ಮಹಾಸ್ರಗ್ಧೆರೆ

ನಿರವದ್ಯಂ ನಿಷ್ಕಂಕಂ ನಿರುಪಮಮಹಿಮಂ ನಿರ್ಮಳಂ ನಿರ್ವಿಕಲ್ಪಂ
ನಿರಪೇಕ್ಷಂ ನಿಷ್ಪ್ರ ಪಂಚಂ ನಿಜಗುಣನಿಳಯಂ ನಿಶ್ಚಲಂ ನಿತ್ಯರೂಪಂ
ನಿರಘಂ ನಿರ್ಮತ್ಸರಂ ನಿರ್ಜರಪತಿನುತಪಾದದ್ವಯಂ ನಿರ್ವಿಕಾರಂ
ನಿರುದಜಂ ನಿರ್ನಿಕ್ತಯುಕ್ತಂ ನಿರವಧಿವಿಬವಂ ನಿರ್ಭಯಂ ವೀತರಾಗಂ ೩೩

ವಚನ

ಇಂತು ಸಕಳ ದೋಷದಿಂ ಪಿಂಗಿದ ಪರಂಜ್ಯೋತಿಸ್ವರೂಪನಪ್ಪ ವೀತರಾಗನೆ
ದೇವನಪ್ಪುದಱಿಂದಾ ದೇವನೆಯಾಪ್ತನೆದು ನಂಬುವುದು ಮಿಕ್ಕಿನ ನಿರ್ದಯರಂ
ನಿರ್ಗುಣರಂ ನಿರ್ಭಾಗ್ಯರಂ ನಿರ್ಬೋಧರಂ ನಿಷ್ಕೃಪರಂ ದೇವರೆಂದು ನಂಬದೆ ಜಿನರಂ
ನಂಬುವುದು ಸಮ್ಯಕ್ತ್ವಂ

ಕಂದ

ಅಱಿವಂದದಿಂದೆ ದೇವರ
ತೆಱನಂ ನಾಂ ಪೇಳ್ದೆನಿನ್ನು ತಪಮೆಂಬುದನೀ
ತೆಱನೆಂದು ಪೇಳ್ವೆನಾನೆ
ನ್ನಱಿವಂದದೆ ಕೇಳಿಮೆಂದು ಪೇಳಲ್ ತಗುಳ್ದಂ

ವಚನ

ಮತ್ತಂ ತಪಮೆಂಬುದು ಬಱಿಯ ವೇಷಮಲ್ತು ಪಾಪಬಂಧಿಯಪ್ಪ ದೋಷಂಗಳಂ ತೊಱೆವುದು ಪುಣ್ಯಬಂಧಮಪ್ಪ ಗುಣಂಗಳಂ ಪಡೆವುದುಯವಾವವೆಂದೊಡೆ ಸಕಲ ಜೀವದಯಮಂ ಮಾಳ್ಪುದು ಮಾಯಾ ಮೋಹರಾಗ ದ್ವೇಷ ಮದ ಮಾತ್ಸರ್ಯ ಮೆಂಬಿವಂ ಪುಟ್ಟಿಸುವಂತರಂಗಪರಿಗ್ರಹಮಂ ತೊಱೆವುದು ಜಾತರೂಪಮಂ ಕೈಕೊಂಡು ಹಿಂಸಾನೃತಾಸ್ತೇಯ ಬ್ರಹ್ಮಚರ‍್ಯಾಪರಿಗ್ರಹಮೆಂಬೈದು ಮಹಾವ್ರತಂಗಳೊಳಂ ಈರ್ಷಾಬಾಷೈಷಣಾದಾನನಿಕ್ಷೇಪಣ ಪ್ರತಿಷ್ಠಾಪಣಮೆಂಬೈದುಂ ಸಮಿತಿಗಳೊಳಂ ಮನ ವಚನಕಾಯಂಗಳೆಂಬತ್ರಿಗುಪ್ತಿಗಳೊಳಂ ಉತ್ತಮಕ್ಷಮಾಮಾರ್ದವ ಸತ್ಯಶೌಚಸಂಯಮ ತಪಸ್ತ್ಯಾಗಾಕಿಂಚನ್ಯ ಬ್ರಹ್ಮಚರ‍್ಯಮೆಂಬ ದಶಧರ್ಮಂಗಳೊಳಂ ಅನಶನವಮೌದಾರ್ಯ ವೃತ್ತಿ ಪರಿಸಂಖ್ಯಾನ ರಸಪರಿತ್ಯಾಗ ವಿವಿಕ್ತಶಯನಾಶನ ಕಾಯಕ್ಲೇಶಮೆಂಬ ಬಾಹ್ಯತಪದೊಳಂ ಪ್ರಾಯಶ್ಚಿತ್ತ ವಿನಯ ವೈಯಾಪೃತ್ಯ ಸ್ವಾಧ್ಯಾಯವುಯತ್ಸರ್ಗಧ್ಯಯನಂಗಳೆಂಬಂತರಂಗ ತಪಂಗಳೊಳೊಂದುಂ ಕೊಱತೆಯಿಲ್ಲದೆ ನೆಗಳ್ವುದು ತಪಮೆಂಬುದು

ಕಂದ

ಅದಱಿಂದೆ ದೇವ ಗರುವೆಂ
ಬುದನಱಿಪಿದೆನಿನ್ನು ನಿಮಗೆ ಧರ್ಮದ ತೆಱನಂ
ಮುದದಿಂದಂ ಪೇಳ್ದಪೆನಾ
ನದನಾಲಿಪುದೇಕಚಿತ್ತದಿಂ ನೀವೆಲ್ಲಂ ೩೫

ವಚನ

ಎಂದು ಸಾಗಾರಧರ್ಮವನಗಾರಧರ್ಮಮೆಂದು ಧರ್ಮವಿvಱನಕ್ಕುವಲ್ಲಿಯನ ಗಾರಧರ್ಮಂ ದಶವಿಧಮಕ್ಕುಮಾ ಸಾಗಾರಧರ್ಮಂ ದಾನ ಪೂಜೆ ಶೀಲೋಪವಾಸವೆಂಬ ನಾಲ್ಕಪ್ಪುದಿಂತಪ್ಪ ಧರ್ಮಂ ನೆಗಳೆ ಸ್ವರ್ಗಾಪವರ್ಗಮಂ ಪಡೆವರ್

ಮತ್ತೇಭವಿಕ್ರೀಡಿತ

ವಿಳಸದ್ದಾನಮನುನ್ನತಾಚರಣಮಂ ಸಾಹಿತ್ಯಮಂ ಸತ್ಯದ
ಗ್ಗಳಮಂ ಶೌಚಗುಣಂಗಳಂ ವಿನಯಮಂ ಪಾಂಡಿತ್ಯಮಂ ಮೋನಮಂ
ಕುಲಮಂ ನಿರ್ಮಳಕೀರ್ತಿಯಂ ಪರಹಿತವ್ಯಾಪಾರಮಂ ಧರ್ಮಮೆಂ
ದೊಲವಿಂ ನೀಂ ತಿಳಿ ಧಾತ್ರಿಯಂ ಬೆಳಗುಗುಂ ಸಮ್ಯಕ್ತ್ವರತ್ನಾಕರಾ ೩೬

ಕಂದ

ದೇವರ್ ಗುರು ಧರ್ಮಮಿದೆಂ
ದೋವದೆ ಪೆಸರಿಟ್ಟೊಡವನೆ ನಂಬದಿರೆಂತುಂ
ದೇವರ್ ಗುರು ಧರ್ಮಮುಮಂ
ಭಾವಿಸಿ ನಂಬುವುದು ನೀಂ ಪರೀಕ್ಷಿಸಿ ಬಳಿಕಂ ೩೭

ಮತ್ತೇಭವಿಕ್ರೀಡಿತ

ನಿರುತಂ ದೇವರೆನಿಪ್ಪದಂದು ಪೆಸರಂ ತಾಳ್ದಿರ್ದೊಡಂ ದೇವರ
ಪ್ಪರೆ ನಿರ್ದೋಷಿ ಜಿನೇಂದ್ರನಲ್ಲದುಲಿದರ್ ಪಾಲೆಂಬ ವಿಖ್ಯಾತಿವೆ
ತ್ತಿರೆ ಪಾಲಪ್ಪುದೆಯೆಕ್ಕೆ ಕಳ್ಳಿಗಳ ಪಾಲ್ ಗೋಕ್ಷೀರವೆಂಬಂತೆ ಮೇಣ್
ಪರರಾಜಾಖ್ಯೆಯದಾಗೆ ಕಕ್ಕೆಯಮರಂ ಭೂಪಾಲನಾದಪ್ಪುದೇ ೩೮

ವಚನ

ಅದಱಂ ದೇವರಂ ತಪಮಂ ಧರ್ಮಮಂ ಪರೀಕ್ಷಿಸುವುದೆಂಬುದೆಂತೆನೆ

ಶ್ಲೋಕ

ಯಥಾ ಚತುರ್ಭಿಃ ಕನಕಂ ಪರೀಕ್ಷ್ಯತೇ| ನಿಘರ್ಷಣಚ್ಛೇದನ ತಾಪತಾಡನೈಃ ||
ತಥೈವ ಧರ್ಮೋ ವಿದುಷಾ ಪರೀಕ್ಷ್ಯತೇ| ಶ್ರುತೇನ ಶೀಲೇನ ಕುಲೇನ ಕರ್ಮಣಾ ೩೯

ವಚನ

ಅಂತು ಸುವರ್ಣಮನೊರೆದುಂ ಕಡಿದುಂ ಕಾಸಿಯುಂ ಪೊಯ್ದುಂ ನೋಡಿ ಪರೀಕ್ಷೆ
ವಂತರ್ ಪರೀಕ್ಷಿಸಿಕೊಳ್ವಂತೆ ದೇವರಂ ತಪಮಂ ಧರ್ಮಮಂ ಪರೀಕ್ಷಿಸಿ
ನಿರ್ದೋಷಿಯೇ ದೇವಂ ನಿರ್ಗ್ರಂಥಮೇ ತಪಂ ದಯಾಮೂಲಮೇ
ಧರ್ಮಮೆಂದಱಿದು ಕೈಕೊಳ್ವುದುಂ

ಕಂದ

ನಿಯತಂ ತತ್ತ್ವಾ ರ್ಥಶ್ರ
ದ್ಧೆಯ ಸಮ್ಯಗ್ದರ್ಶನಂ ವಿಚಾರಿಸಿ ಮೊದಲೊಳ್
ಪ್ರಿಯದಿಂ ತತ್ತ್ವಂಗಳ ನಿ
ರ್ಣಯಮಱಿವು ಭಾವಿಸಲ್ಕೆ ಸಮ್ಯಜ್ಞಾನಂ ೪೦

ಪಾಪಕ್ಕೆ ಹೇತುವಪ್ಪೀ
ವ್ಯಾಪಾರದಿನಗಲ್ದು ನಡೆವುದೇ ಚಾರಿತ್ರಂ
ಲೋಪಿಪುವಿವು ಕರ್ಮಂಗಳ
ನೀ ಪರಮಜಿನೇಂದ್ರಮತದ ರತ್ನತ್ರಿತಯಂ ೪೧

ಶ್ಲೋಕ

ಅರ್ಹಾದ್ದೇವಃ ಪರೋ ನಾಸ್ತಿ | ಧರ್ಮೋ ನಾಸ್ತಿ ದಯಾಸಮಃ ||
ತಪಃ ಪರಂ ನ ನೈರ್ಗ್ರಂಥ್ಯಾ | ದಿತಿ ಸಮ್ಯಕ್ತ್ವವತಮಂ || ೪೨

ವಚನ

ಈ ಸಮ್ಯಕ್ತ್ವದ ಫಲವೇನಂ ಮಾಳ್ಪುದೆಂದೊಡೆ ಸಪ್ತಪರಮಸ್ಥಾನಗಳಂ ಮಾಳ್ಪದ ದಲ್ಲದೆಯುಂ

ಮತ್ತೇಭವಿಕ್ರೀಡಿತ

ಎನಸುಂ ತೀರದುದೇಂ ಮಹಾವ್ರತಿಗೆ ಸಮ್ಯಗ್ದರ್ಶನಂ ತನ್ನೊಳಾ
ದ ನರಂ ಮೇಣ್ ನರಕಕ್ಕೆ ಪೋಪನೆ ಪೆರರ್ಗಾಳಪ್ಪನೇ ನಾರಿಯ
ಪ್ಪನೆ ದಾರಿದ್ರಕನಪ್ಪನೇ ವಿಕೃತರೂಪಾಗಿರ್ಪನೇ ಷಂಡನ
ಪ್ಪನೆ ಪೇಳ್ ತೀಕ್ಷ್ಣ ಕುಲಂಗಳ್ ಜನಿಪನೇಯಲ್ವಾಯುವೇನಪ್ಪನೇ ೪೩

ವಚನ

ಇಂತು ದರ್ಶನಮುಂಟಾಗಿ ಶೀಲಗುಣಂಗಳ್ ಅಲ್ಪಮಾದೊಡಂ ಮಹಾಸುಖಮಂ ಪಡೆಗುಮಾ ದರ್ಶನಮಿಲ್ಲದ ಶೀಲಾಚರಣಗುಣಮುಂ ಭಿನ್ನ ಭಾಜನದೊಳೆಱೆದುದಕದಂತೆ ನಿಲಲರಿದು ನೀರಂ ಕಡೆವಂತೆ ನಿಷ್ಫಲಮಕ್ಕುಮೆಂದು ಮನೋವೇಗಂ ಪೇಳೆ ಕೇಳ್ದಾ ವಿದ್ವಾಂಸರೆಲ್ಲಂ ಪಿರಿದುಂ ಮನೋವೇಗಂಬೆರಸು ಕರಕಮಳಂಗಳಂ ಮುಗಿದಿಂತೆಂದರ್

ಮತ್ತೇಭವಿಕ್ರೀಡಿತ

ವರ ವಿದ್ಯಾಧರ ಚಕ್ರಿ ನಿನ್ನ ದೆಸೆಯಿಂ ಸದ್ಧರ್ಮ ಸನ್ಮಾರ್ಗವಿ
ಸ್ತರಮಂ ಕೇಳ್ದು ಕೃತಾರ್ಥರಾದೆವೆಮಗಿನ್ನೀಜನ್ಮ ಜನ್ಮಾಂತರಂ
ನಿರುತಂ ಬಂಧುವೆ ನೀನಕಾರಣದಮಿತ್ರಂ ನೀನೆ ಮಿತ್ರಾಬ್ಜಭಾ
ಸ್ಕರ ನಾನಾಗುಣರತ್ನಭೂಷಣ ಲಸತ್ ಸಮ್ಯಕ್ತ್ವರತ್ನಾಕರಂ ೪೪

ಕಂದ

ಪಿರಿದಜ್ಞಾನಾಟವಿಯೊಳ್
ಮರುಳಾಗಿ ಪೊಲಂಬುಗೆಟ್ಟು ತಿರುಗುವ ನಮಗಾ
ದರದಿಂ ಪಥಮಂ ತೋಱಲ್
ಭರದಿಂ ಬಂದೈ ಪರೋಪಕಾರಚರಿತ್ರಾ ೪೫

ಬಳಸಿದ ಸಂಸಾರಾಬ್ಧಿಯ
ಸುಳಿಯೊಳ್ ಮುಳುಗುವರನೆತ್ತಿ ಕೃಪೆಯಿಂ ನೀಂ ನಿ
ರ್ಮಳಧರ್ಮವೆನಿಪ ನಾವೆಯೊ
ಳಿಳಿಪಿ ಕರಂ ತಡಿಗೆ ಸಾರ್ಚಿದೈ ಖಚರೇಂದ್ರಾ ೪೬

ಮಾತೇನೆಮ್ಮ ಶರೀರ ನಿ
ಕೇತನದೊಳ್ ತೀವಿದಘತಮಸ್ಸಂ ಕಳೆದೈ
ಭೂತಳದೊಳ್ ಸುಜ್ಞಾನ
ಜ್ಯೋತಿಯ ನೀಂ ತೊಳಗಿ ಬೆಳಗಿ ಖಚರಾಧೀಶಾ ೪೭

ವಚನ

ಎಂದು ಅನೇಕ ವಚನರಚನೆಯಿಂ ಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿ ನೀವಿನ್ನೆಮಗೆ ವ್ರತಂಗಳಂ ದಯಗೆಯ್ಯವದೆನೆ ಮನೋವೇಗಂ ಸಂತುಷ್ಟಚಿತ್ತನಾಗಿಯಂತೆಗೆಯ್ವೆಂ ಸರ್ವಜ್ಞರ ಸಮೀಪಕ್ಕೆ ಬನ್ನಿಮೆಂದೆಲ್ಲರಂ ತನ್ನ ವಿಮಾನಮನೇಱಿಸಿ ಮನೋವೇಗದಿಂದುಜ್ಜೈನಿಯನೆಯ್ದಿ ವಿಮಾನದಿಂದಿಳಿದಾ ಪುರದೊಳಮರ ನರೋರಗ ಖಚರ ಚಕ್ರವರ್ತಿಗಳೋಲಗಂಗೊಟ್ಟು ವೋಲಗಿಸಲೆಸೆದಿರ್ಪ ಸಕಲ ವಿಮಲ ಕೇವಲಜ್ಞಾನಸ್ವರೂಪನಪ್ಪನಗಾರಕೇವಲಿ ಶ್ರೀವಾಸುಪೂಜ್ಯಭಟ್ಟಾರಕರಂ ಪಾದ ಮಾರ್ಗದಿಂ ತ್ರಿಃಪ್ರದಕ್ಷಿಣಂಗೈದು ಸಾಷ್ಟಾಂಗವೆಱಗಿ ಪೊಡಮಟ್ಟು ನಿಂದು ಕರ ಕಮಲಂಗಳಂ ಮುಗಿದು

ಶ್ಲೋಕ

ನಮೋ ಜಿನಾಯ ತ್ರಿದಶಾರ್ಚಿತಾಯ
ವಿನಷ್ಟದೋಷಾಯ ಗುಣಾರ್ಣವಾಯ
ವಿಮುಕ್ತಿಮಾರ್ಗಪ್ರತಿಬೋಧನಾಯ
ದೇವಾಧಿದೇವಾಯ ನಮೋ ಜಿನಾಯ ೪೮

ವಚನ

ಎಂದನೇಕ ವಸ್ತುಸ್ತವ ರೂಪಸ್ತವ ಗುಣಸ್ತವನಂಗಳಂ ಪೇಳ್ದಾ ಸ್ತವನಾನಂತರಂ ಗುರುಗಳ್ಗೆ ಗುರುಭಕ್ತಿಯಿಂ ವಂದಿಸಿ ಚರಣಾರವಿಂದದ ಸಮೀಪದೊಳ್ ಕುಳ್ಳಿರ್ದು ಕರಕಮಲಂಗಳಂ ಮುಗಿದು ಈ ಸಕಳಶ್ರಾವಕ ನಂಗಳ್ಗೆ ಶ್ರಾವಕವ್ರತಮಂ ದಯ ಗೆಯ್ದು ಕೃತಾರ್ಥರಂ ಮಾಳ್ಪುದೆಂದು ಬಿನ್ನವಿಸೆಯಾ ಭಟ್ಟಾರಕರ್ ಪರಮ ಕಾರುಣ್ಯದಿಂದೊಸೆದು

ಶ್ಲೋಕ

ಅಣುವ್ರತಾನಿ ಪಂಚೈವ ತ್ರಿಪ್ರಕಾರಂ ಗುಣವ್ರತಂ
ಶಿಕ್ಷಾವ್ರತಾನಿ ಚತ್ವಾರಿ ಇತ್ಯೇತದ್ದ್ವಾದಮಕಂ ೪೯

ವಚನ

ಎಂದವರೆಲ್ಲರ್ಗೆ ವ್ರತಾರೋಪಣಂಗೈದು ಆ ವ್ರತಸ್ವರೂಪಮಂವ್ಯಕ್ತೀಕರಿಸಲೆಂದಿಂತೆಂದರ್

ಉತ್ಪಲಮಾಲೆ

ದೇವತೆಗೆಂದು ಮೇಣತಿಥಿಗೆಂದು ಪಿತರ್ಕಳ ತು,ಟಿಗೆಂದು ಮಂ
ತ್ರಾವಳಿ ಯಂತ್ರ ತಂತ್ರ ರೆಸಸಿದ್ಧಿಗೆ ಬೇಳ್ವೆಗೆ ವಶ್ಯಕೆಂದು ತಾ
ನೋವದೆ ಭೀತಿಯಿಂ ಮುಳಿಸಿನಿಂ ಪೆಱರೋದಿಸಿದೋಜೆಯಿಂದೆ ಜೀ
ವಾವಳಿಯಂ ಕೊಲಲ್ ಬಯಸದಿರ್ಪುದಹಿಂಸೆಯೆನಿಪ್ಪಣುವ್ರತಂ ೫೦

ಕಂದ

ಮದದಿಂದುಕ್ಕೆವದಿಂ ಗ
ರ್ವದಿನಳಿಪಿಂ ಭಯದಿನೇವದಿಂ ಮುಳಿಸಿಂ ಲೋ
ಭದಿನಿನಿತು ಪುಸಿಯುಮಂ ನುಡಿ
ಯದುದೆರಡನೆಯನೃತಮೆಂಬಣುವ್ರತಮಕ್ಕುಂ ೫೧

ಕಂದ

ಬಟ್ಟೆಯೊಳೂರೊಳ್ ಮನೆಯೊಳ್
ಕೆಟ್ಟೊಡೆ ಬೈತಿಟ್ಟೊಡನ್ಯರರ್ಥಮನಳಿಪಿಂ
ಮುಟ್ಟದೊಡಸ್ತೇಯಮುಮದು
ನೆಟ್ಟನೆ ಮೂರನೆಯಣುವ್ರತಂ ತಿಳಿವುದಿದಂ ೫೨

ಪರವನಿತೆಯೊಲ್ದು ಬರೆ ಪರಿ
ಹರಿಸು ಕುಲಾಂಗನೆಯೊಳೇಕಪತ್ನೀವ್ರತಮಂ
ಧರಿಯಿಪುದು ಶೌಚಗುಣವಿದು
ಪರಿಕಿಸೆ ನಾಲ್ಕನೆಯಣುವ್ರತಂ ತಾನೆನಿಕುಂ ೫೩

ಇನಿತು ಪಸುವಿನಿತು ಭಾಂಡವಿ
ವಿನಿತಾಲಯವಿನಿತು ಕುಪ್ಯವಿನಿಬರ್ ತೊಳ್ತಿರ್
ಧನವಿನಿತು ಶಯನವಿನಿತಾ
ಸನವಿನಿತಿನಿತಖಿಳಧಾನ್ಯವಿನಿತು ಕ್ಷೇತ್ರಂ ೫೪

ಎಂಬೀ ಹತ್ತಂ ಹವಣಿಸಿ
ಕೊಂಬುದು ಪರಿಮಿತ ಪರಿಗ್ರಹಂ ಪೆಸರಿಂದಂ
ನೀಂ ಬಗೆದು ನೋಡು ಸಕಳ ಗು
ಣಾಂಬುಧಿಯೈದನೆಯಣುವ್ರತಂ ತಾನೆನಿಕುಂ ೫೫

ವಚನ

ಮತ್ತಂ ಗುಣವ್ರತವೆಂತೆಂದೊಡೆ

ಕಂದ

ಪದಪಿಂನಿಂದಿನಿತುಂ ಗಾ
ವುದದಿಂದಂ ಪೋಗೆನಾವ ದೆಸೆಗಂ ನಾನೆಂ
ಬುದು ದಿಗ್ವಿವೃತ್ತಿಯೆಂದೆಂ
ಬುದು ಮೊದಲ ಗುಣವ್ರತಂ ವಿಚಾರಿಸುಗೆ ಬುಧಂ ೫೬

ದೇಶಂಗಳೊಳಗೆ ಪುಗೆ ನೀ
ದೇಶಮನಾನೆಂದು ನಾಡೆ ಕೈಕೊಳ್ವುದು ತಾಂ
ದೇಶನಿವೃತ್ತಿಯೆನಿಪ್ಪುದ
ಭಾಸುರದಿಂದೆರಡನೆಯ ಗುಣವ್ರತಮೆನಿಕುಂ ೫೭

ಚಂಪಕಮಾಲೆ

ಬಲೆ ಬಡಿ ನೇಣ್ ವಿಷಂ ಸುರಿಗೆ ಶೂಲಿಗೆ ಕತ್ತಿಗೆ ಬಿಲ್ಲುಕಿರ್ಚುಸಂ
ಕಲೆಯಸಿಗೋರೆ ಹಾರೆ ಕುಳು ಗುದ್ದಲಿಗಳ್ ಮೊದಲಾಗಿ ಜೀವ ಸಂ
ಕುಳಮನೆ ಕೊಲ್ವವಂ ಪಱರ್ಗೆ ತಾನೊಸೆದೀಯೆನೆನಿಪ್ಪುದೀ ಧರಾ
ತಳದೊಳನರ್ಥದಂಡದ ವೃತ್ತಿಯದಂತ್ಯದ ಸದ್ಗುಣವ್ರತಂ ೫೮

ವಚನ

ಇನ್ನು ಶಿಕ್ಷಾವ್ರತವೆಂತೆಂದೊಡೆ

ಮಹಾಸ್ರಗ್ಧರೆ

ಕ್ರಮದಿಂ ನಾಲ್ಕುಂ ನಮಸ್ಕಾರದೊಳತುಳ ಷಡಾವಶ್ಯದಿಂದಂ ತ್ರಿಸಂಧ್ಯಾ ಸಮಯಂ
ನಾನಾಸ್ತವ ಸ್ತೋತ್ರಮನತಿಮುದದಿಂ ಪೇಳ್ದು ಮಿಕ್ಕಾರ್ತ ರೌದ್ರೋ
ಗ್ರಮನಾದಂ ಬಿಟ್ಟು ಭಾವಂ ಸಮ ಶುಭಯುಗದೊಳ್ ಕೂಡೆ ಸತ್ಯಾದಿ
ಶೀಲೋತ್ತಮವೀಸಾಯೈಕಮೆಂಬೀ ಪ್ರಥಮದೆಸೆವ ಶಿಕ್ಷಾವ್ರತಂ ತಾನೆನಿಕ್ಕುಂ ೫೯

ಕಂದ

ತಿಂಗಳ ನಾಲ್ಕುಂ ಪರ್ವದಿ
ನಂಗಳೊಳಂ ಕ್ರಿಯಸಮನ್ವಿತಂ ಬಂಧಿಸಿ ನಿ
ಸ್ಸಂಗದುಪಾಸಂ ಪ್ರೋಷಧ
ಮೆಂಗುಂದೆರಡನೆಯ ಚಾರು ಶಿಕ್ಷಾವ್ರತಮಂ ೬೦

ಗುಣಯುತ ಮುನಿಪರನೇಳುಂ
ಗುಣದಿಂದಿದಿರ್ಗೊಂಡು ನಿಲಿಸಿದಿಂ ಬಳಿಕಂ ತಾ
ನುಣಲತಿಥಿಸಂವಿಭಾಗಮ
ದೆಣಿಪೊಡೆ ಮೂಱನೆಯದಱಿಗೆ ಶಿಕ್ಷಾವ್ರತಮಂ ೬೧

ಸಕಲಪರಿಗ್ರಹಮಂ ತೊಱೆ
ದಕಳಂಕವ್ರತಮನಾಂತು ತನುವಂ ಬಿಡೆ ಭಾ
ವಿಕೆ ಸಲ್ಲೇಖನಮೆಂದಱಿ
ದು ಕೊಳ್ಗೆ ನಾಲ್ಕನೆಯ ಲಸಿತಶಿಕ್ಷಾವ್ರತಮಂ ೬೨

ಎಂದು ಪೇಳಲ್ಪಟ್ಟಣುವ್ರತ ಗುಣವ್ರತ ಶಿಕ್ಷಾವ್ರತಗಳೆಂಬ ಪನ್ನೆರಡುಂ ತೆಱದ ವ್ರತಂಗಳಂ ಹೋಸವ್ರತಂಬೆರಸು ನಡೆಯಿಪುದು ಆ ಹೋಸವ್ರತಮೆಂತೆಂದೊಡೆ

ಕಂದ

ಈ ಭಾರತವರ್ಷದೊಳತಿ
ಶೋಭಿಪ ನೇಪಾಳಮೆಂಬ ವಿಷಯದೆ ಮಧ್ಯೋ
ರ್ವೀಭಾಗದೊಳಿರ್ಪುದು ಸಲೆ
ವೈಭವದಿಂ ಚಿತ್ರಕೂಟಮೆಂಬತುಳಪುರಂ ೬೩

ಪುರದಧಿಪತಿ ಚಾರುನರೇ
ಶ್ವರನಾತನ ಮಂತ್ರಿಮುಖ್ಯನಾ ಶ್ರೀಪಾಲಂ
ವರಸಮ್ಯಗ್ ದೃಷ್ಟಿ ಜಿನೇ
ಶ್ವರಮತಹಿತನಾತನರಸಿ ಧನವತಿಯೆಂಬಳ್ ೬೪

ವಚನ

ಅಂತವರಿರ್ವರುಂ ಸುಖಸಂಕಥಾವಿನೋದದಿಂದಿರುತ್ತಲಿರಲೊಂದು ದಿನಂ ದಿನಾವಸಾನ ಸಮಯದೊಳು ಜಾವದ ಪೊಲೆಯನ ಪೆಂಡತಿ ಬೀಯಮಂ ಬೇಡಲೆಂದು ಬಂದಿರ್ದಾ ಸಮಯದೊಳಾ ಧನವತಿಯ ಪುತ್ರನುಣಲ್ ಬೇಡಲ್ ರಾತ್ರಿಯೊಳ್ ಉಣ್ಬುದನು ಚಿತಮೆನೆಯಾ ಬಾಲಕಂ ಪಿಡಿದಾಗ್ರಹಂಗೈದು ಬೇಡಲುಣಲಿಕ್ಕದಿರೆ ಅದರ್ಕ್ಕಾ ಚಂಡಾಲಪತ್ನಿಯೆಲೆ ದತಾರಿತಿ ನಿನ್ನ ಸುತಂ ಬೇಡಿದೊಡೇಕೆಯುಣಲಿಕ್ಕಿರೆನೆಯಾ ಧನವತಿಯಿಂತೆಂದಳ್