ಅಭಿನಯ

ಶೃಂಗಾರ ಹಾಸ್ಯ ಕರುಣಾ ರೌದ್ರ ವೀರ ಭಯಾನಕ /
ಬೀಭತ್ಸಾದ್ಭುತ ಸಂಜ್ಞಾ ಚೇತ್ಯಷ್ಟೌ ನಾಟ್ಯೇ ರಸಾಃ ಸ್ಮ್ರತಾಃ //
(ನಾಟ್ಯ ಶಾಸ್ತ್ರ ೬ – ೧೫)

ಶೃಂಗಾರ, ಹಾಸ್ಯ, ಕರುಣಾ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತರಸಗಳನ್ನು ಕಲಾವಿದರು ಕರಗತ ಮಾಡಿಕೊಂಡಿರಬೇಕು. ಈ ಎಲ್ಲ ರಸಗಳನ್ನು ಅಳವಡಿಸಿಕೊಂಡು ಅಭಿನಯಿಸುವವರು ಮಾತ್ರ ಅಭಿಜಾತ ಕಲಾವಿದರಾಗಲು ಸಾಧ್ಯ. ಕಂಪನಿ ನಾಟಕಗಳಲ್ಲಿ ಸೇರ್ಪಡೆಯಾಗಬೇಕಾದರೆ ಕಲಾವಿದರಿಗೆ ದೈಹಿಕ ಸಂಪತ್ತು, ಕಂಚಿನ ಕಂಠ, ಸಂಗೀತದ ಪ್ರಜ್ಞೆ ಅಭಿನಯದ ಆಳವಾದ ಅನುಭವವಿರಬೇಕಾಗುತ್ತಿತ್ತು. ಅದನ್ನೆಲ್ಲವನ್ನು ಸಂಪಾದಿಸಿಕೊಂಡಿರುವ ಬೇವೂರ ಬಾದಶಹರು ವೃತ್ತಿ ರಂಗಭೂಮಿಗೆ ದೊಡ್ಡನಿಧಿಯೇ ಸಿಕ್ಕಂತಾಯಿತು.

ಬೇವೂರ ಬಾದಶಹರು ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರ ಆಬಿನಯಿಸುವದರೊಂದಿಗೆ ಜನಮಾನಸದ ಹೃದಯದಲ್ಲಿ ಅವರ ಅಭಿನಯ ಅಚ್ಚೋತ್ತಿದಂತಾಯಿತು. ಖ್ಯಾತ ಗಾಯಕ ಬಸವಪ್ಪ ಶಾಸ್ತ್ರೀಗಳ ಕಂಪನಿ ವಿಶ್ವಗುಣಾದರ್ಶ ಮಂಡಳಿಯಲ್ಲಿ ಅಂದು ಘಟನೆ ಜರುಗಿತು.

“ನಟನೆ – ಸಂಗೀತ ಎರಡರಲ್ಲೂ ಇವರಿಗೆ ಪ್ರತಿಸ್ಪರ್ಧಿಯಾಗಿ ನಿಂತವರು ಬಸವರಾಜ ಮನ್ಸೂತ ಇಬ್ಬರೂ ರಂಗಭೂಮಿಯ ಮ್ಯಾಲ ಧೀರೋದಾತ್ತ ನಾಯಕ ಪಾತ್ರಕ್ಕೆ ಹೇಳಿ ಮಾಡಿಸಿದ ಮೈಕಟ್ಟು, ಪ್ರತಿಭೆ, ಕಲೆ ಉಳ್ಳವರು, ಇಂಥಾ ನಟ ಪ್ರೇಕ್ಷಕರ ಮನಸ್ಸನ್ನು ಎಷ್ಟೊಂದು ಗೆದ್ದಿದ್ದರು ಅಂದ್ರ ಒಮ್ಮೆ ವಾಮನ್‌ರಾವ್ ಮಾಸ್ತರರ ಕಂಪನಿಯಲ್ಲಿದ್ದಾಗ ಅಭಿಮನ್ಯು ನಾಟಕ ಆಡ್ತಿದ್ರು. ಅರ್ಜುನ ಪಾತ್ರವನ್ನು ಬಾದಶಹ ಮಾಸ್ತರರು ಮಾಡ್ತಿದ್ರು. ಅವರನ್ನ ಬಿಡಿಸಿ ಬ್ಯಾರೆಯವರಿಂದ ಮಾಡಿಸಿದ್ರು. ಆಗ ಪ್ರೇಕ್ಷಕರು ಅರ್ಜುನನಾಗಿ ಬಾದಷಾ ಮಾಸ್ತರರೆ ಬೇಕೆಂದು ಗಲಾಟೆ ಮಾಡಿ ನಾಟಕ ನಿಲ್ಲಸಿದ್ರು. ಆಗ ಮಾಲೀಕರು ಅರ್ಧ ತಾಸು ನಾಟಕ ನಿಲ್ಲಿಸಿ ಬಾದಶಹ ಮಾಸ್ತರರಿಗೆ ಬಣ್ಣ ಹಚ್ಚಲಿಕ್ಕೆ ಹೇಳಿ ಅರ್ಜುನ ವೇಷದಲ್ಲಿ ರಂಗಭೂಮಿಗೆ ತಂದ್ರು. ನಾಟಕ ಸುಗಮವಾಗಿ ನಡೀತು”.

[1]

ವಿಶ್ವಗುಣಾದರ್ಶ ನಾಟಕ ಕಂಪನಿಗಳಲ್ಲಿ ಪ್ರಮುಖರಾಗಿ ಮಹಾನ್ ಕಲಾವಿದರ ಸಮೂಹವೇ ತುಂಬಿಕೊಂಡಿತ್ತು. ಅಂಥವರಲ್ಲಿ ಪ್ರಮುಖರಾಗಿ ಬಸವಪ್ಪಶಾಸ್ತ್ರೀಗಳನ್ನೊಳಗೊಂಡು ಬಸವರಾಜ ಮನ್ಸೂರ, ಗುರುರಾವ್, ದೇಶಪಾಂಡೆ, ಬೇವೂರ ಬಾದಶಹ, ಮಲ್ಲಿಕಾರ್ಜುನ ಮನ್ಸೂರ, ಗಾನರತ್ನ, ಗಂಗೂಬಾಯಿ, ಗುಳೇದಗುಡ್ಡ, ಎಲ್ಲೂಬಾಯಿ ಪ್ರಮುಖರು. ಈ ಕಂಪನಿಗಳಲ್ಲಿ ಒಂದೊಂದು ಪ್ರವೇಶಕ್ಕೆ ತಕ್ಕಂತೆ ಸಾಹಿತ್ಯ ಮತ್ತು ಸಂಗೀತಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬರುತ್ತದೆ. ಬೇವೂರ ಬಾದಶಹರಂಥವರು, ಗಾನರತ್ನ ಗಂಗೂಬಾಯಿ, ಬಸವರಾಜ ಮನ್ಸೂರರಂಥ ಕಲಾವಿದರು ರಂಗಭೂಮಿಯನ್ನು ಪ್ರವೇಶಿಸಿದ ತಕ್ಷಣ ಕೇ ಕೇ ಚಪ್ಪಾಳೆ ಕರತಲಾಮಲಕಗಳು ಪ್ರತಿ ಧ್ವನಿಸುವುದನ್ನು ರಂಗಭೂಮಿಯ ಇತಿಹಾಸ ಸಾಬೀತು ಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ನಾಟಕದ ರಂಗ ಪ್ರಯೋಗವೋ ಅಥವಾ ಸಂಗೀತ ಕಛೇರಿಯೋ ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕವರ್ಗ ತಲೆಕೆಡಿಸಿಕೊಳ್ಳದೇ ಮೈಮರೆತು ಮಗ್ನರಾಗಿಬಿಡುತ್ತಿದ್ದರು.

“ಒಮ್ಮೆ ಕಿತ್ತೂರ ಚೆನ್ನಮ್ಮ ನಾಟಕ ಆಡಲು ಸರ್ವ ತಯಾರಿ ನಡೆದಿತ್ತು. ರಾಜನ ಪಾತ್ರಕ್ಕೆ ಗರೂಡ ಸದಾಶಿವರಾಯರು ಎಲಿವಾಳ ಸಿದ್ದಯ್ಯ ಇತ್ಯಾದಿ ಹೆಸರುಗಳ ಜೊತೆಗೆ ಬೇವೂರ ಬಾದಶಹರ ಹೆಸರನ್ನು ಸೂಚಿಸಿದರು. ಅಲ್ಲೆಲ್ಲ ಬಾದಶಹನ ಹೆಸರು ಕೇಳಿ ಬಂದಿರುವುದರಿಂದ ಆತನನ್ನು ಕರೆ ಕಳಿಸಿದರು. ಶಿವಮೂರ್ತಿಸ್ವಾಮಿಗಳು ಕರೆಸಿದರೆ ಧನ್ಯನಾದೆನೆಂದು ಅದೆಷ್ಟೋ ಕಲಾವಿದರು ತುದಿಗಾಲಲ್ಲೆ ನಿಂತಿರುವ ಕಾಲವದಾಗಿತ್ತು. ಕರೆಗೆ ಓಡೋಡಿ ಬಂದ ಬಾದಶಹ ರಾಣಿ ಪಾತ್ರಕ್ಕೆ ಯಾರನ್ನು ನೇಮಿಸಿದ್ದಿರಿ ಅವರೊಟ್ಟಿಗೆ ರಂಗ ತಾಲೀಮನ್ನು ಮಾಡಬೇಕು ತೃಪ್ತಿಯಾದರೆ ರಂಗ ಸಜ್ಜಿಕೆಯನ್ನು ಏರುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದು ಹೇಳಿದರಂತೆ, ರಾಣಿ ಪಾತ್ರಕ್ಕೆ ೨೧ ವರ್ಷದ ಏಣಗಿ ಬಾಳಪ್ಪ ನಿಯೋಜಿತಗೊಂಡಿದ್ದರು. ತಾಲೀಮು ಪ್ರಾರಂಭವಾಯಿತು. ಸ್ತ್ರೀ ವೇಷದ ಏಣಗಿ ಬಾಳಪ್ಪ ಆಗಿನ್ನೂ ಅನನುಭವಿ. ಅಂಜುತ್ತ ಅಳುಕುತ್ತ ಅಭಿನಯ ಮಾಡಿದರು. ಇರಲಿ ಸರಿ ಪಾತ್ರ ಹಾಕುತ್ತೇನೆ ಎಂದು ಒಪ್ಪಿ ರಾತ್ರಿ ೧೦ – ೧೨ಕ್ಕೆ ರಂಗ ಸಜ್ಜಿಕೆಯನ್ನು ಏರಿದರು. ಅಂದಿನಿಂದ ಪ್ರಾರಂಭವಾಗಿ ಏಣಗಿ ಬಾಳಪ್ಪನವರ ಒಡನಾಡವು ಕೊನೆಯವರೆಗೂ ಉಳಿಯಿತು. ರಾಜನ ಪಾತ್ರದಲ್ಲಿ ಬಾದಶಹ, ರಾಣಿ ಪಾತ್ರದಲ್ಲಿ ಏಣಗಿ, ಅರಮನೆ ಸೀನು. ಇನ್ನೇನು ರಾಜನ ಸಂತೋಷಕ್ಕಾಗಿ ಒಂದಿಷ್ಟು ಸಂಗೀತ ಆಲಾಪನೆ ನಡೆಯಿತು. ರಾಣಿ (ಏಣಗಿ) ಆಲಾಪನೆಯನ್ನು ಪ್ರಾರಂಭಿಸುತ್ತಾಳೆ. ತಕ್ಷಣ ಗಂಭೀರ ಭಂಗಿಯಲ್ಲಿದ್ದ ಮಹಾರಾಜರು (ಬಾದಶಹ) ಎದ್ದು ಒಳಗಡೆ ಹೋಗುತ್ತಾರೆ, ಕವಾಟಿನ ಪಕ್ಕದಲ್ಲಿ ನಿಂತು ತಾವೇ ಆಲಾಪನೆಯನ್ನು ಪ್ರಾರಂಭಿಸುತ್ತಾರೆ. ಎಂದೂ ಕೇಳದ ಕಂಡರಿಯದ ಪ್ರೇಕ್ಷಕರಲ್ಲಿ ಅವಿಸ್ಮರಣೀಯ ಆನಂದವನ್ನುಂಟು ಮಾಡಿತು. ಹಾಡು ಮುಗಿದ ತಕ್ಷಣ ಪ್ರೇಕ್ಷಕ ಮೂಲದಿಂದ ಒಬ್ಬರು ಎದ್ದು ಕವಾಟಿಗೆ ಬಂದರು. ಗೌರವಾದರಾಭಿಮಾನದಿಂದ ನಿಮ್ಮ ಹೆಸರೇನು ಯಾವ ಊರಿನವರು ಎಂದು ಕೇಳುತ್ತ ಸಂಗೀತದ ತಾದತ್ಮ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಹಾಗೆ ಬಂದವರು ಸಾಮಾನ್ಯ ವ್ಯಕ್ತಿಯಲ್ಲ, ಅವರು ಏಳೂರ ಗೌಡ. ಸಂಗೀತದ ಬಗ್ಗೆ ಸಾಕಷ್ಟು ಅರಿತುಕೊಂಡವರು, ಸಂಗೀತ ಆಸ್ವಾದನೆಗಾಗಿಯೇ ತಪ್ಪದೇ ಹೊಸ ನಾಟಕಗಳು ಬಂದಾಗೊಮ್ಮೆ ಹಾಜರಾಗುತ್ತಿದ್ದರು. ಶ್ರೀ/ರೂ ಬಹುಮಾನವಾಗಿ ಕೊಟ್ಟು ಒನ್ಸ್‌ಮೋರ್ ಹೇಳಿಸಿದರು. ಏಣಗಿಯವರ ಕಡೆಗೆ ದೃಷ್ಟಿ ಬೀರುತ್ತ ನೀನು ಇವರ ಶಿಷ್ಯತ್ವದಲ್ಲಿ ಸಂಗೀತ ಕಲಿತರೆ ನಿನಗೊಂದು ಭವಿಷ್ಯ ಇದೆ ಎಂದು ಹೇಳಿ ಹೋದರು. ಅಂದಿನಿಂದ ನಾನು ಬೇವೂರ ಬಾದಶಹ ಅವರನ್ನು ಗುರುಗಳೆಂದೇ ಭಾವಿಸಿದ್ದೇನೆ, ಸಂಘಟನೆ – ನಟನೆ, ಸಹನೆ, ಸಹಬಾಳ್ವೆ ಇತ್ಯಾದಿಗಳನ್ನು ಶಿವಮೂರ್ತಿ ಸ್ವಾಮಿಗಳಿಂದ ಕಲಿತಿದ್ದೇನೆ. ಸಂಗೀತ, ನಾಟಕ, ನಿರ್ದೇಶನಗಳನ್ನು ಬಾದಶಹರವರಿಂದ ಕಲಿತಿದ್ದೇನೆ ಎಂದು ಏಣಗಿ ಬಾಳಪ್ಪನವರೇ ಹೇಳುತ್ತಾರೆ. ಸಂಗೀತ, ನಿರ್ದೇಶನ, ನಟ, ನಿರ್ದೇಶಕರಾಗಿ ಆಗಲೇ ಸಾಕಷ್ಟು ಹೆಸರು ಮಾಡಿದ ಬಾದಶಹ ನನ್ನ ಗುರುವೆಂದು ಸ್ವೀಕರಿಸಿ ಅಭ್ಯಾಸ ಮುಂದುವರೆಸಿದರು ಮುಂದೆ ತಾವೇ ನಾಟಕ ಕಂಪನಿಯನ್ನು ಕಟ್ಟಿದಾಗ ಬಾದಶಹ ಅವರನ್ನು ಬರಮಾಡಿಕೊಂಡು ಅಪಾರ ಅನುಭವವನ್ನು ಹೊಂದಿದರು”.[2] ನಾಟ್ಯ ಸಂಘದಲ್ಲಿ ದೀರ್ಘವಾದ ಸೇವೆಯನ್ನು ಸಲ್ಲಿಸಿರುವುದು ಗಮನಾರ್ಹ ಸಂಗತಿ. ಈ ಕಂಪನಿಯಲ್ಲಿದ್ದಾಗ ಬೇವೂರ ಬಾದಶಹರು ಬಾಳಪ್ಪನವರನ್ನು ಪ್ರಬುದ್ಧ ಕಲಾವಿದರನ್ನಾಗಿ ನಿರ್ಮಾಣ ಮಾಡಿದ ಹೆಮ್ಮೆ ಕೀರ್ತಿ ಇದೆ.

ಬಾದಶಹರು ಪ್ರಸಿದ್ಧ ನಟರನ್ನೆಲ್ಲಾ ಬೇವೂರಿಗೆ ಕರೆಸಿ ನಾಟಕ ಏರ್ಪಡಿಸಿದರು. ಗರೂಢ ಸದಾಶಿವರಾಯರು ಏಣಗಿ ಬಾಳಪ್ಪ, ಪುತ್ತೂರಕರ ಹಂದಿಗನೂರ ಸಿದ್ರಾಮಪ್ಪ, ಹೂವಿನ ಹಡಗಲಿ ವೀರಭದ್ರಪ್ಪ, ಅದೃಶ್ಯಪ್ಪ, ಮಾನ್ವಿ ಲಾಟಿ ಗುಂಡಪ್ಪ, ತಾರಾಬಾಯಿ ಮೊದಲಾದ ಅತಿರಥ ಮಹಾನ್ ಕಲಾವಿದರು ಅಭಿನಯ ಸಂಗೀತದಿಂದ ಜನಮನಗಳಿಗೆ ನಾಟಕದ ಗುಂಗು ಹಿಡಿಸಿದರು.

ಬಾದಶಹರ ಮಗಳು ಅಭಿನಯದಲ್ಲೂ ಹಾಡಿನಲ್ಲೂ ಪ್ರಸಿದ್ಧಿ ಪೆಡೆದ ತಾರಾಬಾಯಿ ಸ್ವತಃ ಪಾತ್ರ ಮಾಡುವದರೊಂದಿಗೆ ಹಾಡಿ ರಂಜಿಸಿದಳು. ಅವಳ ಕಂಚಿನ ಕಂಠಶ್ರೀ ಪ್ರೇಕ್ಷಕರನ್ನು ನಾದಲೋಕದಲ್ಲಿ ತನ್ಮಯ ಮಾಡಿತು. ನಟಿ ತಾರಾಬಾಯಿ ನಾಟಕದ ಪ್ರಾರಂಭದಲ್ಲಿ “ಉದಯ ರವಿ ಪಸರಿದ…” ಅಂತ ಸುಶ್ರಾವ್ಯ ಗೀತೆಯನ್ನು ಹಾಡುತ್ತಿದ್ದಳು. ಆ ಮಧುರವಾದ ಹಾಡಿನ ಗುಂಗು ಇನ್ನೂ ನನ್ನ ಕಿವಿಯಲ್ಲಿ ಕೇಳಿಸುತ್ತಿದೆ ಎಂದು ಸಿ. ಎಂ. ಚನಗೊಂಡಿಯವರು ಅಭಿಪ್ರಾಯ ಪಡುತ್ತಾರೆ.

ಪಠಾಣಾ, ಪಾಶಾ, ಜಗಜ್ಯೋತಿ, ಬಸವೇಶ್ವರ, ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ, ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರ ಚೆನ್ನಮ್ಮ, ಅಕ್ಷಯಾಂಬರ ಹೀಗೆ ಪ್ರಸಿದ್ಧ ಕಲಾವಿದರಿಂದ ಬೇವೂರಿನಲ್ಲಿ ಆಡಿಸಿದ ನಾಟಕಗಳಾಗಿವೆ. ಭಕ್ತಿ ಪ್ರಧಾನ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳು ಪ್ರದರ್ಶನಗೊಂಡವು. ಆಗಿನ ಕಾಲದಲ್ಲಿ ಟಿಕೇಟು ಹಚ್ಚಿ ನಾಟಕ ಪ್ರಯೋಗಿಸಿದ್ದು ಸಾಹಸದ ಮಾತು. ಇದು ೫೦ – ೬೦ ವರ್ಷದ ಹಿಂದಿನ ಮಾತಾಗಿದೆ. ಅಂದು ಬಯಲು ಜಾಗೆ ಇಂದು ಆಸ್ಪತ್ರೆ ಮೈದಾಳಿದ ಆವರಣದಲ್ಲಿ ನಾಟಕ ನಡೆದವು. ಬಾದಶಹರು ಕೆಲವೊಮ್ಮೆ ನನ್ನ ಕಲೆಯ ಬೆಲೆ ತಮಗೆ ಗೊತ್ತಾಗದು ಎಂದು ನೊಂದುಕೊಂಡವರು.

ಸ್ವಾತಂತ್ರಯೋಧ ಪರಪ್ಪನವರು ಸಜ್ಜನ ಹಾಗೂ ಗ್ರಾಮದ ಹಿರಿಯರು ಕೂಡಿ ಬೇವೂರ ಬಾದಶಹರಿಗೆ ಸಂಗೀತ ಕಛೇರಿ ಮಾಡಲು ಕೇಳಿಕೊಂಡರು. ಬಲ್ಲವರ ಮುಂದೆ ಬೈಠಕ್ ಮಾಡಿದರ ಅದರ ಬೆಲೆಗೊತ್ತಾಗತದ ಆದರೆ ಸಂಗೀತದ ಗಂಧವೇ ಗೊತ್ತಿಲ್ಲದವರ ಮುಂದೆ ಹಾಡಿದರೆ ವ್ಯರ್ಥ ಎಂದರು. ಅಭಿಮಾನಿಗಳಿಗೆ ನಿರಾಶೆ ಮಾಡದೇ ಹನುಮಂತ ದೇವರ ಗುಡಿಯಲ್ಲಿ ಬಾದಶಹರು ಬೈಠಕ್ ನಡೆಸಿಕೊಟ್ಟರು ಎಂಬುದು ಜನಮನದ ನೆನಪಿನಲ್ಲಿ ಇನ್ನೂ ಉಳಿದಿದೆ.

ಬೇವೂರ ಬಾದಶಹರು ವೃತ್ತಿ ರಂಗಭೂಮಿಯಲ್ಲಿ ಎಲ್ಲಾ ನಾಟಕ ಕಂಪನಿಯ ಕಲಾವಿದರಿಗೆ ಗುರು ಸ್ಥಾನದಲ್ಲಿದ್ದರು. ಸುಮಾರು ೧೯೫೬ – ೫೮ರಲ್ಲಿ ನಾಟಕಗಳು ಪ್ರಯೋಗಗೊಂಡವು. ಈ ನಾಟಕಗಳಿಗೆಲ್ಲ ಸಂಗೀತ ಸೇವೆ ಮಾಡಿದ ಪ್ರಸಿದ್ಧ ಹಾರ್ಮೋನಿಯಂ ಪಟು ಪಟ್ಟಣ ಶೆಟ್ಟಿಯವರು ನಡೆಸುತ್ತಿದ್ದರು. ಅವರೊಬ್ಬ ಮಹಾನ್ ಕಲಾವಿದರಾಗಿದ್ದರು. ಹಾರ್ಮೋನಿಯಂ ಮೇಲೆ ಪೂರ್ತಿಯಾಗಿ ಬಟ್ಟೆ ಹೊಂದಿಸಿ ನುಡಿಸುವ ಕೌಶಲ್ಯ ಕಲೆಯಿತ್ತು. ಅಂಥ ಶ್ರೇಷ್ಠ ಸಂಗೀತಗಾರರಾಗಿದ್ದರು. ಹೀಗಾಗಿ ಪ್ರೇಕ್ಷಕರ ಆಸಕ್ತಿ – ನಾಟಕದ ಕಡೆಗೆ ವಾಲುತ್ತಿತ್ತು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಬೇವೂರ ಗ್ರಾಮದ ಕಲಾಭಿಮಾನಿ ಕನ್ನಡ ಶಾಲೆಯ ಶಿಕ್ಷಕರು ಕೂಡಿ ಪ್ರತಿವರ್ಷ ನಾಟಕವಾಡುವ ಹವ್ಯಾಸ ಬೆಳೆಸಿಕೊಂಡಿದ್ದರು. ನಾಟಕದ ಪ್ರೇರಣ ಬೇವೂರ ಬಾದಶಹ ಮಾಸ್ತರರಾಗಿದ್ದರು. ಕಲಾವಿದರಿಗೆ ಅಭಿನಯ, ಸಂಗೀತ, ರಂಗಭೂಮಿ ಬಗ್ಗೆ ವಿಶೇಷವಾದ ಒಲವು ಮೂಡಿಸಿದರು. ಬಾದಶಹರ ನಟನೆ, ಸಂಗೀತದ ಬಗ್ಗೆ ನಟರಲ್ಲಿ ಪ್ರೇಕ್ಷಕರಲ್ಲಿ ಎರಡು ಮಾತಿಲ್ಲ. ನಾಟಕದ ತಾಲೀಮು ನಡೆದಾಗ ಗುಳೇದಗುಡ್ಡದ ಕ್ರಾಂತಕವಿ – ನಾಟಕಕಾರ – ಎಚ್. ಆರ್. ಭಸ್ಮೆ ಸಹ ಆಗಾಗ ಬೇವೂರಿಗೆ ಬರುತ್ತಿದ್ದರು. ಶ್ರೀ ಹುಚ್ಚೇಶ್ವರ ಮಠದ ಮುಂಭಾಗದ ಬಯಲು ಜಾಗೆಯಲ್ಲಿ ನಾಟಕವಾಡುತ್ತಿದ್ದರು. ಕಮತಗಿ ಹನುಮಂತಪ್ಪ ಮಾಸ್ತರ ಪತ್ತಾರ ಬಾದಶಹರ ಶಿಷ್ಯರು. ನಾಟಕ ಹಾರ್ಮೋನಿಯಂ ಮಾಸ್ತರರಾಗಿ ಸಂಗೀತ ಸೇವೆ ಮಾಡಿದವರು.

ಬೇವೂರ ಬಾದಶಹರು ನಿರ್ದೀಷ್ಟವಾದ ಕಂಪನಿಯಲ್ಲಿ ನೆಲೆನಿಲ್ಲದೆ ಬೇರೆ ಬೇರೆ ಕಂಪನಿಗಳಿಗೆ ಸಂಗೀತ – ನಾಟಕಕಾರರಾಗಿ, ನಿರ್ದೇಶಕರಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡರು, ಮೇಲಾಗಿ ತಮ್ಮದೇ ಆದ ಸ್ಥಳೀಯ ಕಲಾವಿದರನ್ನು ಕಲೆ ಹಾಕಿಕೊಂಡು ಕಡ್ಲಿಮಟ್ಟಿ ಕಾಶೀಬಾಯಿ, ಪಠಾಣ, ಪಾಶಾ, ಜಗಜ್ಯೋತಿ ಬಸವೇಶ್ವರರಂಥ ಚಾರಿತ್ರಿಕ ಹಿನ್ನಲೆಯುಳ್ಳ ನಾಟಕಗಳನ್ನು ಪ್ರಯೋಗಿಸಿ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಬೇವೂರ ಬಾದಶಹರನ್ನು ಗ್ರಾಮೀಣ ಭಾಗದ ಜನತೆ ಮಾಸ್ತರ ಎಂತಲೇ ಕರೆಯುತ್ತಿದ್ದರು. ಹಾರ್ಮೋನಿಯಂ ವಾದಕರಿಗೆ ಮಾಸ್ತರ ಎಂತಲೂ ಕರೆಯುವ ವಾಡಿಕೆ. ಸ್ವತಃ ಗ್ರಾಮೀಣ ಕಲಾವಿದರಿಗೆ ನಾಟಕಗಳನ್ನು ನಿರ್ದೇಶಿಸಿ ಪ್ರಯೋಗಿಸುವ ಹವ್ಯಾಸವು ಇವರಲ್ಲಿ ಇತ್ತು. ಹೀಗೆ ಬಹುಮುಖ ಪ್ರತಿಭೆಯುಳ್ಳ ಬೇವೂರ ಬಾದಶಹ ವೃತ್ತಿ – ರಂಗಭೂಮಿಯಲ್ಲಿ ಒಂದು ಅನರ್ಘ್ಯ ರತ್ನವಾಗಿಯೇ ಮೆರೆದದ್ದು ಒಂದು ಇತಿಹಾಸ.

ಪ್ರಶಸ್ತಿಪುರಸ್ಕಾರಗಳು

ಬೇವೂರ ಬಾದಶಹರು ಎಂದೂ ಪ್ರಶಸ್ತಿ ಪುರಸ್ಕಾರಗಳಿಗೆ ಬೆನ್ನು ಬಿದ್ದವರಲ್ಲ. ಅದರಂತೆ ಪ್ರಚಾರ ಪ್ರಿಯರು ಅಲ್ಲ. ಬಾದಶಹರ ಕಂಠ ಸಿರಿಯನ್ನು ಕೇಳಿದ – ಆಲಿಸಿದ ಕಿವಿಗಳು ಅಭಿನಯವನ್ನು ಕಂಡಿರುವ ಕಣ್ಣುಗಳು ಕೇಕೇ ಹಾಕಿ ಚಪ್ಪಾಳೆ ತಟ್ಟಿದ ಕೈಗಳು ಅವರನ್ನು ಹೃದಯ ತುಂಬಿ ಹಾರೈಸಿವೆ. ಇವು ಜನಸಾಮಾನ್ಯರು ಕಲಾ ಪ್ರೇಕ್ಷಕರು ನೀಡಿದ ಬಿರುದು ಸನ್ಮಾನಗಳು.

ವಿವಿಧ ಕಂಪನಿಗಳಲ್ಲಿ ತಮ್ಮನ್ನೇ ತಾವು ಗುರ್ತಿಸಿಕೊಂಡಿದ್ದ ಬೇವೂರ ಬಾದಶಹರ ಸಮಗ್ರ ಸಾಧನೆಗಳನ್ನು ಗಮನಿಸಿ ಕರ್ನಾಟಕ ನಾಟಕ ಅಕಾಡೆಮಿಯವರು ೧೯೬೭ – ೭೦ರಲ್ಲಿ ಬೇವೂರ ಬಾದಶಹ ಸಾಹೇಬ ಉರುಫ್ ಸರ‍್ವರ್ ಅಲಿಖಾನ್ ಅವರಿಗೆ ಪ್ರಶಸ್ತಿ ಪತ್ರ ಫಲಕವನ್ನು ನೀಡಿ ಗೌರವಿಸಿ ಸನ್ಮಾನಿಸಿದರು.

“ಬೇವೂರ ಬಾದಶಹರ ಸನ್ಮಾನದ ಪತ್ರ ಫಲಕಗಳು ಬಾಗಲಕೋಟೆಯ ನಟರಾಜ ಸಂಗೀತ ಪಾಠಶಾಲೆಯ ಮುಖ್ಯಸ್ಥ ಆರ್. ಎಚ್. ಮೋರೆ ಅವರ ಮನೆಯಲ್ಲಿಯೇ ಇದ್ದವು. ಮೋರೆಯವರು ಹಲವಾರು ಕಾರ್ಯಕ್ರಮಗಳಲ್ಲಿ ಬಾದಶಹರೊಂದಿಗೆ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ ಅವರ ಪ್ರೀತಿಯ ಬಾಂಧವ್ಯ ಬೆಸೆದುಕೊಂಡಿತ್ತು. ಬಾದಶಹರು ಮೋರೆ ಅವರ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಈ ಒಂದು ಸಂಬಂಧದಿಂದಾಗಿ ಪ್ರಶಸ್ತಿ ಪತ್ರ ಫಲಕಗಳು ಅವರ ಹತ್ತಿರ ಅನೇಕ ವರ್ಷಕಾಲ ಉಳಿದುಕೊಂಡಿದ್ದು, ನಂತರ ಮನೆಯನ್ನು ನವೀಕರಿಸುವ ಸಂದರ್ಭದಲ್ಲಿ ಅವು ಹಾಳಾಗಿ ಹೋದವು ಎಂದು ಮೋರೆಯವರು ಅಭಿಪ್ರಾಯಪಟ್ಟವು”.[3]

ಬಾದಶಹರು ಅನೇಕ ತಾಂತ್ರಿಕ ತೊಂದರೆಗಳ ನಡುವೆಯೂ ಎಂದೂ ರಂಗಭೂಮಿಯನ್ನು ಕೈ ಬಿಡಲಿಲ್ಲ. ಬಾದಶಹರ ಬದುಕೇ ರಂಗಭೂಮಿಯಾಯಿತು. ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಅಭಿಪ್ರಾಯದಂತೆ “ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ” ಈ ನುಡಿ ಅಕ್ಷರಶಃ ಬಾದಶಹರಿಗೆ ಅನ್ವಯಿಸುತ್ತದೆ.

ಸ್ವಾತಂತ್ರಯೋಧ ಪರಪ್ಪನವರು ಸಜ್ಜನ ಹಾಗೂ ಗ್ರಾಮದ ಹಿರಿಯರು ಕೂಡಿ ಬೇವೂರ ಬಾದಶಹರಿಗೆ ಸಂಗೀತ ಕಛೇರಿ ಮಾಡಲು ಕೇಳಿಕೊಂಡರು. ಬಲ್ಲವರ ಮುಂದೆ ಬೈಠಕ್ ಮಾಡಿದರ ಅದರ ಬೆಲೆ ಗೊತ್ತಾಗುತ್ತದೆ, ಆದರೆ ಸಂಗೀತದ ಗಂಧವೇ ಗೊತ್ತಿಲ್ಲದವರ ಮುಂದೆ ಹಾಡದರ ವ್ಯರ್ಥ ಎಂದರು. ಅಭಿಮಾನಿಗಳಿಗೆ ನಿರಾಶೆ ಮಾಡದೇ ಹನುಮಂತ ದೇವರ ಗುಡಿಯಲ್ಲಿ ಬಾದಶಹರು ಬೈಠಕ್ ನಡೆಸಿಕೊಟ್ಟರು ಎಂದು ಜನಮನದ ನೆನಪಿನಲ್ಲಿ ಇನ್ನೂ ಉಳಿದಿದೆ.

ಬೇವೂರ ಬಾದಶಹರು ವೃತ್ತಿ ರಂಗಭೂಮಿಯಲ್ಲಿ ಎಲ್ಲಾ ನಾಟಕ ಕಂಪನಿಯ ಕಲಾವಿದರಿಗೆ ಗುರು ಸ್ಥಾನದಲ್ಲದ್ದರು. ಸುಮಾರು ೧೯೫೬ – ೫೮ರಲ್ಲಿ ನಾಟಕಗಳು ಪ್ರಯೋಗ ಗೊಂಡವು. ಈ ನಾಟಕಗಳು ಪ್ರಯೋಗಗೊಂಡವು. ಈ ನಾಟಕಗಳಿಗೆಲ್ಲ ಸಂಗೀತ ಸೇವೆ ಮಾಡಿದ ಪ್ರಸಿದ್ಧ ಹಾರಮೋನಿಯಂ ಪಟು ಪಟ್ಟಣ ಶೆಟ್ಟಿಯವರು ನಡೆಸುತ್ತಿದ್ದರು. ಅವರೊಬ್ಬ ಮಹಾನ್ ಕಲಾವಿದರಾಗಿದ್ದರು. ಹಾರ್ಮೋನಿಯಂ ಮೇಲೆ ಪೂರ್ತಿಯಾಗಿ ಬಟ್ಟೆ ಹೊಂದಿಸಿ ನುಡಿಸುವ ಕೌಶಲ್ಯ ಕಲೆಯಿತ್ತು. ಅಂಥ ಶ್ರೇಷ್ಠ ಸಂಗೀತಗಾರರಾಗಿದ್ದರು. ಹೀಗಾಗಿ ಪ್ರೇಕ್ಷಕರ ಆಸಕ್ತಿ – ನಾಟಕದ ಕಡೆಗೆ ವಾಲುತ್ತಿತ್ತು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಬೇವೂರ ಗ್ರಾಮದ ಕಲಾಭಿಮಾನಿ ಕನ್ನಡ ಶಾಲೆಯ ಶಿಕ್ಷಕರು ಕೂಡಿ ಪ್ರತಿವರ್ಷ ನಾಟಕವಾಡುವ ಹವ್ಯಾಸ ಬೆಳೆಸಿಕೊಂಡಿದ್ದರು. ನಾಟಕದ ಪ್ರೇರಣ ಬೇವೂರ ಬಾದಶಹ ಮಾಸ್ತರರಾಗಿದ್ದರು. ಕಲಾವಿದರಿಗೆ ಅಭಿನಯ, ಸಂಗೀತ, ರಂಗಭೂಮಿ ಬಗ್ಗೆ ವಿಶೇಷವಾದ ಒಲವು ಮೂಡಿಸಿದರು. ಬಾದಶಹರ ನಟನೆ, ಸಂಗೀತದ ಬಗ್ಗೆ ನಡರಲ್ಲಿ ಪ್ರೇಕ್ಷಕರಲ್ಲಿ ಎರಡು ಮಾತಿಲ್ಲ. ನಾಟಕದ ತಾಲೀಮು ನಡೆದಾಗ ಗುಳೇದಗುಡ್ಡದ ಕ್ರಾಂತಕವಿ – ನಾಟಕಕಾರ – ಎಚ್. ಆರ್. ಭಸ್ಮೆ ಸಹ ಆಗಾಗ ಬೇವೂರಿಗೆ ಬರುತ್ತಿದ್ದರು. ಶ್ರೀ ಹುಚ್ಚೇಶ್ವರ ಮಠದ ಮುಂಭಾಗದ ಬಯಲು ಜಾಗೆಯಲ್ಲಿ ನಾಟಕವಾಡುತ್ತಿದ್ದರು. ಕಮತಗಿ ಹನುಮಂತಪ್ಪ ಮಾಸ್ತರ ಪತ್ತಾರ ಬಾದಶಹರ ಶಿಷ್ಯರು. ನಾಟಕ ಹಾರ್ಮೋನಿಯಂ ಮಾಸ್ತರರಾಗಿ ಸಂಗೀತ ಸೇವೆ ಮಾಡಿದವರು.

ಬೇವೂರ ಬಾದಶಹರು ನಿರ್ದೀಷ್ಟವಾದ ಕಂಪನಿಯಲ್ಲಿ ನೆಲೆನಿಲ್ಲದಎ ಬೇರೆ ಬೇರೆ ಕಂಪನಿಗಳಿಗೆ ಸಂಗೀತ – ನಾಟಕಕಾರರಾಗಿ, ನಿರ್ದೇಶಕರಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡರು, ಮೇಲಾಗಿ ತಮ್ಮದೇ ಆದ ಸ್ಥಳೀಯ ಕಲಾವಿದರನ್ನುಕಲೆ ಹಾಕಿಕೊಂಡು ಕಡ್ಲಿಮಟ್ಟಿ ಕಾಶೀಬಾಯಿ, ಪಠಾಣ ಪಾಶಾ ಜಗಜ್ಯೋತಿ ಬಸವೇಶ್ವರರಂಥ ಚಾರಿತ್ರಿಕ ಹಿನ್ನಲೆಯುಳ್ಳ ನಾಟಕಗಳನ್ನು ಪ್ರಯೋಗಿಸಿ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಬೇವೂರ ಬಾದಶಹರನ್ನು ಗ್ರಾಮೀಣ ಭಾಗದ ಜನತೆ ಮಾಸ್ತರ ಎಂತಲೇ ಕರೆಯುತ್ತಿದ್ದರು. ಹಾರ್ಮೋನಿಯಂ ವಾದಕರಿಗೆ ಮಾಸ್ತರ ಎಂತಲೂ ಕರೆಯುವ ವಾಡಿಕೆ ಸ್ವತಃ ಗ್ರಾಮೀಣ ಕಲಾವಿದರಿಗೆ ನಾಕಗಳನ್ನು ನಿರ್ದೇಶಿಸಿ ಪ್ರಯೋಗಿಸುವ ಹವ್ಯಾಸವು ಇವರಲ್ಲಿ ಇತ್ತು. ಹೀಗೆ ಬಹುಮುಖ ಪ್ರತಿಭೆಯುಳ್ಳ ಬೇವೂರ ಬಾದಶಹ ವೃತ್ತಿ – ರಂಗಭೂಮಿಯಲ್ಲಿ ಒಂದು ಅನರ್ಘ್ಯ ರತ್ನವಾಗಿಯೇ ಮೆರೆದದ್ದು ಒಂದು ಇತಿಹಾಸ.

ಅನೇಕರು ಕಂಡಂತೆ ಬೇವೂರ ಬಾದಶಹರು ವೃತ್ತಿ ರಂಗಭೂಮಿಯಲ್ಲಿ ಎಲ್ಲಾ ನಾಟಕ ಕಂಪನಿಯ ಕಲಾವಿದರಿಗೆ ಗುರು ಸ್ಥಾನದಲ್ಲದ್ದರು. ಸುಮಾರು ೧೯೫೬ – ೫೮ರಲ್ಲಿ ನಾಟಕಗಳು ಪ್ರಯೋಗ ಗೊಂಡವು. ಈ ನಾಟಕಗಳು ಪ್ರಯೋಗಗೊಂಡವು. ಈ ನಾಟಕಗಳಿಗೆಲ್ಲ ಸಂಗೀತ ಸೇವೆ ಮಾಡಿದ ಪ್ರಸಿದ್ಧ ಹಾರಮೋನಿಯಂ ಪಟು ಪಟ್ಟಣ ಶೆಟ್ಟಿಯವರು ನಡೆಸುತ್ತಿದ್ದರು. ಅವರೊಬ್ಬ ಮಹಾನ್ ಕಲಾವಿದರಾಗಿದ್ದರು. ಹಾರ್ಮೋನಿಯಂ ಮೇಲೆ ಪೂರ್ತಿಯಾಗಿ ಬಟ್ಟೆ ಹೊಂದಿಸಿ ನುಡಿಸುವ ಕೌಶಲ್ಯ ಕಲೆಯಿತ್ತು. ಅಂಥ ಶ್ರೇಷ್ಠ ಸಂಗೀತಗಾರರಾಗಿದ್ದರು. ಹೀಗಾಗಿ ಪ್ರೇಕ್ಷಕರ ಆಸಕ್ತಿ – ನಾಟಕದ ಕಡೆಗೆ ವಾಲುತ್ತಿತ್ತು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಬೇವೂರ ಗ್ರಾಮದ ಕಲಾಭಿಮಾನಿ ಕನ್ನಡ ಶಾಲೆಯ ಶಿಕ್ಷಕರು ಕೂಡಿ ಪ್ರತಿವರ್ಷ ನಾಟಕವಾಡುವ ಹವ್ಯಾಸ ಬೆಳೆಸಿಕೊಂಡಿದ್ದರು. ನಾಟಕದ ಪ್ರೇರಣ ಬೇವೂರ ಬಾದಶಹ ಮಾಸ್ತರರಾಗಿದ್ದರು. ಕಲಾವಿದರಿಗೆ ಅಭಿನಯ, ಸಂಗೀತ, ರಂಗಭೂಮಿ ಬಗ್ಗೆ ವಿಶೇಷವಾದ ಒಲವು ಮೂಡಿಸಿದರು. ಬಾದಶಹರ ನಟನೆ, ಸಂಗೀತದ ಬಗ್ಗೆ ನಡರಲ್ಲಿ ಪ್ರೇಕ್ಷಕರಲ್ಲಿ ಎರಡು ಮಾತಿಲ್ಲ. ನಾಟಕದ ತಾಲೀಮು ನಡೆದಾಗ ಗುಳೇದಗುಡ್ಡದ ಕ್ರಾಂತಕವಿ – ನಾಟಕಕಾರ – ಎಚ್. ಆರ್. ಭಸ್ಮೆ ಸಹ ಆಗಾಗ ಬೇವೂರಿಗೆ ಬರುತ್ತಿದ್ದರು. ಶ್ರೀ ಹುಚ್ಚೇಶ್ವರ ಮಠದ ಮುಂಭಾಗದ ಬಯಲು ಜಾಗೆಯಲ್ಲಿ ನಾಟಕವಾಡುತ್ತಿದ್ದರು. ಕಮತಗಿ ಹನುಮಂತಪ್ಪ ಮಾಸ್ತರ ಪತ್ತಾರ ಬಾದಶಹರ ಶಿಷ್ಯರು. ನಾಟಕ ಹಾರ್ಮೋನಿಯಂ ಮಾಸ್ತರರಾಗಿ ಸಂಗೀತ ಸೇವೆ ಮಾಡಿದವರು.

ಬೇವೂರ ಬಾದಶಹರು ನಿರ್ದೀಷ್ಟವಾದ ಕಂಪನಿಯಲ್ಲಿ ನೆಲೆನಿಲ್ಲದಎ ಬೇರೆ ಬೇರೆ ಕಂಪನಿಗಳಿಗೆ ಸಂಗೀತ – ನಾಟಕಕಾರರಾಗಿ, ನಿರ್ದೇಶಕರಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡರು, ಮೇಲಾಗಿ ತಮ್ಮದೇ ಆದ ಸ್ಥಳೀಯ ಕಲಾವಿದರನ್ನುಕಲೆ ಹಾಕಿಕೊಂಡು ಕಡ್ಲಿಮಟ್ಟಿ ಕಾಶೀಬಾಯಿ, ಪಠಾಣ ಪಾಶಾ ಜಗಜ್ಯೋತಿ ಬಸವೇಶ್ವರರಂಥ ಚಾರಿತ್ರಿಕ ಹಿನ್ನಲೆಯುಳ್ಳ ನಾಟಕಗಳನ್ನು ಪ್ರಯೋಗಿಸಿ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಬೇವೂರ ಬಾದಶಹರನ್ನು ಗ್ರಾಮೀಣ ಭಾಗದ ಜನತೆ ಮಾಸ್ತರ ಎಂತಲೇ ಕರೆಯುತ್ತಿದ್ದರು. ಹಾರ್ಮೋನಿಯಂ ವಾದಕರಿಗೆ ಮಾಸ್ತರ ಎಂತಲೂ ಕರೆಯುವ ವಾಡಿಕೆ ಸ್ವತಃ ಗ್ರಾಮೀಣ ಕಲಾವಿದರಿಗೆ ನಾಕಗಳನ್ನು ನಿರ್ದೇಶಿಸಿ ಪ್ರಯೋಗಿಸುವ ಹವ್ಯಾಸವು ಇವರಲ್ಲಿ ಇತ್ತು. ಹೀಗೆ ಬಹುಮುಖ ಪ್ರತಿಭೆಯುಳ್ಳ ಬೇವೂರ ಬಾದಶಹ ವೃತ್ತಿ – ರಂಗಭೂಮಿಯಲ್ಲಿ ಒಂದು ಅನರ್ಘ್ಯ ರತ್ನವಾಗಿಯೇ ಮೆರೆದದ್ದು ಒಂದು ಇತಿಹಾಸ.

ಅನೇಕರು ಕಂಡಂತೆ ಬಾದಶಹರು

ಬೇವೂರ ಬಾದಶಹ ಒಬ್ಬ ಶ್ರೇಷ್ಠ ನಟ ಸಂಗೀತಗಾರ ಮತ್ತು ಗಾಯಕರೆಂಬುದನ್ನು ಹಲವಾರು ರಂಗಭೂಮಿಯ ಸಂಶೋಧಕರು, ಲೇಖಕರು ತಮ್ಮ ತಮ್ಮ ಕೃತಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರೆಲ್ಲರ ಕೃತಿಗಳಲ್ಲದೆ ಅನೇಕ ರಂಗಭೂಮಿಯ ಹಿರಿಯ ಕಲಾವಿದರು ಅವರ ಶಿಷ್ಯ ಬಳಗ ಸಾಕಷ್ಟು ಅನುಭವಗಳನ್ನು ಹಂಚಿಕೊಂಡು ವಿವಿಧ ಪತ್ರಿಕೆಗಳಲ್ಲಿ ದಾಖಲಿಸುವ ಕೆಲಸ ಮಾಡಿದ್ದಾರೆ. ಬಿಜಾಪೂರದ ಗೆಜೆಟಿಯರ್‌ದಲ್ಲಿ ಡಾ. ರಾಮಕೃಷ್ಣ ಮರಾಠೆಯವರ “ಉತ್ತರ ಕರ್ನಾಟಕ ವೃತ್ತಿ – ರಂಗಭೂಮಿ” ಹಾಗೂ ಡಾ. ಬೀಮನಗೌಡ ಪಾಟೀಲರ ಬಾಗಲಕೋಟೆ ಜಿಲ್ಲೆಯ ರಂಗ ಪರಂಪರೆಯಲ್ಲಿ ಬೇವೂರ ಬಾದಶಹರು, ಬಸವಪ್ಪ ಶಾಸ್ತ್ರೀಗಳ ವಿಶ್ವಗುಣಾದರ್ಶ ನಾಟಕ ಮಂಡಳಿಯಲ್ಲಿ ಪ್ರಸಿದ್ಧ ಕಲಾವಿದರೆಂಬುದನ್ನು ಉಲ್ಲೇಖಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ಅವಲೋಕಿಸಬಹುದಾಗಿದೆ.

“ಬೇವೂರ ಬಾದಶಹ ಸಾಹೇಬರು ವಾಮನ್‌ರಾವ್ ಮಾಸ್ತರರ ಕಂಪನಿಯಿಂದ ಉತ್ತಮ ಗಾಯಕ ನಟನಾಗಿ ಕೀರ್ತಿ ಪಡೆದವರು. ವಾಣಿ – ವಿಲಾಸ, ಶ್ರೀರಂಜನೆ, ಜಮಖಂಡಿ, ಏಣಗಿ ಕಂಪನಿಗಳಲ್ಲಿ ರಂಗ ಸೇವೆ ಸಲ್ಲಿಸಿದರು. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯಿಂದ ೧೯೬೯ – ೭೦ನೇಯ ಸಾಲಿನ ಪ್ರಶಸ್ತಿ ದೊರೆತಿದೆ.”

ವಿಜಾಪೂರ ಜಿಲ್ಲೆಯ ಭಾರತದ ಗ್ಯಾಸೆಟಿಯರ್, ಕರ್ನಾಟಕ ರಾಜ್ಯ ಸಾಹಿತ್ಯ ಸಂಸ್ಕೃತಿಸಂಸ್ಕೃತಿ ಪುಟ – ೮೯೯ (ಉತ್ತರ ಕರ್ನಾಟಕ ರಂಗಭೂಮಿ ವಿಭಾಗ)

“ಕವಿರತ್ನ ಕಾಳಿದಾಸ, ಯುವತಿ ವಿಜಯ, ವಿವೇಕ ವಿಜಯ, ಬಲಸಿಂಹತಾರಾ, ಪದ್ಮಾವತಿ ಪರಿಣಯ, ಭಕ್ತ ಪುಂಡಲೀಕ, ಸಂತ ಸಕ್ಕೂಬಾಯಿ, ಪೇಶ್ವ ಬಾಜಿರಾಯ, ಸಂದೇಹ ಸಾಮ್ರಾಜ್ಯ, ಶ್ರೀನಿವಾಸ ಕಲ್ಯಾಣ, ಹೀಗೆ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳನ್ನು ವಾಮನ್‌ರಾವ್ ಮಾಸ್ತರರ ಸ್ವಂತ ಕಂಪನಿ ವಿಶ್ವಗುಣಾದರ್ಶ ನಾಟಕ ಮಂಡಳಿ ವೈಭವದ ಜಯಭೇರಿ ಪ್ರದರ್ಶನ ಕಂಡವು.

ಎಲ್ಲವ್ವ ಗುಳೇದಗುಡ್ಡ, ಗುಳೇದಗುಡ್ಡ ಗಂಗೂಬಾಯಿ. ಡಾ.ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ಮನ್ಸೂರ, ರಾಣೆಬೆನ್ನೂರ ಮಲ್ಲಪ್ಪ, ಬಾದಶಹ ಸಾಹೇಬ್ ಬೇವೂರ, ಗಿರಿಗೌಡರು ಮುಂತಾದ ಅಂದಿನ ಹಿರಿಯ ಗಾಯಕ ನಟರು ಒಂದಲ್ಲ ಒಂದು ವೇಳೆಯಲ್ಲಿ ಇದೇ ನಾಟಕ ಮಂಡಳಿಯಲ್ಲಿ ಆಶ್ರಯ ಪಡೆದವರೇ.”

“ಗಾನಗಾರುಡಿಗ ವಾಮನ್‌ರಾವ್ ಮಾಸ್ತರ” ಕರ್ಮವೀರ ವಾರಪ್ತರಿಕೆ (೨೦ – ೮ – ೧೯೯೫, ಪುಟ ೪೯ – ೫೦, ಲೇಖನ, ಮಾಹಿತಿ – ಏಣಗಿ ಬಾಳಪ್ಪ, ನಿರೂಪಣೆ – ಎನ್. ಕೆ. ಕುಲಕರ್ಣಿ).

“ಜಯದೇವಯ್ಯನವರಂದಂತೆ ಬಸವರಾಜರ ಕೈಯಲ್ಲಿ ಪಳಗಿದವ ನಾನಲ್ಲ. ನನ್ನನ್ನು ರಂಗಭೂಮಿಗೆ ತಂದು ಕಟೆದು ಮೂರ್ತಿ ಮಾಡಿದವರೆಂದರೆ ಪೂಜ್ಯ ಚಿಕ್ಕೋಡಿ ಶಿವಲಿಂಗಯ್ಯನವರು. ಸಂಗೀತದಲ್ಲಿ ರಂಗನಾದ ತುಂಬಿದವರು ಪೂಜ್ಯ ಬೇವೂರ ಬಾದಶಹ ಗುರುಗಳು”.

ಏಣಗಿ ಬಾಳಪ್ಪ ಸಂ. ಕ. ೧೮ – ೦೧ – ೧೯೯೪ ಜನಮನ “ಗೋಕಾಕ ಬಸವಣ್ಣೆಪ್ಪ ರಂಗಭೂಮಿ ಸೇವೆ” ಪತ್ರಕ್ಕೆ ಏಣಗಿ ಅವರ ಪ್ರತಿಕ್ರಿಯೆ ನೀಡಿದ ಪತ್ರದಸಾರ.

ಬೇವೂರ ಬಾದಶಹಾ ಸಾಹೇಬ

ವಾಮನ್‌ರಾವ್ ಮಾಸ್ತರರ ಕಂಪನಿಯಿಂದ ಬೆಳಕಿಗೆ ಬಂದ ಶ್ರೇಷ್ಠ ಗಾಯಕ, ನಟರು, ಸಂಗೀತದ ಅಭ್ಯಾಸವನ್ನು ಶಾಸ್ತ್ರೀಯವಾಗಿ ಮಾಡಿದ್ದರು. ರಂಗಗೀತೆಗಳನ್ನು ಶಾಸ್ತ್ರ ಶುದ್ಧ ಮಿತಿಯೊಳಗೆ ಮೋಹಕವಾಗಿ ಹಾಡುತ್ತಿದ್ದರು. ವಾಣಿವಿಲಾಸ, ನಾಟಕ ಮಂಡಳಿಯ “ವರ ಪ್ರಧಾನ”ದಲ್ಲಿ ಬಸವರಾಜು ಮನಸೂರ ಹುಕ್ಕನಾಗಿದ್ದರೆ ಇವರು ಬುಕ್ಕನಾಗಿ (ಬಾದಶಹರು) ಅಭಿನಯಿಸುವಾಗ ಸಂಗೀತದ ಸ್ಪರ್ಧೆಯೇ ಏರ್ಪಡುತ್ತಿತ್ತು. ಕೃಷ್ಣಾರ್ಜುನ ಕಾಳಗದಲ್ಲಿ ಅರ್ಜುನ, ಬಸವೇಶ್ವರದಲ್ಲಿ ಬಸವೇಶ್ವರ ಪಾತ್ರಗಳಿಂದಲೂ ಖ್ಯಾತಿ ಪಡೆದಿದ್ದರು. ವಾಣಿ – ವಿಲಾಸ ಮಂಡಳಿ ನಿಂತ ಮೇಲೆ ಬಾದಷಹಾ ಸಾಹೇಬರು ಶ್ರೀರಂಜನಿ, ಜಮಖಂಡಿ, ಏಣಗಿ ಕಂಪನಿಗಳಲ್ಲಿಯೂ ರಂಗಸೇವೆ ಸಲ್ಲಿಸಿದರು. ಹಾಡುಗಾರಿಕೆಯೇ ಅವರ ಅಭಿನಯವಾಗಿತ್ತು. ಅವರ ಸೇವೆಯನ್ನು ಮನ್ನಿಸಿ ನಾಟಕ ಅಕಾಡೆಮಿಯ ೧೯೬೯ – ೭೦ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿತು.”

(ಡಾ. ರಾಮಕೃಷ್ಣ ಮರಾಠೆ, “ಉತ್ತರ ಕರ್ನಾಟಕ ರಂಗಭೂಮಿ” ಪಿ.ಎಚ್.ಡಿ. ಪ್ರಬಂಧ ಪುಟ – ೨೩೭.)

ಬೇವೂರ ಬಾದಶಹರು ವಿಶ್ವಗುಣಾದರ್ಶ ನಾಟಕ ಮಂಡಳಿಯಲ್ಲಿ ಸಂಗೀತದ ದಿಗ್ಗಜರಾಗಿ, ನಾಯಕ ನಟರಾಗಿ, ರಂಗಭೂಮಿಯನ್ನು ಅಲಂಕರಿಸಿಕೊಂಡವರು ಇವರ ಕಾಲದ ಪರಿಸರವು ಸಂಗೀತ ಸಾಧಕರ ಗರಡಿಮನೆಯಾಗಿತ್ತು. ಇವರ ಸಹಪಾಠಿಗಳಾಗಿ ಬಸವರಾಜ ಮನ್ಸೂರ, ಮಲ್ಲಿಕಾರ್ಜುನ ಮನ್ಸೂರ, ಗಾನರತ್ನ ಗಂಗೂಬಾಯಿಯಂಥ ಪ್ರಮುಖ ಕಲಾವಿದರು ಬಸವಪ್ಪಶಾಸ್ತ್ರೀಗಳ ಕಂಪನಿಯ ಘನತೆ – ಗೌರವ ಹೆಚ್ಚಲಿಕ್ಕೆ ಇವರ ಅದ್ಭುತ ಪ್ರತಿಭೆಯೇ ಕಾರಣವೆನ್ನಬಹುದು.

(ಡಾ. ಭೀಮನಗೌಡ ಪಾಟೀಲ “ಬಾಗಲಕೋಟೆ ಜಿಲ್ಲೆಯ ರಂಗ ಪರಂಪರೆ” ಪಿ.ಎಚ್.ಡಿ. ಪ್ರಬಂಧ ಹಸ್ತಪ್ರತಿಯಲ್ಲಿ ಉಲ್ಲೇಖ).

“ದಿ. ವಾಮನ್‌ರಾವ್ ಮಾಸ್ತರ ನಾಟಕ ಕಂಪನಿಯಲ್ಲಿ “ವೀರ ಅಭಿಮನ್ಯು” ನಾಟಕದಲ್ಲಿ ಬಾದಶಹರು ಅರ್ಜುನ ಪಾತ್ರವಿರುತ್ತಿತ್ತು. ಈ ಪಾತ್ರದಿಂದ ಅವರು ಖ್ಯಾತನಾಮರಾದರು. ಇವರ ಸಂಗಡ ಆ ನಾಟಕದಲ್ಲಿ ಡಾ. ಮಲ್ಲಿಕಾರ್ಜುನ ಮನ್ಸೂರರವರು ಶಕುನಿಯ ಪಾತ್ರವನ್ನು ಮಾಡುತ್ತಿದ್ದರು. ಇದು ೩೦ನೇಯ ಇಸ್ವಿಯ ಮಾತು ಆಗ್ಗೆ ನಾನು ಬಾಲ ಪಾತ್ರ ಮಾಡುತ್ತಿದ್ದೆ. ಆಗ ನನಗೆ ೧೨ನೇ ವಯಸ್ಸು ನಾನು ೧೯೪೭ ಇಸ್ವಿಯಲ್ಲಿ ಏಣಗಿ ಬಾಳಪ್ಪನವರ ಕಂಪನಿಯಲ್ಲಿ ಹರಿಶ್ಚಂದ್ರ ಅರ್ಜುನ ಬಾಲಕನ ಕಲೆ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರಂತೆ.

ದಿ.ಅಮೀರಬಾಯಿ ಇವರ ತಂಗಿ ದಿ.ಗೋಹರ ಜಾನ ಈ ಉಭಯರು ಬಾದಶಹರ ಶಿಷ್ಯರೆಂಬುದು ತಿಳಿದು ಬರುತ್ತದೆ.

ಕಲಾವಿದ ಡಿ. ದುರ್ಗಾದಾಸ ೨೫ – ೧ – ೧೯೮೮ ಪತ್ರದ ಮೂಲಕ ಮಾಹಿತಿ.

“ಶ್ರೇಷ್ಠ ಗಾಯಕ ನಟರಾದ ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ಮನ್ಸೂರ, ಶ್ರೇಷ್ಠ ನಟರಾದ ಸಿದ್ಧರಾಮಪ್ಪ ಹಂದಿಗನೂರ, ಬಾದಶಹ ಮಾಸ್ತರ ಬೇವೂರ, ಮಡಿವಾಳಯ್ಯ ಸ್ವಾಮಿ ಕುಂಬಾರೆ, ಮಾನಪ್ಪ ಮಂಕಣಿ, ನಿಂಗಪ್ಪ ಯರಗುಪ್ಪಿ ಶಂಕರರಾವ ಅಥಣಿ, ಹಾರ್ಮೋನಿಯಂ ಪಟುಗಳಾದ ಭೀಮರಾವ್ ಹೂಗಾರ, ವಿಠಸಾ ಮಾಸ್ತರ ಗದಗ ಇವರಿಬ್ಬರಿದ್ದರು, ತಬಲಾಪಟು ಗದಿಗೆಯ್ಯ ಸ್ವಾಮಿ ಮಂಟೂರ, ಇವರೆಲ್ಲ ವಾಣಿ – ವಿಲಾಸ ಸಂಗೀತ ನಾಟಕ ಮಂಡಳಿಯಲ್ಲಿ ಇದ್ದರು. ಸ್ತ್ರೀ ಪಾತ್ರಗಳಿಗಾಗಿ ಹಿಂದಿ ಚಿತ್ರ ರಂಗದಲ್ಲಿ ಉತ್ತಮ ಗಾಯಕಿ ನಟಿ ಎಂದು ಖ್ಯಾತಿಗಳಿಸಿದ್ದ ಅಮೀರಬಾಯಿ ಕರ್ನಾಟಕಿ ಮತ್ತು ಗೋಹರ್‌ಜಾನ್ ಕರ್ನಾಟಕಿ ಇದ್ದರು. ಈ ಸಂಘ ಹುಟ್ಟಲು ಮೂಲ ಪ್ರೇರಕರು ಶಿವಲಿಂಗ ಸ್ವಾಮಿಗಳೇ.

ಸ್ವಾಮಿಗಳು ಬರೆದುಕೊಟ್ಟ ರುದ್ರಮ್ಮ ನಾಟಕಕ್ಕೆ ಪ್ರತಿಫಲವಾಗಿ ಬಹಳಷ್ಟು ಹಣ ಸಂದಿತು. ಈ ಸಂಘ ವೀರರಾಣಿ ರುದ್ರಮ್ಮ ನಾಟಕವನ್ನಲ್ಲದೇ ಕಂದಗಲ್ಲ ಹನುಮಂತರಾಯರ “ವಿಜಯನಗರ ಸಾಮ್ರಾಜ್ಯ” ಐತಿಹಾಸಿಕ ನಾಟಕವನ್ನು ಆಡುತ್ತಿತ್ತು. ಈ ನಾಟಕದಲ್ಲಿನ ಮಲ್ಲಿಕಾರ್ಜುನ ಮನ್ಸೂರರ ವಿದ್ಯಾರಣ್ಯರ ಪಾತ್ರ, ಬಸವರಾಜ ಮನ್ಸೂರ ಮತ್ತು ಬಾದಶಹ ಮಾಸ್ತರರ ಅಕ್ಕ ಬುಕ್ಕರ ಪಾತ್ರವನ್ನು ಜನತೆ ಇನ್ನೂ ಮರೆತಿಲ್ಲ”. (ಸಾಹಿತಿ ದು. ನಿಂ. ಬೆಳಗಲಿ “ನನ್ನ ಬಣ್ಣದ ಬದುಕು” ಕೃತಿಯಿಂದ).

“ಏರಾಶಿ ಭರಮಪ್ಪನವರು ಆಗಿನ ಕಾಲದಲ್ಲಿ ೫೦,೦೦೦ರೂ ಗಳಿಗೆ ಮಿಕ್ಕಿ ಬಂಡವಾಳ ತೊಡಗಿಸಿ ವಾಣಿ – ವಿಲಾಸ ನಾಟಕ ಕಂಪನಿಯನ್ನು ಶಿವಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿ ಸ್ಥಾಪಿಸಿದರು. ತಾವು ಬರೆದ ಕಿತ್ತೂರ ರುದ್ರಮ್ಮ ನಾಟಕವನ್ನು ಡಂಬಳದಲ್ಲಿ ಪ್ರಯೋಗಿಸ ಹತ್ತಿದರು. ಈ ನಾಟಕದಲ್ಲಿ ಶ್ರೀ ಮಲ್ಲಿಕಾರ್ಜುನ ಮನ್ಸೂರ, ಬಾದಶಹ ಬೇವೂರ, ಬಸವರಾಜ ಮನ್ಸೂರ, ಗೋಹರ್ ಜಾನ್, ಅಮೀರ್‌ಬಾಯಿ ಕರ್ನಾಟಕಿ, ಮಡಿವಾಳಯ್ಯಸ್ವಾಮಿ ಮುಂತಾದ ಪ್ರಸಿದ್ಧ ನಟರನ್ನು ಕಲೆಹಾಕಿದ್ದರು. ಆರ್ಗನ್ ನುಡಿಸಲು ಗಂಧರ್ವ ಕಂಪನಿಯಲ್ಲಿ ಸಾರಂಗಿ ಬಾರಿಸುತ್ತಿದ್ದ ವಿಠ್ಠಲಸಾ ಕಬಾಡಿ ಸಹೋದರರು. ತಬಲಾವಾದಕ ಮಂಟೂರ ಗದಿಗೆಯ್ಯ ಸ್ವಾಮಿಗಳನ್ನು ಕರೆತಂದರು. ಜನಾರ್ದನ್ ಪೇಂಟರ್‌ನಿಂದ ಪಡದೆ ಬರೆಸಿದರು. ಕಂಪನಿ ಅತ್ಯಂತ ವೈಭವೋಪೇತವಾಗಿ ಪ್ರಾರಂಭವಾಯಿತು ನಾಟಕಗಳು ಯಶಸ್ವಿಯಾದವು.

ದಿ.ಕಂದಗಲ್ಲ ಹಣಮಂತರಾಯರು ಈ ಕಂಪನಿಗೆ ಮ್ಯಾನೇಜರಾಗಿ ಕೆಲಸ ಮಾಡಿದರು. ಒಳ್ಳೊಳ್ಳೆಯ ನಾಟಕಗಳನ್ನು ಆಡಿಸಿದರು. ಈ ಕಂಪನಿಗೆ ಶಿವಲಿಂಗ ಸ್ವಾಮಿಗಳು ಮೂಲ ಪ್ರೇರಕ ಶಕ್ತಿಯಾಗಿದ್ದರು”. (ಏಣಗಿ ಬಾಳಪ್ಪ “ಹೊನ್ನೂರ ಹೊನ್ನು” ಸ್ಮರಣ ಸಂಚಿಕೆ ಕೃಪೆ).

“ಬಾಗಲಕೋಟೆ ಜಿಲ್ಲೆಯ ಹಿರಿಯ ತಲೆಮಾರಿನ ರಂಗಗಾಯಕ ಹಾಗೂ ಖ್ಯಾತ ಹಾರ‍್ಮೋನಿಯಂ ವಾದಕರಾಗಿದ್ದ ಬೇವೂರ ಬಾದಶಹರು ನಮ್ಮ ಕರ್ನಾಟಕದ ಹಿಂದುಸ್ತಾನಿ ಸಂಗೀತದ ಒಂದು ಧ್ರುವತಾರೆ ಶ್ರಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಅಪಾರ ಕಾರ್ಯ ಮಾಡಿದ್ದರೂ ಸಹಿತ ಅವರ ಹೆಸರು ಸಂಗೀತ ಲೋಕದಲ್ಲಿ ಮರೆಯಾಗಿರುವುದು ದುರ್ದೈವದ ಸಂಗತಿ” – ಪ್ರೊ. ಸಿದ್ಧರಾಮಯ್ಯ ಮಠಪತಿ.

ಕೊನೆಯ ದಿನಗಳು

ಹೆಸರಾಂತ ಗಾಯಕ – ನಟ – ಸಂಗೀತ ನಿರ್ದೇಶಕ ಬೇವೂರ ಬಾದಶಹರು ಮಧ್ಯ ವ್ಯಸನಿಗಳಾಗಿದ್ದರು. ಕುಡಿತವನ್ನು ಅವರು ಕೊನೆಯವರೆಗೂ ಕೈ ಬಿಡಲಿಲ್ಲ. ಅವರ ಕೊನೆಯ ದಿನಗಳು ಅತ್ಯಂತ ಚಿಂತಾಜನಕವಾಗಿದ್ದವು. ದೈಹಿಕವಾಗಿ ಆರೋಗ್ಯ ಹದಗೆಟ್ಟಿತ್ತು. ಹೊಟ್ಟೆಯಲ್ಲಿ ಕರುಳು ಬೇನೆ ಆವರಿಸಿಕೊಂಡಿತ್ತು. ಬೇವೂರ ಬಾದಶಹರು ಕಂಪನಿಯ ಮಾಲೀಕರಲ್ಲಿ, ಕಲಾವಿದರಲ್ಲಿ, ಪರಿಚಯವಿದ್ದವರಲ್ಲಿ ಕೈ ಚಾಚುವ ದುಃಸ್ಥಿತಿ ಬಂದೊದಗಿತ್ತು. ಇಂಥ ಗಂಭೀರ ಪರಿಸ್ಥಿತಿಯಲ್ಲಿ ಮಕ್ಕಳು ರೆಕ್ಕೆ ಬಲಿತ ಹಕ್ಕಿಯ ಹಾಗೆ ತಮ್ಮ ಬದುಕಿನ ಹಾದಿಯನ್ನು ಕಂಡುಕೊಂಡಿದ್ದರು. ಬಾದಶಹರನ್ನು ಅವರು ಹಿಂತಿರುಗಿಯೂ ನೋಡಲಿಲ್ಲ. ಬಾದಶಹರ ಶಿಷ್ಯ ನಾಡೋಜ ಏಣಗಿ ಬಾಳಪ್ಪನವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತ ಬಾದಶಹರು ಅನಾರೋಗ್ಯ ಪೀಡಿತರಾಗಿ ನನ್ನಲ್ಲಿಗೆ ಬಂದಾಗ ವೈದ್ಯಕೀಯ ಸಹಾಯಕ್ಕೆ ಹಣವನ್ನು ನೀಡಿದೆ. ಅವರು ಹಣವನ್ನು ತೆಗೆದುಕೊಂಡು ಹೋದವರು ಹಿಂತಿರುಗಿ ಬರಲೇ ಇಲ್ಲ. ಎಲ್ಲಿ ಹೋದರು ಏನಾದರು ಎಂಬ ಸುಳಿವು ಕೂಡ ಸಿಗಲಿಲ್ಲ. ಅಂದು ಅವರು ನೀಡಿದ ದರ್ಶನವೇ ಕೊನೆಯ ದರ್ಶನವಾಗಿತ್ತು. ಇದೇ ರೀತಿ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕ್ರತ ಬಿ. ಆರ್. ಅರಿಷಿನಗೋಡಿಯವರು ಕೂಡಾ ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. “ಬೇವೂರ ಬಾದಶಹರು ನಮ್ಮ ಹತ್ತಿರದ ಗ್ರಾಮದವರು, ಅವರ ಬಗ್ಗೆ ನನಗೆ ತುಂಬಾ ಗೌರವವಿತ್ತು. ರಂಗಭೂಮಿಯಲ್ಲಿ ಗಾಂಢೀವಿಯಾಗಿ ಬಾದಶಹ ಬಾದಶಹರಾಗಿಯೇ ಮೆರೆದವರು. ಅಂಥ ಒಬ್ಬ ಧೀಮಂತ ಕಲಾವಿದ ಹೊಟ್ಟೆನೋವಿನಿಂದ ಬಳಲುತ್ತ ನನ್ನ ಬಳಿ ಬಂದಾಗ ನನ್ನ ಕೈಲಾದಷ್ಟು ಸಹಾಯದ ಹಸ್ತ ಚಾಚಿದೆ. ಮನದಲ್ಲಯೇ ಮರುಗಿಕೊಂಡೆ” ಎಂದರು.

ಬಣ್ಣದ ಬದುಕಿನಲ್ಲಿಯೇ ಬಸವಳಿದ ಬೇವೂರ ಬಾದಶಹರು ಅನಾರೋಗ್ಯದ ಮಧ್ಯದಲ್ಲಿಯೂ ಸಂಚಾರಿಗಳಾಗಿದ್ದರು. ಹೈದ್ರಾಬಾದಿನಿಂದ ಹಿಂತುರಿಗಿ ಬಂದ ಮೇಲೆ ಬಾದಶಹರು ಕಂಪನಿ ನಾಟಕಗಳಲ್ಲಿಯೇ ತಮ್ಮನ್ನ ತಾವು ತೊಡಗಿಸಿಕೊಂಡರು. ಸರಿಯಾದ ಊಟ, ನಿದ್ರೆ ಇಲ್ಲದೆ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತ ಬಂತು. ಇಂಥ ಒಬ್ಬ ಅಭಿಜಾತ ಕಲಾವಿದ ಆಲಮಟ್ಟಿಯ ಹತ್ತಿರದ ಸೀತಿ – ಮನಿಯಲ್ಲಿ ಕೊನೆಯುಸಿರೆಳೆದರು ಎಂದು ಡಾ. ಗಣೇಶ ಅಮೀನಗಡ ಅವರು ಅಭಿಪ್ರಾಯ ಪಡುತ್ತಾರೆ.

ಆದರೆ ಬೇವೂರ ಬಾದಶಹರ ಬದುಕು ನಿಗೂಢವಾಗಿರುವಂತೆ ಸಾವು ಕೂಡಾ ನಿಗೂಢವಾಗಿದೆ. ಬೇವೂರ ಬಾದಶಹರು ಅನಾರೋಗ್ಯಪೀಡಿತರಾದಂಥ ಸಂದರ್ಭದಲ್ಲಿ ಅವರು ಬೇವೂರ ಬಿಳಗಿಯಲ್ಲಿ ಕೆಲವು ದಿವಸಗಳಿದ್ದು, ತದನಂತರ ಬಿಜಾಪೂರಕ್ಕೆ ಹೋಗಿ ಅವರ ಶಿಷ್ಯೆ ಅಮೀರ್‌ಬಾಯಿ ಕರ್ನಾಟಕಿ ಅವರ ಮನೆಯಲ್ಲಿ ಉಳಿದುಕೊಂಡರು ಬರುಬರುತ್ತ ದೈಹಿಕ ಸ್ಥಿತಿ ಚಿಂತಾಜನಕವಾಗಿತ್ತು. ಕೊನೆಗೆ ಅಮೀರ್‌ಬಾಯಿ ಕರ್ನಾಟಕಿ ಅವರ ಮನೆಯಲ್ಲಿಯೇ ಕೊನೆಯುಸಿರೆಳೆದರೆಂದು ಅವರನ್ನು ಹತ್ತಿರದಿಂದ ಕಂಡಿರುವ ಸಿ. ಎಂ. ಚನಗೊಂಡಿ ಅವರು ಅಭಿಪ್ರಾಯ ಪಡುತ್ತಾರೆ.

ಏನೇ ಆದರೂ ರಂಗಭೂಮಿಯ ಬಾದಶಹರು ತಮ್ಮ ಜೀವಿತದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಅಜರಾಮರ ಕೊಡುಗೆಯನ್ನು ನೀಡಿ ತಮ್ಮ ಹೆಜ್ಜೆ ಗುರುತುಗಳನ್ನು ಗಟ್ಟಿಯಾಗಿ ಮೂಡಿಸಿದ್ದು ಒಂದು ಇತಿಹಾಸ.

01_208_BB-KUH

 

[1] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ.೧೨೦

[2] ಡಾ.ಬಿ.ಸಿ. ಹದ್ಲಿ, ಬೇವೂರಿನ ಅಪರೂಪದವರು, ಪುಟ.೭೪ – ೭೫

[3] ಆರ್.ಎಚ್. ಮೋರೆ, ಅವರ ಸಂದರ್ಶನ