ಪಡು ೧೪ – ೧೦೬ : ಮಲಗು, ಕೂಡು
ಪಡುಕೆ ೯ – ೬೪, ೧೪ – ೯೮ : ಹೊಲಸು, ಹೇಸಿಗೆ
ಪಡೆಮಾತು ೨ – ೬೦, ೪ – ೭೫ : ಜನೋಕ್ತಿ, ಜನಪ್ರವಾದ
ಪಣ್ಣು ೧೦ – ೧೬೮ : ಮಾಡು
ಪತ್ತಿಸು ೫ – ೫೦, ೬ – ೮೬ : ಉಂಟುಮಾಡು; ೭ – ೩೦ : ಮನವರಿಕೆ ಮಾಡು; ೭ – ೩೩ : ಅಂಕೆಗೆ ತರು, ವಶಕ್ಕೆ ಬರುವಂತೆ ಮಾಡು
ಪತ್ತು ೮ – ೯೬ : ಸೇರು, ಕೂಡು; ೧೦ – ೧೭೬ : ಹತ್ತು, ಅಂಟಿಕೊಳ್ಳು; ೧೩ – ೩೭ : ಸಹವಾಸಮಾಡು
ಪದ ೨ – ೩೧, ೬ – ೪೩ : ಸಂದರ್ಭ
ಪದಪು ೪ – ೫೪, ೧೫ – ೧೧೨ : ಪ್ರೀತಿ, ಸಂತೋಷ, ಭಕ್ತಿ, ಶ್ರದ್ಧೆ
ಪದವಡು ೭ – ೬೬ : ಹದವನ್ನು ತಿಳಿ, ಸಂದರ್ಭವನ್ನು ತಿಳಿ
ಪದುಳಿದನ್ ೧೧ – ೧೫೬ : ಹಿತನಾದವನು, ಯೋಗ್ಯ, ಎಚ್ಚರವುಳ್ಳವನು
ಪದೆ ೫ – ೫೫ : ಪ್ರೀತಿಸು
ಪದೋತ್ಥ ೧೦ – ೧೧೨ : ಕಾಲಿಂದೆದ್ದ
ಪಂದೆ ೧೧ – ೧೫೮ : ಹೇಡಿ
ಪೆಂದೊಗಲ್ ೬ – ೧೫ : ಹಸಿ ಚರ್ಮ, ಹಸಿಚರ್ಮದ ಚೀಲ
ಪಂಬಲ್ ೧೪ – ೩೬ : ಹಂಬು
ಪಯನ್ ೪ – ೪೬, ೯ – ೧೧೬ : ಹೈನು, ಹಾಲು ಕೊಡುವ ಹಸು
ಪರಕೆಗುಡು ೫ – ೧೧ : ಹರಕೆ ಒಪ್ಪಿಸು, ಸಲ್ಲಿಸು
ಪರಗು ೨ – ೧೧, ೫ – ೧೭, ೮ – ೭೭ : ಹರಗು, ಭೂಮಿಯನ್ನು ಕುಂಟೆಯಿಂದ ಹರಗಿ ಹೊಡೆಯುವುದು
ಪರತ್ರೆ ೧ – ೧೦೮, ೫ – ೩೪, ೬ – ೫ : ಪರಲೋಕ
ಪರದಾರಾಭಿಗಮನ ೫ – ೩೦ : ಅನ್ಯಸ್ತ್ರೀ ಸಂಗ
ಪರದುಗೆಯ್ ೫ – ೪೭ : ವ್ಯಾಪಾರಮಾಡು
ಪರಪರಿವಾದ ೫ – ೩೩ : ಪರರ ನಿಂದೆ, ಇನ್ನೊಬ್ಬರ ಬಗ್ಗೆ ದೂರುವುದು
ಪರಮಾರ್ಥ ೫ – ೪೩, ೬ – ೨೪ : ನಿಶ್ಚಯ, ಸತ್ಯ
ಪರಲಿಂಗಿ ೪ – ೧೩೪, ೧೪ – ೨ : ಅನ್ಯಧರ್ಮೀಯ
ಪರಾಶರತನೂಜ ೧೦ – ೧೭೬ : ವ್ಯಾಸ
ಪರಿಚ್ಫೇದಿ ೧ – ೨೭ : ನಿಶ್ಚಯ ಬುದ್ಧಿಯುಳ್ಳವನು
ಪರಿಣಯನ ೧ – ೧೧೮ : ಮದುವೆ
ಪರೀಷಹ ೬ – ೭೪ : ಕಷ್ಟ, ತೊಂದರೆ
ಪರೆ ೧ – ೧೪೦ : ಚದುರು; ೭ – ೫ ಹರಡು, ವ್ಯಾಪಿಸು, ೧೦ – ೭೫ : ಕಾಣದಾಗು, ಚದುರಿಹೋಗು
ಪರೆಪು ೧೫ – ೩೪ : ಹರಹು, ವಿಸ್ತಾರ
ಪರೇತವನ ೮ – ೩೭ : ಪ್ರೇತವನ, ಶ್ಮಶಾನ
ಪರೋಪತಾಪಿ ೧ – ೮೮ : ಅನ್ಯರಿಗೆ ಕಾಟ ಕೊಡುವವನು
ಪರ್ಚುಣ್ ೧೦ – ೧೮೦ : ಹಂಚಿ ತಿನ್ನು
ಪರ್ಯಾಯ ೧೦ – ೫೦ : ಅನುಕ್ರಮ, ಸರದಿ
ಪಱಗುತನ ೧೩ – ೫೮ : ದೋಷೋದ್ಘಾಟನ ಮಾಡುವಿಕೆ, ಕೆದಕುವ ಬುದ್ಧಿ (?)
ಪಱಿ ೮ – ೮ : ಕತ್ತರಿಸಿ ಹೋಗು
ಪಱಿಕ ೯ – ೯೮ : (?)
ಪಱಯೆ ತಿನ್ ೧೨ – ೪೦ : ಹರಿದು ತಿನ್ನು
ಪಱಿವಾಯಂ ೬ – ೧೦೬ : ಹರಕುಬಾಯಿ ಉಳ್ಳವನು, ಒಡಕುಬಾಯಿಯವನು, ಗುಟ್ಟು ಉಳಿಸಿಕೊಳ್ಳಲಾರದವನು
ಪಱೆ ೧ – ೧೧೮, ೯ – ೯೪, ೧೩೧ : ತಮಟೆ, ಹರೆ, ಮಂಗಳವಾದ್ಯ
ಪಲ ೧೫ – ೩೬ : ಮೂರು ತೊಲ ಅಥವಾ ಮೂರು ರೂಪಾಯಿ ತೂಕ
ಪಲಾಶ ೧೧ – ೧೧೧ : ಮಾಂಸವನ್ನು ತಿನ್ನುವವನು
ಪಲವಾಡು ೫ – ೯೩ : ಏನೇನೋ ಮಾತಾಡು, ಬಹಳ ಮಾತಾಡು
ಪಲ್ಗಳೆ ೯ – ೮೧ : ಹಲ್ಲು ಕಿತ್ತುಹಾಕು
ಪಲುಂಬು ೬ – ೧೦೯ : ಹಲುಬು, ಗೋಳಾಡು
ಪಲ್ಲಂ ಸುಲಿ ೧೩ – ೩೨, ೧೪ – ೧೧೧ : ಹಲ್ಲುಜ್ಜಿ ಶುಭ್ರಗೊಳಿಸು
ಪವಣ್ ೮ – ೫ : ಪ್ರಮಾಣ
ಪವಿತ್ರ ೧೦ – ೯೧ : ೧. ಪೂಜ್ಯವಾದುದು ೨. ವೈದಿಕರು ಬೆರಳಲ್ಲಿ ಧರಿಸುವ ದರ್ಭೆಯುಂಗುರ
ಪಶುಕರ್ಮ ೧೧ – ೧೦೫; ೧೪ – ೧೨೭ : ೧. ಪಶುಬಲಿ ಕೊಡುವ ಯಜ್ಞ : ಪಶುಬಲಿ ೨. ಪಾಶವೀಕೃತ್ಯ
ಪಶುಕಲ್ಪ ೯ – ೭೦ : ಹಸುವಿನಂತೆ ಏನೂ ತಿಳಿಯದವನು
ಪಸಕಾಲ ೯ – ೧೦೫ : ಬರಗಾಲ
ಪಸು ೯ – ೧೧೬ : ಪ್ರಾಣಿ
ಪಸುರ್ವಂದರ್ ೧ – ೧೧೮ : ಹಸಿರುವಾಣಿ ಚಪ್ಪರ
ಪಸೆ ೧ – ೧೧೮, ೮ – ೧೪೧ : ಹಸೆ, ಹಾಸಿಗೆ
ಪೞಿ ೫ – ೭೪, ೬ – ೨ : ನಿಂದೆ, ಅಪಮಾನ
ಪಾಗ ೧೪ – ೨೯ : ಹಾಗ, ಕಾಲಾಣೆ
ಪಾಟಿಸು ೧೪ – ೧೧ : ಬಯಸು
ಪಾಂಡುರೋಗ ೧೦ – ೭೭ : ಕಾಮಾಲೆ ರೋಗ
ಪಾಣ್ಬ ೫ – ೫೪ : ಜಾರ, ವ್ಯಭಿಚಾರಿ
ಪಾತ್ರದಾನ ೭ – ೪೭ : ಬೋಗ್ಯನಿಗೆ ಕೊಟ್ಟ ದಾನ
ಪಾದರ ೧ – ೮೩, ೧೧ – ೩೪, ೧೪ – ೩೬ : ಹಾದರ, ವ್ಯಭಿಚಾರ
ಪಾದರಕ್ಕೆ ೬ – ೧೬೨, ೧೪ – ೧೫೪ : ಪಾದರಕ್ಷೆ
ಪಾದರವಾಡು ೮ – ೫೩ : ಹಾದರ ಮಾಡು
ಪಾದರಿಗೆ ೫ – ೭೧ : ಹಾದರಗಿತ್ತಿ
ಪಾರಂಗಮ ೧ – ೫೩ : ದಾಟುವವನು
ಪಾರುವ ೫ – ೯೪ : ಬ್ರಾಹ್ಮಣ
ಪಾರ್ಥಿವಲಿಂಗ ೯ – ೧೪ : ಕಲ್ಲು ಮಣ್ಣು ಮೊದಲಾದ ಭೌತವಸ್ತುಗಳಿಂದ ಮಾಡಿದ ಶಿವಲಿಂಗ
ಪಾರ್ವ ೬ – ೯೧ : ಬ್ರಾಹ್ಮಣ
ಪಾಲ್ಗಲ ೧೪ – ೯೨ : ಹಾಲಿನ ಮಡಕೆ
ಪಾವಕ ೧೧ – ೪೧ : ಅಗ್ನಿ
ಪಾವಡಿಗ ೯ – ೮೧, ೧೦ – ೪೩ : ಹಾವಾಡಿಗ
ಪಾವಸೆ ೩ – ೬೩ : ಪಾಚಿ
ಪಾವುಗೆ ೯ – ೮೪ : ಹಾವುಗೆ, ಪಾದರಕ್ಷೆ
ಪಾವು ತಿನ್ ೧೦ – ೧೩೧ : ಹಾವು ಕಚ್ಚು
ಪಾಸು ೫ – ೫೭ : ಹಾಸಿಗೆ
ಪಾೞ್ ೯ – ೮೨ : ಬಯಲು, ಹಾಳುಬಿದ್ದ ಜಾಗ
ಪಿಕ್ಕಿ ನೋಡು ೩ – ೨೪, ೧೪ – ೩೭ : ಹಿಕ್ಕಿ ನೋಡು, ವಿಮರ್ಶಿಸಿ ನೋಡು
ಪಿಂಗಳನೇತ್ರ ೪ – ೭೮ : ಶಿವ
ಪಿಂಗು ೧ – ೭ : ತಗ್ಗು, ಪರಿಹಾರವಾಗು, ೫ – ೬೭ : ಹಿಂಗು, ಹಿಂದೆ ಸರಿ
ಪಿಡಿ ತೀವು ೭ – ೩೧ : ಬೊಗಸೆ ತುಂಬು
ಪಿತ್ತಳೆ ೬ – ೮೬, ೧೫ – ೧೬ : ಹಿತ್ತಾಳೆ
ಪಿಪೀಲಿಕಾವಳಿ ೧೫ – ೯೬ : ಇರುವೆಗಳ (ಗೆದ್ದಲು) ಸಮೂಹ
ಪಿರಿದುಂ ೪ – ೪೬, ೮೮ : ವಿಶೇಷವಾಗಿ
ಪಿಱಿತಿನಿ ೯ – ೯೮, ೧೧ : (ಹೆಣದ ಮಾಂಸ ತಿನ್ನುವ) ದೆವ್ವ, ಪಿಶಾಚಿ
ಪಿಶಿತಸೇವೆ ೧೧ – ೨೧ : ಮಾಂಸಸೇವನೆ
ಪಿಷ್ಟಪೇಪಣ ೬ – ೩೦ : (ಆಲಂ) ಮಾಡಿದ್ದನ್ನೇ ಮಾಡುವುದು, ವ್ಯರ್ಥವಾದ ಪುನರಾವೃತ್ತಿ
ಪಿೞಿ ೧ – ೧೦೫, ೬ – ೯ : ಹಿಂಡು, ಅರೆ
ಪುಡಿಕೆ ೪ – ೧೨೮ : ಪೊಟ್ಟಣ, ಕಟ್ಟು
ಪುಂಡಾಗು ೧೧ – ೧೫೯ : ಕೇಡಾಗು, ದುಷ್ಟವಾಗು
ಪುಣ್ಯಸ್ತ್ರೀ ೫ – ೭೦ : ಗಣಿಕೆ, ಉಪಪತ್ನಿ
ಪುಣ್ಯಾಂಗನೆ ೬ – ೩೮, ೩೯ : ಗಣಿಕೆ, ಉಪಪತ್ನಿ
ಪುತ್ತು ೫ – ೬೫, ೬ – ೩೪ : ಹುತ್ತ, ಗೂಡು
ಪುದಿ ೬ – ೬೯ : ತುಂಬು, ಆವರಿಸು
ಪುರುಳ್ ೪ – ೩೯, ೫೬ : ಹುರುಳು, ಸತ್ತ್ವ ೫ – ೬೬ : ಸಂಪತ್ತು, ಧನ; ೫ – ೭೯ : ತಿರುಳು, ಸಾರಾಂಶ; ೮ – ೪೩ : ಸತ್ತ್ವ ಅರ್ಥ; ಯೋಗ್ಯತೆ; ೧೦ – ೧೬೯ : ಅರ್ಥ, ಅಭಿಪ್ರಾಯ
ಪುಲ್ ೧೧ – ೯೦ : ದರ್ಭೆಯ ಪವಿತ್ರ
ಪುಲಿಗಿಲ್ ೯ – ೫೮ : ಹೊಂಗೆ
ಪುಲಿದೋಲ್ ೮ – ೬೨ : ಹುಲಿಯ ಚರ್ಮ
ಪುಸಿಯಱಿತ ೬ – ೬೫ : ಮಿಥ್ಯಾಜ್ಞಾನ
ಪುೞುಬೆಱಟಿ ೬ – ೯೯ : ಹುಳುಗಳಿರುವ ಬೆರಣಿ
ಪೂಣ್ಕೆ ೧ – ೨೩ : ಪ್ರತಿಜ್ಞೆ
ಪೂತ ೬ – ೧೦೧ : ಪವಿತ್ರ
ಪೂವಡೆ ೧೦ – ೨೧ : ಹೂವನ್ನು ಪಡೆ
ಪೂವಿನ ಪೊನ್ ೧೦ – ೧೩೧ : ಹೂವಿನ ಆಕೃತಿಯ ಆಭರಣ(?)
ಪೂವಿನ ಬಾಡು ೬ – ೭ : ಹೂವಿನ ತರಕಾರಿ
ಪೂಸು ೧ – ೬, ೨೭ : ಲೇಪಿಸು, ಹುಚ್ಚು; ೯ – ೪೧ : ನೈವೇದ್ಯಮಾಡು, ಆಹುತಿ ಕೊಡು
ಪೂೞ್ ೮ – ೨೬ : ಹೂತುಹೋಗು
ಪೆಡತಲೆ ೬ – ೫೦ : ಹೆಕ್ಕತ್ತು
ಪೆತ್ತಂ ೧೦ – ೩೫ : ಹಡೆದವನು
ಪೆರ್ಗಡೆ ೧೨ – ೧೬ : ಹೆಗ್ಗಡೆ
ಪೆರ್ಚಿಸು ೩ – ೯೯ : ಹೆಚ್ಚಿಸು
ಪೆರ್ಚು ೮ – ೮೦ : ಹೆಚ್ಚು ಅಧಿಕವಾಗು
ಪೆರ್ದೊಱೆ ೧೨ – ೧೫ : ಕೃಷ್ಣಾನದಿ
ಪೆರ್ಮಗ ೯ – ೧೧೦ : ಜ್ಯೇಷ್ಠಪುತ್ರ
ಪೆರ್ಮರೆ ೧೪ – ೧೩೫ : ದೊಡ್ಡ ಗಾತ್ರದ ಜಿಂಕೆ
ಪೆರ್ಮೆತನ ೫ – ೬೫ : ದೊಡ್ಡಸ್ತಿಕೆ
ಪೆರ್ವಡುಕೆ ೬ – ೩೪ : ತೀರ ಹೊಲಸು, ಹೇಸಿಗೆ, ಕೊಳಕು
ಪೆಱಗು ೧ – ೧೩೯ : ಹಿಂದೆ
ಪೆಱಗೆ ೯ – ೬೯ ಹಿಂದೆ ; ೧೧ – ೧೨೬ : ಹೊರಗೆ, ಬಳಿಕ
ಪೆಱಪಿಂಗು ೬ – ೭೭ : ಹಿಂದೆ ಸರಿ
ಪೆಱು ೬ – ೬೯ : ಪಡೆ
ಪೆಱೆ ೮ – ೫೮, ೯ – ೧೬ : ಚಂದ್ರ
ಪೆಸರ್ಗೊಳ್ ೧೩ – ೪೩ : ಹೆಸರು ಪಡೆ, ಹೆಸರಾಗು
ಪೆಳ(ೞ)ವ ೧೦ – ೧೮೮, ೧೧ – ೫೧ : ವಿಕಲಾಂಗ, ಕುಂಟ
ಪೇನ್ ೫ – ೬೫ : ಹೇನು
ಪೇರಡವಿ ೧ – ೧೯ : ದಟ್ಟಡವಿ
ಪೇಸಿಕೆ ೧೪ – ೧೬ : ಹೇಸಿಗೆ, ಜುಗುಪ್ಸೆ
ಪೊಗೞ್ ೮ – ೨೧೮ : ಹೊಗಳಿಕೆ
ಪೊಂಗು ೪ – ೧೦೫, ೫ – ೧೧೬ : ಉಬ್ಬು, ಗರ್ವಿಸು, ಉತ್ಸಾಹಿಸು
ಪೊಚ್ಚಂಬೋಗು ೧೩ – ೫೧ : ದೋಷ ಯುಕ್ತವಾಗು, ಕಳಂಕಿತವಾಗು
ಪೊಚ್ಚಱತನ ೫ – ೩೧ : ಗರ್ವ, ಹೆಮ್ಮೆ, ಶೌರ‍್ಯ, ಕೆಚ್ಚು
ಪೊಡೆವಡು ೪ – ೧೩೭, ೮ – ೧೫೨ : ನಮಸ್ಕರಿಸು
ಪೊಣರ್ ೮ – ೫ : ಹೋರಾಡು
ಪೊಣ್ಮು ೮ – ೨೭ : ಹೊಮ್ಮು
ಪೊತ್ತಗೆ ೭ – ೪೯ : ಆಗಮ ಗ್ರಂಥ
ಪೊದಱು ೪ – ೧೩೦ : ಪೊದೆ
ಪೊದೞ್ ೫ – ೫೭ : ಒಪ್ಪು, ಶೋಭಿಸು; ೬ – ೨ : ಸೇರು, ಕೂಡು, ಅಂಟಿಕೊಳ್ಳು
ಪೊನ್ ೪ – ೧೫೬ : ಚಿನ್ನ
ಪೊಂದು ೧ – ೭೭, ೫ – ೧೧೦, ೮ – ೧೫೬ ಇ : ಸಾಯಿ
ಪೊಂಪುೞ ೬ – ೨ : ಹೆಚ್ಚಳ, ಹಿರಿಮೆ, ಹಿಗ್ಗು
ಪೊಂಬೆಸಂ ೬ – ೧೬ : ಲೋಹದ ಕೆಲಸ, ಲೋಹವಸ್ತು
ಪೊರೆ ೬ – ೩೧; ೧೨ – ೪೪ : ಕೂಡು, ವರ್ತಿಸು
ಪೊರೆಪುಗುಱಿ ೧೧ – ೪೪ : ಸಾಕಿ ಬೆಳಸಿದ ಕುರಿ
ಪೊರ್ಕುೞ ೧೦ – ೪೪ : ಹೊಕ್ಕುಳು
ಪೊರ್ದಿಸು ೪ – ೯೩ : ಕೂಡಿಸು, ಸೇರಿಸು
ಪೊರ್ದು ೧ – ೭೨, ೩ – ೫; ೮ – ೧೦೩ : ಹೊಂದು, ಸೇರು; ೧೧ – ೧೩೦ ಸಮೀಪಿಸಿ ಬರು
ಪೊಱಸು ೩ – ೬೬, ೧೨ – ೪೪ : ಪಾರಿವಾಳದ ಜಾತಿಯ ಒಂದು ಬಗೆಯ ಹಕ್ಕಿ ; ಅಮಂಗಳಸೂಚಕವಾದ ಹಕ್ಕಿ
ಪೊಲ್ ೧೩ – ೧೫ : ಕೆಡುಕು, ಕೆಟ್ಟದ್ದು
ಪೊಲಸು ೧೪ – ೯೨, ೯೩, ೧೦೪ : ಮಾಂಸ
ಪೊಲೆಗಲಸು ೫ – ೯೩, ೯ – ೯೪ : ಹೊಲಸುಮಾಡು, ಹೊಲೆಯನ್ನು ಬೆರಸು
ಪೊಲೆಮಸಗು ೧೦ – ೧೭೭ : ಹೊಲೆತನ ಕೆರಳು, ಹೆಚ್ಚು
ಪೊಲೆವಡು ೮ – ೧೮೭ : ಅಸ್ಪೃಶ್ಯವಾಗು
ಪೊಲೆವನೆ ೧೧ – ೧೧೨ : ಹೊಲೆಯನ ಮನೆ
ಪೊಲ್ಲದು ೪ – ೭, ೭ – ೭೩, ೮ – ೨೨೮, ೯ – ೨೩ : ಕೆಟ್ಟದ್ದು
ಪೊಲ್ಲಾ ೮ – ೪೫ : ತಪ್ಪೇ ?
ಪೊಸತಿಲ್ ೯ – ೮೨ : ಪೊಸ್ತಿಲು
ಪೊಸೆ ೧ – ೧೬ : ಕಾಣಿಸು, ಉಂಟುಮಾಡು
ಪೊಸ್ತಕ ೧೪ – ೪೭ : ಪುಸ್ತಕ
ಪೊೞಲ್ ೧೦ – ೧೪೬ : ಪೊಟ್ಟರೆ
ಪೊೞ್ತು ೧೪ – ೧೫ : ಹೊತ್ತು
ಪೋತ ೭ – ೩೮ : ದೋಣಿ
ಪೋರಿ ೧೦ – ೧೮೭ : ಹೋರಿ
ಪೋರಿಸು ೫ – ೧೫ : ಕಾದಾಡಿಸು
ಪೋಸ ೬ – ೧೦೦ : ಕತ್ತಲಾಗುವುದಕ್ಕೆ ಮುಂಚೆ ಆಹಾರ ಸ್ವೀಕರಿಸುವ ನಿಯಮ
ಪೋೞ್ ೯ – ೮ : ಹೋಳು, ಭಾಗ
ಪ್ರಕೃಷ್ಟ ೭ – ೪೭ : ಅತಿಶಯವಾದ
ಪ್ರಧ್ವಾನ ೧೧ – ೯೬ : ಗಟ್ಟಿಯಾದ ಕೂಗು
ಪ್ರಮಾದವಲಗೆ ೧೩ – ೬೩ : ಜಲ ಪ್ರಮಾಣದಲ್ಲಿ ಅಪಾಯ ಸಂಭವಿಸಿದಾಗ ಬಳಸುವ ಜೀವರಕ್ಷಕವಾದ ಹಲಗೆ
ಪ್ರವಾಹೇ ಮೂತ್ರಿತಮುದವೀಣಂ ೧೪ – ೧೫೮ : ?
ಪ್ರಹಸನಪಾತ್ರ ೪ – ೧೪೪ : ನಾಟಕದೊಳಗಿನ ಪಾತ್ರ
ಪ್ರಹ್ವಪರ ೧ – ೯೬ : ವಿನೀತ, ನಮ್ರ
ಫಣಿಕಟಕ ೨ – ೬೫ : ಶಿವ
ಫಣಿಗಳ್ ೮ – ೧೬೪ : ರಾಹು ಕೇತುಗಳು
ಫಣಿದಷ್ಟ ೧೧ – ೧೫೬ : ಹಾವು ಕಡಿದವನು
ಫಣಿವೈರಿ ೨ – ೬೫ : ಗರುಡ
ಬಗರಗೆ ೫ – ೧೩೬ : ನೀರಿನ ಒರತೆ, ಚಿಲುಮೆ
ಬಗೆವುಗು ೩ – ೩೪ : ಮನಸ್ಸು ತುಂಬು, ಮನಸ್ಸನ್ನು ಆವರಿಸು
ಬಟ್ಟೆಯ ಕಣ್ ೧೨ – ೩ : ದಾರಿಯ ಎದುರು, ಮುಂಭಾಗ
ಬಟ್ಟೆವೋಗು ೧೫ – ೮೨ : ದಾರಿ ನಡೆ
ಬಡದೇಸಿಗ ೪ – ೮೫ : ತೀರ ದಿಕ್ಕಿಲ್ಲದವನು, ಅನಾಥ
ಬಡ್ಡಿಸು ೬ – ೧೦೨ : ಬಡಿಸು
ಬಣ್ಣ ೯ – ೧೦೬ : ವಸ್ತ್ರ
ಬಣ್ಣಸರಂಗೋ ೩ – ೭೬, ೧೪ – ೧೩೩ : ಬಣ್ಣದ ಮಣಿಗಳ ಹಾರ ಪೋಣಿಸು
ಬಂದಿಸು ೧ – ೧೦ : ವಂದಿಸು
ಬಮ್ಮ ೧೦ – ೪೨ : ಬ್ರಹ್ಮ
ಬಯಕ್ಕೆ ೧೨ – ೩೬ : ಬಯಕೆ
ಬಯ್ಕೆ ೨ – ೬೫ : ಅಡಗಿಸಿಟ್ಟುದು
ಬಯ್ಕೆಗೊಳ್ ೧೦ – ೧೪೨ : ಅಡಗಿಕೊಳ್ಳು
ಬಯ್ತ ೫ – ೧೦೨, ೧೦ – ೧೪೩ : ಬಚ್ಚಿಟ್ಟ
ಬರ ೯ – ೧೯ : ವರ
ಬರಿ ೯ – ೧೨೧ : ಪಕ್ಕೆ
ಬರಿಸ ೮ – ೧೩೯ : ವರ್ಷ
ಬರ್ದನ್ ೫ – ೧೫೧ : ಬದುಕಿದವನು, ಜೀವಿಸಿದವನು (ಧಾ. ಬಾೞ)
ಬರ್ದುಕು ೫ – ೨೦, ೯ – ೧೨೧ : ಬದುಕು
ಬರ್ಬರ ೬ – ೩೬ : ಒಂದು ಬಗೆಯ ಸುಗಂಧದ್ರವ್ಯ, ಗೋರೋಚನ
ಬಲಮುಯ್ವು ೬ – ೩೭ : ಬಲಗಡೆಯ ಭುಜಾಗ್ರ, ಹೆಗಲು
ಬಲವೈರಿ ೧೦ – ೯೫ : ಇಂದ್ರ
ಬಲ್ಪು ೭ – ೩೯ : ಗಟ್ಟಿತನ, ದೃಢತೆ
ಬಲ್ಮೆಯೋದು : ೬ – ೭೫ : ಮಹಾವಿದ್ಯೆ, ಕವಿನವಾದ ವಿದ್ಯೆ
ಬಲ್ಲಡಗು ೧೪ – ೯೮ : ದೊಡ್ಡ ಪ್ರಮಾಣದ ಮಾಂಸ
ಬಲ್ಲಹ ೧೩ – ೧೫ : ವಲ್ಲಭ, ಸ್ವಾಮಿ, ಪ್ರಭು
ಬಲ್ಲಾಳ್ ೧೧ – ೧೫೩ : ಸಮರ್ಥ
ಬವರ ೬ – ೪೯ : ಕಾಳೆಗ, ಜಗಳ
ಬಸ ೩ – ೫೦ : ವಶ
ಬಸದಾಗು ೬ – ೫೩ : ತಲ್ಲೀನವಾಗು, ಪರವಶವಾಗು
ಬಸನ ೪ – ೯೨, ೫ – ೧೫, ೫ – ೧೦೨, ೧೦೩ ಇ. ದುರಭ್ಯಾಸ, ಜೂಜು, ವ್ಯಸನ; ೫ – ೭೧ : ವ್ಯಾಮೋಹ
ಬಸನಿ ೪ – ೪೦, ೬ – ೫೨, ೭ – ೩೬ : ದುಶ್ಚಟದವನು; ದ್ಯೂತಾಸಕ್ತ, ವಿಷಯಲೋಲುಪ, ಇಂದ್ರಿಯಾಸಕ್ತ
ಬಸಮಾಗು ೬ – ೬೩ : ವಶವಾಗು
ಬಸುಱು ೫ – ೧೪೯ : (ಆಲಂ) ಹೊಟ್ಟೆಪಾಡು
ಬಹಿತ್ರ ೧೩ – ೬೩ : ತೆಪ್ಪ, ಹರಿಗೋಲು
ಬಹುಳಾಳಾಪ ೪ – ೧೪೪, ೭ – ೫೭ : ಹೆಚ್ಚು ಮಾತಾಡು
ಬಳರಿ ೨ – ೭೪, ೪ – ೧೨೩, ೫ – ೧೯,೧೦೦ : ಒಂದು ಉಗ್ರದೇವತೆಯ ಹೆಸರು
ಬಳರಿತನ ೨ – ೭೦ : ಬಳರಿಯೆಂಬ ಉಗ್ರದೇವತೆಯ ಸ್ವಸ್ವಭಾವ
ಬಳಾರಿ ೫ – ೨೦ : ನೋಡಿ : ಬಳರಿ
ಬಳಿನೀರ್ಗುಡಿ ೬ – ೧೮ : ‘ದಿವ್ಯ’ದ ಅಂಗವಾಗಿ ದೇವತಾವಿಗ್ರಹಕ್ಕೆ ಅಭಿಷೇಕ ಮಾಡಿದ ನೀರು ಕುಡಿಯುವುದು (ನೋಡಿ : ಕೋಶಪಾನ)
ಬೞ್ದುಂ ೧೩ – ೬೪ : ಬದುಕಿಯೂ (ಧಾ. ಬಾೞ)
ಬಾದು ೪ – ೬೬, ೬ – ೯೪, ೧೦ – ೫೬ : ವಾದ, ಚರ್ಚೆ
ಬಾದುಬ್ಬೆ ೯ – ೪೨ : ವನದೇವತೆ, ಒಂದು ಕ್ಷುದ್ರದೇವತೆ
ಬಾದುಮಾಡು ೧೫ – ೧೪ : ವಾದಮಾಡು
ಬಾಂದೊಱೆ ೮ – ೫೮ : ದೇವಗಂಗೆ
ಬಾಯಱೆ ೫ – ೪೨ : ಗೋಳಾಡು, ದುಃಖಿಸು
ಬಾರ್‌ಗುತ್ತ ೬ – ೪೮ : ಪಣವೊಡ್ಡಿ ಆಡುವ ಒಂದು ಬಗೆಯ ಜೂಜು
ಬಾರಿಸು ೨ – ೫೭ : ೧೦ – ೧೨, ೧೧ – ೧೫೩ : ತಡೆ, ನಿವಾರಿಸು
ಬಾರ್ತೆ ೯ – ೫೬ : ಪ್ರಯೋಜನ
ಬಾಸಿಗ ೧ – ೧೧೭, ೯ – ೯೩ : ಹೂವಿನ ದಂಡೆ, ಹೂಹಾರ
ಬಾಸು ೧೪ – ೨೬, ೯೫ : ಮಲವಿಸರ್ಜನೆಮಾಡು
ಬಾಳ್ ೭ – ೧೦ : ಕತ್ತಿ
ಬಾಳ ಬಾಯ್ ೧೫ – ೫೫ : ಕತ್ತಿಯ ಅಲಗು
ಬಾಳವತ್ಸ ೯ – ೬೬ : ಎಳಗರು
ಬಾೞ್ತೆಮಾಡು ೬ – ೩೧ : ಕಾರ‍್ಯ, ಉದ್ಯೋಗ
ಬಾೞ್ಮೊದಲ್ ೫ – ೩೦, ೯೮ : ಬದುಕಿಗೆ ಆಧಾರವಾದ ಬಂಡವಾಳ, ಮೂಲಧನ
ಬಿಚ್ಚರಿಗ ೯ – ೧೦೬ : ಆತುರಗಾರ, ದುಡುಕು, ಸ್ವಭಾವದವನು
ಬಿಣ್ಣಿದನ್ ೧೫ – ೩೫ : ಭಾರವಾದವನು
ಬಿತ್ತರ ೧ – ೧೦ : ವಿಸ್ತಾರ
ಬಿತ್ತರಿಸು ೭ – ೫೦ : ಹಿರಿಮೆಯನ್ನು ನಿರೂಪಿಸು, ಅಭಿವ್ಯಕ್ತಿಗೊಳಿಸು
ಬಿತ್ತು ೬ – ೪೯ : ಬೀಜ
ಬಿದಿರ್ ೧೪ – ೯೪ : ಒದರು, ಝಾಡಿಸು
ಬಿನದ ೧೦ – ೪೯ : ವಿನೋದ
ಬಿಯ ೫ – ೧೦೦, ೧೧೮ : ವೆಚ್ಚ, ವ್ಯಯ
ಬಿಱುತು ೧೪ – ೧೪೬ : ರಭಸದಿಂದ
ಬಿಸ ೬ – ೯ : ತಾವರೆನಾಳ
ಬಿಸವಂದ ೮ – ೧೪, ೧೦ – ೪೮ : ಆಶ್ಚರ‍್ಯ, ಸೋಜಿಗ
ಬೀರ ೧ – ೨೨ : ವೀರ
ಬೀರತಣಿ ೧೨ – ೩ : ಮಡಿದ ವೀರನ ಆತ್ಮಶಾಂತಿಗಾಗಿ ನೀಡುವ ತರ್ಪಣ
ಬೀರನ ಗುಡಿ ೯ – ೯೬ : ಮಡಿದ ವೀರನ ಹೆಸರಿನಲ್ಲಿ ಮಾಡಿದ ಸಾಮಾನ್ಯ ವಾಸ್ತುವಿನ ಗುಡಿ
ಬೀೞ್ ೧೦ – ೮೪ : ನ್ಯೂನತೆ, ಕೊರತೆ
ಬುದ್ಧವಪು ೧೦ – ೬೦ : ಬೌದ್ಧಾವತಾರ
ಬೂತಾಟ ೧೧ – ೧೨ : ಗೊಡ್ಡಾಟ
ಬೂತು ೧೩ – ೨೦ : ಕ್ಷುದ್ರವ್ಯಕ್ತಿ, ಕ್ಷುದ್ರನಾದ ದೂತ
ಬೆಟ್ಟಿತು ೩ – ೨೭ : ಕಠಿನ
ಬೆಟ್ಟು ೧ – ೧೭, ೯ – ೧೩ : ನಾಟಿಸು, ಮೊಳೆಯಿಂದ ಬಡಿ
ಬೆಂದ ಮಗಂದಿರ್ ೧೩ – ೪೦ : ಕೆಟ್ಟುಹೋದ ಮಕ್ಕಳು
ಬೆರಟು ೨ – ೬೫ : ಕಾಲುಗುರಿನಿಂದ ಕೆರೆ
ಬೆಱಟಿ ೯ – ೧೨೩ : ಸಗಣಿ, ಗೋಮಯ
ಬೆಲ್ಲವತ್ತ ೮ – ೧೨ : ಬಿಲ್ವಪತ್ರೆ
ಬೆಲೆವೆಣ್ ೧೪ – ೧೧ : ವೇಶ್ಯೆ
ಬೆವಸಾಯಹೀನ : ವ್ಯವಸಾಯ ಮಾಡದವನು, ಕರ್ತವ್ಯರಹಿತ
ಬೆಸಗೊಳ್ ೭ – ೨೬ : ಪ್ರಶ್ನಿಸು, ಕೇಳು
ಬೆಸಮುಟ್ಟು ೧೨ – ೪ : ಕೆಲಸದ ಉಪಕರಣ
ಬೆಸೆ ೫ – ೧೦೭, ೭ – ೨೬, ೧೪ – ೧೫೦, ೧೫ – ೬ : ಗರ್ವಿಸು, ಅಹಂಕಾರಪಡು
ಬೆಳಲ ೧೧ – ೬೮ : ಬೇಲದ ಮರ
ಬೆಳ್ಳವಾಸಬ್ರತ ೭ – ೫ : ಚಳಿಗಾಲದಲ್ಲಿ ಮೊಳಕಾಲುದ್ದದ ಹರಿಯುವ ನೀರಿನ ನಡುವೆ ನಿಂತುಕೊಳ್ಳುವ, ಹಾಗೆ ನಿಂತು ತಪಸ್ಸು ಮಾಡುವ ಒಂದು ವ್ರತ
ಬೆಳೆಗೆಯ್ ೧ – ೯೦, ೧೫ – ೨ : ಬೆಳೆ ತೆಗೆಯುವ ಹೊಲಗದ್ದೆ
ಬೆಳ್ದೊನ್ ೧೨ – ೧೬ : ಬಿಳಿಯ ತೊನ್ನು
ಬೊಂದಿ ೧೦ – ೮೩ : ದೇಹ, ಶರೀರ
ಬೊಮ್ಮನ ಡೋವಿಗೆ ೧೪ – ೮೫ : ಬ್ರಹ್ಮಕಪಾಲ
ಬೋಧನ್ ೪ – ೮೬ : ಜ್ಞಾನಿ
ಬೋಧಾಕರ ೩ – ೪೨ : ಜ್ಞಾನಿ
ಬೋನ ೬ – ೧೦೦ : ಅಡಿಗೆ
ಬೋವ ೯ – ೬೨ : ಪಲ್ಲಕ್ಕಿ ಹೊರುವವನು
ಬ್ಯಸನಿ ೧೪ – ೪೫ : ದುಶ್ಚಟದವನು, ವ್ಯಸನಿ
ಬ್ಯಾಸ ೧೦ – ೧೫೪ : ವ್ಯಾಸ
ಬ್ರತಿ ೫ – ೧೪೨ : ವ್ರತಿ
ಬ್ರಹ್ಮಘ್ನ ೮ – ೧೨೮, ೧೧ – ೮೦ : ಬ್ರಾಹ್ಮಣನನ್ನು ಹತ್ಯೆಮಾಡಿದವನು
ಭಗವ ೪ – ೧೩೪, ೬ – ೧೩ : ವೈಷ್ಣವ ಸಂನ್ಯಾಸಿ
ಭಗವತಿ ೯ – ೨೩ : ದುರ್ಗೆ, ಚಾಮುಂಡಿ
ಭಂಢ ೫ – ೨೭ : ಪ್ರಯೋಜನವಸ್ತು, ಸರಕು
ಭರ್ತೃಹರಿತ ೫ – ೭೦ : ಗಂಡನಿಲ್ಲದ ಸ್ತ್ರೀ, ವಿಧವೆ
ಭವ ೮ – ೧೨೧ : ಈಶ್ವರ
ಭಾಂಡ ೫ – ೮೫ : ಪಾತ್ರೆ
ಭಾವಜರುಜೆ ೫ – ೭೩ : ಮನ್ಮಥನ ಬಾಧೆ, ಕಾಮಾಸಕ್ತಿ
ಭಾಷಿತ ೩ – ೩೦ : ಮಾತು
ಭುಂಭುಕ ೧ – ೨೧ : ಆಶ್ಚರ‍್ಯಕರ, ಅತಿಶಯ, ವಿಸ್ಮಯ
ಭೂತಬಲಿ ೧೧ – ೯೪ : ದೇವತೆ, ಭೂತದೈವ ಮೊದಲಾದವುಗಳ ತೃಪ್ತಿಗಾಗಿ ನೀಡುವ ಆಹುತಿ, ಬಲಿ
ಭೂದೇವ ೪ – ೧೩೧ : ಬ್ರಾಹ್ಮಣ
ಭೂಮಿಕೆ ೨ – ೬೪ : ತಳಹದಿ, ನೆಲಗಟ್ಟು
ಭೋಷಜ ೫ – ೧೫೩ : ಔಷಧಿ
ಮಕರಾಕರ ೧ – ೧೦ : ಮೊಸಳೆಯ ಮಡು
ಮಖ ೧೪ – ೧೨೯ : ಯಜ್ಞ
ಮಗುೞ್ ೮ – ೨೩, ೧೧ – ೧೧೪ : ಮತ್ತೆ, ಪುನಃ ೮ – ೯೦, ೧೪ – ೧೪೦ : ಸಂತೋಷಿಸು ; ೭ – ೪೨, ೧೫ – ೮೨ : ಹಿಂದಿರುಗು
ಮಂಜುಮಾಡು ೧೦ – ೧೭೨ : ದೃಷ್ಟಿಗೆ ಮಬ್ಬು ಕವಿಸು