ಮಟ ೧೪ – ೪೭ : ಮಠ
ಮಟ್ಟಮಿರು ೧ – ೮೦ : ಸುಮ್ಮನಿರು
ಮಡಗಿಡು ೧೫ – ೮೯ : ಕೂಡಿಸು
ಮಡಗೂೞ್ ೧೧ – ೪೧, ೧೨೭, ೧೪ – ೧೬೦ : ಎಂಜಲನ್ನ, ಉಚ್ಫಿಷ್ಟ
ಮಡಿಪು ೫ – ೬, ೧೫೬ : ಕೊಲ್ಲು, ಘಾತಿಸು
ಮಂಡಳ ೯ – ೧೯ : ಸೂರ‍್ಯನ ಪರಿವೇಷ
ಮತ್ತೆನಿಸು ೫ – ೧೯ : ತಪ್ಪು, ತಡೆ
ಮದಾವಿಳ ೬ – ೩೫ : ಮದದಿಂದ ಕೆಟ್ಟ
ಮದ್ಯಪ ೧೧ – ೭೪ : ಹೆಂಡಕುಡುಕ
ಮದ್ಯಪಾಃ ಕಿಂ ನ ಕುರ್ವಂತಿ ೧೪ – ೫೮ : ಹೆಂಡಗುಡುಕರು ಏನು ತಾನೆ ಮಾಡುವುದಿಲ್ಲ?
ಮದ್ಯಪೇ ಸೌರ್ಹದಂ ನಾಸ್ತಿ ೧೪ – ೫೮ : ಹೆಂಡಗುಡುಕನೊಂದಿಗೆ ಸ್ನೇಹವಿಲ್ಲ
ಮಧ್ಯಸ್ಥವ್ಯಕ್ತಿ ೩ – ೨೫ : ನಿಷ್ಪಕ್ಷವಾದ ನಡೆವಳಿಗೆ, ತಾಟಸ್ಥ್ಯ
ಮಂದ ೮ – ೧೬೪ : ಶನಿಗ್ರಹ
ಮನದೆಗೊಳ್ ೭ – ೧೯ : ಬಯಸು, ಇಷ್ಟಪಡು
ಮನಂಬೊಯ್ ೪ – ೪೫ : ಮನದಟ್ಟು ಮಾಡು
ಮನವಾಲ್ಗುಡಿ ೯ – ೧೩೨ : ಮನಸ್ಸಿನಲ್ಲಿಯೇ ಹಾಲು ಕುಡಿದಂತೆ ಕನಸು ಕಾಣು, ವಾಸ್ತವದ ಅನುಭವಕ್ಕೆ ಸಿಗದಂಥದು
ಮನಸ್ವಿ ೩ – ೯೭ : ಬುದ್ಧಿವಂತ, ವಿವೇಕಿ
ಮನುಜ ೨ – ೧ : ಮನುವಿನ ಮಗ
ಮನೆಯಾಣ್ಮ ೫ – ೫೫ : ಮನೆಯ ಯಜಮಾನ, ಗೃಹಸ್ಥ
ಮನೆವೆಂಡತಿ ೧೪ – ೧೩ : ಗೃಹಿಣಿ
ಮರ್ದು ೪ – ೬೭, ೫ – ೩೮, ೧೨ – ೩೫ : ಮದ್ದು, ಚಿಕಿತ್ಸೆ, ಔಷಧಿ
ಮರುಳ್ ೫ – ೬೦, ೧೫ – ೬೨ : ಹುಚ್ಚ
ಮರುಳ್ ೮ – ೧೦೦ : ೧. ಭೂತಗಣ ೨. ಹುಚ್ಚಾಟ
ಮರುಳ ಪಡೆ ೮ – ೭೭ : ಭೂತಗಣ
ಮರುಳರಸ ೮ – ೧೨, ೯೭ : ಭೂತಪತಿ, ಶಿವ
ಮರೆ ೮ – ೩೦ : ಒಂದು ಬಗೆಯ ಜಿಂಕೆ
ಮಱುಗಿಸು ೭ – ೨೦ : ಕಷ್ಟಪಡಿಸು, ಹಿಂಸಿಸು
ಮಱುಗು ೧೪ – ೨೧ : ಕಳವಳಿಸು, ಕಾತರಿಸು
ಮಱೆಗಳ್‌ಗುಡಿ ೧೪ – ೭೨ : ಕಳ್ಳತನದಲ್ಲಿ ಹೆಂಡ ಕುಡಿ
ಮಱುಗೋಂಟೆ ೧೫ – ೯೫ : ಮರೆಮಾಡಿಕೊಳ್ಳಲು ಇರುವ ಕೋಟೆ
ಮಱೆವಾೞ್ ೮ – ೧೩೦ : ರಹಸ್ಯವಾಗಿ ಬಾಳುವೆ ಮಾಡು
ಮಲೆ ೮ – ೨೨೬ : ಬೀಗು, ಗರ್ವಿಸು
ಮಸಕ ೧ – ೩೯ : ಕೆರಳುವಿಕೆ
ಮಸಗು ೮ – ೧೪೩ : ಕೆರಳು
ಮಸೆಯಂ ಪತ್ತಿಸು : ೫ – ೧೨೫ : ಗಾಯವನ್ನು ಮಾಡು, ಪೆಟ್ಟುಕೊಡು
ಮಹಳಮಿಕ್ಕು ೫ – ೯೫ : ಭಾದ್ರಪದ ಕೃಷ್ಣ ಅಮಾವಾಸ್ಯೆಯಲ್ಲಿ ಸರ್ವಪಿತೃಗಳಿಗೆ ಎಡೆ ಇಡು, ಶ್ರಾದ್ಧಮಾಡು
ಮಹಾಭಾಗ ೧೪ – ೪೯ : ಮಹಾನುಭಾವ
ಮಳಯಜರಸ ೫ – ೩೯ : ಶ್ರೀಗಂಧದ ದ್ರವ
ಮಳೀಮಸ ೧೧ – ೧೫೭ : ದೋಷಯುಕ್ತ, ಮಲಿನವಾದುದು
ಮಾಟ ೨ – ೨೪, ೯ – ೭೭ : ಕಾರ‍್ಯ, ಕೃತ್ಯ
ಮಾಡ ೫ – ೮೦ : ಮನೆ, ಉಪ್ಪರಿಗೆಮನೆ
ಮಾಣ್ ೧ – ೧೯ : ನಿಲ್ಲು, ತಡೆ, ತೊಲಗು
ಮಾಣಿ ೫ – ೧೪೮, ೧೪ – ೪೦ : ವಟು, ಬ್ರಹ್ಮಚಾರಿ
ಮಾಣಿಸು ೮ – ೧೩೩, ೧೪ – ೧೦೨ : ತಪ್ಪಿಸು
ಮಾತಂಗ ೬ – ೧೭ : ಮಾದಿಗ
ಮಾತುಳವಿವಾಹ ೧೧ – ೭೧ : ಸೋದರ ಮಾವನೊಂದಿಗೆ ಕನ್ಯೆಯ ವಿವಾಹ
ಮಾದುಫಲ ೧ – ೧೨೩ : ಮಾದಳದ ಹಣ್ಣು
ಮಾದೆಂಗ ೧೦ – ೧೪೫ : ಮಾದಿಗ
ಮಾಧ್ಯಸ್ಥಿಕೆ : ಯಾವ ಪಕ್ಷಕ್ಕೂ ಸೇರದ ತಟಸ್ಥವೃತ್ತಿ
ಮಾನವಕೇಸರಿ ೮ – ೧೩೬ : ನರಸಿಂಹ
ಮಾನಸವಾೞ್ ೧೨ – ೨೩ : ಮನುಷ್ಯ ಜೀವನ
ಮಾನಸಿಕ್ಕೆ ೫ – ೨೯ : ಮನುಷ್ಯತ್ವ
ಮಾಯ್ದ ೫ – ೪೮ : ಕೆಟ್ಟ, ಕ್ರೂರ
ಮಾರ್ಕೊಳ್ ೪ – ೩೫, ೧೧ – ೬ : ಎದುರಿಸು, ವಿರೋಧಿಸು, ಪ್ರತಿಭಟಿಸು
ಮಾರ್ಜಾರ ೫ – ೧೩ : ಬೆಕ್ಕು
ಮಾಱುಗೊಳ್ ೧೫ – ೧೮ : ಮಾರುಹಾಕು, ಮಾರಿನ ಅಳತೆ ತೆಗೆ
ಮಾಲಕ್ಕ ೪ – ೧೨೩ ; ಒಂದು ಕ್ಷುದ್ರ ದೇವತೆಯ ಹೆಸರು
ಮಾವಿನ ಕೋಡು ೧೪ – ೨೭ : ಮಾವಿನೆಲೆಗಳ ಕೊನೆ
ಮಾಸತಿ ೫ – ೧೩೧ : ಮಹಾಸತಿ, ಸಾಧ್ವಿ
ಮಾಂಸಾಶನ ೬ – ೬ : ಮಾಂಸದ ಅಡುಗೆ
ಮಾಂಸಾಶಿ ೨ – ೬೯ : ಮಾಂಸಭಕ್ಷಕ
ಮಾಹೇಶ್ವರ ೪ – ೭೮ : ಷಟ್ಸ್ಥಲಗಳಲ್ಲಿ ೨ನೆಯ ಹಂತದಲ್ಲಿರುವ ಭಕ್ತ, ವೀರಶೈವ
ಮಾಳಚಿ ೮ – ೨೩೦ : ಒಂದು ಕ್ಷುದ್ರದೇವತೆಯ ಹೆಸರು
ಮಿಕ್ಕ ೧೩ – ೫೦ : ಅತಿಶಯವಾದ
ಮಿಡಿ ೮ – ೨೨೧ : ಬೆರಳ ತುದಿಯಿಂದ ಮೆಲ್ಲಗೆ ಹೊಡೆ
ಮಿಡುಕು ೯ – ೮ : ಅಲ್ಲಾಡು
ಮಿಂಡಾಟ ೧೪ – ೬೮ : ಹಾದರಿಕೆ
ಮಿತ್ತು ೫ – ೨೦ : ಮೃತ್ಯು
ಮಿಥುನ ೫ – ೧೩೨ : ಪತಿ ಪತ್ನಿಯರ ಜೋಡಿ
ಮಿಷಾನ್ನ ೧೪ – ೭ : ಮೃಷ್ಟಾನ್ನ
ಮಿಸುಕು ೧ – ೧೬ : ಅಲ್ಲಾಡು
ಮಿಸುಗು ೪ – ೧೫೬ : ಹೊಳೆ, ಪ್ರಕಾಶಿಸು
ಮಿಳಿ ೮ – ೨೪೮ : ತೊಗಲಿನ ಹಗ್ಗ, ಪಟ್ಟಿ, ಹುರಿ
ಮೀಂಗುಲಿಗೆ ೧೦ – ೧೭೪ : ಬೆಸ್ತರ ಹೆಂಗಸು
ಮೀಸಲ್ ೧೪ – ೧೦೧ : ಹರಕೆ, ಮೀಸಲು
ಮುಕ್ತಕ ೬ – ೫೬ : ಪೂರ್ಣಾರ್ಥ ಕೊಡುವ ಬಿಡಿಪದ್ಯ
ಮುಂಕೊಳ್ ೧೫ – ೮೩ : ಮೀರು, ದಾಟು
ಮುಂಗಯ್ವಲ ೮ – ೨೩೦ : ಮುಂಗೈಬಲ, ತೋಳ್ಬಲ
ಮುಂಗುರಿ ೫ – ೧೩ : ಮುಂಗುಸಿ
ಮುಚ್ಚುಳ್ ೮ – ೧೧೦ : ಮುಚ್ಚುಳ
ಮುಟ್ಟು ೫ – ೧೭, ೮ – ೧೩೪ : ಪ್ರಯೋಜನಕ್ಕೆ ಬರುವ ವಸ್ತು, ಸಾಮಗ್ರಿ
ಮುಟ್ಟುಪಡ ೬ – ೨೨, ೧೪ – ೯೫, ೧೧೭ : ಸ್ವೀಕಾರಾರ್ಹವಲ್ಲದ್ದು, ಮುಟ್ಟಲು ತಕ್ಕುದಲ್ಲದ್ದು
ಮುಟ್ಟುಪಡಾಗು ೧೪ – ೧೧೧ : ಸ್ವೀಕಾರಾರ್ಹವಲ್ಲದಾಗು, ಸ್ಪರ್ಶ ಯೋಗ್ಯವಲ್ಲದಾಗು
ಮುಡಿಪು ೬ – ೨೩ : ಸಾಯಿ
ಮುಂಡ ೮ – ೨೭ : ಭುಜದವರೆಗೆ ದೇಹಾಕೃತಿ
ಮುಂಡು ೧೪ – ೬೮ : ಹಟಮಾರಿತನ
ಮುತ್ತ ೩ – ೭೯, ೯ – ೫೮ : ಮುತ್ತುಗ
ಮುತ್ತೆಮ್ಮೆ ೧೦ – ೧೮೭ : ಮುದಿಯೆಮ್ಮೆ
ಮುದುಗುದುರೆ ೧೫ – ೬೧ : ಮುದಿಕುದುರೆ
ಮುನ್ನೀರ್ ೧೫ – ೮೩ : ಸಮುದ್ರ
ಮುಂಬಿಡು ೩ – ೩೨ : ಮುಂದೆಬರು, ಎದ್ದು ತೋರು; ೧೧ – ೧೮, ೧೪ – ೬, ೧೫ – ೭೨ : ಮುಂದಾಗಿ, ಮೊದಲಾಗಿ
ಮುಮ್ಮಾಡು ೧೩ – ೧ : ಮೊದಲು ಮಾಡು
ಮುರಿವು ೯ – ೭೭ : ಕಿವಿಗೆ ಹಾಕಿಕೊಳ್ಳುವ, ತುದಿಯನ್ನು ಬಗ್ಗಿಸಿ ಮಾಡಿರುವ ಒಂದು ಆಭರಣ
ಮುರುಟಿರು ೯ – ೧೦೩ : ಮುದುರಿಕೊಳ್ಳು
ಮುಱುಕ ೫ – ೫೪ : ಬೆಡಗು, ಬಿನ್ನಾಣ, ಬಿಂಕ
ಮುೞಡು ೧ – ೩೧ : ಮುಳುಗಾಡು
ಮೂಱು ಕೇಡು ೧೪ – ೧೬೧ : ಕಾಯಿಕ, ವಾಚಿಕ, ಮಾನಸಿಕ ಎಂಬ ಮೂರು ಪಾಪಗಳು
ಮೂವಡಿ ೨ – ೩೦ : ಮೂರು ಮಡಿ
ಮೂವಣ್ಣಂಬರ್ ೧ – ೧೨೫ : ಬ್ರಹ್ಮ ವಿಷ್ಣು ಮಹೇಶ್ವರರೆಂಬ ಮೂರು ರೂಪಗಳನ್ನು ಪಡೆ
ಮೃಗಯಾ ೫ – ೩೦ : ಬೇಟೆ
ಮೃಚ್ಚಕ್ರ ೧೦ – ೨೨ : ಕುಂಬಾರನ ತಿಗುರಿ
ಮೃಚ್ಚಕ್ರದಂಡ ೧೦ – ೨೨ : ಕುಂಬಾರನ ತಿಗುರಿಯ ಕೋಲು
ಮೃತ್ಯುಗರೆ ೧೪ – ೮೦ : ಸಾವನ್ನು ಆಹ್ವಾನಿಸು
ಮೃಷತತ್ತ್ವ ೧೧ – ೧೫೬ : ಮಿಥ್ಯಾತತ್ತ್ವ
ಮೆಚ್ಚು ೫ – ೫೦ : ಕಾಣಿಕೆ
ಮೆಯ್ ೬ – ೩೩ : ನಾರುವುದು (?)
ಮೆಯ್ಗರ್ಚು ೧೪ – ೧೧ : ಸ್ನಾನಮಾಡು
ಮೆಯ್ಯಱಿ ೯ – ೫೧ : ಮೈಮೇಲೆ ಎಚ್ಚರವಿರು
ಮೆಯ್ಯೇಡು ೯ – ೭೬ : ಮೈಯ ಕೊಳೆ, ಕಲ್ಮಷ, ಹೊಕ್ಕಳಿಕೆ
ಮೆಯ್ವೆಸ ೯ – ೧೧೪ : ಮೈಯ ಕ್ರಿಯೆ
ಮೆೞಸು ೮ – ೫೯ : ಮೆಣಸು
ಮೆೞ್ಪಡು ೭ – ೧೭ : ಇಷ್ಟಪಡು, ಅಪೇಕ್ಷಿಸು
ಮೇಗು ೧೦ – ೭ : ಮಿಗಿಲು, ಅಧಿಕ
ಮೇಘಗರ್ಜನೆ ೭ – ೪ : ಗುಡುಗು
ಮೇಳ ೮ – ೬೯ : ಒಡನಾಟ, ಸಹವಾಸ
ಮೈಲ ೪ – ೧೨೩, ೮ – ೨೩೦ : ಒಂದು ಕ್ಷುದ್ರದೇವತೆ
ಮೊಕ್ಕಳ ೪ – ೧೨೭ : ಹೆಚ್ಚು ಅಧಿಕ
ಮೊಕ್ಕಳಿಗ ೪ – ೧೨೩ , ೫ – ೩೮ : ಮನುಷ್ಯ, ಸಂದಣಿಯ ಸಾಮಾನ್ಯಮನುಷ್ಯ
ಮೊಗಸು ೯ – ೧೧೯ : ತೊಡಗು, ಉಪಕ್ರಮಿಸು
ಮೊಗ್ಗು ೫ – ೩೧, ೧೩ – ೫೪, ೧೫ – ೫೬ : ಸಾಧ್ಯತೆ, ಸಾಮರ್ಥ್ಯ, ಶಕ್ಯತೆ
ಮೊಟ್ಟಯ್ಸು ೩ – ೬೮ : ಸ್ವಾಧೀನಕ್ಕೆ ತರು
ಮೊದಲ್ ೫ – ೧೩೨, ೬ – ೬೫ : ಮೂಲಧನ, ಬಂಡವಾಳ
ಮೊರಡಿ ೧ – ೧೨೩ : ಕಲ್ಲುಗುಡ್ಡ
ಮೊಱೆ ೧೪ – ೫೯ : ಒಳ್ಳೆಯ ನಡತೆ, ಶೀಲ
ಮೊಱೆಗೊಳ್ ೫ – ೫೨ : ನಂಟಸ್ತಿಕೆ, ಹೇಳಿಕೊಳ್ಳು
ಮೊಱೆಯವನ್ ೫ – ೫೧ : ಬಂಧು, ನಂಟ
ಮೊಱೆಯೋ ೧೨ – ೨೭ : ಕಾಪಾಡು
ಮೊಱೆವಾದರಿ ೫ – ೫೨ : ಬಂಧುತ್ವದ ಜಾರೆ
ಮೊಲಗೞ್ತಲೆ ೧೫ – ೧೦೩ : ಭ್ರಮೆ ತರುವ ಕತ್ತಲೆ
ಮೊಲೆಗೆಲ ೫ – ೫೩ : ಸ್ತನದ ಪಾರ್ಶ್ವ
ಮೊಳೆ ೧೪ – ೧೩೧ : ಮೊಳಕೆ
ಮೊೞಕಾಲ್ ೩ – ೬೦ : ಮೊಣಕಾಲು
ಮೊೞುಯಲ್ಲ ೬ – ೯ : ಎಳೆಯ ಶುಂಠಿ
ಮೋದು ೧ – ೫ : ತಾಗು, ಬಡಿ
ಮೋಹಿಡು ೧೦ – ೧೦೩ : ವ್ಯವಸ್ಥೆಗೆ ತರು; ಇರಿಸು, ಕೂಡಿಸು
ಯಥೇಷ್ಟಚರಿತ್ರ ೫ – ೨೬ : ತನಗೆ ತೋರಿದ ರೀತಿಯ ನಡವಳಿಕೆ
ಯಾಜನ ೧೧ – ೧೧೨ : ಯಜ್ಞ ಮಾಡಿಸುವಿಕೆ
ಯಾಜಿಸು ೧೧ – ೮೪ : ಯಾಗ ಮಾಡು
ಯಾನಪಾತ್ರ ೩ – ೨೬ : ದೋಣಿ, ನಾವೆ
ಯಾ ಮತಿಸ್ಸಾ ಗತಿ : ೧ – ೧೧೧ : ಬುದ್ಧಿ ಹೇಗೋ ಹಾಗೆ ನಡೆ
ರತಿ ೬ – ೧೧೯ : ಆಸಕ್ತಿ
ರಥಚಕ್ರ ೧೨ – ೬ : ಎಕ್ಕ (?)
ರಮ್ಯ ೩ – ೧೮ : ಮನೋಹರ
ರಸಭಸ್ಮ ೯ – ೪೯ : ಪಾದರಸದ ಭಸ್ಮ
ರಸವರ್ಗ ೬ – ೧೭ : ನೀರು ಮೊದಲಾದ ದ್ರವಪದಾರ್ಥ
ರಾಗಿ ೬ – ೬೧ : ಆಸಕ್ತಿ
ರಾಮ ೮ – ೧೩೭ : ಪರಶುರಾಮ
ರಿಷಿಪಳ್ಳಿ ೮ – ೮ : ಶುಷಿಗಳ ಹಳ್ಳಿ
ರೂಪೋಪಜೀವಿ ೬ – ೪೨ : ವೇಶ್ಯೆ, ಸೂಳೆ
ರೇತ ೧೦ – ೭೬ : ವೀರ‍್ಯ
ಱಂಡೆ ೫ – ೭೧, ೧೦ – ೧೫೫ : ವಿಧವೆ
ಱೆಕ್ಕಟಂ ೧೪ – ೩೭ : ವ್ಯರ್ಥವಾಗಿ ಸುಮ್ಮನೆ
ಲಕ್ಕೆ ೫ – ೮೦ : ಲಕ್ಷ, ಲಕ್ಷಗಟ್ಟಲೆ
ಲಘುಕರ್ಮ ೩ – ೨೦ : ಎಂಟು ಬಗೆಯ ಸ್ಪರ್ಶನಾಮಕರ‍್ಮಗಳಲ್ಲಿ ಒಂದು
ಲಘುಕರ್ಮಿ ೫ – ೯೨ : ಎಂಟು ಬಗೆಯ ಸ್ಪರ್ಶನಾಮಕರ್ಮಗಳಲ್ಲಿ ಲಘುಕರ್ಮದ ಸ್ಥಿತಿಯಲ್ಲಿರುವವನು
ಲಬ್ಧವಿಹೀನ ೧೩ – ೫೬ : ಕಾಲಲಬ್ಬಿ ಇಲ್ಲದವನು
ಲಬ್ಧಿ ೮ – ೧೯೫ : ಅನುಕೂಲಕರವಾದ ಕಾಲ, ಸಂದರ್ಭ
ಲಂಪಳ ೫ – ೮೦ : ಲಂಪಟ, ವಿಪಯಾಸಕ್ತ
ಲವ ೮ – ೨೨೯ : ಅಲ್ಪ, ಸ್ವಲ್ಪ
ಲಾವಗೆ ೩ – ೮೫, ೫ – ೧೫ : ಲಾವನ ಹಕ್ಕಿ
ಲಿಂಗಿ ೩ – ೭೮ : ಲಿಂಗಧಾರಿ ಯತಿ
ಲೆಕ್ಕವಲಗೆ ೧೦ – ೧೨೮ : ಲೆಕ್ಕದ ಹಲಗೆ
ಲೆಪ್ಪ ೨ – ೫೧ : ಮೂರ್ತಿ
ಲೋಗರ್ ೪ – ೮೩ : (ಜೈನರಲ್ಲದ) ಸಾಮಾನ್ಯರು
ಲೋಹಬಂಧನ ೧೫ – ೧೦೦ : ಸಂಕೋಲೆ
ಲೌಲ್ಯ ೬ – ೧೧ : ಚಪಲಸ್ವಭಾವಿ
ವಕಾರತ್ರಯ ೧೨ – ೩೪ : ನೋಡಿ : ಪು.೨೬೫
ವಜ್ರಲೋಭಿ ೪ – ೭೪ : ಮಹಾಕೃಪಣ
ವನರುಹನಾಭ ೮ – ೧೩೮ : ವಿಷ್ಣು
ವಂದಿ ೮ – ೧೨೧ : ಸ್ತುತಿಪಾಠಕ
ವರ್ಮ ೯ – ೪೯ : ತೊಗಟೆ
ವಂಶಾವಳೀವನ ೧ – ೫ : ಬಿದಿರುಕಾಡು
ವಸ ೪ – ೯೨ : ವಶ
ವಸಿ(ಗ) ೭ – ೩೪ : ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿದವನು, ವಶಿ
ವಸುಧಾರೆ ೮ – ೧೨೭ : ಹೋಮಕ್ಕೆ ತುಪ್ಪವನ್ನೆರೆಯುವ ಪಾತ್ರೆ; ಧಾರಾಪಾತ್ರೆ (?)
ವಳಕ್ಷಾಂಗ ೮ – ೫೭ : ಬಿಳಿಯ ಮೈಯವನು
ವಾಜವಶ್ಯವಯಃಸ್ತಂಭ ೧೨ – ೪೦ ವಾಜೀಕರಣ (ಕಾಮೋದ್ದೀಪನ),
ವಶೀಕರಣ (ವಶಮಾಡಿಕೊಳ್ಳುವುದು)
ವಯಸ್ ಸ್ತಂಭನ (ತಾರುಣ್ಯ ಹೋಗದಂತೆ ತಡೆಯುವುದು)
ವಾಯಸ ೧೩ – ೫೧ : ಕಾಗೆ
ವಾರಿಜಭವ ೧೦ – ೬೬ : ಬ್ರಹ್ಮ
ವಾರ್ಬಿಂದು ೭ – ೫ : ನೀರಿನ ಹನಿ
ವಿಕಲ್ಪ ೬ – ೨೦ : ಪರ‍್ಯಾಯ, ಭೇದ
ವಿಘ್ನಸಹ ೫ – ೧೦ : ಕಷ್ಟಗಳನ್ನು ತಾಳಿಕೊಳ್ಳುವವನು
ವಿಟೀಜನ ೯ – ೨೦ : ಗಣಿಕೆಯರು
ವಿಡಂಬ ೧೪ – ೪೮ : ಅಣಕ, ವಿಪರೀತ
ವಿತ್ತ ೬ – ೮೦ : ಹಣ, ಸಂಪತ್ತು
ವಿತ್ರಸ್ತದುರಿತ : ಪಾಪಕ್ಕೆ ಅಂಜಿದವನು
ವಿದ್ಧ ೨ – ೮ : ಚಿತ್ರ, ಶಿಲ್ಪ, ಆಕೃತಿ
ವಿಧುಕರ ೫ – ೩೯ : ಚಂದ್ರ
ವಿನೇಯಕೋಟಿ ೩ – ೯೯ : ಜೈನಶ್ರದ್ಧೆಯ ಅಸಂಖ್ಯಜನ
ವಿರತಿ ೮ – ೩೫ : ವಿರಕ್ತೆ (?)
ವಿಸರುಹಭವ ೮ – ೧೩೦ : ಬ್ರಹ್ಮ
ವೀರ್ಯಕ್ಷರಣ ೮ – ೧೩೧ : ವೀರ‍್ಯಸ್ಖಲನ
ವೀಸ ೫ – ೧೦೦ : ಕನಿಷ್ಠಬೆಲೆಯ ಕಾಸು
ವೃಥೆ ೧೧ – ೧೨೧ : ವ್ಯರ್ಥ
ವೃಂದ ೫ – ೧೪೯ : ಪರಿವಾರ, ಸಂಸಾರದ ಜನ
ವೆಚ್ಚಿಸು ೪ – ೭೪ : ಖರ್ಚುಮಾಡು
ವೇಳೆತನಂಗೊಳ್ ೮ – ೧೪೨ : ಒಡೆಯ ಸತ್ತರೆ ತಾನೂ ಸಾಯುವುದಾಗಿ ಅವನ ಬಂಟ ಕೈಕೊಳ್ಳುವ ಪ್ರತಿಜ್ಞೆ ಸ್ವೀಕರಿಸು
ವೈಶ್ವಾನರ ೯ – ೪ : ಅಗ್ನಿ
ವ್ಯಂತರ ೫ – ೯೬ : ನಾಲ್ಕು ಬಗೆಯ ದೇವತೆಗಳಲ್ಲಿ ಒಂದು ಗುಂಪು
ವ್ಯಾಜಿಸು ೧೨ – ೧೧ : ಮೋಸಮಾಡು
ಶಂಕರ ೮ – ೯೨ : ಶಿವ, ಮಂಗಳಪ್ರದ
ಶಬ ೧೦ – ೧೩೦ : ಶವ
ಶರ ೩ – ೭೧ : ನೀರು
ಶಲ್ಯ ೬ – ೧೧, ೯ – ೩೩, ೧೪ – ೪೮ : ಅಸ್ಥಿ, ಮೂಳೆ, ಎಲುಬು
ಶಲ್ಯಧರ ೮ – ೧೦೨ : ಎಲುಬುಗಳನ್ನು ತೊಟ್ಟವನು, ಶಿವ
ಶಲ್ಯಮಂಡನಕಾರಿ ೮ – ೩೮ : ಮೂಳೆಗಳ ಅಲಂಕಾರವಾದವನು, ಶಿವ
ಶಾಕಟಿಕ ೧೦ – ೧೨೦ : ಗಾಡಿ, ಬಂಡಿ
ಶಾಪಿಸು ೮ – ೧೨೫ : ಶಾಪ ಕೊಡು
ಶಾಲಗ್ರಾಮ ೮ – ೧೪೮ : ಸಾಲಿಗ್ರಾಮ
ಶಾಸನದೇವತೆ ೨ – ೭೪, ೫ – ೧೦೦ : ಜೈನ ದೇವತಾವರ್ಗ
ಶಿಕ್ಷೆಗೊಳಿಸು ೭ – ೪೩ : ತಿಳಿಯ ಹೇಳು, ಕಲಿಸು
ಶಿಖಂಡಿ ೮ – ೫೭ : ಅರ್ಧನಾರೀಶ್ವರ
ಶಿಖಿ ೮ – ೧೦೯ : ಅಗ್ನಿ
ಶಿವಗತಿ ೧೫ – ೭೨ : ಮೋಕ್ಷ
ಶಿವಗೋಪುರ ೮ – ೭೮ : ಶಿವ ದೇವಾಲಯದ ಹೆಬ್ಬಾಗಿಲು
ಶಿವಸಮಯ ೧೦ – ೫೯ : ಶೈವಧರ್ಮ
ಶಿವಸೌಖ್ಯ ೩ – ೨ : ಮೋಕ್ಷ ಸುಖ
ಶೌಚ ೬ – ೨ : ನೈತಿಕಶುದ್ಧತೆ
ಶ್ರಾವಕ ೬ – ೮೯ : ಜೈನಗೃಹಸ್ಥ
ಶ್ರಾವಕತನ ೧೩ – ೧೧ : ಜೈನ ಗೃಹಸ್ಥ ಧರ್ಮ
ಶ್ವಪಚ ೧೧ – ೯೪, ೧೪ – ೫೧, ೧೫ – ೫ : ಚಾಂಡಾಲ
ಶ್ವಪಾಕ ೧೪ – ೧೦೦ : ನಾಯಿಮಾಂಸದ ಅಡಿಗೆ
ಶ್ವೇತಕೃಷ್ಣಕಾರಕ ೧೩ – ೩೦ : ಬಿಳಿದನ್ನು ಕಪ್ಪು ಎಂದು ಮಾಡುವವನು, ಮೋಸಗಾರ, ವಂಚಕ
ಷಡಾಯತನ ೪ – ೧೧೯ : ಪಂಚೇಂದ್ರಿಯಗಳು ಮತ್ತು ಮನಸ್ಸು
ಸಂಕಿಸು ೧೪ – ೭ : ಶಂಕೆಪಡು
ಸಖಿ ೫ – ೪ : ಗೆಳೆಯ, ಮಿತ್ರ
ಸಗಣ ೫ – ೯೨ : ಸಗಣಿ
ಸಗರ್ಭ ೧೦ – ೪೩ : ರಹಸ್ಯವಾಗಿ ಏನೋ ಹೇಳು
ಸಂಗಡಿ ೧೫ – ೯೭ : ಜೊತೆಗಾರ, ಒಡನಾಡಿ
ಸಂಘಾತ ೭ – ೨೧ : ಸಮೂಹ
ಸಂಜೆಮೀಹ ೧೩ – ೨೫ : ಸಂಧ್ಯಾಕಾಲದ ಸ್ನಾನ
ಸಂಜೆವಾಸ ೧೫ – ೨೪ : ಸಂಧ್ಯಾವಂದನೆ
ಸಂಜೆವಾಸು ೧೧ – ೯೦, ೧೪ – ೨೪ : ಸಂಧ್ಯಾವಂದನೆಮಾಡು
ಸಣಂಗಿ ೧೪ – ೨೬ : ಷಡಂಗಿ, ವೇದದ ಆರು ಅಂಗಗಳನ್ನೂ ಬಲ್ಲವನು
ಸತ ೩ – ೫೫ : ಕಂದು, ನಲುಗಿಹೋಗು (ಸಂ.ಕ್ಷತ)
ಸಂತೊಸ ೧ – ೫೩ : ಸಂತೋಷ
ಸಂದೆಗ ೧೧ – ೧೬೧ : ಸಂದೇಹ
ಸಂದೆಯ ೧ – ೮೭, ೭ – ೩೮ : ಸಂದೇಹ
ಸಮಕಟ್ಟು ೧೨ – ೨೧ : ಗೊತ್ತುಮಾಡು, ವಿಧಿಸು
ಸಮನಿಸು ೩ – ೪೯ : ಉಂಟಾಗು, ಪ್ರಾಪ್ತವಾಗು
ಸಮಂತು ೧೫ – ೩೭ : ಚೆನ್ನಾಗಿ
ಸಮಯಿ ೪ – ೪೯, ೮೭ : ಜೈನ ಧರ್ಮಾನುಯಾಯಿ
ಸಮಱು ೬ – ೮೫ : ತಿದ್ದಿಕೊಳ್ಳು, ಸರಿಪಡಿಸಿಕೊಳ್ಳು
ಸಮಾಚರಿಸು ೧೪ – ೭೭ : ಚೆನ್ನಾಗಿ ಆಚರಿಸು
ಸಮುತ್ತಾರಣ ೩ – ೪೮ : ದಾಟಿಸುವುದು, ಪಾರುಮಾಡುವುದು
ಸಮ ೧೦ – ೧೧ : ನಿರ‍್ಮಿಸು, ರಕ್ಷಿಸು
ಸಂಬಳದ ದಾಯ ೧೦ – ೮೦ : ಪ್ರತಿಫಲದ ಭಾಗ, ಕಾಣಿಕೆಯ ಸಲ್ಲಿಕೆ
ಸಮ್ಮಗಾಱ ೯ – ೬೫ : ಚರ್ಮಗಾರ
ಸಮ್ಮಗಾಱವೆಸ ೬ – ೧೭ : ಚರ್ಮಕಾರನ ಕೆಲಸ
ಸಯ್ತು ೯ – ೧೧೯, ೧೧ – ೧೫೩ : ಸರಿ, ಯೋಗ್ಯ, ಸಮರ್ಪಕ, ೧೨ – ೧೫ : ನೇರವಾಗಿ
ಸರಧಿ ೧೦ – ೮೫ : ಸಮುದ್ರ
ಸರಸಿಜಮಿತ್ರ ೮ – ೧೦೯ : ಸೂಸ
ಸರುಗ ೨ – ೬೯ : ಚರು, ಅನ್ನ; ೯ – ೪೧ : ಹೊಲ ಗದ್ದೆಗಳಲ್ಲಿ ಪೈರು ಬೆಳೆದಾಗ ರೈತರು ಭೂಮಿತಾಯಿಗೆ ನೈವೇದ್ಯವೆಂದು ಕ್ಷೇತ್ರದ ತುಂಬ ಚೆಲ್ಲುವ ಕಡುಬು ಮುಂತಾದ ಭಕ್ಷ್ಯ; ಹೊಲದೊಳಗೆ ಚೆಲ್ಲುವ ಅನ್ನ, ಚರುಗ
ಸರುಗವಾಡು ೯ – ೭೩ : (ದನಗಳು) ಮೇಯುವುದು, ಮೇಯಲು ಸುಳಿದಾಡು
ಸರುಗಾಡು ೯ – ೬೧, ೬೯ (ದನಗಳು) ಮೇಯುವುದು, ಮೇಯಲು ಸುಳಿದಾಡು
ಸಲುಗೆಗೆಯ್ ೧೪ – ೧೦೧ : ಒಪ್ಪಿಸು
ಸವಣ ೫ – ೯೭ : ಶ್ರವಣ, ಜೈನಮುನಿ
ಸವಳದ ೧೦ – ೧೮೨, ೧೧ – ೫೫, ೧೪ – ೧೨, ೨೪, ೮೦, ೮೧, ಪ್ರಾತಃಕಾಲ, ಬೆಳಗಿನ ಹೊತ್ತು
ಸವಳದೆ ಬೇಳ್ ೮ – ೧೫೩ : ಬೆಳಗಿನ ವೇಳೆ ಅಗ್ನಿಕಾರ‍್ಯವನ್ನು ಮಾಡು
ಸಸಿ ೪ – ೬೦ : ಚಂದ್ರ
ಸಂಸರಣಾಭೋರಾಶಿ ೧೫ – ೫೪ : ಸಂಸಾರ ಸಾಗರ
ಸಂಸ್ಕೃತಿ ೩ – ೨೮ : ಸಂಸಾರ
‘ಸಂಸ್ಕಾರಶತೇನಾಪಿ ನ ಗೂಥಃ ಕುಂಕುಮಾಯತೇ’ ೬ – ೩೨ : ನೂರು ಬಾರಿ ಸಂಸ್ಕಾರ ಮಾಡಿದರೂ ಅಮೇಧ್ಯವು ಕುಂಕುಮಕೇಸರಿ ಎನ್ನಿಸುವುದಿಲ್ಲ.
ಸಾಗು ೧೧ – ೧೩೦, ೧೪ – ೭೯ : ಸಾಯುತ್ತದೆ
ಸಾಧನ ೧೧ – ೭೫ : ಪುರುಷನ ಜನನೇಂದ್ರಿಯ, ಶಿಶ್ನ
ಸಾಧನಸಾಧ್ಯೋ ಧರ್ಮ ೧೧ – ೨೧ ಧರ್ಮ ಸಾಧನಗಳಿಂದ ಸಾಧ್ಯವಾಗುತ್ತದೆ
ಸಾಧನಸೇವನೆ ೧೨ – ೩೭ : ಸಂಭೋಗ
ಸಾಮಿ ೧೨ – ೯ : ಸ್ವಾಮಿ (?)
ಸಾಯಿರ ೯ – ೪೨ : ಸಾವಿರ
ಸಾರ್ ೪ – ೪ : ಕೂಡಿಬರು, ಪ್ರಾಪ್ತವಾಗು
ಸಾರಂಗ ೫ – ೧೩ : ಒಂದು ಜಾತಿಯ ಜಿಂಕೆ
ಸಾರ್ಚು ೫ – ೧೦೩ : ಚಾಚು
ಸಾಲ್ ೧೨ – ೨೫ : ಸಾಲ ಮಾಡು
ಸಾಲಿಗ ೧೨ – ೨೫ : ಸಾಲ ಮಾಡಿದವನು
ಸಾವದ್ಯ ೫ – ೯, ೨೭, ೧೫ – ೩ : ಪಾಪ
ಸಾಸಿಗ ೧೨ – ೩೫, ೧೪ – ೯೭ : ದುಡುಕುವವನು, ಮೂರ್ಖ
ಸಾಸಿಸು ೧೪ – ೧೦೬ : ಶಾಸನಮಾಡು, ವಿಧಿಸು
ಸಿಡಿದಲೆಗೊಡು ೯ – ೧೨೧ : ಬಲಿದಾನವಾಗು
ಸಿತ ೧೦ – ೧೦೭ : ಶುಕ್ರ
ಸಿತಗ ೩ – ೫೫ : ಜಾರ, ಮೋಸಗಾರ, ಲಂಪಟ, ಕಠಿನಸ್ವಭಾವಿ
ಸಿತಮತ ೩ – ೯೩, ೧೦ – ೧೩೬, ೧೧ – ೧೫೩ (?)
ಸಿದ್ದಿಗೆ ೬ – ೨೨, ೧೪ – ೧೫೨, ೧೫ – ೯೭ : ಎಣ್ಣೆ ತುಪ್ಪ ಮೊದಲಾದ ದ್ರವ್ಯ ಪದಾರ್ಥಗಳನ್ನು ತುಂಬುವುದಕ್ಕೆ ಬಳಸುವ ಚರ್ಮದ ಚೀಲ, ಬುದ್ದಲಿ
ಸಿದ್ಧಾಯತನ ೭ – ೬೭ : ಸಿದ್ಧರ ನೆಲೆ, ಜಿನಗೃಹ
ಸಿಂಪಿಣಿ ೨ – ೪೩ : ಸೇಚನ, ಸಿಂಚನ, ಓಕುಳಿ
ಸಿರಿಪರ್ವತ ೧೨ – ೯ : ಶ್ರೀಶೈಲ
ಸೀರ್ ೪ – ೧೩೫ : ಹೇನಿನ ಮೊಟ್ಟೆ
ಸೀರೆ ೮ – ೧೮೭, ೧೧ – ೯೫, ೧೪ – ೨೧ : ವಸ್ತ್ರ
ಸೀವಳಿಗೆ ೯ – ೨೬ : ಒಂದು ಬಗೆಯ ಮೈಲಿಬೇನೆ, ತಟ್ಟು, ಸಿಡುಬು
ಸುಖವಸತಿ ೧೫ – ೮೧ : ಕಷ್ಟಪಡದೆ ಅನುಭವಿಸುವ ನೆಮ್ಮದಿಯ ಜೀವನ ವ್ಯವಸ್ಥೆ
ಸುಗತ ೮ – ೧೮೩ : ೧. ಸರಿಯಾದ ನೆಲೆ ಮುಟ್ಟಿದವನು ೨. ಬುದ್ಧ
ಸುಟ್ಟಿತೋಱು : ಬೊಟ್ಟುಮಾಡಿ ತೋರಿಸು
ಸುಂಟಗೆ ೧೪ – ೮೯ : ಹಸಿಮಾಂಸ
ಸುತ್ತಿ ೬ – ೨೨, ೧೪ – ೪೯ : ಚಿಪ್ಪು, ಓಡು (ಸಂ.ಶುಕ್ತಿ)
ಸುದ್ದ ೧೧ – ೬೨ : ಶುದ್ಧ
ಸುದ್ದಗೆ ೨ – ೧೮ : ವರ್ಣಮಾಲೆ
ಸುದ್ದೈಸು ೬ – ೧೭ : ಶುದ್ಧಗೊಳಿಸು
ಸುದೇಶಿಕ ೧ – ೬೮ : ಶ್ರೇಷ್ಠನಾದ ಆಚಾರ‍್ಯ
ಸುಪರ್ಣೆ ೮ – ೧೮೯ : ಪಾರ್ವತಿ
ಸುಮನೋದಾಮ ೬ – ೩೨ : ಹೂವಿನ ಹಾರ
ಸುರಭಿ ೧೦ – ೧೪೨ : ದೇವಲೋಕದ ಹಸು
ಸುರಸಿಂಧು ೮ – ೫೫ : ದೇವಗಂಗೆ
ಸುರಿಗೆ ೫ – ೬೪, ೧೨ – ೪ : ಕಠಾರಿ
ಸೂಕರ ೮ – ೧೩೭ : ವಿಷ್ಣುವಿನ ವರಾಹಾವತಾರ
ಸೂಡು ೬ – ೩೬, ೮ – ೬೧ : ಧರಿಸು, ಅಳವಡಿಸು
ಸೂನೆಗಾಱ ೧೧ – ೧೦೦, ೧೧ – ೧೨೧, ೧೪ – ೮೭ : ಕಟುಕ, ವಧೆಯನ್ನು ಮಾಡುವವನು
ಸೂನೃತವ್ರತ ೫ – ೩೧ : ಪ್ರಿಯವಾಗಿಯೂ ಸತ್ಯವಾಗಿಯೂ ಇರುವ ಮಾತು ಆಡುವ ವ್ರತ
ಸೂದ ೩ – ೫೧ : ನಾಶಕ, ಕಟುಕ
ಸೂರ‍್ಯಕಾಂತವೈಮಾನ ೧೧ – ೫೪ : ಸೂರ‍್ಯಕಾಂತಶಿಲೆಯ ನಿರ್ಮಾಣವಾದ ದೇವನಿವಾಸ
ಸೂರುಳ್ ೬ – ೧೯ : ಪ್ರತಿಜ್ಞೆ
ಸೂೞ್ಸೂೞೊಳ್ ೮ – ೧೩೮ : ಕ್ರಮಕ್ರಮವಾಗಿ, ಸರದಿಯಂತೆ
ಸೆರಗು ೧೧ – ೧೦೪ : ಭಯ
ಸೇದೆ ೬ – ೭೦ : ಆಯಾಸ
ಸೇದೆಗೆಡು ೩ – ೫೮ : ಆಯಾಸದಿಂದ ಬಳಲು
ಸೇಲೆ ೧೧ – ೧೧೮ : ವಸ್ತ್ರ
ಸೈ ೪ – ೮೮ : ಸತ್ಯವಂತರು, ಬ್ರಾಹ್ಮಣರು
ಸೊಣಕಡಿಕ ೯ – ೯೯ : (?)
ಸೊರೆಮೊಗಂ ೧೩ – ೬೩ : ಸೋರೆಕಾಯಿ ಮುಖದವನು, ಸೊಟ್ಟಮುಖದವನು, ವಿಕೃತಮುಖದವನು
ಸೋಡಲಿವಾಡಲಿ ೧೦ – ೧೯ : ಅಸ್ತವ್ಯಸ್ತ, ಬೇಕಾಬಿಟ್ಟಿ (?)
ಸೋದಿಸು ೬ – ೧೭, ೯೮ : ಶೋಧಿಸು
ಸೋರೆ ೭ – ೪೦ : ಸೋರೆಯ ಬುರುಡೆ
ಸೋರ್ಮುಡಿ ೫ – ೬೫ : ಜೋಲುವ ಹೆರಳು
ಸೌರ ೮ – ೧೬೪ : ಸೂರ‍್ಯರಾಧಕರ
ಪಂಗಡದವನು
ಸೌರಾರಾಧನೆ ೮ – ೧೧೫ : ಸೂರ‍್ಯನ ಆರಾಧನೆ
ಸ್ನಾತಕ ೪ – ೧೩೪ : (?)
ಸ್ಮರಶಾಸನ ೭ – ೭೨ : ಮನ್ಮಥನ ಆಜ್ಞೆ
ಸ್ಯಂದನ ೯ – ೧೯ : ರಥ
ಸ್ವಯಂಭು ೮ – ೨೭ : ತಾನಾಗಿ ಉದ್ಭವಿಸಿದ
ಸ್ವರ್ಣಸ್ತೇಯಿ ೧೧ – ೭೪ : ಚಿನ್ನ ಕದಿಯುವವನು
ಸ್ವೈರಾಚಾರ್ಯ ೮ – ೪೨ : ಸ್ವಚ್ಫಂದವಾಗಿ ನಡೆಯುವ ಯತಿ
ಹಡುಕೆ ೧೧ – ೧೫ : ದುರ್ಗಂಧ, ಅಮೇಧ್ಯ, ಹೇಸಿಗೆ
ಹರಿಕೆ ೩ – ೯೫ : ಪರಿಶೀಲನೆ, ಪರೀಕ್ಷೆ, ವಿಮರ್ಶೆ (ಪರಿಕೆ)
ಹವ್ಯವಹಂ ೧೧ – ೪೦ : ಅಗ್ನಿ
ಹವ್ಯಾಶನ ೧೩ – ೮ : ಅಗ್ನಿ
ಹಸ್ತಿಮೂರ್ಖ ೪ – ೫೮ : ಮಹಾಮೂರ್ಖ, ಶತಮೂರ್ಖ
ಹಾಗ ೫ – ೪೧ : ನಾಲ್ಕನೆಯ ಒಂದು ಭಾಗ
ಹಿಮ ೧೦ – ೧೭೯ : ಹಿಮಾಚಲ
ಹಿಮಾಂಶು ೧೫ – ೧೨ : ತಂಪಾದ ಕಿರಣ
ಹುತವಹ ೮ – ೬೮ : ಅಗ್ನಿ
ಹೂಜೆಗತನ ೭ – ೩೫ : ಅಸೂಯೆ, ಹೊಟ್ಟೆಕಿಚ್ಚು
ಹೇಯ ೭ – ೪೬ : ತಿರಸ್ಕಾರಯೋಗ್ಯ
ಹೈಮನ ೭ – ೫ : ಚಳಿಗಾಲ
ಹೊಂತ ೯ – ೧೨೧ : ಪ್ರತಿಜ್ಞೆ
ಹೊರೆ ೯ – ೮೩ : ಸಮೀಪ
* * *

ವಕಾರತ್ರಯ ೧೨೩೪ : ವೈದಿಕರ ದೇವಕಾರ‍್ಯ, ಪಿತೃಕಾರ‍್ಯ ಮತ್ತು ಮಾನುಷಕಾರ‍್ಯ (ಯಜ್ಞಕರ್ಮ) ಈ ಮೂರು ಕರ್ಮಗಳಲ್ಲಿ ಕ್ರಮವಾಗಿ ಬಳಸುವ ಸ್ವಾಹಾಕಾರ, ಸ್ವಧಾಕಾರ ಮತ್ತು ವಷಟ್ಕಾರಗಳೆಂಬ ಶಬ್ದಗಳಲ್ಲಿಯ ಮೂರು ವಕಾರಗಳು.

ಚಕಾರಚತುಷ್ಕ ೧೦೧೭೬ : ನಾಲ್ಕು ಚಕಾರಗಳು. ವ್ಯಾಸರು ಮತ್ತು ವರರುಚಿ (ಕಾಳಿದಾಸನೆಂದೂ ಪ್ರಚಲಿತವಿದೆ)ಇವರಿಗೆ ಸಂಬಂಧಿಸಿದ್ದು. ಮಹಾಭಾರತದಲ್ಲಿ ಚಕಾರ ಪ್ರಯೋಗದ ಬಳಕೆ ಹೆಚ್ಚು ಎಂಬುದರಿಂದಾಗಿ ವ್ಯಾಸರನ್ನು ಚಕಾರಕುಕ್ಷಿ ಎನ್ನುವ ಪ್ರತೀತಿಯಿದೆ. ಪಾಂಡವರು ದ್ರೌಪದಿ ಇವರ ಕೌಟುಂಬಿಕ ಸಂಬಂಧವನ್ನು ಸೂಚಿಸುವಾಗ ಸಾಂದರ್ಭಿಕವಾಗಿ ಪತಿಯೊಬ್ಬನನ್ನು ಹೊರತುಪಡಿಸಿ ಇತರರನ್ನು ನಕುಲಶ್ಚ, ಸಹದೇವಶ್ಚ ಎಂದು ಮುಂತಾಗಿ ಚಕಾರಸಹಿತ ಹೇಳಲಾಗುತ್ತದೆ. ಇದನ್ನು ವರರುಚಿ ಆಕ್ಷೇಪಿಸುತ್ತ ವ್ಯಾಸನ ಆಕೃತಿಯ ಹೊಟ್ಟೆಗೆ ಬೆರಳಿಟ್ಟು ತೋರಿಸಿದಾಗ ಆ ಬೆರಳು ಅಲ್ಲಿಯೇ ಅಂಟಿಕೊಂಡಿತೆಂದೂ ವ್ಯಾಸೋಕ್ತ ಸವಾಲಿನ ಆಶರೀರವಾಣಿಗೆ, ಬಳಿಕ ವಿಚಾರಮಾಡಿ,

ದ್ರೌಪದ್ಯಾಃ ಪಾಂಡುತನಯಾಃ
ಪತಿಧೇವರಭಾವಕಾಃ
ನ ದೇವರೋ ಧರ್ಮರಾಜಃ
ಸಹದೇವೋ ನ ಭಾವಕಃ ||

(ಪಾಂಡವಿನ ಎಲ್ಲ ಮಕ್ಕಳೂ ದ್ರೌಪದಿಗೆ ಗಂಡಂದಿರು, ಮಯ್ದಂದಿರು, ಭಾವಂದಿರು ಆದರೆ ಧರ್ಮರಾಜ ಮಯ್ದುನನಲ್ಲ, ಸಹದೇವ ಭಾವನಲ್ಲ) ಎಂದು ಉತ್ತರ ಹೇಳಿದೆ ಮೇಲೆ ಬಿಟ್ಟಿತೆಂದೂ ಆ ಪ್ರತೀತಿಯ ವಿವರಣೆಯಾಗಿದೆ. ಈ ಪ್ರತೀತಿಯ ಮೂಲ ತಿಳಿಯಬೇಕಾಗಿದೆ.