ಚನ್ನಕೇಶವ ದೇವಾಲಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೮ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೦ ಕಿ.ಮೀ

ಇತಿಹಾಸ ಪ್ರಸಿದ್ದವಾದ ಶಿಲೆಯಲ್ಲಿ ಕಲೆಯರಳಿರುವ, ಶಿಲ್ಪಕಲೆಯ ತವರೂರು ಎಂದೇ ಪ್ರಸಿದ್ದವಾಗಿರುವ ಇಲ್ಲಿ ಶ್ರೀ ಚನ್ನಕೇಶವನ ದೇವಾಲಯವಿದ್ದು, ಹೊಯ್ಸಳರ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು ೩೧/೨ ಅಡಿ ಎತ್ತರದ ನಕ್ಷತ್ರಾಕಾರದ ಪೀಠದ ಮೇಲೆ ನಿರ್ಮಿತವಾಗಿದೆ. ನವರಂಗದಲ್ಲಿರುವ ಮದನಿಕೆಯರ ನಾಟ್ಯಭಂಗಿಗಳು ನಯನ ಮನೋಹರವಾಗಿದೆ ಇಂದಿಗೂ ಸಹ ಈ ಹೊಯ್ಸಳರ ದೇವಾಲಯದಲ್ಲಿ ನಿತ್ಯಪೂಜೆ ಹಾಗೂ ವರ್ಷಕ್ಕೊಮ್ಮೆ ರಥೋತ್ಸವವು ನಡೆಯುತ್ತದೆ.

ನಕ್ಷತ್ರಾಕಾರದ ೩೨ಕೋನಗಳ ಶ್ರೀಚಕ್ರ ರೂಪದ ವೇದಿಕೆಯ ಮೇಲೆ ರಚಿತವಾಗಿದೆ. ಪೀಠದ ಪಟ್ಟಿಕೆಗಳಲ್ಲಿರುವ ಗಜಸಾಲು, ಯೋಧರಸಾಲು, ಕೀರ್ತಿಮುಖಸಾಲು, ಲತಾ ಪಟ್ಟಿಕೆಗಳಲ್ಲಿ ಸುಮಾರು ೧೦ ಸಾವಿರ ಸಣ್ಣವಿಗ್ರಹಗಳು ಇವೆ.

 

ಹಳೆಬೀಡು :-

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೧ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೭ ಕಿ.ಮೀ

ಇತಿಹಾಸ ಪ್ರಸಿದ್ದವಾದ ಹಳೆಬೀಡು ಈ ಹಿಂದೆ ಹೊಯ್ಸಳರ ರಾಜಧಾನಿಯಾಗಿದ್ದು, ಅಪ್ರತಿಮ ಶಿಲ್ಪಕಲೆಗೆ ಸಾಕ್ಷಿಯಾಗಿದೆ. ಇದನ್ನು ಸಹ ನಕ್ಷತ್ರಾಕಾರದ ಪೀಠದ ಮೇಲೆ ನಿರ್ಮಿತವಾಗಿದೆ. ಇದರಲ್ಲಿ ವಿವಿಧ ಶಿಲ್ಪ ಕಲಾಕೃತಿಗಳ ಜೊತೆಗೆ ಹೊಯ್ಸಳ ಅರಸರ ಜೀವನ ವೈವಿಧ್ಯವನ್ನು ಸಹ ನಿರ್ಮಿಸಲಾಗಿದೆ.

ಈ ದೇವಾಲಯದ ಆವರಣದಲ್ಲಿರುವ ವಿಗ್ರಹಗಳು, ಪ್ರತಿಮೆಗಳು, ಹಾಗೂ ಭೂ ಉತ್ಸವದ ಕಾಲದಲ್ಲಿ ದೊರೆತ ಅವಶೇಷಗಳನ್ನು ಸೇರಿದಂತೆ, “ವಸ್ತು ಸಂಗ್ರಹಾಲಯವನ್ನು” ನಿರ್ಮಿಸಿದ್ದು ಪ್ರತಿದಿನ ಬೆಳಿಗ್ಗೆ ೧೦ ರಿಂದ ಸಂಜೆ ೫ರವರೆಗೆ ತೆರೆದಿದ್ದು, ಶುಕ್ರವಾರ ಈ ವಸ್ತು ಸಂಗ್ರಹಾಲಯಕ್ಕೆ ರಜೆ ಇರುತ್ತದೆ.

 

ಪುಷ್ಪಗಿರಿ ಬೆಟ್ಟ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೨೭ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೩ ಕಿ.ಮೀ

ಹಳೇಬೀಡು – ಹಗರೆ ಮಾರ್ಗದಲ್ಲಿರುವ ಇದು ಚಿಕ್ಕ ಬೆಟ್ಟವಾಗಿದೆ. ಇಲ್ಲಿ ಮಲ್ಲಿಕಾರ್ಜುನ ದೇವಾಲಯವಿದೆ. ಇಲ್ಲಿ ಶ್ರೀಶ್ರೀಶ್ರೀ ಸೋಮಶೇಖರ ಸ್ವಾಮೀಜಿಯವರು ನೆಲೆಸಿದ್ದು, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾಭ್ಯಾಸದ ಸೌಲಭ್ಯವನ್ನು ಒದಗಿಸಿರುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಪ್ರತಿದಿನ ಊಟ, ಉಪಹಾರಗಳ ವ್ಯವಸ್ಥೆ ಇರುತ್ತದೆ. ಇಲ್ಲಿ ಪ್ರತಿ “ಹುಣ್ಣಿಮೆ”ಯೆಂದು ತಾಜ್ ನೆಡೆಯುವ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣ, ಉಪನ್ಯಾಸ, ಚಿಂತನ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ವಾಮೀಜಿಯವರಿಂದ, ವಿಶೇಷ ವಿಚಾರ ಮಂಡನೆ ಇರುತ್ತದೆ. ಇದೊಂದು ವಿದ್ಯಾ ಕೇಂದ್ರ, ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದೆ. ಬೆಟ್ಟದ ಮೇಲಿನಿಂದ ಸುತ್ತ ಮುತ್ತಲಿನ ಪ್ರಕೃತಿ ನೋಟವು ರಮಣೀಯವಾಗಿದೆ.

 

ಬೆಣ್ಣೆಬೆಟ್ಟ :

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೧ ಕಿ.ಮೀ

ಬೇಲೂರು ತಾ. ಹಳೇಬೀಡಿನ ದೃಶ್ಯದಲ್ಲಿರುವ ಈ ಬೆಣ್ಣೆ ಬೆಟ್ಟದ ಮೇಲೆ ಆಂಜನೆಯ ದೇವಾಲಯವಿದೆ. ಬೆಟ್ಟದ ಮೇಲಿನಿಂದ ಸುತ್ತಮುತ್ತಲಿನ ಪ್ರಕೃತಿ ನೋಟ ರಮ್ಯವಾಗಿದೆ. ಚಿಣ್ಣರಿಗೆ ಬೆಟ್ಟ ಏರುವುದರ ಅರಿವು ಹಾಗೂ ಅನುಭವವು ಎಲ್ಲಾದವನ್ನು ನೀಡುತ್ತದೆ. ಹಳೇಬೀಡಿನಿಂದ ನಡೆದು ಹೋಗಬಹುದು. ಹಳೆಬೀಡು – ಹಗರೆ ಮಾರ್ಗದಲ್ಲಿ ಬತ್ತಿಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯ ಮುಂದಿ ನಿಂದ ರಸ್ತೆ ಸಾಗುತ್ತದೆ.

 

ಯಗಚಿ ಜಲಾಶಯ – ಬೇಲೂರು

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೨ ಕಿ.ಮೀ

ಜಿಲ್ಲಾ ಕೇಂದ್ರದಿಂದ ೪೦ ಕಿ.ಮೀ ಮಾರ್ಗ ಬೇಲೂರು -ಚಿಕ್ಕಮಗಳೂರು ಯಗಚಿ ಜಲಾಶಯವು ೩.೬ ಟಿ.ಎಂ.ಸಿ ಸಾಮರ್ಥ್ಯವನ್ನು ಹೊಂದಿದ್ದು, ೩೬ ಅಡಿಗಳಷ್ಟು ಎತ್ತರವಿದೆ . ೧೦೦ಕಿ.ಮೀ ಉದ್ದದ ಎಡದಂಡೆ ಕಾಲುವೆಯನ್ನು ಹೊಂದಿದ್ದು, ಸುಮಾರು, ೫೭,೦೦೦/- ಎಕರೆಗೆ ನೀರುಣಿಸುತ್ತದೆ.

ಬೇಲೂರು ಹಾಗೂ ಚಿಕ್ಕಮಗಳೂರು ಪಟ್ಟಣಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಅರಸೀಕೆರೆ ತಾ.ಗೆ ನೀರನ್ನು ಒದಗಿಸುವ ಕಾಮಗಾರಿಯು ಪ್ರಗತಿಯಲ್ಲಿದೆ.

ಈ ಜಲಾಶಯವು ೫ ಕ್ರಸ್ಟ್‌ಗೇಟ್‌ಗಳನ್ನು ಹೊಂದಿದೆ. ಇಲ್ಲಿ ರಾಜ್ಯ ಪ್ರಾವಾಸೋಧ್ಯಮ ಇಲಾಖೆಯಿಂದ ಪಂಚತಾರಾ ಹೋಟೆಲ್‌ಗಳ ನಿರ್ಮಾಣವಾಗುತ್ತಿದೆ. ಹಾಗೂ ಬೃಂದಾವನ (ಪಾರ್ಕ್) ನಿರ್ಮಿಸುವ ಯೋಜನೆಯೂ ಸಹ ಇರುತ್ತದೆ.

 

ಹಲ್ಮಿಡಿ ಬೇಲೂರು ತಾ. ಮಾರ್ಗ – ಬೇಲೂರು – ಅಂಬಳೆ – ಚಿಕ್ಕಮಗಳೂರು.

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೮ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೦ ಕಿ.ಮೀ’

ಹಲ್ಮಿಡಿಯು ಕನ್ನಡದ ಮೊದಲ ಲಿಖಿತ ದಾಖಲೆಯು ದೊರೆತ ಸ್ಥಳ ಹಲ್ಮಿಡಿ ಶಾಸನವು ಶಿಲಾ ಶಾಸನದ ರೂಪದಲ್ಲಿದ್ದು, ಇದರ ಮೂಲಕೃತಿಯು ಬೆಂಗಳೂರಿನ ಹೈಕೋರ್ಟಿನ ಹಿಂಭಾಗದಲ್ಲಿರುವ ಸರ್ಕಾರೀ ವಸ್ತು ಸಂಗ್ರಹಾಲಯದಲ್ಲಿದೆ. ಹಲ್ಮಿಡಿಯಲ್ಲಿ ಇದರ ಪ್ರತಿಕೃತಿ ಮಂಟಪವನ್ನು ರಚಿಸಲಾಗಿದೆ.

೧. ಪ್ರತಿಕೃತಿ ಮಂಟಪ ರಚನೆಯ ಸಂಕಲ್ಪ, ಶ್ರೀ ಮದನ್ ಗೌಡ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹಾಸನ.

೨. ಸಹಕಾರ :- ಕೇಂದ್ರ ಪುರಾತತ್ವ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

೩. ಪ್ರತಿಕೃತಿ ಮಂಟಪ ವಿನ್ಯಾಸ ಡಾ. ಶ್ರೀವತ್ಸ ಎಸ್. ವಟಿ. ಬೇಲೂರು.

 

ಗಾಳಿಯಂತ್ರಗಳು

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೧೬ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೮ ಕಿ.ಮೀ

ಜಿಲ್ಲೆಯಿಂದ ೧೬ ಕಿ.ಮೀ. ದೂರದಲ್ಲಿರುವ ಅಡಗೂರು ರಸ್ತೆಯಲ್ಲಿ ಬೆಟ್ಟದ ಮೇಲೆ ಗಾಳಿ ಯಂತ್ರಗಳನ್ನು ನಿರ್ಮಿಸಲಾಗಿದೆ. ಆಶಾಡಮಾಸ ಮತ್ತು ಮಳೆಗಾಲದಲ್ಲಿ ಹೆಚ್ಚಿನ ವಿದ್ಯತ್ ಉತ್ಪಾದನೆ ೨೦೦೮-೦೯ನೇ ಸಾಲಿನಲ್ಲಿ ಸ್ಥಾಪಿತಗೊಂಡಿದೆ. ಖಾಸಗಿ ಕಂಪನಿಯೊಂದು ಈ ಗಾಳಿಯಂತ್ರಗಳನ್ನು ಸ್ಥಾಪಿಸಿದೆ.


ರೆಬೆಲ್ಲೋ ಸ್ಟೀಲ್ ಇಂಡಸ್ಟ್ರೀಸ್, ಬೇಲೂರು


* ಬೇಲೂರಿನ ಪಂಪ್‌ಹೌಸ್ ರಸ್ತೆಯಲ್ಲಿರುವ ಈ ಸಣ್ಣ ಕೈಗಾರಿಕೆಯಲ್ಲಿ ಸ್ಟೀಲಿನ ಹಂಡೆ, ದಬರಿ, ಹಾಲಿನ ಕ್ಯಾನ್ ಕೊಡ ಹಾಗೂ ಮಜ್ಜಿಗೆ ಹಂಡೆಗಳನ್ನು ತಯಾರಿಸಲಾಗುತ್ತದೆ.

ಜೋಧ್‌ಪುರ್, ದೆಹಲಿ, ಅಹಮದಾಬಾದ್ ಗಳಿಂದ ಸ್ಟಿಲ್ ೩೩ ಪಾಟಾಗಳನ್ನು ತರಿಸಿಕೊಂಡು ಕತ್ತರಿಸಿ ಬೇಕಾದ ಆಕಾರವನ್ನು ನೀಡಲಾಗುತ್ತದೆ. ನಂತರ ಮೈಸೂರಿನಿಂದ ತರಿಸುವ ೨-೩ ತರಹದ ವಿಶೇಷ ಸೋಪುಗಳಿಂದ ತೊಳೆದು ನಂತರ ೩ ಹಂತಗಳಲ್ಲಿ ಹೊಳಪನ್ನು ನೀಡಲಾಗುತ್ತದೆ.

ಇಲ್ಲಿನ ಪಾತ್ರೆಗಳು ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ಹಾಸನ ಜಿಲ್ಲೆಗೆ ಮಾತ್ರವಲ್ಲದೆ, ನೆರೆಯ ಗೋವಾ ರಾಜ್ಯಕ್ಕೂ ಸಹ ರವಾನೆಯಾಗುತ್ತದೆ.

ರಾಜಕೀಯವಾಗಿ ಸನ್ಮಾನ್ಯ ಹೆಚ್.ಡಿ. ದೇವೇಗೌಡರನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ನೀಡುವಲ್ಲಿ ಯಶಸ್ವಿಯಾಗಿದೆ. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಹಾಸನ್ ರಾಮ್‌ರಾವ್, ಹೆಚ್.ಎ. ಲಕ್ಕಪ್ಪಗೌಡ, ನರಸಿಂಹರಾಯ, ಎಸ್.ಎಲ್. ಭೈರಪ್ಪ, ಭಾನು ಮುಸ್ತಾಕ್, ಎಸ್.ಕೆ.ಕರೀಂಖಾನ್, ಅ.ನ.ಕೃ., ಕಿ.ರಂ. ನಾಗರಾಜು, ಡಾ|| ವಿಜಯದಬ್ಬೆ, ಮುಂತಾದ ಸಾಹಿತಿಗಳನ್ನು ಕೊಟ್ಟ ಜಿಲ್ಲೆ, ಹಾಸನ ವಾಗಿದೆ. ಕ್ರೀಡೆ, ಜಾನಪದ, ಕೋಲಾಟ, ವೀರಗಾಸೆ, ಬಯಲು ನಾಟಕಗಳನ್ನು ಉಳಿಸಿ ಬೆಳೆಸಿಕೊಂಡು ಬಂದು ಅಪಾರ ಕಲಾವಿದರಿಗೆ ತಾಣವಾಗಿದೆ. ಹಾಸನ ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ೨೦೦೧ರ ಜನಗಣತಿಯ ಪ್ರಕಾರ ೬೮.೭೫% ಆಗಿದೆ.

ಒಟ್ಟಾರೆ ಭೌಗೋಳಿಕವಾಗಿ ಅತ್ಯಂತ ಸುರಕ್ಷಿತ ಸ್ಥಳದಲ್ಲಿರುವ ಹಾಸನವು ಕೃಷಿ ಪ್ರಧಾನವಾಗಿದ್ದು, ಕೈಗಾರಿಕೆ, ಗುಡಿ ಕೈಗಾರಿಕೆ, ವಾಣಿಜ್ಯ ಕ್ಷೇತ್ರಗಳಲ್ಲಿಯೂ ತೀವ್ರತರವಾಗಿ ಬೆಳೆಯುತ್ತಿದ್ದು, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕಾಗಿ ಸಾಕಷ್ಟು ಪರಿಣಾಮಕಾರಿಯಾದ ಯೋಜನೆಗಳನ್ನು ಸರ್ವ ಶಿಕ್ಷಣ ಅಭಿಯಾನದಡಿ ಯಶಸ್ವಿಯನ್ನು ಕಂಡ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿಹಾಸನ ಸಾಲಗಾಮೆ ಮಾರ್ಗದಲ್ಲಿ ಆಕಾಶವಾಣಿ ಕೇಂದ್ರವು ಇರುತ್ತದೆ.