ಹೆಸರು: ರಾಮಶೆಟ್ಟಿ
ಊರು: ಕೊಳ್ಳೆಗಾಲ

 

ಪ್ರಶ್ನೆ: ನಾನು ೪೫ ವರ್ಷದ ವಿವಾಹಿತ. ೮೫ ಕೆ.ಜಿ. ತೂಕ, . ಅಡಿ ಎತ್ತರವಿದ್ದೇನೆ. ೨೦ ವರ್ಷಗಳ ಹಿಂದೆ ಕೆಟ್ಟ ಸಹವಾಸದಿಂದ ವಿ.ಡಿ. ಬಂದಿತ್ತು. ಮದುವೆ ನಂತರ ತಿಳಿದು ವೈದ್ಯರ ಸಲಹೆಯಂತೆ ಪೆನ್ಸುಲಿನ್ ಚುಚುಮದ್ದನ್ನು ನಾನು ಮತ್ತು ನನ್ನ ಪತ್ನಿ (ಆಗ ಗರ್ಭವತಿ) ತೆಗೆದುಕೊಂಡೆವು. ಪುನಃ ರಕ್ತ ಪರೀಕ್ಷೆ ಮಾಡಿಸಿದಾಗ ವಿ.ಡಿ. ನೆಗೆಟಿವ್ ಬಂತು. ಈಗ ನಮಗೆ ಇಬ್ಬರು ಮಕ್ಕಳು. ನನ್ನ ಸಮಸ್ಯೆ ಏನೆಂದರೆ ಕಳೆದ ವರ್ಷದಿಂದ ಸ್ವಲ್ಪ ಕೆಲಸ ಮಾಡಿದರೂ ಬೇಗನೆ ಆಯಾಸ, ಸುಸ್ತಾಗುತ್ತದೆ. ಕಾಲು ಜೋಮು ಹಿಡಿಯುತ್ತದೆ. ಅರ್ಧ ಪುಟ ಬರೆದರೂ ಬೆರಳು ಸೋಲುತ್ತದೆ. ಬಿ.ಪಿ. ಇದೆ. ಮೈ ಕೈ ನೋವಿರುತ್ತದೆ. ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಗಂಟೆ ಪ್ರಯಾಣ ಮಾಡಿದರೆ ಮಂಡಿಯಿಂದ ಕೆಳಗೆ ಊದಿಕೊಳ್ಳುತ್ತದೆ. ನರರೋಗ ತಜ್ಞರಿಂದೆಲ್ಲ ತಪಾಸಣೆ ಮಾಡಿಸಿಕೊಂಡಿದ್ದೇನೆ. ಎಲ್ಲಾ ಬಗೆಯ ಪರೀಕ್ಷೆ ಮಾಡಿಸಿದ್ದೇನೆ. ನಾರ್ಮಲ್ ಅಂತ ಬಂದಿದೆ. ಇತ್ತೀಚೆಗೆ ಲೈಂಗಿಕ ಶಕ್ತಿಯೂ ಕ್ಷೀಣಿಸುತ್ತಿದೆ. ಯಾವುದೇ ಆಹಾರ ಸೇವಿಸಿದರೂ ರುಚಿ ತಿಳಿಯುತ್ತಿಲ್ಲ. ದಯಮಾಡಿ ಇವಕ್ಕೆಲ್ಲಾ ಸೂಕ್ತ ಪರಿಹಾರ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ಉತ್ತರ: ನಿಮ್ಮ ಬಹುದೊಡ್ಡ ಸಮಸ್ಯೆ ಎಂದರೆ ಬೊಜ್ಜುತನ. ನಿಮ್ಮ ಎತ್ತರಕ್ಕೆ ನೀವು ಬರೀ ೬೦-೬೫ ಕೆ.ಜಿ. ಇರಬೇಕಿತ್ತು ೨೦-೨೫ ಕೆ.ಜಿ. ಜಾಸ್ತಿ ಇದ್ದೀರಿ. ಇದರ ಜೊತೆಗೆ ಬಿ.ಪಿ. ಇರುವುದರಿಂದ ನಿಮಗೆ ನೀವು ಹೇಳಿದ ಎಲ್ಲಾ ತೊಂದರೆಗಳು ಕಂಡು ಬಂದಿವೆ. ತೂಕ ಕಡಿಮೆ ಮಾಡಿಕೊಳ್ಳಿ, ಡಯಟ್ ಮಾಡಿ, ಯೋಗ / ವ್ಯಾಯಾಮ ಮಾಡಿ ಸಮಸ್ಯೆ ಸರಿಹೋಗುತ್ತದೆ. ನೀವು ತೂಕ ಕಡಿಮೆ ಮಾಡಿಕೊಳ್ಳುಲು XMET-500 mg ಎಂಬ ಮಾತ್ರೆ ಪ್ರತಿ ದಿನ (ಬೆ.ರಾ) ಎರಡು ತೆಗೆದುಕೊಳ್ಳಿ.

ವಿಶೇಷ ಸೂಚನೆ: ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ಕುಟುಂಬ ವೈದ್ಯರಿಗೆ ತೋರಿಸಿ ತೆಗೆದುಕೊಳ್ಳಿ.