ಪಲ್ಲವಿ : ಬ್ರಹ್ಮಕುಂಡದಲ್ಲಿ ಕಂಡೆ ಸಚ್ಚಿದಾನಂದನ
ಹಸನ್ಮುಖದಿಂದ ನೋಡೆ ದತ್ತಗುರು ದೇವನ

ಚರಣ :  ಕಾವೇರಿ ತೀರದಲಿ ಸಹ್ಯಾದ್ರಿ ಪರ‍್ವತದಲಿ
ಮುನಿರೂಪದಿ ಕಂಡೆ ಮೌನದಲಿ ನಿಂತೆ

ಅರ್ಕಾವತಿ ಮಧ್ಯದಲ್ಲಿ ಅದ್ಭುತದ ರೂಪ ನೋಡಿ
ಆಶ್ಚರ್ಯವ ಪಟ್ಟೆ ನಾನು ತನ್ಮಯದಲಿ ತನು ಮರೆತೆ

ಜಯಜಯವು ಜಯವು ನಿನಗೆ ಸಂಗಮೇಶ್ವರನಿಗೆ
ಜಯವಾಗಲಿ ಜಯವಾಗಲಿ ತ್ರಿನಾಥನಿಗೆ ಜಯಜಯ