ಗೋಧರ್ಮ ೧೧ – ೩೬ : ಪಶುವೃತ್ತಿ
ಗೋರಸ ೬ – ೯೭ : ಹಾಲು, ಮಜ್ಜಿಗೆ
ಗೋವ(ಳ) ೬ – ೯೭, ೧೪ – ೬೫ : ಗೊಲ್ಲ, ಗೋಪಾಲಕ
ಗೋಷ್ಠ ೬ – ೯೭ : ಹಸುಕರುಗಳ ಹಟ್ಟಿ, ಕೊಟ್ಟಿಗೆ
ಗೋಸನೆವೋಗು ೮ – ೧೨೨ : ಪ್ರಸಿದ್ಧವಾಗು
ಗೋಹಳಿ ೧೧ – ೧೫, ೧೨ – ೮ : ಸಗಣಿ, ತಿಪ್ಪೆ
ಗೋಹಳಿಯೆಡೆ ೫ – ೫೮ : ಸಗಣಿಯನ್ನು ಒಟ್ಟಿದ ಜಾಗ, ತಿಪ್ಪೆ
ಗೋಳಿ ೧೦ – ೧೨೧ : ಗೋಣಿಮರ
ಗೌತಮಿ ೧೨ – ೨೭ : ಗೋದಾವರಿ ನದಿ
ಗ್ರಾಮಸಿಂಹ ೬ – ೬೨ : ನಾಯಿ
ಘಟಾಂತಿಕೆ ೧ – ೪೦ : ಜೈನಯಕ್ಷಿ, ಜಿನಶಾಸನದೇವತೆ; (ಇಲ್ಲಿ) ಅತ್ತಿಮಬ್ಬೆಯ ಪ್ರಶಂಸೋಕ್ತಿ
ಘೞಿಲನೆ ೩ – ೩೦ : ಕೂಡಲೆ, ಶೀಘ್ರವಾಗಿ
ಘೋರಂಬಡಿಸು ೧೧ – ೧೦೭ : ಹಿಂಸಿಸು
ಘೋಳಾಘೋಳಾಯೆನ್ ೪ – ೧೦೪ : ಗಟ್ಟಿಯಾಗಿ ಹೇಳಿಕೊಳ್ಳುತ್ತಿರು, ಮಣಮಣಗುಟ್ಟು
ಚಕಾರಚತುಷ್ಕ ೧೦ – ೧೭೬ : ನೋಡಿ : ಪು. ೩೬೬
ಚಕ್ಕಣ ೧೨ – ೨೪ : ನೋಟ (ಸಂ. ಚಕ್ಷಣ)
ಚಟಾರಿಸು ೫ – ೧೦೨ : ವಂಚಿಸು (ಚಟೂರಿಸು?)
ಚಂಡಕರ ೧೪ – ೧ : ಸೂರ‍್ಯ
ಚಂಡಿಕೆ ೮ – ೧೦೯ : ದುರ್ಗಿ
ಚರ್ಮಜಳ ೧೪ – ೩೦ : ಚರ್ಮದ ಬುದ್ದಲಿಯ ನೀರು
ಚರ್ಮಭಾಜನ ೧೪ – ೧೫೨ : ನೀರಿನ ಬುದ್ದಲಿ, ಪಕಾಲಿ
ಚರ್ವಿತಚರ್ಮಣ ೬ – ೩೦ : (ಆಲಂ) ಮಾಡಿದ್ದನ್ನೇ ಮಾಡುವಿಕೆ, ವ್ಯರ್ಥವಾದ ಪುನರುಕ್ತಿ
ಚವುತಗಾ ೭ – ೭ : ಅತಿಶಯತೆಯನ್ನು, ಮಹಿಮೆಯನ್ನು ಕಾಪಾಡಿಕೊಳ್ಳುವುದು
ಚಳಿಯಿಸು ೪ – ೧೩೩ : ಕುಗ್ಗು, ಕಾಂತಿಗುಂದು : ೭ – ೧೯ ಚಂಚಲಗೊಳ್ಳುವಂತೆ ಮಾಡು, ಕಂಪಿಸುವಂತೆ ಮಾಡು
ಚಿತ್ತಂಬಸು ೬ – ೫೩ : ಮನಸ್ಸಿನಲ್ಲಿ ಚಾಂಚಲ್ಯವುಂಟಾಗು; ಸಂಶಯ, ದ್ವಂದ್ವ ತಲೆದೋರು
ಚಿತ್ತಂಬೆಱು ೫ – ೫೦ : ಮನಸ್ಸನ್ನು ಸೆಳೆದುಕೋ
ಚಿರುಕುಟ ೧೨ – ೩೩ : ಚಿಂದಿ, ಹರಕು ಬಟ್ಟೆ
ಚುಚ್ಚುಳ ೬ – ೧೦೬, ೧೩ – ೩೬, ೫೧ : ಚುಚ್ಚು ಮಾತಾಡುವವನು
ಚುರ್ಚು ೭ – ೪೨, ೧೧ – ೧೨೮ : ಸುಡು
ಚೆಚ್ಚರ ೧೦ – ೩೯, ೧೫ – ೯೪ : ಶೀಘ್ರವಾಗಿ
ಬೆಚ್ಚರಿಗ ೬ – ೧೦೬, ೧೩ – ೩೬ : ದುಡುಕು ಸ್ವಭಾವದವನು; ಉತ್ಸುಕನು
ಚೆನ್ ೬ – ೪೪, ೧೪ – ೧೧ : ಸೌಂದರ‍್ಯ
ಚೇತೋಭಾವ ೫ – ೭೫ : ಮನ್ಮಥ
ಚೋಹ ೧೦ – ೯೧ : ವೇಷ
ಚೌಪಟ್ಟ ೯ – ೧೩೦ : ಚೌಕ, ಚತುಷ್ಪಥ
ಛರ್ದಿ ೧ – ೨೩ : ವಾಂತಿ
ಛಾಗ ೧೧ – ೧೦೨ : ಗಂಡುಮೇಕೆ, ಹೋತ
ಜಗಜ್ಜ್ಯಾಯಂ ೧ – ೪೨ : ಲೋಕದಲ್ಲಿ ಶ್ರೇಷ್ಠ, ಸರ್ವೋತ್ತಮ
ಜಗುನೆ ೧೦ – ೧೩೪ : ಯಮುನೆ
ಜಂಗುಳಿದೇವ ೧ – ೧೨೭ : ಗುಂಪಿನಲ್ಲಿ ಪೂಜೆಗೊಳ್ಳುವ ದೇವತೆ, ಕ್ಷುದ್ರದೇವತೆ
ಜಟಮಟಿಗ ೧೧ – ೧೫೪ : ಮೋಸಗಾರ ವಂಚಕ
ಜಡ ೮ – ೭೭ : ನೀರು
ಜಡಿ ೬ – ೫೧ : ಗದರಿಸು
ಜಂತು ೫ – ೧೪೬ : ಪ್ರಾಣಿ
ಜನ್ನ ೧೧ – ೧೦೧ : ಯಜ್ಞ
ಜನ್ನಿಗೆ ೯ – ೧೦೬ : ಜನಿವಾರ
ಜನ್ನಿವರ ೬ – ೩೭ : ಜನಿವಾರ
ಜನ್ಮಿ ೧೫ – ೯೦ : ಜೀವಿಸಿರುವವನು
ಜರಗಂ ಕರ್ಮ ೧ – ೧೩೧ : ಚಿನ್ನದ ಕಣಗಳು ಬೆರೆತಿರುವ ಮಣ್ಣನ್ನು ತೊಳೆದು ಕಣಗಳನ್ನು ತೆಗೆ
ಜರತ್ತೃಣ ೩ – ೭೩ : ಕರಟಿದ ಹುಲ್ಲು
ಜಱುಚು ೯ – ೯೮, ೧೩ – ೫೮ ಇ : ಅಪಲಾಪಮಾಡು, ಗಳಹುವುದು, ಬಾಯಿಗೆ ಬಂದದ್ದು ಆಡು, ಕಿರಿಚಾಡು
ಜವದೂತ ೧೦ – ೧೨೮ : ಯಮದೂತ
ಜಾತರೂಪ ೨ – ೬ : ದಿಗಂಬರ
ಜಾತ್ರೆಮರುಳ್ಗಳ್ ೧೨ – ೧೨ : ವಿಚಾರ ಮಾಡದೆ ಸಾಮಾನ್ಯಜನರ ನಡೆವಳಿಕೆ ನಡೆಯುವವರು
ಜಾದಿ ೯ – ೧೨ : ಜಾಜಿ
ಜಾನಿಸು ೮ – ೩೧ : ಧ್ಯಾನಿಸು
ಜಾಱು ೧೪ – ೧೯ : ಸಂದೇಹ, ಸಂಶಯ
ಜಾಲಗಾಱ ೧೪ – ೮೭ : ಬೆಸ್ತ
ಜಾಲಗಾಱಿತಿ ೧೦ – ೧೫೪ : ಬೆಸ್ತರ ಹೆಂಗಸು
ಜಾಳಿಗೆಯಂ ಸೂಡು ೧೪ – ೧೨೩ : ಹೆಣಿಗೆ ಚೀಲವನ್ನು ಅಥವಾ ಹಸುಬೆ ಚೀಲವನ್ನು ಹಾಕಿಕೋ (?)
ಜಿನಶಾಸನ ೨ – ೮೪ : ಜೈನಧರ್ಮ
ಜೀವನ್ಮೃತಕ ೧೫ – ೯೦ : ಜೀವಚ್ಫವ
ಜೂಳಿ ೪ – ೪೦ : ಕಮಂಡಲು ಗಿಂಡಿ ಮುಂತಾದವುಗಳ ಬಾಯಿ, ನಳಿಕೆ
ಜೆಟ್ಟಿಗ ೨ – ೨೨ : ಸಮರ್ಥ
ಜೆಡೆದೊಂಗಲ್ ೧೦ – ೧೫೪ : ಜಡೆಯ ಒತ್ತೊತ್ತು
ಜೇಂಕರಿಸು ೮ – ೬೨ : ಕೊಂಡಾಡು, ಘೋಷಿಸು
ಜೊತ್ತಿಸು ೫ – ೫೦ : ಮೋಸಮಾಡು, ವಂಚಿಸು
ಜೋಡೆ ೯ – ೧೨೮ : ಜಾರಸ್ತ್ರೀ
ಜ್ವರಿತ ೩ – ೬೫ : ಜ್ವರಗ್ರಸ್ತ
ಜ್ಞಾನಾಂಬಕ ೮ – ೮೧ : ತಿಳಿವಿನ ಒಳಗಣ್ಣು
ಜ್ಯೋತಿಷ್ಕ ೧೦ – ೧೦೬ : ಜ್ಯೋತಿ ರ್ಲೋಕದವನು
ಝೇಂಕರಿಸು ೯ – ೧೦ : ಹೊಗಳು, ಕೊಂಡಾಡು
ಟಕ್ಕವಿದ್ಯೆ ೨ – ೨೧ : ಮೋಸದ ವಿದ್ಯೆ
ಠಕ್ಕಸಮಯ ೬ – ೭೫ : ಮಿಥ್ಯಾಧರ್ಮ
ಡಂಬ ೫ – ೧೫೭, ೯ – ೪೩ : ಸೋಗು, ಬೂಟಾಟಿಕೆ
ಡಂಬಕ ೧೨ – ೪೦ : ಮೋಸಗಾರ
ಡಂಬಿಸು ೧೨ – ೪೨ : ಮೋಸಮಾಡು
ಡೊಂಬ ದಡ್ಡಿಸ ೮ – ೨೩೯ : ಡೊಂಬರ ಹರೆ, ಡೋಲು (ನೋಡಿ : ಆದಿಪುರಾಣ, ೩ – ೬೦)
ತಕ್ಕಂ ೮ – ೧೫ : ಯೋಗ್ಯ, ಉತ್ತಮ, ಕುಲೀನ
ತಕ್ಕು ೧೪ – ೧೨೨ : ಸಾಮರ್ಥ್ಯ, ಯೋಗ್ಯತೆ
ತಗರ್ ೫ – ೧೫ : ಟಗರು
ತಗುಣೆ ೩ – ೬೬ ; ೧೦ – ೭೦ : ತಿಗುಣೆ
ತಗುಳ್ ೬ – ೧೭ : ಉಂಟಾಗು; ೧೫ – ೧೦೫ : ಮೆಚ್ಚು, ಇಷ್ಟಪಡು
ತಗೆ ೧೨ – ೨೬ : ತಡೆ, ಅಡ್ಡಿಪಡಿಸು
ತಂಗೂೞ್ ೧೪ – ೬೫ : ತಂಗುಳು
ತತ್ತಬಳೆ ತಾಳಗೊಟ್ಟಿ : ೧೪ – ೧೭ : ತಬ್ಬಿದ ಸ್ತ್ರೀ ಮತ್ತು ಕುಣಿತ ಸಂಗೀತಗಳ ಗೋಷ್ಠಿ
ತನುವಿತ್ತ ೧೫ – ೯೧ : ಶರೀರ ಮತ್ತು ಸಂಪತ್ತು
ತಮಿಸ್ರ ೬ – ೮೮ : ಕತ್ತಲು
ತಂಬುಲಮನಿಕ್ಕು ೧೪ – ೯ : ವೀಳ್ಯವಿತ್ತು ಆಹ್ವಾನಿಸು
ತರಿಸು ೮ – ೫೪ : ಬರಿಸು
ತರುವಲಿ ೫ – ೧೦೨, ೧೦೪ : ಗಂಡು ಮಗು, ಚಿಕ್ಕವನು
ತರ್ಕೈಸು ೪ – ೪೦ : ತಬ್ಬು, ಹಿಡಿದುಕೊಳ್ಳು
ತಱಸಲವು ೬ – ೭೭ : ನಿಶ್ಚಯ, ನಿರ್ಧಾರ
ತಲೆಮಟ್ಟು ೯ – ೬೩ : ತಲೆಯವರೆಗೆ
ತಲೆವಱಿ ೧೩ – ೩೨ : ತಲೆಗೂದಲು ಕಿತ್ತುಕೊಳ್ಳು, ಲೋಚು ಮಾಡಿಸಿಕೊಳ್ಳು
ತಲೆವೊತ್ತು ೩ – ೫೬ : ತಲೆತೂರಿಸು, ಪ್ರತಿಭಟಿಸು
ತವಿಲ್ ೨ – ೨೬ : ಕೊರತೆ, ಖರ್ಚು, ವ್ಯಯ
ತವಿಸು ೪ – ೪೧ : ಕೃಶಗೊಳಿಸು; ೫ – ೮೬ : ಕುಗ್ಗಿಸು, ಕಳೆದುಕೊಳ್ಳು
ತವು ೧ – ೫೬, ೫ – ೧೩೬ : ಕ್ಷಯಿಸು, ನವೆ, ಕಡಮೆಯಾಗು, ಇಲ್ಲವಾಗು
ತವುತರ್ ೨ – ೨೧ : ಕ್ಷಯಿಸು, ಕ್ಷೀಣಿಸು
ತಸ್ಕರ ೧೧ – ೫೫ : ಕಳ್ಳ
ತಳಿ ೯ – ೭೪, ೧೨ – ೪೬ : ಸಿಂಪಡಿಸು
ತಳಿಗೆಯಂ ಬಾಜಿಸು ೧೪ – ೧೧೪ : ತಟ್ಟೆಯನ್ನು ಬಡಿ, ಜಾಗಟೆ ಬಡಿ
ತಳ್ಪೊಯ್ ೨ – ೬೧ : ಪ್ರತಿಭಟಿಸು, ಪ್ರತಿಬಿಂಬಿಸು
ತಳ್ವಿಲ್ಲದೆ ೪ – ೭ : ತಡಮಾಡದೆ
ತಾಟಿಸು ೧೫ – ೬೬ : ಘಟ್ಟಿಸು
ತಾಪನ ೧೫ – ೨೯ : ಬಿಸಿ ಮಾಡುವುದು
ತಾರಾಂತರ ೧೧ – ೧೧೬ : ನಕ್ಷತ್ರಗಳ ಆಚೆ
ತಾಱೆ ೧೧ – ೬೮ : ತಾರೆಯ ಮರ
ತಿಕ್ತವರ್ಗ ೧೧ – ೧೫೬ : ಕಹಿಯಾದವು
ತಿಂಗಳ್ ೯ – ೪೪ : ಚಂದ್ರ
ತಿತ್ತಿರಿ ೧೧ – ೬ : ಗೌಜಲ ಹಕ್ಕಿ
ತಿಂಬ ೧೫ – ೪೨ : ತಿನ್ನುವಿಯೋ?
ತಿರಿಕ ೧ – ೧೦೨ : ಭಿಕ್ಷುಕ
ತಿರಿಕಜೀವ ೧೦ – ೮೬ : ಪ್ರಾಣಿ
ತಿರಿತರ್ ೧ – ೧೦೧, ೧೨ – ೪೨ : ಸುತ್ತಾಡಿ ಬರು; ೧೦ – ೨೬ : ಬೇಡಿತರು
ತಿರು ೧೦ – ೭೨ : ಬಿಲ್ಲಿಗೆ ಕಟ್ಟುವ ಹುರಿ
ತಿರ್ದು ೧೩ – ೬೧ : ಪಳಗಿಸು
ತಿರ‍್ಯಗ್ ಜಾತಿ ೪ – ೧೩೦ : ಪ್ರಾಣಿವರ್ಗ
ತಿವಣಿ ೩ – ೬೧ : ಆನೆಯ ಶರೀರದ ಒಂದು ಅಂಗ (ನೋಡಿ : ಪೊಂತಿವಣಿ : ಅರ್ಧನೇಮಿಪುರಾಣ ೮ – ೮೪ ವ)
ತಿಸುಳ ೮ – ೨೧೫, ೧೪ – ೪೨ : ತ್ರಿಶೂಲ
ತೀರಮೆ ೫ – ೧೨೯ : (ಪ್ರಯಾಣದಲ್ಲಿ)ತಡೆದಿರುವಿಕೆ, ಮುಂದುವರಿಯದೆ ನಿಲ್ಲುವಂತಾಗುವುದು
ತೀರ್ಥ ೬ – ೯೯ : ಪುಣ್ಯಸ್ಥಾನ
ತೀವು ೫ – ೧೧ : ತುಂಬು
ತೀರ್ರಕರ ೮ – ೧೨೦ : ಸೂರ‍್ಯ
ತುಡುಗುಣಿ ೫ – ೭೧, ೧೧ – ೮೮ : ಕಳ್ಳತನದಿಂದ ಹೊಟ್ಟೆಹೊರೆಯುವವನು
ತುದಿಕೊಡಕೆ ೯ – ೪೭ : ಕಿವಿಯ ತುದಿ
ತುಯ್ಯಲ್ ೧೧ – ೧೩೧ : ತೊವ್ವೆ
ತುರಿಪ ೫ – ೫೮, ೧೪ – ೨೬ : ತ್ವರೆ, ಆತುರ, ಶೀಘ್ರ
ತುಱಿ ೯ – ೨೬ : ನವೆ, ಕಜ್ಜಿ
ತುಱುಗೋಳ್ ೯ – ೩೪ : ಗೋಗ್ರಹಣ
ತುಱುಂಬು ೬ – ೩೯ : ಮುಡಿ
ತುಷ್ಟಿವಡಿಸು ೫ – ೧೪೩ : ಸಂತೋಷ ಪಡಿಸು
ತುೞಿಲ್ ೭ – ೨೭ : ನಮಸ್ಕಾರ
ತುೞಿಲ್ಗೆಯ್ ೯ – ೬೮ : ನಮಸ್ಕರಿಸು
ತೂಳ್ ೧೦ – ೧೧ : ಚದುರಿಸು, ದೂರ ಮಾಡು
ತೆ ೬ – ೨೧, ೮ – ೨೪೮, ೧೧ – ೧೩೨ : ಛೇ (ತಿರಸ್ಕಾರಸೂಚಕವಾದ ಅವ್ಯಯ)
ತೆಗೆ ೧೦ – ೧೧೩ : ಹಿಮ್ಮೆಟ್ಟು, ಹಿಂದೆಗೆ
ತೆಱೆಯೊಕ್ಕಲ್ ೧೨ – ೪೨ : ತೆರಿಗೆಯನ್ನು, ಕಾಣಿಕೆಯನ್ನು ಸಲ್ಲಿಸುವ ಒಕ್ಕಲು
ತೇರೆಸಗು ೮ – ೧೫೭ : ರಥ ನಡಸು
ತೇೞ್ ೮ – ೧೭೬ : ಚೇಳು
ತೊಗಲ್ ೧೪ – ೯೬ : (ಚರ್ಮದ) ನೀರಿನ ಬುದ್ದಲಿ
ತೊಡರ್ ೩ – ೫, ೫ – ೬೭; ೧೨ – ೪೨: ಸಿಕ್ಕಿಕೊಳ್ಳು
ತೊಡರ್ಪು ೩ – ೫ : ಬಂಧನ
ತೊದಳ್ ೩ – ೬ : ಸುಳ್ಳು, ಮಿಥ್ಯೆ
ತೊನಸೆ ೯ – ೬೧, ೧೧ – ೮ : ತೊಣಚಿ
ತೊವಲ್ ೮ – ೭೨, ೯ – ೬೫ : ತೊಗಲು, ಚರ್ಮ
ತೊಳಂಚೆ ೮ – ೧೨ : ತುಳಸಿ
ತೊೞಲಿ ೯ – ೮೨ : ಬೀಸುವ ಕಲ್ಲು (ಧಾ. ತೊೞಲ್+ಇ)
ತೊೞ್ತು ೫ – ೭೦, ೭೧, ೯ – ೧೧೯, ೧೩೭ : ದಾಸಿ, ದಾಸ
ತೋಟಿಮಾಡು ೮ – ೯೦ : ಜಗಳವಾಡು
ತೋರ ೧೫ – ೬೨ : ದಪ್ಪ, ಗಾತ್ರ
ತೋಲ್ ೬ – ೧೭ : ಚರ್ಮದ ಚೀಲ(?)
ತೋಲ ತಡಂಗ ೧೪ – ೯೯ : ಚರ್ಮದ ಚೀಲ (?)
ತ್ರಿದಶ ೪ – ೩೮ : ದೇವತೆ
ದನುಜಮೌಳಿವ್ರಾತ ೮ – ೬೧ : ರಾಕ್ಷಸರ ತಲೆಗಳ ಸಮೂಹ
ದಯಿತ ೧ – ೧೩ : ಸ್ವಾಮಿ
ದರವುರವಿದ್ಯೆ ೧೨ – ೪೩ : ತುಚ್ಫವಾದ, ಕ್ಷುಲ್ಲಕವಾದ ವಿದ್ಯೆ
ದರವುರಿಗ ೬ – ೧೨, ೮ – ೧೩೫ : ಅಲ್ಪ ವ್ಯಕ್ತಿ, ಕ್ಷುದ್ರವ್ಯಕ್ತಿ
ದರ್ಶನಿಕ ೪ – ೧೫೫ : ಜೈನಧರ್ಮಿ
ದಶಶತಕರ ೮ – ೧೭೧ : ಸೂರ್ಯ
ದಳ ೬ – ೧೭ : ರೇಕು, ಪತ್ರ
ದಾರಾದಿ ೫ – ೮೮ : ಹೆಂಡತಿ ಮೊದಲಾದ
ದಾರುವನ ೮ – ೮ : ದೇವದಾರು ಮರಗಳ ಕಾಡು
ದಿತಿಸುತ ೮ – ೬೪ : ರಾಕ್ಷಸ
ದಿಬ್ಕ ೧೫ – ೭೩ : ಪುರಾವೆಗಳಿಲ್ಲದಾಗ ಅಪರಾಧಿಗಳನ್ನು ಗೊತ್ತುಮಾಡಲು ಅವರಿಗೆ ನೀಡುವ ವಿಶೇಷರೀತಿಯ ಕಠಿನಪರೀಕ್ಷೆ
ದಿವ ೬ – ೩ : ಹಗಲು
ದೀಪವರ್ತಿ ೪ – ೨೫ : ದೀಪದ ಬತ್ತಿ, ಸೊಡರಿನ ಕುಡಿ
ದೀರ್ಘಿಕೆ ೯ – ೧೨೯ : ಕೊಳ
ದುಂಡುಱುಂಬೆ ೯ – ೧೧೪ : ಗಯ್ಯಾಳಿ, ದಿಟ್ಟ ಹೆಂಗುಸು
ದುರಿತಘರಟ್ಟ ೧ – ೭೭ : ಪಾಪಗಳನ್ನು ಅರೆಯುವ ಬೀಸುವ ಕಲ್ಲು
ದುರ್ಬೋಧ ೩ – ೧೪ : ಮಿಥ್ಯಾಜ್ಞಾನಿ
ದುರ್ವಾರ ೭ – ೩೯ : ದಾಟಲಾಗದ
ದುರ್ವಿದ ೧೦ – ೧೮೯ : ಅಜ್ಞಾನಿ
ದುರ್ವ್ಯವಸೆ ೬ – ೪೯ : ಕೆಟ್ಟ ಕೆಲಸ, ದುಷ್ಟ ನಡೆವಳಿಕೆ
ದುಱುದುಂಬಿ ೯ – ೧೧೩ : ದುಷ್ಟ
ದೂಸಱು ೬ – ೫೧ : ಕಾರಣ
ದೆಯ್ಯದಚ್ಚು ೯ – ೧೦೩ : ದೇವತಾವಿಗ್ರಹ
ದೆವಸ ೪ – ೫ : ದಿನಶುದ್ಧಿ
ದೆಸೆಬಿದ್ದಂ ೧೦ – ೧೨ : ಹೆಚ್ಚಾಗಿ, ಮಿತಿಮೀರಿ
ದೆಸೆವೋಗು ೬ – ೭೫ : ದಿಕ್ಕಿನತ್ತ ಹೋಗು
ದೇಯ ೭ – ೭೧ : ದಾನವಾಗಿ ಕೊಡುವ ವಸ್ತು
ದೇವಕುಲ ೧೪ – ೪೩ : ದೇಗುಲ
ದೇವಗೃಹ ೮ – ೨೧೬ : ದೇವಾಲಯ
ದೇಶಿಯತಿ ೫ – ೧೪೪ : (?)
ದೇಹಾರ ೭ – ೩೧, ೧೧ – ೬೧ : ಪೂಜೆ, ಗೌರವ, ಅರ್ಚನೆ; ೧೪ – ೨೧, ೯೦ : ಆರೋಗಣಿ
ದೇಹಾರಂಗೆಯ್ ೧೪ – ೮೧ : ಆರೋಗಿಸು
ದೈತ್ಯಾರಾಧ್ಯ ೮ – ೧೬೪ : ಶುಕ್ರಗ್ರಹ
ದೈವಾಡು ೪ – ೧೪೫ : ದೇವತೆಯ ವೇಷವನ್ನು ಧರಿಸಿ ಕುಣಿ
ದೊಣೆ ೧೧ – ೧೫೮ : ಬತ್ತಳಿಕೆ
ದೊರೆ ೬ – ೧೦೫ : ಸಮಾನ
ದೋರ್ವಳಗರ್ವ ೧೫ – ೯೬ : ಬಾಹುಬಲದ ಗರ್ವ
ದೋಷಾವಿಳ ೧೪ – ೩ : ದೋಷದಿಂದ ಕದಡಿದ
ದೋಸಿಗ ೧೪ – ೫೩ : ದೋಷಿ
ದ್ಯೋತಿಮಂತ ೧೧ – ೫೬ : ಬೆಳಗುವ ಸ್ವಭಾವವುಳ್ಳ
ದ್ರವ್ಯಲಿಂಗಿ ೫ – ೧೩೯ : ಮಿಥ್ಯಾದೃಷ್ಟಿಯ ಮುನಿ; ಆತ್ಮ ಜ್ಞಾನರಹಿತನಾದ ಮುನಿ, ಮುನಿವೇಷಧಾರಿ
ದ್ವಿತಯ ೩ – ೩೬ : ಎರಡು
ಧಮ್ಮಿಲ್ಲ ೧೪ – ೧೬೮ : ಕೇಶರಾಶಿ
ಧರಾಮರ ೧೦ – ೫೩ : ಬ್ರಾಹ್ಮಣ
ಧರ್ಮದ್ವಿಷ ೧೩ – ೫೬ : ಧರ್ಮದ ವೈರಿ
ಧಾತ್ರ ೧೨ – ೨೧ : ಬ್ರಹ್ಮ
ಧಾವಳಿ ೧೨ – ೩೨ : ಉಣ್ಣೆಯ ಹೊದಿಕೆ, ಶಾಲು, ಮಡಿಬಟ್ಟೆ
ಧುರ ೧೨ – ೧೩ : ಯುದ್ಧ
ಧ್ವಾಂತದ್ವಿಷ ೮ – ೨ : ಸೂರ‍್ಯ
ನಕ್ಕಿಸು ೧೦ – ೧೪೩ : ನೆಕ್ಕಿಸು
ನಗಧರ ೧೦ – ೪೫ : ವಿಷ್ಣು
ನಂಟರ್ತನ ೫ – ೪೫ : ನಂಟಸ್ತಿಕೆ, ಒಡನಾಟ
ನದಿಪು ೧೫ – ೧೦೪ : ನಂದಿಸು, ಆರಿಸು ನರಪತಿಯಣುಗ ೯ – ೯೯ : ರಾಜಪುತ್ರ
ನರವು ೬ – ೩೪ : ನರ
ನರುಷ್ಯರ ಗುಡ ೯ – ೪೯ : (?)
ನೆರೆತೆರೆದೋಱು ೧ – ೧೦೫ : ನರೆಗೂದಲು ಮತ್ತು ದೇಹದ ಸುಕ್ಕು ಕಾಣಿಸಿಕೊಳ್ಳು
ನಱುನೆಯ್ ೯ – ೧೧೧ : ಘಮ್ಮೆನ್ನುವ ತುಪ್ಪ
ನವಬಂಧಕ ೮ – ೩೫ : (?)
ನಸಿ ೫ – ೪, ೯ – ೪೮ : ಕೃಶವಾಗು, ಸೊರಗು, ಕ್ಷಯಿಸು
ನಾಗ ೯ – ೭೬, ೭೯, ೮೦ : ಹಾವು
ನಾಗರ ಮಾಟ ೯ – ೭೭ : ಸರ್ಪಗಳ ಕೃತ್ಯ
ನಾಗಾರಿ ೭ – ೫೮ : ದೊರೆಯ ಶೃಂಗಾರ ಸಖರಲ್ಲಿ ಒಬ್ಬನಾದ ನಾಗರಕ, ಹೊಗಳುಭಟ (?)
ನಾಡಾಡಿ ೧೦ – ೧೮ : ಸಾಮಾನ್ಯ ತಿಳಿವಳಿಕೆಯ
ನಾಡೆಯುಂ ೯ – ೭೬ : ವಿಶೇಷವಾಗಿ, ಚೆನ್ನಾಗಿ
ನಾಣ್ ೫ – ೪೮ : ಲಜ್ಜೆ; ೮ – ೨೨೭, ೧೦ – ೭೮ : ಸ್ತ್ರೀಜನನೇಂದ್ರಿಯ
ನಾಣಿಲಿ ೮ – ೧೩೦ : ನಿರ್ಲಜ್ಜ ವ್ಯಕ್ತಿ
ನಾನೃತಾತ್ ಪಾತಕಂ ಪರಂ ೫ – ೩೦ : ಸುಳ್ಳಿಗಿಂತ ಮೇಲಾದ ಪಾಪವಿಲ್ಲ
ನಾರಿ ೮ – ೭೦ : ಬಿಲ್ಲಿನ ಹುರಿ
ನಾಸ್ತಿ ಸತ್ಯಾತ್ಪರಂ ತಪಂ ೫ – ೪೦ : ಸತ್ಯಕ್ಕಿಂತ ಮೇಲಾದ ತಪಸ್ಸಿಲ್ಲ
ನಾೞ್ಗಾದೆ ೪ – ೮೬ : ನಾಡ ಗಾದೆ, ಸಾಮತಿ
ನಿಕ್ಕುವ ೮ – ೧೩೦ : ನಿಜ, ನಿಶ್ಚಯ
ನಿಗ್ಗಡಿ ೮ – ೧೩೦, ೧೧ – ೯೮ : ಅವಿವೇಕಿ, ದಡ್ಡ
ನಿಗ್ಗವ ೧೨ – ೨೫ : ದಂಡನೆ, ಹಿಂಸೆ (ಸಂ.<ನಿಗ್ರಹ)
ನಿಗೋದ ೧೪ – ೭೨ : ನರಕಕ್ಕಿಂತ ಕೀಳಾದ ಸ್ಥಳ
ನಿಘ್ನ ೧೧ – ೮೦ : ಅಧೀನಕ್ಕೆ ತರು, ವಶಪಡಿಸು
ನಿಟಿಳೇಕ್ಷಣ ೮ – ೪೮ : ಹಣೆಗಣ್ಣು ಉಳ್ಳವನು
ನಿಟ್ಟೆ ೮ – ೨೩೭, ೧೨ – ೩ : ನಿಷ್ಠೆ
ನಿಟ್ಟೆಗೊಳ್ ೩ – ೫೩ : ದೃಢವಾಗು, ನಿಷ್ಠನಾಗು
ನಿಟ್ಟೆಗೊಳಿಸು ೪ – ೪೫ : ನಿಷ್ಠೆಯನ್ನು ಹೊಂದು, ಶ್ರದ್ಧೆ ತಾಳು
ನಿಡುಮಾಳ ೧೫ – ೮೨ : ವಿಶಾಲವಾದ ಬಯಲು
ನಿದಾಘ ೭ – ೩ : ಬೇಸಿಗೆಯ ಬಿಸಿಲು
ನಿದಾನ ೪ – ೫, ೧೫ – ೨೭ : ನಿಧಿ
ನಿಧಾನಂಬಡೆ ೫ – ೧೨೮ : ನಿಧಿ ಪ್ರಾಪ್ತವಾಗು
ನಿಬಂಧ ೧೪ – ೨೪ : ಒತ್ತಾಯ, ನಿರ್ಬಂಧ
ನಿರ್ಮಚ್ಚರ ೭ – ೨೮ : ಮತ್ಸರವಿಲ್ಲದವನು
ನಿರ್ಮಾಲ್ಯ ೮ – ೧೪ : ಪೂಜಿಸಿ ತೆಗೆದ ಹೂವು ಪತ್ರೆ ಮುಂತಾದವು
ನಿರ್ಮುಕ್ತಿ ೧೦ – ೫೧ : ಮುಕ್ತಿರಹಿತವಾದ ಸ್ಥಿತಿ
ನಿರ್ಯಾಣ ೭ – ೨೧ : ಮೋಕ್ಷ
ನಿರ್ವಂದ ೬ – ೧೧೬, ೧೧ – ೧೪೯ : ಒತ್ತಾಯ, ನಿರ್ಬಂಧ
ನಿರ್ವೃತಿಶ್ರೀ ೮ – ೧೨೦ : ಮೋಕ್ಷಸಂಪತ್ತು
ನಿರ್ವಾಣಸುಖ ೪ – ೯೩ : ಮೋಕ್ಷಸುಖ
ನಿರ್ಲೌಲ್ಯ ೭ – ೫೪ : ಅಚಂಚಲ, ಅತ್ಯಾಸೆಯಿಲ್ಲದವನು
ನಿಱಿಸು ೯ – ೪೦ : ಸ್ಥಾಪಿಸು, ಪ್ರತಿಷ್ಠಿಸು
ನಿಶಿಭೋಜಿ ೧೪ – ೧೧೭ : ರಾತ್ರಿಯ ವೇಳೆ ಊಟಮಾಡುವ ಜೈನೇತರವ್ಯಕ್ತಿ
ನಿಶೀಥಿಸ್ಥಾನ ೧ – ೨೭ : ನಿಸಿದಿಯ ಸ್ಥಳ, ಸಮಾಧಿಸ್ಥಾನ
ನಿಶ್ಶ್ರೇಯಸ ೫ – ೧೬೦ : ವೆಷ
ನಿಸ್ತರಿಸು ೧ – ೩೯, ೭ – ೪೦, ೭೦ : ದಾಟಿಸು, ನಡಸಿಕೊಂಡು ಹೋಗು, ನಿಭಾಯಿಸು, ಉದ್ಧರಿಸು
ನಿಹುತ ೭ – ೫೫ : ಯಜ್ಞದಲ್ಲಿ ಅರ್ಪಿಸಿದ್ದು, ಹೋಮಮಾಡಿದ್ದು
ನೀರಳೆ ೧೫ – ೫೦ : ನೀರುಮಜ್ಜಿಗೆ
ನೀರೋಗಿ ೧೦ – ೭೭ : ರೋಗರಹಿತ
ನೀಱ ೫ – ೫೩ : ಚೆಲುವ, ಪ್ರಿಯಕರ
ನೀಲಗಳ ೯ – ೪೬ : ಶಿವ, ವಿಷಕಂಠ
ನೂಲಿಕ್ಕು ೭ – ೮ : ಜನಿವಾರ ಹಾಕು, ಉಪನಯನ ಮಾಡು
ನೆಗೞ್ ೧ – ೪ : ಖ್ಯಾತವಾಗು; ೫ – ೧೦ : ಆಚರಿಸು
ನೆಗೞ್ತೆ ೫ – ೧೦ : ಕೆಲಸ, ನಡೆವಳಿಕೆ, ೮ – ೧೯ : ಆಚರಣೆ
ನೆತ್ತ ೬ – ೪೮ : ಪಗಡೆಯಾಟ
ನೆತ್ತಿಸಂಗ ೧೨ – ೧೧ : (?)
ನೆಮ್ಮು ೧೫ – ೯೮ : ಅವಲಂಬಿಸು, ನಂಬಿ ನಡೆ
ನೆರಪು ೪ – ೮, ೫ – ೧೧೯, ೬ – ೪೭, ೧೧ – ೩೪ : ಕೂಡಿಸು, ಸೇರಿಸು, ಒಟ್ಟುಮಾಡು, ಸಂಗ್ರಹಿಸು
ನೆಲೆವೆರ್ಚು ೬ – ೩೪ : ತುಂಬಿ ಸೂಸು, ಉಕ್ಕುತ್ತಿರು
ನೇಣ್ ೬ – ೩೬ : ದಾರ, ನೂಲು, ಸೂತ್ರ
ನೇಣ ನೆರವಿ ೧೧ – ೧೩ : ಜನಿವಾರದ ಜನ, ಬ್ರಾಹ್ಮಣರ ಗುಂಪು
ನೇರ್ ೭ – ೧೭ : ಕತ್ತರಿಸು
ನೇರಾಣಿಯ ಪೊನ್ ೧ – ೩೪, ೩ – ೨೫, ೧೫ – ೨೧ : ಶುದ್ಧವಾದ ಚಿನ್ನ, ಅಪ್ಪಟ ಬಂಗಾರ
ನೇರಿತ್ತು ೭ – ೮೩ : ನೇರವಾದುದು, ನುಣ್ಣಗಿರುವುದು
ನೇರಿದುವು ೮ – ೮೦ : ಸಮನಾದವು, ಹೊಂದಿಕೊಳ್ಳುವಂಥವು
ನೇರ್ಪಡು ೮ – ೧೯, ೧೦ – ೬೪ : ನೆಟ್ಟಗಾಗು, ಸರಿಯಾಗು
ನೇಸಱ್ ೬ – ೪ : ಸೂರ‍್ಯ, ಹಗಲುಹೊತ್ತು
ನೊಚ್ಚನೆ ನೆಗೆ ೧೨ – ೪೦ : ಹಾಯಾಗಿ ಹಾರಿಹೋಗು
ನೊಣೆ ೧೪ – ೧೪೧ : ತಿಂದು ತೇಗು
ನೊಳವು ೯ – ೧೦ : ನೊಣ
ನೋನ್ ೫ – ೧೦೫ : ವ್ರತ ಹಿಡಿ
ನೋಂಪಿ ೯ – ೩೭, ೯೫ : ವ್ರತ
ಪಕ್ಕು ೫ – ೬೫ : ಪಿಸರು, ಗೀಜು
ಪಕ್ಕುಗೊಡು ೫ – ೭೫, ೧೫ – ೧೦೧ : ಅವಕಾಶಕೊಡು, ಎಡೆಮಾಡು, ಆಶ್ರಯನೀಡು
ಪಗರಣ ೪ – ೨೧ : ಒಂದು ಬಗೆಯ ನಾಡಾಡಿಜನದ ನಾಟಕ, ಹಗರಣ
ಪಗರಣಿಗ ೮ – ೨೩೮ : ಪಗರಣವೆಂಬ ನಾಡಾಡಿ ಜನದ ನಾಟಕದಲ್ಲಿ ಪಾತ್ರಧಾರಿ
ಪಗವ ೩ – ೯೬, ೧೨ – ೪೮ : ಹಗೇವು, ಕಣಜ
ಪಗೆ ೫ – ೭೫ : ಹಗೆ, ಶತ್ರು
ಪಚ್ಚವಡಿಗೆ ೧೫ – ೩೪ : ಮೇಲುಹಾಸು
ಪಚ್ಚೆಸಾರ ೨ – ೬೫ : ಉತ್ತಮವಾದ ಮರಕತಮಣಿ
ಪಂಚಮಗತಿ ೧ – ೧೨೬, ೪ – ೧೫೯ : ಮೋಕ್ಷ
ಪಟುಮರ್ದು ೧೨ – ೩೮ : ದೇಹಪುಷ್ಪಿಯ ರಸಾಯನ, ಧಾತುಪುಷ್ಟಿಯ ಲೇಹ್ಯಾದಿಗಳು, (ನೋಡಿ : ಬಲಮರ್ದು : ಪಂಪಭಾ. ೪ – ೮೭, ಶಾಂತಿಪು. ೪ – ೨೩ ವ. ಇ. ‘ಶಾಸ್ತ್ರೀಯ’ ಸಂ.೧, ಪು.೨೮ – ೩೩)
ಪಟುಮಾಡು ೩ – ೪೫ : ಬಲಿಷ್ಠವಾಗಿ ಮಾಡು, ಪುಷ್ಪವಾಗಿ ಮಾಡು
ಪಟ್ಟೆಡೆ ೪ – ೮೫ : ಮಲಗಿದ ಜಾಗ
ಪಡಪು ೫ – ೧೧೨ : ಗಳಿಕೆ, ಸಂಪಾದನೆ, ಸಂಪತ್ತು
ಪಡಿ ೯ – ೨೮, ೮೨ : ಬಾಗಿಲು
ಪಡಿಗ ೫ – ೭೦ : ಬಟ್ಟಲು