(ಮೊದಲ ಸಂಖ್ಯೆ ಆಶ್ವಾಸವನ್ನೂ, ಎರಡನೆಯ ಸಂಖ್ಯೆ ಪದ್ಯವನ್ನೂ ಸೂಚಿಸುತ್ತದೆ)
ಆಗುರ್ವ – ೧ – ೮೭ವ ಹೆದರಿಕೆ
ಅಘ ೧ – ೨೩ ಪಾಪ
ಅಟ್ಟೆ ೯ – ೩೯ವ ಮುಂಡ
ಅಡರ್ ೯ – ೩೮ ಏರು
ಅಡ್ಡಣಿಗೆ ೨ – ೫೩ ಮೂರುಕಾಲಿನ ಮಣೆ
ಅಣ್ಣೆವಾಲ್ ೨ – ೫೪ ಪರಿಶುದ್ಧನವಾದ ಹಾಲು
ಅವಷ್ಟಂಭ ೧ – ೧೪ ಆಶ್ರಯ
ಅವುಜ ೨ – ೨೧ ಒಂದು ರೀತಿಯ ವಾದ್ಯ
ಅಸವಸ ೨ – ೫೨ ಬೇಗ, ತ್ವರೆ
ಅಳಗೆ ೨ – ೨೩ ಧಾನ್ಯ ಅಳೆಯುವ ಪಾತ್ರೆ
ಆಖು ೧ – ೩೬ ಇಲಿ
ಅಖ್ಯ – ೨ – ೩೩ ಹೆಸರು
ಆಜಿರಂಗ ೫ – ೨೫ ಯುದ್ಧರಂಗ
ಆಟಿಸು ೯ – ೧೨ ಬಯಸು, ಬೇಡು
ಆರ್ಣವ ೧ – ೩೯ ಸಮುದ್ರ
ಆತಪ ೧ – ೮೫ ಬಿಸಿಲು
ಆತ್ಮಭವ ೧ – ೭೯ ಮಗ
ಆರ್ಪು ೧ – ೧೭ ಸಾಮರ್ಥ್ಯ
ಆರಯ್ಯೆ ೯ – ೮ ವಿಚಾರಮಾಡಲು
ಆಲೀಢ ೧ – ೪೩ ಬಾಣ ಹೊಡೆಯುವಾಗ ನಿಲ್ಲುವ ಕ್ರಮ
ಆಳ್ವೇರಿ ೧ – ೫೪ ವ ಕಂದಕವುಳ್ಳಕೋಟೆಯ ಎತ್ತರ ಗೋಡೆ
ಇರ್ಕಡಿ ೯ – ೪೩ ಎರಡು ಭಾಗ
ಇಕ್ಷುಚಾಪ ೧ – ೭ ಕಬ್ಬಿನ ಬಿಲ್ಲು
ಇಟ್ಟಿ ೧ – ೮೭ ವ ಈಟಿ
ಇಂತಪ್ಪ ೨ – ೪೧ ವ ಇಂಥ
ಇಭ ೧ – ೧೭ ಆನೆ
ಉಕ್ಕಡೆ ೨ – ೧೮ ಹೆಚ್ಚಿನ
ಉದ್ವರ್ತನ ೨ – ೫೨ ವ ಸುಗುಂಧಲೇಪನ
ಉಪಸರ್ಗ ೧ – ೮೬ ವ ಪೀಡೆ, ತೊಂದರೆ
ಉಪಾದೇಯ ೧ – ೪ ಅಂಗೀಕರಿಸತಕ್ಕ
ಉಮ್ಮಳಿಸು ೩ – ೬೫ ವ್ಯಥೆಪಡು
ಉರ್ವಿ ೧ – ೪೬ವ ಭೂಮಿ
ಉಳೂಕ ೩ – ೧೨೨ ಗೂಗೆ
ಎಱಂಕೆ ೨ – ೨೯ ರೆಕ್ಕೆ
ಎಲುವು ೨ – ೬೩ ಮೂಳೆ
ಒಗೆ ೧ – ೮೧ ಹುಟ್ಟು
ಓವಳಿಸು ೨ – ೧೭ ಹಾರು, ಜಿಗಿ
ಕಂಕೇಲ್ಲಿ ಭೂಜ ೧ – ೮೬ವ ಅಶೋಕ ವೃಕ್ಷ
ಕಣೆ ೧ – ೮೬ವ ಬಾಣ
ಕಂಡಣಿಸು ೧ – ೫೪ವ ಕಂಡರಿಸು
ಕನಲು ೯ – ೩೪ಕೋಪ
ಕಂಬು ೧ – ೫೨ವ ಒಂದು ಬಗೆಯ ಮೆಕ್ಕೆಯ ಜೋಳ
ಕಂಬುಗ್ರೀವ ೨ – ೧೮ವ ಶಂಖದಂತೆ ಕುತ್ತಿಗೆಯುಳ್ಳ
ಕಮ್ಮೆಣ್ಣೆ ೨ – ೫೨ವ ಮಗಮಗಿಸುವ ಎಣ್ಣೆ
ಕರ್ಚು – ೨ – ೬೩ವ ತೊಳೆ
ಕರ್ದಮ ೨ – ೫೨ ವ ಮಾಂಸ
ಕರಮೆ ೫ – ೧೧ ವಿಶೇಷವಾಗಿ
ಕಲುಷಿತ ೨ – ೩೮ವ ಕುಪಿತ
ಕಲ್ಪಭೂತ ೧ – ೭೨ ಕಲ್ಪವೃಕ್ಷ
ಕವರ್ದುಗೊಳ್ಳು ೩ – ೧೨ವ ದೋಚಿಕೊಳ್ಳು
ಕಳತ್ರ – ೪೬ ಹೆಂಡತಿ
ಕಳ್ತಲೆ ೧ – ೪೬ವ ಕತ್ತಲೆ
ಕಾಯ್ತ ೧ – ೪೮ ಕಾಯಿಬಿಟ್ಟ
ಕಾರಣೆ ೧ – ೫೯ ಕೆಂಪು ಬಣ್ಣದ ಪಟ್ಟಿ
ಕಾರ್ಗಾಲ ೨ – ೧೭ ಮಳೆಗಾಲ
ಕಿಸುಗಲ್ ೧ – ೫೮ ಕೆಂಪುಕಲ್ಲು
ಕೀಲಣೆ ೨ – ೧೫ ಕೀಲಕಂಬ
ಕುಟ್ಟಿಮ ೧ – ೭೪ ನೆಲೆಗಟ್ಟು
ಕುಳೀರ ೧ – ೩೯ ಏಡಿ, ನಳ್ಳಿ
ಕೂರ್ತು ೧ – ೩೭ ಪ್ರೀತಿಯಿಂದ
ಕೂರ್ಮ ೧ – ೩೯ ಆಮೆ
ಕೂಷ್ಮಾಂಡ ೨ – ೫೮ ಕುಂಬಳ
ಕೃತಕೃತ್ಯ ೧ – ೩೮ ಭಾಗ್ಯಶಾಲಿ
ಕೇವಲಜ್ಞಾನ ೧ – ೮೭ ವ ನಿರ್ಮಲಜ್ಞಾನ
ಕೇವಳಿ ೧ – ೧೦ ಸಿದ್ಧ, ಜಿನಯೋಗಿ
ಕೈವಾರ ೧ – ೬೦ ಹೊಗಳು
ಕೊಗ್ಗಿ ೫ – ೧೪ ವ ಒಂದು ಮರ
ಕಪ್ಪು ೯ – ೨೧ ಕಿವಿಯ ಆಭರಣ
ಕೋವಿದ ೧೦ – ೧ ಪಂಡಿತ
ಕೌವರೆಗೊಳ್ಳು ೧ – ೪೭ ಸಂಭ್ರಮಗೊಳ್ಳು
ಖೇಟ ೧ – ೭ ಗುರಾಣಿ, ಢಾಲು
ಗಲ್ಲ ೯ – ೨೬ ಕಪೋಲ, ಕೆನ್ನೆ
ಗವಸಣಿಕೆ ೨ – ೧೯ ಹೊದಿಕೆ, ಚೀಲ
ಗಾಡಿ ೨ – ೨೪ ಸೌಂದರ್ಯ
ಗುಂಡಿಗೆ ೫ – ೧೪ವ ಕಮಂಡಲು
ಗುಲ್ಫ ೨ – ೧೯ವ ಗಂಟು
ಗೊಂದಿ ೪ – ೨೪ ಮೂಲೆ
ಗೊಂದಣ ೫ – ೧೬ ಸಮೂಹ
ಗೌಂಟಿಕೆ ೧ – ೨೭ ವ ಚೊಚ್ಚಲ ಬಸಿರಿಗೆ ಕಟ್ಟುವ ರಕ್ಷೆ
ಚಕ್ಕವತ ೨ – ೫೯ ಒಂದು ಸೊಪ್ಪು
ಚಣಕ ೨ – ೩೯ ಕಡಲೆ
ಚಂದನ ೯ – ೧೦ ಶ್ರೀಗಂಧ
ಚಲ್ಲಣ ೨ – ೨೪ ವ ಚಡ್ಡಿ
ಚಾರಣ ೧ – ೧೧ ಗಾಯಕ
ಚಾರು ೧ – ೩೭ ಮನೋಹರ
ಜಾರ್ವಾಕ ೧ – ೨೪ ನಾಸ್ತಿಕವಾದಿ
ಛಾತ್ರ ೩ – ೧೪ವ ಶಿಷ್ಯ
ಜಂಬುಕ ೮ – ೨೪ ವ ನರಿ
ಜಂಭೀರ ೧ – ೪೮ ಗಜನಿಂಬೆ
ಜರೆ ೧೦ – ೩೨ ಮುಪ್ಪು
ಜಲಕ್ಕನೆ ೯ – ೬೬ ವ ಕೂಡಲೆ
ಜಿಹ್ವೆ ೪ – ೧೭ ವ ನಾಲಗೆ
ಝಷ ೧ – ೩೯ ಮೀನು
ಠವಣೆ ೨ – ೨೪ವ ರೀತಿ
ತಟ ೨ – ೫ ದಡ, ದಂಡೆ
ತರ್ಕ್ರಯಿಸು ೯ – ೪೦ ವ ಅಪ್ಪಿಕೊಳ್ಳು
ತಸ್ಕರ ೯ – ೧೯ ಕಳ್ಳ
ತಳೆ ೯ – ೬೮ ಧರಿಸು
ತಳ್ತಿಱೆ ೯ – ೫೯ ಬೆನ್ನಟ್ಟಿ ಇರಿ
ತಾರ್ಕ್ಷ್ಯ ೧ – ೩೨ ಹದ್ದು, ಗರುಡ
ತಿಗುಡು ೭ – ೫ ವ ಮರದ ತೊಗಟೆ
ತುಂಡ ೧ – ೩೪ ಬಾಯಿ
ತುಱುಚ – ೭ – ೫ವ ಕಜ್ಜಿ
ತುಱುಂಬು ೩ – ೬೯ವ ತುಂಬು
ತೂಣೀರ ೨ – ೧೯ವ ಬತ್ತಳಿಕೆ
ತೂರ್ಯತ್ರಯ ೫ – ೭ವ ನೃತ್ಯ, ಗೀತ, ವಾದ್ಯ ಈ ಮೂರು ಮೇಳ
ಳ್ ೧೦ – ೨೫ ಬೆನ್ನಟ್ಟು
ತೊಂಡು ೨ – ೨೪ ಮುಖ
ತೋಮರ ೧ – ೮೭ವ ಈಟಿ
ದಾಣಿ ೫ – ೧೧ವ ದೊಣ್ಣೆ
ದೀಹ೨ – ೧೬ ಬೇಟೆಯ ಆಶೆಗಾಗಿ ಕಟ್ಟಿದ ಪ್ರಾಣಿ
ದೂಱಿಸು ೧ – ೨೮ವ ಕಡಿಸು.
ದ್ವಿತಯ ೩ – ೨೧ ಎರಡು
ದ್ವಿಪ ೧ – ೨೮ ಆನೆ
ಧರ್ಮಾಧಿಕರಣ ೯ – ೫೧ವ ನ್ಯಾಯಾಲಯ
ಧ್ರುವಮಟ್ಠೆ ೨ – ೨೧ವ ಒಂದು ತಾಳ
ನಿಚಿತ ೧ – ೩೯ ತುಂಬಿದ, ರಾಶಿಮಾಡಿದ
ನಿಯಮ ೫ – ೧೧ವ ವ್ರತ, ಕಟ್ಟಳೆ
ನಿಱಿ ೧ – ೪೦ ನಿರಿಗೆ
ನೆಗಳ್ ೧ – ೧೭ ಮಾಡು
ನೆರೆಪು ೧ – ೪೫ ಕೂಡಿಸು
ನೆಱೆ ೩ – ೧೯ ಚೆನ್ನಾಗಿ
ನೇರ್ಪಡಿಸು ೯ – ೨೫ವ ಹೊಂದಿಸು, ಸರಿಮಾಡು
ನೇರ್ಪು ೫ – ೧೬ ನೇರವಾಗಿ
ನೇವರಿಸು ೨ – ೨೨ ಕೈಯಿಂದ ಸವರು
ನೇಸಱ ೫ – ೩೩ವ ಸೂರ್ಯ
ನೈಮಿತ್ತಕ ೧ – ೬೮ವ ಜ್ಯೋಯಿಸ
ನೈಯಾಯಿಕ ೧ – ೨೯ ತಾರ್ಕಿಕ, ಪಂಡಿತ
ನೋಂಪಿ ೪ – ೨೩ವ ವ್ರತ ಪಂಚೇಷ ೧ – ೩ ಕಾಮ
ಪಂಠಿಸು ೮ – ೧೩ ನೆಲದ ಮೇಲೆ ಹೊರಳಾಡು
ಪಡಕ ೨ – ೬೧ ಒಂದು ಪಾತ್ರೆ
ಪಣ್ತ ೧ – ೪೮ ಪಕ್ವವಾದ
ಪದಪು ೧೦ – ೫೬ ಆಶೆ
ಪನ್ನಗಭೂಷಣ ೩ – ೫೭ ಶಿವ
ಪರಕಲಿಸು ೧ – ೧೯ ವ್ಯಾಪಿಸು, ಹಬ್ಬು
ಪರದ ೯ – ೯ ವ್ಯಾಪಾರಿ
ಪರಿಯಣ ೨ – ೫೪ವ ತಟ್ಟೆ
ಪಲಸು ೧ – ೪೮ ಹಲಸು
ಪವಣ ೨ – ೧೯ ಹವಣ
ಪವಿ ೩ – ೫೪ ಇಂದ್ರಾಯುಧ
ಪಸರ ೧ – ೬೪ ಅಂಗಡಿ
ಪಳಂಚು ೧ – ೮೬ವ ತಾಗು
ಪಾಡಿವ ೧ – ೭೨ವ ಪಾಡ್ಯ
ಪಿಂಡಿವಾಳ ೧ – ೮೭ವ ಒಂದು ಆಯುಧ
ಪಿಪ್ಪಲಿ ೫ – ೧೪ವ ಸೊಂಡಿಲು
ಪೀವರ ೧ – ೪೭ ದಪ್ಪವಾದ
ಪುಗು ೫ – ೧೫ವ ಪ್ರವೇಶಮಾಡು
ಪುಱ್ಪಕ ೨ – ೩೩ ಪುಷ್ಪಕ
ಪುಱ್ಪವತಿ ೧ – ೬೭ವ ಪುಷ್ಪವತಿ
ಪುಂಶ್ಚಳಿ ೨ – ೨೪ವ ಜಾರೆ
ಪುಷ್ಕರ ೧ – ೪೨ವ ಆನೆಯ ಸೊಂಡಿಲ ತುದಿ
ಪುಸಿ ೯ – ೩೯ ಸುಳ್ಳು
ಪೂವಲಿ ೧ – ೫೯ ರಂಗವಲ್ಲಿ
ಪೆಕ್ಖಣ ೨ – ೨೪ವ ನೋಟ
ಪೊಣರ್ಚು ೧ – ೮೬ ದ್ವಂದ್ವಯುದ್ಧಮಾಡು
ಪೊರೆ ೩ – ೧೦೪ ಹತ್ತಿರ
ಪೊಱಮಡು ೯ – ೨೫ ಹೊರಡು
ಪೊಳ್ತು ೨ – ೪ ಹೊತ್ತು
ಪ್ರಚಯನ ೧ – ೩೯ ಕೂಡುವಿಕೆ
ಪ್ರವಾಳ ೨ – ೧೫ ಹವಳ
ಬಲ್ಲೆಹ ೧ – ೮೭ವ ಚುಚ್ಚುವ ಆಯುಧ
ಬಾಜಿಸು ೨ – ೧೯ವ ಬಾರಿಸು
ಬಾಯ್ತೆರೆ ೩ – ೨೬ ತುಟಿ
ಬಾವನ್ನ ೨ – ೫೩ವ ಶ್ರೀಗಂಧ
ಬಿಟ್ಟೇರು ೧ – ೮೭ವ ಒಂದು ಬಗೆಯ ಬರ್ಜಿ
ಬಿಣ್ ೧ – ೪೮ ಭಾರವಾದ
ಬೆಗಡು ೩ – ೧೫ವ ಆಶ್ಚರ್ಯ
ಬೆಟ್ಟಿಹ ೯ – ೨೭ ದೊಡ್ಡದಾದ
ಬೆಸಲೆ ೧ – ೭೨ವ ಹಡೆಯುವಿಕೆ
ಬೆಳಕಂಡಿ ೨ – ೧೧ ಗವಾಕ್ಷ
ಬೋಹಣ ೨ – ೨೪ವ ಮದ್ದಲೆ
ಭಗಣ ೨ – ೧೧ ನಕ್ಷತ್ರ
ಭಿತ್ತಿ ೧ – ೭೪ ಗೋಡೆ
ಭೂರುಹ ೧ – ೪೨ ಮರ
ಭೈತ್ರ ೧ – ೮೬ವ ಹಡಗು
ಮಕರ ೧ – ೩೯ ಮೊಸಳೆ
ಮಕ್ಷಿ ೧ – ೩೬ ನೊಣ
ಮಗುಳ್ ೯ – ೫೯ ಪುನಃ
ಮಂಚಿಗೆ ೩ – ೧೧ ಅಟ್ಟಳೆ
ಮದ್ದು ೯ – ೪೪ವ ಔಷಧ
ಮಂದಸ ೭ – ೪೧ ಪೆಟ್ಟಿಗೆ
ಮಯೂರ ೧ – ೪೭ವ ನವಿಲು
ಮರಕತ ೧ – ೪೭ವ ಪಚ್ಚೆ, ಹಸಿರು ರತ್ನ ಮಾಕಂದ ೧ – ೫೩ವ ಮಾವಿನ ಮರ ಮಾಂಗೊನರ್ ೧ – ೪೬ವ ಮಾವಿನ ಚಿಗುರು
ಮಾಣ್ ೨ – ೩೭ವ ಬೇಡ
ಮಾಳ್ಕೆ ೧ – ೧ ಮಾಡಲಿ
ಮಿಟ್ಟೆ ೧ – ೮೬ವ ಹೆಂಟೆ, ಮಣ್ಣಿನ ಉಂಡೆ
ಮಿಸುನಿ ೨ – ೧೫ ಚಿನ್ನ
ಮುಡುಪು ೧೦ – ೭೨ ಅಂತ್ಯ, ಮುಕ್ತಾಯ
ಮುದ್ಗರ ೧ – ೮೭ವ ದೊಣ್ಣೆ
ಮುಸುಂಡಿ ೧ – ೮೭ವ ಮೂರು ಮೊನೆಯುಳ್ಳ ಒಂದು ಆಯುಧ
ಮುಸಲ ೧ – ೮೭ವ ಗದೆ
ಮೊಖರಿಗಾಣ ೨ – ೧೯ವ ಬಾಯಿಂದ ಹೇಳುವ ಸಂಗೀತ
ರಜಕ ೯ – ೯ ಅಗಸ
ರಾಜಗಿರಿ ೨ – ೫೯ ದಂಟಿನ ಸೊಪ್ಪು
ರಾತ್ರಿಂಚರ ೮ – ೨೪ ರಾಕ್ಷಸ
ರುಜೆ ೯ – ೨೭ ಕಾಯಿಲೆ
ಲಂಬಣ ೧ – ೫೫ವ ನೇತಾಡುವ ಹಾರ
ಲಸಿತ ೧ – ೨೦ ಹೊಳೆಯುವ
ವಕ್ತ್ರ ೧ – ೨೦ ಬಾಯಿ, ಮು
ವಾಡವ ೨ – ೭ ಕಡಲ್ಗಿಚ್ಚು
ವಾರಾಶಿ ೧ – ೪೧ ಸಮುದ್ರ
ವಿತ್ತ ೪ – ೧೬ವ ಸಂಪತ್ತು
ವಿಭಂಗ ೧ – ೮೬ವ ವಿರೋಧ, ವಿಘ್ನ
ವಿಯಚ್ಚರ ೭ – ೩೭ವ ಗಂಧರ್ವ
ವಿಯತ್ತಳ ೧ – ೪೨ವ ಆಕಾಶ
ವಿಸಟಂಬರಿ ೩ – ೯೫ವ ದಾರಿ ಸಿಕ್ಕ ಕಡೆ ಓಡು
ವಿಸರುಹ ೩ – ೧೨೫ ಕಮಲ
ವೈಕುರ್ವಣ ೧ – ೮೬ ವ್ಯತ್ಯಾಸ
ಶಶಕ ೧ – ೪೨ ಮೊಲ, ಕಪ್ಪುಕಲೆ
ಶಾರಿಕಾ ೫ – ೩೧ವ ಹೆಣ್ಣುಗಿಳಿ
ಸಂದಿಕ್ಕು ೯ – ೫೭ ಜೋಡಿಸು
ಸಬ ೩ – ೧೧ ಹೆಣ, ಶವ
ಸಮವಸರಣ ೧ – ೮೮ವ ತೀರ್ಥಂಕರರ ಸಭೆ
ಸಮೆ ೧ – ೬೪ ಮಾಡು
ಸವಡಿ ೯ – ೧೮ ಜೋಡು, ಜೊತೆ
ಸಹಗಾಣ ೨ – ೨೧ವ ವೃಂದಗಾನ
ಸಾಯಕ ೩ – ೩೨ ಬಾಣ
ಸಿಂಧುರ ೧ – ೮೭ವ ಆನೆ
ಸೂಳ್ ೯ – ೨೪ವ ಬಾರಿ
ಸೆಣಸು ೬ – ೨೬ ಹೋರಾಡು
ಸೆಂಡು ೨ – ೫ ಚೆಂಡು
ಸ್ತಂಭಿಸು ೭ – ೨೨ವ ನಿಲ್ಲಿಸು
ಸ್ತೋಮ ೧ – ೧ ಸಮೂಹ
ಸ್ಯಾದ್ವಾದ ೧ – ೧ ಜೈನತತ್ತ್ವ
ಸ್ವೇದ ೧೦ – ೩೨ ಬೆವರು
ಹಣ್ಣು ೨ – ೪೯ ಮಾಡು
ಹಿಮಾಂಶು ೧ – ೪೨ ಚಂದ್ರ
ಹೊರಜೆ ೫ – ೧೩ ದಪ್ಪವಾದ ಹಗ್ಗ