ಎಳದಳಿಸು ೧ – ೧೧೭ : ಕೋಮಲವಾಗಿರು, ನಳನಳಿಸು
ಎಳದಿಂಗಳ್ ೧೦ – ೭೩ : ಬಾಲಚಂದ್ರ
ಎಳಸು ೫ – ೫೬ : ಬಯಸು, ಅಪೇಕ್ಷಿಸು
ಎೞಡು ೮ – ೬೯ : ಎದ್ದು ಕುಣಿ
ಏಕದಂಡಿ ೧೧ – ೧೪೦ : ಶಿಖೆ ಮತ್ತು ಯಜ್ಞೋಪನೀತಗಳನ್ನು ತ್ಯಜಿಸಿ, ದಂಡವನ್ನು ಮಾತ್ರ ಉಳ್ಳ ಸಂನ್ಯಾಸಿ
ಏಗೊಳ್ ೫ – ೧೨೮ : ಸಮ್ಮತಿಸು, ಒಪ್ಪು
ಏಂಗಳ ೨ – ೮೪ : ಏನು, ಹಾಗಲ್ಲವೇ?
ಏಡಿಸು ೮ – ೯೦ : ಅವಹೇಳನಮಾಡು, ನಿಂದಿಸು
ಏಣಗೋಣ ೩ – ೫೫, ೪ – ೧೩೯ : ಕೊಂಕು ಮಾತಾಡುವವನು, ವಕ್ರಿಸುವವನು, ಬಿಂಕದವನು
ಏಣಗೋಣತನ ೬ – ೩೯ : ಕೊಂಕುಮಾತು, ಗರ್ವದ ಮಾತು
ಏತಱ್ ೩ – ೪೩, ೧೪ – ೧೨೧ : ಏನು, ಏಕೆ?
ಏನೋಜೀವ ೧೫ – ೭೪ : ಪಾಪಮಾಡಿದ ಜೀವ
ಏನೋವಶ ೧೧ – ೧೩೯ : ಪಾಪವಶ
ಏನೋಹೀನಂ ೩ – ೧೧ : ಪಾಪರಹಿತವಾದ್ದು
ಏಪಚ್ಚು ೧೧ – ೯೭ : ಏನು ವಿಭಾಗ, ಪಾಲು
ಏಭಂಡ ೧ – ೧೨೭, ೪ – ೨೪ : ಏನು ಸಂಪತ್ತು, ಏನು ಭಾಗ್ಯ?
ಏಱಿಸು ೧೦ – ೧೪೮ : ಅರ್ಪಿಸು, ಒಪ್ಪಿಸು
ಏವಯ್ಸು ೯ – ೬೫, ೧೪ – ೯೬ : ಜುಗುಪ್ಸೆ ಪಡು
ಏವೇೞ್ಪುದು ೯ – ೯೧ : ಏನು ಬೇಕೋ ಅದು
ಏೞಿಸು ೫ – ೬೮ : ಎಬ್ಬಿಸು
ಏೞು ಬೇಲಿಯ ತಲೆಯವನ್ ೧೧ – ೧೦೩ : (?)
ಏೞ್ಗೆ ೬ – ೨ : ಆಧಿಕ್ಯ, ಅಭಿವೃದ್ಧಿ
ಒಂದು ಒಟ್ಟಜೆ ೩ – ೯೮ : ಸರ್ವಶಕ್ತಿಯ ವಿನಿಯೋಗ, ಪೂರ್ಣಸಾಮರ್ಥ್ಯ
ಒಡವೋಗು ೫ – ೧೫೨ : ಜೊತೆಗೆ ಹೋಗು
ಒಡೆಬೀೞ್ ೧೧ – ೪ : ಒಡೆದುಕೊಂಡು ಕೆಳಗೆ ಬೀಳು
ಒಡೆಯಿಡು ೯ – ೮ : ಒಡೆದು ಹಾಕು
ಒಡ್ಡ ೧೧ – ೧೩೦ : ಪಣಕ್ಕಿಡುವ ದ್ರವ್ಯ
ಒಣಕೆ ೮ – ೬೫ : ಕಪಾಲ (?)
ಒಣಗಿಲ್ಗುಂದು ೧೧ – ೧೩ : ಕೃಶಗೊಳ್ಳು, ಸಂಕೋಚಗೊಳ್ಳು
ಒಣಗು ೮ – ೧೮೪ : ಒಣಗಿರುವುದು
ಒತ್ತಂಬ ೩ – ೬೨, ೧೨ – ೩೮ : ಬಲವಂತ, ನಿರ್ಬಂಧ, ಒತ್ತಾಯ
ಒತ್ತು ೧೫ – ೩೬ : ಸಹಾಯ, ನೆರೆ
ಒದಱು ೧೦ – ೬೭ : ಗರ್ಜಿಸು, ಭುಜ ತಟ್ಟಿ ಅಬ್ಬರಿಸು
ಒಂತಿ ೧೨ – ೪೫ : ಹಲ್ಲಿ
ಒಂದವಿಂದ ೧೩ – ೫೮ : ಅಸ್ತವ್ಯಸ್ತ, ದಿಕ್ಕು ದೆಸೆಗಾಣದಿರುವುದು
ಒಂದವಿಂದಿ ೧೫ – ೭೫, ೭೯ : ಅಸ್ತವ್ಯಸ್ತ, ಗಲಿಬಿಲಿ
ಒಂದೆವಸ ೧೧ – ೪೩ : ಒಂದು ದಿವಸ
ಒಂದೆಸೆ ೪ – ೧೨೧, ೮ – ೧೪೩ : ಒಂದು ಕಡೆ, ಯಾವುದೋ ಒಂದು ದಿಕ್ಕು
ಒಪ್ಪಳ ೫ – ೧೦೩ : ಒಂದು ಪಲ, ಮೂರು ತೊಲ ಅಥವಾ ಮೂರು ರೂಪಾಯಿ ತೂಕ; (ಆಲಂ) ಒಂದು ಮುಷ್ಟಿಯ ಪ್ರಮಾಣ
ಒಪ್ಪಿಡಿ ೫ – ೮೦, ೧೧ – ೧೩೮ : ಒಂದು ಹಿಡಿ
ಒಬ್ಬಳ ೫ – ೮೦ : ಒಂದು ಬಳ್ಳ
ಒಮ್ಮೊೞ ೫ – ೯ : ಒಂದು ಮೊಳ
ಒಯ್ಯನೆ ೩ – ೬೨ : ಮೆಲ್ಲಗೆ
ಒರೆ ೧೩ – ೫, ೧೫ – ೧೫ : ಒರೆ ಹಚ್ಚು
ಒರ್ಮಾನಂಗಱುವಾವು ೯ – ೭೧ : ಅರ್ಧಸೇರು ಹಾಲು ಕರೆಯುವ ಹಸು
ಒರ್ಮೊೞ ೧೩ – ೫೩ : ಒಂದು ಮೊಳ
ಒರ್ವೞಿ ೧೫ – ೮೩ : ಒಂದು ಕಡೆ, ಏಕತ್ರ
ಒಲವರ ೩ – ೮ : ಪಕ್ಷಪಾತ
ಒಲ್ಲಣಿಗೆ ೧೧ – ೧೨೭ : ಒದ್ದೆಬಟ್ಟೆ, ಸ್ನಾನ ಮಾಡುವಾಗ ಉಡುವ ಬಟ್ಟೆ
ಒಸಗೆ ೧ – ೧೧೮ : ಉತ್ಸವ
ಒಸೆ ೧ – ೧ : ಅನುಗ್ರಹಿಸು; ೧ – ೨: ಒಲಿ, ಮೆಚ್ಚು
ಒಳಱು ೧೧ – ೧೦೭ : ಅರಚು
ಒಳವು ೧೦ – ೧೮೨ : ಉಂಟು (ಧಾ.ಉಳ್)
ಒಳಸೋರ್ ೯ – ೧೧೪ : ಮರೆಯಾಗು, ಆಡಗು
ಒಳ್ಳಕ್ಕರಿಗ ೯ – ೭೫ : ಬಲ್ಲವ, ಚೆನ್ನಾಗಿ ತಿಳಿದವನು
ಒಳ್ಳರ್ಚನೆ ೫ – ೧೦೦ : ಒಳ್ಳೆಯ ಪೂಜೆ, ಪ್ರಶಸ್ತವಾದ ಪೂಜಾಸಾಮಗ್ರಿ
ಓಜೆ ೨ – ೧೩, ೩ – ೫೦ : ಕ್ರಮ
ಓತು ೫ – ೬೦ : ಪ್ರೀತಿಯಿಂದ (ಧಾ.ಓ)
ಓಪಳ್ ೧೦ – ೧೮೦ : ಪ್ರಿಯಳು
ಓರಂತೆ ೧೧ – ೬೧ : ಕ್ರಮವಾಗಿ, ಒಂದೇ ಸಮನೆ
ಓಲಗಿಸು ೧ – ೭೧, ೬ – ೬೧, ೬೨ : ಸೇವಿಸು, ಊಳಿಗಮಾಡು
ಓವರಿ ೫ – ೮೦ : ಕೋಣೆ
ಓವು ೫ – ೯, ೭ – ೧೦ : ರಕ್ಷಿಸು, ಕಾಪಿಡು; ೯ – ೧೧೮ : ಲಕ್ಷಿಸು, ಗಮನ ಕೊಡು
ಔದುಂಬರ ೬ – ೭ : ಅತ್ತಿಯ ಮರ
ಔರಸತನುಜ ೧೧ – ೩೩ : ಸ್ವಂತಮಗ
ಕಚ್ಚೆವಾಸು ೩ – ೫೬ : (ಆಲಂ) ಸಿದ್ಧವಾಗು
ಕಂಚು ೧೧ – ೧೧೮ : ಪಾತ್ರೆ
ಕಟಕ ೧ – ೩೯, ೧೪ – ೨೬ : ಗುಂಪು, ಸೈನ್ಯ
ಕಟುಕ ೧೫ – ೫೭ : ಕಟುರುಚಿಯ ಪದಾರ್ಥ
ಕಟುತ್ರಿಕ ೯ – ೪೯ : ಶುಂಠಿ, ಮೆಣಸು, ಹಿಪ್ಪಲಿ ಈ ಮೂರು ಕಟುರುಚಿಯ ಪದಾರ್ಥಗಳು
ಕಟ್ಟಳಿಪರ್ ೧೪ – ೨೦ : ಅತ್ಯಾಸೆಗಾರರು
ಕಟ್ಟಳಿಪು ೧೫ – ೩೫ : ಅತ್ಯಾಸೆ
ಕಟ್ಟಿದಿರ್ ೧ – ೧೯ : ನೇರ ಎದುರು
ಕಡಗದುಡಿ ೯ – ೪೩ : ಲೋಹದ ಬಳೆಯ ಚೂರು
ಕಡಂಗು ೫ – ೨೦, ೭ – ೪೮ : ಉತ್ಸಾಹಿಸು, ಮೇಲೆ ಹಾಯಿ; ೬ – ೧೧೩ : ಒದಗಿಬರು
ಕಡದೊಂಟಿ ೬ – ೪೮ (?)
ಕಡುದಣಿವು ೮ – ೨೪೬ : ಅತಿಶಯವಾದ ತೃಪ್ತಿ
ಕಡುನೀಱೆ ೫ – ೫೪, ೬೯ : ಬಲುಚಲುವೆ
ಕಡುಪು ೧೩ – ೫೨ : ರಭಸ, ಬಲಾತ್ಕಾರ
ಕಡುರಯ್ಯ ೧೦ – ೬೭ : ಅತಿಮನೋಹರ
ಕಡೆನೇಣ್ ೧೦ – ೧೦೨ : ಕಡೆಗೋಲಿನ ಹಗ್ಗ
ಕಡೆಪಟ್ಟನ್ ೫ – ೨೪, ೬ – ೮೧, ೭ – ೬೩ : ಕೊನೆಯ ಮನುಷ್ಯ; ಅತ್ಯಂತ ಕನಿಷ್ಠನಾದವನು
ಕಣಿ ೬ – ೮೭ : ಗಣಿ
ಕಂಟಣಿಸು ೯ – ೩೯ : ಹೆದರು, ಭಯಬೀಳು, ಕುಗ್ಗು
ಕಂಟಳಿಸು ೧೦ – ೧೮೮, ೧೪ – ೧೪೬ : ಅಸಹ್ಯಪಡು, ಜಿಗುಪ್ಸೆಪಡು
ಕಣ್ಣಿ ೮ – ೨೪೮ : ಹಗ್ಗ, ಹುರಿ
ಕತ ೯ – ೧೧೭ : ಕಾರಣ, ನಿಮಿತ್ತ
ಕತ್ತಿಗೆ ೧೪ – ೯೪ : ಕತ್ತಿ, ಮಚ್ಚು
ಕಥಾ ಆರಾಧನೆ ೧೦ – ೧೯೨ : ಆರಾಧನಾ ಕಥಾಕೋಶ
ಕಥಾಶ್ರುತಿ ೧೦ – ೧೮೮ : ಕಥೆ ಕೇಳುವುದು
ಕದಳೀಫಲ ೧೫ – ೯೨ : ಬಾಳೆಹಣ್ಣು
ಕನಕದ ಕಾಯ್ ೪ – ೧೫೩ : ದತ್ತೂರಿಯ ಬೀಜ
ಕನಲ್ ೧೩ – ೧೦ : ಕೆರಳು
ಕಪಾಳಾವಳಿ ೯ – ೧೬ : ತಲೆಬುರುಡೆಗಳ ಸಾಲು
ಕಪ್ಪಡಿ ೯ – ೬೨, ೧೩೨ : ತಿರಿದು ತಿನ್ನುವ ಜೋಗಿ
ಕಬ್ಬಿಗ ೫ – ೫೬ : ಕವಿ
ಕಬ್ಬಿಲ ೧೦ – ೮೦ : ಬೇಡ
ಕಮಠ ೧೦ – ೧೦೨ : ಕೂರ್ಮ, ಆಮೆ
ಕಂಬ(ಭ) ೫ – ೮೦, ೯ – ೪೨ : ಹೊಲಗದ್ದೆ ಧಾನ್ಯ ಮುಂತಾದುವನ್ನು ಅಳೆಯುವ ಒಂದು ಪ್ರಮಾಣ
ಕಮ್ಮಿತಾಗು ೧ – ೪೭ : ಸುವಾಸನೆ ಬೀರು
ಕರಂ ೬ – ೬೦ : ವಿಶೇಷವಾಗಿ
ಕರಗ ೪ – ೪೦, ೫ – ೧೧೧ : ನೀರಿನ ಪಾತ್ರೆ, ಗಿಂಡಿ, ಜಲಕಲಶ
ಕರಣ ೧೦ – ೧೨೮ : ಕರಣಿಕ, ಲೆಕ್ಕಪತ್ರ ಇಡುವವನು
ಕರಣೀಯ ೧ – ೧೪೨ : ಅವಶ್ಯವಾದುದು, ಮಾಡಬೇಕಾದುದು
ಕರವತಿ ೧೪ – ೧೫೨ : (ಚರ್ಮದ) ನೀರಿನ ಬುದ್ದಲಿ, ಪಕಾಲೆ
ಕರವತಿಗೆ ೯ – ೧೨, ೧೩, ೧೬ : ನೀರಿನ ಬುದ್ದಲಿ, ಪಕಾಲೆ
ಕರವತ್ತಿ (ಗೆ) ೬ – ೨೨, ೧೪ – ೨೬, ೧೪ – ೧೧೭ : ಚರ್ಮದ ನೀರಿನ ಬುದ್ದಲಿ, ಪಕಾಲೆ
ಕರುವಿಡು ೨ – ೫೧ : ಎರಕ ಹಾಕು
ಕರ್ಚಿ ಕಳೆ ೩ – ೪೬ : ತೊಳೆದು ಪರಿಹರಿಸು
ಕರ್ಚು ೫ – ೧೪೧, ೮ – ೧೭, ೧೧ – ೩೫ : ತೊಳೆ, ಶುದ್ಧಿಗೊಳಿಸು ; ೧೩ – ೯ ಕಚ್ಚು ಕಡಿ
ಕರ್ತೃ ಭೋಕ್ತೃ ೩ – ೨೦ : ಮಾಡುವವನು, ಅನುಭವಿಸುವವನು
ಕರ್ಬುನ ೧೫ – ೭೧ : ಕಬ್ಬಿಣ
ಕರ್ಬೊನ್ ೧ – ೧೨೯ : ಕಬ್ಬಿಣ
ಕಱುಕೆ ೧ – ೧೧೭ : ಗರುಕೆ
ಕಱುಪು ೫ – ೧೭ : ರಭಸ, ಆವೇಶ (?)
ಕೞು ೧೫ – ೧೧ : ಕಳಂಕ
ಕಱೆಗೊರಲ ೫ – ೫೮ : ವಿಷಕಂಠ
ಕಲನ್ ೧೪ – ೯೩ : ಮಡಕೆ
ಕಲುಷ ೮ – ೯ : ರೋಷ, ಆವೇಶ
ಕಲ್ಕಂಗೂಡು ೬ – ೬೧ : ಅರೆದು ಬೆರಸಿದಂತೆ ಕೂಡು, ಕದಡಾಗಿ ಕೂಡು
ಕಲ್ನೆಲೆನಿಲ್ ೭ – ೩ : ಪ್ರತಿಮಾಯೋಗದಲ್ಲಿ ಸ್ಥಿರವಾಗಿ ನಿಲ್ಲು
ಕವಡಿಕೆ ೩ – ೧೨ : ಸಣ್ಣ ಕವಡೆ
ಕವರ್ ೫ – ೬೧, ೬೩ : ಸೂರೆಮಾಡು, ಸುಲಿಗೆಮಾಡು
ಕವರ್ತೆವೋಗು ೨ – ೨೧ : ಸೂರೆಯಾಗು, ಕೊಳ್ಳೆಹೋಗು
ಕವಿಪದ ೬ – ೩೭ : ಕವಿಯ ಪಟ್ಟ
ಕವಿಲೆ ೯ – ೩ : ಕಪಿಲೆ, ಹಸು
ಕಷ್ಟನ್ ೧೪ – ೩೫ : ಕಷ್ಟ ಕೊಡುವವನು
ಕಸವರ ೫ – ೪೧, ೪೩, ೬ – ೧೧೧ : ಸಂಪತ್ತು, ಆಸ್ತಿ
ಕಳ್ ೪ – ೧೫೧ : ಹೆಂಡ, ಮದ್ಯ
ಕಳವಳಿಗ ೩ – ೫೫ : ಕಾತರಿಸುವವನು, ವಿಷಯಲಂಪಟ
ಕಳಿಮಳಿನ ೩ – ೪೬ : ಕಲಿಕಾಲದ ಕೊಳಕು, ಕಳಂಕ
ಕಳೆ ೪ – ೧೨೯ : ವಿದ್ಯೆ ; ೯ – ೧೦ ತೆಗೆದುಹಾಕು
ಕಳೆದುಕೊಳ್ ೧೨ – ೮ : ಸ್ವೀಕರಿಸು, ತೆಗೆದುಕೊಳ್ಳು, ಕೈಗೆತ್ತಿಗೊಳ್ಳು
ಕಳ್ಳತನಬ್ರತ ೫ – ೪೫ : ಐದು ಅಣು ವ್ರತಗಳಲ್ಲಿ ಒಂದು, ಅಸ್ತೇಯ
ಕಳ್ಳುಣಿ ೮ – ೧೯೧ : ಹೆಂಡಗುಡುಕ
ಕೞಲ್ ೭ – ೯೮ : ಕಳಚಿ ಬೀಲು
ಕೞಿ ೧ – ೧೧೯ : ದಾಟು
ಕಾಜು ೩ – ೧೨, ೮ – ೨೪೫ : ಗಾಜು
ಕಾಣ ತಾಣಂ ೫ – ೬೫ : ಉಣ್ಣುವ ಎಡೆ (?) (ಸಂ. ಖಾದನ>ಖಾಣ>ಕಾಣ)
ಕಾಣಿ ೪ – ೩೩, ೭ – ೬೯ : ಚಿಕ್ಕ ಬೆಲೆಯ ನಾಣ್ಯ, ಕಾಸು
ಕಾಪು ೧೨ – ೪೯ : ರಕ್ಷಣೆ
ಕಾಪುರುಷ ೧ – ೧೨, ೮ – ೧೨೪ : ಕ್ಷುದ್ರವ್ಯಕ್ತಿ, ಅಲ್ಪವ್ಯಕ್ತಿ
ಕಾಯ್ ೧೩ – ೧೦ : ಕೋಪಿಸು
ಕಾಯ್ಪು ೧ – ೧೯ : ಕೋಪ, ರೋಷ
ಕಾಯೋತ್ಸರ್ಗ ೧ – ೨೮ : ದೈಹಿಕ ಉಪಸರ್ಗಗಳನ್ನು ಸಹಿಸುತ್ತಲೇ ಎರಡು ಕೈಗಳನ್ನು ಇಳಿಬಿಟ್ಟು ನಿಷ್ಕಂಪನಾಗಿ ನಿಂತು ಧ್ಯಾನದಲ್ಲಿರುವುದು
ಕಾಲುಡಿ ೧೧ – ೧೨೯ : ಕಾಲು ಮುರಿ
ಕಾಲ್ಗರ್ಚು ೧೧ – ೧೨೭ : ಕಾಲು ತೊಳೆ
ಕಾಸು ೧೦ – ೫೯, ೧೪ – ೯೦ : ಕಾವಡಿ, ಅಡ್ಡೆ
ಕಾಂಸ ೧೪ – ೧೧೭ : ಕಂಚು
ಕಾಳಶಾಕ ೧೧ – ೧೩೧ : (?)
ಕಾೞ್ಕಬ್ಬ ೧೧ – ೧೧ : ಕೆಟ್ಟ ಕಾವ್ಯ, ಕಗ್ಗ
ಕಿಂಕುರ್ವಾಣ ೪ – ೩೩ : ಸೇವಕಭಾವ, ದೈನ್ಯ
ಕಿಂಜಲ್ಕ ೧ – ೪೦ : ಮಕರಂದ
ಕಿಟ್ಟು ೮ – ೧೮ : ಕೊಳೆ, ವರ್ಜ್ಯವಸ್ತು
ಕಿಡಕಿ ೫ – ೬೬, ೭೧, ೧೫ – ೪೬ : ಜಾರೆ, ಹಾದರಗಿತ್ತಿ
ಕಿಡುಕ ೧೩ – ೨೭ : ಕೆಡುಕ
ಕಿನಿಸು ೧೩ – ೪೩ : ಕೋಪಿಸು
ಕಿರೀಟಿ ೮ – ೧೪೪ : ಅರ್ಜುನ
ಕಿರ್ಚು ೮ – ೧೧೭ : ಅಗ್ನಿ
ಕಿಲ್ಬಿಷವಿಷ ೧೧ – ೧೫೬ : ಪಾಪವೆಂಬ ವಿಷ
ಕಿಲಂಬುಗೊಳ್ ೧೫ – ೧೦ : ಕಿಲುಬು ಹಿಡಿ
ಕಿಸು ೬ – ೧೪, ೮ – ೨೨೨ : ತಾಮ್ರ
ಕಿಸುಗಳ ೪ – ೮೫, ೬ – ೧೯, ೮ – ೧೭೮ : ಹೊಲಸಾದುದು, ಹೇಯವಾದುದು, ಕೊಳಕಾದುದು
ಕಿಸುಗುಳಿ ೪ – ೩೧, ೧೨ – ೨೩ : ಹೊಲಸು ವ್ಯಕ್ತಿ, ಕೊಳಕ
ಕಿಸುವೊನ್ ೧ – ೧೨೯ : ತಾಮ್ರ
ಕೀಲಿಗ ೮ – ೧೪, ೧೫ – ೭ : ಬೆಸ್ತ, ಮೀನುಗಾರ
ಕೀವಿಲ ೮ – ೪೧, ೧೨ – ೨೨ : ಕೊಳಕು, ಹೇಸಿಕೆ, ರಸಿಕೆ (?)
ಕೀವಿಲಿ ೯ – ೧೧೦ : ಕೊಳಕು ಹೆಂಗಸು
ಕೀೞ್ಪಡು ೭ – ೧೭ : ಕೀಳಾಗು, ಸಣ್ಣವನಾಗು
ಕೀೞಾಳ್ ೮ – ೧೪೪ : ಸಣ್ಣಕೆಲಸದ ಸೇವಕ
ಕುಜ ೮ – ೧೬೪ : ಮಂಗಳಗ್ರಹ
ಕುಡಿತೆ ೧೦ – ೧೧೦ : ಬೊಗಸೆ
ಕುಡಿಯಂ ೧೧ – ೧೨೯ : ಒಕ್ಕಲಿಗ
ಕುತಪ ೭ – ೬ : ಕೆಟ್ಟ ತಪಸ್ಸು
ಕುತ್ತ ೫ – ೧೯ : ತೋಗ
ಕುತ್ತಂಗುಳಿ ೩ – ೬೨, ೧೨ – ೩೮ : ರೋಗದಿಂದ ನರಳುವುದೇ ಸ್ವಭಾವವಾದವನು, ರೋಗಿ
ಕುತ್ತಂಗೊಳ್ ೯ – ೧೨೧ : ಕಾಯಿಲೆ ಬೀಳು
ಕುತ್ತಂಬಟ್ಟಂ ೯ – ೧೨೩ : ರೋಗಿ, ಕಾಯಿಲೆ ಬಂದವನು
ಕುದೃಷ್ಟ ೪ – ೧೧೬ : ಮಿಥ್ಯಾಜ್ಞಾನಿ
ಕುದೃಷ್ಟಿ ೪ – ೧೫೨ : ಮಿಥ್ಯಾಜ್ಞಾನ
ಕುಪಾತ್ರಕಂಠ ೧೪ – ೧೨೫ : (?)
ಕುಂಬಱ ೯ – ೨೯ : ಕುಂಬಾರ (ಗುಂಡಯ್ಯ)
ಕುಭೃತ್‌ಕುಲ ೮ – ೧೭೪ : ಬೆಟ್ಟಗಳ ಗುಂಪು
ಕುಂಭಕಾರಕ ೧೦ – ೨೨ : ಕುಂಬಾರ
ಕುರುಂಜಿಗೆ ೫ – ೧೭ : ಹುಲ್ಲು ಕೆತ್ತಿ ತೆಗೆಯುವ ಸಲಕರಣೆ
ಕುಱಿದಱಿಮಾಡು ೧೧ – ೧೧೩ : ಕೊಚ್ಚಿಹಾಕು
ಕುಱುವೆಲೆ ೯ – ೧೧೬ : ಚಿಕ್ಕಬೆಲೆ, ಕಡಮೆಬೆಲೆ
ಕುಲಟಾಂಗನೆ ೫ – ೪೯ : ಜಾರಸ್ತ್ರೀ
ಕುಲಟೆ ೫ – ೭೪ : ಜಾರೆ, ಹಾದರಗಿತ್ತಿ
ಕುಲವೞಿ ೮ – ೨೧೧, ೨೧೨ : ವಂಶ ಪರಂಪರೆ, ಅನ್ವಯಾಗತಕ್ರಮ
ಕುಲಿಂಗಿಜನ ೨ – ೮೬ : ಧರ್ಮಬಾಹಿರರು, ಕೆಟ್ಟ ಲಾಂಛನದವರು
ಕುವಳಯರಿಪು ೮ – ೧೬೨ : ಚಂದ್ರ
ಕುವಳಯಸಮಾಜ ೪ – ೬೦ : ನೈದಿಲೆಗಳ ಗುಂಪು
ಕುಳಿರ್‌ಕೋಡು ೧೫ – ೧೦೪ : ಚಳಿಯಿಂ ದುಂಟಾದ ನಡುಕ
ಕುೞಿ ೮ – ೧೯೦ : ಗುಣಿ, ಹಳ್ಳ
ಕುೞು ೯ – ೧೩೫ : ನೇಗಿಲ ಗುಳ
ಕೂಡುಕುಳಿ ದೇವ ೮ – ೨೪೭ : ಜಂಗುಳಿ ದೈವ, ನಾಡ ದೇವತೆ
ಕೂರ್ ೫ – ೧೧೩, ೬ – ೬೮ : ಪ್ರೀತಿಸು
ಕೂರ್ಪವರ್ ೪ – ೧೧೬, ೫ – ೯೮, ೧೧ – ೧೧೯ : ಒಲಿದವರು, ಬೇಕಾದವರು, ಇಷ್ಟವಾದವರು
ಕೂರ್ಪು ೧೪ – ೬೦ : ತೀಕ್ಷ್ಣತೆ
ಕೂರ್ಮೆ ೪ – ೪೬ : ಪ್ರೀತಿ
ಕೂಱಿಗೆ ೫ – ೧೭ : ಹೊಲಗಳಲ್ಲಿ ಬೀಜ ಬಿತ್ತುವ ಉಪಕರಣ
ಕೂೞ್ ೫ – ೮೦, ೫ – ೯೧, ೯ – ೧೧ : ಅನ್ನ
ಕೃತ ೧೪ – ೫೯ : ಮಾಡಿದ್ದು
ಕೃತ್ಸ್ನ ೧ – ೧೧೫, ೧೧ – ೮೫ : ಪೂರ್ಣವಾಗಿ
ಕೃಶಾನು ೧೧ – ೪೧ : ಅಗ್ನಿ
ಕೃಷ್ಣಮೃಗ ೧೪ – ೧೩೪ : ಜಿಂಕೆ
ಕೆಂಗಳವೆ ೧೦ – ೧೨೦ : ಕೆಂಪು ಬತ್ತ
ಕೆಡೆ ೯ – ೬೨ : ಬೀಳು
ಕೆಡೆಯಿಕ್ಕು ೧೧ – ೭೫ : ಬೀಳಿಸಿ ಒತ್ತಿ ಹಿಡಿ
ಕೆಡೆಯೆಚ್ಚು ೧೦ – ೫೮ : ಬೀಳುವ ಹಾಗೆ ಬಾಣಪ್ರಯೋಗ ಮಾಡು (ಇಸು>ಎಚ್ಚು)
ಕೆಂಬರಲ್ ೩ – ೯೨ : ಮಾಣಿಕ್ಯ
ಕೆಮ್ಮನೆ ೫ – ೬೫, ೮ – ೨೨೯, ೧೩ – ೭ : ಸುಮ್ಮನೆ, ನಿಷ್ಕಾರಣವಾಗಿ
ಕೆಯ್ ೬ – ೧೦೯, ೯ – ೩೮, ೪೦ : ಹೊಲ ಗದ್ದೆ
ಕೆಯ್ಗಣ್ಮು ೫ – ೫೦ : ಅಧಿಕವಾಗು
ಕೆಯ್ಗರ್ಚಿಕೊಳ್ ೮ – ೧೭ : ಕೈ ತೊಳೆದುಕೊಳ್ಳು
ಕೈಗೆಯ್ ೧೦ – ೯೮ : ಇದಿರಿನಲ್ಲಿಯೇ, ಕೂಡಲೇ ; ೧೫ – ೮೩ : ಅಲಂಕಾರಗೊಳಿಸು
ಕೆಯ್ತ ೬ – ೫೮ : ಕೃತ್ಯ
ಕೆಯ್ದುಬಿನ್ನಣ ೫ – ೧೨೫ : ಶಸ್ತ್ರಕೌಶಲ
ಕೆಯ್ಯಿಕ್ಕು ೧ – ೫ : ಕೈಗಳನ್ನು ಇಳಿಬಿಟ್ಟುಕೊಂಡು ಕದಲದಿರು
ಕೆಯ್ಕೊಳ್ ೧ – ೬೫ : ಸ್ವೀಕರಿಸು, ಗ್ರಹಿಸು
ಕೆಯ್ಯೆಡೆಗುಡು ೫ – ೧೪೯ : ಒಪ್ಪಿಸಿಕೊಡು
ಕೆಯ್ಸಾರ್ ೪ – ೭೦ : ಲಭಿಸು, ಪ್ರಾಪ್ತವಾಗು
ಕೆರಕು ೯ – ೭೭ : ನವೆ, ಕಡಿತ
ಕೆರ್ಪು ೧೦ – ೮೦ : ಎಕ್ಕಡ
ಕೆಲನ್ ೫ – ೫೩ : ಅಕ್ಕಪಕ್ಕ
ಕೆಲಂಬರ್ ೧೦ – ೪೫ : ಕೆಲವರು
ಕೆಳೆಗೊಳ್ ೬ – ೩೯ : ಸ್ನೇಹ ಬೆಳಸು
ಕೈವರ್ತ ೯ – ೩೦ : ಬೆಸ್ತ
ಕೊಕ್ಕರಿಸು ೫ – ೭೦, ೮ – ೯೦, ೧೦ – ೧೧೭ : ಅಸಹ್ಯಪಡು, ಜುಗುಪ್ಸೆಪಡು
ಕೊಡಗೂಸು ೫ – ೭೧, ೧೦ – ೧೫೪ : ಮದುವೆಮಾಡಿಕೊಡಲಿರುವ ಕೂಸು, ಕನ್ಯೆ
ಕೊಂಡುಕೊನೆ ೯ – ೪ : ಹೊಗಳು, ಸ್ತುತಿಸು
ಕೊದಳಿ ೪ – ೧೪೭ : ಕದಳಿ, ಬಾಳೆ
ಕೊನರ್ ೯ – ೨೨, ೧೦ – ೧೪೮ : ಚಿಗುರು
ಕೊಪ್ಪು ೮ – ೭೦ : ಬಿಲ್ಲಿನ ತುದಿ
ಕೊರೆ ೮ – ೧೪೧ : ಗೊರಕೆ ಹೊಡೆ
ಕೊರ್ವು ೧೧ – ೧೩೦ : ಕೊಬ್ಬು
ಕೊಱೆ ೩ – ೮೬, ೫ – ೧೦೮ : ನಶಿಸು, ನಷ್ಟವಾಗು, ಕ್ಷೀಣಿಸು, ಕೊರತೆಯಾಗು; ೮ – ೬ : ಕತ್ತರಿಸಿಹೋಗು, ಛೇದಗೊಳ್ಳು; ೧೫ – ೩೦ : ಸವೆದುಹೋಗು, ಕೃಶವಾಗು
ಕೊಲೆಯಡಗು ೧೧ – ೧೪೭ : ಪ್ರಾಣಿಯನ್ನು ಕೊಂದು ಸಿದ್ಧಪಡಿಸಿದ ಮಾಂಸ
ಕೊಳ್ವ ೧೫ – ೪೨ : ಪರಿಗ್ರಹಿಸುತ್ತೀಯಾ?
ಕೊಳ್ಳಿಯ ಮನ್ನೆಯರ್ ೮ – ೪೦ : ಬೆಂಕಿಯ ಮಾನ್ಯರು (?)
ಕೊಳ್ಳೆಂದೆತ್ತು ೮ – ೨೧೯ : ಉರಿದುಬೀಳು
ಕೊೞೆದೆಯ್ವ ೯ – ೧೨೯ : ಮಲಿನದೇವತೆ, ಕ್ಷುದ್ರದೇವತೆ
ಕೊೞೆವಾವು ೧೩ – ೬೦ : ಕೊಳಕು ಮಂಡಲದ ಹಾವು
ಕೋಣೆ ೧೦ – ೯೩ : ಮೂಲೆ
ಕೋಲ್ ೫ – ೪೭ : ಅಳತೆಯ ಕೋಲು
ಕೋಶ ೮ – ೨೦ : ಗಂಡಿನ ಜನನಾಂಗ, ಶಿಶ್ನ, ಲಿಂಗ
ಕೋಶಪಾನ ೮ – ೨೦ : ‘ದಿವ್ಯ’ದ ಒಂದು ಪರೀಕ್ಷೆಯಲ್ಲಿ ವಾದಿ ಪ್ರತಿವಾದಿಗಳು ತಮ್ಮ ಹೇಳಿಕೆಯನ್ನು ಸ್ಥಾಪಿಸಲು ದೇವತಾವಿಗ್ರಹಕ್ಕೆ ಅಭಿಷೇಕಮಾಡಿದ ನೀರಿನಲ್ಲಿ ಎರಡು ಅಥವಾ ಮೂರು ಬೊಗಸೆ ನೀರನ್ನು ಕುಡಿಯುವ ‘ಕೋಶ’ ಎಂಬ ಪರೀಕ್ಷಾವಿಧಾನ
ಕೌಳ ೪ – ೧೨೩, ೬ – ೩೭ : ಶೈವ ವಾಮಾಚಾರಪದ್ಧತಿಯ ಒಂದು ಪಂಗಡ
ಕ್ರೌಂಚಾರಿ ೮ – ೧೧೫ : ಕ್ರೌಂಚ ಪರ್ವತವನ್ನು ಭೇದಿಸಿದ ಷಣ್ಮುಖ
ಕ್ಲೇಶದುರಂಧರ ೭ – ೪೩ : ಬರಿಯ ಕಷ್ಟಗಳನ್ನೇ ಅನುಭವಿಸುವವನು
ಕ್ಷತ ೧೪ – ೧೪೦ : ಗಾಯ
ಕ್ಷಪಿತ ೭ – ೭೨ : ನಾಶಮಾಡಲ್ಪಟ್ಟ
ಕ್ಷೀರಾವನಿಜಾತ ೬ – ೮ : ಐದು ಬಗೆಯ ಹಾಲುಮರ
ಕ್ಷೇತ್ರಜ ೧೧ – ೩೩ : ಮದುವೆಯಾದ ಹೆಂಡತಿಯಲ್ಲಿ ದೊಡ್ಡವರ ಅನುಗ್ರಹದಿಂದ ಹುಟ್ಟಿದವನು.
ಖಜ್ಜಯ ೧೪ – ೯ : ಕಜ್ಜಾಯ
ಖಟ್ವಾಂಗ ೮ – ೨೨ : ತುದಿಯಲ್ಲಿ ತಲೆಯ ಬುರುಡೆಯುಳ್ಳ ಶಿವನ ಗದೆ
ಖಂಡೇಂದುಧರ ೯ – ೩೯ : ಶಿವ
ಖರಕರ ೭ – ೩, ೯ – ೧೯ : ಸೂರ‍್ಯ
ಖಳಸಂಸ್ಕೃತಿ ೩ – ೨೬ : ಕ್ರೂರವಾದ ಸಂಸಾರ
ಖಳ್ಗಾಮಿಷ ೧೧ – ೧೩೧ : (?)
ಖೞ್ಗ ೧೦ – ೧೪೭ : ಖಡ್ಗ
ಗಣಿದ ೧೦ – ೧೩೪ : ಗಣಿತ, ಲೆಕ್ಕ
ಗಮೇಧ್ಯ ೧೨ – ೨೨ : ಸಗಣಿ (?)
ಗರಜೆಗ ೧೧ – ೪೧ : ದರದಿನವನು, ಹಂಗಿನವನು (?)
ಗಸಣಿ ೫ – ೧೩೪, ೧೦ – ೨೪ : ತೊಂದರೆ, ಕಷ್ಟ, ಕಾಟ
ಗಹನ ೭ – ೧೧ : ಕಷ್ಟ
ಗಹನಂಗೆಯ್ ೪ – ೭೮ : ದೊಡ್ಡದಾಗಿ ತಿಳಿ
ಗಳಗಾಳ ೧೦ – ೮೯ : ಕೊರಳಿಗೆ ಹಾಕುವ ಕೊಕ್ಕೆ, ಗಂಟಲ ಗಾಣ
ಗಾತ್ರಕಂಡೂಯನ ೧ – ೨೩ : ಶರೀರದಲ್ಲಿ ನವೆಯಾಗುವುದು
ಗಾವಿಲ ೨ – ೬೭, ೫ – ೫೯, ೯ – ೭೯, ೧೧ – ೧೧೪ : ದಡ್ಡ, ಬೆಪ್ಪ
ಗಾಳಿಸು ೧೩ – ೩೫ : ಶೋಧಿಸು
ಗೀರ್ವಾಣಸುಖ ೪ – ೯೩ : ಸ್ವರ್ಗಸುಖ
ಗುಕ್ಕಿಸು ೯ – ೧೧೪ : ನುಂಗು
ಗುಣಘ್ನ ೧೧ – ೮೦ : ಗುಣಹಾನಿ ಮಾಡುವವನು
ಗುಂಡುಗೊಳ್ ೧೩ – ೧೦ : ಹೊಡೆಯಲು ದಪ್ಪಕಲ್ಲು ಎತ್ತಿಕೊಳ್ಳು
ಗುರುತಳ್ಪಗತ ೧೧ – ೭೪ : ಗುರುವಿನ ಪತ್ನಿಯೊಂದಿಗೆ ಕೂಡಿದವನು
ಗುರುಪಂಚಕ ೧ – ೯೮ : ಪಂಚ ಪರಮೇಷ್ಠಿಗಳು; ಅರ್ಹಂತ ಸಿದ್ಧ ಆಚಾರ‍್ಯ ಉಪಧ್ಯಾ ಸಾಧು ಎಂಬವರು
ಗುಳ್ಳ ೪ – ೧೫೩ : ಬದನೆ ಜಾತಿಗೆ ಸೇರಿದ ಒಂದು ವನಸ್ಪತಿ
ಗೂಂಟ ೧ – ೧೭ : ಗೂಟ
ಗೂಥ ೧೨ – ೨೩ : ಅಮೇಧ್ಯ
ಗೆಡೆಗೊಳ್ ೬ – ೨ : ಸಹವಾಸಮಾಡು, ಒಡಗೂಡು
ಗೆಂಟು ೧೫ – ೮೨ : ದೂರ
ಗೆತ್ತು ೩ – ೮೪ : ಭಾವಿಸಿ (ಧಾ. ಗಿೞು)
ಗೊಟ್ಟಿಜೂದು ೬ – ೪೮ : ಸಮೂಹದಲ್ಲಿ ಆಡುವ ಜೂಜು
ಗೊಡ್ಡ ೮ – ೯೫, ೧೪ – ೧೩ : ಉಪಟಳ, ಚೇಷ್ಟೆ, ಅಸಭ್ಯವರ್ತನೆ
ಗೊಂದೆ ೧೦ – ೧೮೮ : ಎತ್ತು, ಬಸವ
ಗೊರವ ೪ – ೧೩೪, ೮ – ೪೨, ೮೭, ೧೦ – ೧೭೮ : ಶೈವಸಂನ್ಯಾಸಿ, ಜೋಗಿ
ಗೊರವಿ ೧೩ – ೨೩ : ಜೋಗಿಣಿ
ಗೋಘ್ನ ೧೧ – ೮೦ : ಗೋಹಂತಕ
ಗೋತ್ರ ೫ – ೧೦೬ : ಬಂಧುಬಳಗ
ಗೋತ್ರಾಚಳ ೧೫ – ೮೩ : ಕುಲಪರ್ವತ