿಯಲ್ಲಿ ಇಡಿಸಮುದಾಯದ ವಿಶ್ಲೇಷಣೆಗಳನ್ನು ಒರಟು ಒರಟಾಗಿ ತುರುಕಿದಂತಾಗುತ್ತದೆ. ಇದು ವಿರೂಪಾಕ್ಷಿ ಪೂಜಾರಳ್ಳಿಯವರ ಒಬ್ಬರ ಸಮಸ್ಯೆಯಲ್ಲಿ ಸಂಸ್ಕೃತಿಯಿಂದ ನಮ್ಮ ಪ್ರಾಚೀನ ಸಂಸ್ಕೃತಿ ನೆಲಕಚ್ಚುವಂತಾಗಿದೆ. ಎನ್ನುವುದು ಒಂದು ಜನಪ್ರಿಯ ವ್ಯಾಖ್ಯಾನ ಸರಿ ಇದನ್ನು ನಾವೇ ಹೇಳುತ್ತಿದ್ದೇವಾ ಸಮುದಾಯ ಹೇಳುತ್ತಿದೆಯಾ? ಅಥವಾ ಅಧ್ಯಯನಕಾರರು ಆಧುನಿಕತೆಯ ಸೌಲಭ್ಯಗಳೆಲ್ಲವನ್ನೂ ಬಳಸಿಕೊಂಡು, ಸಮುದಾಯ ಮಾತ್ರ ಆಧುನಿಕತೆಯ ಪ್ರಭಾವಕ್ಕೆ ಒಳಗಾಗಬಾರದು ಎನ್ನುವ ಪಕ್ಷಪಾತ ತೋರುತ್ತಿದ್ದೇವೆಯೆ? ಹೋಗಲಿ ಈ ವ್ಯಾಖ್ಯಾನವನ್ನು ಪರೀಕ್ಷಿಸಲು ಸಮುದಾಯಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅದರ ಫಲಿತಗಳ ನ್ನೇನಾದರೂ ನೋಡಿದ್ದೇವೆಯೇ? ಇಲ್ಲ. ನನ್ನ ಅಧ್ಯಯನದ ಮಿತಿಯೊಳಗೆ ಕನ್ನಡದಲ್ಲಿ ಸಮುದಾಯಗಳನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸಿ ಅದರ ಅಂತಸತ್ವದ ಒಳಹುಗಳನ್ನು ಹಿಡಿಯುವ ಒಂದೇ ಒಂದು ಅಧ್ಯಯನ ಸಿಕ್ಕಂತೆ ಕಾಣುವುದಿಲ್ಲ. “ಬುಡಕಟ್ಟು ವೀರರನ್ನು ಆರಾಧಿಸುವ ಬೇಡರು ಇತರರ ಪ್ರಭಾವಕ್ಕಗೆ ಒಳಗಾಗಿ ಖ್ಯಾತಿ ಪಡೆದ ದೇವರನ್ನು ಪೂಜಿಸುತ್ತಾ ಅನುಯಾಯಿಗಳಾಗುತ್ತಾರೆ” ಈ ವ್ಯಾಖ್ಯಾನವು ಸಹ ಬುಡಕಟ್ಟು ಅಧ್ಯಯನದ ಸಾರ್ವತ್ರಿಕ ನಂಬಿಕೆ. ಯಾಕಾಗಿ ಇತರ ದೇವರುಗಳ ಪ್ರಭಾವ ಬುಡಕಟ್ಟುಗಳ ಮೇಲೆ ಆಗುತ್ತಿದೆ? ಬುಡಕಟ್ಟುಗಳೇಕೆ ಇತರ ದೇವರುಗಳನ್ನು ಆರಾಧಿಸುವ ಕಡೆ ಚಲಿಸುತ್ತಿದ್ದಾರೆ? ಎಂದು ನಾವು ಪ್ರಶ್ನಿಸಿಕೊಂಡು ಉತ್ತರ ಉಡುಕವುದಿಲ್ಲ.

ಈ ಪ್ರವೇಶಿಕೆಯ ಚರ್ಚೆಗೆಕಾರಣ ಕರ್ನಾಟಕದಲ್ಲಿ ಸಮುದಾಯಗಳನ್ನು ದುಂಡಾಗಿ ಗ್ರಹಿಸುವ ಮಾದರಿಗಳ ಕಟ್ಟಿಯಾಗಿ ನೆಲೆಯೂರಿವೆ. ಹಾಗಾಗಿ ನಮಗೆ ಸೂಕ್ಷ್ಮವಾಗಿ ಸಮುದಾಯಗಳ ಚಲನೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ‘ಕರ್ನಾಟಕದಲ್ಲಿ ಸಾಂಸ್ಕೃತಿಕ’ ನಾಯಕರು ಪದ ಅಧ್ಯಯನಗಳ ಹೊಸ ಪ್ಯಾಶನ್ನಿನಂತೆ ಮತ್ತೆ ಮತ್ತೆ ಬಳಕೆಯಾಗುತ್ತಿದೆ. ಈ ಅಧ್ಯಯನಗಳ ಮೂಲ ಆಶಯ ‘ಆಜ್ಞಾತವಾಗಿದ್ದ ಸಾಂಸ್ಕೃತಿಕ ವೀರರ ಬದುಕನ್ನು ಸಮುದಾಯಗಳಿಗೆ ತೆರೆದು ತೋರಿಸಬೇಕು’ ಎನ್ನುವುದು. ಸಮುದಾಯದ ಸ್ಮೃತಿಲೋಕ ದಿಂದಲೇ ‘ಸಾಂಸ್ಕೃತಿಕ ನಾಯಕರ’ ಜೀವನಚಿತ್ರವನ್ನು ಪಡೆದ ಅಧ್ಯಯನಕಾರರು, ಮತ್ತೆ ಸಮುದಾಯಕ್ಕೆ ತೆರೆದು ತೋರಿಸುತ್ತೇವೆ ಎಂದು ಹೊರಡುವ ಕ್ರಮವೇ ವಿಚಿತ್ರವಾಗಿದೆ. ಆದರೆ ಸಾಂಸ್ಕೃತಿಕ ನಾಯಕರನ್ನು ಸಾಂಸ್ಕೃತಿ ಶಕ್ತಿಯನ್ನಾಗಿ ರೂಪಿಸುವ ಮೂಲಕ ಆ ಸಮುದಾಯದೊಳಗೆ ‘ಆತ್ಮವಿಶ್ವಾಸ’ವನ್ನು ಬೆಳೆಸುವ ಕಡೆ ಈ ಅಧ್ಯಯನಗಳು ಚಲಿಸ ಬೇಕಾಗಿದೆ. ಈ ಬಗೆಯ ಚಲನೆ ನನಗೆ ಗೊತ್ತಿರುವಂತೆ ‘ಮಂಟೇಸ್ವಾಮಿ’ ಕುರಿತ ಅಧ್ಯಯನ ಗಳಲ್ಲಿ ಮಾತ್ರ ನಡೆಯುತ್ತಿದೆ. ಉಳಿದಂತೆ ಕರ್ನಾಟಕದಲ್ಲಿ ಮೈಲಾರಲಿಂಗ, ಜುಂಜಪ್ಪ, ಮಾದೇಶ್ವರ, ಯಲ್ಲಮ್ಮ, ಸಿರಿ, ಗಾದ್ರಿ ಪಾಲನಾಯಕ, ಇನ್ನೂ ಮಾರಕ್ಕೂ ಹೆಚ್ಚು ಸಾಂಸ್ಕೃತಿಕ ನಾಯಕರ ಅಧ್ಯಯನಗಳು ನಡೆಯುತ್ತಿವೆ. ಇವುಗಳ ಚಲನೆ ಮಾತ್ರ ಜನಪ್ರಿಯ ನಂಬಿಕೆಯ ಕಡೆ ಸಾಗಿದೆ.

ಬೇಡ ಸಮುದಾಯದ ‘ಸಾಂಸ್ಕೃತಿಕ ವೀರರ’ ಅಧ್ಯಯನಗಳಿಗೂ ಮೇಲಿನ ಸರಹದ ಮಿತಿಗಳಿವೆ. ಈ ಹೊತ್ತು ಬೇಡ ಸಮುದಾಯ ಸಾಂಸ್ಕೃತಿ ನಾಯಕರನ್ನು ಅಧ್ಯಯನ ಮಾಡುವುದೆಂದರೆ ಇತರೆ ಸಮುದಾಯಗಳಿಗೆ ಈ ಸಮುದಾಯದ ಸಾಂಸ್ಕೃತಿಕ ಚರಿತ್ರೆಯನ್ನು ತೋರಿಸುವುದು ಎಂಬ ಅರ್ಥಪಡೆದಿದೆ. ಈಗ ಸಮುದಾಯಗಳು ರಾಜಕೀಯ ಸೌಲಭ್ಯಗಳನ್ನು ಪಡೆದು ಸಬಲವಾಗುವತ್ತ ಹೆಜ್ಜೆ ಇಟ್ಟಿವೆ. ಇಲ್ಲಿಯೂ ಸಹ ಸಮುದಾಯದ ಕಲಿತ ಸುಶಿಕ್ಷಿತರು ಒಂದು ಸಮುದಾಯದ ಮೂಲಕ ಈ ಸಮುದಾಯಕ್ಕೆ ಪಾರಂಪರಿಕ ಚರಿತ್ರೆ ಇದೆ. ಆದರೆ ವರ್ತಮಾನದಲ್ಲಿ ಅಸಹನೀಯವಾಗಿ ರೂಪಕಗಳನ್ನು ಈ ಕಾಲದ ಸಮುದಾಯ ಶಕ್ತಿಯಾಗಿಸಿ ಕೊಂಡು ಬಲಗೊಳ್ಳಬೇಕೆಂಬ ನಿಲುವ ಬೇಡಸಮುದಾಯಗಳನ್ನು ಪಡೆದ ಆಶಯಗಳು ಅನ್ನಿಸುವುದಿಲ್ಲ.

ಮ್ಯಾಸಬೇಡರಲ್ಲಿ ಸಾಂಸ್ಕೃತಿಕ ನಾಯಕ ಆರಾಧನ ಲೋಕವೇ ಇದೆ. ಈ ನಾಯಕರ ‘ಕಥನ’ವನ್ನು ಹೇಳುವುದಕ್ಕೂ ಈಗ ಸಮುದಾಯ ಆ ನಾಯಕರನ್ನು ಆರಾಧನೆಗಳ ಭಾಗವಾಗಿ ನಾಯಕರ ಕಥನಗಳನ್ನು ಕಟ್ಟುವ ಒಂದು ಕ್ರಮವಿದೆ. ಎಂ.ಜಿ. ಈಶ್ವರಪ್ಪ, ಕರಿಶೆಟ್ಟಿ ರುದ್ರಪ್ಪ, ಕೃಷ್ಣಮೂರ್ತಿ ಹನೂರ್, ಪುಟ್ಟಣ್ಣ ಎಂ.ಎಸ್. ಲಕ್ಷ್ಮಣ್ ತೆಲಗಾವಿ, ವಿರೂಪಾಕ್ಷಿ ಪೂಜಾರಹಳ್ಳಿ ಮುಂತಾದವರ ಅಧ್ಯಯನಗಳನ್ನು ಇದರ ಭಾಗವಾಗಿ ಪರಿಶೀಲಿಸಬಹುದು.  ಈ ಬಗೆಯ ಅಧ್ಯಯನದಿಂದ ಸಾಧ್ಯವಾದದ್ದು, ಕರ್ನಾಟಕದ ತಳಸಮುದಾಯಗಳ ಚರಿತ್ರೆಗೆ ಪೂರಕವಾಗಿ ಬೇಡರನ್ನು ಗುರುತಿಸಿದ್ದು. ಅಂತೆಯೇ ಕರ್ನಾಟಕದ ಇತರೆ ಸಮುದಾಯ ಗಳೊಂದಿನ ಸಾಂಸ್ಕೃತಿ ಕೊಡುಕೋಳೆಗಳನ್ನು ಅಧ್ಯಯನ ಮಾಡುವ ಮೂಲಕ ಅಖಂಡ ಕರ್ನಾಟಕ ಮಾದರಿಯ ಚರಿತ್ರೆಯ ಕಲ್ಪನೆಯನ್ನು ಒಡೆದು ಪ್ರಾದೇಶಿಕ ಚರಿತ್ರೆಯನ್ನು ಕಟ್ಟಾಯಿಸಾಧ್ಯವಾಯಿತು. ಯಾವ ಸಮುದಾಯ ‘ಅಕಾಡೆಮಿಕ್’ ಶಿಸ್ತಿಗೆ ಒಳಪಡಿಸುವುದೇ ಅಸ್ಪೃಶ್ಯತೆ ಎನ್ನುಗ್ರಹಿಕೆಗಳನ್ನು ಪರೋಹಿತಶಾಹಿ ಅಧ್ಯಯನಕಾರರು ರೂಪಿಸಿದ್ದರೋ, ಅಂತಹ ಮಾದರಿಯನ್ನು ಈ ಬಗೆಯ ಅಧ್ಯಯನಗಳು ಒಡೆದವು.

ಆದರೆ ಈಬಗೆಯ ಅಧ್ಯಯನಗಳು ಮತ್ತೆ ಸಮುದಾಯಕ್ಕೆ ಮರಳಿ ಆ ಮೂಲಕ ಹೊಸ ಜಾಗ್ರತೆ ಉಂಟಾಗುತ್ತದೆಯೋ? ಕೇಳಿಕೊಳ್ಳಬೇಕಾದ ಪ್ರಶ್ನೆ. ಹೆಜ್ಜೆಂದರೆ ಆ ಸಮುದಾಯ ‘ಕಲಿತ’ವರು ಅದರಲ್ಲೂ ಸಮುದಾಯದ ಬಗೆಗೆ ಸ್ವತಃ ಅಭಿಮಾನವಿದ್ದು, ತನ್ನ ಸಮುದಾಯದ ಸಾಂಸ್ಕೃತಿಕ ಚರಿತ್ರೆಯ ಬಗೆಗೆ ತಿಳಿಯಬೇಕೆಂಬ ಹಂಬಲವಿರುವ ಕೆಲವೇ ಕೆಲವರು ಮಾತ್ರ ಈ ಅಧ್ಯಯನಗಳನ್ನು ಓದಬಲ್ಲರು. ಈ ಅಧ್ಯಯನಗಳನ್ನೇ ಉಪನ್ಯಾಸಗಳ ಮೂಲಕ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡುತ್ತಿವೆ. ಉದಾಹರಣೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠದಿಂದ, ಕೂಡ್ಲಿಗಿ, ಮರಿಯಮ್ಮನಹಳ್ಳಿ, ಕೊಪ್ಪಳ ಮುಂತಾದ ಕಡೆ ಉಪನ್ಯಾಸ ಕಾರ್ಯ ಕ್ರಮಗಳನ್ನು ಕೂಡಿತು. ಆದರೆ ಸೆಮಿನಾರಿನಲ್ಲಿ ಪ್ರಬಂಧಮಂಡಿಸುವವರನ್ನು ಅಟಾಕಿ ಬೆರಳೆಣಿಕೆಯ ಕೇಳುಗರು ಮಾತ್ರ ಹಾಜರಿದ್ದರು. ಇದು ಏನನ್ನು ಸೂಚಿಸುತ್ತದೆ? ಈ ಬಗೆಯ ಅಕಾಡೆಮಿಕ್ ಅಧ್ಯಯನಗಳು ಸಮುದಾಯದಿಂದ ದೂರ ಉಳಿಯುತ್ತಿದೆ ಎನ್ನುವುದು ಮೊದಲ ನೋಟಕ್ಕೆ ಗೋಚರಿಸುವ ಸತ್ಯ.

ಬೇಡರ ಸಾಂಸ್ಕೃತಿಕ ನಾಯಕರ ಕಥನವನ್ನು ನೋಡುತ್ತಿದ್ದಾರೆ. ‘ಪಶುಪಾಲಕ’ ಸಂಸ್ಕೃತಿ ಯಲ್ಲಿ ಹುಟ್ಟಿಕೊಂಡಹವು. ಪ್ರಭುತ್ವದ ಜೊತೆ ನೇರ ಸಂಘರ್ಷವನ್ನು ಏರ್ಪಡಿಸಿಕೊಂಡವರು. ಮ್ಯಾಸ ಬೇಡರ ಸಾಂಸ್ಕೃತಿಕ ನಾಯಕ ಜಗಳೂರ ಜಿನಿಗೂ ಮತ್ತು ತಿರುಪತಿಯ ವೆಂಕಟೇಶ್ವರನಿಗೂ ನಡೆದಿರುವ ವಾಗ್ವಾದ ಮ್ಯಾಸಬೇಡರ ಜನತದ ಸಾಹಿತ್ಯದಲ್ಲಿ ಪ್ರಖ್ಯಾತ ವಾದದ್ದು. ಮಂಟೇಸ್ವಾಮಿ ಕಲ್ಯಾಣದಲ್ಲಿ ಬಸವಣ್ಣನನ್ನು ಮುಖಾಮುಖಿರುಗಳು ರೀತಿಯಲ್ಲೇ ಜಗಳೂರಜೈ ವೆಂಕಟೆಶನನ್ನು ಮುಖಾಮುಖಿಯಾಗುತ್ತಾನೆ.