ಶ್ರೀದಿವಿಜರಾಜಪೂಜಿತ
ಪಾದಾಂಬುಜನನುಪಮಾನನಮಳಿನವಿದ್ಯಾ
ಶ್ರೀದಯಿತನೀಗೆ ಜಿನನ
ತ್ಯಾದರದಿಂದಂ ತ್ರಿಮೂಢಗಜಮೃಗರಾಜಂ || ೧ ||
ಮ || ಮತಿವಂತಂ ಸಲೆ ದೇವಮೂಢತೆಯಮಂ ಪಾಷಂಡಿಮೂಢತ್ವಮಂ
ಸತತಂ ಲೌಕಿಕಮಪ್ಪ ಮೂಢತೆಯುಮಂ ನಿರ್ವ್ಯಾಜದಿಂ ಬಿಟ್ಟು ಶಾ
ಶ್ವತಸೌಖ್ಯಕ್ಕಿರದೊಯ್ಯಲಾರ್ಪ ವಿಲಸಚ್ಚಾರಿತ್ರದಿಂದೊಂದಿದಾ
ರ್ಹತದೊಳ್ ವರ್ತಿಪನಾವನಾತನೆ ವಲಂ ಸಮ್ಯಕ್ತ್ವರತ್ನಾಕರಂ || ೨ ||
ಜಿನನಲ್ಲದಾಪ್ತರಂ ಪಿಡಿ
ದು ನಮೆವುದುಂ ಕಿರ್ಚು ಕವಿಲೆ ಮರನಾಯುಧಮೆಂ
ಬಿನಿತರ್ಕಂ ಪೊಡೆವಡುವುದು
ಮನೇಕಮಿವು ಬಗೆಯೆ ದೇವತಾಮೂಢಂಗಳ್ || ೩ ||
ಹರಿ ಹರ ದಿನಕರ ವೈಶ್ವಾ
ನರರೆಂಬರ್ ದೇವರಲ್ಲದಿರ್ದೊಡೆ ಚಕ್ರೇ
ಶ್ವರನುಂ ಪ್ರಧಾನರುಂ ಭೂ
ಪರುಮೇಕೆಯೊ ಕೊಂಡುಕೊನೆ[ವರರೆಬ]ರ್ ಮೂಢರ್ || ೪ ||
ಜಿನನೊರ್ವನೆ ದೇವಂ ಮ
ತ್ತಿನ ದೆಯ್ವಂ ದೆಯ್ವಮಲ್ಲದಿರ್ದೊಡೆ ಚಕ್ರೇ
ಶ್ವರನ ಗುರು[ವರ್ಯ]ನುಂ ವಿ
ಪ್ರನಿಕಾಯಮುಮೇಕೆ ಪರಿಯರೆಂಬರ್ ಮೂಢರ್ || ೫ ||
ಇದು ದೆಯ್ಯಮಲ್ಲದಿರ್ದೊಡೆ
ಮುದದಿಂ ಬ್ರಾಹ್ಮಣರುಮರಸರುಂ ಯೋಗ್ಯರುಮಿಂ
ತಿದನೇಕಾರಾಧಿಪರೆಂ
[ಬು]ದನಿಶಂ ತಾಂ ಕೊಂಡುಕೊವುದದು ಮೂಢತ್ವಂ || ೬ ||
ಚಂ || ತನಯನೊರ್ವನಂ ಪಡೆವೆನೆಂದನುರಾಗದೆ ಪೋಗಿ ಮಲ್ಲಿಕಾ
ರ್ಜುನನಹರ್ನಿಶಂ ಮಿಡುಕದೋಲಗಿಸುತ್ತಿರೆ ವಿಷ್ಣಗುಪ್ತನೀ
ಶನ ಬರವೀವುದುಂ ತಡೆದುದೆಂದು ಕನಲ್ದೊಡೆಯಿಟ್ಟೊಡೊಂದು ಪೋ
ೞನಿತಱೊಳಿರ್ದುದೊಂದು ಕಡಿ ಪೀಠದೊಳಿರ್ದಪುದೆಂಬರೆಲ್ಲರುಂ || ೭ ||
ಮ || ಪೆಸರಿಂಗೊಯ್ಯನೆ ಮುಕ್ಕುವೋದೊಡೆ ಬೞಿಕ್ಕಾ ಲಿಂಗಮಂ ಮುಟ್ಟಿ ಪೂ
ಜಿಸಲಾಗೆಂದೊಡೆ ಮಲ್ಲಿಕಾರ್ಜುನನೆರೞ್ಪೋೞಾದುದು ಕಂಡುಗಂ
ಡು ಸಮಗ್ರಂ ಸಲೆ ಜಾತ್ರೆಯಾಗಿ ಭರದಿಂ ಬೆಟ್ಟೇಱಿಯುಂ ಮತ್ತೆ ಪೂ
ಜಿಸುವರ್ ಜಾತ್ರೆಮರುಳ್ಗಳೆಂಬುದನಮೋಘಂ ಮಾೞ್ಪವೋಲ್ ನಾಡವರ್ || ೮ ||
ಶಂಕರನಾರಾಯಣನ ಕ
ರಂ ಕಿಡುವುದು [ಯು]ಗದ ಕಡೆಯೊಳೊಂದೊಂದೆನುತುಂ
ಝೇಂಕರಿಸಿಟ್ಟೊಡನೆನ್ನದೆ
ಯುಂ ಕಾಣ್ಬರ್ ಪೋಗಿ ತುಂಗಭದ್ರೆಯ ತಡಿಯೊಳ್ || ೯ ||
ಶಂಕರನಾರಾಯಣೆನೆರೆ
ಡುಂ ಕಾಲುಂ ಪೂೞ್ದು ನೆಲದೊಳಿರ್ದುದನೇಂ ಕಂ
ಡುಂ ಕಾಲುಂ ಕಾಲ್ಗಳನೆನು
ತುಂ ಕುಮತಿಗಳೊಳೆ ಮೂಢರದು ದಿಟಮೆಂಬರ್ || ೧೦ ||
ಗರೆಯಳಿಯ ಚಂಗದೇವನ
ಪುರಿಯೊಳ್ ಸಂಗಮಳ ವಿಷ್ಣುದೇವನ ಮೂಱುಂ
ಕರಮುಂ ಮುಱಿದಿರ್ದುವು ಯುಗ
ಪರಿವರ್ತನದಂದು ಕೆಡುದುದೆಂಬರ್ ಮೂಢರ್ || ೧೧ ||
ಲಿಂಗಂಗಳ್ ಬಳೆದೊಡೆ ಪೀ
ಠಂಗಳ್ ತಲೆಯೊಳ್ ನಡೆ ಮೊಳೆ
ಯಂ ಗಡ ಬೆಟ್ಟಿದೊಡೆ ಬಳೆಯವೆಂಬರ್ ಮೂಢರ್ || ೧೨ ||
ಕುಂದುಗುಮಾಗಳೆ ಪೆರ್ಚುಗು
ಮೆಂದುಂ ಚೈತನ್ಯಲಿಂಗಮಲ್ಲದೆ ಮಱಿದುಂ
ಕುಂದುಗು[ಮೇ] ಪೆರ್ಚುಗುಮೇ
ಸಂದೇಹಂಬಡಲೆ ವೇಡ ಪಾರ್ಥಿವಲಿಂಗಂ || ೧೩ ||
ಹರಲೀಲೆ ಸೂರ್ಯಶತಕಮಿ
ವೆರಡುಮನುದಟ್ಟನುಮಾ ಮಯೂರನುಮಿನಿಸಂ
ವಿರಚಿಸೆ ಶಿವನುಂ ರವಿಯುಂ
ನೆರಮಾಗಿರ್ದೆಯ್ದೆ ಪೇೞ್ದರೆಂಬರ್ ಮೂಢರ್ || ೧೪ ||
ಉರಗನುಮಂ ಕೆಂಜೆಡೆಯಂ
ಸುರನದಿಯಂ ಪೆಱೆಯುಮಂ ಕಪಾಳಾವಳಿಯಂ
ಹರಲೀಲೆಯೆಂದು ಬಣ್ಣಿಸು
ತಿರೆ ಖೇಚರರಪ್ಪರೆಂದು ನೆಗೞ್ವರ್ ಮೂಢರ್ || ೧೫ ||
ಹರನ ತನುವೆಲ್ಲಮಂ ಸಾ
ಸಿರ ವೃತ್ತದೆ ಪೊಗೞೆ ಖಚರರಪ್ಪರ್ ಗಡ ಕೇ
ಳ್ದಿರದನಿ[ಶಂ] ಬಣ್ಣಿಸುವವ
ನರಸಿಕೆ ಖಚರತ್ವಮಾಗದಿರ್ಕುಮೆ ಕಡೆಯೊಳ್ || ೧೬ ||
ಕಿರಣಮುಮಂ ವಾಜಿಗಳುಮ
ನರುಣನುಮಂ ರಥಮನರ್ಕಬಿಂಬಮುಮಂ ಬಿ
ತ್ತರದಿಂ ಬಣ್ಣಿಸೆ ಸಗ್ಗಂ
ದೊರೆಕೊಳ್ಗುಂ ಸೂರ್ಯಶತಕದಿಂ ಗಡ ಚಿತ್ರಂ || ೧೭ ||
ಕಿರಣಮುಮಂ ಮಂಡಳಮಂ
ಖರಕರನಂ ಪೊಗೞ್ದು ಪಡೆಗೆ ಫಲಮಂ ಸೌರಂ
ತುರಗಮುಮಂ ಸ್ಯಂದನಮುಮ
ನರುಣನುಮಂ ಪೊಗೞ್ದೊಡೆಮಗಮೀಗುಮೆ ಬರಮಂ || ೧೮ ||
ನಟನಂ ಸ್ತುತಿಯಿಸಲೊಡನು
ದ್ಭಟನುಂ ಮಲುಹಣನುಮಾ ಶರೀರಂ ಬೆರಸಾ
ನಟನ ಬೆಸದಿಂದೆ ವೃಂದನ
ವಿಟೀಜನಂ ಕೊಂಡು ಪಾಱೆ ಪಾಱಿದರೆಂಬರ್ || ೧೯ ||
ಸುರಲೋಕಕ್ಕೇೞ್ವಡೆಯೊಳ್
ದೊರೆಕೊಳ್ಳವು ದೇಹಮೆಂದು ಮರ್ತ್ಯರ ದೇಹಂ
ಬೆರಸೇ[ೞ್ವ]ರಕ್ಕುಮೆಂತಾಂ
ಗಿರಿಶನ ಮತದವರ್ಗಳಱಿಯದದೇನೊ ನುಡಿವರ್ || ೨೦ ||
ಕಡಿದೊಡೆ ಬಾಣ[ನ] ಕಯ್ಯಂ
ಗಡ ಕೂಡೆ ಕೊನರ್ತುದಾ ಮಯೂರನ ತೊನ್ನಾ
ದೊಡಲುಂ ಸುವರ್ಣಮಾದುದು
ಗಡ ದೇವರ ವರದಿನೆಂದು ಮುಗ್ಧರ್ ನುಡಿವರ್ || ೨೧ ||
ಭಗವತಿಯಂ ಸ್ತುತಿಯಿಸಲಾ
ಭಗವತಿ ಮೇಧಾವಿ ರುದ್ರನಿರ್ದತ್ತಲ್ ತ
ನ್ನ ಗೃಹವೊಳಗಾಗಿ ತಾಂ ಗಡ
ಮಗುೞ್ದಿತ್ತಳ್ ಕಳೆದ ಕಣ್ಣನೆಂಬರ್ ಮೂಢರ್ || ೨೨ ||
ನಯವಿದರುಂ ಪಂಡಿತರುಂ
ನಿಯೋಗಿಗಳುಮವರ ಪೆಂಡಿರುಂ ನೀಲಜ್ಯೇ
ಪ್ಠೆಯನಾರುಂ ನೋಂತಾಗಳೆ
ನಿಯತಂ ಫಲಮಾಯ್ತುವೆಂದು ನುಡಿವರ್ ಮೂಢರ್ || ೨೩ ||
ರಾವಣನಂ ರಾಘವನಂ
ಭೂವಲ್ಲಭನಪ್ಪ ನಳನುಮಂ ಪಾಂಡವರಂ
ದೇವತೆ ಗಡ ಕದಡಿದಳೆಂ
ದಾ ವಿಧದಿಂ ಜ್ಯೇಷ್ಠೆಯೆಂಬರಱಿವಿಲ್ಲದವರ್ || ೨೪ ||
ಅಂಬುಳುವಾದೊಡೆ ಷಣ್ಮುಖ
ನೆಂಬರ್ ಸೀವಳಿಗೆಯಾಗೆ ಸಲೆ ಮಾರಿಯ ಹು
ಣ್ಣೆಂಬರ್ ತುಱಿಯಾದೊಡೆ ಫಣಿ
ಯೆಂಬರ್ ಮತಿಹೀನಜನರದೇನಂ ಮಾಡರ್ || ೨೫ ||
ಹರನೊರ್ವ ವಿಧವೆಯೊಳ್ ಸೋ
ಲ್ತಿರಲಾಱದೆ ನೆರೆದೊಡೊಗೆದನವಧೂತಮುನೀ
ಶ್ವರನಾ ಱಂಡೆಯುಮಂ ಪಾ
ರ್ವರಾರೆ ಬಗ್ಗಿಸಿದನೀಶನೆಂಬರ್ ಶೈವರ್ || ೨೬ ||
ಗಿರಿಜೇಶಂ ತೆಱೆದಂ ಜೇ
ಡರ ದಾಸಿಗೆ ಪಡಿಯನೊರ್ಮೆ ಮಗನಂ ಕೊಂದಾ
ಸಿರಿಯಾಳನಿಕ್ಕಲುಂಡ
ಚ್ಚರಿಯೆನೆ ಚೋಳ್ನಾಡೊಳೆತ್ತಿದಂ ಗಡ ಮಗನಂ || ೨೭ ||
ಪಾಡಿದೊಡೆ ಪಾಡುವಂ ಮ
ತ್ತಾಡಿದೊಡಿರದಡುತಿರ್ಪನಾ ಕುಂಬಱನಿಂ
ಕೂಡಿರ್ಪನೀಶನೆಂದಿಂ
ತಾಡುವರಱಿವಿಲ್ಲದವರ್ಗಳಾರಿಯ ನಾಡೊಳ್ || ೨೮ ||
ಏನೆಂಬುದೊ ಚೋಳ್ನಾಡೊಳ್
ಮೀನಂ ಕೈವರ್ತನೀಯೆ ತನಗಿತ್ತವನಂ
ಮಾನವಪತಿ ದಂಡಿಸೆ ಬಿಡು
ನೀನೆಂದೀಶ್ವರನೆ ಪರಿದು ಬಿಡಿಸಿದನೆಂಬರ್ || ೨೯ ||
ಅವಿವೇಕಿ ತೊಱೆಗೆ ಗಂಗಾ
ಸ್ತವಮೆಂಬುದನೊರ್ವನೞ್ತಿಯಿಂದುಸಿರ್ದೊಡದಂ
ಕವಿಪುಂಗವರ್ಕಳೋದುವ
ರವಶ್ಯಮವಿವೇಕಿ ಬಱಿಯ ನೀರೆಂದಱಿಯರ್ || ೩೦ ||
ವರರುಚಿ ತನ್ನಂ ಸ್ತುತಿಯಿಸೆ
ಸುರನದಿ ಮೆಚ್ಚಿತ್ತಳೆರಡು ಕಂಕಣಮನವಂ
ನರಪತಿಗೆ ತೋಱೆ ನೆವದಿಂ
ವರರುಚಿ ಗಡ ತನಗೆ ಮುಳಿದ ಪೊಲೆಯನನೞಿವಂ || ೩೧ ||
ಮುಕ್ಕುಳಿಸಿಯುಗುೞೆ ಪಾರ್ವರ್
ಮಿಕ್ಕವರಂ ಬಯ್ವರ[ಕ್ಕೆ] ಪೇಲಂ ಕರ್ಚಲ್
ತಕ್ಕುದೆ ತಮಗೀಶನರಸಿ ಗಂಗೆಯ ಬಾಯೊಳ್ || ೩೨ ||
ಮರಗಳ್ ಪಾಱುಗುಮಿಂದ್ರನ
ಪುರಕ್ಕೆ ಬೇರ್ವೆರಸು ಕಿೞ್ತು ತುರುಗೋಳೊಳ್ ಸ
ತ್ತರನಾಗಳಂತೆ ಬೇಗಂ
ಸುರಗಣಿಕೆಯರೊಯ್ವರೆಂಬರಱಿವಿಲ್ಲದವರ್ || ೩೩ ||
ಜೀವಂ ತಾಂ ಗಡ ಪೋಗದು
ದೇವೇಂದ್ರಪುರಕ್ಕೆ ದೇವಗಣಿಕೆಯರೊಯ್ವರ್
ಜೀವಮನೆಂದಿಂತೂಳ್ವರ್ || ೩೪ ||
ಲಿಂಗಂಗಳ್ ಬೆಳೆವೊಡೆ ವೃ
ಕ್ಷಂಗಳ್ ಪಾಱುವೊಡೆ ಕಡಿದ ಕೆಯ್ ಕೊನರ್ವೊಡ ದೇ
ಹಂಗಳ್ ವೆರಸಮರೇಂದ್ರಪು
ರಂಗಳ್ಗೊಯ್ವೊಡೆ ಮನುಜರನಘತಿಮಿನಿತುಂ || ೩೫ ||
ವಟಸಾವಿತ್ರಿಯ ನೋಂಪಿಗೆ
ವಟವೃಕ್ಷದ ಕೆೞಗೆ ಸೀರೆಯಂ ತುಡುಗೆಯನ
ಕ್ಕಟ ಕೊಟ್ಟು ಕಿಡದೆ ಕೊಡುವುದು
ದಿಟಮೊಲ್ವೊಡೆ ಸೌಖ್ಯಮಂ ಜಿನಂಗರ್ಚನೆಯಂ || ೩೬ ||
ಗಿರಿಗಳ ಕೆಱೆಗಳ ಮರಗಳ
ತೊಱೆಗಳ ಕೆಯ್ಗಳ ಸಮೀಪದೊಳ್ ನೋಂತೊಡದೇಂ
ದೊರೆಕೊಳ್ಗುಮೆ ಸುಖಮದಱಿಂ
ಪರಮಂಗರ್ಚನೆಯನಿತ್ತು ಪಡೆವುದು ಸುಖಮಂ || ೩೭ ||
ಖಂಡೇಂದುಧರನನರ್ಚಿಸಿ
ಯಿಂಡೆಗಳುಚ್ಚಳಿಸಿ ಕೆಯ್ಗೆ ಬಾರದೊಡಾಗಳ್
ಮಂಡೆಯನರಿದೇಱಿಸುವಂ
ಕಂಡರ್ ಕಂಟಣಿ[ಸೆ] ರಾಯನೆಂದಿಂತೂಳ್ದರ್ || ೩೮ ||
ಬೆನಕಂ ಕೆಯ್ ಕೆಟ್ಟೊಡೆ ಕಾ
ವನೆ ಕೆಱೆಯೇರಿಯಲ್ಲಿ ಕೆರಷೆಯೊಡೆದೊಡೆ ಕಾ
ವನೆ ಕೆಮ್ಮ ನಱಿತಮಿಲ್ಲದ
ಮನುಷ್ಯರಲ್ಲಲ್ಲಿಗೇಕೆ ನಿಱೆಪರೊ ಪೇೞಿಂ || ೩೯ ||
ಬೆನಕಂಗಿಕ್ಕಿದೊಡಂ ಭೂ
ತನಿಕಾಯಕ್ಕೊಯ್ದು ಸರುಗಮಂ ಪೂಸಿದೊಡಂ
ಮನೆದೆಯ್ವಕ್ಕಿಕ್ಕಿದೊಡಂ
ಘನಮಾಗದು ಬೆಳಸು ನಿಯತಮೆಂಬರುಮೊಳರೇ || ೪೦ ||
ಸಾಯಿರ ಖಂಡುಗಮಂ ಬೆಳೆ
ದಾವೊಕ್ಕಲಮಗನದೊಂದು ಕಂಬಮನೊಯ್ದಿ
ಟ್ಟಾವೂರಿನ ಬಾದುಬ್ಬೆಗೆ
ಸಾಯಿರಮಂ ಬೆಳೆದನಂದು ನುಡಿವರ್ ಮೂಢರ್ || ೪೧ ||
ಕಡಗದುಡಿಯಂತಿರಿರ್ದೊಡೆ
ಪೊಡೆವಡುವರ್ ಪೂರ್ಣನಾದೊಡಂ ಪೌರ್ಣಮಿಯೊಳ್
ಪೊಡೆವಡರದೆಂತೊ ಚಂದ್ರಂ
ಗೆ ಡಂಬದಿಂ ಮೂಢಜನದ ನೆಗೞ್ವೊಂದಂದಂ || ೪೨ ||
ತಿಂಗಳ್ವರಮಮೃತಮನಾ
ತಿಂಗಳ್ ಸುರಿದಪುದೆ ಬಯಸಿ ನೋಡುವರೆಲ್ಲಂ
ತಿಂಗಳೊಳೊಂದು ದಿನಂ ಬೆ
ಳ್ದಿಂಗಳ್ ಚೌತಿಯೊಳೆ ವಿಷಮನುಗುೞ್ವುದೆ ನೋಡಲ್ || ೪೩ ||
ಸೊಡರಂ ಪೊತ್ತಿಸಿದವರ್ಗಳ್
ಪೊಡೆವಡುವರ್ ಮುನ್ನಮದನೆ ಕಂಡವರಾರುಂ
ಪೊಡೆವಡುವರಲ್ಲ[ರೇ]ಕೆಯೊ
ಪೊಡೆವಡರ[ಡುವ]ಲ್ಲಿಯುರಿವ ಕಿರ್ಚಿಂಗವರ್ಗಳ್ || ೪೪ ||
ನಾಲಗೆಯಂ ಕೊಯ್ದರ್ಚಿಸೆ
ಲೀಲೆಗಳಿಂ ಮತ್ತೆ ಕೊನರಿಪಂ ಗಡ ಪಲರ್ಗಂ
ನಾಲಗೆಯನಡಸಿ ಕೊಯ್ದೊಡೆ
ನೀಲಗಳಂ ಕುಡದೆ ತಾನೆ ಬರ್ಕುಮಿದೇನೋ || ೪೫ ||
ಮೊದಲಡಸಿ ಕೊಯ್ಯೆ ನಾಲಗೆ
ತೊದಲಿಸಿ ನುಡಿಯಲ್ಕೆ ಬರ್ಕುಮದಱಿನದಿರ್ಕಾ
ತುದಿಮೂಗನಕ್ಕೆ ಭಕ್ತನ
ತುದಿಕೊಡಕೆಯನಕ್ಕೆ ಕೊಯ್ಯೆ ಕೊನರ್ವೊಡದಕ್ಕುಂ || ೪೬ ||
ಒಡಲನಿತುಂ ತೊನ್ನಿಂ ನಸಿ
ದೊಡೆ ಬುದ್ಧಿವಿಹೀನನೊರ್ವ ದೇವಂ ಮೆಯ್ಯಂ
ಕುಡುತಿರ್ಪನೆಂಗು ಪಿರಿದುಂ
ಕುಡಲಱಿಯಂ ನಿನಗೆ ಕರ್ಮಮುಂಟೆನೆ ಮಗುೞ್ವರ್ || ೪೭ ||
ಚಂ || ದೊರೆಕೊಳೆ ಕುಷ್ಠರೋಗಮದನೀ ಕ್ಷಣದೊಳ್ ಕಳೆದಪ್ಪನೆಂದೊಡೇಂ
ಪರಿವರೊ ದೇವನಲ್ಲಿಗೆ ಕೆಲರ್ಗತಿರೂಕ್ಷಣದಿಂದೆ ತಾಂ ತೊೞ
ಲ್ತರೆ ರುಜೆ ಪಿಂಗುಗುಂ ನಿಯಮದಿಂ ಕಳೆವಂತಿರೆ ದೇವನೇಂ ನರು
ಷ್ಠರ ಗುಡಮೋ ವಿ[ಶು]ದ್ಧ ರಸಭಸ್ಮಮೊ ವರ್ಮ ಕಟುತ್ರಿಕಾದಿಯೋ || ೪೮ ||
ಏಮಾತೋ ಪೊಗೞಲೊಡಂ
ಸೋಮೇಶ್ವರದೇವನಿತ್ತಪಂ ಮೇಗಳನೆಂ
ದೀ ಮಹಿಯ ಮೂಢರೆನಲೊಡ
ನಾ ಮಾತಂ ನಂಬಿ ಪೋಗಿ ಪಡೆಯದೆ ಬರ್ಪರ್ || ೪೯ ||
ಮೆಯ್ಯಂ ಕಣ್ಣಂ ಕಾಲಂ
ಕಯ್ಯಂ ಮುಂ ರುದ್ರನಿತ್ತುದಂ ಕೇಳ್ದಿರ್ದುಂ
ಮೆಯ್ಯಱಿಯಿರ್ ನೀಮುಂ ಜೇ
ನೆಯ್ಯಂ ಕೊಟ್ಟಪನೆ ಪೇೞಿಮೆಂಬರ್ ಮೂಢರ್ || ೫೦ ||
ಮುನ್ನಿನ ಪಾಪಂ ಪಱಿದೊಡೆ
ಪೊನ್ನಕ್ಕುಂ ಪುರುಳಕ್ಕುಮಾತನ ಮೆ[ಯ್ಯಿಂ]
ತೊನ್ನುಂ ಪೋಕುಂ ಮೆಯ್ಯಂ
ಪೊನ್ನಂ ದೇವರ್ಕಳಾರ್ಗಮೀಯರದೆಂತುಂ || ೫೧ ||
ಜೀವಂ ಪಾಪದ ಫಲದಿಂ
ಸ್ಥಾವರ ಪಶುಪಕ್ಷಿಯೋನಿಯೊಳ್ ಪುಟ್ಟಿರೆಯುಂ
ತಾವಿಂಬಾಗಿರೆ ತಿಳಿದುಂ
ದೇವರ್ಗೆಱಗುವವೊಲೆಱಗುತಿರ್ಪರ್ ಮೂಢರ್ || ೫೨ ||
ಸ್ಥಾವರಮಪ್ಪೇಕೇಂದ್ರಿಯ
ಜೀವಂ ಗಿಡುಮರನೆನಿಪ್ಪುವಘಮಂ ಕೆಡಿಸಲ್
ತಾವಾರ್ಪುಮೆ ನೆಗೞ್ದರುಹ
ದ್ದೇವನನೋಲಗಿಸಿ ಪಡೆಯಿಮಿಹಪುರಸುಖಮಂ || ೫೩ ||
ಜ್ಞಾನಿಯೆ ನಾನೆಂಬವನುಂ
ತಾನಱಿಯಂ ಮರನನಿಟ್ಟುದಂ ಬಲವರುತಂ
ಜಾನಿಸುತುಮಿರ್ಪನಾ ಮರ
ನೇಂ ನೆಗೆಗುಮೆ ಪೊತ್ತುಕೊಂಡು ಸಗ್ಗಕ್ಕವನಂ || ೫೪ ||
ಬಗೆವೊಡದೇನಾನುಂ ಬಾ
ರ್ತೆಗಲ್ಲದೆನಿಪರಳಿಗೊಲ್ದು ಪೊಡೆವಡುವ ನರಂ
ಚಿಗುರಿಂ ಪೂವಿಂ ಕಾಯಿಂ
ಸೊಗಯಿಪ ಮಾವಿಂಗೆ ಪುಣಿಸೆಗೆಱಗಲ್ವೇಡಾ || ೫೫ ||
ಎನಿತಾದುವರಿಳಿಯೆಲೆಗಳ
ವನಿತುಂ ವಿಷ್ಣುಪ್ರತಿಷ್ಠೆಯೆಂದೆನೆ ಮತ್ತಂ
ತನಿತುಮುದಿರ್ದಾಗಳಾ ಮರ
ನನಿಟ್ಟವಂಗಾಗದಿರ್ಕುಮೇಕಿ[ಟ್ಟ] ಫಲಂ || ೫೬ ||
ಪುಲಿಗಿಲುಮುತ್ತರಣೆಯುಮಂ
ತೆ ಲೊಕ್ಕಿಯುಂ ಮತ್ತೆ ಮುತ್ತಮಾಯೆಕ್ಕೆಯುಮಂ
ಕೊಲೆಯುಂ ಬನ್ನಿಯ ಮರನುಂ
ಕುಲದೆಯ್ವಮಿದೆಂದು ಕೊಂಡುಕೊನೆವರ್ ಮೂಢರ್ || ೫೭ ||
ಪಾಪದ ಫಲದಿಂ ಯೋನಿಯೊ
ಳಾಪೊತ್ತುಂ ನಮೆವ ಪಶುಗೆ ಪೊಡೆವಟ್ಟೊಡದೇಂ
ಪೋಪುದೆ ತನ್ನಯ ಮಾಡಿದ
ಪಾಪಂ ಮತಿಹೀನರಿನಿತನಪ್ಪೊಡಮಱಿಯರ್ || ೫೮ ||
ಮ || ಸ್ರ || ಧರೆಯಂ ಮೂವತ್ತ ಮೂದೇವರುಮಹಿಕುಳಮುಂ ನಾಲ್ಕು ವೇದಂಗಳುಂ ಭಾ
ಸ್ಕರನುಂ ತಾರೇಶನುಂ ವಹ್ನಿಯುಮಮರಮುನಿವ್ರಾತಮುಂ ಸಿದ್ಧರುಂ ಕಿ
ನ್ನರರುಂ ಗಂಧರ್ವರುಂ ಗೋಕುಲದ ತನುವಿನೊಳ್ ನಿಂದುವೆಂದಂದೆ ಮೂಢರ್
ಪರಿ[ತಂ]ದುಂ ಭಕ್ತಿಯಿದಂ ಪೊಡೆಮಡುವರದರ್ಕೆೞ್ದು ಶುಶ್ರೂಷೆಗೆಯ್ವರ್ || ೫೯ ||
ಹರಿಹರಪಂಕಜಭವರುಂ
ನರಸುರಪನ್ನಗರ[ಗ]ಚರಮುನಿಗಳ್ ನಿರುತಂ
ಸರುಗಾಡುವ ಪಶುವಿನೊಳ್
ಲ್ಲಿರಲೇಂ ತಾನೆಂತೊ ತೊನಸೆಯೋ ನೋಣವುಗಳೋ || ೬೦ ||
ಬಡಕಪ್ಪಡಿ ತನ್ನಿರ್ಪಾ
ಗುಡಿಸ[ಲ] ಬಲ್ಲಿತ್ತು ಮಾೞ್ಪೆನೆಲ್ಲಂದದಿನೆಂ
ದೊಡೆ ದೇವನಗಲ[ದಿರ್ಪಂ]
ಕೆಡೆಯಲ್ಯಣಮೀಯದಂತು ರಕ್ಷಿಸವೇಡಾ || ೬೧ ||
ಕುಲಹೀನರೆನಿಸಿದವರುಂ
ಪೊಲೆಯರುಮಾಪೊತ್ತುಮೊದೆದು ಬಡಿಯುತ್ತಿರೆಯುಂ
ಸಲೆ ನಮೆವಾವಿನ ಮೆಯ್ಯೊಳ್
ತಲೆಮಟ್ಟಂತೆಂತು ನಿಂದರಾ ದೇವರ್ಕಳ್ || ೬೨ ||
ಪಶುವಿನ ಪಡುಕೆಯ ನಾತ
ಕ್ಕಲಸದೆ ಪರಿದೆಯ್ದಲಾಗಲೊಯ್ಯನೆ ನಡೆದಂ
ಗಸಮಸುಖಾಸ್ಪದಮಕ್ಕುಂ
ಪುಸಿಯಲ್ಲದು ದೇವರಿರ್ಪ ತಾಣಮದೆಂಬರ್ || ೬೩ ||
ಆವಿನ ತೊವಲಿನ ಗಂಧ
ಕ್ಕೇವಯ್ಸದೆ ಮಾೞ್ಪ ಸಮ್ಮಗಾಱಂಗಂ ಮ
ತ್ತೇವಯ್ಸದೆ ಸೇವಿಸುವಂ
ಗಾವುದು ಫಲವೆಂದು ತಿಳಿಗೆ ಭಕ್ತರ ಮತದೊಳ್ || ೬೪ ||
ಅತಿರುಚಿರಬಾಳವತ್ಸಾ
ನ್ವಿತಗೋಕುಲದಿಂದಮೆಸೆಗುಮಾವನ ಮನೆ ಭೂ
ನುತನು ಮಹಾತ್ಮನೆಂಬರ್
ಶತಸಂಖ್ಯೆಯ ಪಶುವನಾಳ್ವವ[ನನೇ]ನೆಂಬರ್ || ೬೫ ||
Leave A Comment