ಪ್ರಸ್ತುತ ಪರಿಷ್ಕರಣವನ್ನು ಸಿದ್ಧಪಡಿಸುವಾಗ ಶ್ರವಣಬೆಳಗೊಳದ ಎರಡು ಹಸ್ತಪ್ರತಿಗಳ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಎರಡು ಹಸ್ತುಪ್ರತಿಗಳ ಸಹಾಯವನ್ನು ಪಡೆದಿದೆ. ಧಾರವಾಡದ ಮುದ್ರಿತ ಪ್ರತಿಯ ಪಾಠಗಳಲ್ಲಿ ಸ್ಖಾಲಿತ್ಯಗಳೋ ಸಂದಿಗ್ಧತೆಗಲೋ ಕಂಡುಬಂದಾಗ ಸವಿಮರ್ಶವಾಗಿ ಆ ಪ್ರತಿಗಳ ಪಾಠಗಳನ್ನು ಸ್ವೀಕರಿಸಿದೆ. ಅಂತಹ ಪಾಠಗಳನ್ನು ಪ್ರತ್ಯೇಕಚಿಹ್ನೆಗಳಿಂದ ತೋರಿಸಿಲ್ಲ. ಅವನ್ನು ಮುಂದಿನ ಪಾಠಪರಿಷ್ಕರಣಪಟ್ಟಿಕೆಯಲ್ಲಿ ತೋರಿಸಿದೆ. ಸಾಮಾನ್ಯರೀತಿಯ ತಿದ್ದುಪಾಟುಗಳನ್ನು ಹಾಗೆಯೇ ತಿದ್ದಿದ್ದರೂ, ಮುಖ್ಯ ಸಂಪಾದಕೀಯ ಪಾಠಗಳನ್ನು ಚೌಕಕಂಸಗಳಲ್ಲಿ ಪರಿಷ್ಕರಣದಲ್ಲಿ ತೋರಿಸಿದೆ.

ಮುದ್ರಿತ ಪರಿಷ್ಕರಣದ (ಧಾರವಾಡ, ೧೯೫೮) ಪಾಠಗಳು ಶ್ರವಣಬೆಳಗೊಳದ ಪ್ರತಿಯೊಂದರ ಪಾಠಗಳನ್ನೇ ಸಾಮಾನ್ಯವಾಗಿ ಹೋಲುತ್ತವೆ. ಕುವೆಂಪು ಕಅಸಂ. ಪಾಠಗಳು ಪ್ರತ್ಯೇಕವಾಗಿದ್ದು, ಹೆಚ್ಚು ತೃಪ್ತಿಕರವಾಗಿರುವ ಕಾರಣ ಪ್ರಸ್ತಕ ಪರಿಷ್ಕರಣಕ್ಕೆ ಅವುಗಳಿಂದ ಹೆಚ್ಚು ಸಹಾಯವಾಗಿದೆ. ಇಲ್ಲಿಯೂ ಕೆ.ಬಿ. ೭೩ರ ಸಹಾಯವೇ ಹೆಚ್ಚು. ವಿರಳವಾಗಿ ಧಾರವಾಡದ ಮುದ್ರಿತಪ್ರತಿಯ ಅಧಿಕಪಾಠ (ಈ ಪ್ರತಿ)ವನ್ನೂ ‘ಕರ್ನಾಟಕ ಕವಿಚರಿತೆ’ ಯಲ್ಲಿ ಉದ್ಧೃತವಾದ ಪದ್ಯಗಳ ಪಾಠಗಳನ್ನೂ ಬಳಸಿಕೊಂಡಿದೆ)

ಅಶ್ವಾಸ – ಪದ್ಯ ಸಂಖ್ಯೆ ಧಾರವಾಡದ ಮುದ್ರಿತಪ್ರತಿಯ ಪಾಠ ಪ್ರಸಕ್ತ ಪರಿಷ್ಕರಣ ಸ್ವೀಕೃತ / ಸಂಪಾದಿತಪಾಠ
೧ – ೧೦ ಪೊಗಿಸಿ ಮದರೇ ಪೋಗಿ ಸೀಮಂಧರೆ (ಮೂ)
೧ – ೧೭ ಬಟ್ಟಲನೋವದೆತ್ತಿ ಬಟ್ಟಲನೋವದೊತ್ತಿ (ಹೊಂ)
೧ – ೩೨ ಜನವಲ್ಲಭ ಜಿನವಲ್ಲಭ (ಹೊಂ)
೧ – ೪೪ ಕೂಡೆ ಕವಿ (ಕೆ.ಬಿ.೭೩)
೧ – ೭೦  – ಇದರ ಮುಂದೆ ಮುದ್ರಿತ ಪರಿಷ್ಕರಣದಲ್ಲಿಯೂ ಕೆ.ಬಿ.೭೩ರಲ್ಲಿಯೂ ಕೆಲವು ಬೇರೆ ಪದ್ಯಗಳಿವೆ. ಇಲ್ಲಿ ಮುದ್ರಿತ ಪರಿಷ್ಕರಣದ ಎರಡು ಪದ್ಯಗಳನ್ನು ಮಾತ್ರ ಸ್ವೀರಕಿಸಿದ. (ಪದ್ಯ ೪,೫)
೧ – ೮೦ ಮಟ್ಟವಿರು ಮಟ್ಟಮಿರು (ಕೆ.ಬಿ.೭೩)
೧ – ೧೦೮ ತಾನೆಲ್ಲಿದ ತಾನಲ್ಲಿದ (ಹೊಂ)
೧ – ೧೧೧ ಯೆಂಬಂತೆನ ಯೆಂಬಂ ತನ (ಕೆ.ಬಿ.೭೩)
೧ – ೧೧೨ ಭಾವಿಪನಾಗಿ ಭಾವಿತನಾಗಿ (ಕೆ.ಬಿ.೭೩)
೧ – ೧೩೦ ಯೆಂಬುದುಮೀ ಯೆಂಬುದನೀ (ಕೆ.ಬಿ.೭೩)
೨ – ೫ ಕಾಲಮಪ್ಪುದಱಂದಂ ಕಾಲದವನಪ್ಪುದಱಂ (ಕೆ.ಬಿ.೭೩)
೨ – ೧  – ಈ ಪದ್ಯಕ್ಕೆ ಮೊದಲು (ಕೆ.ಬಿ.೭೩) ಪ್ರತಿಯಲ್ಲಿ ಒಂದು ಶ್ಲೋಕ ಮತ್ತು ಒಂದು ಕಂದಪದ್ಯವಿದೆ.
೨ – ೫೦  – ಇದರ ಬಳಿಕ (ಕೆ.ಬಿ.೭೩)ರಲ್ಲಿ ಒಂದು ಬೇರೆ ಕಂದವಿದೆ.
೨ – ೫೧ ಬಂದಣಿಕೆ ಬಂದಳಿಕೆ (ಕೆ.ಬಿ.೭೩)
೨ – ೫೧, ೫೨ ರನಡುವೆ  – ಪದ್ಯ ೫೧* (ಕೆ.ಬಿ.೭೩ಹೊಂ)
೨ – ೬೮ ಪರಿಯಳಿಯ ಪರಿವಳಿಯ (ಹೊಂ)
೩ – ೫ ಪಚ್ಚುತೆಂತು ಪೊೞ್ತೆಂತೆಂತು
೩ – ೬೧ ನರಕದ ದುಃಖವನುಣುತುಂ …. ಪಡೆಯಲ್ಕೆ ಪೇಳಿಮೆಂಬರೊ ಪೇಳಂ ಕೆ.ಬಿ.೭೩ ಮತ್ತು ಸಂಪಾದಕೀಯ ಸವರಣೆ
೩ – ೬೩ ಬಾವಿಯೊಳಿರ್ದ ಪಾವಸೆ…. ಕರ್ಮಮುಳ್ಳಿನಂ ಕೆ.ಬಿ. ೭೩ರ ಪಾಠ ಹೊಂಬುಚ ಪ್ರತಿಯ ಪಾಠ ಮತ್ತು ಸಂಪಾದಕೀಯ ಸವರಣೆ
೩ – ೬೬ ಜೈನರ ಮತಮಂ ಕೇಳ್ಪುದು ಕೆ.ಬಿ. ೭೩ರ
೩ – ೭೬ ಪುಸಿಯಂ…. ಧರ್ಮಶಾಸ್ತ್ರಂ ಪೇಳ್ವರ್ ಕೆ.ಬಿ. ೭೩ರ
೩ – ೭೭ ಉತ್ತಮಮೆನಿಸಿದ…. ಕೆ.ಬಿ. ೭೩ರ
೩ – ೭೮ ನೋಳ್ಪಾದ ನೋೞ್ಪಂದಂ (ಹೊಂ)
೩ – ೮೮ ಇದು ದೆಯ್ವಮಪ್ಪುದೆ ಹೊಂಬುಚ ಪ್ರತಿಯ ಪಾಠ
೩ – ೯೩ ಮಾಳ್ಪ ರೂಳ್ವ (ಕೆ.ಬಿ.೭೩)
೪ – ೨ ಓರ್ವರೆಯುಂ…. ನೊಪ್ಪುತ್ತಿರ್ಪರ್ (ಕೆ.ಬಿ.೭೩)ರ ಪಾಠ
೪ – ೧೩ ನಿರ್ವಿಚಿಕಿತ್ಯಾಕ್ಷ ನಿರ್ವಿಚಿಕಿತ್ಸಾಖ್ಯ (ಕೆ.ಬಿ.೭೩)
೪ – ೧೯ ನೆಗೞನೆಂತುಂ ನೆಗೞ್ವನೆಂತುಂ (ಕೆ.ಬಿ.೭೩)
೪ – ೪೯ ತಣಿಪುವುದವರಂ ತಣಿಪುವಂದಮಂ (ಕೆ.ಬಿ.೭೩)
೪ – ೫೭ ಅಧಿಕನಂದಲ್ಲಂ ಅಧಿಕನಲ್ಲದನಲ್ಲಂ (ಕೆ.ಬಿ.೭೩)
೪ – ೭೫ ಪಡೆಮಾತೆ ಪಡೆಮಾತೇಂ (ಕೆ.ಬಿ.೭೩), ಹೊಂ
೪ – ೧೨೫ ಜೈನಂ ಗಡವನ ಗಡ ಜೈನನವನ (ಕೆ.ಬಿ.೭೩)
೪ – ೧೩೯ ತಿಂಬನೆ ಎಡಹಿ ತಿಂಬನುಮೆಡಹಿ (ಕೆ.ಬಿ.೭೩)
೪ – ೧೪೦ ತಕ್ಕ ಠಕ್ಕ (ಕೆ.ಬಿ.೭೩)
೪ – ೧೫೯ ವಿಕಳೇಂದ್ರಿಯ ಮುದ್ರಿತ ಪರಿಷ್ಕರಣದ ಈ ಪ್ರತಿಯ ಪಾಠ
೫ – ೧೭ ಕುರಿಂಡಿಗೆ ಕುರುಂಜಿಗೆ (ಹೊಂ)
೫ – ೨೦ ಮಿತ್ತುಸುರೆ ಮಿತ್ತು ಬರೆ (ಕೆ.ಬಿ.೭೩)
೫ – ೨೫ ಇನಿಬರಿರ್ದು ಎನಿಬರಿರ್ದು (ಹೊಂ)
೫ – ೨೮ ನೋವುಮೆನಸುಂ ನೋವುಮಿನಿಸಾಗದಂತಿರೆ (ಕೆ.ಬಿ.೭೩)
೫ – ೫೩ ಸಲಿಸಿಪುದುಂ ಸಡಲಿಪುದುಂ (ಕೆ.ಬಿ.೭೩)
೫ – ೧೫೨ ದೋಷಿಗಳಂ ಪೊರೆದೊಡೆ ಈ ಪ್ರತಿಯ ಮತ್ತು (ಕೆ.ಬಿ.೭೩) ಪ್ರತಿಯ ಪಾಠ
೬ – ೧೦ ಪರಿಕಿಪೊಡೆಂ ಜೈನಂ ಹೊಂಬುಚ ಮತ್ತು (ಕೆ.ಬಿ.೭೩)ರ ಪಾಠ
೬ – ೧೦೪ ಭವ್ಯಂ ಗೆಡೆಗೊಡಂ ಭವ್ಯರನೊಡಗೊಂಡಾಡಿದನೆ ಪಡೆ ಗುಮಿಹ (ಕೆ.ಬಿ.೭೩)
೭ – ೪ ಅಱಿಯಮಾರ್ಗ ಅಱಿಯಲಾರ್ಗ (ಕೆ.ಬಿ.೭೩)
೭ – ೮ ಸಾಲಮುಪವಾಸಮೆಂದು ಸಾಲದುಪವಾಸಮೆಂದು (ಕೆ.ಬಿ.೭೩)
೭ – ೧೦ ಬೀಸಿದರೆ ಬೀಸಿದೆವೆ (ಹೊಂ+(ಕೆ.ಬಿ.೭೩)
೭ – ೧೨ ಧೃತಿಗೆಟ್ಟಡಮಱದು ಹೊಂಬುಚ ಪ್ರತಿಯ ಪಾಠ
೭ – ೧೫ ಮನೆಯಿಲ್ಲದವರಿಗೆ (ಕೆ.ಬಿ. ೭೩ರ ಪಾಠ)
೭ – ೬೧ ನಿಂತಿರೆ ಬೇಳ್ಪನಲ್ಲ ಪೊನ್ನಂ ಜೈನರಿ ನಿತರರವೋಲ್ ಬೇೞ್ಪನಲ್ಲ ಪೊನ್ನಂ ಜೈನಂ (ಹೊಂ+ (ಕೆ.ಬಿ.೭೩)
೭ – ೬೬ ಇಟ್ಟಳ ದಿಟ್ಟಳ (ಕೆ.ಬಿ.೭೩)
೮ – ೧೯ ಪೊಗೞುವೆತ್ತವಂ ಮನೆಯ…. ಪೊಗೞ್ತೆವೆತ್ತವರನವರ ಮನೆ ಯುಮನಾದ (ಹೊಂ)
೮ – ೨೦ ಕೋಪಪಾನಮಂ ಕೋಶಪಾನಮಂ (ಹೊಂ)
೮ – ೩೩ ದೆಯ್ವಮೇಲಾ ದೆಯ್ವಮಲ್ಲಾ (ಕೆ.ಬಿ.೭೩+ಹೊಂ)
೮ – ೩೭ ೩ನೆಯ ಪಾದ ತ್ರುಟಿತ ಮತ್ತು ೪ನೆಯ ಪಾದದಲ್ಲಿ ಪ್ರಾಸಭಂಗ ಈ ಪ್ರತಿಯ ಪಾಠ
೮ – ೩೮ ಧಾರಿಣಿಯೊಳಮಾಂಗನಿರರಿ (ಕೆ.ಬಿ.೭೩+ಹೊಂ)
೮ – ೪೧ ಕೀವಿಲು…. (ಕೆ.ಬಿ.೭೩+ಹೊಂ)
೮ – ೭೪ ಊಳ್ವವನೆ ಯಾಳ್ವನೆ (ಕೆ.ಬಿ.೭೩+ಹೊಂ)
೮ – ೭೯ …. ನೀರು ಸುಡಲು ಕಿಚ್ಚುಗಳುಂಟೆ (ಕೆ.ಬಿ.೭೩+ಹೊಂ)
೮ – ೮೩ ಪ್ರತಿಯೆ ಪ್ರತಿಮೆ (ಕೆ.ಬಿ.೭೩+ಹೊಂ)
೮ – ೯೦ ರಿಂದ ೯೨  – ಕೆ.ಬಿ.೭೩ ಮತ್ತು ಹೊಂಬುಚ ಪ್ರತಿಗಳಲ್ಲಿ ಈ ಪದ್ಯಗಳಿವೆ
೮ – ೧೦೨ ರಿಂದ ೧೦೮  – ಕೆ.ಬಿ.೭೩ ಮತ್ತು ಹೊಂಬುಚ ಪ್ರತಿಗಳಲ್ಲಿ ಈ ಪದ್ಯಗಳಿಲ್ಲ
೮ – ೧೨೧ ಮಾಡುಗು ಗುಣಮುಮಂ…. (ಕೆ.ಬಿ.೭೩+ಹೊಂ)
೮ – ೧೫೬ ಪಡತಳಮನೆ ನಡೆ…. ಪದತಳಮನಂಬು ಕೊಳೆ (ಕೆ.ಬಿ.೭೩)
೮ – ೧೬೮ ಬಿಂಬಂಗೊಳ್ವೇದಂ (ಕೆ.ಬಿ.೭೩+ಹೊಂ)
೮ – ೧೭೮ ಯಾಱಬುದ್ಧಂ ಯಾಱನೇಕೆ
[ಲೆ] ಬುದ್ಧಂ (ಹೊಂ)
೮ – ೨೦೮ ರ ಮುಂದೆ  – ಇಲ್ಲಿಂದ ಮುಂದೆ ಹಲವು ಪದ್ಯ ಗಳು ಕೆ.ಬಿ.೭೩ ಮತ್ತು ಹೊಂಬುಚ ಪ್ರತಿಗಳಲ್ಲಿಲ್ಲ
೯ – ೧ ದೈತನೆಮಗೀಗೆ ಶ್ರೀದಯಿತನೀಗೆ (ಕೆ.ಬಿ.೭೩)
೯ – ೧೦ ಶಂಕರನಾರಾಯಣನ (ಕೆ.ಬಿ.೭೩+ಹೊಂ)
೯ – ೧೪ ಕುಂದುಗುಮಾಗಳೆ (ಕೆ.ಬಿ.೭೩+ಹೊಂ)
೯ – ೨೧ ಮದವರ್ಗಳ ಮತದವರ್ಗಳ (ಕೆ.ಬಿ.೭೩+ಹೊಂ)
೯ – ೨೪ ನೋಂತುವರದೆ…. ಕೆ.ಬಿ.೭೩
೯ – ೩೩ ಮುಕ್ಕಳಿಸಿಯುಗುೞಿ ಕೆ.ಬಿ.೭೩
೯ – ೬೬ ಪಶುವನಾಳ್ವನವನೇನೆಂಬರ್ ಕೆ.ಬಿ.೭೩
೯ – ೭೪ ನರರುಂ ಗುರುಮಂ ನರರುರುಗುರಮಂ ಕೆ.ಬಿ.೭೩
೯ – ೭೯ ಮನೆಮನೆ…. ಗಾವಿಲರೊಳರೇ ಕೆ.ಬಿ.೭೩
೯ – ೧೨೦ ನಂಬರಿಂತದಂ ನಂಬಲಿಂತದಂ ಕೆ.ಬಿ.೭೩
೧೦ – ೩ ನಮೂರ್ತನಂ…. ನಮೂರ್ತನಪ್ಪನಿಂ ಕೆ.ಬಿ.೭೩ + ಹೊಂ
೧೦ – ೩೬ ಪುಣ್ಯಂಗೀ ತದಿತ್ತ ಪುಣ್ಯಂಗಿತ್ತೊಡಿತ್ತ ಕೆ.ಬಿ.೭೩
೧೦ – ೬೬ ಜಗಮಂ ವರಮಂ ಕೆ.ಬಿ.೭೩ + ಹೊಂ
೧೦ – ೭೭ ಈಯಲಂದು ಖಾಂಡವವನಮಂ ತಿನಲುಂ ಈಯಲುಂಡು ಖಾಂಡವವನಮಂ ಕೆ.ಬಿ.೭೩
೧೦ – ೭೮ ಮೃಡನಿರ್ದಂ ಮೃಡಾನಿ[ಯಾ] (ಹೊಂ)
೧೦ – ೮೮ ಬೇರಲ್ಲದ ಮತಮೊಂದಲ್ಲು ಕೆ.ಬಿ.೭೩
೧೦ – ೧೦೨ ಕಡೆದಮರಾಸುರರುಂ ಕೆ.ಬಿ.೭೩ + ಹೊಂ
೧೦ – ೧೦೪ ಮಾರಿಗೆ ತಂತ್ರಿಸಿ ಕೇಳಲ್ ಕೆ.ಬಿ.೭೩ರ ಪಾಠ; ಆದರೆ ಅಭಿಪ್ರಾಯವಿಶದತೆಯಿಲ್ಲ
೧೦ – ೧೧೦ ಉಂಗುಟದುದ್ದದ ಮನುಜ ಉಂಗುಟದನಿತೊಳನೊರ್ವ ಕೆ.ಬಿ.೭೩
೧೦ – ೧೧೮ ಇರ್ದೆಡೆ ಇಟ್ಟೆಡೆ ಕೆ.ಬಿ.೭೩
೧೦ – ೧೬೬ ರಥಬೇಱ ರಥವೇಱಿ ಕೆ.ಬಿ.೭೩ + ಹೊಂ
೧೦ – ೧೮೮ ಗೋಡೆ ಗೊಂದೆ ಕೆ.ಬಿ.೭೩
೧೦ – ೧೮೮ ಪಶೂತನಿಬಂಧ ಪಶುತ್ವನಿಬದ್ಧ ಕೆ.ಬಿ.೭೩
೧೧ – ೧೪ ಎಲ್ಲಮಂ ತಡೆಯವರ್ ತಡೆದವರ್ ಕೆ.ಬಿ.೭೩
೧೧ – ೧೯ ನಂಬಳವರ್ಗಳ್ ನಂಬಲವರ್ಗಳ್ (ಹೊಂ)
೧೧ – ೩೩ ಪುಟ್ಟಿದೊಡೇನೊ ಗನಂಪುಟ್ಟದೊಡೆ ಲೋಗರಿಂ ಕ್ಷತ್ರಜನಂ ಕ್ಷೇತ್ರಜನಂ ಕೆ.ಬಿ.೭೩
೧೧ – ೪೭ ಬಿಂಬಂಗಳ್ ವೇದಗಳ ಬಿಂಬಂ ಋಗ್ವೇದಂ ಗಡ ಕೆ.ಬಿ.೭೩
೧೧ – ೪೩ ರಿಂದ ೬೦  – ಕೆಲವು ಪದ್ಯಗಳು ಕೆ.ಬಿ.೭೩ ಮತ್ತು ಹೊಂಬುಚ ಪ್ರತಿಗಳಲ್ಲಿಲ್ಲ; ಸ್ಥಾನ ವ್ಯತ್ಯಯಗೊಂಡಿವೆ.
೧೧ – ೭೫ ಅರ್ವಿಸೆ ಅರ್ಚೆಸೆ ಕೆ.ಬಿ.೭೩
೧೧ – ೮೩ ಬೆಂದಿರ್ದ ಸೀರೆಗಂ ಕೆ.ಬಿ.೭೩ರ ಪಾಠ
೧೧ – ೮೯ ಮತಿಹೀನರೆಲ್ಲ ನೆಱು ಮತಿಹೀನರ ಲೌಲ್ಯರ ಕೆ.ಬಿ.೭೩
೧೧ – ೧೦೦ ಪಶುವಿನೊಳೋರಂತಂತಿರೆ ಪಶುವಿನೊಳೆಂದೋರಂತಿರೆ ಕೆ.ಬಿ.೭೩
೧೧ – ೧೩೫ ಪೊಲೆಯರ್ ನೆಗೞ್ದೊಂದಂದದೆ ಕೆ.ಬಿ.೭೩ರ ಪಾಠ
೧೧ – ೧೪೯ ನಿರ್ಬಂಧದೆ ನಿರ್ವಂದದೆ (ಹೊಂ)
೧೧ – ೧೬೧ ಮೆಚಿಯದೆ ರೇಂ ಬೇಯರೇ ಕೆ.ಬಿ.೭೩
೧೨ – ೧೩ ರಣದೊಳ್ ಧುರದೊಳ್ ಕೆ.ಬಿ.೭೩
೧೨ – ೧೬ ನೀರನೀರದನರಸಂ ನೀರನದನಿದಿರರಸಂ ಕೆ.ಬಿ.೭೩
೧೨ – ೨೪ ದದ ಗಡ
೧೨ – ೩೧ ವರ್ಣಾ ರತ್ನಾ ಕೆ.ಬಿ.೭೩
೧೨ – ೩೨ ನಭದೋಣೊಮಗಿಕ್ಕಿಡೊತಂದಾ ಹಿಳಿದು ನಭದೊಳೊಣಗಿಕ್ಕಿದೊಡಾ ಕೆ.ಬಿ.೭೩
೧೨ – ೩೪ ವಾಯ್ತಾವಿ ಮಾಯಾವಿ ಕೆ.ಬಿ.೭೩
೧೨ – ೨ ಮಾಡುವರೊಳುಮುಳ್ಳ…. ಕೆ.ಬಿ.೭೩ರ ಪಾಠ
೧೩ – ೧೨  – ಕೆ.ಬಿ.೭೩, ೭೨ರಲ್ಲಿಲ್ಲದ ಪದ್ಯ
೧೩ – ೧೩ ಕೆಲರು ಕೆಲಬರು ಕೆ.ಬಿ.೭೩
೧೩ – ೨೨ ನಮ್ಮ ನಮ್ಮೀ ಕೆ.ಬಿ.೭೩
೧೩ – ೪೨ ಕಿವಿವೋಲಿನಿತ ಕಿವಿವೊಕ್ಕನಿತ ಕೆ.ಬಿ.೭೩
೧೩ – ೪೦ ಬೆಂದ ಮಗಂದಿರ್ ಈ ಪ್ರತಿಯ ಪಾಠ
೧೩ – ೫೨ ಕರ್ಮಕ್ಕಳಿಪಿಂ ಕರ್ಮಂ ಕಡುಪಿಂ ಕೆ.ಬಿ.೭೩
೧೪ – ೩ ಕವಿರ್ಮಂಸಂ ವಿಕರ್ಮಸ್ಥಂ ಕೆ.ಬಿ.೭೩
೧೪ – ೨೬ ತುರಿಪದೆ ಕೊಂಡುಪೋಗಿ ಕೆ.ಬಿ.೭೩ರ ಪಾಠ
೧೪ – ೫೪ ದೇವತ್ವಕ್ಕಂ ವಾಗುಣಿಗಳೆ ದೇವತ್ವಕ್ಕಿನ್ನಾ ಗುಣಿಗಳೆ (ಕೆ.ಬಿ.೭೩)
೧೪ – ೬೯ ಕಂಡಜ್ಞಾನಿ ಕಂಡೆಂ ಜ್ಞಾನಿ ಕೆ.ಬಿ.೭೩
೧೪ – ೭೬ ಮಱುಯಿಪರ್ ಚರಿಯಿಪರ್ ಕೆ.ಬಿ.೭೩
೧೪ – ೮೦ ಪೊಱಮೆಂದು ಪೊಱಮಡಿಮೆಂದು ಕೆ.ಬಿ.೭೩
೧೪ – ೧೦೮ ಮೆಲುದಂದ ಮೆಲ್ಲಂದ (ಹೊಂ)
೧೪ – ೧೧೦ ತಾಮೆಲ್ಲ ತಾಮೊಲ್ಲ (ಹೊಂ)
೧೪ – ೧೧೭ ಮೇಲಿಗದೆ ವೋಲಿರದೆ ಕೆ.ಬಿ.೭೩+ಹೊಂ
೧೪ – ೧೩೩ ನಹಿಂಸೆಯ ನೊಂ ನಹಿಂಸೆಯಂ ಹಿಂಸೆಯನೊಂ (ಕೆ.ಬಿ.೭೩ + ಹೊಂ)
೧೪ – ೧೪೦ ದೊಳ್ಪನೊಲ್ಲದಂ ದೊಳ್ಪನೆ ಬೇೞ್ಪನೊಲ್ಲದಂ (ಕೆ.ಬಿ.೭೩)
೧೪ – ೧೪೩ ದಿಷ್ಟದಿ ನಡೆವ ದಿಷ್ಟದೊಳೆ ನಡೆವ (ಕೆ.ಬಿ.೭೩)
೧೪ – ೧೫೨ ಪುಳುಗನೀರಂ…. ಕೆ.ಬಿ.೭೩ + ಹೊಂ
೧೪ – ೧೫೩ ಪುೞವನಿಱುಂಪೆಯ ಕೆ.ಬಿ.೭೩ + ಹೊಂ
೧೪ – ೧೫೬, ೧೫೭  – ೧೪ – ೧೫೬, ೧೫೭ರ ನಡುವೆ ಹಲವು ಪದ್ಯಗಳು ಕೆ.ಬಿ.೭೩ರಲ್ಲಿ ಹೆಚ್ಚಾಗಿವೆ. ಕೆಲವು ಪುನರಾವರ್ತನೆಗೊಂಡಿವೆ.