(ಮೊದಲಸಂಖ್ಯೆಆಶ್ವಾಸವನ್ನೂಎರಡನೆಯಸಂಖ್ಯೆಪದ್ಯವನ್ನೂಸೂಚಿಸುತ್ತವೆ)

ಅಕ್ಕಟಿಕೆ ೧೪ – ೮೨ : ಉತ್ಕಟವಾದ ಆಸೆ?
ಅಕ್ಕು ೪ – ೩೯ : ಜೀರ್ಣವಾಗು (ಅೞ್ಕು>)
ಅಕ್ಕುಮೆ ೬ – ೭೭ : ಆಗಿಯೇ ಆಗುತ್ತದೆ (ಅಕ್ಕುಂ+ಎ)
ಅಕ್ಷಸೂತ್ರ ೨ – ೭೩ : ಜಪಮಾಲೆ
ಅಕ್ಷೂಣ ೧೫ – ೮೫ : ಕೊರತೆಯಿಲ್ಲದ, ಕಡಿಮೆಯಿಲ್ಲದ
ಅಖಲ್ಯ ೬ – ೧೧ : ಕೈಯಲ್ಲಾಗದವನು, ಅಸಮರ್ಥ, ರೋಗಿ
ಅಗಚರ ೯ – ೬೧ : ಬೆಟ್ಟದಲ್ಲಿ ಸುಳಿದಾಡುವ
ಅಗಧರ ೮ – ೧೬೭ : ವಿಷ್ಣು
ಅಗವಡು ೧೫ – ೧೦೧ : ಒಳಪಡು, ವಶವಾಗು
ಅಗಸುತೆ ೮ – ೫೪ : ಪಾರ್ವತಿ
ಅಗೞ್ ೫ – ೧೭, ೮ – ೨೬ : ಅಗೆ, ಅಗತೆ, ಮಾಡು, ತೋಡು
ಅಗಿ ೧೦ – ೧೪೨ : ಹೆದರು
ಅಗುರ್ವಿಸು ೮ – ೫೩ : ಭಯಗೊಳಿಸು, ದಿಗಿಲುಗೊಳಿಸು, ವಿಜೃಂಭಿಸು
ಅಗುರ್ವು ೧ – ೨೨ : ಭೀಕರತೆ
ಅಗುೞ್ ೮ – ೭೭ : ಅಗಿ, ಅಗತೆಮಾಡು
ಅಗೆಯೆತ್ತು ೮ – ೧೩೩ : ಮೂಲೋತ್ಪಾಟನ ಮಾಡು, ಕಿತ್ತೆಸೆ
ಅಗ್ಗಲಿಸು ೫ – ೭೪ : ಹಿಗ್ಗು, ನಲಿ
ಅಗ್ಗಳ ೫ – ೮೩ : ಹೆಚ್ಚು, ಅಧಿಕವಾದ್ದು
ಅಘ ೧೧ – ೭೯ : ಪಾಪ
ಅಘಹರಣ ೩ – ೩೩ : ಪಾಪನಿವಾರಕ
ಅಘಾರತಿ ೧ – ೯೭ : ಪಾಪವೆಂಬ ಶತ್ರು
ಅಚ್ಚಿಱಿ : ಅಚ್ಚುಹಾಕು, ಅಚ್ಚೊತ್ತು
ಅಚ್ಚು ೯ – ೧೦೬ : ಮೂರ್ತಿ
ಅಜ ೮ – ೧೫೫ : ಹುಟ್ಟು ಇಲ್ಲದವನು
ಅಜಾತ ೮ – ೬೭ : ಹುಟ್ಟು ಇಲ್ಲದವನು
ಅಜಿತಸ್ತುತಿ ೬ – ೩೮ : ಅಜಿತನಾಥನ ಸ್ತುತಿ, ಜಿನಸ್ತುತಿ
ಅಜ್ಜಿ ೫ – ೧೧೩ : ಆರ್ಯಿಕೆ, ಜೈನ ಸಂನ್ಯಾಸಿನಿ
ಅಂಜುಳಿ ೧೧ – ೭೦ : ಬೊಗಸೆ
ಅಡಕಿಲ್ಗೊಳ್ ೧೫ – ೮೩ : ಒಂದರ ಮೇಲೆ ಒಂದರಂತೆ ಪೇರಿಸಿದಂತಿರು
ಅಡಗಿಂಡೆಯಾಡು ೧೩ – ೪೬, ೪೭ : ಮಾಂಸದ ಮುದ್ದೆಗಳನ್ನು ಎಸೆದಾಡು, ಚೆಲ್ಲಾಡು
ಅಡಗು ೧ – ೧೦೮, ೩ – ೮೦, ೬ – ೧೯ : ಮಾಂಸ
ಅಡದಿನ್ ೯ – ೧೧೨ : ಮಾಂಸವನ್ನು (ಅಡಗು+ತಿನ್)
ಅಡಸಿಕೊಯ್ ೯ – ೪೬ : ಒತ್ತಿ ಹಿಡಿದು ಕತ್ತರಿಸು
ಅಡಸು ೭ – ೧೨ : ಉಂಟಾಗು, ಕಾಣಿಸಿಕೊಳ್ಳು : ೧೨ – ೨೬ : ಒತ್ತು, ನಿರ್ಬಂಧಪಡಿಸು
ಅಡಿಮಿಡುಕು ೧೦ – ೨೫ : ಹೆಜ್ಜೆಯನುಲುಗಿಸು, ಹೆಜ್ಜೆಯನ್ನು ಚಲಿಸು
ಅಡುವೇೞ್ ೭ – ೧೨ : ಅಡುಗೆಮಾಡಲು ಹೇಳು
ಅಣಂ ೫ – ೧೦೫, ೮ – ೧೭ : ಸ್ವಲ್ಪ, ಸ್ವಲ್ಪವಾದರೂ
ಅಣಕ ೬ – ೯೨, ೮ – ೧೪೬ : ವಿನೋದ, ನಟನೆ, ಸೋಗು, ಕುಚೋದ್ಯ : ೧೩ – ೩೬ :ತಲೆಹರಟೆ, ಗೊಡ್ಡಾಟ
ಅಣಲ್ ೧೪ – ೯೪ : ಗಂಟಲು
ಅಣ್ಣಲೆ ೧೪ – ೨೬ : (ಆಲಂ) ದೊಡ್ಡ ಮನುಷ್ಯ, ಮಹಾನುಭಾವ
ಅಣುವ ೨ – ೬೫, ೧೦ – ೧೪೬ : ಹನುಮಂತ (ಸಂ. ಹನುಮಾನ್)
ಅಣ್ಮು ೭ – ೬೧, ೧೦ – ೧೭೧ : ಪೌರುಷ ತೋರಿಸು, ಸಾಮರ್ಥ್ಯ ತೋರಿಸು
ಅತಂದ್ರ ೧ – ೨೪ : ಆಲಸ್ಯವಿಲ್ಲದವನು, ಜಾಗರೂಕನಾದವನು
ಅತಃಪರ ೫ – ೨೭ : ಇಲ್ಲಿಂದ ಮುಂದಿನ, ಅಲ್ಲಿಂದತ್ತ
ಅದಟಲೆ ೧ – ೨೨ : ಶೌರ‍್ಯದಿಂದ ಕಾಡು, ಪೀಡಿಸು
ಅದವಂ ೧೧ – ೯೬ : ಅಂಗಹೀನ
ಅಧಃಕರಿಸು ೫ – ೧೪೮ : ಕಳೆ, ಕೀಳುಮಾಡು, ಧಿಕ್ಕರಿಸು
ಅಧನ ೧೩ – ೫೭ : ಬಡವ, ದರಿದ್ರ
ಅಧಿಗಮಸಮ್ಯಕ್ತ್ವ ೪ – ೪ : ಪ್ರಾಪ್ತವಾದ ಜೈನಶ್ರದ್ಧೆ
ಅನಯ ೧೦ – ೧೮೩ : ಅನೀತಿ
ಅನವದ್ಯದಾನ ೭ – ೫೫ : ಕಳಂಕ ರಹಿತವಾದ ದಾನ
ಅನಾಸಿಕ ೧೫ – ೪೭ : ಮೂಗಿಲ್ಲದವನು
ಅನಿಮಿಷ ೮ – ೧೩೭ : ಮೀನು
ಅನಿಶಂ ೧ – ೮೮, ೩ – ೫೧, ೬ – ೫೪ : ಯಾವಾಗಲೂ, ಸದಾ
ಅನುವಶ ೬ – ೮೧ : ಹೇಳಿದಂತೆ ಕೇಳುವವನು
ಅನೂನ ೫ – ೬೮ : ಕೊರತೆಯಿಲ್ಲದ ಹಾಗೆ
ಅಂತು ೯ – ೯೦ : ಕೊನೆ
ಅಂದಚಂದಗೆಡೆ ೧೩ – ೨೦ : ಬಣ್ಣದ ಮಾತಾಡು, ತಳುಕಿನ ಮಾತಾಡು
ಅಂದಿಂತೊಟ್ಟು ೨ – ೩೭ : ಆ ದಿನದಿಂದ ಆರಂಭಿಸಿ
ಅನ್ನಾನಿ ೧೪ – ೩೨ : ಅಜ್ಞಾನಿ (?)
ಅನ್ಯಧನಾಪಹ ೧೧ – ೭೨ : ಪರರ ಸ್ವತ್ತು ಅಪಹರಿಸುವವನು
ಅನ್ಯಸ್ವ ೫ – ೩೦ : ಪರರ ಸ್ವತ್ತು
ಅಪಗತಚೇತೋಭವ ೮ – ೬೬ : ಮದನಹರ
ಅಪದಸ್ಥ ೧೪ – ೧೪ : ೧. ಕಾಲಿಲ್ಲದ್ದು ೨. ಸ್ವಸ್ಥಾನದಲ್ಲಿ ಸ್ಥಿರವಾಗಿ ನಿಲ್ಲದವನು
ಅಪವರ್ಗ ೫ – ೪೦, ೧೦ – ೩೩ : ಮೋಕ್ಷ
ಅಪವರ್ಗಮಾರ್ಗ ೩ – ೯೬ : ಮೋಕ್ಷದ ದಾರಿ
ಅಪಶಬ್ದಕುಕ್ಷಿ ೧೦ – ೧೭೭ : (ಆಲಂ) ಅಶುದ್ಧವಾದ ಶಬ್ದ ಆಡುವವನು
ಅಪಾರಿಪಂಥಿಕ ೧೪ – ೧೧೮ : ತಡೆಯುವವರೇ ಇಲ್ಲದ
ಅಬ್ಜವಿಷ್ಟರ ೭ – ೩ : ಬ್ರಹ್ಮ
ಅಂಬಲಗುಡಿ ೧೦ – ೪೯ : ಸಭಾ ಮಂಟಪದ ಬಾವುಟ (?)
ಅಂಬಿಕಾಜನ ೫ – ೭೦ : ತಾಯಂದಿರು
ಅಂಬಿಕ್ಕು ೧೦ – ೧೬೩ : ಬಾಣ ಬಿಡು
ಅಂಬುಕೊಳ್ ೮ – ೧೫೬ : ಬಾಣ ಚುಚ್ಚಿಕೊಳ್ಳು
ಅಂಬುದಸಮಿತಿ ೧೦ – ೮೫ : ಮೋಡಗಳ ಗುಂಪು
ಅಂಬುನೆಲೆ ೧೦ – ೧೬೩ : ಬಾಣ ಹೂಡುವಷ್ಟು ದೂರದ ಸ್ಥಾನ
ಅಂಬುಳು ೯ – ೨೬ : ಒಂದು ಬಗೆಯ ಹುಣ್ಣು (?)
ಅಭಿಭವಿಸು ೬ – ೩ : ಕಷ್ಟವಾಗಿ ತಿಳಿ, ಸಂಕಟವಾಗಿ ಭಾವಿಸು
ಅಭಿವಿನುತ ೩ – ೪೭ : ಹೊಗಳಲ್ಪಟ್ಟ, ಸ್ತೋತ್ರಕ್ಕೆ ಪಾತ್ರನಾದ
ಅಭ್ಯರ್ಚನೆ ೪ – ೬೯ : ಪೂಜೆ, ಸತ್ಕಾರ
ಅಂಭೋಜನಾಭ ೧೩ – ೪ : ವಿಷ್ಣು
ಅಂಭೋಮಹವನ ೯ – ೮೩ : ತಾವರೆಕೊಳ
ಅಮರಗುರು ೮ – ೧೬೪ : ಗುರುಗ್ರಹ
ಅಮರಾಪಗೆ ೨ – ೫೩ : ದೇವಗಂಗೆ
ಅಮರ್ದಿರ್ ೬ – ೮೫ : ಒಪ್ಪುತ್ತಿರು, ಹೊಂದಿಕೊಂಡಿರು
ಅಮರ್ದು ೧೦ – ೧೦೫ : ಅಮೃತ
ಅಮೃತಾಂಗನೆ ೪ – ೨೫ : ಮೋಕ್ಷವನಿತೆ
ಅಮೇಧ್ಯಭಾಜನ ೫ – ೭೦ : ಕೊಳಕಾದ ಊಟದ ತಟ್ಟೆ ಬಟ್ಟಲು
ಅಯನಯಮಾರ್ಗ ೬ – ೫೪ : ಶುಭಾವಹನಿಧಿ, ಸದ್ವರ್ತನೆ ಮತ್ತು ನ್ಯಾಯ ನೀತಿಗಳ ಹಾದಿ
ಅಯಸ ೧೪ – ೧೨೫ : ಆಯಾಸ
ಅರಸಿಕೆ ೯ – ೧೬ : ರಾಜತ್ವ
ಅರಿ ೫ – ೧೦, ೯ – ೩೯, ೧೦ – ೧೪೭, ೧೪ – ೯೪ : ಕತ್ತರಿಸು, ಕೊಚ್ಚು
ಅರಿದು ೪ – ೬೭, ೧೦ – ೯೫ : ಅಸಾಧ್ಯ, ಅಶಕ್ಯ
ಅರಿಸಿಕೊಳ್ ೫ – ೬೪ : ಕತ್ತರಿಸಿಕೊಳ್ಳು, ಕೊಯ್ಯಿಸಿಕೊಳ್ಳು
ಅರುಹತ್ಸಮಯಿ ೪ – ೬೩ : ಜೈನಧರ್ಮದ ಅನುಯಾಯಿ
ಅರೆ ೧೦ – ೭೪ : ಅರ್ಧ
ಅರೆಗಬ್ಬಿಗ ೧೦ – ೧೮೩ : ಅರ್ಧ ತಿಳಿವಿಕೆಯ, ಅಲ್ಪಸಾಮರ್ಥ್ಯದ ಕವಿ
ಅರೆಬರ್ ೫ – ೧೫೯ : ಕೆಲವರು
ಅರೆಮತ್ತರ್ ೧೦ – ೯೮ : ಭೂಮಿಯ ಒಂದು ಅಳತೆಯಲ್ಲಿ ಅರ್ಧಭಾಗ
ಅರ್ಕಕಾಂತೆ ೨ – ೬೩ : ಸೂರ‍್ಯಕಾಂತ
ಅರ್ಚನಾನೀಕ ೧ – ೧೨೧ : ಪೂಜಾದ್ರವ್ಯಗಳ ಸಂದಣಿ
ಅರ್ಚನೆ ೧೩ – ೪೬ : ಪೂಜಾದ್ರವ್ಯ
ಅರ್ಚನೆಗುಣಿ ೯ – ೯೨ : ಪೂಜೆಯ ಭಾಗವಾಗಿ ನರ್ತಿಸು, ಕುಣಿ
ಅರ್ಚನೆಯಾಡು ೯ – ೯೪ : ಅರ್ಚನೆಯ ವೇಳೆಯಲ್ಲಿ ನರ್ತಿಸು, ಕುಣಿ
ಅರ್ತಿ ೯ – ೮೪ : ಪ್ರೀತಿ
ಅರ್ಥಿ ೧ – ೨೦ : ಯಾಚಕ, ಬೇಡುವವನು
ಅರ್ದಿಸು ೬ – ೧೭ : ಮರ್ದನಮಾಡು, ಮುಳುಗಿಸಿಡು
ಅರ್ದು ೧ – ೧೧೯ : ಮುಳುಗು (ಧಾ ಆೞ್>ಅೞ್ದು>ಅರ್ದು)
ಅರ್ವಿಸು ೧೦ – ೬೯ : ವ್ಯಾಪಿಸು, ಭಯಗೊಳಿಸು
ಅಱ ೪ – ೯೧, ೮ – ೬೩, ೧೫ – ೯ : ಧರ್ಮ
ಅಱಿಕೆ ೫ – ೧೦೮, ೮ – ೧೭೬ : ಪ್ರಸಿದ್ಧಿ
ಅಱಗುಲಿ ೫ – ೩೧, ೪೮, ೧೪ – ೫೨ : ಧರ್ಮದ್ರೋಹಿ
ಅಱಗುಲಿತನ ೧೧ – ೮೪ : ಧರ್ಮದ್ರೋಹಿಯ ವರ್ತನೆ
ಅಱಗುಲಿವೆಂಡಿರ್ ೫ – ೧೦೦, ೧೦೪ : ಧರ್ಮಬಾಹಿರರಾದ ಹೆಂಗುಸರು
ಅಱನಿಱಿವರ್ ೬ – ೧೦೭ : ಧರ್ಮಧ್ವಂಸಕರು
ಅಱಿತ ೪ – ೧೭ : ಜ್ಞಾನ
ಅಱಯಮೆ ೧ – ೧೩೯, ೧೫ – ೯೪ : ಅಜ್ಞಾನ
ಅಱಿವಂ ೩ – ೭ : ಜ್ಞಾನಿ, ವಿವೇಕಿ
ಅಱೆಯಟ್ಟು ೭ – ೧೭ : ಹೊಡೆದಟ್ಟು, ಹಿಡಿಸು
ಅಲಂಪು ೮ – ೬೮ : ಸುಖ, ಉತ್ಕಟವಾದ ಇಚ್ಫೆ, ಸಂಭ್ರಮ
ಅಲೆ ೧ – ೨೨ : ಕಾಡು, ಪೀಡಿಸು; ೭ – ೨೩ : ಸೋಲಿಸು, ನಿವಾರಿಸು
ಅಲೆಪು ೧೫ – ೧೦೭ : ಬೀಸುವಿಕೆ
ಅಲೆವೆಡೆ ೧೪ – ೧೬೩ : ಸಂಚರಿಸುವ ಸ್ಥಳ
ಅವಗ್ರಹ ೬ – ೭೨ : ೧. ಬೇರ್ಪಡಿಸುವುದು, ದೂರಮಾಡುವುದು. ೨. ನಾಲ್ಕು ಬಗೆಯ ಪ್ರತ್ಯಕ್ಷಪ್ರಮಾಣಗಳಿಂದ ಬರುವ ಜ್ಞಾನಗಳಲ್ಲಿ ಒಂದು
ಅವಚಱು ೫ – ೫೭, ೧೪ – ೯೯ : ಬೇಸರ, ಜುಗುಪ್ಸೆ ; ೧೦ – ೧೯೧ ಬೇಸರಿಸು, ಜುಗುಪ್ಸೆಪಡು
ಅವಮೋದರ್ಯ ೪ – ೧೧೨ : ಒಂದು ಬಗೆಯ ಆಹಾರವ್ರತದ ಕ್ರಮ
ಅವಯೋಗ ೪ – ೬ : ಕೆಟ್ಟ ಸನ್ನಿವೇಶ, ಕೆಟ್ಟ ಕಾಲ
ಅವರುದ್ಧ ೭ – ೩ : ಅಡ್ಡಿ, ಪ್ರತಿಬಂಧ
ಅವಯವ ೪ – ೯೨, ೫ – ೫೦, ೮ – ೧೫೩, ೧೨ – ೨೯ : ಸೌಲಭ್ಯ, ನಿರಾಯಾಸ, ಸುಲಭ, ಸಲೀಸು
ಅವಾಪ್ತಿ ೨ – ೮೭ : ಪ್ರಾಪ್ತಿ, ಲಾಭ
ಅವುೞ್ ೧೨ – ೫ : ಅಗುಳು
ಅಶನ ೧ – ೨೩ : ಆಹಾರ, ಉಣಿಸು
ಅಶೇಷಭವ್ಯ ೮ – ೧ : ಸಮಸ್ತ ಜೈನ ಧರ್ಮಾನುಯಾಯಿಗಳು
ಅಸಗ ೧೧ – ೬೫ : ಅಗಸ
ಅಸತಿ ೧೧ – ೩೬ : ಜಾರೆ
ಅಸತೀಸಂಗ ೫ – ೬೩ : ಜಾರೆಯ ಸಹವಾಸ
ಅಸಿಧಾರಾವ್ರತ ೭ – ೨೫ : ಕತ್ತಿಯಲಗಿನ ಮೇಲೆ ಹೆಜ್ಜೆಯಿಟ್ಟು ನಡೆಯುವಂತೆ (ಅಥವಾ ಕುಳ್ಳಿರುವಂತೆ) ಆಚರಿಸಲು ಬಲು ಕಷ್ಟವಾದ ಒಂದು ವ್ರತ
ಅಸಿಲತೆ ೫ – ೬೪ : ಬಳ್ಳಿಯಂತೆ ಬಳುಕುವ ಕತ್ತಿ
ಅಸು ೧ – ೨೮, ೬ – ೧೧೩ : ಪ್ರಾಣ
ಅಸುಗತಿ ೫ – ೧೦೨, ೧೧ – ೨೨ : ದುರ್ಗತಿ
ಅಸುಜನ ೧೧ – ೬೩ : (?)
ಅಸುವೆ ೯ – ೮೨ : ಅಸಿಗಲ್ಲು, ಸಾಂಬಾರ ಪದಾರ್ಥಗಳನ್ನರೆಯುವ ಕಲ್ಲು
ಅಸೇವ್ಯವಿಮೋಹನ ೧ – ೮೩ : ಪರಿಗ್ರಹದಕಾಂಕ್ಷೆ (?)
ಅಹಮಹಮಿಕೆ ೪ – ೧೦೭ : ನಾನು ಮುಂದು ತಾನು ಮುಂದು ಎಂದು ಸ್ಪರ್ಧೆ, ಅಹಂಕಾರ
ಅಹಿ ೩ – ೭೭ : ಹಾವು
ಅಳವಿ ೧೦ – ೮೦ : ಸಾಮರ್ಥ್ಯ, ಯೋಗ್ಯತೆ
ಅಳವು ೨ – ೧೯ : ಶಕ್ಯತೆ, ಸಾಧ್ಯತೆ
ಅಳಿಕ ೧೩ – ೫೬ : ಸುಳ್ಳುಗಾರ, ಮಿಥ್ಯಾವಾದಿ (?) (<ಅಳೀಕ?)
ಅಳಿಪ ೧೨ – ೨೦ : ಆಸೆಗಾರ
ಅಳಿಪು ೪ – ೨೩, ೫ – ೩೦, ೫ – ೪೮, ೭ – ೧೭ : ಆಸೆ, ಮೋಹ
ಅಳ್ಕು ೧ – ೧೭ : ಹೆದರು, ಭಯಪಡು
ಅಳ್ಕುಱು ೭ – ೪ : ಭಯಭೀತವಾಗು
ಅಳೆ ೧೫ – ೫೦ : ಮಜ್ಜಿಗೆ
ಅೞಲ್ ೧೦ – ೨೮ : ಕೊರಗು, ದುಃಖಿಸು
ಅೞಿತೊರೆ ೧ – ೧೧೪ : ಸಾಮಾನ್ಯವಾದ ಹೊಳೆ
ಅೞಿದೋಲ್ ೬ – ೩೪ : ಕ್ಷಯಿಸುವ ಚರ್ಮ
ಅೞಿಮೋಹ ೫ – ೨೦ : ಕ್ಷುದ್ರವಾದ ವ್ಯಾಮೋಹ
ಅೞಿಯೊಡಲ್ ೧೫ – ೯೫ : ಅಳಿಯುವ ದೇಹ
ಅೞಿವೆಜ್ಜ ೧ – ೧೧೩ : ಅಲ್ಪನಾದ ವೈದ್ಯ
ಅೞ್ತಿ ೧ – ೬, ೫೯, ೯ – ೯ : ಪ್ರೀತಿ, ಆಸಕ್ತಿ, ಆದರಭಾವ; ೫ – ೩೩, ೬ – ೧೧ : ಅಪೇಕ್ಷೆ, ಬಯಕೆ
ಅೞ್ತಿಕಾಱ ೧೧ – ೯೮ : ಆಸೆಕಾರ, ಬಯಸುವಾತ
ಅೞ್ತಿಗ ೧೩ – ೨೩ : ಇಷ್ಟಪಡುವವನು
ಅೞ್ತಿವಡು ೪ – ೪೫ : ಪ್ರೀತಿಹೊಂದು, ಆಸಕ್ತಿ ತಾಳು
ಅೞ್ದು ೧೨ – ೩೫ : ಮುಳುಗಿ (ಧಾ. ಆೞ)
ಆಕುಳಮತಿ ೧೦ – ೧೪೪ : ವ್ಯಾಕುಲಗೊಂಡ ಮನಸ್ಸಿನವನು, ದುಃಖಿ
ಆಗ ೮ – ೧೫, ೧೧ – ೧೪೫, ೧೫ – ೬೮ : ಆಗದು (ಆಗು+ಅ)
ಆಗಮ ೩ – ೯೮ : ಜೈನಸಿದ್ಧಾಂತಗ್ರಂಥ
ಆಗಮಧರ ೭ – ೪೯ : ಜೈನಶಾಸ್ತ್ರಜ್ಞ
ಆಗರೆ ೮ – ೧೦ : ಆಗುವವರೇ ಅಲ್ಲ (ಆಗರ್+ಎ)
ಆಗಳುಂ ೮ – ೭೫ : ಯಾವಾಗಲೂ, ಸದಾ
ಆಗುೞಿ ೧೪ – ೫೪ : ಗಂಡುಕುರಿ, ಟಗರು
ಆಗುಳಿಸು ೯ – ೧೧೯ : ಆಕಳಿಸು
ಆಗ್ರಹ ೭ – ೫೭ : ಬಲವಂತ, ಹಠ
ಅಜ್ಯ ೧೪ – ೧೪೯ : ತುಪ್ಪ
ಆಟಿಸು ೫ – ೬೪, ೧೪೮, ೧೫ – ೧೦೮ : ಬಯಸು, ಅಪೇಕ್ಷಿಸು
ಆಡು ೧ – ೩೮ : ನರ್ತಿಸು
ಆತ್ಮಜ ೭ – ೩೨ : ಮಗ
ಆದಂ ೧೦ – ೧೮೩ : ವಿಶೇಷವಾಗಿ
ಆದಮೆ ೨ – ೭೧ : ವಿಶೇಷವಾಗಿ (ಆದಂ+ಎ)
ಆಪ್ತ ೩ – ೯೮ : ಅಷ್ಟಾದಶ ದೋಷಗಳಿಲ್ಲದವನು; ೮ – ೧೬ : ಪೂಜ್ಯವ್ಯಕ್ತಿ
ಆಪ್ತಗೃಹ ೪ – ೧೨೭ : ಸ್ವಂತಮನೆ
ಆಮಿಷಚಯ ೧೧ – ೧೩೧ : ಮಾಂಸಪರಿಕರ
ಆಮುತ್ರಿಕ ೩ – ೪ : ಪರಲೋಕ, ಪಾರಲೌಕಿಕಗತಿ
ಆಯತಿ ೭ – ೪೬ : ಮಹಿಮೆ, ಅತಿಶಯತೆ
ಆರ್ ೫ – ೧೦೪, ೧೦ – ೧೮೫ : ಕೂಗು, ಅಬ್ಬರಿಸು, ಕಿರುಚು
ಅರಯ್ ೫ – ೭, ೧೫ – ೫೦ : ವಿಚಾರ ಮಾಡು, ವಿಮರ್ಶಿಸು
ಆರಯ್ಸು ೬ – ೯೯ : ಪರೀಕ್ಷಿಸು
ಆರಿಯ ನಾಡು ೯ – ೨೯ (?)
ಆರ್ತ ೬ – ೧೦೯ : ಆರ್ತಧ್ಯಾನ; ೭ – ೬೮, ೮ – ೯೮ : ಇಚ್ಫೆ, ಬಯಕೆ, ಆಸೆ; ೧೧ – ವಿಪತ್ತು, ಸಂಕಟ
ಆರ್ತು ೪ – ೧೪, ೬ – ೬೮ : ಸಮರ್ಥವಾಗಿ
ಆರ್ದಿಸು ೧೦ – ೬೮ : ಅಬ್ಬರಿಸಿ ಬಾಣ ಪ್ರಯೋಗಮಾಡು
ಆರ್ಹತ ೨ – ೪, ೩ – ೧೨ : ಜೈನಧರ್ಮ; ೧೩ – ೩೭ : ಜೈನಧರ್ಮಿ
ಆಱ್ ೧ – ೧೧೯, ೯ – ೧೧೯ : ಸಮರ್ಥನಾಗು
ಅಱಡಿಕಾಱ ೧೦ – ೧೦೯, ೧೪ – ೭೯ : ಸುಲಿಗೆಕಾರ, ಹಿಂಸಕ, ಹಗೆ, ಶತ್ರು
ಆಱಲಿಡು ೭ – ೧೭ : ಒಣಗ ಹಾಕು
ಆವದಿವಡು ೭ – ೪೩, ೧೫ – ೬೦ : ಕಷ್ಟಕ್ಕೆ ಗುರಿಯಾಗು, ತೊಂದರೆಪಡು, ಹಿಂಸೆಗೆ ಒಳಗಾಗು
ಆವು ೯ – ೬೩ : ಗೋವು
ಆವೆ ೧೦ – ೮೭ : ಆಮೆ
ಆವೊತ್ತುಂ ೮ – ೨೩೮ : ಯಾವಾಗಲೂ
ಆಸು ೧೦ – ೯೭ : ಇಡು, ಎತ್ತಿಬಿಡು (?)
ಆಸುರಂ ಮಸಗು ೯ – ೧೧೪ : ಭಯಂಕರವಾಗಿ ಕೆರಳು
ಆಳ್ ೫ – ೮೫ : ಯಾಜಮಾನ್ಯ ಮಾಡು, ಒಡೆತನ ಅನುಭವಿಸು
ಆಳಣೆ ೧೧ – ೫೨ : ಕಟ್ಟುಗಂಬ
ಆಳಿ ೧೫ – ೯೫ : ಮೋಸ
ಆಳಿಗೊಳ್ ೮ – ೪೬, ೧೪ – ೮೮ : ವಂಚಿಸು, ಮೋಸಗೊಳಿಸು
ಆೞ್ವನ್ ೧೫ – ೯೩ : ಮುಳುಗುವವನು
ಇಚ್ಚೆಕಾರ್ತಿ ೫ – ೫೬ : ಮನಃಪ್ರಿಯೆ
ಇಚ್ಫಾಮಿ ೪ – ೧೦೩ : ಇಷ್ಟಪಡುತ್ತೇನೆ
ಇಟ್ಟಗೆ ೨ – ೫೯, ೪ – ೧೨೭ : ಇಟ್ಟಿಗೆ
ಇಟ್ಟಳ ೪ – ೧೦೯ : ಮನೋಹರತೆ, ಅತಿಶಯತೆ, ೭ – ೬೬ : ಸಮೃದ್ಧಿ
ಇಟ್ಟಳಂ ೧೪ – ೧೧೭ : ಅತಿಶಯವಾಗಿ
ಇಟ್ಟೆಡೆ ೬ – ೭೧, ೧೦ – ೧೧೮ : ಇಕ್ಕಟ್ಟು, ಕಷ್ಟದ ಸಂದರ್ಭ
ಇಡಿ ೮ – ೨೨೭ : ತುಂಬು
ಇಡು ೫ – ೧೨೬ : ಈಟಿ ಮೊದಲಾದ ಶಸ್ತ್ರವನ್ನು ಬೀಸಿ ಎಸೆ
ಇಂಡೆ ೯ – ೩೯ : ಹೂವಿನ ದಂಡೆ, ಹಾರ
ಇಂಬಾಗು ೬ – ೯೯ : ಚೆನ್ನಾಗು, ಅನುಕೂಲಕರವಾಗು
ಇಂಬಿನೆ ೮ – ೧೫೩ : ಸುಕರವಾಗಿ, ಸುಖವಾಗಿ
ಇರ್ಕೆಮ ೩ – ೩೦ : (ಇದ್ದರೆ) ಇರಲಿ
ಇರ್ಚ್ಫಾಸಿರ್ವರ್ ೧೫ – ೭೦ : ಎರಡು ಸಾವಿರ ಜನ
ಇರ್ದಲ್ ೪ – ೩೮ : ಇಜ್ಜಲು
ಇರ್ನಾಲಗೆ ೩ – ೮೩ : ಎರಡು ನಾಲಗೆ
ಇಱಿಯಿಸು ೯ – ೧೨೩ : ಲೇಪಿಸು, ತೊಡೆ (?)
ಇಱುಂಪೆ ೬ – ೧೦, ೧೪ – ೯೫ : ಇರುವೆ
ಇಸು ೫ – ೧೨೫ : ಬಾಣ ಪ್ರಯೋಗಿಸು
ಇಳಿಸು ೧ – ೩೭ : ಕೀಳುಗಳೆ, ಕಡಮೆಮಾಡು
ಈ ೧೪ – ೧೫೫ : ಕೂಡು
ಈರಯ್ದು ೮ – ೩೪ : ಎರಡು ಐದುಗಳು, ಹತ್ತು
ಉಕ್ಕೆವ ೧೨ – ೩೬ : ಮೋಸ; ೧೩ – ೫೦ ಮೋಸಗಾರ
ಉಂಗುಟ ೧೦ – ೧೧೦ : ಹೆಬ್ಬೆರಳು, ಉಂಗುಷ್ಠ
ಉಚ್ಚಳಿಸು ೯ – ೩೯ : ಹಾರು, ನೆಗೆ
ಉಚ್ಫಿಷ್ಟ ೫ – ೭೦ : ಎಂಜಲು
ಉಡಿ ೧೧ – ೩೧ : ಮುರಿ, ಭಂಗಿಸು
ಉಡು ೬ – ೫೧ : ಹಲ್ಲಿಯ ಜಾತಿಗೆ ಸೇರಿದ ಒಂದು ಪ್ರಾಣಿ, ಗೋಧ
ಉಡುಗು ೪ – ೮೬ : ಕ್ಷೀಣಿಸು
ಉತ್ರಮಾಂಗ ೮ – ೭೪ : ತಲೆ
ಉತ್ತಮಿಕೆ ೯ – ೯೨ : ಒಳ್ಳೆಯತನ, ಘನತೆ
ಉತ್ತಮಿಕ್ಕೆ ೬ – ೮೯ : ಉತ್ತಮಗುಣ, ಘನತೆ
ಉತ್ತಲ್ ೫ – ೪೨ : ಹತ್ತಿರವೂ ಅಲ್ಲದ ದೂರವೂ ಅಲ್ಲದ ನಡುವಣ ಭಾಗ
ಉತ್ಸನ್ನಮತಿ ೩ – ೩೫ : ನಷ್ಟವಾದ ಬುದ್ಧಿ; ಕೆಲಸಮಾಡದ ಬುದ್ಧಿ
ಉದ್ದಮೇಱು ೧೪ – ೮೦ : ಉತ್ಸಾಹಿಸು
ಉದ್ದವರಿ ೧೫ – ೯೫ : ನುಗ್ಗಿಬರು
ಉದ್ವಾಸನೆ ೮ – ೨೩೪ : ಸುವಾಸನೆ (?)
ಉಂತು ೩ – ೨೪ : ಈ ನಡುವಣ ಪ್ರಕಾರವಾಗಿ, ಹೀಗೆ
ಉಂತುಂ ೮ – ೨೨೮ : ಹೇಗೋ
ಉಂತುಟು ೩ – ೨೫ : ಈ (ನಡುವಣ) ಪ್ರಕಾರವಾಗಿ
ಉಂತೇಂ ೨ – ೮೫ : ಹಾಗಲ್ಲದೆ
ಉದೀರಿತ ೩ – ೪೫ : ಹೇಳಿದ, ನುಡಿದ
ಉಪರೇತ ೮ – ೪೯ : (?)
ಉಪಶಮ ೩ – ೧೭ : ಸಹನೆ, ತಾಳ್ಮೆ, ಶಾಂತಿ
ಉಪಶಮಗಣ ೭ – ೩೭ : ಇಂದ್ರಿಯ ನಿಗ್ರಹ, ಸಹನೆ, ತಾಳ್ಮೆ
ಉಪಶಮನಿರತ ೧೩ – ೧೦ : ಶಾಂತಸ್ವಭಾವವುಳ್ಳವನು
ಉಪಸರ್ಗ ೧ – ೧೯, ೪ – ೮೮ : ಕಷ್ಟ, ತೊಂದರೆ, ಬಾಧೆ
ಉಪಾದೇಯ ೭ – ೪೬ : ಸ್ವೀಕಾರಕ್ಕೆ ತಕ್ಕುದು
ಉಪ್ಪುಂಗಾಯ್ ೬ – ೯ : ಉಪ್ಪಿನಕಾಯಿ
ಉಭಯಪರಿಗ್ರಹ ೫ – ೭೬ : ಇಹಪರಗಳಲ್ಲಿ ಸಾಧಿಸುವ ಗಳಿಕೆ, ಸಂಪತ್ತು
ಉರುಗುರ ೯ – ೭೪ : ಸಗಣಿ, ಅಮೇಧ್ಯ
ಉರ್ಚು ೧ – ೧೭, ೧೦ – ೧೪೩ : ಚುಚ್ಚು, ಭೇದಿಸು
ಉರ್ವು ೩ – ೧೪, ೧೦ – ೧೫೯ : ಉಬ್ಬು, ಗರ್ವಿಸು
ಉಱಿಸು ೧೫ – ೪೭ : ಒಪ್ಪು (?) (ಧಾ. ಉಱು?)
ಉಱವಱಿವಂ ೧೫ – ೮೮ : ವಿಶೇಷಜ್ಞಾನಿ
ಉಳ್ಳಿ ೧೪ – ೧೪೨ : ಬೆಳ್ಳುಳ್ಳಿ
ಉೞ್ಗು ೪ – ೨೯ : ಒಲಿ, ಪ್ರೀತಿಸು
ಊಡು ೪ – ೮ : ಫಲ ನೀಡು; ೧೦ – ೨೪ : ಉಣ್ಣುವಂತೆ ಮಾಡು
ಊಳ್ ೨ – ೬೩, ೩ – ೯೭, ೮ – ೧೧೦ : ಗಟ್ಟಿಯಾಗಿ ಕೂಗು, ಒದರು, ಕಿರಿಚು, ಬಾಯಿಗೆ ಬಂದದ್ದು ಆಡು
ಎಕ್ಕಲದೇವಿ ೪ – ೧೨೩ : ಒಂದು ಕ್ಷುದ್ರ ದೇವತೆಯ ಹೆಸರು
ಎಕ್ಕಸಕ್ಕಂಗೆಡೆ ೧೩ – ೪೦ : ಅಸಂಬದ್ಧವಾಗಿ ಮಾತಾಡು
ಎಕ್ಕೆ ೮ – ೧೨, ೯ – ೫೮ : ಅರ್ಕ, ಎಕ್ಕದ ಗಿಡ
ಎಗ್ಗ ೪ – ೧೦೫, ೭ – ೫೨ : ದಡ್ಡ, ಮಂದಬುದ್ಧಿ
ಎಗ್ಗು ೫ – ೯೪ : ಲಜ್ಜೆ, ಸಂಕೋಚ; ೧೩ – ೫ : ದಡ್ಡತನ, ಹೆಡ್ಡತನ
ಎಚ್ಚ ೧೩ – ೫೧ : ಹಕ್ಕಿಗಳ ಹಿಚಿಕೆ
ಎಂಜಲಿಸು ೧೧ – ೧೫೫ : ಎಂಜಲು ಮಾಡು, ಸವಿನೋಡು
ಎಡಚತನ ೨ – ೬೮ : ರೊಡ್ಡತನ, ಅಪಸವ್ಯ
ಎಡಪು ೫ – ೬ : ಎಡವು
ಎಡಂಬಡು ೩ – ೮೦, ೪ – ೧೦೨ : ಎಡವಟ್ಟು ಆಗು, ಆಡಚಣೆಯೊಡ್ಡು
ಎಡಱು ೨ – ೨೧, ೪ – ೬೨, ೭ – ೧೨ : ದಾರಿದ್ರ್ಯ, ಕಷ್ಟ, ಆಪತ್ತು
ಎಡಹು ೪ – ೧೩೯ : ಎರಡು
ಎಡೆಗುಡು ೫ – ೪೫ : ಅವಕಾಶಕೊಡು
ಎಡೆಯಾಡು ೧೦ – ೨೫ : ಅಲೆದಾಡು, ಸುಳಿದಾಡು
ಎಡೆಯುಡುಗು ೧೫ – ೮೯ : ನಿರಂತರತೆ ತಪ್ಪಿಹೋಗು
ಎತ್ತು ೧ – ೩೯, ೧೦ – ೧೬೪ : ಸೇನೆಯೊಂದಿಗೆ ಸಾಗು, ಏರಿಹೋಗು, ದಾಳಿಡು
ಎತ್ತುಂಗೋಲ್ ೫ – ೪೨ : ಹರಿತವಾದ ಬಾಣ
ಎರಡಾಲ ೬ – ೭ : ನ್ಯಗ್ರೋಧ, ಪಿಪ್ಪಲ (?)
ಎರವಿಗೊಳ್ ೯ – ೧೦೯, ೧೧೯ : ಬೇಡಿಕೊಳ್ಳು, ಪ್ರಾರ್ಥಿಸು
ಎರವು ೫ – ೧೭ : ಸಾಲ, ಎರವಲು
ಎರೆ ೧ – ೩೯, ೪ – ೪೨ : ಬೇಡು, ಪ್ರಾರ್ಥಿಸು
ಎರ್ಮೆ ೯ – ೭೧ : ಎಮ್ಮೆ
ಎರ್ಮೆವೋರಿ ೫ – ೧೫ : ಎಮ್ಮೆ ಹೋರಿ
ಎಱಕ ೪ – ೨೫ : ಪ್ರೀತಿ, ಅನುರಾಗ
ಎಱವಟ್ಟು ೧೫ – ೨ : ಮೂಲಸ್ಥಾನ, ಆಶ್ರಯ, ನೆಲೆ
ಎಲು ೬ – ೩೪, ೧೧ – ೧೨೪, ೧೪ – ೪೯, ೧೪ – ೬೪ : ಎಲುಬು, ಮೂಳೆ
ಎಲೆಮಿಡುಕು ೩ – ೯ : (ಸ್ವಲ್ಪ ಗಾಳಿಗೂ ಅಲ್ಲಾಡುವ) ಎಲೆಯ ಅಲುಗುವಿಕೆ
ಎಲೆವಾಡು ೬ – ೯ : ಎಲೆಗಳ ತರಕಾರಿ, ಸೊಪ್ಪಿನ ತರಕಾರಿ
ಎಸಕ ೧ – ೨ : ಕಾಂತಿ, ಶೋಭೆ ; ೮ – ೧೦೮ : ಕಾರ‍್ಯ, ಕೃತ್ಯ
ಎಸಡಿ ೮ – ೧೩೬ : ಕೂರ್ಮ, ಆಮೆ