ತಾವರೆ ನೀರನಂಟದಂತೆ
ಗಾಳಿದೊಳನತ್ತದಂತೆ
ಬಿಸಿಲು ಮಳೆಯಲ್ಲಿ ನೆನೆಯದಂತೆ
ಬಯಲು ತಮ ಲೇಪಿಸದಂತೆ
ಸೌರಾಷ್ಟ್ರಾ ಸೋಮೇಶ್ವರ ನಿಮ ಶರಣ ನಾ
ಬಳಸಿಯು ಬಳಸಂತಿಪಕ್ಕೇ          || ೧ ||

ತನುವಿನಲಿ ನಿರ್ಮೋಹ ಮನದಲ್ಲಿ
ನಿರಾಂಹಕಾರ ಚಿತ್ತದಲಿ ನಿರಪೇಕ್ಷೆ
ವಿಷಯದಲಿ ಉದಾಸೀನ ಭಾವದಲಿ
ದಿಗಂಬರವು ಜ್ಞಾನದಲಿ ಪರಿಪೂರ್ಣ
ನಾದ ಬಳಿಕ ಸೌರಾಷ್ಟ್ರಾ ಸೋಮೇಶ
ಬೇರಿಲ್ಲ ಕಾಣಿರೋ         || ೨ ||